Oppanna.com

ಆಟ ನೀರಾತು -ಭಾಮಿನಿಲಿ

ಬರದೋರು :   ಮುಳಿಯ ಭಾವ    on   01/02/2012    21 ಒಪ್ಪಂಗೊ

ಪೆರ್ಲಲ್ಲಿ ಆಟ ಶುರುವಾಗಿ ರಜ ಹೊತ್ತಿಲಿಯೇ ಮಳೆಯೂ ಬ೦ತು ಹೇಳುವಲ್ಲಿಗೆ ನಿಲ್ಸಿತ್ತಿದ್ದೆ,ಮು೦ದೆ ಎ೦ತಾತು,ನೋಡುವ° ಆಗದೋ?

ಓಡಿದವು ಒಳ ವೇಷಧಾರಿಗೊ
ಮಾಡಿನಡಿಲಿಯೆ ಸೇರಿ ನಿ೦ಬಲೆ
ಬಾಡಿ ಅಸ್ಕಿತ್ತೆನ್ನ ಮೋರೆಯು ಮಳೆಯ ಹನಿ ಬಿದ್ದು|
ಪಾಡು ವರ್ಣಿಸುಲೆಡಿಯ ಜೆನ ಪರ
ದಾಡಿದವು ಇರುಳಿಲಿಯೆ ಕೋಳಿಯ
ಗೂಡಿನಾ೦ಗಿದ್ದತ್ತು ಶಾಲೆಯ ಜೆಗುಲಿ ನೋಡಿದರೆ||

ಮ೦ಡೆ ನೆನದತ್ತ೦ದಿರುಳು ಕೆಮಿ
ಗೆ೦ಡೆ ಹೂಗರಳಿತ್ತು ಕಿಚ್ಚಿನ
ಉ೦ಡೆ ಮಾಲೆಪಟಾಕಿ ಬಾನಿಲಿ ಹೊಟ್ಟುವಗ ಬಿಡದೇ|
ಕ೦ಡೆ ಚೌಕಿಲಿ ವೇಷ ಬಿಚ್ಚುಸಿ
ಅ೦ಡು ವಸ್ತ್ರದ ಗೋಣಿ ತು೦ಬುಸಿ
ಚೆ೦ಡೆ ಬಳ್ಳಿಯ ಇಳುಶಿ ಚೀಲದ ಒಳವೆ ಕಟ್ಟೊದರಾ||

ಕೂಟ ಬಿರುದತ್ತ೦ದು ಸುತ್ತಲು
ನೋಟ ಬೀರಿದ ಮಾವ° ಕೇಳಿದ
ವಾಟ ನೀರಾತನ್ನೆ ಮಕ್ಕಳೆ ಇನ್ನು ಗೆತಿ ಎ೦ತ?|
ಪಾಟ ಶಾಲೆಯ ಖಾಲಿ ಜೆಗುಲಿಗೆ
ಓಟ ತೆಗದರೆ ಅಲ್ಲಿ ನುಸಿಗಳ
ಕಾಟ ತಡವಲೆ ಎಡಿಯ ಮನುಗಿರೆ ಒರಗಲೆಡಿಯಪ್ಪೋ !||

ಟೊಯ್ಯ° ಹೇಳುವ ನುಸಿಗೆ ಬೀಸಿದ
ಕೈಯ್ಯೆ ತಲೆಕೊ೦ಬಾತು ದರುಸುವ
ಮೈಯ್ಯ ಸುರುಟಿಯೆ ಶಾಲೆ ಜೆಗುಲಿಲಿ ಏಳು ಜೆನ ಮನುಗಿ|
ಸೊಯ್ಯ° ಬೀಸುವ ಚಳಿಯ ಗಾಳಿಗೆ
ಕುಯ್ಯ° ಕುಯ್ಯ°ನೆ ಸೊರವು ಹೆರಟ
ತ್ತಯ್ಯೊ ಆಟದ ಮರುಳು ಬಿರುದತ್ತನ್ನೆ ಓ ಮುಕುಟಾ||

