- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬಸಳೆ ಬೆಂದಿ
ಬೇಕಪ್ಪ ಸಾಮಾನುಗೊ:
- 1 ಕಟ್ಟು ಬಸಳೆ
- 1-2 ಸಾಧಾರಣ ಗಾತ್ರದ ನೀರುಳ್ಳಿ
- ಚಿಟಿಕೆ ಅರುಶಿನ ಹೊಡಿ
- 1/4 ಚಮ್ಚೆ ಮೆಣಸಿನ ಹೊಡಿ
- ದ್ರಾಕ್ಷೆ ಗಾತ್ರದ ಓಟೆ ಹುಳಿ
- ದ್ರಾಕ್ಷೆ – ನಿಂಬೆ ಹಣ್ಣಿನ ಗಾತ್ರದ ಬೆಲ್ಲ (ಬೇಕಾದರೆ ಮಾತ್ರ)
- 3/4 -1 ಕಪ್ ಬೇಶಿದ ತೊಗರೀಬೇಳೆ
- 3/4 -1 ಕಪ್ ಕಾಯಿತುರಿ
- ರುಚಿಗೆ ತಕ್ಕಸ್ಟು ಉಪ್ಪು
- 1/2 ಚಮ್ಚೆ ಸಾಸಮೆ
- 5-6 ಬೇನ್ಸೊಪ್ಪು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಬಸಳೆಯ ಲಾಯಿಕಲಿ ತೊಳದು, ದಂಟನ್ನೂ, ಸೊಪ್ಪನ್ನೂ ಬೇರೆ ಬೇರೆ ಮಾಡೆಕ್ಕು. ದಂಟಿನ ಒಂದು ಇಂಚು ಉದ್ದಕೆ, ಸೊಪ್ಪಿನ ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚೆಕ್ಕು. ನೀರುಳ್ಳಿಯನ್ನೂ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದ ಉದ್ದಕೆ ಕೊರೆಯೆಕ್ಕು.
ಹುಳಿಯನ್ನೂ, ಒಂದು ರೆಜ್ಜ ನೀರನ್ನೂ ಒಂದು ಪಾತ್ರಲ್ಲಿ ಹಾಕಿ ಪುರುಂಚಿ, ಕರೇಲಿ ಮಡುಗಿ.
ಪ್ರೆಶರ್ ಕುಕ್ಕರಿಲ್ಲಿ ದಂಟು, ಸೊಪ್ಪು, ಅರುಶಿನ ಹೊಡಿ, ಮೆಣಸಿನ ಹೊಡಿ, ಉಪ್ಪು, ಬೆಲ್ಲ, ಹುಳಿ ಪುರುಂಚಿದ ನೀರು, ರೆಜ್ಜ ನೀರುದೆ, ಹಾಕಿ 2 ವಿಸಿಲ್ ಬಪ್ಪನ್ನಾರ ಬೇಶಿ. ಕುಕ್ಕರಿನ ಪ್ರೆಶರ್ ಹೋದ ಕೂಡ್ಲೆ, ನೀರುಳ್ಳಿಯನ್ನೂ ಅದಕ್ಕೆ ಹಾಕಿ 3-4 ನಿಮಿಷ ಬೇಶಿ. ಮತ್ತೆ ಅದಕ್ಕೆ ಬೇಶಿದ ತೊಗರೀಬೇಳೆಯನ್ನೂ ಹಾಕಿ ಲಾಯಿಕಲಿ ತೊಳಸಿ.
ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ನೊಂಪು ಕಡೆರಿ. ಇದರ ಬೇಶಿದ ಬಸಳೆ ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು. (ಉಪ್ಪು, ನೀರು ಬೇಕಾದರೆ ಹಾಕಿ.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಬೆಂದಿಗೆ ಹಾಕಿ. ಇದು ಉಬ್ಬು ರೊಟ್ಟಿಯ ಒಟ್ಟಿಂಗೆ, ಚಪಾತಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ನಮ್ಮಲ್ಲಿ ಬೇಳೆ ಹಾಕದ್ದೆ ಕುಡು ಬಸಳೆ ಬೆಂದಿ ಮಾಡ್ತವು. ಗೊಂತಿದ್ದರೆ ಬರದರೆ ಉಪಕಾರ ಆವ್ತಿತು.
ಪಷ್ಟಾಯಿದು ಅಕ್ಕೋ… 🙂
ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ… ಃ)
ವೇಣೀ.. ಬಸಳೆ ಬೆಂದಿ ಲಾಯಿಕಾಯಿದು.. ಪಟ ನೋಡೊಗಳೇ ಪರಿಮ್ಮಳ ಘಮ್ಮನೆ ಬಂದಾಂಗಾವುತ್ತದ..
