- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ತೊಂಡೆಕಾಯಿ ಹುಳಿಮೆಣಸಿನ ಕೊದಿಲು
ಬೇಕಪ್ಪ ಸಾಮಾನುಗೊ:
- 25-30 ತೊಂಡೆಕಾಯಿ
- 1/4 ಚಮ್ಚೆ ಅರುಶಿನ ಹೊಡಿ ಅಥವಾ ಸಣ್ಣ ತುಂಡು ಅರುಶಿನ
- ಚಿಟಿಕೆ ಮೆಣಸಿನ ಹೊಡಿ
- ದ್ರಾಕ್ಷೆ ಗಾತ್ರದ ಓಟೆ ಹುಳಿ
- ದ್ರಾಕ್ಷೆ ಗಾತ್ರದ ಬೆಲ್ಲ (ಬೇಕಾದರೆ ಮಾತ್ರ)
- 3-4 ಒಣಕ್ಕು ಮೆಣಸು
- 3/4 -1 ಕಪ್ ಕಾಯಿತುರಿ
- ರುಚಿಗೆ ತಕ್ಕಸ್ಟು ಉಪ್ಪು
- 3-4 ಬೆಳ್ಳುಳ್ಳಿ (ಬೇಕಾದರೆ ಮಾತ್ರ)
- 1/2 ಚಮ್ಚೆ ಸಾಸಮೆ
- 5-6 ಬೇನ್ಸೊಪ್ಪು
- 1-2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ತೊಂಡೆಕಾಯಿಯ ಲಾಯಿಕ ತೊಳದು, ತೊಟ್ಟು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಗುಂಡುಕಲ್ಲಿಲ್ಲಿ ಅಥವಾ ಇಕ್ಕುಳಲ್ಲಿ ಗುದ್ದೆಕ್ಕು/ಅರಚ್ಚೆಕ್ಕು.
ಪ್ರೆಶರ್ ಕುಕ್ಕರಿಲ್ಲಿ ಗುದ್ದಿದ ತೊಂಡೆಕಾಯಿ, ಚಿಟಿಕೆ ಅರುಶಿನ ಹೊಡಿ, ಮೆಣಸಿನ ಹೊಡಿ, ಉಪ್ಪು, ಬೆಲ್ಲ, ಹಾಕಿ 2 ವಿಸಿಲ್ ಬಪ್ಪನ್ನಾರ ಬೇಶಿ.
ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಒಣಕ್ಕು ಮೆಣಸು, ಅರುಶಿನ ಹೊಡಿ/ಕೊಂಬು, ಹುಳಿ, ಬೇಕಾಸ್ಟು ನೀರು ಹಾಕಿ ನೊಂಪು ಕಡೆರಿ. ಕುಕ್ಕರಿನ ಪ್ರೆಶರ್ ಹೋದ ಮೇಲೆ, ಇದರ ಬೇಶಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು.(ಉಪ್ಪು, ನೀರು ಬೇಕಾದಸ್ಟು ಹಾಕಿ.) ಸಣ್ಣ ಕಿಚಿಲ್ಲಿ ಒಂದು 5 ನಿಮಿಷ ಮಡುಗಿ.
ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಕೊದಿಲಿಂಗೆ ಹಾಕಿ. ಇದು ಅಶನ, ದೋಸೆ, ರೊಟ್ಟಿ, ಚಪಾತಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಆಹಾ… ಎನಗೆ ಭಾರೀ ಪ್ರೀತಿ ಇದು…. ಎನ್ನ ಹಾಂಗೆ ಸರೀ ಉಂಬೋರಿಂಗೆ ೨ ಜೆನಕ್ಕೆ ಸಾಕಕ್ಕು.
ಕೊದಿಲಿನ ಪಾಕದ ಕ್ರಮ & ಹಾಂಗೇ ಮಾಡಿಯಪ್ಪಗ ಸೂಪರ್…
ಬೆಳ್ಳುಳ್ಳಿ ಹಾಕದ್ದರೂ ಲಾಯ್ಕಾವ್ತು…….ಬೆಳ್ಳುಳ್ಳಿ ನಮಗೆ ಚೂರು ದೂರ ಇದಾ…
😀
ಎನಗೆ ಇಷ್ಟವಾದ ಕೊದಿಲು.
ಪಾಕ ವಿಧಾನ ಲಾಯಿಕ ಆಯಿದು.
ತೊಂಡೆಕಾಯಿ ಇಲ್ಲದ್ರೆ ಇದೇ ಪಾಕಲ್ಲಿ ಹಣ್ಣು ಸೌತೆ ಕಾಯಿಲಿಯೂ ಮಾಡ್ಲೆ ಆವುತ್ತು.
