- ಮಾಲಿನೋಳ ತೆ೦ಗಿನ ಮರ….!! - June 13, 2012
- ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದ ಎ೦ತ ಮಾಡಿದಾ..? - January 1, 2012
- ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದಎ೦ತ ಮಾಡಿದಾ..? - November 4, 2011
ಐದು ದಿನದ ನವರಾತ್ರಿ ಕಳುದ ಕೂಡ್ಳೆ ಬೋಚಬಾವನ ಕಾಂಬಲಿಲ್ಲೆ ಹೇಳಿದಿರ?
ಬೋಚಬಾವ° ಓ ಅಲ್ಲಿ ಬೈಲಕರೆಯ ಗುಡ್ಡೆಕೊಡಿಲಿ ಉದಿಹಗಲು ಬಿಡದ್ದೆ ತಪಸ್ಸು ಮಾಡಿದ್ದ°. ತಪಸ್ಸು ಮಾಡಿಮಾಡಿ ಅವ° ಈಗ ಬೋಚದಾಸ° ಆಯಿದ°.
ತಪಸ್ಸಿಂದ ಎದ್ದು ಬೈಲಿಂಗೆ ನಡಕ್ಕೊಂಡು ಬಪ್ಪಗಳೇ, ಈ ಕೆಳಾಣ ಪದ್ಯ ಹೇಳಿಗೊಂಡು ಬಂದೆ.
ಯೇವಗಳೂ ಮಾಡುದನ್ನೇ ಬರದ್ದು, ಆದರೆ ಪದ್ಯ ಕಟ್ಟಿ ಬರದ ಕಾರಣ ನಿಂಗೊಗೆ ಹೇಳೆಕ್ಕು.
ನೋಡಿಕ್ಕಿ ಆತಾ
–
ಬೋಚದಾಸ°
—
ಭಾಗ 1:
ಉದಿಯಪ್ಪಗ ಬೇಗ ಎದ್ದು,
ಒ೦ದು ಚೆ೦ಬ್ಬು ಮೋರೆ ತೊಳದು,
ಬೆರಟ್ಟಿ ತಟ್ಟಿ , ಹಾಲು ಕರದು,
ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉
—
ಒ೦ದು ಲೋಟ ಚಾಯ ಉರ್ಪ್ಪಿ,
ಗುಡ್ಡೆಲಿಪ್ಪ ಹುಲ್ಲು ಪೊರ್ಪ್ಪಿ,
ಹಟ್ಟಿಗೆಲ್ಲಾ ಹುಲ್ಲು ಹಾಕಿ,
ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉
—
ಒ೦ದಳಗೆ ನೀರಿಲ್ಲಿ ಮಿ೦ದು,
ಸಮಕ್ಕೆ ನಾಲ್ಕು ತೆಳ್ಳವು ತಿ೦ದು,
ಪೇಪರು ತಿರ್ಗಮುರ್ಗ ನೋಡಿ,
ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉
—
ಗುಡ್ಡೆ ಹತ್ತಿ ಇಳುದ ಓಡಿ,
ಅಡ್ಡದಿಡ್ಡಿ ಗ೦ಡಿ ತೋಡಿ,
ಒ೦ದೇ ಕಾಲಿಲಿ ಸ೦ಕದಾ೦ಟಿ,
ಬೋಚ ಎ೦ತ ಮಾಡಿದಾ, ಬೋಚ ಎ೦ತ ಮಾಡಿದಾ..? 😉
—
ಹಲ್ಲು ಕಿಸಿವ ನೆಗೆ ಮಾಣಿ,
ಶುದ್ದಿ ಹುಡ್ಕುವ ಪೆ೦ಗ ಮಾಣಿ,
ಇವರೆಡಕ್ಕಿಲ್ಲಿ ಗೆ೦ಟು ಮಾಣಿ-ಯೊಟ್ಟಿ೦ಗೆ ,
ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉
—
ಮದ್ಯಾಂತಿರುಗಿ ಬಯಲಿಗಿಳಿದು,
ಪೆರಟ್ಟು ಮಾಡಿ ಬೈಗಳುತಿ೦ದು,
ಗುರಿಕ್ಕಾರ್ರು ಕೆಮಿಯ ತಿರ್ಪ್ಪಿ, 😉
ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉
~*~*~
ಸದ್ಯದಲ್ಲೇ ನಿರೀಕ್ಷಿಸಿ ಮು೦ದುವರೆದ ಭಾಗ ….. 🙂
ಸದ್ಯಕ್ಕೆ ತಪಸ್ಸಿಲ್ಲಿ ಲೀನ.. 😎
ಸೂ: ಪಟ ಬಿಡುಸಿದ್ದು ಬೋಚು ಬಾವ °ಅಲ್ಲ. ಅವನ ಪರವಾಗಿ ಚುಬ್ಬಣ್ಣ 😉
ಬಾರೀ ಪಸ್ಟ್ಟಾಯಿದು ಬೋಚ ಬಾವಾ ಆ ಗುಡ್ಡೆಲಿ ಎಂತಾರೂ ವಿಶೇಶ ಇಕ್ಕಾ ಹೇಳಿ …!!ಅಲ್ಲದ್ದರೆ ಅಲ್ಲಿಂದ ಕೆಳ ಇಳಿವಗ ಹೀಂಗೆಲ್ಲಾ ಬರೆಯೆಕ್ಕಾರೆ..ಚುಬ್ಬಣ್ಣ ಪಟ ತೆಗದರೂ ಚಿತ್ರ ಬಿಡಿಸಿದರೂ ಅದು ಲಾಯಿಕವೆ ಇಕ್ಕಸ್ಟ್ಟೆ..
ಎ೦ತದೇ ಹೇಳಿ ಮಾವ,
ಗುಡ್ಡೆ ಹತ್ತುಸ್ಸು.. ಭಾರಿ ಕಷ್ಟ..
ಇಳಿವದು ಸುಲಭ ಅಲ್ಲದೊ? 😉
ಅಪ್ಪಪ್ಪು ಎಂತದೋ ಮಾಡಿದ…. ನೆ೦ಪಾವ್ತಾ ಇಲ್ಲೆ. ಗಡಿ-ಬಿಡಿಲಿ ಎ೦ತಪ್ಪ! ಏ ಮಾ೦ತ್ರ ಪದ್ಯ ಪಷ್ಟಾಯ್ದು. ಇದೊ೦ದು ಲಾಯ್ಕ ಮಾಡಿದ.. ಈ ಮೇನಕೆ ಆರು?
ಉಮ್ಮಪ್ಪಾ..!
ನವಗರಡ್ಯ..
ಬೋಚ ಬಾವನ ತಪಸ್ಸು ಕೆಡಿಸಿದರೆ ಈ ಪದ್ಯದ ಮು೦ದಾಣ ಭಾಗ ಬೇಗ ಬಕ್ಕು.ಹಾ೦ಗಾಗಿ………………ವಿಶ್ವಾಮಿತ್ರನ ತಪಸ್ಸು ಕೆಡುಸುಲೆ ಮೇನಕೆ ಬ೦ದ ಹಾ೦ಗೆ ಅರಿನ ಕಳುಸುದಪ್ಪಾ…….ಮು೦ದಿನ ಭಾಗ ಓದ್ಲೆ ತಡ ಆವುತ್ತು…
ಅಪ್ಪಪ್ಪು..!
ಅ೦ಬಗ ಒ೦ದು ಉಪಾಯ ಮಾಡುವೊ..
ಈ ಸರ್ತಿ ಕಣ್ಣು ಮುಚ್ಚಿಗೊ೦ಡು ತಪಸ್ಸು ಮಾಡ್ತೆ.. 😉
ಅದಾ ಬೋಚನೂ ಬರದ ಪದ್ಯವ…
ಎಲ್ಲಾ ಸರಿ ಬೋಚ ಮೋರೆಗೆ ಮಾತ್ರ ನೀರು ಹಾಕಿದ್ದು ಹಲ್ಲು ತಿಕ್ಕಿದ್ದನೇಲ್ಲೆ… 🙂
ಚಿತ್ರ ಲಾಯ್ಕ ಆಯ್ದು.. ಚಿತ್ರ ಮಾಡ್ಸೆಕ್ಕಾರೆ ಬೋಸ ಚುಬ್ಬಣ್ಣನ ಕಾಲಿಂಗೆ ಎಷ್ಟು ಸರ್ತಿ ಬಿದ್ದಿದನೋ ಎಂತೊ..?
