- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಾಲುಬಾಯಿ
ಬೇಕಪ್ಪ ಸಾಮಾನುಗೊ:
- 1 /2 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು)
- 1 ಕಪ್(ಕುಡ್ತೆ) ಕಾಯಿತುರಿ
- 1 – 1.25 ಕಪ್(ಕುಡ್ತೆ) ಕೆರಸಿದ ಬೆಲ್ಲ
- 2 ಏಲಕ್ಕಿ
- ಚಿಟಿಕೆ ಉಪ್ಪು
ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 3-4 ಘಂಟೆ ಬೊದುಳುಲೆ ಹಾಕಿ. ಬೊದುಳಿದ ಅಕ್ಕಿಯ ಲಾಯಿಕಲಿ ನೀರಿಲ್ಲಿ ತೊಳದು, ಕಾಯಿ, ಏಲಕ್ಕಿ ಎಲ್ಲ ಮಿಕ್ಸಿ/ಗ್ರೈಂಡರಿಂಗೆ ಹಾಕಿ, ಬೇಕಾಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಕೆರಸಿದ ಬೆಲ್ಲವ ಇದಕ್ಕೆ ಹಾಕಿ 1-2 ನಿಮಿಷ ಕಡೆರಿ. ಚಿಟಿಕೆ ಉಪ್ಪುದೆ, ಬೇಕಾಸ್ಟು ನೀರು ಹಾಕಿ ತೊಳಸಿ. (ಹಿಟ್ಟು ಹಾಲಿನಸ್ಟು ತೆಳ್ಳಂಗೆ ಇರಲಿ)
ಒಂದು ಬಾಣಲೆಯ ಬೆಶಿ ಮಾಡಿ, ಅದಕ್ಕೆ ಈ ಕಡದ ಹಿಟ್ಟಿನ ಹಾಕಿ, ದೊಡ್ಡ ಕಿಚ್ಚಿಲ್ಲಿ ಅದು ಗಟ್ಟಿ ಅಪ್ಪಲೆ ಸುರು ಅಪ್ಪನ್ನಾರ ತೊಳಸಿ. ಮತ್ತೆ ಸಣ್ಣ ಕಿಚ್ಚಿಲ್ಲಿ ಸಾಧಾರಣ 15-20 ನಿಮಿಷ ಅದು ಬಾಣಲೆಯ ತಳಂದ ಬಿಡುವನ್ನಾರ ತೊಳಸಿ.
ಇದರ ಒಂದು ತಟ್ಟೆ ಅಥವಾ ಬಾಳೆ ಎಲೆಗೆ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಚೆಟ್ಟೆ ಸೌಟಿಲ್ಲಿ ಹರಡಿ.
ಐದು ನಿಮಿಷ ಬಿಟ್ಟು, ಒಂದು ಪೀಶಕತ್ತಿಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೌಕಾಕಾರಕ್ಕೆ ತುಂಡು ಮಾಡಿ.
ತುಂಡಿನ ಬೇರೆ ಬೇರೆ ಮಾಡಿ, ಮೇಲಂದ ತುಪ್ಪ ಹಾಕಿ, ಬೆಶಿ ಬೆಶಿ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ningala lekhana nodi baili neeru bantu,americanda ammange phone madi haalu bai maadudu henge heli keludu tappittu.
ವೇಣಿಯಕ್ಕ ನಿ೦ಗಳ ಲೇಖನಲ್ಲಿ ಇಪ್ಪ ಪಟ೦ಗಳ ನೋಡಿಯೇ ಬಾಯಿಯ ರಜ್ಜ ಸೀವು ಮಾಡಿಗೊ೦ಡೆ….
ಮನೆಲಿ ಒ೦ದು ಸರ್ತಿ ಮಾಡೆಕ್ಕು……
ನ೦ಬದಿಗೆ ಇದ್ಕೆ ಮಣಗಡು ಹೇಳ್ತೊ..ಇದನ್ನ ಮಕರ ತಿ೦ಗಳಲ್ಲಿ (ಜನವರಿ ೧೪ ರಿ೦ದ ೧ ತಿ೦ಗಳು) ಹೆಣ್ಣುಮಕ್ಕಳನ್ನ ತಾಯಿ (ಅಪ್ಪನ ) ಮನೆಗೆ ಕರ್ದು ಮಾಡಿ ಬಡಿಸ್ತೊ…
ಎನಗೆ ಹಾಲು ಬಾಯಿ ಇ೦ದು ಎನ್ನಜ್ಜಿಗೆ ಭಯ೦ಕರ ಖುಶಿ ಆಯ್ದಿದು [:D] ಇದರ ಓದುವಗ ಬಾಯಿಲಿ ಹಾಲು ಬಪ್ಪೊದೊ೦ದು ಬಾಕಿ! ಹಾ೦ಗೊ೦ದು ಒಪ್ಪ. ಲಾಯ್ಕಾಯ್ದು..
