ಬ್ರಹ್ಮ, ವಿಷ್ಣು, ಶಿವಶರೀರಂಗಳ ಹೊಂದಿದವ° ಆದ ಕಾರಣ ಪರಶಿವಂಗೆ ತ್ರಿಪುರ° ಹೇಳ್ತ ಹೆಸರು ಇದ್ದು. ಪ್ರಧಾನದ ಇಚ್ಛಾವಶಂದ ಶಂಭುವಿನ ಶರೀರ ಮೂರು ಆದ್ದದಡ್ಡ. ಐದು ಮೋರೆಯೂ, ನಾಲ್ಕು ಭುಜವೂ ಪದ್ಮಕೇಸರದ ಬಣ್ಣ ಇಪ್ಪ ಬ್ರಹ್ಮಶರೀರ, ಮಹೇಶ್ವರನ ಊರ್ಧ್ವಭಾಗ ಆತಡ್ಡ. ನೀಲಿ ಬಣ್ಣವೂ, ಒಂದು ಮೋರೆಯೂ ಚತುರ್ಭುಜಂಗಳೂ, ಶಂಖ, ಚಕ್ರ, ಗದಾ,ಪದ್ಮಂದ ಕೂಡಿದ ಕೈಗೋ ಇಪ್ಪ ವೈಷ್ಣವ ಶರೀರ ಮಧ್ಯಭಾಗ ಆತಡ್ಡ. ಐದು ಮೋರೆಗಳೂ, ಚತುರ್ಭುಜಂಗಳೂ ಸ್ಫಟಿಕಾಭ್ರದ ಹಾಂಗೆ ಶುಕ್ಲವರ್ಣದ ಚಂದ್ರಶೇಖರನ ಶರೀರದ ಅಧೋಭಾಗ ಆತಡ್ಡ. ಹೀಂಗೆ ಮೂರು ಪುರಂಗಳ ಹೊಂದಿದ ಪರಮಶಿವ ತ್ರಿಪುರ° ಆದ° ಹೇಳಿ ಕಾಳಿಕಾ ಪುರಾಣಲ್ಲಿ ಹೇಳ್ತವು. ಹಾಂಗೆ ಇಪ್ಪ ತ್ರಿಪುರನ ಪತ್ನಿಯೇ ಶ್ರೀಮತ್ತ್ರಿಪುರಸುಂದರೀ.
ಇಂದು ಇಲ್ಲಿ ಕೊಡ್ತಾ ಇಪ್ಪದು ಶ್ರೀ ಶಂಕರಾಚಾರ್ಯರ ಒಂದು ಕೃತಿಯಾದ ತ್ರಿಪುರಸುಂದರೀ ಅಷ್ಟಕಮ್. ಇದರಲ್ಲಿ ಆಚಾರ್ಯರು ಅಮ್ಮನ ಶಿವನ ಪತ್ನಿಯಾದ ತ್ರಿಪುರಸುಂದರಿಯ ರೂಪಲ್ಲಿ ಸುಂದರವಾಗಿ ವರ್ಣಿಸಿದ್ದವು.
ಕದಂಬವನಲ್ಲಿ ಸಂಚರಿಸುತ್ತಾ ಇಪ್ಪ ಮೇಘಂಗಳ ಮಾಲೆಯ ಹಾಂಗಿಪ್ಪ, ದೇವತೆಗಳಿಂದ ಸೇವಿಸಲ್ಪಡುವ ಸುಂದರಿಯೂ, ಹೊಸತ್ತಾಗಿ ಅರಳಿದ ಕಮಲದ ಕಣ್ಣಿನ ಹೊಂದಿದ, ಮೋಡದ ಹಾಂಗೆ ಶ್ಯಾಮಲವರ್ಣದ, ಶಿವನ ಅರ್ಧಾಂಗಿಯಾದ ತ್ರಿಪುರಸುಂದರಿಯ ಆಶ್ರಯಿಸುತ್ತೆ. ಕದಂಬ ವನಲ್ಲಿ ವಾಸಿಸುವ, ಬಂಗಾರದ ವೀಣೆಯ ಹಿಡ್ಕೊಂಡಿಪ್ಪ, ಅಮೂಲ್ಯ ರತ್ನಾಹಾರ ಹಾಕಿದ, ಮಧು ಮತ್ತೆ ನೀರಿನ ಮಿಶ್ರಣ ಇಪ್ಪ ಪಾನೀಯಂದ ಉಲ್ಲಸಿತ ಮೋರೆಯ ಹೊಂದಿದ, ದಯಾಗುಣಂದ ಭಕ್ತರಿಂಗೆ ವೈಭವ ಕೊಡುವ, ನಿರ್ಮಲ ಗೋರೋಚನವ ದೇಹಕ್ಕೆ ಲೇಪಿಸಿಪ್ಪ ಶಂಕರನ ಅರ್ಧಾಂಗಿಯಾದ ತ್ರಿಪುರಸುಂದರಿಯ ಆಶ್ರಯಿಸುತ್ತೆ. ಕದಂಬವನಲ್ಲಿ ವಾಸ ಮಾಡಿಗೊಂಡಿಪ್ಪ, ಶೋಭಾಯಮಾನವಾದ ಹಾರಂಗಳ ಧರಿಸಿಗೊಂಡಿಪ್ಪ, ಆಕರ್ಷಕ ದೇಹಕಾಂತಿ ಇಪ್ಪ, ಮಧುರ ಗೀತೆಗಳ ಹಾಡುತ್ತಾ ಇಪ್ಪ, ಘನನೀಲ ಮೇಘಶ್ಯಾಮಲೆಯ, ನಮ್ಮೆಲ್ಲರ ಲೀಲೆಂದ ರಕ್ಷಿಸುವ ತ್ರಿಪುರಸುಂದರಿಯ ಆಶ್ರಯಿಸುತ್ತೆ.
