Oppanna.com

ಕೇನೋಪನಿಷತ್ (ಚತುರ್ಥ ಖಂಡ)

ಬರದೋರು :   ಶರ್ಮಪ್ಪಚ್ಚಿ    on   09/01/2012    2 ಒಪ್ಪಂಗೊ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕೇನೋಪನಿಷತ್ ಇದರ ಚತುರ್ಥ ಖಂಡ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕೇನೋಪನಿಷತ್ (ಚತುರ್ಥ ಖಂಡ)

ಸಾ ಬ್ರಹ್ಮೇತಿ ಹೋವಾಚ, ಬ್ರಹ್ಮಣೋ ವಾ ಏತದ್ವಿಜಯೇ

ಮಹೀಯಧ್ವಮಿತಿ| ತತೋ ಹೈವ ವಿದಾಂಚಕಾರ ಬ್ರಹ್ಮೇತಿ ||೧||

ತಸ್ಮಾದ್ವಾ ಏತೇ ದೇವಾ ಅತಿತರಾಮಿವಾನ್ಯಾನ್ ದೇವಾನ್

ಯದಗ್ನಿರ್ವಾಯುರಿಂದ್ರಸ್ತೇ ಹ್ಯೇನನ್ನೇದಿಷ್ಠಂ ಪಸ್ಪೃಶುಸ್ತೇ ಹ್ಯೇನತ್

ಪ್ರಥಮೋ ವಿದಾಂಚಕಾರ ಬ್ರಹ್ಮೇತಿ ||೨||

ತಸ್ಮಾದ್ವಾ ಇಂದ್ರೋSತಿತರಾಮಿವಾನ್ಯಾನ್ ದೇವಾನ್ ಸ

ಹ್ಯೇನನ್ನೇದಿಷ್ಠಂ  ಪಸ್ಪರ್ಶ ಸ ಹ್ಯೇನತ್ ಪ್ರಥಮೋ

ವಿದಾಂಚಕಾರ ಬ್ರಹ್ಮೇತಿ ||೩||

ತಸ್ಯೈಷ ಆದೇಶೋ ಯದೇತದ್ವಿದ್ಯುತೋ ವ್ಯದ್ಯುತದಾ

ಇತೀನ್ನ್ಯಮೀಮಿಷದಾ ಇತ್ಯಧಿದೈವತಮ್ ||೪||

ಅಥಾಧ್ಯಾತ್ಮಂ ಯದೇತದ್ಗಚ್ಛತೀವ ಚ ಮನೋSನೇನ

ಚೈತದುಪಸ್ಮರತ್ಯಭೀಕ್ಷ್ಣಂ ಸಂಕಲ್ಪಃ ||೫||

ತದ್ಧ ತದ್ವನಂ ನಾಮ ತದ್ವನಮಿತ್ಯುಪಾಸಿತವ್ಯಮ್;