ಏ ಭಾವ.. ಆ ಪಟಲ್ಲಿ ಸರೀ ನೋಡು.. 🙂
ಆ ತೋಡಿಲ್ಲಿ ಇಪ್ಪ ನೀರು ಸಾಕೊ ನವಗೆ ಮೀವಲೆ?? 😛
ಏ?? 😉
ಬೋಚ ಬಾವನ ಪದ್ಯ ಲಾಯ್ಕಾಯಿದು..ಗುಡ್ಡೆ ಇಳುದು ಓಡ್ತಾ ಇಪ್ಪ ಪಟವು ಚೆ೦ದ ಆಯಿದು..
ದೀಪಿಕಾ ಅಕ್ಕೊ.. ಧನ್ಯವಾದ೦ಗೊ.. 🙂
ಸಮಕ್ಕೆ ನಾಲ್ಕು ತೆಳ್ಳವು ತಿ೦ದು,
ಬೋಚಂಗೆ ನಾಕು ತೆಳ್ಳವು ತಿಂದ ನಂತ್ರದ್ದು ಲೆಕ್ಕ ಮಡುಗಲೆ ಎಡಿಗಾಯಿದಿಲ್ಲೆಯೋ !!!
ಇಷ್ಟು ಕಮ್ಮಿ ತಿಂದರೆ, ಗುಡ್ಡೆ ಹತ್ತಿ ಇಳುದು ಹೀಂಗೆಲ್ಲಾ ಕೆಲಸ ಮಾಡ್ಲೆ ಕಷ್ಟ ಅಕ್ಕನ್ನೆ!
ಏ ಶ್ರೀಶ ಬಾವ
ನಿನಗೆ ಒಂದು ನಾಕು ಹೇಳ್ತ ಲೆಕ್ಕ ಗೊಂತಿಲ್ಲೆಯೋ..
ಪ್ರಾಸ ಸರಿ ಅಪ್ಪಲೆ ಬರದ್ಸು ಹೇಳ್ತ ಬೋಚ..
ಅದು ಎ೦ತ್ಸರಾ ಹೇಳಿತ್ತು ಕ೦ಡ್ರೆ,
ಕಡೇಯಾಣ ನಾಲ್ಕು ತೆಳ್ಳವು ತಿ೦ದದು ನೆ೦ಪ್ಪು ಇದ್ದು..
ಅದರ ಮೊದಲು ಎಷ್ಟು ತಿ೦ದಿದು ಮರದ್ದು.. 😉
(ಅದರ ಮೊದಲು ಎಷ್ಟು ತಿ೦ದಿದು ಮರದ್ದು..)
ತೆಳ್ಳವು ಅಕ್ಕಿ ಹಿಟ್ಟಿಲಿ ಮಾಡುದಲ್ಲದಾ? ಮರದ್ದು ತೆಳ್ಳವಿನ ತಿಂಬದು ಹೇಂಗೆ?.. ಬೋಚಬಾವನ ಹಲ್ಲು ಹೋದ್ದು ಈ ಮರದ ತೆಳ್ಳವು ತಿಂದೆಯಾ?
ಹಾ..! ಅದು ಅಪ್ಪು ಅಲ್ಲದೋ?
ಮತ್ತೆ ಮರದ ಮೇಲಿಪ್ಪ ಹಲಸಿನ ಹಣ್ಣು ದೋಚೆ ಮಾಡ್ತವು.. 😉
ಬೋಚದಾಸಂಗೆ ನಮೋನಮಃ !!!
ಗುಡ್ಡೆ ಇಳುದು ಓಡ್ತ ಚಿತ್ರ ಭಾರೀ ಲಾಯ್ಕಿದ್ದು !!
ಇನ್ನೂ ಹೆಚ್ಚು ಹೆಚ್ಚು ಪದ್ಯಂಗೊ ಬರಲಿ !!
