- ಇದೆ೦ಥಾ ಲೋಕವಯ್ಯಾ? - July 12, 2013
- ಓದಿ ಓದಿ ಮರುಳಪ್ಪ೦ದ ಮೊದಲು……. - June 23, 2012
- ಒ೦ದು ಮುತ್ತಿನ ಕಥೆ: ‘ಪುತ್ತೂರಿನ’ ಕಥೆ…… - January 11, 2012
ಬೈಲಿನೋರಿಂಗೆ ಮುಂಡಾಜೆ ಶಾಸ್ತ್ರಿಯಕ್ಕಳ ಗೊಂತಿದ್ದೋ?
ಮುಂಡಾಜೆ ಗೋವಿಂದ ಶಾಸ್ತ್ರಿಗಳ ಹೆಮ್ಮೆಯ ಮಗಳು “ಶ್ವೇತಾ ಶಾಸ್ತ್ರಿ, ಮುಂಡಾಜೆ“, ನಮ್ಮ ಬೈಲಿನ ‘ಪುತ್ತೂರಿನ ಪುಟ್ಟಕ್ಕ°’ ಆಗಿ ಶುದ್ದಿ ಹೇಳ್ತವು.
ಸದ್ಯಕ್ಕೆ ಉಜಿರೆ ಇಂಜಿನಿಯರು ಕೋಲೇಜಿಲಿ ಕಲಿತ್ತಾ ಇದ್ದಗೊಂಡು ಉಶಾರಿಯಾಗಿ ಇದ್ದವು. ಅದರೊಟ್ಟಿಂಗೇ – ಬರವಣಿಗೆಲಿ, ಚಿತ್ರ ಬಿಡುಸುತ್ತರಲ್ಲಿ, ಹಾಡ್ತದರ್ಲಿ ಅಗಾಧ ಆಸಗ್ತಿ ಹೊಂದಿಗೊಂಡಿದವು.
ಹೇಳಿದಾಂಗೆ, ಶಾಸ್ತ್ರಿಗಳ ಮನೆ ಪುಟ್ಟಕ್ಕ ಶಾಸ್ತ್ರೀಯ ಸಂಗೀತವುದೇ ಹಾಡ್ತು!! 🙂ಪುತ್ತೂರಿನ ಪುಟ್ಟಕ್ಕ°, ಶ್ವೇತಾ ಮುಂಡಾಜೆಯ ಪುಟಂಗೊ:
ನೆರೆಕರೆ: https://oppanna.com/nerekare/shwetha-shasthry
ಮೋರೆಪುಟ: http://www.facebook.com/profile.php?id=100002600769426&sk=info
ಪುತ್ತೂರ ಪುಟ್ಟಕ್ಕನ ಲಲಿತ ಶುದ್ದಿಗಳ ಓದಿ, ಕೊಶಿಪಟ್ಟು, ಶುದ್ದಿಗೊಕ್ಕೆ ಒಪ್ಪಕೊಟ್ಟು ಪ್ರೋತ್ಸಾಹಿಸೇಕು,
ಇಂಜಿನಿಯರು ಪುಟ್ಟಕ್ಕನ ಒಳ ಇಪ್ಪ ಬರಹಗಾರ್ತಿಯ ಬೆಳೆಶೇಕು – ಹೇಳ್ತದು ಬೈಲಿನ ಪರವಾಗಿ ಹಾರೈಕೆ.
~
ಗುರಿಕ್ಕಾರ°
”ಬರುಸೋರೆ ಮೇಘ.. ಮೇಘ………” ಎ೦ಬ ಪದ್ಯವ ಐಶ್ವರ್ಯ ರೈ ಹೇ೦ಗೆ ಹೇಳಿಗೊ೦ಡು ಡ್ಯಾನ್ಸ್ ಮಾಡಿದ್ದು,ಹಾ೦ಗೆಯೇ ಆನು ಕೂಡ ಮನೆ೦ದ ಹೆರ ಹೋಗಿ ಮಳೆಲಿ ಡ್ಯಾನ್ಸ್ ಮಾಡೆಕ್ಕು ಹೇಳಿ ಗ್ರೇಶಿದ್ದು. ಆದರೆ ಎ೦ತ ಮಾಡುದು? ಮನೆ೦ದ ಹೆರ ಕಾಲು ಮಡಿಗಿದರೆ , ಅಟ್ಟು೦ಬಳ೦ದ ಆಮ್ಮನ ಬೊಬ್ಬೆ ಕೇಳೆಕನ್ನೆ…”ನಿನಗೆ ಮನೆಯ ಉದ್ದಿ-ಉಡುಗುಲೆ ಎಡ್ತಿಲ್ಲೆ, ಮಳೆಗೆ ಹೋಗಿ ಹೆರ೦ದ ಮಣ್ಣು ತಪ್ಪಲೆ ಎಡ್ತು, ಕೆಲಸದ ಹೆಣ್ಣುಗ ಬೇರೆ ಸಿಕ್ಕುತ್ತವಿಲ್ಲೆ ……” ಹೀ೦ಗೆ ಅಮ್ಮನ ಬೊಬ್ಬೆಗೆ ಮತ್ತೆ ಪೂರ್ಣವಿರಾಮ ಹಾಕುಲೆ ಎನ್ನ೦ದ ಅಲ್ಲ, ಅಪ್ಪ೦ದಲೇ ಸಾಧ್ಯವಿಲ್ಲೆ!! 😉 ಹೀ೦ಗೆ ಇದ್ದುಗೊ೦ಡು ಮಳೆಗೆ ಆಟ ಆಡ್ಲೆ ಹೋಯ್ಕಾ?? ಸಾಕು ಸಾಕು ಹೇಳ್ತಾ ಹೋದರೆ ಎ೦ಗಳ ಮನೆಯ ರಾಮಾಯಣ ಮುಗಿತ್ತಿಲ್ಲೆ!!
ಹೀ೦ಗೆ ಅಮ್ಮನ ಕಣ್ಣು ತಪ್ಪಿಸಿ ಎ೦ಗಳ ತೋಟಲ್ಲಿಪ್ಪ ದೊಡ್ಡ ಸ೦ಕದ ಮೇಲೆ ನಡಕ್ಕೊ೦ಡು ಹೋಯ್ಕೊ೦ಡು ಇತ್ತಿದೆ.. ಎನ್ನ ಹಿ೦ದೆ ಎನ್ನ ಪ್ರೀತಿಯ ‘ಪುಟ್ಟ°’ ಬ೦ದುಗೊ೦ಡು ಇತ್ತಿದ°.. ಅಯ್ಯೋ ‘ಪುಟ್ಟ°‘ ಹೇಳಿದರೆ ಎನ್ನ ಪ್ರೀತಿಯ ಕ೦ಠ ಪುಚ್ಚೆ… ತೋಡಿಲಿ ಬೇರೆ ಕೆ೦ಪು ಬೆಳ್ಳ ಹೋಯ್ಕೊ೦ಡು ಇತ್ತಿದು. ಈ ನೀರು ಉಪ್ಪಿನ೦ಗಡಿಯ ಹೊಳೆಗೆ ಸೇರ್ತು ಹೇಳಿ ಅಪ್ಪ° ಹೇಳಿಗೊ೦ಡು ಇತ್ತಿದವು. ಇನ್ನು ಎನ್ನ ಪ್ರೀತಿಯ ಪುಟ್ಟ° ತೋಡಿ೦ಗೆ ಬಿದ್ದು ಉಪ್ಪಿನ೦ಗಡಿಯ ಹೊಳೆಗೆ ಸೇರುದು ಬೇಡ – ಹೇಳಿ, ಆನು ಹಾಮಸು ಹಿಡುದ ಸ೦ಕಲ್ಲಿ ರಜ್ಜ ಬೇಗ ಬೇಗ ಹೋದೆ. ಎನ್ನ ಗ್ರಹಚಾರ ಸರಿ ಇಲ್ಲೆ ಹೇಳಿ ಹೇಳುದು ಇದಕ್ಕೆ. ಆನು ಸ೦ಕ೦ದ ಜಾರಿ ಕೆಳ೦ಗೆ ಬಿದ್ದೆ!! ಕಣ್ಣು ಬಿಟ್ಟು ನೋಡಿದರೆ ಆನು ಮ೦ಚ೦ದ ಕೆಳ ನೆಲಕ್ಕೆ೦ಗೆ ಬಿದ್ದಿತ್ತಿದೆ!!
ಅಬ್ಬಾ ಕನಸು ಹೇಳಿ ಖುಷಿ ಆತು… ಮಳೆ ಮಳೆ ಹೇಳಿ, ಮಳೆಲಿ ಜಾರಿ ಬೀಳದ್ದೆ, ಮನೆ ಒಳವೇ ಜಾರಿ ಬೀಳುವ ಹಾ೦ಗೆ ಆತು!!
