Oppanna.com

ಪರಿಭಾಷೆಗಳ ಬಗ್ಗೆ ಇನ್ನಷ್ಟು…

ಬರದೋರು :   ಗೋಪಾಲಣ್ಣ    on   26/03/2012    14 ಒಪ್ಪಂಗೊ

ಗೋಪಾಲಣ್ಣ

ಧ್ವನಿಗೆ ವಿಶೇಷ ಅರ್ಥ ಇಲ್ಲದ್ದರೂ, ಮಾತಿನ ಭಾವಕ್ಕೆ ಅರ್ಥ ಇಪ್ಪಂಥಾ ಪರಿಭಾಷೆಗಳ ಶುದ್ದಿ ಅಂದೊಂದರಿ ಬೈಲಿಲಿ ಮಾತಾಡಿದ್ದು: ಸಂಕೊಲೆ
ಪರಿಭಾಷೆಗಳ ಇನ್ನಷ್ಟು ಸಂಗ್ರಹವ ಗೋಪಾಲಣ್ಣ ಮಾಡಿದ್ದವು.
ಓದಿನೋಡಿ, ನೆಗೆಮಾಡಿ…

ಒಂದೊಂದು ವೃತ್ತಿಯವು ಮಾತಾಡುವಾಗ ಅವರ ಕೆಲಸಕ್ಕೆ ಸಂಬಂಧಿಸಿದ ಶಬ್ದಂಗಳ ಉಪಯೋಗ ಮಾಡುದು ಕೇಳುಲೆ ಚೆಂದ ಇರುತ್ತು.

