Oppanna.com

VishwaHitam.org: ವಿಶ್ವಹಿತಮ್ ಸರ್ವಹಿತಮ್

ಬರದೋರು :   ಪೆಂಗಣ್ಣ°    on   13/09/2011    4 ಒಪ್ಪಂಗೊ

ಪೆಂಗಣ್ಣ°

ವಿಶ್ವಹಿತಮ್ ಸರ್ವಹಿತಮ್
(www.vishwahitam.org )

ವಿಶ್ವದ ಸಮಸ್ತ ಜೀವಿಗಳ ಹಿತ ಕಾಪಾಡುವುದಕ್ಕಾಗಿ, 22, ಒಕ್ಟೋಬರ್ 1999 ರಲ್ಲಿ ಸ್ಥಾಪನೆಯಾದ ಧರ್ಮಚಕ್ರ ಟ್ರಸ್ಟ್, ಹಲವು ಕಾರ್ಯಂಗಳ ವಿವಿಧ ಕ್ಷೇತ್ರಲ್ಲಿ ತೆಕ್ಕೊಂಡು ವಿಶ್ವ ಹಿತಕ್ಕಾಗಿ ಕೆಲಸ ಮಾಡ್ತಾ ಇದ್ದು.
ಈ ಧರ್ಮಚಕ್ರದ ವ್ಯಾಪ್ತಿಲಿ ಬಪ್ಪೋರು ಎಲ್ಲೋರೂ… ಇಡೀ ಭೂಮಿಯವಾಸಿಗೋ!!
ಇದು ಮನುಷ್ಯನ ಏಳಿಗೆಗೆ ಇಪ್ಪದು. ಸೃಷ್ಟಿಯ ಎಲ್ಲಾ ಜೀವ ವೈವಿಧ್ಯದ ಬೆಳವಣಿಗೆಗೆ ಪೂರಕ ಅಪ್ಪಲೆ ಇಪ್ಪದು.

ಈ ಸಂಸ್ಥೆಗೆ ನಿನ್ನೆ ಮೈಲಿಗಲ್ಲು ಸಾಧಿಸಿದ ಸುದಿನ. ವೇಗವಾಗಿ ಬೆಳೆತ್ತಾ ಇಪ್ಪ ಈ ಜಗತ್ತಿಲಿ ಕಾಲಕ್ಕನುಗುಣವಾಗಿ ಹೊಸ ವ್ಯವಸ್ಥೆಯೊಟ್ಟಿಂಗೆ ಹೊಂದಿಗೊಳ್ಳೆಕ್ಕಪ್ಪದು ಅವಶ್ಯ ಆಯಿದು.
ಅಂತರ್ಜಾಲ ಮಾಧ್ಯಮ ವರ್ತಮಾನ ಕಾಲಲ್ಲಿ ಅತ್ಯಂತ ಜನಪ್ರಿಯ ಮಾಧ್ಯಮ. ಅಂತೆಯೇ ಧರ್ಮಚಕ್ರ ಟ್ರಸ್ಟ್ ಕೂಡಾ ಅಂತರ್ಜಾಲ ಜಗತ್ತಿಂಗೆ ಕಾಲಿಟ್ಟ ಸುದಿನ 12.ಸೆಪ್ಟೆಂಬರ್. 2011 ಟ್ರಸ್ಟಿನ ಅಂತರ್ಜಲ ತಾಣ, ವಿಶ್ವಹಿತಮ್ www.vishwahitam.org ನಿನ್ನೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಗೋಕರ್ಣದ ಅಶೋಕೆಲಿ ವಿಶ್ವಾರ್ಪಣೆ ಆಯಿದು. ಧರ್ಮಚಕ್ರ ಟ್ರಸ್ಟ್ ಭಾರತೀಯ ಗೋರಕ್ಷೆ, ಶಿಕ್ಷಣ, ಪರಿಸರ ಕಾಳಜಿ, ಸಾಮಾಜಕ ಬದ್ಧತೆಗಳ ಬಗ್ಗೆ ಕೆಲಸ ಮಾಡುತ್ತಾ ಇದ್ದು. ವಿದ್ಯೆ, ವಿಶ್ವಮಾತೆ, ವಿಶ್ವ ಪರಿಸರ ಇದು ಮೂರು ಮುಖ್ಯವಾಗಿ ಉನ್ನತಿ ಹೊಂದುಲೆ ವಿಶ್ವಹಿತಮ್ ಹೇಳುವ ಒಂದು e-ಕಾರ್ಯಯೋಜನೆಯ ಧರ್ಮಚಕ್ರ ಟ್ರಸ್ಟ್ ಜಾರಿಗೆ ತಂದದು.

