ಆತ್ಮೀಯ ಬೈಲಿಂಗೆ,
ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ “ ಕಠೋಪನಿಷತ್ “ ಇದರ ಪ್ರಥಮ ವಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.
ಶರ್ಮಪ್ಪಚ್ಚಿ
~~~~
ಕಠೋಪನಿಷತ್
(ಕೃಷ್ಣ ಯಜುರ್ವೇದೀಯ ಕಠ ಶಾಖಾ) -ಪ್ರಥಮ ವಲ್ಲೀ
ಉಶನ್ ಹ ವೈ ವಾಜಸ್ರವಸಃ ಸರ್ವವೇದಸಂ ದದೌ|
ತಸ್ಯ ಹ ನಚಿಕೇತಾ ನಾಮ ಪುತ್ರ ಅಸ ||೧||
ತಂ ಹ ಕುಮಾರಮ್ ಸತತಂ ದಕ್ಷಿಣಾಸು ನೀಯಮಾನಾಸು
ಶ್ರದ್ಧಾSSವಿವೇಶ; ಸೋSಮನ್ಯತ ||೨||
ಪಿತೋದಕಾ ಜಗ್ಧತೃಣಾ ದುಗ್ಧದೋಹಾ ನಿರಿಂದ್ರಿಯಾಃ |
ಆನಂದಾ ನಾಮ ತೇ ಲೋಕಾಸ್ತಾನ್ ಸ ಗಚ್ಛತಿ ತಾ ದದತ್ ||೩||
ಸ ಹೋವಾಚ ಪಿತರಂ ತತ ಕಸ್ಮೈಮಾಂ ದಾಸ್ಯಸೀತಿ|
ದ್ವಿತೀಯಂ ತೃತೀಯಂ ತಂ ಹೋವಾಚ ಮೃತ್ಯವೇ ತ್ವಾ ದದಾಮೀತಿ ||೪||
ಬಹೂನಾಮೇಮಿ ಪ್ರಥಮೋ ಬಹೂನಾಮೇಮಿ ಮಧ್ಯಮಃ|
ಕಿಂ ಸ್ವಿದ್ಯಮಸ್ಯ ಕರ್ತವ್ಯಂ ಯನ್ಮಯಾದ್ಯ ಕರಿಷ್ಯತಿ ||೫||
ಅನುಪಶ್ಯ ಯಥಾ ಪೂರ್ವೇ ಪ್ರತಿಪಶ್ಯ ತಥಾSಪರೇ |
ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವಾಜಾಯತೇ ಪುನಃ ||೬||
ವೈಶ್ವಾನರಃ ಪ್ರವಿಶತ್ಯತಿಥಿರ್ಬ್ರಾಹ್ಮಣೋ ಗೃಹಾನ್ |
ತಸ್ಯೈತಾಂ ಶಾತಿಂ ಕುರ್ವಂತಿ ಹರ ವೈವಸ್ವತೋದಕಮ್ ||೭||
ಆಶಾ ಪ್ರತೀಕ್ಷೇ ಸಂಗತಂ ಸೂನೃತಾಂ ಚೇಷ್ಟಾಪೂರ್ತೇ ಪುತ್ರ ಪಶೂಂಶ್ಚ ಸರ್ವಾನ್|
ಏತದ್ವೃಂಕ್ತೇ ಪುರುಷಾಸ್ಯಾಲ್ಪಮೇಧಸೋ
ಯಸ್ಯಾನಶ್ನನ್ ವಸತಿ ಬ್ರಾಹ್ಮಣೋ ಗೃಹೇ ||೮||
ತ್ರಿಸ್ರೋ ರಾತ್ರೀರ್ಯದವಾತ್ಸೀರ್ಗೃಹೇ ಮೇSನಶ್ನನ್ ಬ್ರಹ್ಮನ್ನತಿಥಿರ್ನಮಸ್ಯಃ |
ನಮಸ್ತೇSಸ್ತು ಬ್ರಹ್ಮನ್ ಸ್ವಸ್ತಿಮೇSಸ್ತು
ತಸ್ಮಾತ್ ಪ್ರತಿ ತ್ರೀನ್ ವರಾನ್ ವೃಣೀಷ್ಟ ||೯||
ಶಾಂತ ಸಂಕಲ್ಪಃ ಸುಮನಾ ಯಥಾ ಸ್ಯಾದ್-
ವೀತಮನ್ಯುರ್ಗೌತಮೋ ಮಾSಭಿ ಮೃತ್ಯೋ|