ಕದಂಬವನದ ಮಧ್ಯಲ್ಲಿಪ್ಪ, ಸುವರ್ಣ ಶ್ರೀಚಕ್ರಮಂಡಲದ ಮೇಲೆ ವಿರಾಜಮಾನಳಾದ, ಷಟ್ಚಕ್ರಂಗಳಲ್ಲಿಪ್ಪ, ದಾಸವಾಳದ ಹೂಗಿನ ಹಾಂಗೆ ದೇಹಕಾಂತಿ ಹೊಂದಿದ, ಪ್ರಫುಲ್ಲಿತ ಚಂದ್ರನೇ ಚೂಡಾಮಣಿಯಾಗಿಪ್ಪ, ಶಿವನ ಅರ್ಧಾಂಗಿಯಾದ ತ್ರಿಪುರಸುಂದರಿಯ ಆಶ್ರಯಿಸುತ್ತೆ. ವರ್ತುಲಾಕಾರದ ವೀಣೆಯ ಎದೆಗಾನಿಸಿ ಹಿಡುದಿಪ್ಪ, ಗುಂಗುರು ಕೂದಲುಗಳಿಂದ ಅಲಂಕೃತಳಾದ, ಕಮಲ ನಿವಾಸಿನಿಯಾದ, ಕುಟಿಲ ಚಿತ್ತದವರ ದ್ವೇಷಿಸುವವಳ, ಮತಂಗ ಮುನಿ ಕನ್ಯೆಯ, ಮಧುರಭಾಷಿಣಿಯಾದ ತ್ರಿಪುರಸುಂದರಿಯ ಆಶ್ರಯಿಸುತ್ತೆ. ಕೆಂಪು ಬಿಂದುಗಳ ನೀಲಿ ವಸ್ತ್ರ ಧರಿಸಿಪ್ಪ, ಮಧುಪಾತ್ರೆ ಹಿಡುದಿಪ್ಪ, ತಾರುಣ್ಯದ ಚಂಚಲ ಕಟಾಕ್ಷ ಹೊಂದಿಪ್ಪ,ಚೆಂದದ ಶರೀರದ ಶ್ಯಾಮಲಾಂಗಿಯಾದ ನವಯೌವನದ ಪ್ರಫುಲ್ಲಿತಳಾದ ಶಿವನ ಅರ್ಧಾಂಗಿಯಾದ ತ್ರಿಪುರಸುಂದರಿಯ ಆಶ್ರಯಿಸುತ್ತೆ. ಕಸ್ತೂರೀ ಕುಂಕುಮಲೇಪಿತೆಯ, ಮಂದಹಾಸಂದ ನೋಡುತ್ತಿಪ್ಪ, ಬಿಲ್ಲು, ಬಾಣ, ಪಾಶ, ಅಂಕುಶ ಧರಿಸಿಪ್ಪ, ಜನರೆಲ್ಲರ ಮೋಹಗೊಳಿಸುವ, ಅರುಣವರ್ಣದ ಮಾಲೆ, ಅಲಂಕಾರ ವಸ್ತ್ರಂಗಳ ಧರಿಸಿಪ್ಪ, ದಾಸವಾಳದ ಹೂಗಿನ ಹಾಂಗೆ ಆರಕ್ತವರ್ಣದ ಅಂಬಿಕೆಯ ಜಪದ ವಿಧಿಗಳಿಂದ ಸ್ಮರಿಸುತ್ತೆ. ಇಂದ್ರನ ರಾಣಿ ಆರ ಜೆಡೆ ಹೆಣೆತ್ತೋ, ಬ್ರಹ್ಮನ ರಾಣಿ ಆರಿಂಗೆ ಚಂದನ ಲೇಪಿಸುತ್ತೋ, ಮುಕುಂದನ ಪತ್ನಿ ಶ್ರೀ ಲಕ್ಷ್ಮಿ, ಆರ ರತ್ನಖಚಿತ ಆಭರಣಂಗಳ ಹಾಕಿ ಅಲಂಕರಿಸುತ್ತೋ, ಹಾಂಗಿಪ್ಪ ತ್ರಿಭುವನ ಮಾತೆಯಾದ ತ್ರಿಪುರಸುಂದರಿಯ ಭಜಿಸುತ್ತೆ- ಹೇಳುವ ರೀತಿಲಿ ಆಚಾರ್ಯರು ಈ ಸ್ತೋತ್ರಲ್ಲಿ ಹೇಳಿದ್ದವು.