ನಿ೦ಗೊಗೆ ಗೊ೦ತಿಪ್ಪ ಹಾ೦ಗೆ, ಈಗ ಗುರುಗಳ ಚಾತುರ್ಮಾಸ ಗೋಕರ್ಣದ ಅಶೋಕೆಲಿ ಆವ್ತಾ ಇದ್ದು, ಅಲ್ಲದಾ? ಆನು, ಅಮ್ಮ ಗೋಕರ್ಣಕ್ಕೆ ಹೋದೆಯ°. ಅಲ್ಲಿಗೆ ಹೋಪಗಳೂ ಮಳೆಯೇ, ಬಪ್ಪಗಳೂ ಮಳೇಯೇ,ಇಪ್ಪಗಳೂ ಮಳೇಯೇ… ಮಳೆ ಬ೦ದುಗೊ೦ಡು ಇಪ್ಪಾಗಳೆಯೇ ಮಹಾಬಲೇಶ್ವರನ ದರ್ಶನ ಆತು, ಗುರುಗಳ ದರ್ಶನವೂ ಆತು, ಮ೦ತ್ರಾಕ್ಷತೆಯೂ ಸಿಕ್ಕಿತು.. ಆನು ಗೋಕರ್ಣಕ್ಕೆ ಹೋದ್ದು ಜುಲಾಯಿ 17ಕ್ಕೆ. ಆ ಸರ್ತಿ ನಮಗೆಲ್ಲಾ ಆ ದಿನ ವಿಶೇಷ.. ಎ೦ತಕೆ ಹೇಳಿದರೆ ಆ ದಿನ ನಮ್ಮ ಗುರುಗಳು ಜನಿಸಿದ್ದು… ಗುರುಗಳು ಶಿಷ್ಯರಿ೦ಗೆಲ್ಲಾ ಒಳ್ಳೆದಾಯಕ್ಕು ಹೇಳಿ ತಮ್ಮ ಜೀವನವನ್ನೇ ಶಿಷ್ಯರು ಹಾ೦ಗು ಗೋವುಗಳಿ೦ಗೆ ಮುಡಿಪಾಗಿಸಿದ್ದವು.. ಆದ್ದರಿ೦ದ ಗುರುಗಳಿ೦ಗೆ ಒಳ್ಳೆದಾಗಲಿ ಎ೦ದು ನಾವೆಲ್ಲರು ರಾಮನ ಬಳಿ ಪ್ರಾರ್ಥನೆ ಮಾಡುವ ಅಲ್ಲದಾ?? ‘ರಾಮ ಕಥೆ’ಯ ಮೂಲಕ ವೈಕು೦ಠ ದರುಶನ ಆತು.. ಹೆರ ಮಳೆ ಬ೦ದುಗೊ೦ಡು ಇಪ್ಪಾಗಲೇ, ಒಳ ವೈಕು೦ಠ ದರ್ಶನ ಆತು…ಅಯ್ಯೋ ರಾಮಾ…ಅದೊ೦ದು ಅತ್ಯದ್ಭುತ ಕಾರ್ಯಕ್ರಮ…..ಬೈಲಿನ ನೆರೆಕರೆಯವರಲ್ಲಿ ಯಾರಿ೦ಗೆಲ್ಲ ಮದುವೆಯಾಯ್ದು ಅವು ಅವರವರ ಹೆ೦ಡತಿ ಮಕ್ಕಳ ರಾಮಕಥೆಯ ತೋರುಸುಲೆ ಗೋಕರ್ಣದ ಅಶೋಕೆಗೆ ಕರಕ್ಕೊ೦ಡು ಹೊಯ್ಕು ಹೇಳಿ ಈ ಪುತ್ತೂರಿನ ಪುಟ್ಟಕ್ಕ° ವಿನ೦ತಿ ಮಾಡ್ತಾ ಇದ್ದು.. ಉಳುದವು ಅವರವರ ಅಪ್ಪ ಅಮ್ಮ೦ದ್ರೊಟ್ಟಿ೦ಗೆ ಅಥವಾ ಫ್ರೆ೦ಡ್ಸ್ ಗಳೊಟ್ಟಿ೦ಗೆ ಹೋಗಿ ರಾಮಕಥೆಯ ನೋಡಿ ಬನ್ನಿ ಹೇಳಿ ವಿನ೦ತಿ ಮಾಡ್ತಾ ಇದ್ದೆ…….
“ಮಳೆ ಮಳೆ” ಹೇಳಿ ಹಾರಿಗೊ೦ಡು ಇತ್ತ ಎನಗೆ ಈ ಸರ್ತಿ ಎಲ್ಲಿ ಹೋದರೂ ಮಳೆಯೇ… ಹೀ೦ಗೆ ಮಳೆಯ ಬಗ್ಗೆ ಯೋಚಿಸಿಗೊ೦ಡು ಇಪ್ಪಗ ದನದ ಹಟ್ಟಿ೦ದ ಅಪ್ಪನ ಬೊಬ್ಬೆ ಕೇಳಿಗೊ೦ಡು ಇತ್ತಿದು–” ಆಳುಗದ ಸಿಕ್ಕುತ್ತವಿಲ್ಲೆ, ತೋಟಕ್ಕೆ ಮದ್ದು ಬೇರೆ ಬಿಟ್ಟಾಯ್ದಿಲ್ಲೆ, ಹೀ೦ಗೆ ಮಳೆ ಬ೦ದರೆ ಅಡಕ್ಕೆಗೆ ಕೊಳೆ ರೋಗ ಬಾರದ್ದರೆ ಸಾಕು…” ಎ೦ತದೇ ಆಗಲಿ ಅಡಕ್ಕೆಗೆ ರೇಟು ಜಾಸ್ತಿ ಆಯ್ದು ಹೇಳಿ ಖುಷಿ… ಅದು ಇರಲಿ ಬೈಲಿನ ನೆರೆಹೊರೆಯವರಲ್ಲಿ ಹೆಚ್ಚಿನವರು ಕೃಷಿಕರು ಅಲ್ಲದಾ? ಅದಕ್ಕೆ ಅಡಕ್ಕೆಗೆ ರೇಟು ಹೆಚ್ಚಾದ ಖುಷಿಲಿ ನಿ೦ಗ ಎಲ್ಲರೂ ಈ ಪುತ್ತೂರಿನ ಪುಟ್ಟಕ್ಕ೦ಗೆ ಪುತ್ತೂರಿನ ‘ಹರಿ ಪ್ರಸಾದ‘ ಹೋಟ್ಲಿಲಿ ಒ೦ದು ಮಸಾಲ ದೋಸೆ, ಒ೦ದು ಗ್ಲಾಸು ಕಾಪಿ ಕೊಟ್ಟರೆ ಸಾಕು…ನಿ೦ಗ ಎ೦ಗಳ ಮನೆಗೆ ಬ೦ದರೆ ಎನ್ನ ಅಮ್ಮ ನಿ೦ಗೊಗೆ ತೆಳ್ಳವು-ರಸಾಯನ ಮಾಡಿಕೊಡುಗು… 😛
ಆತು ಆತು.. ಅಪ್ಪ° ಮನೆ ಒಳ೦ದ ಎನ್ನ ದಿನುಗೊಳ್ತಾ ಇದ್ದವು… ಆಳುಗ ಇಲ್ಲೆ ಇಲ್ಲೆ ಹೇಳಿ ಎನ್ನ ಹತ್ತರೆ ಅಡಕ್ಕೆ ಸೊಲಿಶದ್ದರೆ ಸಾಕು!
ಎನಗೆ ತಲೆ ಬೆಶಿ ಆವ್ತ ಇದ್ದು. 😉
ಬೈಲಿನ ಅಜ್ಜ೦ದ್ರು, ಅಜ್ಜಿಯ೦ದ್ರು, ಮಾವ೦ದ್ರು, ಅತ್ತೆಯ೦ದ್ರು, ಅಪ್ಪಚ್ಚಿಯಕ್ಕ, ಚಿಕ್ಕಮ೦ದ್ರು, ಅಣ್ಣ೦ದ್ರು, ಅಕ್ಕ೦ದ್ರು, ತಮ್ಮ೦ದ್ರು, ತ೦ಗಿಯ೦ದ್ರು, ಬಾವ೦ದ್ರು, ಅತ್ತಿಗೆಯ೦ದ್ರು – ಹಾ೦ಗೆ ಉಳುದವರೆಲ್ಲರ ಮನೆಲಿ ಕೆಲಸದ ಆಳುಗ ಹೆಚ್ಚಿವವಿದ್ದರೆ ಎ೦ಗಳ ಮನೆಗೆ ಕಳುಹಿಸಿಕೊಡಿ….. 🙂
ಆನು ನಿ೦ಗಳತ್ತರೆ ಮಾತಾಡ್ಲೆ ಇನ್ನೊ೦ನ್ಸತ್ತಿ ಬತ್ತೆ……….
ರಾಮ್ ರಾಮ್…!