ತ್ವತ್ಪ್ರಸೃಷ್ಟಂ ಮಾSಭಿವದೇತ್ ಪ್ರತೀತ
ಏತತ್ ತ್ರಯಾಣಾಂ ಪ್ರಥಮಂ ವರಂ ವೃಣೇ ||೧೦||
ಯಥಾ ಪುರಸ್ತಾದ್ಭವಿತಾ ಪ್ರತೀತ ಔದ್ದಾಲಕಿರಾರುಣಿರ್ಮತ್ಪ್ರಸೃಷ್ಟಃ |
ಸುಖಂ ರಾತ್ರೀಃಶಯಿತಾ ವೀತಮನ್ಯುಸ್ತ್ವಾಂದದೃಶಿವಾನ್
ಮೃತ್ಯುಮುಖಾತ್ ಪ್ರಮುಕ್ತಮ್ ||೧೧||
ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ ನ ತತ್ರ ತ್ವಂ ನ ಜರಯಾ ಬಿಭೇತಿ|
ಉಭೇ ತೀರ್ತ್ವಾ ಅಶನಾಯಾಪಿಪಾಸೇ
ಶೋಕಾತಿಗೋ ಮೋದತೇ ಸ್ವರ್ಗ ಲೋಕೇ ||೧೨||
ಸ ತ್ವಮಗ್ನಿಂ ಸ್ವರ್ಗ್ಯಮಧ್ಯೇಷಿ ಮೃತ್ಯೋ
ಪ್ರಬ್ರೂಹಿ ತಂ ಶ್ರದ್ಧಧಾನಾಯ ಮಹ್ಯಮ್|
ಸ್ವರ್ಗ ಲೋಕಾ ಅಮೃತತ್ವಂ ಭಜಂತ ಏತದ್ದ್ವಿತೀಯೇನ ವೃಣೇ ವರೇಣ ||೧೩||
ಪ್ರ ತೇ ಬ್ರಮೀಮಿ ತದು ಮೇ ನಿಬೋಧ ಸ್ವರ್ಗ್ಯಮಗ್ನಿಂ ನಚಿಕೇತಃ ಪ್ರಜಾನನ್|
ಅನಂತಲೋಕಾಪ್ತಿಮಥೋ ಪ್ರತಿಷ್ಟಾಂ
ವಿದ್ದಿ ತ್ವಮೇತಂ ನಿಹಿತಂ ಗುಹಾಯಾಮ್ ||೧೪||
ಲೋಕಾದಿಮಗ್ನಿಂ ತಮುವಾಚ ತಸ್ಮೈ ಯಾ ಇಷ್ಟಕಾ ಯಾವತೀರ್ವಾ ಯಥಾ ವಾ|
ಸ ಚಾಪಿ ತತ್ ಪ್ರತ್ಯವದದ್ಯಥೋಕ್ತಮಥಾಸ್ಯ ಮೃತ್ಯುಃ ಪುನರೇವಾಹ ತುಷ್ಟಃ ||೧೫||
ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ ವರಂ ತವೇಹಾದ್ಯ ದದಾಮಿ ಭೂಯಃ |
ತವೈವ ನಾಮ್ನಾ ಭವಿತಾSಯಮಗ್ನಿಃ
ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ ||೧೬||
ತ್ರಿಣಾಚಿಕೇತಸ್ತ್ರಿಭಿರೇತ್ಯ ಸಂಧಿಂ ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ |
ಭ್ರಹ್ಮಜಜ್ಞಂ ದೇವಮೀಡ್ಯಂ ವಿದಿತ್ವಾ
ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ ||೧೭||
ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ ಯ ಏವಂ ವಿದ್ವಾಂಶ್ಚಿನುತೇ ನಾಚಿಕೇತಮ್|
ಸ ಮೃತ್ಯುಪಾಶಾನ್ ಪುರತಃ ಪ್ರಣೋದ್ಯ