ಸ ಯ ಏತದೇವಂ ವೇದಾಭಿ ಹೈನಂ ಸರ್ವಾಣಿ

ಭೂತಾನಿ ಸಂವಾಂಛಂತಿ ||೬||

ಉಪನಿಷದಂ ಭೋ ಬ್ರೂಹೀತ್ಯುಕ್ತಾ ತ

ಉಪನಿಷದ್ಬ್ರಾಹ್ಮೀಂ ವಾವ ತ ಉಪನಿಷದಮಬ್ರೂಮೇತಿ ||೭||

ತಸ್ಯೈ ತಪೋ ದಮಃ ಕರ್ಮೇತಿ ಪ್ರತಿಷ್ಠಾ

ವೇದಾಃ ಸರ್ವಾಂಗಾನಿ ಸತ್ಯಮಾಯತನಮ್ ||೮||

ಯೋ ವಾ ಏತಾಮೇವಂ ವೇದಾಪಹತ್ಯ ಪಾಪ್ಮಾನಮನಂತೇ

ಸ್ವರ್ಗೇ ಲೋಕೇ ಜ್ಯೇಯೇ ಪ್ರತಿತಿಷ್ಠತಿ ಪ್ರತಿತಿಷ್ಠತಿ ||೯||

ಶಾಂತಿ ಮಂತ್ರ

ಓಮ್ ಅಷ್ಯಾಯಂತು ಮಮಾಂಗಾನಿ ವಾಕ್ ಪ್ರಾಣಶ್ಚಕ್ಷುಃ

ಶ್ರೋತ್ರಮಥೋ ಬಲಮಿಂದ್ರಿಯಾಣಿ ಚ ಸರ್ವಾಣಿ ಸರ್ವಂ

ಬ್ರಹ್ಮೋಪನಿಷದಂ ಮಾSಹಂ ಬ್ರಹ್ಮ ನಿರಾಕುರ್ಯಾಂ

ಮಾ ಮಾ ಬ್ರಹ್ಮ ನಿರಾಕರೋದನಿರಾಕರಣಮಸ್ತ್ವ

ನಿರಾಕರಣಂ ಮೇSಸ್ತು ಶದಾತ್ಮನಿ ನಿರತೇ ಯ

ಉಪನಿಷತ್ಸು ಧರ್ಮಾಸ್ತೇ ಮಯಿ ಸಂತು ತೇ ಮಯಿ ಸಂತು||

ಓಂ ಶಾಂತಿಃ ಶಾಂತಿಃ ಶಾಂತಿಃ ||

ಕೇನೋಪನಿಷತ್ (ನಾಲ್ಕನೆಯ ಖಂಡ)

’ಬ್ರಹ್ಮನೀಶನು’ ಎಂದಳಾಕೆಯು ”ಆತನಿಂದಲೆ ವಿಜಯವು’

ಅರಿತನಾತ್ಮನು ಅದುವೆ ಕ್ಷಣದಲಿ ಯಕ್ಷನೇ ಪರಮಾತ್ಮನು ||೧||

ಜೀವ ಅಗ್ನಿಯು ವಾಯು ಶ್ರೇಷ್ಠರು ಈಶ ಸನಿಹದಿ ಸ್ಪರ್ಶದಿ

ಎಲ್ಲ ದೇವತೆಗಳಿಗು ಮೊದಲಿಗೆ ಈಶನರಿತರು ಜ್ಞಾನದಿ ||೨||

ಜೀವ ಆತ್ಮನು ಇದುವೆ ಕಾರಣ ದೇವತೆಗಳಲಿ ಶ್ರೇಷ್ಠನು

ಬಹಳ ಸನಿಹದ ಪ್ರಥಮ ದರ್ಶನದಲ್ಲಿ ಈಶ್ವರನರಿತನು ||೩||

ಈಶ ಜ್ಞಾನದ ವಿಧಿಯೆ ಈತೆರ ಮಿಂಚು ಹೊಂಚುವ ತೆರದಲಿ

ಕಣ್ಣು ಮಿಟುಕಿಸುವಂತೆಯೆಂಬುದು ಉಪಮೆಯಧಿದೈವತೆಯಲಿ ||೪||

ಇದುವೆ ಆಧ್ಯಾತ್ಮಕವು, ಈ ಮನದಿಂದಲೇ ಪರಮಾತ್ಮನ

ಸ್ಮರಣೆ ಸಂಕಲ್ಪದಲಿ ಬಂಧಿಸೆ ಸ್ಥಿರದಿ ನೆಲಸಲಿ ಈಶ್ವರ ||೫||

ಅವಗೆ ’ತದ್ವನ’ವೆಂಬ ಹೆಸರಿದೆ ಆತನೇ ವನನೀಯನು

ಜ್ಞಾನಿಯಾತನ ಹೀಗೆ ತಿಳಿದರೆ ಪ್ರೀತಿಗೊಂಬರು ಎಲ್ಲರು ||೬||

(ಇಂತು ಪೇಳಲು ಶಿಷ್ಯ ನುಡಿದನು)

ಪೂಜ್ಯ ಗುರುಗಳೆ ಮುಂದೆ ತಿಳಿಸಿರಿ ಉಪನಿಷತ್ತಿನ ತತ್ತ್ವವ

(ಎನಲು ಶಿಷ್ಯಗೆ ಗುರುವಿನುತ್ತರ)