  • ಯಕ್ಷಗಾನ ಭಾಗವತ ಸುಬ್ಬಣ್ಣ:
    ಈ ವರ್ಷ ಕಾಚಲು ಬಂದು ತೋಟಲ್ಲಿ ಅಡಕ್ಕೆ ಮರ ಎಲ್ಲಾ ಹೋತು. ಇನ್ನು ಮುದದಿಂದ… ಹೇಳಿ ಸೆಸಿ ಹಾಕೆಕ್ಕಷ್ಟೆ.
  • ಮದ್ದಳೆಗಾರ ರಾಮಣ್ಣ :
    ಆನು ಮೊನ್ನೆ ಗುರುವಾಯೂರಿಂಗೆ ಹೋದ್ದಪ್ಪಾ.. ಬಪ್ಪಾಗ ಕಣ್ಣೂರು ವರೆಗೆ ಬಂಡಿ ಎಷ್ಟು ಮೆಲ್ಲಂಗೆ ಬಂತು ಹೇಳಿರೆ ಸಾಕು ಸಾಕಾತು.
    ಮತ್ತೆ ಮಾತ್ರ ಮೂರನೇ ಕಾಲಲ್ಲಿ ಓಡಿತ್ತು. ಸರೀ ಸಮಯ ಕೊಡೆಯಾಲ ಮುಟ್ಟುವಾಗ!
  • ಚೆಂಡೆಯ ಸುಂದರಣ್ಣ :
    ಆನು ಮನೆಂದ ಬೇಗ ಹೆರಡೆಕ್ಕು ಹೇಳಿ ಗ್ರೇಶಿದ್ದು. ಅದೇ ಸಮಯಲ್ಲಿ ಅಂಗಡಿ ಸೋಜನ ಪೊರಪ್ಪಾಡಾತು.
    ಸಾಲದ ಪೈಸೆ ಕೊಡದ್ದೆ ಕಳಿಯ ಹೇಳಿ ಜೋರು ಮಾಡಿತ್ತು. ಅದರ ವೇಷ ಹೋಗದ್ದೆ ಹೆರಡುದು ಹೇಂಗೆ?
  • ಸಂಗೀತಗಾರ ಶಿವಣ್ಣ :
    ಉದಿಯಪ್ಪಗ ಹೆರಡುವಾಗ ಹಶು ಆಗಿ ಹೊಟ್ಟೆ ತಾಳ ಹಾಕುತ್ತು. ಹೆಂಡತಿಯ ಹತ್ತರೆ ಹೇಳಿರೆ, ಇಡ್ಲಿ ಇನ್ನೂ ಆಯಿದಿಲ್ಲೆ ಹೇಳಿ ತಾರ ಸ್ಥಾಯಿಲಿ ಪರಂಚಿತ್ತು.
    ಅದರ ಮನೋಧರ್ಮ ಹೀಂಗೆ ಹೇಳಿ ಹೇಳುಲೆ ಎಡಿತ್ತಿಲ್ಲೆ, ಒಂದೊಂದರಿ ಭಾರೀ ದ್ರುತ ಗತಿ,ಕೆಲವು ಸರ್ತಿ ಭಾರೀ ವಿಳಂಬ
  • ದರ್ಜಿ ಪುಟ್ಟಣ್ಣ:
    ಅದಕ್ಕೇ ಹೇಳುದು ಒಂದೋ ಆರು ಮೊಳ,ಅಲ್ಲದ್ದರೆ ಮೂರು ಮೊಳ ಹೇಳಿ!
  • ಸರಕಾರಿ ನೌಕರ ಶಿಂಗಣ್ಣ:
    ಹಾಂಗೆ ಮಾಡುತ್ತರೆ ಕೂಡಲೇ ಎಂತಾರೂ ಶಿಸ್ತು ಕ್ರಮ ತೆಕ್ಕೊಳದ್ದೆ ಆಗ. ಎಂತಗೆ ತಡ ಆತು ಹೇಳಿ ಕಾರಣ ಕೇಳೆಕ್ಕು. ಅವರ ಅಪ್ಪ ಅಮ್ಮಂಗೆ ರಿಪೋರ್ಟು ಮಾಡೆಕ್ಕು…
  • ಕೃಷಿಕ ಅನಂತಣ್ಣ:
    ನಿನ್ನೆ ಎಂತಾತು ಹೇಳಿರೆ,ಅಡಕ್ಕೆ ತೆಕ್ಕೊಂಡು ಕಾಂಪ್ಕೊಗೆ ಹೋದೆ. ಬಪ್ಪಾಗ ಬೆಗರು ಬಿಚ್ಚಿ ಚೆಂಡಿಮುದ್ದೆ, ಮೈಯಿಡೀ ಡ್ರಿಪ್ಪಿನ ಪೈಪು ಸಿಕ್ಕಿಸಿದ್ದೋ ತೋರಿತ್ತು. ಮನೆಗೆ ಬಂದು ಬೆಲ್ಲನೀರು ಕುಡಿವಲ್ಲಿ ವರೆಗೆ ಬಚಾವಾದ್ದು ದೊಡ್ದದು..
    ಗಾವು ಅಷ್ಟು ಬಲ ಇದ್ದು. ಮಾರ್ಗ ಹೇಳಿರೆ ಪಂಪಿನ ಹೊಗೆನಳಿಗೆಯ ಹಾಂಗೆ ಕಾದು ಕರಿತ್ತು..
  • ಇಸ್ಪೇಟು ಮರುಳ ಸುಬ್ಬಣ್ಣ:
    ಈ ವರ್ಷ ಹೀಂಗೆ ಬೆಶಿಲು ಕಾದರೆ ನಮ್ಮ ತುರ್ಪು ಔಟಕ್ಕು.ಅಡಕ್ಕೆ ಒಂದೂ ಒಳಿಯ.
  • ಜ್ಯೋತಿಷ್ಯಪ್ರೇಮಿ ವಾಸುಅಣ್ಣ:
    ಮನುಷ್ಯರ ಗ್ರಾಚಾರದ ಹಾಂಗೆ ಊರಿಂಗೂ ಗ್ರಾಚಾರ ಹಿಡಿತ್ತು. ಇದಕ್ಕೆಂತ ನಿವೃತ್ತಿ? ಒಂದೂ ಗೊಂತಾಗ. ಮರ ಹತ್ತುವವರ ಅಂಜನ ಹಾಕಿರೂ ಕಾಣುತ್ತಿಲ್ಲೆ; ಇಲ್ಲದ್ದರೆ ಅಡಕ್ಕೆ ಉದುರುದಕ್ಕೆ ಮದ್ದು ಬಿಡಲಾವ್ತಿತ್ತು.
  • ಕಾಲೇಜು ಕನ್ಯೆ ಸರಳಕ್ಕ:
    ಎನ್ನ ಅಜ್ಜಿಗೆ ಸುಮ್ಮನೆ ಕೂಪಲೆಡಿಯ, ರೇಡಿಯದ ಹಾಂಗೆ ಹರಟೆ ಮಾಡಿಂಡೇ ಇಕ್ಕು. ಬಾಯಿಗೆ ಕ್ಲಿಪ್ ಹಾಕಿರೆ ಅಕ್ಕೋ ಏನೊ?
  • ಅದರ ಗೆಳತಿ ವನಜಕ್ಕ:
    ಕೆಲವು ಮುದುಕಿಗೊ ಹಾಂಗೆ, ಒಂದೇ ರೆಕಾರ್ಡಿನ ಮತ್ತೆ ಮತ್ತೆ ಹಾಕಿದ ಹಾಂಗೆ,ಹಾಂಗೆ ಮಾಡೆಡ – ಹೀಂಗೆ ಮಾಡೆಡ ಹೇಳಿಂಡೆ ಇಕ್ಕು.