ಶೋಕಾತಿಗೋ ಮೋದತೇ ಸ್ವರ್ಗಲೋಕೇ ||೧೮||
ಏಷತೇSಗ್ನಿರ್ನಚಿಕೇತಃ ಸ್ವರ್ಗ್ಯೋ ಯಮವೃಣೀಥಾ ದ್ವಿತೀಯೇನ ವರೇಣ|
ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಸ್ತೃತೀಯಂ ವರಂ ನಚಿಕೇತೋ ವೃಣೀಷ್ಟ||೧೯||
ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇSಸ್ತಿತ್ಯೇಕೇ ನಾಯಮಸ್ತೀತೀ ಚ್ಯೆಕೇ|
ಏತದ್ವಿದ್ಯಾಮನುಶಿಷ್ಟಸ್ತ್ವಯಾSಹಂ ವರಾಣಾಮೇಷ ವರಸ್ತೃತೀಯಃ ||೨೦||
ದೇವೈರತ್ರಾಪಿ ವಿಚಿಕಿತ್ಸಿತಂ ಪುರಾ ನ ಹಿ ಸುವಿಜ್ಞೇಯಮಣುರೇಷ ಧರ್ಮಃ|
ಅನ್ಯಂ ವರಂ ನಚಿಕೇತೋ ವೃಣೀಷ್ಟಿ
ಮಾ ಮೋಪರೋತ್ಸೀರತಿ ಮಾ ಸೃಜೈನಮ್ ||೨೧||
ದೇವೈರತ್ರಾಪಿ ವಿಚಿಕಿತ್ಸಿತಂ ಕಿಲ ತ್ವಂ ಚ ಮೃತ್ಯೋ ಯನ್ನ ಸುಜ್ಞೇಯಮಾತ್ಥ |
ವಕ್ತಾ ಚಾಸ್ಯ ತ್ವಾದೃಗನ್ಯೋ ನ ಲಭ್ಯೋ
ನಾನ್ಯೋ ವರಸ್ತುಲ್ಯ ಏತಸ್ಯ ಕಶ್ಚಿತ್ ||೨೨||
ಶತಾಯುಷಃ ಪುತ್ರ ಪೌತ್ರಾನ್ ವೃಣೀಷ್ಟ ಬಹೂನ್ ಪಶೂನ್ ಹಸ್ತಿ ಹಿರಣ್ಯಮಶ್ವಾನ್|
ಭೂಮೇರ್ಮಹದಾಯತನಂ ವೃಣೀಷ್ಟ
ಸ್ವಯಂ ಚ ಜೀವ ಶರದೋ ಯಾವದಿಚ್ಛಸಿ ||೨೩||
ಏತತ್ತುಲ್ಯಂ ಯದಿ ಮನ್ಯಸೇ ವರಂ ವೃಣೀಷ್ಟ ವಿತ್ತಂ ಚಿರಂಜೀವಿಕಾಂ ಚ |
ಮಹಾ ಭೂಮೌ ನಚಿಕೇತಸ್ತ್ವಮೇಧಿ ಕಾಮಾನಾಂ ತ್ವಾ ಕಾಮಭಾಜಂ ಕರೋಮಿ ||೨೪||
ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ
ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ |
ಇಮಾ ರಾಮಾಃ ಸರಥಾಃ ಸತೂರ್ಯಾ ನ ಹೀದೃಶಾ ಲಂಭನೀಯಾ ಮನುಷ್ಯೈಃ |
ಅಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ ನಚಿಕೇತೋ ಮರಣಂ ಮಾನುಪ್ರಾಕ್ಷೀಃ||೨೫||
ಶ್ವೋಭಾವಾ ಮರ್ತಸ್ಯ ಯದಂತತಕೈತತ್
ಸರ್ವೇಂದ್ರಿಯಾಣಾಂ ಜರಯಂತಿ ತೇಜಃ |
ಅಪಿ ಸರ್ವಂ ಜೀವಿತಮಲ್ಪಮೇವ ತವೈವ ವಾಹಾಸ್ತವ ನೃತ್ಯಗೀತೇ ||೨೬||