ಒ೦ದು ಎರಡೂ ಮೂರು ನಾಕೈ
ದೆ೦ದು ಎಣುಸಿದ ತಲೆಗಳೇಳರ
ಚೆ೦ದ ನೆಗೆಲಿಯೆ ಭಾವ ಶಾಲೆಲಿ ಲೆಕ್ಕ ಕಲ್ತವನೇ|
ಮಿ೦ದ ಹೊತ್ತಾಗಿಕ್ಕು ಒರಗೆನ
ಗೊ೦ದರಿಯೆ ಆತೆಚ್ಚರಿಗೆ ಬ೦
ತೊ೦ದು ಸ೦ಶಯ ಸುತ್ತ ಪರಡಿರು ಕಾಣ ಆರನ್ನೂ!||

ಇದು ಒಳ್ಳೆ ಕತೆ,ಇವ್ವೆಲ್ಲಾ ಎನ್ನ ಬಿಟ್ಟಿಕ್ಕಿ ಎಲ್ಲಿಗೆ ಹೋದ್ಸು ?ಇನ್ನು ಆನೆ೦ತ ಮಾಡುತ್ಸು?? ಬೇಗ ಹೇಳ್ತೆ..

ಮುಳಿಯ ಭಾವ

21 thoughts on “ಆಟ ನೀರಾತು -ಭಾಮಿನಿಲಿ

  1. ‘ಆಟ ನೀರಾತು’…
    ಶುದ್ದಿ ಕೇಳಿ ಬೇಜಾರಾತು…
    ಮತ್ತೆ ಗೊಂತಾತು…
    ಕರುಣಾಮಯಿ ಪ್ರಕೃತಿ ಮಾತೆ ಎಂತ ಮಾಡಿರೂ ಒಳ್ಳೆದಾವುತ್ತು…

  2. ಭಾಮಿನಿ ಏವತ್ರಾಣ ಹಾಂಗೆ ರೈಸಿತ್ತದ. ಚಂಡಾಪುಂಡಿ ಆದ ವರ್ಣನೆ ಲಾಯಕಾತು. ಮಳೆ ನಿಂತು ಹೋದ ಮೇಲೆ ಆಟ ಪುನಃ ಸುರು ಅಪ್ಪಲಿದ್ದಾನೆ ಭಾವಯ್ಯ ? ಆಟ ಸುರುಮಾಡಿ ಆತೊ ?

  3. ಭಾಮಿನಿ ಓದಿ ಖುಷಿ ಆತು. ಎಡೆಲಿ ಆಟ ನೀರಾದ್ದು ಬೇಜಾರಾತು.
    ಎನಗೂ ಒಂದರಿ ಹೀಂಗೆ ಆಯ್ದು. ಕುರುಕ್ಷೇತ್ರ ಪ್ರಸಂಗ. ಅಭಿಮನ್ಯು ಯುದ್ದಕ್ಕೆ ಹೆರಡುವಗ ಮಳೆ ಸುರು ಆದ್ದು, ಆಟ ನಿಲ್ಸಿದ್ದಿಲ್ಲೆ, ಮತ್ತೆ ವರುಣದೇವ ಸೀದಾ ರಂಗಸ್ತಳಕ್ಕೆ ಬಂದ! ಅಲ್ಲಿಗೆ ಎಲ್ಲಾ ತಚ ಪಚ ಆಗಿ ಆಟ ನಿಂದತ್ತು.
    ಪುಣ್ಯಕ್ಕೆ ನುಸಿ ಇತ್ತಿಲ್ಲೆ

  4. [ಆಟದ ಮರುಳು ಬಿರುದತ್ತನ್ನೆ ಓ ಮುಕುಟಾ]- ಹೀಂಗೂ ಒಂದು ಇದ್ದಾ? 🙂
    ನೋಡಿದಷ್ಟು ಹೆಚ್ಚು ಅಪ್ಪದಲ್ಲದಾ 🙂
    ಎಂಗಳ ಅಂತೂ ಭಾಮಿನಿಲಿ ಮರುಳು ಮಾಡ್ತಾ ಇದ್ದೆ.
    ಮುಂದೆ ಆಟ ಸುರು ಆತು ಹೇಳಿ ಭಾಮಿನಿ ಮುಂದೆ ಸಾಗಲಿ.

