Oppanna.com

ನಿಂಗೊಗೆ ಏನಾರೂ ಅಂದಾಜು ಆವುತ್ತೋ ?

ಬರದೋರು :   ತೆಕ್ಕುಂಜ ಕುಮಾರ ಮಾವ°    on   27/08/2011    40 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಮನ್ನೆ ಒಂದರಿ ಆಫೀಸಿಂಗೆ ಎತ್ತುವಗ ತಡವಾಗಿತ್ತಿದ್ದು. ಎನ್ನ ಸಹೋದ್ಯೋಗಿ ಒಬ್ಬ , ರಜಾ ಕುಶಾಲಿನವ ವಿಚಾರ್ಸಿದ ” ಏನು. ಯಾವಾಗ್ಲೂ ಎಂಟು ಘಂಟೆಗೆ ಬರುವವರು ಇವತ್ತು ಇಷ್ಟೊಂದು ತಡ ?”  ಅದಕ್ಕೆ ಉತ್ತರ ಕೊಡುವ ಮದಲು, ಅವನ ತರಚ್ಚಿದ ಕೈ ನೋಡಿಗೊಂಡು “ಇದೇನು, ಕೈ- ಮೈ ಗಾಯ ಮಾಡ್ಕೊಂಡು ಬಂದಿದ್ದೀರಿ ? ” ಆನು ಪ್ರಶ್ನೆ ಮಾಡಿದೆ, ಬಹುಶಃ ಬೈಕಿಲಿ  ಬಪ್ಪಗ ಏನಾರು ಅವಘಡ ಆದಿಕ್ಕು ಗ್ರೇಶಿಗೊಂಡು.ಅದಕ್ಕೆ –

ದಿಕ್ಕಿನೋಳ್ ಒಬ್ಬನ, ತಾಯಿಯ, ತಮ್ಮನ, ಕತ್ತಲೆಯೊಳ್ ಕುಟ್ಟಿಗೆಲಿದವನ, ಅಣ್ಣನ, ಅಪ್ಪನ ವಾಹನ ಅಡ್ಡ ಬಂದಿತ್ತು. ! “

ಹೇಳಿ ಉತ್ತರ ಕೊಟ್ಟ.

“ಏನ್ರಿ ಇದು, ಸರಿಯಗಿ ಹೇಳ್ಬಾರ್ದ..? ಏನಯಿತು, ದಾರಿಯಲ್ಲಿ ಬರುವಾಗ ಹೆಚ್ಚುಕಡಿಮೆ ಏನು ಆಗಿಲ್ಲ ತಾನೆ ?”

” ಅದನ್ನೇ ಹೇಳಿದೆ ನಾನು” ಇರಲಿ ಹೇಳಿ ಆನು ಬರದು ಮಡಿಕ್ಕೊಂಡೆ.

“ಅಲ್ಲ ನೀವ್ಯಾಕೆ ಲೇಟು ಇವತ್ತು – ಹರನ, ಹಾರನ, ಆಹಾರನ, ಸುತನ , ಸ್ವಾಮಿಯ, ವೈರಿಯ, ತಮ್ಮನ ಮಡದಿ ಅಡ್ಡೈಸಿದಳು – ಅಲ್ವಾ..?”

ಬಹುಶಃ ಎನಗೆ ಪಿಸುರು ಬಪ್ಪದು ಬೇಡ ಹೇಳಿ ತೋರಿ ಮತ್ತೆ ಹೀಂಗೆ ಕತೆ ಹೇಳಿದ – ಹಿಂದೆ ಒಂದರಿ ಭೋಜರಾಜ ಹೇಳ್ತ ರಾಜ,ಅವನ ಅರಮನೆಲಿ ಒಂದರಿ ಪರಿಚಾರಿಕೆಯ ಹೆಣ್ಣು ತಡಮಾಡಿ ಬಂದಿಪ್ಪಗ ಕೋಪ ಬಂದು ಜೋರು ಮಾಡಿದಡ. ಇಂದು ತಡಮಾಡಿ ಬಂದದು ಯೇವ ಕಾರಣಕ್ಕಾಗಿ, ಅರಮನೆ ಕೆಲಸಂದ ಹೆಚ್ಚು ಮಹತ್ವದ ಕಾರ್ಯ ನಿನಗೆ ಬೇರೆ ಎಂತ ಇತ್ತಿದ್ದು, ಸತ್ಯ ಹೇಳದ್ದರೆ ಸೆರೆಮನೆಗೆ ಹಾಕುವೆ, ಹೇಳಿ ಆಜ್ಞೆ ಮಾಡಿದಡ. ಅವಗ ಆ ಪರಿಚಾರಿಕೆ ಇದೇ ಉತ್ತರವ ಕೊಟ್ಟದಡ. ಈ ಉತ್ತರ ಕೇಳಿ ಭೋಜರಾಜ ಹಸನ್ಮುಖಿಯಾಗಿ ಪರಿಚಾರಿಕೆಯ ಕ್ಷಮಿಸಿದನಡ.