ನ ವಿತ್ತೇನ ತರ್ಪಣೀಯೋ ಮನುಷ್ಯೋಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ|
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ
ವರಸ್ತು ಮೇ ವರಣೀಯಃ ಸ ಏವ ||೨೭||
ಅಜೀರ್ಯತಾಮಮೃತಾನಾಮುಪೇತ್ಯ ಜೀರ್ಯನ್ ಮರ್ತ್ಯಃ ಕ್ವಧಸ್ತಃ ಪ್ರಜಾನನ್|
ಅಭಿಧ್ಯಾಯನ್ ವರ್ಣರತಿಪ್ರಮೋದಾನ್
ಅತಿದೀರ್ಘೇ ಜೀವಿತೇ ಕೋ ರಮೇತ ||೨೮||
ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್ ಸಾಂಪರಾಯೇ ಮಹತಿ ಬ್ರೂಹಿ ನಸ್ತತ್
ಯೋSಯಂ ವರೋ ಗೂಢಮನುಪ್ರವಿಷ್ಟೋ
ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ ||೨೯||
ಕಠೋಪನಿಷತ್ (ಕನ್ನಡ ಗೀತೆ) –ಮೊದಲೆನಯ ವಲ್ಲಿ
ವಾಜಸ್ರವಸನು ಫಲವನಾಶಿಸಿ ದಾನವೆಲ್ಲವನಿತ್ತನು
ಯಜ್ಞಗೈದನು ವಿಶ್ವಜಿತ್ತನು; ಅವನ ಮಗ ನಚಿಕೇತನು ||೧||
ಯಾಗ ಸಫಲಕೆ ಕೊಡಲು ದಕ್ಷಿಣೆ ಶ್ರದ್ಧೆ ಹೊಕ್ಕಿತು ಬುದ್ಧಿಯ
ಮುಗ್ಧ ಬಾಲಕ ಗೈದ ಚಿಂತನೆ; ಯಾವ ಕಾರ್ಯವು ಉತ್ತಮ ||೨||
ನೀರು ಹೀರದ ಹಾಲು ನೀಡದ ನಿಷ್ಪ್ರಯೋಜಕ ದನಗಳ
ದಾನ ನೀಡಲು ದಾನಿ ಪೊಗುವನು ನಂದವಿಲ್ಲದ ಲೋಕವ ||೩||
ಎಂದು ಮೆಲ್ಲನೆ ಕೇಳ್ದ ತಂದೆಯ ’ನನ್ನನೀಯುವೆ ಯಾರಿಗೆ?’
ಎರಡು ಬಾರಿಯು ಮೂರು ಬಾರಿಯು ಕೇಳೆ ನುಡಿದನು”ಮೃತ್ಯುಗೆ’ ||೪||
ನಾನು ಉತ್ತಮ ಬಹಳ ಜನರಲಿ ಮತ್ತು ಮಧ್ಯಮವಿರುತಲಿ
ಕಾರ್ಯವಾವುದು ಯಮನಿಗೀಯಲು ನನ್ನ ತಂದೆಗೆ ಇದರಲಿ ||೫||
ಹಿಂದೆ ತೋರಿದ ಮುಂದೆ ತೋರುವ ದಾರಿ ಯೋಚಿಸೆ ಎಂದಿಗು
ಸಸ್ಯದಂತೆಯೆ ಸತ್ತು ಜನಿಸುವ ನರನ ಜೀವನ ಸಂದಿತು ||೬||
(ಎಂದು ಯೋಚಿಸಿ ಮೃತ್ಯು ಲೋಕದಿ ಮೂರು ದಿನಗಳ ಕಾಯಲು)
ಅಲ್ಲಿ ನಿರಶನವಿದ್ದ ವಿಪ್ರನ ನೋಡಿ ಯಮ ತಾ ನೆನೆದನು)
ಅತಿಥಿ ಬ್ರಾಹ್ಮಣ ಅಗ್ನಿ ತೆರದಲಿ ಮನೆಯ ಪೊಗುವನು; ಎಚ್ಚರ!