ಎರಡೊರಿಷ ಆತು.. ಬಸಳೆ ಚೆಪ್ಪರ ಮಾಡಿರೆ ಬರ್ಕತ್ತೇ ಆವುತ್ತಿಲ್ಲೆಪ್ಪ.. ಎಂತ ಕಣ್ಣು ಮುಟ್ಟಿತ್ತೋ ಉಮ್ಮಪ್ಪ ಎಂತದೋ…
ನಿಂಗಳಲ್ಲಿಯೂ ಬಸಳೆ ಚಪ್ಪರ ಇದ್ದ ಅಜ್ಜಿ? ಎನ್ನ ಮಾವ ಹೇಳಿತ್ತಿದ್ದವು… ಮದಲಿಂಗೆ ಬ್ರಾಮರು ಬಸಳೆ ಎಲ್ಲ ತಿಮ್ಬಲಿಲ್ಲೇ… ಹೇಳಿ… ಅಪ್ಪ ಅಜ್ಜಿ? ಎಂತಕೆ? ಎಡೆಲಿ ಒಂದರಿ ಸುದ್ದಿ ಸಿಕ್ಕಿತ್ತು ಬದನೆ ತಿಮ್ಬಲಾಗ ಹೇಳಿ… ನಿಜವಾಗಿಯೂ ಬ್ರಾಮರು ಯಾವ ತರಕಾರಿ ಎಲ್ಲ ತಿಮ್ಬಲಾಗ?
ದೇಹಕ್ಕೆ ಹಿಡಿತ್ತರೆ ಎಂತ ಬೇಕಾರೂ ತಿಂಬಲಕ್ಕು.. 😉
ಅದು ಸರಿಯೇ ತಮ್ಮ… ಆದರೆ ನಮ್ಮ ಸಂಸ್ಕೃತಿಯ ಚೌಕಟ್ಟಿನೊಳ ಇಪ್ಪ ಈ ತಾಣಲ್ಲಿದ್ದುಗೊಂಡು ಮಾತನಾಡುವಗ, ಅದುದೆ ಬಂಡಾಡಿ ಅಜ್ಜಿಯ ಹಾಂಗಿಪ್ಪ ಹಿರಿ ತಲೆಯವು ಸಿಕ್ಕಿಯಪ್ಪಗ… ಈ ವಿಷಯವೆಲ್ಲ ಕೇಳಿ ತಿಳುಕ್ಕೊಂಡು,ಸಾಧ್ಯವಿದ್ದಷ್ಟು ಅಳವಡಿಸಿಗೊಲ್ಳೆಕ್ಕಾದ್ದು ಅತೀ ಅಗತ್ಯ ಅಲ್ಲದ?
ಅದು ಸರಿ 🙂
ಒಪ್ಪಿದೆ ಜಯಕ್ಕಾ…
ವೇಣಿಯಕ್ಕನ ‘ಬಸಳೆ ಬೆ೦ದಿ’ ಅಚ್ಚುಕಟ್ಟಾಯಿದು. ಸಚಿತ್ರ ವಿವರಣೆ ಕೊಶಿ ಕೊಟ್ಟತ್ತು.
ಕೆಲವು ವರ್ಷದ ಹಿ೦ದೆ ಎನ್ನ ಯೆಜಮಾ೦ತಿಯ ಅಜ್ಜ°,ಆನು ಊರಿ೦ಗೆ ಬ೦ದ ಕೂಡ್ಲೆ ಬಸಳೆ ಕೊಯ್ಕೊ೦ಡು ಬಕ್ಕು.
ಕಾರಣ ?ಎ೦ಗೊ ಇಬ್ರೂ ಬಸಳೆ ಪ್ರಿಯರು!
ಇನ್ನು ಕೂಡ್ಲೆ ಉಬ್ಬುರೊಟ್ಟಿಯ ವಿವರ ಆಗೆಡದೋ ಹಾ೦ಗಾರೆ?
ಇನ್ನಾಣ ವಾರದ ವರೆಗೆ ಕಾಯೆಕ್ಕು.ಃ)
ಬಸಳೆ ಬೆ೦ದಿ ಉ೦ಬಲೂ ರುಚಿ, ಆರೋಗ್ಯಕ್ಕೂ ಒಳ್ಳೇದು.. ಎನಗೆ ಇಲ್ಲಿ ಅಪರೂಪಕ್ಕೆ ಬಸಳೆ ಸಿಕ್ಕುತ್ತು, ಹೇ೦ಗೆ ಮಾಡುವದು ಹೇಳಿ ಗೊ೦ತಿಲ್ಲದ್ದ ಕಾರಣ ಇಷ್ಟರವರೇ೦ಗುದೆ ಆ ಸಾಹಸಕ್ಕೆ ಕೈ ಹಾಕಿತ್ತಿದ್ದಿಲ್ಲೆ. ಈಗ ವೇಣಿಯಕ್ಕನುದೆ ಕರಿಯನುದೆ (?) ಹೇಳಿ ಕೊಡುವಗ ಮಾಡದ್ರೆ ಇನ್ನು ಯಾವಗ? ಧನ್ಯವಾದ೦ಗೊ.
