Oppanna.com

ಬೆಂಗಳೂರಿಂದ ಮಂಚನಬೆಲೆಗೆ…

ಬರದೋರು :   ಚೆನ್ನಬೆಟ್ಟಣ್ಣ    on   09/10/2011    7 ಒಪ್ಪಂಗೊ

ಚೆನ್ನಬೆಟ್ಟಣ್ಣ

ಸುಮಾರು ಸಮಯ ಆತು ಬೈಲಿಲಿ ಶುದ್ದಿ ಹೇಳದ್ದೆ. ಹಾಂಗೆ ಪುರ್ಸೊತ್ತು ಮಾಡಿ ಕಳುದ ತಿಂಗಳು 30ನೇ ತಾರೀಕಿಂಗೆ ಆಪೀಸಿಂದ ಪಿಕ್ನಿಕ್ ಹೊದ್ದದರ ಶುದ್ದಿ ಹೇಳ್ತೆ.
ಪಟಂಗಳೂ ಹಾಕಿದ್ದೆ.

ಎಂಗೊ ಹೋದ್ದು ಮಂಚನಬೆಲೆ ಜಲಾಶಯಕ್ಕೆ.
ಮಾಗಡಿಗೆ ಹೋಪ ಮಾರ್ಗಲ್ಲಿ ಇದ್ದು ಈ ಜಾಗೆ. ಬೆಂಗಳೂರಿನ ಹೆಬ್ಬಾಳಂದ ದೂರ ಸುಮಾರು 50 ಕಿಲೋಮೀಟರು ಅಕ್ಕು.
ಮಾರ್ಗಂದ ಒಳದಿಕ್ಕೆ ಒಂದೈದು ಕಿಲೋಮೀಟರು ಹಳ್ಳಿಯ ಮಣ್ಣು ಮಾರ್ಗಲ್ಲಿ ಹೋಗಿ, ಅಲ್ಲಿಂದ ಗುಡ್ಡಗಾಡು ಪ್ರದೇಶಲ್ಲಿ ಕಲ್ಲು ಮುಳ್ಳಿನ ನಡುಗೆ ಹತ್ತಿ ಇಳುದು ನಡಕ್ಕೊಂಡು ಹೋದರೆ ಈ ಜಾಗೆ ಸಿಕ್ಕುತ್ತು.
ಹಳ್ಳಿಯ ನೀರು, ಕಾಡು ನೋಡದ್ದ ಪೇಟೆಯ ಜನಂಗೊಕ್ಕೆ ಇದು ಒಂದು ಅದ್ಭುತ ಜಾಗೆ.
ಬಂಡೆಕಲ್ಲು, ಹಸಿರಿನ ರಾಶಿಯ ನಡುಗೆ ನೀರಿನ ರಾಶಿ. ಮಂಚನಬೆಲೆ ಅಣೆಕಟ್ಟಿನ ನೀರು ನಿಂಬ ಜಾಗೆ ಇದು, ಹಾಂಗೆ ಇಲ್ಯಾಣ ನೀರಿಂಗೆ ಚಲನೆ ಇಲ್ಲೆ. ಗುಂಡಿ ಬರೀ 30 ಫೀಟು. ಇಲ್ಲಿಂದ ಸಾವನೂರು ದುರ್ಗ ಭಾರೀ ಚೆಂದಕ್ಕೆ ಕಾಣ್ತು. ಜಾರು ಬಂಡಿಯ ಹಾಂಗೆ !

ಉದೆಗಾಲಕ್ಕೆ ಮನೆಂದ ಹೆರಟು ಎಲ್ಲರ ಒಟ್ಟು ಸೇರ್ಸಿ ತಲ್ಪುವಾಗ ಘಂಟೆ ಹತ್ತು ಕಳ್ದು.
ಅಲ್ಲಿ ಎಂಗಳ ನೋಡಿಗೊಂಬಲೆ ಅದೇ ಹಳ್ಳಿಯ ಕೆಲವು ಜವ್ವನಿಗರ ಸೇರ್ಸಿಗೊಂಡು ಪೇಟೆಂದ ಒಂದಿಬ್ರು ಬೈಂದವು.
ನಮ್ಮೊರಲ್ಲಿ ಒಬ್ಬಂಗೂ ಸರಿಗಟ್ಟು ಈಜುಲೆ ಬತ್ತಿಲ್ಲೆ ಹೇಳಿ ಮೊದಲೇ ಹೇಳಿ ಮಡಿಗಿದ ಕಾರಣ ಜೀವರಕ್ಷಕ ಕವಚಂಗಳ ವ್ಯವಸ್ಥೆ ಮಾಡಿತ್ತಿದ್ದವು. ಕೆಲವು ಮುಖ್ಯ ಸೂಚನೆಗಳ ತಿಳ್ಕೊಂಡ ಮೇಲೆ ನೀರಿಂಗೆ ಹಾರಿದೆಯೋ.
ಈಜಲೆ ಬಾರದ್ದೋರ ಮೋರೆ ಜೀವರಕ್ಷಕ ಕವಚ ಹಾಕಿಯೂ ನೋಡಲೇ ಎಡಿಯ.
ಎನ್ನ ಮೋರೆ ಎನಗೆ ನೋಡಲೇ ಎಡಿಗಾಯ್ದಿಲ್ಲೇ ಹೇಳಿ ಬೇಜಾರ ಇದ್ದು. ಹೊಂಡ ಬರೀ 30 ಫೀಟು ಇಪ್ಪದು ಹೇಳಿಯಪ್ಪಗ ಹೃದಯ ಬಡಿತ ಜೋರಾತು.