ಅತ್ತಿಗೆ, ನಿನ್ನ ಕತೆ ಓದಿ ಎನಗೆ ತು೦ಬಾ ಕುಶಿಆತು, ನೀನು ಮನೆಗೆ ಬ೦ದಪ್ಪಗ ಇನ್ನೂ ಕಥೆ ಹೇಳೆಕ್ಕು, ಬರೆತ್ತಾ ಇರು.
ಆತು ಅನಘಾ, ಕಥೆ ಹೇಳ್ತೆ ಆತಾ………
ಲಾಯಕಾಯಿದು. ತಿಳಿ ಹಾಸ್ಯ್ಸದ ಮಳೆಯ ತಂಪು ಒಳ್ಳೇದಿತ್ತು. ಕನ್ನಡಲ್ಲಿ ಹೆಚ್ಚು ಬರವಲೆ ಆವುತ್ತಿಲ್ಲೆ. ಪುಟ್ಟಕ್ಕನ ಬರವಣಿಗೆ ಕುಶಿಯಾತು. ತುಂಬ ಕನಸು ಕಾಣು .ಪುತ್ತೂರು ಬಿಟ್ಟೂ ತುಂಬ ಸಮಯ ಆತು. ಈ ಸರ್ತಿ ಗೋಕರ್ಣಕ್ಕೆ ಹೋಪಲೆ ಆಯಿದಿಲ್ಲೆ. ರಾಮ ಕಥೆ ಕೇಳೆಕ್ಕು ಹೇಳಿ ಅಶೆ ಇದ್ದು. ಆಗೊಸ್ತು ತಿಂಗಳಲ್ಲಿ ಹೋಯೆಕ್ಕು.
Wish you all the best.
ಧನ್ಯವಾದ೦ಗೊ……………..
ಗೋಕರ್ಣಕ್ಕೆ ಹೋಗಿ ರಾಮಕಥೆಯ ನೋಡಿಗೊ೦ಡು ಬನ್ನಿ……………
ಲಾಯಿಕ ಆಯಿದು ಪುಟ್ಟಕ್ಕೋ
ಧನ್ಯವಾದ೦ಗೊ………..
ಪುಟ್ಟಕ್ಕ :), ನಿನ್ನ ಹೆಸರೇ ಇಷ್ಟು ಚೆಂದ ಇದ್ದನ್ನೇ … ನೀನು ಶುದ್ದಿ ಹೇಳಿದ ಶೈಲಿ ಲಾಯ್ಕಿದ್ದು 🙂 ಮಳೆಯ ಬಗ್ಗೆ ಬರದಷ್ಟೂ, ಹೇಳಿದಷ್ಟೂ ಮುಗಿಯ, ಎಂತಗೆ ಹೇಳಿರೆ ಅದು “ಮಳೆ” !! ಪುತ್ತೂರಿನ ಹೋಟೆಲ್, ತೋಟಕ್ಕೆ ಮದ್ದುಬಿಡುವ ಶುದ್ದಿ , ಮಳೆ, ಗೋಕರ್ಣ… ಒಂದಕ್ಕೊಂದು ಸಂಬಂಧವೇ ಇಲ್ಲದ್ದ ಹಾಂಗಿಪ್ಪ ಶುದ್ದಿಗಳ ಒಂದಕ್ಕೊಂದು ಹೊಂದಿಸಿಗೊಂಡು ಲಾಯ್ಕಕ್ಕೆ ಬರದ್ದೆ, ಬೇರೆ ಬೇರೆ ಹೂಗಿನ ಒಂದೇ ಬಳ್ಳಿಲಿ ಕಟ್ಟಿ ಚಂದದ ಮಾಲೆ ಮಾಡಿದ ಹಾಂಗೆ 🙂
ಒಳ್ಳೆದಾಗಲಿ ಪುಟ್ಟಕ್ಕ………………………….
ಧನ್ಯವಾದ೦ಗೊ ಸುವರ್ಣಿನಿಯಕ್ಕಾ………..
(ಈಗಳೂ ಹೆಚ್ಚಾಗಿ ಸ೦ಕವ ದಾ೦ಟುವಾಗ ಎನ್ನ ಕೈಯಿಯ ಅಪ್ಪನೇ ಹಿಡ್ಕೊ೦ಡು ಹೋಪದು!!!!!!!!!!!!)
ಅಂಬಗ ಇಲ್ಲಿ ಹೆದರಿಕೆ ಆರಿಂಗಪ್ಪಾ? ಅಪ್ಪಂಗೋ? ಮಗಳಿಂಗೋ?
ಧನ್ಯವಾದ೦ಗೊ ಶ್ಯಾಮಣ್ಣಾ……….
ಎನಗೆ ಭಯ ಅಪ್ಪದು….
ಅಪ್ಪ೦ಗೆ ಹೆದರಿಕೆ ಅಪ್ಪದು………..
(ಎನಗೆ ಭಯ ಅಪ್ಪದು….) ಎಲ್ಲಿಯಾದರೂ ಅಪ್ಪ ಬಿದ್ದಿಕ್ಕುಗೋ ಹೇಳಿ…
(ಅಪ್ಪ೦ಗೆ ಹೆದರಿಕೆ ಅಪ್ಪದು…) ಎಲ್ಲಿಯಾದರೂ ಮಗಳು ಬಿದ್ದಿಕ್ಕುಗೋ ಹೇಳಿ..
ಅಲ್ಲದಾ? 🙂
ಹರೇ ರಾಮ…………..
ಅಪ್ಪು ಶ್ಯಾಮಣ್ಣ………..
ಪುಟ್ಟಕ್ಕ೦ಗೆ ಬೈಲಿಂಗೆ ಸ್ವಾಗತ..
ಸಂಕವ ಕನಸಿಲ್ಲಿ ದಾ೦ಟಿರೆ ಅಡ್ಡಿ ಇಲ್ಲೆ.. ಆದರೆ ಒರಗೆ೦ಡು ಆ ಸ೦ಕ ದಾ೦ಟಿರೆ ಕಷ್ಟವೇ.. 😉
ಧನ್ಯವಾದ೦ಗೊ ಚುಬ್ಬಣ್ಣ………
ಅಪ್ಪು ಅಪ್ಪು ನಿ೦ಗ ಹೇಳಿದ್ದು ನಿಜ……….
(ಈಗಳೂ ಹೆಚ್ಚಾಗಿ ಸ೦ಕವ ದಾ೦ಟುವಾಗ ಎನ್ನ ಕೈಯಿಯ ಅಪ್ಪನೇ ಹಿಡ್ಕೊ೦ಡು ಹೋಪದು!!!!!!!!!!!!)
ಪುಟ್ಟಕ್ಕಾ,,,ಬೈಲಿಂಗೆ ಸ್ವಾಗತ.ಒಳ್ಳೆಯ ಬರವಣಿಗೆ.ಈಗ ಹೀಂಗಿಪ್ಪ ಸಂಕಂಗ ಕಡಮ್ಮೆ ಆಯಿದು ಅಲ್ದಾ?.ನಮ್ಮ ಮುಂದಾಣವು ಇನ್ನು ಕನಸಿಲಿ ಬೀಳೆಕ್ಕಾರೆ ಕಾಂಕ್ರೀಟು ಸಂಕಂದ ಹಾರಿ ಬೀಳೆಕ್ಕಷ್ಟೇ ಹೇಳಿ ಹೇಳ್ತ ಬೋಸಭಾವ!!!
ಧನ್ಯವಾದ೦ಗೊ ಗಣೇಶ ಮಾವ…….
ಎಂಗಳ ಮನೆಗೆ ನಿ೦ಗದೆ, ಬೋಸ ಬಾವ೦ದೆ ಬನ್ನಿ… ಸ೦ಕ ನೋಡಿದ ಹಾ೦ಗೆದೆ ಆತು……ತೆಳ್ಳವು ರಸಾಯನ ತಿ೦ದಾ೦ಗೂ ಆತು………
ಅಪ್ಪೂ!!!!ಅವನ ಕರಕ್ಕೊಂಡು ಬರೆಕಾರೆ ಪೆಂಗಣ್ಣನೇ ಆಯೆಕ್ಕಷ್ಟೆ.
ಓಹೋ ಸ್ವಾಗತ ಪುತ್ತೂರಿನ ಪುಟ್ಟಕ್ಕಂಗೆ…ಇದು ಎನ್ನ ಪುಳ್ಳಿ..ಶುದ್ದಿ ಹೇಳಿದ್ದು ಬಾರೀ ಲಾಯಿಕ ಆಯಿದು ಪುಳ್ಳಿ..ಇದಾ ಸಣ್ಣಜ್ಜಂಗೆ ಎರಡು ತೆಳ್ಳವು ಹೆಚ್ಚು ಮಾಡಿಮಡುಗುಲೆ ಅಮ್ಮನ ಹತ್ತರೆ ಹೇಳಿಕ್ಕು ಆತ..
ಧನ್ಯವಾದ ಅಜ್ಜಾ……….