ಬೇಕಾದರೆ ಮಾಂತ್ರ ಬೆಳ್ಳುಳ್ಳಿ ಹಾಕಿ ಹೇಳಿ ವೇಣಿ ಹೇಳಿದ ಕಾರಣ ತುಳುವರ ಕೊದಿಲು ಎಲ್ಲ ಇನ್ನು ನಮಗೆ ಬೇಡ ಹೇಳಿ ಬೆಳ್ಳುಳ್ಳಿ ಹಾಕದ್ದೆ ಬ್ರಾಹ್ಮಣರ ಕೊದಿಲು ಮಾಡಿದೆ… ಎಂತೋ ಒಂದು ರುಚಿ ಕಡಮ್ಮೆ ಆದ ಹಾಂಗೆ ಇತ್ತು… ಇನ್ನೆರಡು ಸರ್ತಿ ಮಾಡಿ ನಾಲಗೆ ಆ ರುಚಿಗೆ ಒಗ್ಗಿಗೊಳ್ಳುತ್ತಾ ಹೇಳಿ ನೋಡೆಕ್ಕಷ್ಟೇ…
ಅಬ್ಬೆ ಮಾಡಿರೆ ಭಾರೀ ರುಚಿ ಅಕ್ಕು…
ಖ೦ಡಿತ ಮ೦ಗ್ಳೂರಣ್ಣಾ.. ಅಬ್ಬೆ ಮಾಡಿರೆ ಮೇಲೆ ಹೇಳಿದ ಸಾಮಾನಿಲ್ಲಿ ಮಾಡಿದ ಕೊದಿಲು ೨-೩ ಜನಕ್ಕೆ ಉಂಬಲೆ ಬಕ್ಕು. ಆನೇ ಮಾಡಿರೆ ಇಷ್ಟೇ ಸಾಮಾನಿಲ್ಲಿ ಮಾಡಿದ ಕೊದಿಲು ೧೦ ಸರ್ತಿ ಉ೦ಡರೂ ಮುಗಿಯ. 😉 (ರುಚಿ ಇದ್ದರಲ್ಲದೊ ಮುಗಿವದು..)
ಹೆ ಹೆ ಹೆ..
ಎನ್ನದೂ ಅದೇ ಕತೆ…
ಮನೆಲಿ ೪ ದಿನ ಆನೊಬ್ಬನೇ ಇದ್ದ ಸರ್ತಿ,
ಒಂದರಿ ಅಡಿಗೆ ಮಾಡಿದ್ದು ಆನು,
ನಾಲ್ಕು ದಿನಕ್ಕೂ ಸಾಕಾಯಿದು… 😉
ಎಂತಮಾಣಿ ಒಂದುದಿನ ಮಾಡಿದ್ದರ ನಾಕುದಿನ ನೋಡಿಂಡು ಕೂದ್ದೋ ಹೇಂಗೆ?
ತಿಂದೊಂಡು ಕೂದ್ದು ಭಾವಾ..
😉
ಹೇಳಿ ಕೊಟ್ಟ ಕೂಸು ನಾಲ್ಕು ಜೆನಕ್ಕೆ ಅಪ್ಪಷ್ಟು ಹೇಳಿತ್ತು..
ತಿಂಬಲೆ ಆನೊಬ್ಬನೇ ಇದ್ದದು.. ಹೆ ಹೆ ಹೆ 😉 😉
Kodilu first aidu, enna istada kodilu idu, monne madidde, sooper aidu:)
ಅಕ್ಕನ ಪಾಕಕ್ಕೆ ಪೆರ್ವ ಭಾವನ ಒಗ್ಗರಣೆ..ಲಾಯ್ಕ ಆಯಿದು.
ಹುಳಿಮೆಣಸಿನ ಕೊದಿಲಿಂಗೆ ಕೆಲವು ಮನೆಗಳಲ್ಲಿ “ಭೂತಕೊದಿಲು” ಹೇಳಿಯೂ ಹೇಳ್ತವಡ; ಮಾಷ್ಟ್ರಮನೆ ಅತ್ತೆ ಹೇಳಿತ್ತಿದ್ದವು.
{ತುಳುವರ ಪ್ರಭಾವಂದ (ಬೂತೊಕೊದ್ದೆಲ್) ಬಂದದಾಯಿಕ್ಕು – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ}
ಪೆರುವದಣ್ಣ ಹೇಳಿದಾಂಗೆ, ವೇಣಿಅಕ್ಕನ ನಿರೂಪಣೆಗಳೂ, ಅದಕ್ಕೆ ಬೇಕಾದ ಪಟಂಗಳೂ – ಬರೆತ್ತ ಕ್ರಮಂಗಳೂ – ಎಲ್ಲವೂ ಅಡಿಗೆಯ ಹಾಂಗೇ ರುಚಿರುಚಿ.