ಆನಂತೂ ಧೈರ್ಯಲ್ಲಿ ಇಳುದೆ (ಒಳ ಪುಕು ಪುಕು ಆಯ್ಕೊಂಡಿತ್ತು). ಎಂತ ಮಾಡಿರೂ ಮುಳುಗ ಹೇಳ್ತ ಧೈರ್ಯ ಬಂದಪ್ಪಗ ಒಬ್ಬೊಬ್ಬನೇ ಇಳುದವು.
ಒಬ್ಬನೇ ಹೋಪ ದೋಣಿಯೂ ಇತ್ತಲ್ಲಿ. ಒಚ್ಚಿಗೊಂಡು ಬ್ಯಾಲೆನ್ಸು ಮಾಡಿಗೊಂಡು ಹೋದರಾತು ಅಷ್ಟೇ. ತಪ್ಪಿರೆ ಪಲ್ಟಿಯಾಗಿ ತುಳುಂಕ ನೀರಿಂಗೆ !.
ಎಲ್ಲರೂ ನೀರಿಲಿ ಹಾರಿದ್ದೇ ಹಾರಿದ್ದು. ಅಕೇರಿಗೆ ಎಂತ ಮಾಡಿರೂ ಮೇಲೆ ಬಾರ ಒಬ್ಬನೂ.
ಊಟ ತಯಾರಿದ್ದು ಹೇಳಿದ ಮತ್ತೆಯೇ ಮೇಲೆ ಹೋದ್ದು ಉಣ್ಣೆಕ್ಕನ್ನೇ ಹೇಳಿ.
ಚೆಂಡಿ ಉದ್ದಿ ಮೇಲೆ ಬಂದು ಉಂಬಲೆ ಪ್ಲೇಟು ಹಿಡ್ಕೊಂಡೆ. ಬೋಚಭಾವನ ಮನಸಾ ಧ್ಯಾನಿಸಿ ಸರೀ ಉಂಡೆ.

ಅಲ್ಲಿಂದ ಮತ್ತೆ ಎಲ್ಲರೂ ಸಣ್ಣಕ್ಕೆ ವಿರಾಮ ತೆಕ್ಕೊಂಡು ಬಂಡೆ ಕಲ್ಲಿಂದ ಬಳ್ಳಿ ಹಿಡ್ಕೊಂಡು ಇಳಿವ ಸಾಹಸಕ್ಕೆ ಮನಸು ಗಟ್ಟಿ ಮಾಡಿಗೊಂಡೆಯೋ.
ಎಷ್ಟು ಗಟ್ಟಿ ಮಾಡಿರೂ ಎಲ್ಲಿ ಬಳ್ಳಿ ತುಂಡಾಗಿ ಪಾತಾಳಕ್ಕೆ ಬೀಳುಗೋ ಹೇಳ್ತ ಹೆದರಿಕೆ.
ಅಂತೂ ನಾವು ಗಟ್ಟಿ ಮಾಡಿಗೊಂಡೇ ಬಳ್ಳಿ ತೆಕ್ಕೊಂಡೂ ಆತು ಇಳುದೂ ಆತು. ಇಳುದಪ್ಪಗ ಯೆಬೀ ಇಷ್ಟೇಯೂ ಹೇಳಿ ಆದರೂ ಒಂದು ದೊಡ್ಡ ಸಾಧನೆ ಮಾಡಿದ ಹುಳಿನೆಗೆ ಮೋರೆಲಿ.

ಅಕೇರಿಗೆ ದೇವರಿಂಗೂ, ವ್ಯವಸ್ಥಾಪಕರಿಂಗೂ, ಊರಿನೋರಿಂಗೂ ಚೆಂದಲ್ಲಿ ಸುರಕ್ಷಿತವಾಗಿ ಮುಗಿಶಿಕೊಟ್ಟದಕ್ಕೆ ಧನ್ಯವಾದ ಹೇಳಿತ್ತು.
ಎಡಿಗಾರೆ ಬೈಲಿನೋರೆಲ್ಲ ಸೇರಿ ಹೋಪ ಹೇಳ್ತ ಆಲೋಚನೆಲಿ ಬೆಂಗಳೂರಿಂಗೆ ಗಾಡಿ ಹೆರಡ್ಸಿತ್ತು.

