Oppanna.com

ಕೋಳ್ಯೂರಿನ ಜಾತ್ರೆ – ಮಂಡಲಪೂಜೆ

ಬರದೋರು :   ಕೋಳ್ಯೂರು ಕಿರಣ    on   02/01/2012    8 ಒಪ್ಪಂಗೊ

ಮೊದಲು ನಮಸ್ಕಾರ ಎಲ್ಲರಿಂಗುದೆ.
ಇಪ್ಪದು ಬೆಂಗಳೂರಿಲಿ ಆದ ಕಾರಣ ಏಳುದು ಒಂಚೂರು ಲೇಟು ..!
ಆನು ಇಲ್ಲೆ ಮೊದಲು ಬರವದು; ತಪ್ಪು ಒಪ್ಪು ಇದ್ದರೆ ಒಂಚೂರು ಕರುಣೆ ಇರಲಿ.
ವಿಷಯಕ್ಕೆ ಬತ್ತೆ.

ನಿಂಗೊಗೆ ಕೋಳ್ಯೂರು ಹೇಳುವ ಊರು ಗೊಂತಿಕ್ಕು.
ಕೋಳ್ಯೂರು ಸೀಮೆ ?. ಹಾ , ಅದೇ. ಎಂಗಳ ಊರು.

ವರ್ಷವೂ ಜನವರಿ ತಿಂಗಳಿಲಿ ಕೋಳ್ಯೂರು ಮಂಡಲಪೂಜೆ ಆವುತ್ತು. ಈ ಸರ್ತಿ ಜನವರಿ ಮೂರು ಮತ್ತೆ ನಾಲ್ಕಕ್ಕೆ ಮಂಡಲಪೂಜೆ.

ಕೋಳ್ಯೂರು ದೇವಸ್ಥಾನ, ಐತಿಹಾಸಿಕ ದೇವಸ್ಥಾನ. (ಕಥೆ ಖಂಡಿತಾ ಇನ್ನೊಂದರಿ ಹೇಳ್ತೆ),  ಶ್ರೀ ಶಂಕರನಾರಾಯಣ ದೇವಸ್ಥಾನ.
ಇಲ್ಲಿ ತ್ರಿಮೂರ್ತಿ (ಬ್ರಹ್ಮನ ಬದಲು ಗಣಪತಿಗೆ) ಪೂಜೆ .
ದೇವರ ಬಲಿ, ವಿಶಾಲ ದೇವಸ್ಥಾನ, ಕೆರೆ ಎಲ್ಲಾ ಇದ್ದು. ಮಂಡಲಪೂಜೆ ಪ್ರಮುಖವಾದ ಉತ್ಸವ.

ಜಾತ್ರೆಗೆ “ಹೊಸನಗರ ಮೇಳದವರ” ಆಟ ಇದ್ದು. ಮೂರನೇ ತಾರೀಕು ಇರುಳು.
ಪ್ರಸಂಗ: ತ್ರಿಪುರ ಮಥನ.
ಮತ್ತೆ ರಾತ್ರಿ ಬಲಿ ಉತ್ಸವ ವಿಶೇಷ ಆಕರ್ಷಣೆ.

ಎಂಗಳ ಊರಿಲಿ ಹೊಸವರ್ಷಕ್ಕೆ ಇದೇ ದೊಡ್ಡ ಆಚರಣೆ, ಮತ್ತೆ ಎಲ್ಲರುದೆ ಹೊಸಾ ಪಾತ್ರೆಗಳ, ಬಳೆ, ಗೊಂಬೆ, ಪಟ ಎಲ್ಲಾ ತೆಕ್ಕೊಂಬವು, ಸಂತೆಲಿ ಬಲಿ ಬಪ್ಪ ಎಂಗಳಂತಹ ಜೆನಂಗ, ಜಾತ್ರೆಯ ಅಚ್ಚುಕಟ್ಟಾಗಿ ನಡೆಶುವ ಕಾರ್ಯಕರ್ತರು , ಹಗಲು ಇರುಳು ಕೆಲಸ ಮಾಡುವ ದೇವಸ್ಥಾನದ ಕೆಲಸದವು.
ಎಲ್ಲಾ ಹೊಸವರ್ಷವ ಅದ್ದೂರಿಯಾಗಿ ಆಚರಿಸುತ್ತೆಯ.

ಜಾತ್ರೆಗೆ ಕೋಳ್ಯೂರಿನವರ ಪರವಾಗಿ ಎನ್ನ ಆತ್ಮೀಯ ಸ್ವಾಗತ ನಿಂಗೊಗೆ.

ಹೋ ಹೋ, ಇನ್ನೊಂದು ವಿಷ್ಯ ಇದ್ದು :- ಕೋಳ್ಯೂರು ಹಸರು ಸೀವು ಗೊಂತಿಲ್ಲೆಯಾ ನಿಂಗೊಗೆ ? ಗೊಂತಿಲ್ಲದ್ದರೆ ಜಾತ್ರೆಗೆ ಬನ್ನಿ, ಮಧ್ಯಾಹ್ನ ಅನ್ನಸಂತರ್ಪಣೆಲಿ ಹಸರು ಸೀವು ತಿಂಬ ಆಗದಾ?

ಹೊಸವರ್ಷದ ಶುಭಾಶಯ,
ಈಶ್ವರ ಕಿರಣ ಕೊಮ್ಮೆ, ಕೋಳ್ಯೂರು.