ಆತು ಅಕ್ಕೊ, 🙂
ನಮ್ಮ ಕಡೇ೦ದಲು – ನಮೋ ನಮಃ 😉
ಬೋಚ ಭಾವ ತಪಸ್ಸು ಮಾಡಿ ಬೋಚ ದಾಸ ಆದು ಭಾರೀ ಒಳ್ಳೆದಾತು.
ಕಾಳಿದಾಸನಿಂದ ಸ್ಪೂರ್ತಿ ಸಿಕ್ಕಿತ್ತೋ?
ಬೋಚದಾಸಂಗೆ ಚುಬ್ಬಣ್ಣನ ಸಕಾಯ ಇದ್ದೊಂಡು ಇನ್ನೂದೆ ಬತ್ತಾ ಇರಳಿ
ಲಾಯಿಕ ಆಯಿದು ಹೇಳಿಕ್ಕಿ, ಮುಂದಿನದಕ್ಕೆ ಕಾಯ್ತಾ ಇದ್ದೆ.
ಒಪ್ಪಣ್ಣ ಬರದ ಕಾಳಿದಾಸನ ಸುದ್ದಿ ಓದಿ,
ಒಪ್ಪಣ್ಣ೦ದ ನವರೆ ಸ್ಪೂರ್ತಿ ಬ೦ತು.. 😉
ಬೋಚದಾಚನ ಪದ್ಯವೂ ಚುಬ್ಬಣ್ಣ ಭಾವನ ಪಟವೂ ಒಳ್ಳೆ ಚೇರ್ಚೇ ಆಯ್ದಪ್ಪ! ಅಂತೂ ಕಡೇಂಗೆ ಬೋಚಭಾವ ಎಂತ ಮಾಡಿದಾ.. ಹೇಳುವದು ಪ್ರಶ್ನಾರ್ಥಕವಾಗಿಯೋ ಉಳುದ್ದೋ, ಅಥವಾ ಮುಂದಕ್ಕೆ ಹೋಯ್ದೋ ಹೇಳಿ ತೆ.ಕು. ಮಾವನ ವಿಮರ್ಶೆ ಬಪ್ಪಗ ಗೊಂತಕ್ಕು!
ಕಡೇಂಗೆ ಪಾಚ ಇಕ್ಕೋ ಬಾವ?!!
ಏ ಭಾವ ಪಾಚ ತಿ೦ಬಲೆ ನಿನ್ನ ಬಿಟ್ಟಿಕಿ ಹೋಪನೋ ಆನು.. 😉
ಬೋಚಭಾವ ಗುಡ್ಡೆ ಹತ್ತಿ ಇಳುದು ಅಕೇರಿಗೆ ಎಂತ ಮಾಡಿದಾ..?
ಉಮ್ಮಪ್ಪ..! ಸದ್ಯಕ್ಕೆ ಅದು ಸಸ್ಪೆನ್ಸ್..! ಇನ್ನಾಣ ಭಾಗಲ್ಲಿ ಗೊಂತಕ್ಕಾಯ್ಕು, ಅಲ್ಲದೊ?
ಏನೇ ಆಗಲಿ, ಬೋಚಭಾವನ ಪದ್ಯ ಓದಿ ಪಾಚ ಕುಡುದಷ್ಟೇ ಸಂತೋಷ ಆತು.. ಅಭಿನಂದನೆಗೊ..
ಏ ಸುಬಗಣ್ಣೋ
ಪಾಚ ಕುಡಿವಾಗ ದಿನಿಗೇಳೆಕ್ಕಾತೋ..
ಏ ಭಾವ – ಗುಡ್ಡೆ ಹತ್ತಿ ಇಳುದಪ್ಪಗ ಬಚ್ಚತಿಲ್ಯೊ??
ಮತ್ತೆ ರೆಷ್ಟು ಮಾಡ್ತದು.. 😉
ಬೋಚಭಾವಂಗೆ ಸರಸ್ವತಿ ಕೃಪೆ ಖಂಡಿತಾ ಇದ್ದು. ಚೌಪದಿ ಲಾಯಕಾಯಿದು. ಅವನಿಂದ ಇನ್ನೂದೆ ಇಂತಹ ಉತ್ತಮ ಕೃತಿಗೊ ಹೆರ ಬರಳಿ. ಬೋಚಭಾವಂಗೆ ಚೆಂದಕೆ ಚಿತ್ರ ಮಾಡಿ ಸಕಾಯ ಮಾಡಿದ್ದ ಚುಬ್ಬಣ್ಣ° ! ಬೋಚುಬ್ಬಣ್ಣರ ಜೋಡಿ ಬೈಲಿಲ್ಲಿ ಎಲ್ಲೋರನ್ನೂ ರಂಜಿಸುತ್ತಾ ಇರಳಿ.