– ಹೀಂಗೆ ಒಬ್ಬೊಬ್ಬರ ಮಾತು ಸುಮ್ಮನೆ ಕೂದು ಕೇಳಲೆ ಚಂದ.
ಹಳೆ ಅಜ್ಜಿಯಕ್ಕಳ ಅಜ್ಜಂದ್ರ ಮಾತು ಮತ್ತೂ ಚೆಂದ ಇರುತ್ತು.

14 thoughts on “ಪರಿಭಾಷೆಗಳ ಬಗ್ಗೆ ಇನ್ನಷ್ಟು…

  1. ಅಪ್ಪು, ನಮ್ಮ ವೃತ್ತಿ -ಅಲ್ಲಿ ನಾವು ವ್ಯವಹರಿಸುವ ಭಾಷೆ , ನಮ್ಮ ನಿತ್ಯದ ಮಾತಿನ ಮೇಲೆ ಪ್ರಭಾವ ಬೀರುದಪ್ಪು…
    ಶುದ್ದಿ ಲಾಯ್ಕಾಯ್ದು 🙂

  2. ಅದು ಸಡನ್ ಬ್ರೇಕು,
    ಅದು ಇಲ್ಲಿ ಬೇಕು,
    ಅಷ್ಟು ಬರೆದಪ್ಪಗ ತೋರಿತ್ತು
    ಇನ್ನು ಸಾಕೋ ಸಾಕು!
    ಅದು ಯಾಕೋ ಎನಗೆ ಗೊಂತಿಲ್ಲೆ.

  3. ಗೋಪಾಲಣ್ಣ.ಶುದ್ದಿ ಮುಗುದಪ್ಪಗ ಒ೦ದರಿ ಬ್ರೇಕ್ ಹಾಕಿ ಗಾಡಿ ಗಡಕ್ಕನೆ ನಿ೦ದು ಇ೦ಜಿನು ಬ೦ದ್ ಆದ ಹಾ೦ಗಾತನ್ನೇ !!

  4. ಪರಿಭಾಷೆಗಳ ಬಗ್ಗೆ ಬಂದದು ಲಾಯ್ಕಾಯಿದು

  5. ಲಾಉಇಕಾಯಿದು ಗೋಪಾಲಣ್ಣ, ಧನ್ಯವಾದ೦ಗೊ.