ಶಾಂತಿಗೈಯಲು ಪಾದದೋದಕ ನೀಡು ತ್ವರೆಯಿಂ ಸ್ವಾಗತ ||೭||
ಕನಸು ಅಶೆಗಳಂತೆ ಸಜ್ಜನ ಸಂಗ ಸತ್ಪಲ ಪುತ್ರರು
ಸರ್ವನಾಶವ ಗೈವನಾತನು ಹಸಿದ ಬ್ರಾಹ್ಮಣ ಶತ್ರುವು ||೮||
(ತನ್ನ ತಪ್ಪನು ಮನ್ನಿಸೆನ್ನುತ ಯಮನು ಅತಿಥಿಗೆ ನುಡಿದನು)
ಮೂರು ರಾತ್ರಿಯು ಅನ್ನವುಣ್ಣದೆ ನನ್ನ ಮನೆಯೊಳ ಅತಿಥಿಗೆ
ನಮಿಪೆ ಬ್ರಾಹ್ಮಣ! ಮೂರು ವರಗಳನೀವೆ ನನ್ನಯ ಶ್ರೇಯಕೆ ||೯||
(ಶ್ರೇಯವೊಂದೇ ಮನದಿ ನೆನೆಯುತ ಮೃತ್ಯುವಿಗೆ ನಚಿಕೇತನು)
ಶಾಂತನಾಗಲಿ ತಂದೆ ಗೌತಮ ಕೋಪವಾರಲಿ ಪ್ರೀತಿಯು
ನಾನು ಮರಳಲು ಮೊದಲಿನಂತೆಯೆ ನಿನ್ನ ಬಳಿಯಿಂ ವರವಿದು ||೧೦||
(ಮುದದ ಮನದಲಿ ಯಮನು ನುಡಿದನು ಅತಿಥಿಯನು ಸಂತೈಸುತ)
ಮೃತ್ಯು ಮುಖದಿಂ ಮರಳಿ ನಿನ್ನನು ತಂದೆ ಗುರುತಿಸಿ ಹರುಷದಿ
ಕೋಪ ಹರಿಸುತ ಸುಖದ ನಿದ್ರೆಯ ನನ್ನ ದಯೆಯಿಂ ಪಡೆಯಲಿ ||೧೧||
(ಎರಡನೆಯ ವರವಿನ್ನು ಕೇಳುತ ಮೃತ್ಯುವಿಗೆ ನಚಿಕೇತನು)
ಸ್ವರ್ಗ ಲೋಕದಿ ಭಯವೆ ಇಲ್ಲದೆ ಮುಪ್ಪು ಮೃತ್ಯುವು ಕಾಣದು
ಹಸಿವೆ ದಾಹವನೆರಡಗೆಲ್ಲುತ ಶೋಕವಿರದಾನಂದವು ||೧೨||
ಮೃತ್ಯು ದೇವನೆ ಸ್ವರ್ಗದಗ್ನಿಯ ಪೇಳು ವಿಸ್ತರ ಬಗೆಯನು
ನಿಷ್ಟೆಯಿಂ ವರವ ಕೇಳ್ವೆನೆರಡನು ಉಣ್ಣಲಮೃತದ ಸುಖವನು ||೧೩||
(ಯಮನು ಆಲಿಸಿ ವಚನ ತೀರಿಸೆ ಅತಿಥಿ ಬ್ರಾಹ್ಮಣಗೆಂದನು)
ಸ್ವರ್ಗದಗ್ನಿಯ ಪೇಳುತಿರುವೆನು ಧ್ಯಾನದಿಂ ನಚಿಕೇತನೆ
ಬುದ್ಧಿಗುಹೆಯಲಿ ಪಡೆದು ಆಶ್ರಯ ಗ್ರಹಿಸು ಸ್ವರ್ಗದ ಸಾಧನೆ ||೧೪||
ಅಗ್ನಿ ಮೂಲವ ಇಡುವ ಇಟ್ಟಿಗೆ ವಿವರವರುಹಿದ ಯಾಗಕೆ