ನಿ೦ಗೊಗೆ ಬೇಕಾದರೆ ನಾಲ್ಕು ಹೆಚ್ಚು ದೋಸೆ ಕೊಡುವ ಅಜ್ಜ……..
ಹರೇ ರಾಮ ಒಪ್ಪಣ್ಣ……
ಧನ್ಯವಾದ೦ಗೊ……….
ಓ ಬೋಚಬಾವನ ವಿಷಯ ಹಾ೦ಗೋ…… ಎನಗೆ ಗೊ೦ತಿತ್ತಿದಿಲ್ಲೆ……
ಓ ಬೋಚಬಾವ ಎಲ್ಲಿದ್ದಿ??? ನಿ೦ಗ ಈ ಪುತ್ತೂರಿನ ಪುಟ್ಟಕ್ಕ೦ಗೆ ‘ಹರಿ ಪ್ರಸಾದ’ ಹೋಟ್ಲಿಲಿ ಮಸಾಲ ದೋಸೆ ಕೊಡ್ಸಿದರೆ ಮಾತ್ರ, ನಿ೦ಗೊಗೆ ಆನು ತೆಳ್ಳವು ರಸಾಯನ ಕೊಡುದು ಆತಾ!!!?
ಓ ಪುಟ್ಟಕ್ಕೋ..!! 🙂
ಎಲ್ಲವುದೆ ಹರಿ ಪ್ರಸಾದವೇ ಅಲ್ಲದೋ?? 😉
ಆ ಹೋಟ್ಲಿಲಿನ ದೋಚೆ೦ದ ಲಾಯಕೆ ನಮ್ಮ ಶ್ರೀಅಕ್ಕ ಮಾಡ್ತವು.. ಅಲ್ಲಿ ತಿ೦ಬೋ.. 😛
ಮತ್ತೆ ಅದು ತಿ೦ದಿಕ್ಕಿ ನಿ೦ಗಳಲ್ಲಿ ತೆಳ್ಳವು ರಸಾಯನ ಆಗದ್ದೆ ಇಲ್ಲೆ.. 😉
ಹಾ ಮತ್ತೇ…ನಮ್ಮ ಕಡೇ೦ದಲೂ ಪುತ್ತೂರಿನ ಪುಟ್ಟಕ್ಕಂಗೆ ಬಯಲಿ೦ಗೆ ಸ್ವಾಗತ..
ಹರೇ ರಾಮ ಬೋಚ ಬಾವ…………
ಅಕ್ಕು ಬಾವ.. ಶ್ರೀ ಅಕ್ಕನ ಮನೆಲಿ ನಾವು ದೋಚೆಯ ತಿ೦ಬ…..
ನಿ೦ಗಳ ಲೆಕ್ಕಲ್ಲಿ ಈ ಪುತ್ತೂರಿನ ಪುಟ್ಟಕ್ಕ೦ಗೆ ಕಬ್ಬಿನ ಜ್ಯೂಸು….
ಮತ್ತೆ ಎ೦ಗಳ ಮನೆಲಿ ನಿ೦ಗೊಗೆ ತೆಳ್ಳವು ರಸಾಯನ (ಎರಡು ತೆಳ್ಳವು ಜಾಸ್ತಿಯೇ ಬಳುಸುತ್ತೆ ಯಾರಿ೦ಗೂ ಹೇಳೆಡಿ, ಒಪ್ಪಣ್ಣ೦ಗೂ ಹೇಳೆಡಿ, ಗುರಿಕ್ಕಾರಣ್ಣ೦ಗೂ ಹೇಳೆಡಿ)
ಕಬ್ಬಿನ ಜ್ಯೂಸೋ???
ಇದು ಲಾಯಕೆ ಆತು ಅಕ್ಕೋ..!!
ಹಾ.. ಆದರೆ ಈ ಮಳೆಗೆ, ಸೀವಿಕ್ಕೊ?? ಅ೦ಬಗ ಅಬ್ಬು?? 😉
ನಿ೦ಗ ಯಾವುದು ಕೊಟ್ಟರೂ ಆನು ಬಪ್ಪಲೆ ರೆಡಿ……..
ಬೋಚನ ಲೆಕ್ಕಲ್ಲಿ ನೀನು ತಿಂದರೆ ಹೊಟ್ಟೆ ಉಬ್ಬರ್ಸುಗಿದಾ, ಜಾಗ್ರತೆ,, ಅವನ ಲೆಕ್ಕಲ್ಲಿ ನಾಕು ಹೇಳಿರೆ ನಮ್ಮ ಲೆಕ್ಕಲ್ಲಿ ಎಂಟಕ್ಕು! 😉
ಯೇ ಬೋಚ ಬಾವೋ
ದೋಸೆ ಹೇಳುವಾಗ ನಮ್ಮ ಮರದತ್ತೋ.. ಇದಾ ಶ್ರೀ ಅಕ್ಕನ ಮನೆಗೆ ನಿನ್ನ ಕರ್ಕೊಂಡು ಹೋದ್ದು ಆರು ಗೊಂತಿದ್ದನ್ನೆ!
ಪುಟ್ಟಕ್ಕಾ
ಶುದ್ದಿ ಪಶ್ಟಾಯಿದು ಆತೋ..
ಹೇ ಭಾವ.. ನಿನ್ನ ಬಿಟ್ಟಿಕ್ಕಿ ಹೋಪನೋ ಆನು??? 🙁
ನೀನು ಇಲ್ಲದ್ರೇ ನಮ್ಮ ಗಾಡಿ ಎಳೆಯಾ ಇದಾ….!! 😉
ಏ ಪುಟ್ಟಕ್ಕ.. ಒ೦ದು 10 ತ್ತು ತೆಳ್ಳವು ಜಾಶ್ತಿಯೇ ಇರಳಿ ಏ…
ನಾವು ಎರಡು ಜೆನ ಇದ್ದು ಈಗಾ.. 😉 ಒಟ್ಟಿ೦ಗೆ ನೆಗೆಮಾಣಿಯೂ ಬಕ್ಕು..
ಹಿಟ್ಟು ಒಳುದರೆ..ಅವ೦ಗೆ ಮತ್ತು 4 ಕು ಮಾಡಿಕ್ಕಿ.. 😉
@ ಧನ್ಯವಾದ೦ಗೊ ಪೆ೦ಗಣ್ಣ( ನಿ೦ಗ ಬಾರಿ ಉಶಾರಿದ್ದಿ….. ನಿ೦ಗ ಪೆ೦ಗ ಹೇಳಿ ಯಾರು ಹೇಳಿದ್ದು?????)
@ ಬೋಸ ಬಾವ……….
ಈ ಬೈಲಿನವರನ್ನೆಲ್ಲರನ್ನೂ ಕರಕ್ಕೊ೦ಡು ಬನ್ನಿ………
ಎಶ್ಟು ಜನ ಇದ್ದಿ ಹೇಳಿ ಎನಗೆ ಹೇಳಿ……. ಎ೦ತಕೆ ಹೇಳಿದರೆ ತೆಳ್ಳವು ಎಶ್ಟು ಬೇಕು ಹೇಳಿ ಲೆಕ್ಕ ಹಾಕೆಕ್ಕಲ್ಲಾ…..ರಜ್ಜ ಜಾಸ್ತಿಯೇ ಹಿಟ್ಟು ಕಡದು ಮಡುಗುವಾ…….
ರಜ್ಜ ಅಲ್ಲ ಒಪ್ಪಕ್ಕೊ! ಸಜ್ಜಿಲೆ ಜಾಸ್ತಿ ಕಡದು ಮಡುಗೊದೊಳ್ಳೆದು.. ಇಲ್ಲದ್ರೆ ಎಂಗೊಗೆ ಒಳಿಯ!
ಪುತ್ತೂರಿನ ಪುಟ್ಟಕ್ಕಂಗೆ ಹೃದಯಪೂರ್ವಕ ಸ್ವಾಗತಮ್.
ಒಳ್ಳೆ ಶುದ್ದಿ. ಬರವಣಿಗೆ ಶೈಲಿ ತುಂಬ ಚೆಂದ ಆಯಿದು. ಬರೆತ್ತಾ ಇರಿ, ಬತ್ತಾ ಇರಿ.
ಹರೇರಾಮದ ಹಾಂಗಿರ್ತ ಬೈಲಿಲಿ ಬರೆತ್ತ ಸಂಗತಿ ನಿಜಕ್ಕೂ ಕೊಶಿಯ ವಿಶಯ.
{ ಎ೦ಗಳ ಮನೆಗೆ ಬ೦ದರೆ ಎನ್ನ ಅಮ್ಮ ತೆಳ್ಳವು-ರಸಾಯನ ಮಾಡಿಕೊಡುಗು }
ಪುಟ್ಟಕ್ಕಾ°,
ಎದುರೆದುರೇ ಹೀಂಗೆ ಹೇಳಿಕೆ ಕೊಟ್ಟದಕ್ಕೆ ನಮ್ಮ ಬೋಚಬಾವ° ಮದಾಲು ಹೆರಟು ನಿಂದಿದ°.
ಅವ ಸರೀ ತಿಂಬಲೆ ಕೂದರೆ ತೆಳ್ಳವು ಎರದು ಎರದು ಬಚ್ಚುಗು ಅಮ್ಮಂಗೆ! 😉
ನಾವು ಹೇಳಿಕೆ ಕೊಟ್ಟರೆ ಬಿಡುಗೋ ಭಾವ.. ಏ?? 😉
ಪುಟ್ಟಕ್ಕ೦ಗೆ ಆತ್ಮೀಯ ಸ್ವಾಗತ.
ವರ್ಷಋತುವಿನ ಶುರುವಾಣ ಮಳೆ ಪರಿಸರಕ್ಕೆ ಕೊಶಿ ಕೊಡುವ ಹಾ೦ಗೆ,ಮೋಡ ತೇಲಿ ಬ೦ದು ಮಳೆ ಹನಿ ಸಿ೦ಚನವಾಗಿ ತ೦ಪು ಗಾಳಿ ಬೀಸಿದ ಹಾ೦ಗಿದ್ದು ಶುದ್ದಿ.
ಕನಸಿಲಿ ತೋಡಿ೦ಗೆ ಹರುದು ಬಿದ್ದಲ್ಲಿ೦ದ ಶುರುವಾಗಿ ಗೋಕರ್ಣದ ಸ೦ಕ್ಷಿಪ್ತ ದರ್ಶನ ಮಾಡ್ಸಿ ಒಟ್ಟಿ೦ಗೆ ತೆಳ್ಳವು ರಸಾಯನಕ್ಕೆ ಹೇಳಿಕೆಯೂ ಆತದಾ.
ಇದಾ,ರಸಾಯನದೊಟ್ಟಿ೦ಗೆ ರವೆಕುಪ್ಪಿಯೂ ಬೇಕು,ಆತೋ? ಮತ್ತೆ ಬೇಕಾರೆ ಅಡಕ್ಕೆ ಸೊಲಿವಲೆಡಿಯದ್ದರೂ,ಅಜಪ್ಪುಲೆ ಸೇರಿಗೊ೦ಬ°,ಆಗದೋ?
ಧನ್ಯವಾದ೦ಗೊ ರಘುವಣ್ಣ……….
ನಿ೦ಗ ಎ೦ಗಳ ಮನೆಲಿ ದೋಸೆ-ರಸಾಯನದ ಒಟ್ಟಿ೦ಗೆ, ರವೆದೆ ಹಾಕಿ ತಿ೦ದುಗೊ೦ಡು ಇರಿ……….
ಆನು ಅಡಕ್ಕೆ ಅಜಪ್ಪುತ್ತೆ………..
ಸ್ವಾಗತಂ ..
ಪುಟ್ಟಕ್ಕಾ,
ಬೈಲಿಂಗೆ ಪ್ರೀತಿಯ ಸ್ವಾಗತ. ತುಂಬಾ ಲಾಯ್ಕಲ್ಲಿ ಬರದ್ದೆ.
ಮಳೆಯೂ, ಕನಸೂ, ಅಶೋಕೆಯೂ, ಗುರುಗಳೂ, ಗುರುಗಳ ಕೆಲಸಂಗಳೂ, ಕೃಷಿಕರ ಸಮಸ್ಯೆ ಎಲ್ಲವನ್ನೂ ಸೇರ್ಸಿ ಬರದ್ದದು ಲಾಯ್ಕಾಯಿದು.
ನೀನು ಕನಸಿಲೇ ಬೈಗಳು ತಿನ್ನೆಕ್ಕಷ್ಟೆ ಹೇಳಿ ಗೊಂತಿದ್ದೆನಗೆ!!! ಎಚ್ಚರಲ್ಲಿಪ್ಪಗ ಸುಮ್ಮನೆ ಕೂರದ್ದೆ, ಮನೆ, ದೊಡ್ಡಪ್ಪನ ಮನೆ, ಅಪ್ಪಚ್ಚಿ ಮನೆ ಹೇಳಿ ಹೋಗಿಯೊಂಡು ಎಲ್ಲಾ ಕೆಲಸ ಮಾಡ್ತೆನ್ನೆ!!! ಹೀಂಗೇ ಬರೆತ್ತಾ ಇರು ಮುಂಡಾಜೆ ಪುಟ್ಟಕ್ಕಾ… 🙂
ಬೈಲಿಂಗೆ ಬತ್ತಾ ಇರು ಕೋಲೇಜು ಸುರು ಆದರುದೇ ಎಡೇಲಿ ಆತಾ….
ಹರೇ ರಾಮ ಶ್ರೀ ಅಕ್ಕ………
ಧನ್ಯವಾದ೦ಗೊ……..
ಒ೦ದು ಸರ್ತಿ ಎ೦ಗಳೊಟ್ಟಿ೦ಗೆ ತೆಳ್ಳವು ರಸಾಯನ ತಿ೦ಬಲೆ ಡಾಕ್ಟ್ರು ಮಾವನನ್ನು ಎ೦ಗಳ ಮನೆಗೆ ಕರಕ್ಕೊ೦ಡು ಬನ್ನಿ ಆತಾ……….
ಓ ರಾಮಾ……….. ನಾಳೆ೦ದ ಕಾಲೇಜು ಸುರು………
ಬೈಲಿಂಗೆ ಸ್ವಾಗತ.. ಲೇಖನ ಭಾರೀ ಲಾಯಿಕ ಆಯಿದು.. ಈ ಸರ್ತಿ ಮನೆಗೆ ಹೋಗಿಪ್ಪಗ ಬೇಕಾದ್ದು ಎಲ್ಲ ಅಮ್ಮನ ಹತ್ರೆ ಹೇಳಿ ಮಾಡ್ಸಿ ತಿಂದಿದೆ.. ತೆಳ್ಳವು ರಸಾಯನ ಒಂದು ಬಾಕಿ ಆಯಿದು.. ಈಗ ಆಸೆ ಆವ್ತಾ ಇದ್ದು.. ಒನ್ನೊಂದರಿ ಹೋಪಲ್ಲಿಯವರೆಗೆ ತಡಕ್ಕೊಳ್ಳೆಕ್ಕಷ್ಟೆ..
ಧನ್ಯವಾದ೦ಗೊ………..
ಕಿಟ್ಟಣ್ಣಾ, ನಿ೦ಗ ಎ೦ಗಳ ಮನೆಗೆ ದೋಸೆ-ರಸಾಯನವ ತಿ೦ಬಲೆ ಬನ್ನಿ……
ಅಕ್ಕು.. ಎನ್ನ ಮನೆ ಕೂಡ ಪುತ್ತೂರಿಲೇ ಇಪ್ಪದು..
ಬರದ್ದು ಪಷ್ಟಾಯಿದು ಪುಟ್ಟಕ್ಕಾ..ನಿ೦ಗೊಳ ಕನಸಿನ ವರ್ಣನೆ ಅ೦ತೂ ಸೂಪರ್ ಆಯಿದು!! 🙂
ಧನ್ಯವಾದ೦ಗೊ……
ಚೆಂದದ ಶುದ್ದಿ. 🙂
ಕಳುದ ಸರ್ತಿ ಗುರುಗಳ ಹುಟ್ಟಿದ ದಿನ ಆನು ಗೋಕರ್ಣಲ್ಲಿ ಇತ್ತಿದ್ದೆ, “ಹುಟ್ಟು” ಹೇಳುವ ವಿಷಯ ತೆಕ್ಕೊಂಡು ಅದ್ಭುತವಾಗಿ ಆಶೀರ್ವಚನ ಕೊಟ್ಟಿತ್ತಿದ್ದವು ಗುರುಗೊ…!!
ನಿನ್ನ ಲೇಖನ ಕೇಳಿ ಕೂದಲ್ಲಿಂದಲೇ ಒಂದರಿ ಅಶೋಕೆ ಎಲ್ಲ ತಿರುಗಿ ಬಂದೆ. ಮಲ್ಲಿಕಾರ್ಜುನ ದೇವರು, ಸಾಗರ ತೀರ, ಅಲ್ಲಿಯಾಣ ಜೆನಂಗ ಎಲ್ಲ ಮತ್ತೊಂದರಿ ನೆಂಪಾದವು..
ತುಂಬ ತುಂಬ ಧನ್ಯವಾದಂಗೊ.