Veni akka, bendi sooper..:) nale idanen madeku irulinge..;) danyavadangoo
ಬಸಳೆ ಬೆ೦ದಿಯ ಮಣ್ಣಿನ ಅಳಗೆಲಿ ಬೇಶಿರೆ ಅದರ ರುಚಿ ಅದ್ಭುತ!
ಓ ಬಾಣಾರೆ, ಬಸಲೆ ಕಜಿಪ್ಪುಗ್ ಆತ್ ಕಷ್ತ ದಾಲಾ ಇಜ್ಜಿಯೇ ತಾರಾಯಿ ಪಿರೆಯಿನಯಿಕ್ ಒಂತೆ ಪುಲಿ,ನಾಲ್ ಮುಂಚಿ, ನಾಲ್ ಯೆಸಲ್ ಬೊಲ್ಲುಲ್ಲಿ ,ಪಾಡ್ದ್ ಕಡೆದ್ ಬೆಯಿಪ್ಪಾಯಿನ ಬಸಳೆಗ್ ಕೂಟ್ದು ಒಂತೆ ಉಪ್ಪು ಪಾಡ್ಡ್ ಕೊದಿಪ್ಪಾಂಡ ಆಂಡ್ ಹೇಳಿ ಬಟ್ಯ ಹೇಳ್ತನ್ನೆ ಮಾಡೀರೆ ಹೇಂಗಕ್ಕು?
ಹಸಿ ಬೆಳ್ಳುಳ್ಳಿಯ ಘಾಟು ಇಷ್ಟ ಅಪ್ಪವಕ್ಕೆ ಲಾಯಿಕ ಅಕ್ಕು.
ಅಕ್ಕೋ,
ಬಸಳೆಬೆಂದಿ- ಅದೂ ನೀರುಳ್ಳಿ ಹಾಕಿ , ನವಗಕ್ಕು ರಜ್ಜ ಹಳೇ ತಲೆಗೊಕ್ಕೆ ಕೋಪ ಬಕ್ಕೋ ಹೇಳಿ ಕಾಣ್ತು…….
ಬಹುಶ ಪ್ರಮಾಣ ಹೀ೦ಗೆ ಹೇಳಿ ಕಾಣ್ತು
ಕೊತ್ತ೦ಬರಿ = ೧ ಚಮಚ
ಮೆ೦ತೆ – ೧/೪ ಚಮಚ (ಜಾಸ್ತಿ ಹಾಕಿರೆ ಕೈಕ್ಕೆ ಅಕ್ಕು)
ಉದ್ದಿನ ಬೇಳೆ – ಅರ್ದ ಚಮಚ
ಸಾಸಮೆ-ಸಣ್ಣ ಅರ್ದ ಚಮಚ
ವಿ. ಸೂ – ತೊಗರಿ ಬೇಳೆಯ ರಜ್ಜ ನೀರಿಲ್ಲಿ ನೆನೆ ಹಾಕಿ ೧೦ ನಿಮಿಶ ಮಡುಗಿ ನ೦ತರ ಬೇಶೆಕ್ಕು.
ಬಸಳೆಯ ಚೆ೦ದಕ್ಕೆ ತೊಳದು ನ೦ತರ ಬೇಶೆಕ್ಕು
(ಎ೦ತಾರೂ ಈ ಬ್ರಾಃಮರ ಮನೆಯ ಅಡಿಗೆ ಉ೦ಬಲೆ ಲಾಯಕ, ಮತ್ತೆ ಹೊಟ್ಟೆಯೂ ಹಾಳಾವ್ತಿಲ್ಲೆ ಹೇಳುದು ಎನ್ನ ವಯುಕ್ತಿಕ ಅಭಿಪ್ರಾಯ)
ಓ ಅಣ್ಣ೦ದಿರೆ ಮತ್ತು ಅಕ್ಕ೦ದಿರೆ
ಬಸಳೆ ಬೆ೦ದಿ ಹೀ೦ಗೂ ಮಾಡುಲಾವ್ತು.
ಮೊದಾಲು, ಬಸಳೆ ಕಟ್ ಮಾಡಿ ಅದಕ್ಕೆ ಉಪ್ಪು, ಹುಳಿ, ರಜ್ಜ ಅರಿಶಿನ ಮತ್ತೆ ರಜ್ಜ ಮೆಣಸಿನ ಹೊಡಿ ಸೆರುಸಿ ಬೇಶೆಕ್ಕು (ಕೂಕೆರ್ ಲ್ಲಿ)
ನ೦ತರ ಮೆಣಸು, ಕೊತ್ತ೦ಬರಿ, ಮೆ೦ತೆ, ಉದ್ದಿನ ಬೇಳೆ ಸೆರುಸಿ ಹೊರಿಯೆಕ್ಕು, ರಜ್ಜ ಹೊರುದಪ್ಪಗ ಅರ್ಧ ಚಮಚ ಸಾಸಮೆ ಹೊರಿವಗ ಹಾಕಿ ಅದು ಹೊಟ್ತಿ ಅಪ್ಪಗ ತೆಗೆಯೆಕ್ಕು
ಮತ್ತೆ ಕೆರದು ಮಡುಗಿದ ಕ್ಜಾಯಿಗೆ ಸಣ್ಣ ಅರ್ಧ ನೀರುಳ್ಳಿ ಮತ್ತು ಇದೆಲ್ಲದರ ಸೆರುಸಿ ಸಣ್ಣಕ್ಕೆ ಕಡೆಯೆಕ್ಕು
ಮತ್ತೆ ತೊಗರಿ ಬೇಕಾರೆ ಸೇರುಸಿ ಬಸಳೆಯ ಪಾತ್ರಲ್ಲಿ ಹಾಕಿ ಇನ್ನೊ೦ದು ಕುದಿ ಬಪ್ಪ ವರೆಗೆ ಸ್ತೊವ್ ಲ್ಲಿ ಮಡುಗೆಕ್ಕು.
ಕುದಿ ಬಪ್ಪಗ ಕಡದು ಮಡುಗಿದ್ದ ಮಸಾಲೆಯನ್ನೂ ಸೇರುಸಿ ಚೆ೦ದಕ್ಕೆ ಕುದಿಸೆಕ್ಕು
ಅದಾದ ನ೦ತರ ಬೆಳ್ಳುಳ್ಳಿ ಒಗ್ಗರಣೆ ಕೊಡೆಕ್ಕು ಇದಕ್ಕೆ
(ಸಾಸಮೆ ಬಹುಶ ಬಸಳೆಲಿಪ್ಪ ಶೀತ ಗುಣ ಹೋಪಲೆ ಹಾಕುದಾದಿಕ್ಕು, ಆನು ಕೆಲಸಕ್ಕೆ ಹೊಪ ಮನೆಲಿ ಅಕ್ಕ ಹೆಳಿದ್ದು ನೆನಪು ಎನಗೆ)
ಒ೦ದರಿ ಹೀ೦ಗೂ ಮಾಡಿ ನೋಡಿ.
ಅಪ್ಪು ಅದಕ್ಕೆ ಬಸಳೆ ಕೊದಿಲು, ಕೂಟು ಹೇಳಿದೆ ಹೇಳ್ತವು. ಅದು ಅಶನ, ಚಪಾತಿ, ರೊಟ್ಟಿ ಎಲ್ಲದಕ್ಕು ಕೂಡ್ಲೆ ಲಾಯಿಕ ಆವ್ತು. ನಿಧಾನಕ್ಕೆ ನಮ್ಮ ಬೈಲಿಲ್ಲಿ ಹಾಕುತ್ತೆ.
ಈ ಬೆಂದಿ ಉಬ್ಬುರೊಟ್ಟಿಯ ಒಟ್ಟಿಂಗೆ ತಿಂಬಲೆ ಲಾಯಿಕ ಆವ್ತು. (ಚಪ್ಪೆ, ಸೀವು ಇಷ್ಟ ಇಪ್ಪವಕ್ಕೆ)
Akka
Ruchiruchiaduge.blogspot.com odide anu. Ningala parishrama kushi athu.
ಕುಡು ಬಸಳೆ ಬೆಂದಿ ಲಾಯಕಾವುತ್ತು.ಮಾಡ್ತ ಕ್ರಮ ಮರದ್ದು.ಬಾಳೆಕಾಯಿ ಹಾಕಿರೂ ಆವುತ್ತು.
ಬಸಳೆ ಬೆಂದಿ ಎನ ಲಾಯಕ ಆವ್ತು. ಪಷ್ಟಾಯ್ದು ಇದು ಹೇಳಿ ಒಪ್ಪ.