ಈ ಕಾರ್ಯಯೋಜನೆಯ ದೂರ ದೃಷ್ಟಿ ಎಂತ ಆಗಿದ್ದು ಹೇಳಿದರೆ, ಈ ಭೂಮಿಲಿ ಇಪ್ಪ ಎಲ್ಲಾ ಜೀವಿಗಳೂ, ಪರಿಸರವೂ ಸುರಕ್ಷಿತ ಆಗಿರೆಕ್ಕು.
ಬಾಳ್ವೆಯ ಹಕ್ಕು ಎಲ್ಲಾ ಜೀವಂಗಳದ್ದನ್ನುದೆ ಸಂರಕ್ಷಿಸಿರೆಕ್ಕು. ವಿಶ್ವ ಜನನಿಯಾದ ಗೋಮಾತೆಗೆ ರಕ್ಷಣೆ ಮತ್ತೆ ಪೋಷಣೆ, ಹಿಂದುಳಿದ ಪ್ರದೇಶ ಮತ್ತೆ ಹಿಂದೆ ತಳ್ಳಲ್ಪಟ್ಟ ಜನಂಗಳ ಮಕ್ಕೊಗೆ ಗುಣಮಟ್ಟದ ವಿದ್ಯಾಭ್ಯಾಸ, ನಮ್ಮ ದೇಶದ ಸನಾತನ ಸಂಸ್ಕೃತಿಯ ಸಂರಕ್ಷಣೆ, ಅಗತ್ಯ ಇಪ್ಪ ಎಲ್ಲರಿಂಗೂ ಸಕಲ ವೈದ್ಯಕೀಯ ಸವಲತ್ತುಗೋ ಇವು ಮುಖ್ಯವಾಗಿ ವಿಶ್ವಹಿತಂನ ಲಕ್ಷ್ಯಂಗೋ.

ವಿಶ್ವಹಿತಮ್ ಕಾರ್ಯಯೋಜನೆಯ ವಿಶ್ವಾರ್ಪಣೆ ಮಾಡಿದ ಶ್ರೀ ಸಂಸ್ಥಾನ ಮಾತಾಡಿ.. “ಒಂದು ಸಂಸಾರ ಮಾಡಿದರೆ ಅದು ಸೀಮೋಲ್ಲಂಘನ. ಒಂದು ಜೀವಿಯ ಬಗ್ಗೆ ಆಲೋಚನೆ ಮಾಡುದೂ, ಸಹಕಾರ ಮಾಡುದೂ ಸೀಮೋಲ್ಲಂಘನ. ಇದು ಅದ್ವೈತ. ನಾವು, ಜಾನುವಾರುಗೋ, ಆಳುಕಾಳುಗೋ, ಸಂಬಂಧಿಕರು, ಊರೋರು ಹೇಳಿ ಎಲ್ಲ ಒಂದು ಬೇಲಿಯ ಒಳ ಇರ್ತು. ಅದರ ಮೀರಿ ನಾವು ಯೋಚನೆ ಮಾಡಿ ವಸುದೈವ ಕುಟುಂಬಕಮ್ ಹೇಳಿ ವಿಶ್ವ ಕುಟುಂಬವ ಆಲೋಚನೆ ಮಾಡಿದರೆ ಅದು ಒಂದು ಸೀಮೋಲ್ಲಂಘನೆ. ಪ್ರಪಂಚದ ಆರೂ ಸೇವೆ ಮಾಡ್ಲೆ ಎಡಿಗಪ್ಪಂಥ, ಮಾಡ್ಲೇ ಇಪ್ಪಂಥ ವಿಶ್ವಹಿತಮ್ ಕೂಡಾ ಒಂದು ಸೀಮೋಲ್ಲಂಘನವೇ!! ಎಲ್ಲಾ ಬಗೆಯ ಪರೋಪಕಾರಂಗಳಲ್ಲಿಯೂ, ಲೋಕಚಿಂತನೆಗಳಲ್ಲಿಯೂ ಸೀಮೋಲ್ಲಂಘನ ಇದ್ದು. ಇಲ್ಲಿ ಎಲ್ಲವೂ ಮಾಯೆ. ಮಾಯೆಯೇ ಮುಂದರುದರೆ ಅಂತಿಮ ಸೀಮೋಲ್ಲಂಘನ. ಮಾಯೆ ಹೇಳಿದರೆ ಅಮ್ಮ. ಅಬ್ಬೆಯ ಕೃಪೆ ಇಲ್ಲದ್ದೆ ಸೀಮೋಲ್ಲಂಘನ ಸಾಧ್ಯ ಇಲ್ಲೆ. ಭದ್ರಕಾಳಿ ಅದರ ಪ್ರತೀಕ. ಸೀಮೋಲ್ಲಂಘನದ ವ್ಯಾಪ್ತಿ ಸಂಸಾರಂದ ಸುರು ಆಗಿ ಪರಮಾತ್ಮನ ವರೆಂಗೆ. ಸಂಸಾರಂದ ಸಮಾಜ, ಸಮಾಜಂದ ವಿಶ್ವ ಸೇವೆ, ವಿಶ್ವಸೇವೆಂದ ಸೀಮೋಲ್ಲಂಘನ ಮಾಡೆಕ್ಕು. ” ಹೇಳಿದವು.

