Oppanna.com

ವಾಷಿಂಗ್ ಮೆಶಿನೂ, ವ್ಯಾಕ್ಯೂಮ್ ಕ್ಲೀನರೂ…!

ಬರದೋರು :   ತೆಕ್ಕುಂಜ ಕುಮಾರ ಮಾವ°    on   08/02/2012    17 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

“ತಡವಾತೋ ಹೇಂಗೆ. ಇಲ್ಲಿ ತೋಟದ ಮನೆಗೆ ಬಂದರೆ ಯೇವಾಗಳೂ ಹಾಂಗೆ, ಗ್ರೇಶಿದ ಸಮಯಕ್ಕೆ ಹೆರಡುಲೆ ಅಪ್ಪಲೇ ಇಲ್ಲೆ.”

ಹೇಳಿಗೊಂಡು ಪಾರು ಇನ್ನು ಹೆರಡೆಕ್ಕಾರೆ ಮತ್ತೂ ಸಮಯ ಹಿಡಿಗು ಹೇಳ್ತ ಸೂಚನೆ ಕೊಟ್ಟತ್ತು. ಹೀಂಗೆ ಹೇಳಿಕ್ಕಿ, ಈಗ ಬತ್ತೆ ಹೇದು ಬೆಶಿನೀರ ಕೊಟ್ಟಗಗೆ ಹೋಗಿ, ವಾಪಾಸು ಬಪ್ಪಗ ಕಾಲು ಘಂಟೆಯೇ ಕಳುದ್ದು.

“ಎಷ್ಟು ಜಾಗ್ರತೆ ಮಾಡಿರೂ ಸಾಕಾವ್ತಿಲೆಪ್ಪ, ಈಗಾಣ ಕಾಲಲ್ಲಿ. ಎಲ್ಲ ದಿಕ್ಕೆ ಬಾಗಿಲು ಸರಿ ಹಾಕಿದ್ದೋ ಹೇಳಿ ನೋಡಿಕ್ಕಿ ಬಪ್ಪಗ ರಜ್ಜ ತಡವಾತು. ಇನ್ನು ಹೆರಡುವ° ಅಲ್ಲದೋ.?”

“ಒಂದು ಗ್ಲಾಸು ನೀರು ಕುಡುದಿಕ್ಕಿ ಈಗ ಬಂದೆ” ಹೇಳಿ ಒಳ ಹೋತು, ಪಾರು.

“ನಿಂಗೊಗೆ ನೀರು ಬೇಕೋ ? ” ಕೇಳಿಗೊಂಡು ಹೆರ ಬಪ್ಪಗ ಹದಿನೈದು ನಿಮಿಷವೇ ಕಳುದ್ದು .

ಈ ಸರ್ತಿ “ಅಟ್ಟೊಂಬಳಲ್ಲಿ ಒಂದು ಸುತ್ತು ಎಲ್ಲ ನೋಡಿಕ್ಕಿ ಬಂದದಿದ. ಹಾಂಗೆ ಎರಡು ನಿಮಿಷ ಹೆಚ್ಚಿಗೆ ಹಿಡುದತ್ತು. ” ಹೇಳಿತ್ತು.

ಮತ್ತೊಂದರಿ ಅಕೇರಿಗೆ ಸೀರೆ ನೆರಿಗೆ, ಸೆರಗೆಲ್ಲ ಸರಿ ಮಾಡಿ, ಕನ್ನಾಟಿಲಿ ಬೊಟ್ಟು ಸರಿ ಇದ್ದೋ ನೋಡಿಕ್ಕಿ ಮನೆ ಹೆರಡುವಗ ಇಪ್ಪತ್ತು ನಿಮಿಷವೇ ಹಿಡುದ್ದು.