ನವರಾತ್ರಿಯ ಅಷ್ಟಮಿಯ ದಿನ ತ್ರಿಪುರಸುಂದರೀ ಅಷ್ಟಕಮ್ ನ ಎಲ್ಲೋರೂ ಸ್ತುತಿ ಮಾಡಿ ಶಿವನ ಪತ್ನಿಯಾದ ತ್ರಿಪುರಸುಂದರಿಯ ಕೃಪಾದೃಷ್ಟಿಗೆ ಪಾತ್ರರಾಯೆಕ್ಕು ಹೇಳ್ತ ಹಾರಯಿಕೆ.
ತ್ರಿಪುರಸುಂದರೀ ಅಷ್ಟಕಮ್
ಕದಂಬವನಚಾರಿಣೀಂ ಮುನಿಕದಂಬಕಾದಂಬಿನೀಂ
ನಿತಂಬಜಿತಭೂಧರಾಂ ಸುರನಿತಂಬಿನೀಸೇವಿತಾಮ್ |
ನವಾಂಬುರುಹಲೋಚನಾಮಭಿನವಾಂಬುಜಶ್ಯಾಮಲಾಂ
ತ್ರಿಲೋಚನಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ||1||
ಕದಂಬವನವಾಸಿನೀಂ ಕನಕವಲ್ಲಕೀಧಾರಿಣೀಂ |
ಮಹಾರ್ಹಮಣಿಹಾರಿಣಿಂ ಮುಖಸಮುಲ್ಲಸದ್ವಾರುಣೀಮ್|
ದಯಾವಿಭವಕಾರಿಣೀಂ ವಿಶದರೋಚನಾಚಾರಿಣೀಂ |
ತ್ರಿಲೋಚನಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ||2||
ಕದಂಬವನಶಾಲಯಾ ಕುಚಭರೋಲ್ಲಸನ್ಮಾಲಯಾ |
ಕುಚೋಪಮಿತಶೈಲಯಾ ಗುರುಕೃಪಾಲಸದ್ವೇಲಯಾ||
ಮದಾರುಣಕಪೋಲಯಾ ಮಧುರಗೀತವಾಚಾಲಯಾ|
ಕಯಾಪಿ ಘನನೀಲಯಾ ಕವಚಿತಾ ವಯಂ ಲೀಲಯಾ ||3||
ಕದಂಬವನಮಧ್ಯಗಾಂ ಕನಕಮಂಡಲೋಪಸ್ಥಿತಾಂ |
ಷಡಂಬುರುಹವಾಸಿನೀಂ ಸತತಸಿದ್ಧಸೌದಾಮಿನೀಮ್ ||
ವಿಡಂಬಿತಜಪಾರುಚಿಂ ವಿಕಚಚಂದ್ರಚೂಡಾಮಣೀಂ |
ತ್ರಿಲೋಚನಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ||4||
ಕುಚಾಂಚಿತವಿಪಂಚಿಕಾ ಕುಟಿಲಕುಂತಲಾಲಂಕೃತಾಂ |
ಕುಶೇಶಯನಿವಾಸಿನೀಂ ಕುಟಿಲಚಿತ್ತವಿದ್ವೇಷಿಣೀಮ್||
ಮದಾರುಣವಿಲೋಚನಾಂ ಮನಸಿಜಾರಿಸಮ್ಮೋಹಿನೀಂ |
ಮತಂಗಮುನಿಕನ್ಯಕಾಂ ಮಧುರಭಾಷಿಣೀಮಾಶ್ರಯೇ ||5||
ಸ್ಮರೇತ್ಪ್ರಥಮಪುಷ್ಪಿಣೀಂ ರುಧಿರಬಿಂದುನೀಲಾಂಬರಾಂ |