ಉಪನಿಷತ್ತನು ಪೇಳ್ದುದಾಯಿತು, ತತ್ತ್ವವಿದುಪನಿಷತ್ತಿನ ||೭||

ತಪವು, ನಿಗ್ರಹ,ಕರ್ಮ ಮೂರಿವು ಅದಕೆ ಬೇಕಾಧಾರವು

ಸರ್ವ ವೇದಗಳದರ ಅಂಗವು ಸತ್ಯದಾಶ್ರಯ ನೆಲೆಯದು ||೮||

ಯಾವನೀತೆರ ಬ್ರಹ್ಮವರಿವನೊ ಪಾಪ ನಶಿಸಿದ ಸುಖವನು

ಸ್ವರ್ಗದಲ್ಲಿಯು ಲೋಕದಲ್ಲಿಯು ಬ್ರಹ್ಮಾನಂದವ ಪಡೆವೆನು ||೯||

ಶಾಂತಿ ಮಂತ್ರ

ಬಲವ ಹೊಂದಲಿ ಪುಷ್ಟಿಗೊಳ್ಳಲಿ ನನ್ನ ಅವಯವ ವಚನವು

ಪ್ರಾಣ ಲೋಚನ ಕಿವಿಗಳಿಂದ್ರಿಯ ಪಡಲಿ ವರ್ಧನೆಯೆಲ್ಲವು

ಬ್ರಹ್ಮ ಸರ್ವವು ವೇದವುಕ್ತವು; ನಿರಾಕರಿಸೆನು ಬ್ರಹ್ಮನ

ಬ್ರಹ್ಮ ನನ್ನ ಕಡೆಗಣಿಸದಿರಲಿ; ಬೇಡ ಉಪೇಕ್ಷೆ ಇಬ್ಬದಿ

ಧರ್ಮವಾವುದು ವೇದವುಕ್ತವು ನನಗೆ ಎಲ್ಲವು ಲಭಿಸಲಿ

ಆತ್ಮಶೋಧನೆ ನಿರತನಾದವನೆನಗೆ ಲಭಿಸಲಿ

ಶಾಂತಿಯಾಗಲಿ! ಶಾಂತಿಯಾಗಲಿ!! ಶಾಂತಿಯಾಗಲಿ ಜಗದಲಿ!!!

ಓಂ ಶಾಂತಿಃ ಶಾಂತಿಃ ಶಾಂತಿಃ

ಕೇನೋಪನಿಷತ್- ಒಂದನೇ ಖಂಡಕ್ಕೆ ಇಲ್ಲಿ ನೋಡಿ

ಕೇನೋಪನಿಷತ್- ಎರಡನೇ ಖಂಡಕ್ಕೆ ಇಲ್ಲಿ ನೋಡಿ

ಕೇನೋಪನಿಷತ್- ಮೂರನೇ ಖಂಡಕ್ಕೆ ಇಲ್ಲಿ ನೋಡಿ

ಸಂಗ್ರಹ: ಉಪನಿಷತ್ ಗೀತಾಂಜಲಿ-ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಕೇನೋಪನಿಷತ್ (ಚತುರ್ಥ ಖಂಡ)

  1. ಆನಂದಂ,ಪರಮಾನಂದಂ,ಬ್ರಹ್ಮಾನಂದಂ… ಎಲ್ಲರೂ ಆ ಆನಂದವ ಅನುಭವಿಸುವ ಹಾಂಗಾಗಲಿ…

  2. [ಆತನೇ ವನನೀಯನು]ಮನನೀಯನು ಆದಿಕ್ಕೊ?
    ಕೇನೋಪನಿಷತ್ ಲಾಯ್ಕ ಆಯಿದು.ಸಣ್ಣ ಕತೆಯ ಮೂಲಕ ಅಧ್ಯಾತ್ಮವ ಹೇಳುವ ಕ್ರಮ ಎಷ್ಟು ಹಿಂದೆಯೇ ಇತ್ತು ಹೇಳಿ ಆಶ್ಚರ್ಯ ಆವುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×