- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಒಂದು ವೀಡ್ಯವ ಪ್ರಪಂಚದಾದ್ಯಂತ ಒಟ್ಟು ಐದು ಲಕ್ಷ ಸರ್ತಿ ನೋಡಿದ್ದವು. ಅದುದೇ ಆ ವೀಡ್ಯ ನೇಲುಸಿದ ಎರಡೇ ವಾರಲ್ಲಿ.
ಅದರ ಕತೆ ಗೊಂತಿದ್ದೋ?
ಆರು ವರ್ಷದ ಸಣ್ಣ ಮಗಳ ಬರ್ತು-ಡೇ ಹೇಳಿಗೊಂಡು ಅಪ್ಪಮ್ಮ ಸೇರಿಗೊಂಡು ಗಿಫ್ಟು ಕೊಡುದು.
ಎಂತೆಲ್ಲ?
ಬೇಗು, ಸೀಡಿ, ಟೀಶರ್ಟು – ಹೀಂಗಿರ್ತದು.
ಎಲ್ಲದರ್ಲಿಯೂ ಮಿಕ್ಕಿ-ಮೌಸಿನ ಪಟಂಗೊ.
ಎಲ್ಲವನ್ನೂ ತೆಗದು ತೆಗದು ನೋಡಿ ಆದ ಮತ್ತೆ, ಅಮ್ಮ ಕೇಳುದು – ಇದರ ಎಲ್ಲ ತೆಕ್ಕೊಂಡು ಎಲ್ಲಿಗೆ ಹೋಪೊ? ಹೇಳಿಗೊಂಡು.
ಮಿಕ್ಕಿಮೌಸಿನ ಅಪ್ಪಮ ಮನೆ ಡಿಸ್ನಿಲೇಂಡು (Disneyland); ಅದು ಗೊಂತಿದ್ದನ್ನೇ? ಅದು ಆ ಕೂಸಿಂಗೂ ಗೊಂತಿದ್ದು.
ಅದಕ್ಕೇ “ಡಿಸ್ನಿಲೇಂಡಿಂಗೆ” ಹೋಪೊ – ಹೇಳ್ತು.
ಯಾವಗ ಹೋಪದು – ಕೇಳ್ತು ಅಮ್ಮ.
ಈಗಳೇ ಹೋಪೊ – ಹೇಳಿ ತಮಾಶೆಗೆ ಹೇಳ್ತು ಆ ಮಗಳು.
ಸರಿ, ಹೆರಡುವೊ – ಹೇಳಿ ಅಮ್ಮ ಹೇಳುವಗ, ಆ ಮಗಳಿಂಗೆ ಪಕ್ಕನೆ ಆಶ್ಚರ್ಯ ಆವುತ್ತು.
ಆ ದೃಶ್ಯ ಅಂತೂ ಅತ್ಯದ್ಭುತ!
ನಿಜಕ್ಕೂ ಡಿಸ್ನಿಲೇಂಡಿಂಗೆ ಹೋಪಲಿದ್ದು ಹೇಳಿ ಗೊಂತಪ್ಪಗ ಆ ಮಗಳು ಕುಶಿಲಿ ಕೂಗುವ ದೃಶ್ಯ, ಎಂತವಂಗೂ ಮನಸ್ಸು ಕಲಸುಗು.
ನಿಂಗಳೂ ಒಂದರಿ ನೋಡಿ, ಆತಾ?
ಒಂದಲ್ಲ ಬರಾಬರಿ ನಾಲ್ಕು ಸರ್ತಿ ನೋಡಿದ್ದೆ. ಆ 5 ಲಕ್ಷಲ್ಲಿ ನಾಲ್ಕು ಎನ್ನದೇ 🙂
ಇದು ಡೂಬ್ಳಿಗೇಟು ಭಾವಾ…. ಆರೋ ಚೂಂಟಿ ಬಿಟ್ಟದು ಹಿಂದಂದ ಆ ಕೂಚಕ್ಕಂಗೆ. ಅಲ್ಲದ್ರೆ ಹಾಂಗೆ ಕೂಗ ಅದು. ವಾಯ್ಸ್ ಕೂಡ ವೆತ್ಯಾಸ ಕಾಣ್ತು.
[ಮಗಳು ಕುಶಿಲಿ ಕೂಗುವ ದೃಶ್ಯ, ಎಂತವಂಗೂ ಮನಸ್ಸು ಕಲಸುಗು.] – ಅದಪ್ಪು. ಒಪ್ಪ.
ಶುದ್ದಿ ಪಷ್ಟಾಯಿದು ಭಾವ.
ಮಕ್ಕಳ ಖುಶಿಲಿ ನಮ್ಮ ಖುಶಿ ಕಾಣ್ತು ನಾವು. ಕೆಲವು ಸಣ್ನ ಸಣ್ನ ವಿಷಯ ಮಕ್ಕೊಗೆ ತು೦ಬ ಸ೦ತೋಷ ಕೊಡ್ತು.ಇಲ್ಲಿ ಡಿಸ್ನಿಲೇ೦ಡ್ ದೊಡ್ಡ ವಿಷಯವೇ ಆದಿಕ್ಕು ,ಆದರೆ ಮೊದಲು ಕೊಟ್ಟ ಎಲ್ಲಾ ಗಿಫ್ಟ್ಗಳನ್ನೂ ಆ ಮಗು ತು೦ಬಾ ಖುಶಿಲಿ ತೆಗದತ್ತು. ಅದರ ಮುಗ್ದ ಮನಸ್ಸು ನೋಡಿ ಮನಸ್ಸು ತು೦ಬಿ ಬ೦ತು……..
“ಕೆಲವು ಸಣ್ನ ಸಣ್ನ ವಿಷಯ ಮಕ್ಕೊಗೆ ತು೦ಬ ಸ೦ತೋಷ ಕೊಡ್ತು”. ನಿಜವಾಗಿಯೂ ಅಪ್ಪು… ಇಂದು ಆಧುನಿಕ ಜಗತ್ತಿಂಗೆ ಸರಿಯಾಗಿ ಮಕ್ಕಳ ಬೆಳೆಸುವ ಭರಲ್ಲಿ ನಾವು ಮಕ್ಕಳ ಖುಷಿಯ, ಸ್ವಾತಂತ್ರ್ಯವ ಕಸಿದುಗೊಳ್ಳುತ್ತಾ ಇದ್ದು ಹೇಳಿ ಅನ್ನಿಸುತ್ತು ಅಲ್ಲದ?