Oppanna.com

ಚುಟುಕಂಗೊ..

ಬರದೋರು :   ರವಿಕುಮಾರ ಕಡುಮನೆ    on   04/03/2012    23 ಒಪ್ಪಂಗೊ

ಇದು ಆನು ಬರದ ಚುಟುಕಂಗೊ..ಕೋಲೇಜಿಂಗೆ ಹೋಪಗ ಹಿಡುದ ಅಭ್ಯಾಸ..ಒಂದಿನ್ನೂರು ಬರದಿತ್ತಿದ್ದೆ..ಅದರ ತಂಗೆ ತಂಗೆಯ ಫ್ರೆಂಡು ಕೇಳಿದ್ದು ಹೇಳಿ ಕೊಟ್ಟದು..ನಾಪತ್ತೆ…ಹಾಂಗೆ ಅಷ್ಟು ಚುಟುಕ ನಷ್ಟ ಆಗಿತ್ತು..ಮತ್ತೆ ಈಗ ಹೀಂಗೆ ಸಂಮುಖೀ(ಫೇಸ್ಬುಕ್ಕು) ಲಿ ಬರವಗ ಹೀಂಗೆ ಒಪ್ಪಣ್ಣಂಗೂ ತೋರ್ಸಿಕ್ಕುವ ಹೇಳಿ ಆತು.ಹಾಂಗೆ ಬರದ್ದು..

೧.ಚದುರಂಗ
“ಆಟದ ಚದುರಂಗ
ಯುದ್ಧದ ರಣರಂಗ
ಗೆದ್ದವ ನಿಜ ರಂಗ
ಸೋತವ ಬರಿ ಪೆಂಗ!”

೨.ರಾಜಕಾರಣಿ
ರಾಜ್ಯಾಧಿಕಾರಕ್ಕಾಗಿ ಗೆಲ್ಲುತ್ತ “ಜನಮನ”
ಜಯಗಳಿಸಲು ಮಾಡುತ್ತ “ನಮನ”
ಗೆದ್ದಮೇಲೆ ಅಭಿವೃದ್ಧಿಗೆ ಒಪ್ಪುತ್ತಿಲ್ಲೆ ಅವನ “ಮನ”
ಆರೇನೇ ಕೇಳಿದರೂ ಅವನ ಉತ್ತರ “ನ”…..!!

೩.ರಾಜಕಾರಣಿ
ಗೆದ್ದರೆ “ಟೀ ಪಾರ್ಟಿ”…
ಸೋತರೆ “ಆಂಟೀ ಪಾರ್ಟಿ”….!!

೪.ಮಾತು
ತಪ್ಪಲಾಗ ಮಾತಿನ ಟ್ರ್ಯಾಕ್ಕು
ತಪ್ಪಿದರೆ ಅಕ್ಕು ಮನಸ್ಸಿಗೆ ಕ್ರ್ಯಾಕ್ಕು..(ನೋವು)
ಇರೆಕ್ಕದಾ ಮಾತಿಲಿ,ನಡತೆಲಿ ಬ್ರೇಕು
ಬಾಯಿಗೆ ಸಿಕ್ಕದ್ದೇ ಬದುಕು ಬೇಕು…

೫.ಮದುವೆ
ಬೇಕೇಳಿ ಬಯಸುತ್ತವು ಮನಲ್ಲಿ
ಯಾಕೇಳಿ ಬೆಳೆಸುತ್ತವು ಮಾತಿಲಿ..!
ಆಗದ್ದರೆ ಇದ್ದ್ಹಾಂಗೆ ಕೋತಿ ವನಲ್ಲಿ..
ಆಗುವಿರೆ..ಬಿದ್ದ್ಹಾಂಗೆ ಭೀತಿ ಮನೆಲಿ…!!

೬.ಮಾರ್ಗ
ಕಾಸರಗೋಡು ಮಂಗಳೂರು ರೋಡು
ರೋಡಲ್ಲ ಮಳೆಗಾಲದ ತೋಡು…!
ಪಯಣಿಸಿ ಉಳಿದವಂಗೆ ಬೇಕು ಪಂಚಕರ್ಮ
ಸ್ವರ್ಗಕ್ಕೆ ತಲುಪಿದರೆ ಷಟ್ಕರ್ಮ…!!(ಬೊಜ್ಜ)

೭.ಮದುವೆ
ಮದುವೆ ಬೇಡಡ್ಡ ನಮ್ಮ ಗಂಡಿಗೆ
ಆದರೂ ತಾಳಿ,,! ಕಟ್ಟುವ “ಗುಂಡಿ”ಗೆ (ಗುಂಡ,ಗುಂಡಿ)
ಸಂಭಾಳುಸುಲೆ ಇರೆಕು ಗಟ್ಟಿ ಗುಂಡಿಗೆ
ತಾಳ್ಮೆ ಇದ್ದರೆ ಬೀಳೆಯಿ ಗುಂಡಿಗೆ..!!

೮.ತಾಳ್ಮೆ
ಬೇಸರಿಸೆಡಿ ಸುಮ್ಮನೆ ಮಾಡಿದೇ ಹೇಳಿ ಕಟಕಿ..
ಹಾರಿಹೋತೆಲ್ಲೋ..ಅದು…ಎನ್ನ ಹೃದಯವೊಂದು ಕಿಟಕಿ..!
ನಷ್ಟವಿದ್ದರೂ ಸುಡುತ್ತಿಲ್ಲೆಯೊ ಖುಷಿಗೆಂದು ಪಟಾಕಿ..
ಲಾಭಇದ್ದರೆ ಮಾಡಿ(ಮಾಡಲಿ)ಬಿಡಿ ಈ ರೀತಿ ಚಟಾಕಿ….!!

೯.ಸೈನಿಕ
ಕೃತಜ್ಞತೆ ಇರಲಿ ನಮ್ಮ ಜೀವನದಿ ದಾಟುಸುವ ಅಂಬಿಗರಿಂಗೆ…
ಕೊಡುತ್ತಿಲ್ಲೆ ನಾವೇನು ಆ ಶೌರ್ಯ ಸಾಮರ್ಥ್ಯಗಳ ