- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಉಬ್ಬು ರೊಟ್ಟಿ
ಬೇಕಪ್ಪ ಸಾಮಾನುಗೊ:
- 2 ಕಪ್(ಕುಡ್ತೆ) ಕೊಯಿಶಕ್ಕಿ
- 1/4 ಕಪ್(ಕುಡ್ತೆ) ಬೆಣ್ತಕ್ಕಿ
- ರುಚಿಗೆ ತಕ್ಕಸ್ಟು ಉಪ್ಪು
- 20 – 25 ಬಾಳೆ ಎಲೆ
- ಮಣ್ಣಿನ ಓಡು
ಮಾಡುವ ಕ್ರಮ:
ಕೊಯಿಶಕ್ಕಿ, ಬೆಣ್ತಕ್ಕಿಯ ಒಂದು ಪಾತ್ರಲ್ಲಿ ಹಾಕಿ, ಉಗುರು ಬೆಶಿ ನೀರಿಲ್ಲಿ 8-10 ಘಂಟೆ ಬೊದುಳುಲೆ ಹಾಕೆಕ್ಕು.
ಅದರ ಲಾಯಿಕಲಿ 2-3 ಸರ್ತಿ ನೀರಿಲ್ಲಿ ತೊಳದು, ರೆಜ್ಜವೆ ನೀರು ಹಾಕಿ ಗಟ್ಟಿಗೆ, ನೊಂಪಿಂಗೆ ಕಡೆಯೆಕ್ಕು.
ಕಡವಗ ರುಚಿಗೆ ತಕ್ಕಷ್ಟು ಉಪ್ಪುದೆ ಹಾಕಿಗೊಳ್ಳೆಕ್ಕು.
ಬಾಳೆ ಕೀತುಗಳ ಲಾಯಿಕಲಿ ಉದ್ದಿ ಮಡಿಕ್ಕೊಳ್ಳೆಕ್ಕು.
ಒಂದು ಬಾಳೆ ಕೀತಿನ ತೆಗದು ಮರದ ಮಣೆಯ ಮೇಲೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ,
ನಡುಕೆ ದೊಡ್ಡ ನಿಂಬೆ ಹುಳಿ ಗಾತ್ರದ ಉಂಡೆ ಮಾಡಿ ಮಡುಗೆಕ್ಕು.
ಆ ಉಂಡೆಯ ಮೇಗಂದ ಇನ್ನೊಂದು ಬಾಳೆ ಕೀತಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮುಚ್ಚೆಕ್ಕು.
ಅದರ ಮೇಗಂದ ಇನ್ನೊಂದು ಮಣೆಯ ಮಡುಗಿ, ಕೆಳಾಣ ಚಿತ್ರಲ್ಲಿ ತೊರ್ಸಿದಸ್ಟು ದಪ್ಪಕೆ, ನಡು ನಡುಕೆ ಒಟ್ಟೆ ಬೀಳದ್ದ ಹಾಂಗೆ,
ನಾಲ್ಕೂ ದಿಕ್ಕಂದಲೂ ಲಾಯಿಕ ಒತ್ತೆಕ್ಕು.
ಒಲೆಯ ಮೇಗೆ ಮಣ್ಣಿನ ಓಡಿನ ಮಡುಗಿ, ಬೆಶಿ ಆದ ಕೂಡ್ಲೆ, ರೊಟ್ಟಿಯ ಹಾಕಿ, ಕವುಂಚಿ,
ಮೊಗಚ್ಚಿ ಬೇಶಿ, ಎರಡು ಹೊಡೆಯಾಣ ಬಾಳೆ ಕೀತುದೆ ರೊಟ್ಟಿಂದ ಬಿಟ್ಟಪ್ಪಗ ತೆಗೆಯೆಕ್ಕು.
ರೊಟ್ಟಿಯ ಪುನ: ಕವುಂಚಿ, ಮೊಗಚ್ಚಿ ಗುಳ್ಳೆ ಬೀಳ್ಲೆ ಸುರುವಪ್ಪನ್ನಾರ ಬೇಶೆಕ್ಕು.
ರೊಟ್ಟಿಯ ಓಡಿಂದ ತೆಗದು, ಕೆಂಡಲ್ಲಿ ಅಥವಾ ಗ್ಯಾಸ್ಲ್ಲಿಉಬ್ಬುಸುಲೆ ಹಿಡಿಯೆಕ್ಕು.
ಬೆಶಿ ಬೆಶಿ ರೊಟ್ಟಿಗೆ ತುಪ್ಪ/ಬೆಣ್ಣೆ/ತೆಂಗಿನ ಎಣ್ಣೆ ಹಾಕಿ, ಬೆಂದಿಯ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 8-10 ರೊಟ್ಟಿ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
ಸೂಃ ಈ ರೊಟ್ಟಿಯ ಕೆಲವು ಜನ ಬಾಳೆ ಎಲೆಯ ಬದಲು, ಚೆಂಡಿ ಹರ್ಕಿಲ್ಲಿ ತಟ್ಟಿದೆ ಮಾಡ್ತವು.
ಕೆಲವು ಜನ ಕೊಯಿಶಕ್ಕಿ, ಬೆಣ್ತಕ್ಕಿಯ ಸಮ ಸಮ ಹಾಕಿ, ಹಿಟ್ಟಿನ ರೆಜ್ಜ ತೆಳ್ಳಂಗೆ ಕಡದು, ಉಂಡೆ ಮಾಡ್ಲೆ ಬಪ್ಪಷ್ಟು ಕಾಸಿದೆ ಮಾಡ್ತವು.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಆಶೆ ಅವತು ವೇಣಿ ಅಕ್ಕ
ನಾಳಂಗೆ ಮಾಡೆಕ್ಕು
ಬಪ್ಪೋರೆಲ್ಲ ಬನ್ನಿ
ಅಯ್ಯೋ! ಕಂಡಾಬಟ್ಟೆ ಕೊದಿ ಆವು್ತ. ಅದರ ಮೇಲೆ ಭಾರೀ ಪಟಂಗಳುದೇ… ಹಶು ಕೆರಳ್ಸುಲೆ.
koshiakki hejje oludare adara gattige kadadu akki hodi bekashtu uppu bersire sulaballi ubbu rotti madlavuthu….
ಅಕ್ಕೋ.. ನಿಂಗಳ ಕೆಣಿ ಪಷ್ಟಿದ್ದು. , ಹೇಳಿದಾಂಗೆ.. ಮತ್ತದಕ್ಕೆ ನಾಕು (ನೀರ್ಸೊಳೆ) ಸೇರ್ಸಿ ಗಟ್ಟಿಗೆ ಕಡದರೆ ಎಳ್ಪಲ್ಲಿ ಸೊಳೆ ರೊಟ್ಟಿ ಅಕ್ಕೋ?
sole rotti hangu try madi mathondu keni kandu hidida hange athalla
ಧನ್ಯವಾದ ಅಕ್ಕೊ. ಸರಳ ಸಮಗ್ರ ವಿವರಣೆ. ರೊಟ್ಟಿ-ಬೆ೦ದಿ ರುಚೀ ಆಯಿದು.
ಅಕ್ಕೊ ಚಿತ್ರ ಸಮೇತ ವಿವರಣೆ ಲಾಯ್ಕ ಆಯಿದು….. ಚಿತ್ರವ ನೋಡಿ ಕಣ್ಣು ತುಂಬಿಕೊಂಡೆ….ಖುದ್ದು ಆನೇ ಮಾಡಿ ತಿಂದಾಗಾತಿದಾ ಇಲ್ಲಿ…
ಬರಳಿ ಇನ್ನಷ್ಟು….ಲೇಖನಂಗೊ
ವಾಹ್…!!
ಇನ್ನಾಣ ಸರ್ತಿ ಬೀರಂತಡ್ಕಕ್ಕೆ ಹೋಗಿಪ್ಪಗ ಮಾಡ್ಸಿಂಡು ತಿಂತೆ.. :):):)
ಧನ್ಯವಾದ ವೇಣಿ ಅಕ್ಕೋ…
ಹಸರು ಬೆಂದಿ ಸೇರ್ಸಿ ತಿಂದರೆ ಸ್ವರ್ಗಕ್ಕೆ ೦.೨೫ ಗೇಣು.
ಬಹುಶಃ ಉಬ್ಬು ರೊಟ್ಟಿ – ನಮ್ಮೂರ, ನಮ್ಮವರ ಸಾಂಪ್ರದಾಯಿಕ ತಿಂಡಿ. ಬೇರೆ ಬೇರೆ ಊರುಗಳಲ್ಲಿಯೂ ಮಾಡುಗು, ಆದರೆ ಈ ಕ್ರಮಲ್ಲಿ ಅಲ್ಲ ಹೇಳಿ ಎನ್ನ ತಿಳುವಳಿಕೆ. (ಗೊಂತಿಪ್ಪವು ತಿದ್ದೆಕ್ಕು)
ಈ ಕ್ರಮವ ಬೈಲಿಲಿ ಕೊಟ್ಟದಕ್ಕೆ ಅಕ್ಕಂಗೆ ಧನ್ಯವಾದ.
@ ಕುಮಾರ ಬಾವಯ್ಯಾ, ಉಬ್ಬು ರೊಟ್ಟಿಗೆ ಕಲಸುವಾಗ ತಣ್ಣನೆ (ಬೆಳ್ತಿಗೆ ಅಶನ) ಮಾಡಿರೆ ಲಾಇಕ ಆವುತ್ತು.ಇದು ಕೊಡಗಿಲೆ ಬಳಕೆ ಇಪ್ಪದು.
ಅಕ್ಕಿಯ ನೊಮ್ಪು ಆಗಿ ಗಟ್ಟಿ ಆಗಿ ಮಿಕ್ಸಿಲಿ ಕಡವಲೆ ಕಶ್ತ,ಅದಕ್ಕೆ ಕಡವ ಕಲ್ಲೇ ಬೇಕು.
ಉಬ್ಬು ರೊಟ್ಟಿ ಎಂಗೊಗೂ ತುಂಬಾ ಇಷ್ಟ… ವಿವರುಸಿದ್ದದು ತುಂಬಾ ಲಾಯಕ ಆಯಿದು ವೇಣಿ… ನಮ್ಮ ಸಂಸ್ಕೃತಿಯ ಪ್ರಕಾರ ಬಸಳೆ ಬೆಂದಿ ತಿಮ್ಬಲಕ್ಕೋ ಅಗದೋ ಹೇಳಿ ಸಂಶಯ ಇದ್ದ ಕಾರಣ ಸೇರುಸುಲೇ ಹರಿವೆ ಸೊಪ್ಪಿನ ಬೆಂದಿ ಮಾಡಿದೆ…
Waavh, tumba olle tindi. urige hogi eegale tinnekkuli avtu 🙁
ಧನ್ಯವಾದ೦ಗೊ
Engala combination – Rotti – Kudu bendi.
ಅಕ್ಕೋ, ಉಬ್ಬು ರೊಟ್ಟಿ ಮಾಡುಲೆ ಹೇಳಿಕೊಟ್ಟದು ಲಾಯಿಕಾಯಿದು.
(ಕೆಲವು ಜನ ಕೊಯಿಶಕ್ಕಿ, ಬೆಣ್ತಕ್ಕಿಯ ಸಮ ಸಮ ಹಾಕಿ, ಹಿಟ್ಟಿನ ರೆಜ್ಜ ತೆಳ್ಳಂಗೆ ಕಡದು, ಉಂಡೆ ಮಾಡ್ಲೆ ಬಪ್ಪಷ್ಟು ಕಾಸಿದೆ ಮಾಡ್ತವು.)
ಹಾಂಗೇ ಕೆಲವುಜೆನ ಬರೇಬೆಳ್ತಿಗೆ ಅಕ್ಕಿಲಿಯುದೇ ಮಾಡ್ತವು. ಇದಾ ಹೀಂಗೆಲ್ಲಾ ಸೌದಿಒಲೆಲಿ ರೊಟ್ಟಿ ಬೇಶುತ್ತದು ತೋರುಸಿದರಿದ್ದಲ್ಲೋ ಕೆಲವು ಜೆನ ಒಲಗೆ ಕಿಚ್ಚು ಹಿಡುಶುತ್ತು ಹೇಂಗೆ ಹೇಳಿ ಟ್ಯೂಶನ್ ಕೊಡುವಿರೋ ಹೇಳಿ ಕೇಳಿಗೊಂಡು ಬಕ್ಕದಾ. ಇದಾ ರೊಟ್ಟಿ ಉಬ್ಬುಸುತ್ತದೆಲ್ಲಾ ಸರಿ ಆ ದಂಡಾಸಿನಮತ್ತೆ ಲಾಯಕಲ್ಲಿ ತೊಳದು ಮಡುಗೀರೆ ಸಮ ಹೇಳಿ ಅರೋ ಹೇಳಿದಾಂಗಾತು ………….. ಎಂತಾರಾಗಲಿ ನಾಕುರೊಟ್ಟಿ ಹೊಡದೇ…..ಸಮ.
ವಿ.ಸೂಃ ಇದಾ ಆ ಪಟಲ್ಲಿಪ್ಪ ಮಣ್ಣ ಓಡಿನ ಜಾಗ್ರುತೆಲಿ ತೆಗದು ಮಡುಗಿಕ್ಕಿ ಆತೋ ಕಾಣೆಯಾಗಿದ್ದಾರೆ ಹೇಳಿ ಪಟ ಹಾಕುಲೆ ಬೇಕಕ್ಕಿದಾ
ಆಹಾ… ಪಟಲ್ಲಿಯೇ ಉಬ್ಬುರೊಟ್ಟಿ ಪಷ್ಟುಕ್ಲಾಸು ಕಾಣುತ್ತಿದಾ. ಮಾಡಿನೋಡಿ ತಿಂದರೇ ರುಚಿಗೊಂತಕ್ಕಷ್ಟೆ ಇನ್ನು. ಕೂಡ್ಳೇ ಮೊನ್ನೆ ಟ್ರಯಲ್ ಮಾಡಿದ ಬಸಳೆ ಬೆಂದಿಯೇ ಇನ್ನೊಂದರಿ ಮಾಡಿರಾತು. ‘ಉಬ್ಬುರೊಟ್ಟಿ – ಬಸಳೆ ಬೆಂದಿ’!. ಅಕ್ಕಾ°, ಹೀಂಗೇ ಚೇರ್ಚೆಲಿ ಬರಳಿ ಮುಂದೆಯೂ ಹೇಳುವದು -‘ಚೆನ್ನೈವಾಣಿ’