8 thoughts on “ಕೋಳ್ಯೂರಿನ ಜಾತ್ರೆ – ಮಂಡಲಪೂಜೆ

  1. ಜಾತ್ರೆ ಲಾಯ್ಕಾಯಿದು.. ರಜೆ ಹಾಕಿದ ಕಾರಣ ಕೆಲಸ ಒಂಚೂರು ಜಾಸ್ತಿ ಇದ್ದು .. ಕಥೆದೆ , ಜಾತ್ರೆಯ ವಿಶೇಷವನ್ನೂ ಬರೆತ್ತೆ .. ಒಂದೆರಡು ದಿನ ಬಿಟ್ಟು..

    ಎಲ್ಲಾ ಒಪ್ಪಕ್ಕೂ ಧನ್ಯವಾದಂಗ 🙂

  2. ಕೋಳ್ಯೂರು ಜಾತ್ರೆಯ ಸುದ್ದಿ… ಕಥೆಗಾಗಿ ಕಾಯ್ತಾ ಇರ್ತೆಯ…

  3. ಹಸರಸೀವಿ೦ಗೆ ಉಳ್ಳಾಲ ಅಚ್ಚುಬೆಲ್ಲ ಸಾಕಷ್ಟು ಹಾಕಿ,ಕಾಯಿಹಾಲು ಹಾಕದ್ದರೆ ಅಚ್ಚುಕಟ್ಟಾವುತ್ತು ಭಾವಯ್ಯ.ಕೋಳ್ಯೂರಿಲಿ ಹಾ೦ಗೆಯೇ ಅಲ್ಲದೋ?

  4. ಮಧೂರ ದೇವರ ಮದ್ದಾನೆ,ಕಣ್ಯಾರ ದೇವರ ಕಣ್ಣಾನೆ,ಕೋಳ್ಯೂರ ದೇವರ ಕೊಂಬಾನೆ,ವಿಟ್ಟಳ ದೇವರ ಪುಟ್ಟಾನೆ,ಆನೆ ಬಂತು ಆನೆ-ಹೇಳಿ ಎನ್ನ ಅಜ್ಜಿ ಹೇಳಿಕೊಂಡಿದ್ದ ಹಾಡಿಂದಾಗಿ ಕೋಳ್ಯೂರು ಬಾಲ್ಯಕಾಲಲ್ಲೇ ಕೇಳಿದ ಹೆಸರು.
    ಅದರ ಕತೆ ಬೇಗ ಬರೆಯಿ.

    1. ಗೋಪಾಲಣ್ಣನ ಒಪ್ಪಂಗಳಲ್ಲಿ ಭಯಂಕರ ಶೆಗ್ತಿ ಇರ್ತು, ಅಪ್ಪೋ!
      ಇದುದೇ ಒಂದು. ಕೊಶೀ ಆವುತ್ತು ಓದಲೆ.

      ಕೋಳ್ಯೂರು ಕಿರಣಣ್ಣೋ, ಜಾತ್ರೆ ಚೆಂದಕೆ ಸುದಾರುಸಿ.
      ಪಟ ತೆಗದರೆ ಬೈಲಿನ ಎಲ್ಲೋರುದೇ ನೋಡ್ಳಕ್ಕದಾ.

      “ಸೀವು” ಮಾಡಿಪ್ಪಗ ಒಂದರಿ ಎಲ್ಲೋರುದೇ ಸೇರುವೊ, ಆಗದೋ? 🙂

  5. ಹಸರ ಸೀವಿಂಗೆ ಬೆಲ್ಲ ಹಾಕುತ್ತವನ್ನೇ. ಮತ್ತೆಂತಾಯೇಕು. ಹು !

    ಹೋ ನಾಳೆ ಇರುಳಿಂಗೆ ಆಟವೂ ಇದ್ದೋ.

    ಶುದ್ದಿಗೊಂದು ಒಪ್ಪ. ಕಾರ್ಯಕ್ರಮ ಯಶಸ್ವಿಯಾಗಲೆಂದು ಬಯಸುವ – ‘ಚೆನ್ನೈವಾಣಿ’

  6. ಕೋಳ್ಯೂರಿನ ಶಣ್ಕರನಾರಾಯಣ ದೇವರಿಂಗೆ ಇಲ್ಲಿಂದಳೇ ಚಾಮಿ ಚಾಮಿ ಮಾಡ್ತೆ, ಹೇಳಿಕೆ ಹೇಳಿದ್ದಕ್ಕೆ ಧನ್ಯವಾದಂಗೊ…
    ಅದಪ್ಪು ನಿಂಗೊ ಎಶ್ಟೊತ್ತಿಂಗೆ ಹೆರಡುದು ಬೆಂಗ್ಳೂರಿಂದ ಘಾಟಿಲಿ ಮಾರ್ಗ ಬೇರೆ ಸರಿ ಇಲ್ಲೆಡಾ ……, ನಿನ್ನ್ರೆ ನೆಗೆಗಾರ ಕೊಡೆಯಾಲಕ್ಕೆ ಬಂದು ಹೋಗಿ ಸಾಕೋ ಸಾಕಾತಡ.

    (ಇಪ್ಪದು ಬೆಂಗಳೂರಿಲಿ ಆದ ಕಾರಣ ಏಳುದು ಒಂಚೂರು ಲೇಟು ..!) ಎಂತಾಣ್ಣೋ ಚಳಿಜೋರಿದ್ದೋ ಹೇಂಗೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×