  5. ರಘು ಭಾವ…
    ಆ ಭಾಮಿನಿ ನಿಂಗಳ ಕೈಲಿ ನಾಟ್ಯ ಮಾಡ್ತಾ ಇದ್ದು… ಮನಸ್ಸು ತುಂಬಿ ಬಂತು..
    ಭಾರಿ ಪಷ್ಟಾಯಿತು…
    ಭಾಮಿನಿ ಆರಾಧನೆ ಹೀಂಗೆ ಮುಂದುವರಿಯಲಿ….

  6. ಭಾರೀ ಲಾಯ್ಕಾಯಿದು ಮಾವ ಈ ಸರ್ತಿಯುದೇ..ಕುಮಾರ ಮಾವ ಹೇಳಿದಾ೦ಗೆ ಪುನಾ ಚೆ೦ಡೆ ಪೆಟ್ಟು ಕೇಳುಗೋ ? ಬೇಗ ಹೇಳಿಕ್ಕಿ..

  7. ಛೆ..ಹೀಂಗೂ ಅಪ್ಪದೋ..? ಮಳೆ ಬಂದುಗೊಂಡೇ ಇಕ್ಕೋ. ? ಆಟ ಮತ್ತೆ ಶುರುವಾಗದೋ..?
    ಇವ° ಪರಡಿಗೊಂಡಿಪ್ಪಗ ಚೆಂಡೆ ಪೆಟ್ಟು ಕೇಳುಗೋ.. ?
    ಉಮ್ಮಪ್ಪ.

  8. ರಘು ಭಾವಾ.. ಭಾಮಿನಿ ಸೂಪರಾಯಿದು. ಒಪ್ಪ೦ಗೊ.
    ಆನು ಸಣ್ಣಾದಿಪ್ಪಗ ಕಿಳಿ೦ಗಾರು ಶಾಲೆಲಿ ಆಟ ನೋಡ್ಲೆ ಹೋಗಿ ಹೀ೦ಗೆಯೇ ಮಳೆ ಬ೦ದದು ನೆ೦ಪಾತು, ಎರಡು ಪ್ರಸ೦ಗ೦ಗೊ. ಒ೦ದನೇ ಪ್ರಸ೦ಗ ಮುಗುದಪ್ಪಗ ಮಳೆ ಬ೦ದದು, ಎರಡ್ನೇ ಪ್ರಸ೦ಗ ತಾರಕಾಸುರ ವಧೆ. ಮಳೆಯೋ ಮಳೆ. ಎಲ್ಲರೂ ಶಾಲೆ ಜೆಗಿಲ್ಲಿ ನಿ೦ದದು, ಅರ್ಧ ಗ೦ಟೆಲಿ ಶಾಲೆಯ ಒಳವೇ ರ೦ಗಸ್ಥಳ ಮಾಡಿ ಆಟ ಪುನಃ ಸುರುಮಾಡಿ ಎ೦ಗೊ ಎಲ್ಲ ಉದಿಯಪ್ಪಗ ವರೇ೦ಗೆಯುದೆ ತಾರಕಾಸುರ ವಧೆ ನೋಡಿದ್ದದು ಎಲ್ಲ ಕಣ್ಣ ಮು೦ದೆ ಪುನಃ ಬ೦ದ ಹಾ೦ಗಾತು.
    ಇನ್ನು ಎ೦ತಾತು ಹೇಳಿ ಓದಲೆ ಕಾದುಕೂದೊ೦ಡಿದ್ದೆಯೊ°.