ಇಂದು ಕೊಡೆಯಾಲಲ್ಲಿ  ಒಂದು ಉಪ್ನಾನದ ಹೇಳಿಕೆ ಇದ್ದತ್ತು. ಎನ್ನ ಹತ್ತರಾಣ ದೋಸ್ತಿ ಸತೀಶ, ಮಗನ ಉಪ್ನಾನಕ್ಕೆ ತಿಂಗಳ ಮದಲೇ ಹೇಳಿಕೆ ಕೊಟ್ಟಿತ್ತಿದ್ದ°. ಮುಹೂರ್ತಕ್ಕಪ್ಪಗ ಅಲ್ಲದ್ದರೂ, ಊಟಕ್ಕೆ ಮದಲೇ ಎತ್ತಿಗೊಂಬದು ಹೇಳ್ತ ಅಭಿಪ್ರಾಯಲ್ಲಿ, ಬೇಗ ಒಂಬತ್ತು ಘಂಟೆಗೆ ಹೆರಡುವ ಆಲೋಚನೆ ಮಾಡಿದ್ದತ್ತು.  ಹತ್ತು ಘಂಟೆಗೆ ಮದಲಾದರೂ ಹೆರಟರೆ ಆನು ಗ್ರೇಶಿದ ಸಮಯಕ್ಕೆ ಎತ್ತಿಗೊಂಬಲಕ್ಕು ಹೇಳ್ತ ಧೈರ್ಯಲ್ಲಿ  ಒಳ್ಳೆ ಕಸುಬುದಾರಿ ಡ್ರೈವರನ ಹಾಂಗೆ, ಹೇಳಿದ ಸಮಯಕ್ಕೆ ಆನು ತಯಾರಾಗಿ ಕೂದೆ. ಹೇಂಗಾರು ಇಂದು ಆ ಕೆಲಸ ಎನಗೇ ಒಪ್ಪುಸಿಕ್ಕಿ ಊರಿಂಗೆ ಹೋಗಿದ್ದತ್ತು, ಎನ್ನ ಯೇವತ್ತರಾಣ ಡ್ರೈವರು.

“ತಡವಾತೋ ಹೇಂಗೆ.?”

ಕಾರಿಲಿ ಕೂದಪ್ಪದ್ದೆ ಶುರು ಮಾಡಿತ್ತು, ಪಾರು. ಎನ್ನ ಉತ್ತರಕ್ಕೆ ಬೇಕಾಗಿಯಲ್ಲ, ಅದು ಹೇಳೆಕ್ಕು ಗ್ರೇಷಿದ್ದರ ಹೇಳುಲೆ ಪೂರ್ವತಯಾರಿ ಅಷ್ಟೆ.

“ಉದಿಯಪ್ಪಗ ಎದ್ದು ಎನ್ನ ಹಾಂಗೆ ಹೆಜ್ಜೆ ಉಣ್ತಿತ್ತರೆ ಬೇಗ ಆವುತಿತ್ತು. ಅದಾಗ ಹುಂ.! ನಿಂಗೊಗೆ ಕಾಪಿ ತಿಂಡಿ ಮಾಡಿಯಪ್ಪಗ ಹೊತ್ತಾತಿದ. ಅಲ್ಲದ್ದರೆ ಇಷ್ಟು ತಡ ಆವುತಿತ್ತೆಲೆ, ಎಂತ ಹೇಳ್ತಿ ?”

ಆನು ಎಂತ ಹೇಳೆಕ್ಕು, ಇದಕ್ಕೆ ?

ಡ್ರೈವಿಂಗ್ ಮಾಡಿಗೊಂಡಿಪ್ಪಗ ಚರ್ಚಾಸ್ಪದ ವಿಷಯ ಬಂದರೆ ಹೆಚ್ಚಾಗಿ ಆನು ಸುಮ್ಮನೆ ಕೂಪದು ಹೇಳ್ತ ಗುಟ್ಟು ಪಾರುಗೆ ಗೊಂತಿಪ್ಪ ಸಂಗತಿ. ಆ ಮೌನ ಎನ್ನ ಒಪ್ಪಿಗೆಯ ಲಕ್ಷಣ ಹೇಳಿ ತಿಳ್ಕೊಂಡರೆ ಅದು ಅದರ ಮನಸ್ಸಮಧಾನ ಅಷ್ಟೆ.!