ಇನ್ನಾಣ ಅಡಿಗೆ ಬರಳಿ; ಕಾದೊಂಡಿದ್ದೆಯೊ°..
ಸರಿಯಾಗಿ ಹೇಳಿದೆ ಒಪ್ಪಣ್ಣ. ಎಂಗಳಲ್ಲಿ ಇದಕ್ಕೆ ಭೂತಕೊದಿಲು ಹೇಳಿಯೇ ಹೇಳ್ತದು. ವೇಣಿ ಅಕ್ಕ ಚೆಂದಕೆ ವಿವರುಸಿದ್ದು. ತೊಂಡೆಕಾಯಿ ಗುದ್ದುವಗ ಕೈಂದ ರಟ್ಟುತ್ತು, ಜಾಗ್ರತೆ ಆತೊ. ಅನುಭವದ ಮಾತಿದು !
ಏ ಮಾವಾ ರಟ್ತುತ್ತದು “ತೊಂಡೆಕಾಯಿಯೋ” ಅಲ್ಲಾ “ಗುಂಡುಕಲ್ಲೋ” ಗೊಂತಾತಿಲ್ಲೆನ್ನೇ………!
ಧನ್ಯವಾದ ವೇಣಿಯಕ್ಕಾ.. ನಿ೦ಗೊ ಹೇಳಿ ಕೊಡ್ತ ವಿಧಾನ simply superb.
ಬೆಳ್ಳುಳ್ಳಿ ಹಾಕದ್ರೆ ಹುಳಿಮೆಣಸಿನ ಕೊದಿಲಿನ ತಾಜಾ ರುಚಿ ಬತ್ತಿಲ್ಲೆ. ಹಾ೦ಗೆಯೇ ಕಡೇ೦ಗೆ ಅದು ಒಳ್ಳೆತ ಕೊದಿಯೆಕು, ಸಣ್ಣ ಮಟ್ಟಿ೦ಗೆ ಎಣ್ಣೆ ನೆಗೆತ್ತಷ್ಟು. ಕಾಯಿಯುದೆ ಒಳ್ಳೇ ಬೆಳದ ಕಾಯಿ ಆಗಿದ್ದರೆ ಲಾಯಿಕಾವುತ್ತು. ತು೦ಬ ನೀರು ನೀರಾಗಿ ಇಪ್ಪದಕ್ಕಿ೦ತ ಚೂರು ಮ೦ದಕೆ ಇದ್ದರೆ ಲಾಯಿಕಾವುತ್ತು.
ಧನ್ಯವಾದ೦ಗೊ.
ವೇಣಿ ಅಕ್ಕೋ ಹುಳಿಮೆಣಸಿನ ಕೊದಿಲು ಲಾಯಿಕಾಯಿದು,
ಆ ಉಂಡೆ ಬೆಂದಿಗೆ ಅರಪ್ಪು ಕಡವಗ ಎಂತೆಲ್ಲಾ ಹಾಕಿದ್ದು ಹೇಳಿ ತಿಳುಶುತ್ತಿರೋ…….., ಬೋಚ ಭಾವ ಒಂದೇ ಹಾಂಗೆ ಕೇಳ್ತಾ ಇತ್ತಿದ್ದ ತೆಂಕ್ಲಾಗಿಯಾಣವು ಬಂದಿಪ್ಪಗ ಅವಕ್ಕೆ ಬೆಳ್ಳುಳ್ಳಿ ತಿನುಸಲೆ ಸುಲಾಭ ದಾರಿ ಇದಾ………,
ಹಾ…, ಹೇಂಗೂ ಇದ್ದು ತೊಂಡೆಕ್ಕಾಯಿ ಕೊರವಲೆ ಇದ್ದು. ಹೀಂಗೇ ಮಾಡಿ ಕಡದು ಕೂಡಿರಾತು.
ಹೇಳಿದಾಂಗೆ ಈ 25-30 ತೊಂಡೆಕಾಯಿ ಹೇಳ್ತದು ಎಷ್ಟು ಜನಕ್ಕೆ ಹದಾ ಅಕ್ಕು ವೇಣಿಯಕ್ಕೋ?! ಆ ಪ್ರ’ಭಾವ° ಬಂದರೆ ಬಾಗ ಎಷ್ಟಿದ್ದರೂ ಸಾಕಪ್ಪಲಿಲ್ಲೇದು.
ಪಾಕಕ್ಕೊಂದು ಒಪ್ಪ ಹೇಳಿತ್ತು – ‘ಚೆನ್ನೈವಾಣಿ’.
ಮೇಲೆ ಹೆಳಿದ ಸಾಮಾನಿಲ್ಲಿ ಮಾಡಿದ ಕೊದಿಲು ೨-೩ ಜನಕ್ಕೆ ಉಂಬಲೆ ಬಕ್ಕು.