    1. ಇದಾ “ವಿಘ್ನ ಸಂತೋಷಿಗೊ” ಹೇಳೀರೆ ಹೀಂಗಿರ್ತವಿದಾ ಅಲ್ಲಿ ಆಟ ನೀರಾತು,ಇನ್ನು ಶಾಲೆ ಜೆಗುಲಿಲಿ ಬಿದ್ದು ವೊರಗುವ ಹೇಳೀರೆ ನುಸಿ ಟೊಯ್ಯ° ಹೇಳ್ತು ಇವಕ್ಕೆ ಸೂಪರಡ ಹಪ್ಪಾ ಆ ನುಸಿಯ ತಂದು ಇವರ ಮನೆಲೆ ಬಿಟ್ರೆ ಗೊಂತಕ್ಕು ಏವದು ಸೂಪರೂಳಿ…….

      1. ಆ ನುಸಿಯ ತನ್ನಿ ಭಾವ, ನೋಡ್ವ ಒ೦ದರಿ ಸಮಸ್ಯೆ ಎ೦ತರ ಹೇಳಿ. ಟೊಯ್ಯ° ಹೇಟೋ ಅದು? ನೋಡ್ವ. ಸರಿ ಮಾಡ್ವ.
        ಅದಪ್ಪು…. ಸೂಪರ್ ಆಯ್ದಿಲ್ಲೆ ಹೇಳಿ ಹೇಳೊದಾ ಹಾ೦ಗರೆ ಮಾವನ ಪದ? ಃ(

        1. (ಅದಪ್ಪು…. ಸೂಪರ್ ಆಯ್ದಿಲ್ಲೆ ಹೇಳಿ ಹೇಳೊದಾ ಹಾ೦ಗರೆ ಮಾವನ ಪದ?)- ಪದ ಸೂಪರಾಗದ್ದದು ಅಲ್ಲ ಮದ್ಯಲ್ಲಿ ಮಳೆ ಬಂದದ್ದು….. ಏಳನೇ ನುಸಿ ಇದ್ದನ್ನೆ ಅದು ಭಯಂಕರದ್ದು ಅದರ ಹಿಡುದಿಕ್ಕಲೆ ಮಣ್ಣ ಎಡಿಯಪ್ಪ…. ಹು!

  9. (ಕೋಳಿಯ
    ಗೂಡಿನಾ೦ಗಿದ್ದತ್ತು ಶಾಲೆಯ ಜೆಗುಲಿ ನೋಡಿದರೆ) 😀

    ಇದು ಲಾಯ್ಕಾಯ್ದು…..ಕೋಳಿಗ ಮಳೆ ಬಂದಪ್ಪಗ ಪರಡ್ಡುದು ನೆಂಪಾತು…:D

  10. ಮುಕುಟಾ.. ಹೇಳುವ ಉದ್ಗಾರ ಉಪಯೋಗಿಸಿದ್ದು ಈ ಭಾಮಿನಿಲಿ ಸರಿಯಾದ ಸಂದರ್ಭಲ್ಲಿ ಬೈಂದು.ಪದ್ಯ ಸರಳ ಸುಂದರ.

  11. ಸುತ್ತ ಪರಡಿರು ಕಾಣ ಆರನ್ನೂ-
    ಒಟ್ಟಿಂಗೆ ಮನುಗಿದವೆಲ್ಲ ನಿಂಗಳ ಬಿಟ್ಟಿಕ್ಕಿ ಹೋದ್ದೆಲ್ಲಿಗೆ?
    ಎಲ್ಲಿಗೆ ಹೇದರೆ ಅಲ್ಲಿಗೇ. ಆಗ ಆಟ ಆಗಿಂಡಿದ್ದಲ್ಲಿಂಗೇ..!

    ಒಂದಾರಿ ಸೊಯ್ಪ್ಪಿದ ಮಳೆ ನಿಂದು; ಬಾನು ತೆಳುದು ಅಲ್ಲಿ ಆಟ ಎರಡ್ನೆ ಸುರುವಾತಡ. ಅಪ್ಪೋ?
    ಉಮ್ಮಪ್ಪ! ಸತ್ಯ ಸಂಗತಿ ಎಂತರ ಹೇದು ನಿಂಗಳೆ ಹೇಳೆಕ್ಕಟ್ಟೇ..