ನಮ್ಮ ತೋಟದ ಮನೆಯ ನೋಡಿಗೊಂಡಿಪ್ಪ ಪಾರುಪತ್ಯೆಗಾರ, ಗೋವಿಂದಣ್ಣಂಗೆ ಮೂರೋ ನಾಕು ತಿಂಗಳಿಗೊಂದರಿ ರಜೆಲಿ ಹೋಯೆಕ್ಕಾರೆ ಎಂಗೊ ಇಲ್ಲಿ ಬಂದಿಪ್ಪದು ಕ್ರಮ. ದೊಡ್ಡ ಕೆಲಸ ಒಂದರಿಯಾಣದ್ದು ಮಾಡಿ ಆತು ಹೇಳಿಯಪ್ಪ ಸಮಯಲ್ಲಿ ಎರಡು ಮೂರು ದಿನ ರಜೆ ತೆಕ್ಕೊಂಬದು. ಎಂಗೊಗೂ ಇಲ್ಲಿ ಬಂದಪ್ಪಗ ದೊಡ್ಡ ಕೆಲಸದ ಹೊರೆಯೂ ಇರ್ತಿಲೆ.ಪೇಟೆ ಜೀವನಂದ ಹೆರ ಬಂದು ನವಗೂ ಹಳ್ಳಿ ಜೀವನದ ಮಧುರ ಅನುಭವವೂ ಸಿಕ್ಕಿದ ಹಾಂಗೆ. ಇಲ್ಲಿಪ್ಪಗ ಜೆಂಬ್ರಂಗೊ ಇದ್ದರೆ ಹೋಪಲೆ ಯೇವ ತೊಂದರೆಯೂ ಇರ್ತಿಲೆ. ಆದರೆ, ಪಾರುಗೆ ಇಲ್ಲಿ ಬಂದರೆ ಮನೆ ಹೆರಡೆಕ್ಕಾರೆ ಅಂತೆ ಆವುತ್ತಿಲೆ. ಎಲ್ಲವನ್ನೂ ನೋಡಿಗೊಂಡು, ಮನೆ ಕೆಲಸದ ಆಳುಗೊಕ್ಕೆ ಬೇಕಾದ್ದರ ಹೇಳಿಕ್ಕಿ, ಮನೆ ಒಳ ಹೆರ ಜಾಗ್ರತೆ ಮಾಡಿದಷ್ಟೂ ಮುಗಿತ್ತಿಲೆ. ಪೇಟೆಲಿಯಾದರೂ ಪಾರುವ ಹೆರಡಾಣ ಬೇಗ ಆವುತ್ತೋ, ಹಾಂಗೇನಿಲ್ಲೆ. ಯೇವುದಾರು ಕಾರ್ಯಕ್ರಮಕ್ಕೆ ಹೆರಡ್ಲೆ ಹೇಳಿರೆ ಪಾರುಗೆ ಯೇವ ಸೀರೆ ಸುತ್ತಿದರೂ ಸರಿ ಅಪ್ಪಲಿಲ್ಲೆ.

ಒಂದರಿ ನೆರೆಕರೆಲಿ ಒಂದು ಸತ್ನಾರಾಯಣ ಪೂಜೆಗೆ ನಾವು ದಂಪತಿಗೊ ಹೋಪದು ಹೇಳಿ ಇದ್ದತ್ತು. ಶುರುವಿಂಗೆ ಒಂದು ಸೀರೆ ಸುತ್ತಿದ್ದು, ನಾಲ್ಕು ವರ್ಷ ಮದಲು ತೆಕ್ಕೊಂಬಗ ಹೊಸತ್ತಿದ್ದರೂ ಈಗ ಹಾಂಗಿಲ್ಲೆನ್ನೆ. ಎನ್ನ ಅಭಿಪ್ರಾಯ ಹೇಳಿಯಪ್ಪದ್ದೆ ಬದಲ್ಸಿ ಹೊಸಾ ಪಟ್ಟೆ ಸೀರೆ ಸುತ್ತಿಗೊಂಡು ಬಂತು, ಪಾರು.

“ಇಷ್ಟು ಗೆನಾ ಸೀರೆ ಆಯೆಕ್ಕೋ.? ನಾವು ಹೋಪದು ಇಲ್ಲೇ ಹತ್ತರೆ ಪೂಜೆಗಲ್ಲದೋ ?”