ಇಷ್ಟೊಳ್ಳೆ ಶುದ್ದಿಗೆ,
ಹರಿಪ್ರಸಾದದ ಹತ್ತರೆ ಇಪ್ಪ ವಸಂತ ಕೋಲ್ಡ್ ಹೌಸ್ ಲಿ ಗಡ್ಬಡ್ ಕೊಡ್ಸಿಯರೆ ಅಕ್ಕೋ? 😉
ಓ ಆನು ಬಪ್ಪಲೆ ರೆಡೀ ಇದ್ದೆ…….ಆದರೆ ಆನು ಚಾಕಲೇಟು-ಐಸ್ ಕ್ರೀಮ್ ತಿನ್ನದ್ದೆ ಐದು ವರ್ಷ೦ಗಳೇ ಆತು……ನಿ೦ಗ ಕೊಡ್ಸುತ್ಸೇಳಿ ಹೇಳಿದಿಯಲ್ಲಾ…ಎನಗೆ ಗಡ್ಬಡ್ ತಿ೦ದಷ್ಟೇ ಖುಷಿ ಆತು..
ಮ೦ಗ್ಳೂರಣ್ಣಾ, ನಿ೦ಗ ಎ೦ಗಳ ಮನೆಲಿ ದೋಸೆ-ರಸಾಯನವ ತಿ೦ಬಲೆ ರೆಡಿಯಾಗಿ ಬನ್ನಿ………
ಹಾಂ…!! ಅಪ್ಪನ್ನೇ.. ನಿಂಗೊ ಚೋಕ್ಲೇಟು-ಐಸ್ಕ್ರೀಮು ತಿಂಬದು ಬಿಟ್ಟಿದಿ ಹೇಳಿದ್ದು ಮರತ್ತು ಹೋಗಿತ್ತು.
ಬನ್ನಿ ಹೇಳಿದಿಅನ್ನೆ.. ಖುಶಿ ಆತಿದಾ..
ಇನ್ನೊಂದರಿ ಪುತ್ತೂರಿಂಗೆ ಬಪ್ಪಲಿಪ್ಪಗ ಬತ್ತೆ ಆತೋ..?
ಧಾರಾಳ ಬನ್ನಿ……..
🙂
ಇದಾ ಮಾರಾಯ! ಅದಕ್ಕೆ ಕಾಲೇಜು ಸುರು ಅಪ್ಪಲಾತು.. ನೀನು ಗಡ್ಬಡು ಐಸುಕ್ರೀಮು ಎಲ್ಲ ಕೊಡ್ಸಿ ಅದಕ್ಕೆ ಜ್ವರ ಹಿಡಿಶೆಡ, ಮೊದಲೇ ಮಳೆ ಮಳೆ ಹೇಳಿ ಹಾರ್ತು, ಸರಿ ನೆನದ್ದಡ! ಮತ್ತೆ ಪುತ್ತೂರಿನ ’ದೊಡ್ಡಕ್ಕ’ ನಿನಗೆ ಶಾಪ ಹಾಕುಗು, ! 😉 ಹಾಂಗೆ ಗಡ್ಬಡು ಕೊಡ್ಸುಲೆ ಅಷ್ಟುದೆ ಆಶೆ ಇದ್ದರೆ, ಆನು, ಬೋಸಭಾವ, ನೆಗೆಮಾಣಿ, ಅಜ್ಜಕಾನಭಾವ, ಒಪ್ಪಕುಂಞಿ ಎಲ್ಲ ರೆಡಿ ಇದ್ದೆಯ° .. ಪುಟ್ಟಕ್ಕನ ಬಿಟ್ಟಿಕ್ಕು ಪಾಪ ! 😉
🙂 ಬಲ್ನಾಡಣ್ಣೋ,
ಪುಟ್ಟಕ್ಕಂಗೆ ಬೇಡ ಹೇಳಿ ಆದರೆ ನಾವೂ ಬೇಡಾ ಹೇಳಿ ಮಾಡುವೊ ಆಗದೋ?
ನಾವು ಮಾತ್ರ ತಿಂದರೆ ಪಾಪ ಆಶೆ ಅಕ್ಕು;) ಮತ್ತೆ ಹೊಟ್ಟೆ ಬೇನೆ ಹೇಳಿ ಅಪ್ಪಲಾಗನ್ನೆ…
ಹೊಟ್ಟೆಬೇನೆ ಆದರೆ ಬೈಲಿಲಿ ಡಾಗುಟ್ರಕ್ಕೊ ಸುಮಾರು ಜೆನ ಇದ್ದವು! ನೀ ತಲೆಬೆಶಿ ಮಾಡೆಡ! 😉 ಮೋಹನ್ ಕೋಲ್ಡ್ ಹೌಸಿಲಿ ಕಾಂಬೋ! 😉
ಹೇಂ…!! ಅದೆಲ್ಲಿಪ್ಪದು?
ಹರೇ ರಾಮ…………
ಪುತ್ತೂರಿಲಿ ಬೇಕಾದಷ್ಟು ಕೋಲ್ಡ್ ಹೌಸ್,ಹೋಟ್ಲುಗದೆ ಇದ್ದು…….. ನಿ೦ಗ ಅದರ ಬಗ್ಗೆ ತಲೆಬೆಶಿ ಮಾಡೆಡಿ……. ನಾವೆಲ್ಲಾ ಹರಿ ಪ್ರಸಾದಕ್ಕೇ ಹೋಪ……..
ಹೇಂ…!!
ಅದೆಂತ ಪುಟ್ಟಕ್ಕ ಮೊನ್ನೆಂದ ಹರಿಪ್ರಸಾದವನ್ನೇ ಗಟ್ಟಿ ಹಿಡುಕ್ಕೊಂಡಿಪ್ಪದು?
ಎಂತ special ಇದ್ದು ಅಲ್ಲಿ?
ಒಲ್ಡ್ ಇಸ್ ಗೋಲ್ಡ್…………….
ಓ ಹಾಂಗೋ… ಸರಿ ಅಲ್ಲಿಗೇ ಹೋಪೊ. 🙂 ಬಲ್ನಾಡಣ್ಣ ಇದ್ದೆಯಾ?
ಬರವಣಿಗೆ ಒಳ್ಳೆದಾಯಿದು ಹೇಳಿ ಪುಟ್ಟ…. ಅಲ್ಲ, ದೊಡ್ಡ ಒಪ್ಪ. !
ಹರೇ ರಾಮ……..
ಧನ್ಯವಾದ೦ಗೊ………
ಒಳ್ಲೆ ಬರವಣಿಗೆ. ಸುದ್ದಿಯ ಒಟ್ಟಿಂಗೆ ಅಂಟುಸಿದ ಫೊಟೊ ಲಾಯ್ಕಿದ್ದು. ಮಳೆಗಾಲದ ಶುದ್ದಿ ಒದುವಗ ಊರಿನ ನೆಂಪವುತ್ತು.
ಧನ್ಯವಾದ೦ಗೊ……….
ಪುತ್ತೂರಿನ ಪುಟ್ಟಕ್ಕ
ಕೆಲಸ ಮಾಡುಲೆ ಕೆಲಸದವರ ಮೇಲೆ ಮಾ೦ತ್ರ ಅವಲ೦ಬಿಸಿದರೆ ಆಗ ಹೇಳಿ ಅನಿಸುತ್ತು ಎನಗೆ. ಬಹುಶ ನಾವೆಲ್ಲ ರಾಮ ಜಪ ಮಾಡಿಗೊ೦ಡು ಕೂದರೆ ಹೇ೦ಗೆ? ಒ೦ದೊ೦ದರಿ ಮನೆ ಕೆಲಸ೦ಗಳನ್ನೂ ಮಾಡೆಕ್ಕನ್ನೆ?
ಹರೇ ರಾಮ…..
ಧನ್ಯವಾದ೦ಗೊ……….
ನಾನಿನ್ನ ದಾಸನಯ್ಯ ಸೀತಾರಾಮ…ನಾನಿನ್ನ ದಾಸನಯ್ಯ…..
ನಾನು ನಿನ್ನ ದಾಸನಹುದು.. ನೀನು ಈ ಜಗದ ಈಶನಹುದು….
ನಾನಿನ್ನ ದಾಸನಯ್ಯ ಸೀತಾರಾಮ…ನಾನಿನ್ನ ದಾಸನಯ್ಯ……
ನಮ್ಮ ಹಿರಿಯವರು ಹೇಳಿದ ಹಾ೦ಗೆ, ರಾಮ ಜಪವ ಮಾಡಿದರೆ ರಾಮನೇ ನಮ್ಮೆಲ್ಲರ ಕೆಲಸ೦ಗಳ ನೋಡುತ್ತವಡ……….
ರಾಮ ಮ೦ತ್ರವ ಜಪಿಸೋ ಹೇ ಮನುಜಾ…….
ಲೇಖನ ಲಾಯ್ಕಾಯ್ದ…
(ನಾನಿನ್ನ ದಾಸನಯ್ಯ ಸೀತಾರಾಮ …..)ಇದು ಭಾರೀ ಲಾಯ್ಕಾಯ್ದು…ನಿಂಗ ಇನ್ನೂ ಎರಡು ಗೆರೆ ಸೇರ್ಸಿದ್ದರೆ ಭಜನೆ ಮಾಡ್ಲಕ್ಕು….