ವಿಶ್ವಹಿತಮ್ ಕೈಗೆತ್ತಿಗೊಂಬ ಎಲ್ಲಾ ಕಾರ್ಯಯೋಜನೆಗಳೂ ಶ್ರೀ ಪೀಠದ ಶ್ರೀ ಗುರುಗಳ ಅನುಗ್ರಹಂದ ಯಶಸ್ಸು ಕಾಣಲಿ..
ಭಾರತೀಯ ಗೋವಂಶ, ಗೋವುಗ ಅಭಿವೃದ್ಧಿ ಆಗಲಿ.. ಗೋ ಉತ್ಪನ್ನಂಗ ಮನೆಮನೆಗೆ ಮುಟ್ಟಿ ಗೋವಿನ ಮಹತ್ವ ವಿಶ್ವವೇ ಅರಿಯಲಿ..
ಮಕ್ಕಳ ವಿದ್ಯಾಭ್ಯಾಸ ಚೆಂದಲ್ಲಿ ಆಗಿ ಅವು ಮುಂದೆ ಒಳ್ಳೆಯ ವಿಶ್ವ ಪ್ರಜೆಗ ಆಗಲಿ..
ನೆಲ, ನೀರು, ಗಾಳಿ ಶುದ್ಧವಾಗಿ ನಮ್ಮ ಪರ್ಯಾವರಣ ಮರಗಿಡಗಳಿಂದ ಸಮೃದ್ಧಿಯಾಗಲಿ…
ವಿಶ್ವಹಿತಮ್ ಸರ್ವಹಿತಮ್ ಹೇಳಿ ಸರ್ವವ್ಯಾಪಿ ಆಗಲಿ…

||ಹರೇರಾಮ||

4 thoughts on “VishwaHitam.org: ವಿಶ್ವಹಿತಮ್ ಸರ್ವಹಿತಮ್

  1. ಪೆಂಗಣ್ಣ ಇಷ್ಟು ಚೆಂದಕೆ ಶುದ್ದಿ ಹೇಳುದು ನೋಡಿರೆ, ನಿಂಗಳ ಪೆಂಗ ಹೇಳಿ ಹೇಳಿದ್ದು ಆರಪ್ಪಾ ಹೇಳಿ ತೋರುತ್ತನ್ನೇ?? 😉

  2. ಪೆಂಗಣ್ಣಾ,
    ಬೈಲಿಲಿ ನಿನ್ನ ಕಾಣದ್ದೆ ಅಸಕ್ಕ ಹಿಡುದಿತ್ತಿದ್ದು ಇದಾ, ಒಳ್ಳೆ ಶುದ್ದಿ ಹಿಡ್ಕೊಂಡು ಬಂದೆ ಅಲ್ದ, ಕೊಶೀ ಆತು.

    ವಿಶ್ವಹಿತಮ್ ಉದ್ಘಾಟನೆ ಆದ ಶುದ್ದಿ ಹೇಳಿದೆ, ಒಳ್ಳೆದಾತು.
    ದೂರಲ್ಲಿಪ್ಪ ನಮ್ಮ ಬೈಲಿನೋರೆಲ್ಲ ಸೇರಿ, ಧರ್ಮಚಕ್ರದ ಕಾರ್ಯಂಗಳ ಸಹಕರುಸಿ, ಧರ್ಮವ ಎತ್ತಿಹಿಡುದು, ವಿಶ್ವಹಿತ ಅಪ್ಪಲೆ ಕಾರಣೀಭೂತರಾಯೇಕು ಹೇಳ್ತದು ಬೈಲಿನೋರ ಆಶಯ.
    ಹರೇರಾಮ

  3. ಆರೋ ಹೇಳಿತ್ತಿದ್ದವು – “ಪೆಂಗಣ್ಣ ಊರಿಡೀ ಶುದ್ದಿ ತೆಕ್ಕೊಂಡು ಬಕ್ಕು, ಒಂದೊಂದರಿ. ಆದರೆ, ಒಂದೊಂದರಿ ಮನಸ್ಸು ತಿರುಗಿರೆ ಮನೆಲೇ ಕೂದುಗೊಂಗು”. ಛೆ ., ಅಲ್ಲಪ್ಪಾ , ನೋಡಿದಿರೋ.. ಹಸಿ ಹಸಿ ಸುದ್ದಿ ಬೆಷಿ ಬೆಷಿ ಇಲ್ಲಿ ಕೊಡ್ತಾ ಇದ್ದವನ್ನೆ.

    http://www.vishwahitam.org ಲಾಯಕ ಆಯ್ದು . ಶ್ರೀ ಸಂಸ್ಥಾನದ ಇಚ್ಛೆ ಸಾಕಾರವಾಗಲಿ ಹೇಳಿಗೊಂಡು ಈ ಒಳ್ಳೆ ಶುದ್ದಿಗೊಂದು ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×