7 thoughts on “ಬೆಂಗಳೂರಿಂದ ಮಂಚನಬೆಲೆಗೆ…

  1. ಚೆಂದದ ಜಾಗೆ. ಚೆಂದದ ಫೊಟೊಂಗೊ. ಚೆಂದದ ಲೇಖನ. ಮಂಚನಬೆಲೆಯ ಚಿತ್ರಂಗೊ, ಕುಂಚಲ್ಲಿ ಬಿಡುಸಿದ ಹಾಂಗಿದ್ದು. ಪ್ರವಾಸ ಕಥನ ಒದಗುಸಿದ ಚೆನ್ನ ಬೆಟ್ಟಣ್ಣಂಗೆ ಧನ್ಯವಾದ.

  2. ಲೇಖನ ಓದಿ ಪ್ರವಾಸ ಹೋದ ಹಾಂಗೆ ಆತು.

  3. ಚೆನ್ನಬೆಟ್ಟಣ್ಣ ಪಟ ತೆಗೆತ್ತ ಚೆಂದ ಹತ್ತರಂದ ನೋಡಿರೆ ಮಾಂತ್ರ ಗೊಂತಕ್ಕಷ್ಟೆ. ಆನು ಒಂದರಿ ರಂಗನತಿಟ್ಟಿಂಗೆ ಹೋದಿಪ್ಪಗ ನೋಡಿದ್ದು ನೆಂಪಿದ್ದು.
    ಎಡಿಗಾರೆ ಬೈಲಿನೋರೆಲ್ಲ ಸೇರಿ ಹೋಪ ಹೇಳ್ತ ಆಲೋಚನೆ ಆಗದ್ದೆ ಇಲ್ಲೆ.

  4. ಜಾಗೆ ಸೂಪರ್ ಇದ್ದು. ಬರದ್ದೂ ಲಾಯ್ಕಾಯ್ದು ಚೆನ್ನಬೆಟ್ಟಣ್ಣ.

  5. {ಹಳ್ಳಿಯ ನೀರು, ಕಾಡು ನೋಡದ್ದ ಪೇಟೆಯ ಜನಂಗೊಕ್ಕೆ ಇದು ಒಂದು ಅದ್ಭುತ ಜಾಗೆ.} ಏ ಚೆನ್ನಬೆಟ್ಟಣ್ಣಾ ,ರೂಪಾಯಿಗೆ ಹದಿನಾರಾಣೆ ಸತ್ಯ.
    ನೀರಾಟ ಆಡೊಗ ಆಟದ ಪದ ಯೇವದಾರೂ ನೆನಪ್ಪಾತೋ?
    ಪಟ ಲಾಯ್ಕ ಬಯಿ೦ದು.

  6. ಯೇ ಭಾವ., ನಿಂಗೊ ಹೇಳಿದಾಂಗೆ ಜಾಗೆ ಲಾಯಕ ಇದ್ದು ಮಿನಿಯಾ°
    ಮಂಚನಬೆಲಗೆ ಹೋದ್ದು ಹೇಳಿದ ಕಾರಣ ಫಟ ಎಲ್ಲಿಯಾಣದ್ದು ಹೇಳಿ ಕೇಳ್ಳೆ ಇಲ್ಲೆ. ಫಟವೂ ಲಾಯಕ ಬೈಂದು. ಸುಂದರ ಮನೋಹರ ರಮ್ಯ ದೃಶ್ಯಾವಳಿ. ‘ಮಾಮರವು ಪೂತಿದೇ…..’ ಹೇಳಿ ನೆಂಪಾತೋ ಅಲ್ಲೇ ಹೋಪಗ! ತುಳುಂಕನೆ ಹಾರುವಾಗ ಅಡಿಲಿ ಕಲ್ಲು ಇರ್ತಿದ್ದ್ರೆ?!! ನಿಂಗೊ ಬತ್ತಿ ಹೇಳಿ ಮದಲೇ ತೆಗದು ಮಡಿಗಿತ್ತವೋ?! ಪಾಂಟು ಅಂಗಿ ಹಾಕಿ ನಿಂಗೊ ಮೇಗಂದ ಲಾಗ ಹಾಕುತ್ತ ಫಟ ಎಲ್ಲಿದ್ದು??

    ಶುದ್ದಿ ಪಷ್ಟಾಯಿದು ಭಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×