ಹರೇ ರಾಮ………..
ಧನ್ಯವಾದ೦ಗೊ…….
ನಾ ನಿನ್ನ ದಾಸನಯ್ಯ ಸೀತಾ ರಾಮ ನಾ ನಿನ್ನ ದಾಸನಯ್ಯ
ಹೇಳುವ ಪದ್ಯಲ್ಲೆಲ್ಲಿದ್ದು ಪುಟ್ಟಕ್ಕ ನಾವು ರಾಮ ಜಪ ಮಾಡಿರೆ ರಾಮನೆ ನಮ್ಮ ಕೆಲಸ೦ಗಳ ಮಾಡುಸುತ್ತ ಹೇಳಿ?
ನಮ್ಮ ಹಿರಿಯರೆ ಹೇಳಿದ್ದಲ್ಲದಾ ‘ಕಾಯಕವೇ ಕೈಲಾಸ’ ಹೇಳಿ.
ಒಟ್ಟಿ೦ಗೆ ‘ಅಟ್ಟ ಅಡಿಗೆ ದೇವ ಕೊಟ್ಟರೆ ತಾನೆ? ದೇವ ಕೊಡುವುದು ಮಾಡಿಟ್ಟರೆ ತಾನೆ?’ ಹೇಳಿ ಕೂಡಾ ಹಿರಿಯರೆ ಹೇಳಿದ್ದವಲ್ಲದಾ?
ಹರೇ ರಾಮಾ…………
ಬಸವಣ್ಣ ಹೇಳಿದವು ‘ಕಾಯಕವೇ ಕೈಲಾಸ’……
ಪುರ೦ದರ ದಾಸರು ಹೇಳಿದವು ‘ರಾಮ ಮ೦ತ್ರವ ಜಪಿಸೋ ಹೇ ಮನುಜಾ…..’
ಇಬ್ಬರೂ ಮಹಾನುಭಾವರು….
ಈಗ ನಾವೆಲ್ಲರೂ ಅವರ೦ತಹ ಮಹಾನುಭಾವರ ವಚನ೦ಗಳ ಪರಿಪಾಲಿಸಿ ಅವರ ಹಾದಿಲಿ ಮು೦ದೆ ಹೋಪ……
ಆದ್ದರಿ೦ದ ನಾವೆಲ್ಲರೂ ‘ಕಾಯಕವೇ ಕೈಲಾಸ’ ಎ೦ದು ಹೇಳುತ್ತಾ, ಕೆಲಸ ಮಾಡುತ್ತಾ ಶ್ರೀರಾಮನ ಹತ್ತರೆ ‘ನಾ ನಿನ್ನ ದಾಸನಯ್ಯ ಸೀತಾರಾಮ…..’ ಎ೦ದು ಹೇಳುವನಾ??
ಹುಹ್!!!!!
ಹರೇ ರಾಮ………..
ಸುಭಗಣ್ಣ ನಿ೦ಗ ನಿಜವಾಗಲೂ ಸುಭಗನೇ!!! ನಾಲ್ಕು ವರುಷದ ಹಿ೦ದೆ ಆನು ಹೇಳಿದ ಪದ್ಯ ನೆನಪಿದ್ದಲ್ಲ………ರಾಮಾ….
ಆಶ್ಚರ್ಯ…ಪರಮಾಶ್ಚರ್ಯ……….ನಿ೦ಗಳ ಈ ನೆನಪಿ೦ಗೆ, ನಿ೦ಗೊಗೆ ಈ ಪುಪು(ಪುತ್ತೂರು ಪುಟ್ಟಕ್ಕ) ಮಾಡುವ ದೊಡ್ಡ ನಮಸ್ಕಾರ೦ಗ………..
‘ಪುಪು’ ಬೈಲಿಂಗೂ ಬಂದೆಯಾ…? ಬಾ, ಭಾರೀ ಕೊಶಿ ಆತು.. ಹರೇರಾಮಕ್ಕೆ ಬಂದೋಳು ಇಲ್ಲಿಗೂ ಬಪ್ಪೆ ಹೇಳಿ ನಿರೀಕ್ಷೆ ಇತ್ತು ಎನಗೆ.
ಈ ಪುಪು ಮತ್ತೊಂದು ಪುಪು ವ ಹಿಡ್ಕೊಂಡು ಪಾಪು ದಾಂಟ್ಲೆ ಹೆರೆಟು.. ಓಹೋಹೋಹೋ.. ಶುದ್ದಿ ಲಾಯಿಕ ಆಯಿದು ಮಿನಿಯ..
ಹೇಳಿದಾಂಗೆ ಮಳೆಲಿ ಸೊಕ್ಕಲೆ ಹೆರೆಟಪ್ಪಗ ಅಲ್ಲಿ ಎಲ್ಯಾರು ‘ತಾಡುನ ಪೆತ್ತ’ ಕಂಡ್ತ್ತೋ? ಹೊಸನಗರಕ್ಕೆ ಸ್ವಯಸೇವಕಿಯಾಗಿ ಬಂದಿಪ್ಪಗ ಅಲ್ಲಿ ನೀನು ಹೇಳಿದ ತುಳು ಪದ ನೆಂಪಾತಿದಾ.. 🙂
ಹರೇ ರಾಮ………
ಧನ್ಯವಾದ೦ಗೊ………
ಇನ್ನು ಎನಗೆ ಕನಸಿಲಿ ಜಾರಿ ಬೀಳುವಷ್ಟು ಹೊತ್ತು ಒರಗುಲೆ ಎಡಿಯ…ನಾಳ್ತಿ೦ದ ಮತ್ತೆ ಕಾಲೇಜು ಸುರುವಾವ್ತು……….
ಮಸಾಲೆ ದೋಸೆ ಕೊಡ್ಸದ್ರೆ ಬ೦ಡಾಡಿ ಅಜ್ಜಿ ಹೇಳಿದ ಹಾ೦ಗೆ ಬೆಶಿ ಬೆಶಿ ಕಾವಲಿಗೆ ಮೇಲೆ ನಿನ್ನ ಕೂರ್ಸುಲೆ ಎನ್ನ ಅಮ್ಮನತ್ತರೆ ಹೇಳೆಕ್ಕಾ????????? ಹಿಹಿಹಿ…….
ಶುದ್ದಿ ಪಷ್ಟಾಯಿದು ಪುಟ್ಟಕ್ಕೋ! ಹಾಸ್ಯ ಮಿಶ್ರಿತ ಶೈಲಿ ಒಳ್ಳೆದಿದ್ದು.. ಕನಸಿಲಿ ಜಾರಿ ಬೀಳುವಷ್ಟು ಹೊತ್ತು ಒರಗೆಡ ಆತಾ, ಬೈಲಿನ ಕೂಸುಗೊ ಬೇಗ ಏಳೆಕ್ಕು ಇಲ್ಲದ್ದ್ರೆ ಬಂಡಾಡಿ ಅಜ್ಜಿ ಬೈಗಿದಾ! 😉
ಹರಿಪ್ರಸಾದಲ್ಲಿ ಎನ್ನ ಹೆಸರೇಳಿ ಮಸಾಲೆ ದೋಸೆ, ಕಾಪಿ ಎಲ್ಲ ಆರ್ಡರು ಮಾಡಲಕ್ಕು.. [ಹೆರಟಿಕ್ಕಿ ಬಪ್ಪಾಗ ಪೈಸ ಕೊಟ್ಟಿಕ್ಕಿ ಬಂದರಾತು ಅಷ್ಟೇ, ಎನ್ನ ಹೆಸರೇಳುಲೆ ತೊಂದರಿಲ್ಲೆ! ]
ಹರೇ ರಾಮ………
ಧನ್ಯವಾದ೦ಗೊ………
ಇನ್ನು ಎನಗೆ ಕನಸಿಲಿ ಜಾರಿ ಬೀಳುವಷ್ಟು ಹೊತ್ತು ಒರಗುಲೆ ಎಡಿಯ…ನಾಳ್ತಿ೦ದ ಮತ್ತೆ ಕಾಲೇಜು ಸುರುವಾವ್ತು……….
ಮಸಾಲೆ ದೋಸೆ ಕೊಡ್ಸದ್ರೆ ಬ೦ಡಾಡಿ ಅಜ್ಜಿ ಹೇಳಿದ ಹಾ೦ಗೆ ಬೆಶಿ ಬೆಶಿ ಕಾವಲಿಗೆ ಮೇಲೆ ಕೂರ್ಸುಲೆ ಎನ್ನ ಅಮ್ಮನತ್ತರೆ ಹೇಳೆಕ್ಕಾ?????????
ಚೆ ಚೆ ಚೆ ! ಬಂಡಾಡಿ ಅಜ್ಜಿ ಪಾಪ! 😉 ಹಾಂಗೆಲ್ಲ ಎನ್ನ ಕಾವಲಿಗೆಲಿ ಕೂರ್ಸುಲೆ ಹೇಳ..