ಆನು ಎನಗೆ ಕಂಡದರ ಹೇಳಿಯಪ್ಪದ್ದೆ, ಅದನ್ನೂ ಬದಲ್ಸಿ, ಅಕೇರಿಗೆ ಮನೆ ಹೆರಡುವಾಗ ತಡವಾಗದ್ದೆ ಇಕ್ಕೋ.?. ಅಂತೂ, ಇಂತೂ ಹೆರಟು ಕಾರ್ಯಕ್ರಮಕ್ಕೆ ಎತ್ತುವಗ ಯೇವತ್ರಾಣ ಹಾಂಗೆ ತಡವಾತು. ಅಕೇರಿಗೆ ತಡವಾದ್ದಕೆ ದೂರು ಎನಗೇಯ.

ಆನು ಹೀಂಗೆ ಯೋಚನೆ ಮಾಡ್ಯೊಂಡಿಪ್ಪಗ, ಪಾರು ಬ್ರೇಕ್ ಹಾಕಿತ್ತು.

“ಎಂತ..? ನಿಂಗೊ ಎಂತ್ಸರ ಆಲೋಚನೆ ಮಾಡ್ತದು ?’

” ಆನು ಡ್ರೈವಿಂಗ್ ಮಾಡುದಲ್ಲದೊ. ನಿನ್ನದೆಂತರ ಆಲೋಚನೆ ?”

” ಅಲ್ಲ, ಎನಗೆ ಒಂದು ಹಳೆ ಸಂಗತಿ ನೆಂಪಾತು ”

“ಹೂಂ..ಹೇಳು ”

” ಇದೇ ಸತೀಶಣ್ಣ ಅಲ್ಲದೊ, ಅವರ ಮದುವೆ ಸಮಯಲ್ಲಿ  ಎನಗೆ ಒಂದು ವಾಷಿಂಗ್ ಮೆಶಿನ್ನು ಬತ್ತು ಹೇಳಿಗೊಂಡು ಬಂದದು ಎಂಗಳಲ್ಲಿಗೆ ? ಎನಗೆ ಪಿಸುರು ಬಂದದು, ಮತ್ತೆ ಸಮಧಾನ ಮಾಡಿದ್ದು ಎಲ್ಲ ಗ್ರೇಶುವಗ ನೆಗೆ ಬತ್ತು.”

” ಹ್ಹ..ಹ್ಹ..ಹ್ಹಾ.! ನಿನಗೆ ಪಿಸುರು ಬಂದದು ಅವ° ಮದುವೆ ನಿಘಂಟಾದ ಶುದ್ದಿಯ ಫೋನು ಮಾಡಿ ಹೇಳಿಯಪ್ಪಗ”.

” ಅದಪ್ಪು”

ಪಾರುಗೆ ಯೇವಗಳೂ ಹಾಂಗೆ, ಕಾರಿಲಿ ಕೂದೊಂಡು ಹೋಪಗ ಆನು ತಳಿಯದ್ದೆ ಕೂದರೆ ಹಳೆ ಸಂಗತಿಗಳ ನೆಂಪು ಮಾಡಿಗೊಂಡಿಕ್ಕು. ಈ ಸಂಗತಿ ಆಗಿ ವರ್ಷ ಹದಿನೈದು ಕಳುದಿಕ್ಕು, ಸತೀಶನ ಮದುವೆ ನಿಘಂಟು ಆದ ಸಮಯದ್ದು. ಸತೀಶಣ್ನನಲ್ಲಿಗೆ ಎತ್ತುವನ್ನಾರ ಪಾರು ಆ ನೆಂಪಿಲಿ ತಳಿಯದ್ದೆ ಕೂದತ್ತು.