ಎನಗೆ ಎಂತದೂ ಗೊಂತಾಯಿದಿಲ್ಲೆ. ಎರಡನ್ನೂ ಬರದು ಮಡಿಕ್ಕೊಂಡು ಮತ್ತೆ ಮತ್ತೆ ನೋಡಿದೆ. ಮನೆಗೆ ಬಂದು ಕೂದೊಂಡು ಯೋಚನೆ ಮಾಡಿಯಪ್ಪಗ “ಕಾರಣ ಸರಿ” ಹೇಳಿ ಕಂಡತ್ತು.

ನಿಂಗೊಗೆ ಏನಾರೂ ಅಂದಾಜು ಆವುತ್ತೋ ? ಹೇಳಿಕ್ಕಿ.

40 thoughts on “ನಿಂಗೊಗೆ ಏನಾರೂ ಅಂದಾಜು ಆವುತ್ತೋ ?

  1. ಆಹಾ!!!! ತಲೆಗೆ ಒಳ್ಳೆ ಕೆಲಸ ಕೊಡುತ್ತ ವಿಷಯವೇ ಸರಿ. ಹೇ೦ಗಾರು ಆನು ನೋಡುವಗಳೇ ಲೇಟಾತಿದಾ.. ಅಲ್ಲದ್ರುದೆ ಎನಗೆ ಗೊ೦ತಾವ್ತಿತೋ ಹೇಳುವದೇ ಸ೦ಶಯ. ಎ೦ತದೇ ಆದರು ಅಭಿನ೦ದನೆಗೊ ಕುಮಾರಣ್ಣಾ..

  2. ಎನ್ನ ಪ್ರವೇಶ ರಜಾ ತಡ ಆತು ಭಾವಯ್ಯ. ಒಗಟುಗೊ ಲಾಯಕಾಯಿದು. ಒಪ್ಪಂಗಳ ಎಲ್ಲ ಪರಿಶೀಲಿಸಿ ಅಪ್ಪಗ ಸುಲಾಬಲ್ಲಿ ಗೊಂತಾತು !

  3. ಶ್ಯಾಮಣ್ಣಂಗುದೇ ಹೀಂಗೆ ಲೇಟಾದ್ದು ಇದ್ದೋ ಹೇದು ಸಂಶಯ ಬತ್ತಾ ಇದ್ದು ಎನಗೆ.
    ಲೇಟಾಗಿ ಬೈಲಿಂಗೆ ಇಳುದು ಉತ್ತರ ಹಿಡುದವಿದ..!!!

  4. ಅಂಬಗ, ನಾವು ಇನ್ನೊಬ್ಬ ತಮ್ಮನ ಬಗ್ಗೆ ಯೋಚನೆ ಮಾಡುವ.
    ಅವನ ಜೀವನದ ಹೆಚ್ಚು ಸಮಯವ ಯಾರೊಟ್ಟಿಂಗೆ ಇತ್ತಿದ್ದ..!!! ಹೇಳಿ ಯೋಚಿಸಿರೆ ಗೊಂತಕ್ಕು
    ( ಶಾಪದ ಕಾರಣಂದಾಗಿ)

    ಎಲ್ಲೋರು ಈ ಚೋದ್ಯದ ಬಗ್ಗೆ ಯೋಚಿಸಿ ಉತ್ತರ ಕಂಡು ಹಿಡಿವಲೆ ಪ್ರಯತ್ನಿಸಿದ್ದಿ, ಧನ್ಯವಾದಂಗೊ.

    1. ಅಂಬಗ ಕುಂಭಕರ್ಣನ ಸಂಗಾತಿ ನಿದ್ರಾದೇವಿ ಹೇಳಿ ಗ್ರೇಶೆಕ್ಕಾವ್ತು… ಅಲ್ಲದಾ?