ಪಡೆದ ಉತ್ತರದಿಂದ ತುಷ್ಟನು ಮತ್ತೆ ಯಮ ನಚಿಕೇತಗೆ ||೧೫||
ಹರುಷದಿಂದಲಿ ಮರಳಿ ಪೇಳ್ದನು ವರವ ಪುನರಪಿ ನೀಡುವೆ
ನಿನ್ನ ಹೆಸರನು ಅಗ್ನಿಗಿಡುವೆನು; ಹಾರ ಬಹುವಿಧ ವೀಯುವೆ ||೧೬||
ಮೂರುಸಲ ನಚಿಕೇತ ಅಗ್ನಿಯ ಮೂರು ಸಂಧಿಯ ಕರ್ಮವ
ಗೈದು ಜಯಿಪರು ಜನ್ಮ ಮೃತ್ಯುವ ದೇವ ದಯೆಯಲಿ ಶಾಂತಿಯ ||೧೭||
ತಿಳಿದವನು ನಚಿಕೇತ ಯಜ್ಞವ ಮೃತ್ಯು ಜಯಿಪನು ಗೈಯುತ
ಶೋಕ ದಾಟುತ ಸ್ವರ್ಗ ಮಾರ್ಗದಿ ಪರಮ ಸಂತಸ ಹೊಂದುತ ||೧೮||
ಅಗ್ನಿಯಿದು ನಚಿಕೇತ ಸ್ವರ್ಗಕೆ ವರವನೆರಡಲಿ ತಿಳಿಸಿದೆ
ಅಗ್ನಿಯಿದ ನಚಿಕೇತನೆನುವರು; ಮೂರನೆಯ ವರ ನೀಡುವೆ ||೧೯||
(ಕೊನೆಯ ವರ ನಚಿಕೇತ ಕೇಳಿದ ಆತ್ಮ ತತ್ವ ವಿಚಾರವ)
ಕೆಲವರೆಂಬರು ಉಳಿವುದೆಂಬರು ಇನ್ನು ಕೆಲವರು ಉಳಿಯದು
ಸತ್ತ ನಂತರ ಸತ್ಯವಾವುದು ಮೂರನೆಯ ವರ ಕರುಣಿಸು ||೨೦||
ಮೃತ್ಯುವೆಂದನು ಧರ್ಮ ಸೂಕ್ಷ್ಮವು ದೇವತೆಗಳಿಗು ತಿಳಿಯದು
ಸೂಕ್ಷ್ಮ ತತ್ವವು ಗ್ರಾಹ್ಯ ಕ್ಲಿಷ್ಟವು; ಕೇಳು ಬೇರೆಯ ವರವನು ||೨೧||
(ಹಠವ ತೊರೆಯದೆ ಮುಗ್ಧ ಬಾಲಕ ಯಮನ ಬಳಿಯಲಿ ನುಡಿದನು)
ದೈವ ಚಿಂತನೆ ನಿಲುವಿಗೆಟಕದ ತತ್ವ ತಿಳಿಯರು ಇತರರು
ಯಮನೆ ಬೇಡುವೆ ವರವರೇಣ್ಯನೆ, ನನ್ನ ಇಷ್ಟದ ವರವಿದು ||೨೨||
(ಮನದ ದೃಢತೆಯನರಿವ ಪರಿಯಲಿ ಯಮನು ತೋರಿದ ಭೋಗವ)
ನೂರು ವರುಷವು ಪುತ್ರ ಪೌತ್ರರ ಆನೆ ಹಸುಗಳ ಹೊನ್ನನು
ಭೂರಿ ಭೂಮಿಯ ದೀರ್ಘದಾಯುವ ಸುಖದ ಬಯಕೆಗಳಾಶಿಸು ||೨೩||
ಇಷ್ಟ ಪಟ್ಟರೆ ಧನದ ರಾಶಿಯ ಚಿರದ ಜೀವನ ರಾಜ್ಯವ