ಸತೀಶ ಎನ್ನ ಒಟ್ಟಿಂಗೆ ಕಲ್ತವ°. ಮಾತಾಡ್ಲೆ ಹೆರಟರೆ ತಮಾಶೆಗೆ ಬರ ಇಲ್ಲೆ. ಕಲ್ತು ಕೆಲಸಕ್ಕೆ ಸೇರಿದ ಮತ್ತೆ ಮನೆಯೋರ ಜೆಬಬ್ದಾರಿ ಇವನ ಹೆಗಲಿಂಗೆ ಬಂತು. ತಂಗೆ ಮದುವೆ ಆಗದ್ದೆ ತಾನು ಮದುವೆ ಆವುತ್ತಿಲೆ ಹೇಳಿ ಕೂದವಂಗೆ ಮದುವೆ ಅಪ್ಪಗ ಪ್ರಾಯ ಮೂವತ್ತೈದು ಕಳುದಿತ್ತು, ಅದೂ ಪೋರ್ಚೆಲಿ ನಡದ ಮದುವೆ. ಸಂಬಂಧ ನಿಘಂಟು ಆದ ಮತ್ತೆ ಫೋನು ಮಾಡಿ

“ಎನಗೆ ವಾಶಿಂಗ್ ಮೆಶಿನ್ ಬತ್ತು, ಬೇಗಲ್ಲಿ”  ಹೇಳಿದ°.

ಪಾರು “ಯೇವ ಕಂಪೆನಿದು, ಯೇವ ಮೋಡೆಲು” ಹೇಳಿ ವಿಚರ್ಸುಲೆ ಶುರು ಮಾಡಿತ್ತು. ಸತೀಶನ ಭಾಷೆಲಿ ವಾಷಿಂಗ್ ಮೆಶಿನು ಹೇಳಿರೆ ಹೆಂಡತ್ತಿಗೆ ಪರ್ಯಾಯ ಶಬ್ದ. ಇದು ಗೊಂತಾಗಿ ಪಾರುಗೆ ಪಿಸುರು ತಡವಲೆಡಿಯ. ಮತ್ತೊಂದರಿ ಮನೆಗೆ ಬಂದವನತ್ತರೆ ಕೇಳಿತ್ತು ಕೂಡ.  ಸತೀಶಂಗೆ ಎಲ್ಲವೂ ತಮಾಶೆಯೆ.

” ಓಯಿ ಅಕ್ಕ°, ಆನು ಇಷ್ಟ್ರವರೆಗೆ ಎನ್ನ ವಸ್ತ್ರ ಸ್ವತಃ ಒಗಕ್ಕೊಂಡಿದ್ದದು. ಇನ್ನು ಹೆಂಡತ್ತಿ ಬಂದ ಮೇಲೆ ಮೆಶಿನಿಂಗೆ ಹಾಕಿಯೇ ಆದರೂ, ಅದುವೆ ಅಲ್ಲದೋ ಒಗವದು. ಅದಕ್ಕೆ ಬೇಕಾಗಿ ಹಾಂಗೆ ಅಷ್ಟೆ. ನಿಂಗೊ ತಲೆ ಬೆಶಿ ಮಾಡೆಡಿ. ನಿಂಗಳಲ್ಲಿ ವ್ಯಾಕ್ಯೂಮ್ ಕ್ಲೀನರುದೆ ಇದ್ದು, ಅಪ್ಪೊ. ಅದರ ಮನೆ ಇಡೀ ಇವ° ಅಲ್ಲದೊ ತಿರುಗುಸುದು. ಅಂಬಗ ನಾವು ಗೆಂಡಂಗೆ ವ್ಯಾಕ್ಯೂಮ್ ಕ್ಲೀನರ್ ಹೇಳಿ ಹೆಸರು ಮಡಗುವನೋ.?”

ಪಾರುಗೆ ಸತೀಶನ ಮಾತು ಕೇಳಿ ನೆಗೆಯೋ ನೆಗೆ.

” ಅದೇ ಸರಿ, ವಾಶಿಂಗ್ ಮೆಶಿನ್ – ವ್ಯಾಕ್ಯೂಮ್ ಕ್ಲೀನರ್ ಹೇಳಿರೆ ದಂ-ಪತಿ ಹೇಳಿಯೆ ಅರ್ಥ ನವಗೆ, ಎಂತ ಹೇಳ್ತಿ ಅಕ್ಕ°”

~*~*~

 

17 thoughts on “ವಾಷಿಂಗ್ ಮೆಶಿನೂ, ವ್ಯಾಕ್ಯೂಮ್ ಕ್ಲೀನರೂ…!