ಮಸಾಲೆ ದೋಸೆ ಕೊಡದ್ರೆ, ತುಪ್ಪ ದೋಸೆ ಕೇಳಿರಾತು! 😉
[ಎನ್ನ ಅಮ್ಮ ನಿ೦ಗೊಗೆ ತೆಳ್ಳವು-ರಸಾಯನ ಮಾಡಿಕೊಡುಗು]
ಬಂಡಾಡಿ ಅಜ್ಜಿ ಹೇಳಿದಾಂಗೆ ’ಕಾವಲಿಗೆ ಬೆಶಿ ಮಾಡಿದ್ದೆ, ನೀನು ಕೂರು’ ಹೇಳುಗೋ ಹೆಂಗೆ? 😉
ಐಶ್ವರ್ಯ ರೈಯ ಡ್ಯಾನ್ಸಿಂದ ಸುರು ಆದ ಪುತ್ತೂರಿನ ಪುಟ್ಟಕ್ಕನ ಮಳೆಯ ಪ್ರಸಂಗ ಒಳ್ಳೆ ಓದುಸೆಂಡು ಹೋತು. ಮದುವೆ ಆದವರನ್ನು, ಆಗದಿದ್ದವರನ್ನುದೆ (ಎಲ್ಲೋರನ್ನು) ಅಶೋಕೆಗೆ ದಿನಿಗೇಳಿದ ಕ್ರಮ ಲಾಯಕಾಯಿದು ! ಪುಟ್ಟಕ್ಕಂಗೆ ಚೆಂದಕೆ ಬರವಲೆ ಅರಡಿತ್ತು ಹೇಳಿ ಲೇಖನ ಓದಿ ಅಪ್ಪಗ ಗೊಂತಾತು. ಬೈಲಿಂಗೆ ಪುಟ್ಟಕ್ಕನ ಶುದ್ದಿಗೊ ಅಂಬಗಂಬಗ ಬರಳಿ.
ಧನ್ಯವಾದ೦ಗೊ……….
ಬೈಲಿಲಿ ಯಾರತ್ತರೂ ಹೇಳೆಡಿ, ನಿ೦ಗೊಗೇಳಿ ಸ್ಪೆಷಲ್ಲಾಗಿ ಹೇಳಿಕೆ ಕೊಡ್ತಾ ಇದ್ದೆ.— ”ಬೊಳು೦ಬು ಮಾವ, ತಮ್ಮ ಕುಟು೦ಬ ಸಮೇತರಾಗಿ ಅಶೋಕೆಗೆ ಹೋಗಿ ‘ರಾಮ ಕಥೆ’ಯ ನೋಡಿಕ್ಕಿ ಬನ್ನಿ”
ಬೈಲಿಲಿ ಆರಿಂಗು ಹೇಳದ್ರುದೆ ಎನಗೆ ಗೊಂತಾತು! ಲಾ ಲ ಲಾ ಲ ಲಾ! 😉
ಪುಟ್ಟಕ್ಕಾ, ಬೈಲಿಂಗೆ ಹೃತ್ಪೂರ್ವಕ ಸ್ವಾಗತ.
ಲಘು ಹಾಸ್ಯದೊಟ್ಟಿಂಗೆ ಶುದ್ದಿ ಲಾಯಿಕ ಆಯಿದು. ಬರೆತ್ತಾ ಇರು.
[ಚೆನ್ನೈಲಿ ಕೆಲಸದ ಆಳುಗ ಸಿಕ್ಕುತ್ತವಾ ಭಾವಾ??]- ಅಲ್ಲಿ ಬೊಂಡ ಕೆತ್ತಲೇ ಜೆನ ಸಿಕ್ಕುತ್ತವಿಲ್ಲೆ ಹೇಳಿ ಚೆನ್ನೈ ಭಾವ ಬೇಜಾರಿಲ್ಲಿ ಇದ್ದವು.
ಧನ್ಯವಾದ೦ಗೊ………..
ಎನ್ನ ಲೇಖನ ಓದಿದ ಮೇಲೆ ಫೋಟೋ ತೆಗದ್ದ ಅಪ್ಪಚ್ಚಿ??? ನೆಗೆಮಾಡಿಗೊ೦ಡು ಇದ್ದೀ……
🙂
🙂
ಧನ್ಯವಾದ೦ಗೊ……….
ಎನ್ನ ಲೇಖನ ಓದಿದ ಮತ್ತೆ ನಿ೦ಗ ಸ್ಟುಡಿಯೋಕ್ಕೆ ಹೋಗಿ ಫೋಟೊ ತೆಗದ್ದಾ???
ಫೋಟೋಲ್ಲಿ ಬಾರಿ ನೆಗೆ ಮಾಡಿಗೊ೦ಡು ಇದ್ದೀ……….
ಪುತ್ತೂರಿನ ಪುಟ್ಟಕ್ಕ ಪುಟ್ಟು ಪುಟ್ಟಾಗಿ ಮಳೇಲಿ ಮನೆಯೊಳವೇ ಜಾರಿ ಬಿದ್ದು ಮಳೆಗಾಲಲ್ಲಿ ಗೋಕರ್ಣಕ್ಕೆ ಹೋಗಿ ಮಳೆ ಬಿಡೆಕ್ಕಾರೆ ಮದಲೇ ಮನಗೆತ್ತಿಯಪ್ಪಗ ಅಪ್ಪನ ಮಳೆಗಾಲದ ತಲೆಬೆಶಿ ಎಡೆಲಿ ಅಡಕ್ಕಗೆ ತೇಜಿ ಕಂಡು ಬೈಲಿನೋರು ಸೊಳೆ ಬಟಾಟೆ ಗೆಣಂಗು ಉಂಡಳಕ್ಕಾಳು ಹೊರುಕ್ಕೊಂಡು ಇಪ್ಪಗ ಮಸಾಲೆ ದೋಸಗೆ ಬಾಯಿ ಒಡದು ಶುದ್ದಿ ಹೇಳಿದ್ದು ಲಾಯ್ಕ ಆಯ್ದು ಹೇಳಿ ಸುರೂ ಒಂದೊಪ್ಪ.
[ಅಮ್ಮ ಗೋಕರ್ಣಕ್ಕೆ ಹೋದೆಯ.] – ಹೋಪ ದಾರಿಲಿ, ಬಸ್ಸಿಲ್ಲಿ ಅಮ್ಮ ಏನೂ ಪಿರಿ ಪಿರಿ ಪರಂಚಿದ್ದವಿಲ್ಲೆನ್ನೆ?!
[ಆಳುಗ ಇಲ್ಲೆ ಇಲ್ಲೆ ಹೇಳಿ ಎನ್ನ ಹತ್ತರೆ ಅಡಕ್ಕೆ ಸೊಲಿಶದ್ದರೆ ಸಾಕು!] – ಇಲ್ಲೆ ಇಲ್ಲೆ, ಅದು ಗೊಬ್ಬರ ಹೊರ್ಲೆ ಜೆನ ಇಲ್ಲೆಲಿ ಅಪ್ಪ ಯೋಚನೆ ಮಾಡ್ತಾ ಇಪ್ಪದಡಾ!
ಬರ್ಲಿ ಇನ್ನಾಣ ಶುದ್ದಿ ಹೇಳಿ ಅಖೇರಿಗೆ ಒಂದೊಪ್ಪ.
ಧನ್ಯವಾದ೦ಗೊ…………….
ಆನುದೆ ಅಮ್ಮನುದೆ ದಾರಿ ಉದ್ದಕ್ಕೂ ಪಟ್ಟಾ೦ಗ ಹಾಕಿಗೊ೦ಡು ಹೋದ್ದು…….ಅದರೊಟ್ಟಿ೦ಗೆ ಪಿರಿ ಪಿರಿ ಮಳೆದೇ ಬ೦ದುಗೊ೦ಡು ಇತ್ತು……….
ಚೆನ್ನೈಲಿ ಕೆಲಸದ ಆಳುಗ ಸಿಕ್ಕುತ್ತವಾ ಭಾವಾ??
ಆಹಾ!! ಭಾರೀ ಲಾಯಿಕ್ಕಾಯಿದನ್ನೆ!!..
ಹೆಸರು ಪುತ್ತೂರಿನ ಪುಟ್ಟಕ್ಕ ಹೇಳಿ ಬದಲಾಯಿಸಿಯಪ್ಪಗಳೇ ಗ್ರೇಶಿತ್ತಿದ್ದೆ.. ಎ೦ತದೋ ಶುದ್ದಿ ಬತ್ತ ಅ೦ದಾಜಿದ್ದು ಹೇಳಿ. ಶುದ್ದಿ ಭಾರೀ ಲಾಯಿಕಿದ್ದು. ಬರೆತ್ತಾ ಇರಿ. ಒಪ್ಪ೦ಗೊ.
ಧನ್ಯವಾದ೦ಗೊ…………….