| ಹರೇರಾಮ|
“ಎಳ್ಳು-ಬೆಲ್ಲ ತಿನ್ನಿ, ಒಳ್ಳೆದು ಮಾತಾಡಿ” ಹೇಳಿಗೊಂಡು ಗಟ್ಟದ ಮೇಗೆ ಆಚರಣೆ ಮಾಡ್ತ ಶೆಂಕ್ರಾಂತಿ ಇಂದು ಮತ್ತೊಂದರಿ ಬಂತು.
ಮಕರ ರಾಶಿಗೆ ಸೂರ್ಯ ಸಂಕ್ರಮಣ ಅಪ್ಪ ಈ ಮಕರ ಶೆಂಕ್ರಾಂತಿಯ ಗವುಜಿಲಿ, ಎಲ್ಲೋರಿಂಗೂ ಒಳ್ಳೆದಾಗಲಿ ಹೇಳ್ತ ಆಶಯ ನಮ್ಮದಿದ್ದು.
ಅಯ್ಯಪ್ಪ ವ್ರತಧಾರಿಗೊಕ್ಕೆ ಜ್ಯೋತಿ ಕಾಣಲಿ, ಒಳುದೋರಿಂಗೆ ಎಲ್ಲೋರಿಂಗೂ ಜೀವನ ಶೆಂಕ್ರಾಂತಿ ಕಾಣಲಿ – ಹೇಳ್ತದು ಬೈಲಿನ ಆಶಯ.
ಬೈಲಿನ ಲೆಕ್ಕಲ್ಲಿ ಎಲ್ಲೋರಿಂಗೂ ಶೆಂಕ್ರಾಂತಿ ಒಪ್ಪಂಗೊ..
Latest posts by Admin (see all)
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ಶುಭಾಶಯಂಗೊ…
ಎಲ್ಲರಿಗೂ ಮಕರ ಸಂಕ್ರಮಣದ ಶುಭಾಶಯ..
ಮಕರ ಸಂಕ್ರಾಂತಿಯ ಗುಜರಾತಿಗೊ ಉತ್ತರಾಯಣ್ ಹೇಳಿ ಬಹಳ ಸಂಭ್ರಮದ ಆಚರಣೆ ಮಾಡ್ತವು. ವಡೋದರಾ (ಬರೋಡ) ಮೊದಲಾದ ಪೇಟೆಗಳಲ್ಲಿ ಇಂದು ಉದಿಯಪ್ಪಗಳೇ ಎಲ್ಲರೂ ಟೇರೇಸು ಮೇಲೆ ಹೋದರೆ ಕತ್ತಲೆ ವರೆಗೂ ಗಾಳಿಪಟ ಹಾರುಸುವದು,ಚಿಕ್ಕಿ (ಶೇಂಗಾ ಬೆಲ್ಲದ ಬರ್ಫಿ) ತಿಂಬದು, ಬೇರೆಯವರ ಗಾಳಿಪಟ ತುಂಡು ಮಾಡ್ತ ಅತೀ ಎತ್ತರಕ್ಕೆ ಹಾರುಸುವ ಸ್ಪರ್ಧೆ ಇತ್ಯಾದಿ ಮಾಡ್ತವು. ಈ ಗಾಳಿಪಟದ ನೂಲು ತಯಾರಿ ಬಹಳ ದಿನಂದ ಹಿಂದೆಯೇ ಸುರು ಆಗಿರ್ತು..ಹಳೆ ಬರೋಡದ ಮಂಗಲ್ ಬಜಾರ್ ಏರಿಯಾಲ್ಲಿ ಅದರ ಬಿರುಸಾದ ತಯಾರಿಗೊ ಕಾಣ್ತು.
ಹಾ! ಅಲ್ಲಿ ಇಂದ್ರಾಣ ದಿನ ದ್ವಿಚಕ್ರ ವಾಹನ ಓಡುಸುದು ಅಪಾಯ..ಗಾಳಿಪಟದ ನೂಲು ಮಣ್ಣ ಬಲುಗಿ ಕೊರಳು ಕೊಯಿಕ್ಕೊಂಗು..
ಎಷ್ಟೋ ಹಕ್ಕಿಗಳುದೆ (ಮುಖ್ಯವಾಗಿ ಪಾರಿವಾಳ೦ಗೊ) ಗಾಳಿಪಟದ ನೂಲಿ೦ಗೆ ಸಿಕ್ಕಿ ರೆಕ್ಕೆ ಹರ್ಕೋಳ್ತವಾಡ. 🙁
ಧನ್ಯವಾದಂಗೊ, ಎಲ್ಲರಿಂಗೂ ಮಕರ ಸಂಕ್ರಾತಿಯ ಹಾರ್ದಿಕ ಶುಭಾಶಯಂಗೊ.
ಸಮಸ್ತರಿ೦ಗೂ ಶುಭವಾಗಲಿ.
|ಹರೇ ರಾಮ |
ಹರೇರಾಮ ಗುರಿಕ್ಕಾರ್ರೇ!
ಈ ಮಕರ ಸಂಕ್ರಾಂತಿ ಎಲ್ಲರ ಜೀವನ ಸಂಕ್ರಮಣ ಕಾಲವ ಬೆಲ್ಲದ ಹಾಂಗೆ ಚೀಪೆ ಮಾಡಲಿ..
ಈ ಪರ್ವ ಕಾಲ ಎಲ್ಲೋರಿಂಗೂ ಮಂಗಳ ತರಲಿ…
ಧನ್ಯವಾದಂಗೋ ನಿಂಗೊಗೆ.. 🙂
ಒಪ್ಪಣ್ಣ ತಾಣದ ಮೂಲಕವಾಗಿ ಸಮಾಜಲ್ಲಿ ಒಂದು ಸಂ-ಕ್ರಾಂತಿ ಉಂಟಾಗಲಿ… ಆ ಮೂಲಕ ಹವ್ಯಕರಿಂಗೆ ದೇಶ ಕಟ್ಟಿದ ಕೀರ್ತಿ ಸಿಗಲಿ… ಎಲ್ಲೋರಿಂಗೂ ಮಕರ ಸಂಕ್ರಾಂತಿಯ ಶುಭಾಶಯಂಗೋ…
ಬಯಲಿನ ಎಲ್ಲೋರಿಂಗೂ ಶುಭಾಶಯಂಗೊ..