  1. ಸ್ವಾರಸ್ಯಕರವಾಗಿದ್ದು.
    ಬಪ್ಪ ವಾಶಿಂಗ್ ಮೆಶಿನ್ ಗ್ರೈಂಡರ್ ಆಗಿ ಗ್ರೈಂಡ್ ಮಾಡದ್ದರೆ ಸಾಕು 🙂

  2. “ಉದಿಯಪ್ಪಗ ಎದ್ದು ಎನ್ನ ಹಾಂಗೆ ಹೆಜ್ಜೆ ಉಣ್ತಿತ್ತರೆ ಬೇಗ ಆವುತಿತ್ತು. ಅದಾಗ ಹುಂ.! ನಿಂಗೊಗೆ ಕಾಪಿ ತಿಂಡಿ ಮಾಡಿಯಪ್ಪಗ ಹೊತ್ತಾತಿದ. ಅಲ್ಲದ್ದರೆ ಇಷ್ಟು ತಡ ಆವುತಿತ್ತೆಲೆ, ಎಂತ ಹೇಳ್ತಿ ?” ಈ ಮಾತು ಸೂಪರ್ ಆಗಿತ್ತು. ಎಂತಾದರುದೆ ತಪ್ಪು ಗೆಂಡನದ್ದೆ ! ! ಸಹಜ ಸುಂದರ ಸಾಂಸಾರಿಕ ಕಥೆ. ಕಥೆಲಿ ಬಂದ ಪ್ರತಿಯೊಂದು ಘಟನೆಯುದೆ ಎಲ್ಲೋರ ಮನೆಲಿ ನೆಡವಂತಾದ್ದೆ. ವಾಶಿಂಗ್ ಮೆಶಿನ್ – ವ್ಯಾಕ್ಯೂಮ್ ಕ್ಲೀನರುಗಳ ಹೋಲಿಕೆ ಲಾಯಕಾತು. ಸುಖ ಸಂಸಾರದ ಮತ್ತೊಂದು ಗುಟ್ಟಿನ ಹೇಳಿದ ಕುಮಾರಣ್ಣಂಗೆ ಧನ್ಯವಾದಂಗೊ.

    1. ಸಂತೋಷ . ಬೊಳುಂಬು ಭಾವಂಗೆ ಧನ್ಯವಾದ

  3. * ಕಡೆ ವರೆಂಗು ವಾಶಿಂಗ್ ಮಶೀನು , ವಾಕೂಮು ಕ್ಲೀನರನ ಗುಟ್ಟು ಬಿಟ್ಟುಕೊಡದ್ದೇ ಹಾಸ್ಯ ಲೇಖನವನ್ನೂ ಪತ್ತೇದಾರಿ ಕಥೆಯೋ ಹೇಳಿ ಸಂಶಯ ಪಡುವ ಹಾಂಗೆ ಚಂದಕ್ಕೆ ಬರದ್ದಿ .

    * ವಿರಸ ಬಪ್ಪ ಹಾನ್ಗಿಪ್ಪ ಕ್ಷಣನ್ಗಳ ಸರಸ-ಸಲ್ಲಾಪಕ್ಕೆ ಪರಿವರ್ಥಿಸುದಲ್ಲಿಯೇ ದಾಂಪತ್ಯದ ಒಂದು ಗುಟ್ಟು ಇದ್ದು ಹೇಳಿ ಹೇಳುವಲ್ಲಿ ತೆ.ಕು. ಮಾವ ಯಶಸ್ವೀ ಆದ ಹಾಂಗೆ ಇದ್ದು ಈ ಲೇಖನ.