      1. ಒರಕ್ಕಿಂದ ಏಳುದು ಲೇಟಾತು ಹೇಳಿಯಾ?

  5. ವಿಭ್ಹೀಷಣನ ಹೆಂಡತಿ ಅಡ್ಡ ಬಂತು-ಅಲ್ಲದೊ? ಅಂತವೇ ಅಲ್ಲದೊ ಬೆಂಗಳೂರಿಲಿ ಮಕ್ಕಳ ಮೇಲೆ ಹಾರಿ ಕೊಂದದು?

    1. ಅಲ್ಲ ಅಣ್ಣಾ ವಿಭೀಷಣನ ಹೆಂಡತ್ತಿಯ ಹೆಸರು ಸರಮೆ ಹೇಳಿ ಎಂತದೋ ಅಲ್ಲದಾ..ಅದಕ್ಕೂ ಇದಕ್ಕೂ ಎಂತ ಸಂಬಂದ? ಗೊಂತಾತಿಲ್ಲೆನ್ನೇ

    1. ಎಂತಕ್ಕೆ? ಟೇಲಿಗ್ರಾಮ್ ಹೇಂಗಪ್ಪದು ಮಾವ? ಅರ್ಥ ಆತಿಲ್ಲೆ ಎನಗೆ 🙁 ವಿವರ್ಸುತ್ತೀರಾ?

  6. ಹರನ ಹಾರನ ಆಹಾರ=ಗಾಳಿ, ಇದು ಗೊಂತಾತು, ಆದರ ಆಹಾರನ ಪುತ್ರನ ಸ್ವಾಮಿ ಆರು? ಇದು ಗೊಂತಾಯ್ದಿಲ್ಲೆ, ಅಲ್ಲಿ ಎರಡೆರಡು ಉತ್ತರ ಬತ್ತಾ ಇದ್ದು ..ರಜ್ಜ ಕನ್ನುಪ್ಯೂಜನ್ನು !!

    1. ವಾಯುವಿನ ಮಗ ಹನುಮನ್ತ ಅಲ್ಲದ…ಅವನ ಸ್ವಾಮಿ ರಾಮ ಆದಿಕ್ಕು ರಾಮನ ವೈರಿ ರಾವಣ ಆದಿಕ್ಕು.ರಾವಣನ ತಮ್ಮ ವಿಭಿಶಣ ಅತವಾ ಕು೦ಭಕರ್ಣ ..

      1. ಅದೇ, ವಿಭೀಷಣ ಅಥವಾ ಕುಂಭಕರ್ಣ ಹೇಳುವಲ್ಲಿಗೆ ಬಂದು ಎತ್ತುತ್ತು ಈ ದಾರಿಲಿ ಬಂದರೆ, ಆದರೆ ವಿಭೀಷಣನ/ಕುಂಭಕರ್ಣನ ಹೆಂಡತಿ ಆರು ಎಂತ?? ಇದು ಉತ್ತರ ಅಪ್ಪದು ಹೇಂಗೆ? ಅಥವಾ ರಾವಣಂಗೆ ಇನ್ನೂ ಒಬ್ಬ ತಮ್ಮ ಇತ್ತಿದ್ದನಾ? ಅಥವಾ ರಾಮನ ಬೇರೆ ಶತ್ರುವಿನ ಬಗ್ಗೆ ಹೇಳುದಾ? ಅದು ಆರು?
        ಇನ್ನೊಂದು ದಾರಿಲಿ ಹೋದರೆ.. ವಾಯುದೇವನ ಸುತ [ಮಂತ್ರಂದ ಹುಟ್ಟಿದವ] ಭೀಮ, ಅವನ ಸ್ವಾಮಿ? ಧರ್ಮರಾಜ ಹೇಳಿಯೇ ಮಡಿಕ್ಕೊಂಡರೆ, ಅವನ ವೈರಿ ಆರು? ಕೌರವ? ಅವನ ತಮ್ಮನ ಹೆಂಡತಿ????
        ಇಲ್ಲಿಗೆ ಮುಗುತ್ತು ಎನ್ನ ಪ್ರಯತ್ನ 🙁 🙁

      2. ವಿನಯಕ್ಕ/ಸುವರ್ಣಿನಿ ಇಬ್ರು ಸರಿಯಾಗಿ ವಿಶ್ಲೇಷಣೆ ಮಾಡಿಗೊಂಡು ಹೋವುತ್ತಾ ಇದ್ದಿ. ಇನ್ನು ಇಲ್ಲಿಂದ ಮುಂದೆ ಹೋಗಿ..ಹೆಂದತ್ತಿ/ಮಡದಿ/ಪ್ರೇಯಸಿ/ಸಂಗಾತಿನಿ…. ಉತ್ತರ ಗೊಂತಕ್ಕು.