  6. ಗೋಪಾಲಣ್ಣ,
    ನಿಂಗೊ ಬೈಲಿಂಗೆ ಯಾವಾಗಲೂ ಅಪೂರ್ವವಾದ್ದೇ ತಂದು ಕೊಡ್ತಿ. ಪರಿಭಾಷೆಗಳ ಬಗ್ಗೆ ಬಂದದು ಲಾಯ್ಕಾಯಿದು.
    ಪ್ರತಿಯೊಬ್ಬನ ಜೀವನ ಶೈಲಿಗೆ ಅನುಸರಿಸಿ ಅವನ ಮಾತಿಲಿ ಆಯಾ ಪದಪ್ರಯೋಗಂಗ ಬಂದೇ ಬತ್ತು.

    ಮೊನ್ನೆ ಒಂದು ಬದ್ಧಕ್ಕೆ ಹೋದಲ್ಲಿ ಸಿ ಎ ಆಗಿಪ್ಪ ಒಬ್ಬ ಭಾವಂಗೆ ಬಪ್ಪ ತಿಂಗಳಿನ ಒಂದು ಚೀಪೆಯ ಹೇಳಿಕೆ ಹೇಳಿ ಅಪ್ಪಗ ಕೂಡ್ಲೇ ಅವ್ವು ಹೇಳಿದವು. ಓ! ಇನ್ನೊಂದು ಹೇಳಿಕೆಯಾ!!! ಆನು ಒಂದೇ ದಿನ ಬಪ್ಪಂಥ ಕಾರ್ಯಕ್ರಮದ ಆಮಂತ್ರಣ ಪತ್ರಂಗಳ ಫೈಲು ಮಾಡಿ ಮಡಿಗಿದ್ದೆ ಹೇಳಿ!!
    ನಮ್ಮ ನಿತ್ಯ ಬಳಕೆಲಿ ನಮ್ಮ ಸುತ್ತ ಇಪ್ಪ ವಿಚಾರವ ತುಂಬಾ ಕುಶಾಲಿಲಿ ಹೇಳಿದ್ದಿ. ಇನ್ನುದೇ ಇದ್ದೋ ಹೀಂಗಿಪ್ಪದು?

  7. ಪ್ರತಿಯೊಂದು ಪರಿಭಾಷೆಯೂ ಚೋಕ್ಲೇಟಿಂದ ಚೀಪೆ ಇತ್ತು.
    ನೆಗೆಮಾಣಿ ನೆಗೆಮಾಡಿದಾ°… 🙂 🙂 🙂

  8. ಓದಿ ಖುಷಿ ಆತು… ಒಪ್ಪಣ್ಣ ಬರದ ಲೇಖನವನ್ನೂ ಓದುವ ಹಾಂಗೆ ಆತು…

  9. ತುಂಬ ಒಳ್ಳೆ ಸಂಗ್ರಹ. ಸಂಗೀತಗಾರ ಶಿವಣ್ಣನ ಮಾತಂತೂ ಭಾರಿ ಲಾಯ್ಕ. ಗೋಪಾಲಣ್ಣನ ಹಾಸ್ಯ ಪ್ರಜ್ಞೆ ನೆಗೆ ಬರಿಸಿತ್ತು.

  10. ಅವರವರ ಭಾವಕ್ಕೆ ತಕ್ಕ ಭಾಷೆ. ಫಶ್ಟಾಯಿದು. ನಮ್ಮ ಭಾಷೆಲಿಯುದೆ ಪ್ರಯೋಗ ಆವುತ್ತು. ಶಬ್ದಂಗಳ ಹೆರ್ಕಿ ತೋರಿದ ಗೋಪಾಲಣ್ಣಂಗೆ ಧನ್ಯವಾದಂಗೊ.

  11. ಇದರ ಇಷ್ಟು ಓದಿಕ್ಕಿ ಇಲ್ಲೀಗ ಎನಗೆ ಮೆಣೆಮೆಟ್ಟೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×