    * “ಡ್ರೈವಿಂಗ್ ಮಾಡಿಗೊಂಡಿಪ್ಪಗ ಚರ್ಚಾಸ್ಪದ ವಿಷಯ ಬಂದರೆ ಹೆಚ್ಚಾಗಿ ಆನು ಸುಮ್ಮನೆ ಕೂಪದು ಹೇಳ್ತ ಗುಟ್ಟು ಪಾರುಗೆ ಗೊಂತಿಪ್ಪ ಸಂಗತಿ. ಆ ಮೌನ ಎನ್ನ ಒಪ್ಪಿಗೆಯ ಲಕ್ಷಣ ಹೇಳಿ ತಿಳ್ಕೊಂಡರೆ ಅದು ಅದರ ಮನಸ್ಸಮಧಾನ ಅಷ್ಟೆ.!”— ಇದರಲ್ಲಿ ನಿನ್ಗೊಗೆ ಗೊಂತಿಲ್ಲದ್ದ ಒಂದು ಗುಟ್ಟುದೆ ಇದ್ದು. ಅದೆಂತರ ಹೇಳಿರೆ ………”ಅಬ್ಬ ಈಗಾದರೂ ಎನ್ನ ಮಾತು ಒಪ್ಪಿಗೊಂಡ ಹಾಂಗೆ ಮಾಡಿದವನ್ನೆ!!!” ಹೇಳಿ ಅತ್ತೆ ಮನಸಿಲಿಯೇ ಗ್ರೆಶಿಗೊಂಡ ವಿಚಾರ .ಅತ್ತೆ ಸೋತ ಹಾಂಗೆ ಮಾಡಿ ನಿಂಗಳ ಗೆಲ್ಲುಸಿದ್ದದು. ಹೊಸ ಸೀರೆ ತಂದು ಗುಟ್ಟಿಲಿ ಕೇಳಿರೆ ಅತ್ತೆ ಗುಟ್ಟು ಬಿಡುಗು. 😉

    1. ನಿಂಗಳ ಒಪ್ಪ ಓದಿ ಕೊಶೀ ಆತು.ಧನ್ಯವಾದ .

  4. ಹಹ್ಹಹ್ಹಾ ತುಂಬಾ ಲಾಯಿಕಾಯಿದು ಬರದ್ದು.
    ಲಾಯಿಕಲ್ಲಿ ಓದುಸಿಗೊಂಡು ಹೋತು.

  5. ಟೀಕೆ ಮಾವ – ಪಾರು ಅತ್ತೆಯ ಸರಸ ಸಲ್ಲಾಪಂಗೋ… ಹಾಸ್ಯ ರಸ ಮಿಶ್ರಿತವಾಗಿ ಓದುಲೇ ತುಂಬಾ ಖುಷಿ ಆವುತ್ತು…

  6. ವ್ಯಾಕ್ಯೂಮ್ ಕ್ಲೀನರ್ ಬರದ ವಾಶಿಂಗು ಮೆಶಿನಿನ ಶುದ್ದಿ ಪಶ್ಟಾಯಿದು ಹೇಳಿ ಒಂದೊಪ್ಪ.

  7. [ಕನ್ನಾಟಿಲಿ ಬೊಟ್ಟು ಸರಿ ಇದ್ದೋ ನೋಡಿಕ್ಕಿ] – ಅಪ್ಪಪ್ಪು . ಈಗೀಗ ಹೆಚ್ಚಿನ ಮನೆಗಳಲ್ಲಿ ಕನ್ನಟಿಲಿಯೇ ಇಪ್ಪದು ಬೊಟ್ಟು!!

    [ಅಕೇರಿಗೆ ತಡವಾದ್ದಕೆ ದೂರು ಎನಗೇಯ] – ಮತ್ತೆಂತಕ್ಕೆ ಮಾವ ಹೆರಡ್ಳಪ್ಪಗ ಒಂದೊಂದೇ ಕಿರಿಕಿರಿ ಮಾಡುತ್ಸು ನಿಂಗೊ ?!

    “ಕುಮಾರಮಾವ ಪಾರು ಅತ್ತೆ ಅಪರೂಪದ ಜೋಡಿ., ವಾಶಿಂಗ್ ಮೆಶಿನ್ ವ್ಯಾಕ್ಯೂಮ್ ಕ್ಲೀನರ್ ಭಲೇ ಹೊಸ ಜೋಡಿ” – ಹೇಳಿತ್ತು ‘ಚೆನ್ನೈವಾಣಿ’

    1. ಚೆನ್ನೈ ಭಾವಂಗೆ ಧನ್ಯವಾದ

    1. ಮೆಚ್ಚುಗೆಯ ಒಪ್ಪಕ್ಕೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×