ನಿನ್ನ ಕಾಣದ್ದಿಪ್ಪಗ ಕೈಬಾಯಿ ಅಂಟಿದ್ದೋ ಆತು ಒಂದರಿ… ಬಂದೆಯೋ!
ಹೋ!! ಬಾಯಿಲಿ ನೀರಿ ಬತ್ತು.
ಧನ್ಯವಾದ ಅಕ್ಕ… ಇದರ ಒ೦ದಾರಿ ಮಾಡೆಕು, ಸಮಕ್ಕೆ ತಿನ್ನೆಕ್ಕು.. 🙂
ಅಕ್ಕಿ,ತೆಂಗಿನಕಾಯಿ,ಬೆಲ್ಲ -ಈ ಮೂರು ಬಗೆ ಉಪಯೋಗಿಸಿ ಎಂತೆಲ್ಲಾ ಮಾಡಲೆ ಆವುತ್ತು,ಹೇಳಿ ಲೆಕ್ಕ ಹಾಕುದು ಆನು.ಲೇಖನ ಲಾಯ್ಕ ಆಯಿದು.ಮಣ್ಣಿ[ಹಾಲುಬಾಯಿ] ಲಾಯ್ಕ ಆದಿಕ್ಕು.
ಓ ವೇಣಿ ಅಕ್ಕಾ
ಪಷ್ಟಾಯಿದು..
ಹೀಂಗಿತ್ಸು ತಿಂಡಿ ಸಿಹಿ ಎಲ್ಲ ಯೇವಾಗ ಮಾಡ್ತು ಹೇಳಿರೆ ನವಗೂ ಸುಲಾಭ ಆಕ್ಕು..
ಮಾಡುಲಲ್ಲ.. ತಿಂಬಲೆ..
ಆಹಾ!! ಎನಗೆ ತು೦ಬಾ ಇಷ್ಟದ ತಿ೦ಡಿ ಇದು..ತಿನ್ನದ್ದೆ ಸುಮಾರು ಸಮಯ ಆಗಿತ್ತು.ಇದರ ಓದಿ ನೆನಪ್ಪಾತಿದ. ಅಮ್ಮನ ಹತ್ತರೆ ನಾಳೆ ಮಾಡಿಕೊಡ್ಳೆ ಹೇಳಿದ್ದೆ:-)
ಯೇ ದೀಪಿ ಅಕ್ಕಾ
ಹಾಲುಬಾಯಿ ಇದ್ದೋ ತಿಂಬಲೆ ಬಪ್ಪಲಕ್ಕೋ?
ಹಾಲುಬಾಯಿ ಆದರೆ ನಿಜವಾಗಿಯೂ ಇದ್ದು..ಮನೆಗೆ ಬನ್ನಿ ತಿ೦ಬಲಕ್ಕು 🙂
ಸುಲಭ, ಸರಳ, ರುಚಿ ಎಲ್ಲವೂ ಸೇರಿದ ಪಾಕ
ಪಷ್ಟಾಯಿದು.
sarlavagi sulabhavagiddu, dhanyavadagalu…
ಅಡಿಗೆಯ ಇಷ್ಟು ಸುಲಭಲ್ಲಿ ಹೇಳಿ ಕೊಡ್ಲೆ ಆವುತ್ತು ಹೇಳಿ ಈಗಳೇ ಗೊಂತಾದ್ದು 🙂
ಹಾಲು ಬಾಯಿ ಮಾಡುಲೆ ಹೇಳಿ ಕೊಟ್ಟದ್ದು ಲಾಯಿಕಾಯಿದು,
ಕಾಯಿ ತುರಿ ಅಂತೇ ಅಕ್ಕಿ ಕಡವಗ ಹಾಕುವ ಬದಲು ಕಾಯಿಹಾಲು ತೆಗದು ಅದರಲ್ಲಿ ಅಕ್ಕಿಕದಡದುದೇ ಮಾಡ್ತವಲ್ಲದೋ…..
ಸುಲಭ ಸ್ವೀಟ್ ಗಳಲ್ಲಿ ಇದೂ ಒಂದು ಅಪ್ಪೋ. ಕಡ್ಪ ಚೀಪೆಯೂ ಅಲ್ಲದ್ದೆ ಅಲ್ಪ ಬಾಯಿಗೂ ಅಂಟದ್ದೆ ಎಳ್ಪಕ್ಕೆ ತಿಂಬಲೆ ನವಗೂ ರುಚಿ ಹೇಳಿತ್ತು – ‘ಚೆನ್ನೈವಾಣಿ’