        1. ಅ೦ಬಗ .ವಜ್ರಮಾಲ / ಮ೦ಡೊದರಿ /…..ಆದರೆ ಇದಕ್ಕು ಆ ಉತ್ತರಕ್ಕು ಎ೦ತ ಸ೦ಬ೦ದ ಗೊ೦ತಾವುತ್ತಿಲ್ಲೆ ..

  7. ಕುಂತೀಭೋಜನ ಮಗಳ ಮಕ್ಕೊಗೆ ಆಶ್ರಯ ನೀಡಿದವನ ಹೆಂಡತ್ತಿಯ ತಮ್ಮನ ಕೊಂದವನ ಅಣ್ಣಾನ ಅಪ್ಪನ ವಾಹನದ ಹೆಂಡತ್ತಿಯೋ ಅಡ್ಡ ಬಂದದು?

    1. ಇದು ಎರಡನೆ ಪ್ರಶ್ನೆಗೆ ಉತ್ತರ ಆಗಿಪ್ಪಲೂ ಸಾಕು, ಆದರೆ ಆ ಪ್ರಶ್ನೆಯ ಒಂದೊಂದೇ ಅಂಶಂಗಳ ಹಿಡ್ಕೊಂಡು ಹೋದರೆ, ಈ ಉತ್ತರ ಸಿಕ್ಕುತ್ತಿಲ್ಲೆ, ಅಷ್ಟೇ ಅಲ್ಲ, ಯಾವ ಉತ್ತರವೂ ಸಿಕ್ಕುತ್ತಾ ಇಲ್ಲೆ 🙁

  8. ಎರಡನೆದಕ್ಕೆ ” ಹರನ ಹಾರನ ಆಹಾರ = ಗಾಳಿ ” ಹೇಳಿ ತೆಕ್ಕೊಂಡು ನೋಡಿ, ಉತ್ತರ ಗೊಂತಕ್ಕು.

  9. ಪ್ರಸನ್ಗ ಲಾಯ್ಕ ಇದ್ದು ಮಾವ ಆದರೆ ಉತ್ತರ ಗೊನ್ತಾಯ್ದಿಲ್ಲೆ.. ಒಪ್ಪನ್ಗೊ..

  10. ಎರಡೆನೆ ಪ್ರಶ್ನೆಲಿ ಯಾವುದೋ ಒಂದು ಲಿಂಕು ಮಿಸ್ ಆಯ್ದೋ ಹೇಳಿ ಕಾಣ್ತು, ಅಥವಾ ಎನಗೆ ಅರ್ಥ ಆಯ್ದಿಲೆ 🙁

  11. ಮಾರ್ಜಾಲವೋ ಹೇಂಗೆ ಮಾವ?

  12. ಅಲ್ಲನ್ನೇ…ಪ್ರಸಾದಣ್ಣ ಇನ್ನೊಂದರಿ ಯೋಚನೆ ಮಾಡೆಕ್ಕಕ್ಕು.

    1. ತಲೆ ಕೆಳ ಕಾಲು ಮೇಲೆ ಉತ್ತರ ಸಿಕ್ಕ ಯೆಂತರ ಹೇಳಿ ಕೇಳಿದ ಹಾಂಗೆ ಅಲ್ಲನ್ನೆ ಮಾವಾ………..

    2. ಆನು ಹೇಳಿದ್ದು ಮೀಯೋ ಹೇಳಿ ಹೇಳ್ತದು ಹೇಳಿ ….ಅದು ಅಲ್ಲದ್ರೆ ಯೆಂತ ಹೇಳಿ ಗೊಂತಾವುತಿಲ್ಲೆನ್ನೇ…….. ತಲೆಕೆಳ ಕಾಲು ಮೇಲೆ ಉತ್ತರ ಸಿಕ್ಕ ಎಂತರ ಹೇಳಿ ಕೇಳಿದಹಾಂಗೆ ಎಂತಾರು ಇದ್ದೋ ಹೇಂಗೆ?