ಮಾವ ಈ ಚೌಪದಿ – ಹೇಳಿತ್ತು ಕ೦ಡ್ರೆ ಚೌಚೌ( ಮಿಸ್ಚರು) ಅಲ್ಲದೊ?? 😉
ಪದ್ಯ ಒಪ್ಪ ಇದ್ದು ಬೋಚಬಾವಾ… ಅಲ್ಲಲ್ಲ ಬೋಚದಾಸ…. 😉
ಆದರೆ ಇದರ ರಾಗ ಮತ್ತು ತಾಳ ಯಾವುದು ಹೇಳಿ ಗೊಂತಾಯಿದಿಲ್ಲೆನ್ನೆ???
ಮುಂದಿನ ಭಾಗಕ್ಕಾಗಿ ಕಾದೊಂಡಿರ್ತೆ 🙂
ಕೊಶಿಯಾತು ಭಾವ ಒಪ್ಪನೋಡಿ..
ರಾಗ ನಿ೦ಳ ಮನಸ್ಸಿ೦ಗೆ ಬ೦ದಾ೦ಗೆ ಹೇಳಿಕ್ಕಿ , 😉
ತಾಳ ಮದ್ದಳೆ ಎಲ್ಲ ಬೇಕಾರೆ ನಮ್ಮ ರಘು ಭಾವನೋ ಚೆನ್ನಬೆಟ್ಟಣ್ಣನೊ ಬರೆಕಷ್ಟೆ.. 🙁
ನವಗೆ ಅದು ಎಲ್ಲಾ ಅರದ್ಯ..
ಬೋಚ ಭಾವನ ತಪಸ್ಸಿಂಗೆ “ಸರಸ್ವತಿ” ಸ-ರಾಗ ಒಲುದ್ದು, ಗುಡ್ಡೆ ಇಳುದು ಬಪ್ಪಗಳೇ ಅದ್ಭುತ “ಕೀರ್ತನೆ” ಹೆರಟಿದು.
ಇನ್ನೂ ಬರಳಿ – “ದಾಸರಲ್ಲಿ ದಾಸ ಹರಿದಾಸ ಬೋಚ ದಾಸ” ಹೇಳಿ ಹೆಸರುವಾಸಿಯಾಗಲಿ ನಮ್ಮ ಬೈಲಿಲಿ ಹೇಳಿ ಹಾರೈಸುತ್ತೆ.
ಕೀರ್ತನೆ ಒಪ್ಪ ಆಯಿದು ಮಿನಿಯಾ°..!!!
ಫಟವೂ ಲಾಯಿಕಿದ್ದು.
ಮಾವ
ಬೋಚದಾಸನ ತಪಸ್ಸು ಮುರಿತ್ತೆ ಹೇಳ್ತ ನೆಗೆಮಾಣಿ..
ಎಂತ ಮಾಡುದೋ?
ಏ ಪೆಂಗಣ್ಣ ನೀನು ತಲೆ ಬೆಶಿ ಮಾಡೆಡ, 🙂
ತಪಸ್ಸು ಮುರಿವಲೆ ಅದು ಎ೦ತ್ಸರ ಕೋಲೊ?? 😛
ಅದು ಸರಿ, ನೀನು ಹೇಳಿದ್ದು ಒಳ್ಳೆದೇ ಆತು.. 😉
ಹೋ ಅಪ್ಪೊ, ಧನ್ಯವಾದ ಮಾವ.. 🙂
ಎಲ್ಲಾ ಸರಿ, ಅಲ್ಲ ಮಾವ ಈ ಕೀರ್ತನೆ ಹೇಳಿರೆ ಎ೦ತ್ಸರಾ?? 😉