ಗೃಹೀತಮಧುಪಾತ್ರಿಕಾಂ ಮಧುವಿಪೂರ್ಣನೇತ್ರಾಂಚಲಾಮ್ ||
ಘನಸ್ತನಭರೋನ್ನತಾಂ ಗಲಿತಚೂಲಿಕಾಂ ಶ್ಯಾಮಲಾಂ |
ತ್ರಿಲೋಚನಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ||6||
ಸಕುಂಕುಮವಿಲೇಪನಾಮಲಕಚುಂಬಿಕಸ್ತೂರಿಕಾಂ |
ಸಮಂದಹಸಿತೇಕ್ಷಣಾಂ ಸಶರಚಾಪಪಾಶಾಂಕುಶಾಮ್ ||
ಅಶೇಷಜನಮೋಹಿನೀಮರುಣಮಾಲ್ಯಭೂಷಾಂಬರಾಂ |
ಜಪಾಕುಸುಮಭಾಸುರಾಂ ಜಪವಿಧೌ ಸ್ಮರಾಮ್ಯಂಬಿಕಾಮ್ ||7||
ಪುರಂದರಪುರಂಧ್ರಿಕಾಚಿಕುರಬಂಧಸೈರಂಧ್ರಿಕಾಂ|
ಪಿತಾಮಹಪತಿವ್ರತಾಪಟುಪಟೀರಚರ್ಚಾರತಾಮ್ ||
ಮುಕುಂದರಮಣೀಮಣೀಲಸದಂಕ್ರಿಯಾಕಾರಿಣೀಂ |
ಭಜಾಮಿ ಭುವನಾಂಬಿಕಾಂ ಸುರವಧೂಟಿಕಾಚೇಟಿಕಾಮ್ ||8||
ತ್ರಿಪುರಸುಂದರೀ ಅಷ್ಟಕಮ್ ನ ಕೇಳಲೆಃ
- ಬದುಕ್ಕಿನ ಬೆಲೆ ತಿಳಿಶಿದ ಕೊರೊನಾ! - April 4, 2020
- ನಮ್ಮ ಬೈಲದಾರಿಲಿ ಅವು ಮೂಲಕ್ಕೆತ್ತಿದವು!!!! - January 29, 2018
- ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ.. - June 2, 2016
ಚಂದಿದ್ದು ಅಕ್ಕಯ್ಯ….ನಾ ಇದನ್ನ ಸಲ್ಪ ಬ್ಯಾರೆ ತರಕ್ಕೆ ಹಾಡಿದ್ದಿ…..ನಂದೇ ರಾಗ…ಸಲ್ಪ ಬ್ಯಾರೆ ಅಷ್ಟೆಯಾ,ಇಲ್ಲಿ ತಿಳಿಶೀದ್ ಎಲ್ಲ ವಿಷ್ಯ ಚೊಕ್ಕ ಮತ್ತೆ ಚಲೋ…
ನವರಾತ್ರಿಲಿ ಹಲವು ಅಷ್ಟಕಂಗಳ ಮೂಲಕ ಅಬ್ಬೆಯ ಸೇವೆಯ ನಮ್ಮ ಬಯಲಿಲ್ಲಿ ಸಾರ್ಥಕವಾಗಿ ನೆಡೆಶಿಕೊಟ್ಟ ಶ್ರೀಯಕ್ಕನ ಕಾಯಕಕ್ಕೆ ಮನಸಾ ಕೈಮುಗಿತ್ತೆ. ಅಭಿನಂದನಗೊ.ಹರೇರಾಮ
ತ್ರಿಪುರಸುಂದರಿ ಮಾಹಿತಿಯೊಂದಿಂಗೆ ಸ್ತೋತ್ರ ವರ್ಣನೆ ಲಾಯಕ ಆಯ್ದು. ನವರಾತ್ರಿಗೆ ಶ್ರೀ ಅಕ್ಕನ ಸೇವೆ ಅಮೋಘ. ಎಲ್ಲೋರಿಂಗು ಒಳ್ಳೆದಾಗಲಿ.