  13. ಎರಡನೆ ಪ್ರಶ್ನೆಗೆ ಉತ್ತರ ಎಂತ್ಸದೋ..? ಎರಡಕ್ಕೂ ಬೇರೆ ಬೇರೆ ಉತ್ತರ.

    1. ಎರಡನೆದಕ್ಕೆ ಉತ್ತರ ಮನೆಲಿ ತದಡವಾಗಿ ಮೀವವರ ಬೇಗ ಮೀವಲೆ ಹೇಳ್ತ ಪ್ರಾಣಿ ಅಲ್ಲದೋ ಮಾವಾ……………?

  14. ಇದೇ ಒಗಟು ಎನಿಗೆ ತುಂಬ ವರ್ಷಂದ ಈ ರೀತಿ ಗೊಂತಿದ್ದು (ಕನ್ನಡಲ್ಲಿ) –
    ಈರಾರು ತಾರೆಯ ತಾಯಿಯ ತಮ್ಮನ ಇರಿದನ ಅಣ್ಣನ ಅಯ್ಯನ ವಾಹನವೇ ಹೋ ಹೋ ಎಂದನು.

  15. “ಹನ್ನೆರಡನೆಯ ನಕ್ಷತ್ರದವನ ತಾಯಿಯ ತಮ್ಮನ ಕೊಂದವನ ದೊಡ್ಡಣ್ಣನ ತಂದೆಯ ವಾಹನ” ಹೇಳಿದರುದೇ ಅದುವೆಯೋ ಮಾವಾ…….?

    1. (ಹನ್ನೆರಡನೆಯ ನಕ್ಷತ್ರದವನ ತಾಯಿಯ ತಮ್ಮನ ಕೊಂದವನ ದೊಡ್ಡಣ್ಣ)
      ಹೇಳಿರೆ ಕರ್ಣ ಹೇಳೀ ಆವ್ತು… ಧರ್ಮರಾಯ ಆವುತ್ತಿಲ್ಲೆ…. 🙂
      ಪಾರ್ಥಸಾರಥಿ ಹೇಳಿರೆ ಆರು? ಕೃಷ್ಣನೇ ಆಯೆಕ್ಕು ಹೇಳಿ ಇಲ್ಲೆ… ಶಲ್ಯನೂ ಆವುತ್ತು ಅಲ್ಲದಾ?

      1. ಆನು ಮಾಬಾರತ ಓದಿದ್ದು ಕಮ್ಮಿ…. ಈ ಶಲ್ಯ ಪಾರ್ತ ಸಾರತಿ ಆದ್ದು ಯೇವಗಾ?????

        1. ಪೃಥೆಯ ಮಗ ಪಾರ್ಥ ಅಲ್ಲದೋ? ಪೃಥೆ ಹೇಳಿರೆ ಕುಂತಿ. ಕರ್ಣನೂ ಕುಂತಿಯ ಮಗನೇ ಅಲ್ಲದ? ಹಾಂಗಾಗಿ ಕರ್ಣಂದೆ ಪಾರ್ಥ ಹೇಳಿ ಆವುತ್ತ. ಕರ್ಣನ ಸಾರಥಿ ಶಲ್ಯ. ಹಾಂಗಾಗಿ ಶಲ್ಯ ಪಾರ್ಥಸಾರಥಿ….

          1. ಹಾಂಗೆ ಧರ್ಮರಾಯನ ಸಾರಥಿ ಮತ್ತೆ, ಭೀಮನ ಸಾರಥಿಗಳುದೆ ಪಾರ್ಥಸಾರಥಿಗಳೆ.

    1. ಮಾವಾ ನಿಂಗಳ ಉತ್ತರ ಕನ್ನಡ ಭಾಶೆಲಿ ಅಲ್ಲದೋ……….? ನಮ್ಮ ಭಾಷೆಲಿ ಅಲ್ಲನ್ನೇ ……?

  16. ಈಗಂಗೆ ನಿಂಗಳಾಂಗೇ ಎನಗೂ. ಎರಡನ್ನೂ ಬರದು ಮಡಿಕ್ಕೊಂಡೆ. ಅಷ್ಟೇ.

    ಯೇ ದೇವರೇ.,! ಮನುಷ್ಯರು ಉದಿಯಪ್ಪಗಳೇ ಹೀಂಗೊಂದು ತಲೆ ತಿಂಬದಾ!! ಅಂದರೂ., ಮಾವ, ಮಜಾ ಇದ್ದು ಇದರಲ್ಲಿ ಹೇಳಿ ನಮ್ಮ ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×