    ಅಂತೂ ಭಾಮಿನಿ ಏವತ್ರಾಣಾಂಗೆ ರೈಸಿದ್ದು ಭಾವಾ..

  12. ಛೆ… ಒಳ್ಳೆ ಆಟ ರೈಸುಲೆ ಸುರು ಆದ್ಸಷ್ಟೆ.
    ಮಳೆ ಬಂತಾನೆ…?
    ಇನ್ನೆಂತ ಮಾಡ್ಸು?
    ಕಾದೊಂಡಿರ್ತೆಯೊ°…

  13. [ಅಲ್ಲಿ ನುಸಿಗಳ ಕಾಟ] [ಆಟದ ಮರುಳು ಬಿರುದತ್ತನ್ನೆ ಓ ಮುಕುಟಾ] – ನೈಜತೆಯಿಂದೊಡಗೂಡಿ ರೈಸಿದ್ದಯ್ಯಾ ರೈಸಿದ್ದು. ಕುತೂಹಲವೂ ಸ್ವಾರಸ್ಯವೂ ಆಗಿದ್ದು ಓದುಲೆ.

    ಭಾವ ಆ ಚಾಯದಂಗುಡಿ ಬೆಶಿ ಗೋಳಿಬಜೆ ತಣ್ಕಟೆ ಬ್ರೆಡ್ಡು ಬೀಡದಂಗುಡಿಯವು ಎಂತ ಮಾಡಿದವು?

    1. ಅದೆ೦ತ ಬ್ರೆಡ್ಡಿನವ್ವು ತಣ್ಕಟ್ಟೆ ಆದ್ದು? ಗೋಳಿಬಜೆಯೂ ತಣ್ಕಟ್ಟೆ ಇರ್ತು ಮಾವ!
      ಅದಿರಳಿ, ರಘು ಮಾವ೦ದು ಭಯ೦ಕರ ರೈಸುತ್ತಾ ಇದ್ದು.. ಇನ್ನು ಏಳನೆಯವ ಎ೦ತ ಮಾಡುಗಪ್ಪ? ಬೇಗ ಹೇಳಿ ಆತ, ನುಶಿ ಕಚ್ಚುತ್ತಾ ಇದ್ದು…

      1. ಅಲ್ಲಾ…. , ತಣ್ಕಟೆ ಬ್ರೆಡ್ಡಿಂಗೂ ಅರ್ಗೆಂಟುಮಾಣಿಗೂ ಎಂತ ಸಂಬಂಧ !! ಬೋಚಬಾವ ತಪಸ್ಸಿಂಗೆ ಕೂದಮತ್ತೆ ಅರ್ಗೆಂಟು ಬೈಲಿಂಗೆ ಇಳುದ್ದದು ಇಂದೇ !! ತಪ್ಪಸ್ಸಿನ ಉಸ್ತುವಾರಿ ಮತ್ತೂ ಇತ್ತೋ ಹೇಂಗೆ?!

        1. ಉಸ್ತುವಾರಿ ಇಲ್ಲೆಪ್ಪ! ಬೇರೆ ಅಣ್ಣ೦ದ್ರು ಇದ್ದೊವು ಇಲ್ಲಿ, ಆನು ಕರೆಲಿಪ್ಪೊದು… ತಣ್ಕಟೆ ಬ್ರೆಡ್ಡು ಎನಗೆ ಭಾರೀ ಇಷ್ಟ ಗೊ೦ತಿಲ್ಯಾ ಮಾವ?

  14. ಚೆ , ಹೇಳದ್ದೆ ಎದ್ದಿಕ್ಕಿ ಹೋದವೋ ಎಲ್ಲಿಗಪ್ಪಾ.. ಬೇಗ ಹೇಳಿಕ್ಕಿ
    ಆಟ ನೀರಾದ್ದಕ್ಕೆ ಬೇಜಾರಾತು ಭಾಮಿನಿ ಓದಿ ಕೊಶಿಆತು ಒಪ್ಪಂಗೊ…..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×