ಕಾಮ ಕಾಮಿಪ ಭೋಗ್ಯವೆಲ್ಲವ ಕೇಳು ಕೊಡುವೆನು ಸಂಪದ ||೨೪||
ಭೋಗ್ಯವಾವುದು ಕಷ್ಟ ಲಭಿಸಲು ಹೇಳು ಮನಸಿನ ಇಚ್ಛೆಯ
ರಥಗಳಿಲ್ಲಿವೆ ರಮೆಯರಿಲ್ಲಿವೆ ವೀಣೆ ವಾದ್ಯವು ದುರ್ಲಭ
ನಿನ್ನ ಸೇವೆಗೆ ಸಿದ್ಧ ಬದ್ಧವು ಮರೆತು ಬಿಡು ನೀ ಮರಣವ ||೨೫||
(ಬುದ್ಧಿಯೊಳಗಡೆ ಶ್ರದ್ಧೆ ಕದಲದೆ ಪಟ್ಟು ಹಿಡಿದನು ಹುಡುಗನು)
ಅಂತ್ಯವಿರುವುದು ಕ್ಷಣಿಕ ಸುಖವದು ಸರ್ವ ಇಂದ್ರಿಯ ಹರಣವು
ಅಲ್ಪದಾಯುವು; ನೃತ್ಯಗಾನವು ನಿನ್ನೊಳಿರಲಿ ಇವೆಲ್ಲವು ||೨೬||
ಧನವನಾರ್ಜಿಸೆ ಬರದು ತೃಪ್ತಿಯು; ಧನವು ನಿನ್ನಯ ವ್ಯಾಪ್ತಿಯು
ಮನುಜ ಜೀವನ ನಿನ್ನ ದಾಸ್ಯವು; ನೀಡು ನನಗದೆ ವರವನು ||೨೭||
ಶಾಸ್ವತಾಮೃತವೊಲಿದು ಬಂದಿರೆ ಜೀರ್ಣದೇಹದ ಮನುಜನು
ದೀರ್ಘದಾಯುವು ಭೋಗ ಭಾಗ್ಯವು ಕೀಳು ಎಂಬುದ ತಿಳಿವನು ||೨೮||
ಮುಕ್ತ ಸಂಶಯದಿಂದ ಮನುಜಗೆ ಮುಕ್ತಿ ದಾರಿಯ ತೋರಿಸು
ಬೇರೆ ವರ ನಚಿಕೇತ ಕೇಳನು, ಮೃತ್ಯು ದೇವರೆ ಕರುಣಿಸು ||೨೯||
ಓಂ ಶಾಂತಿಃ ಶಾಂತಿಃ ಶಾಂತಿಃ
ದ್ವಿತೀಯ ವಲ್ಲಿ ಇನ್ನಾಣ ವಾರಕ್ಕೆ
ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ನಚಿಕೇತನ ಹಾಂಗೆ ಹಠ ಹಿಡುದರೆ ಜೀವನ್ಮುಕ್ತಿ ಸಿಕ್ಕುಗು 🙂
ಲಾಯಕ ಆಯ್ದಿದು. ಧನ್ಯವಾದ ಅಪ್ಪಚ್ಚಿಗೆ.
ಬುದ್ಧಿಗುಹೆಯಲಿ ಪಡೆದು ಆಶ್ರಯ ಗ್ರಹಿಸು ಸ್ವರ್ಗದ ಸಾಧನೆ 🙂 🙂
ಎಂಥಾ ಮಾತು..?? 😉
ಧನ್ಯವಾದ ಅಪ್ಪಚ್ಚೀ:)
ನಚಿಕೇತನ ಹಾಂಗೆ ಹಟ ಹಿಡಿದು ಕೇಳುವ ಗುಣ ಇಲ್ಲದ್ದರೆ ಅಧ್ಯಾತ್ಮ ಗೊಂತಾಗ.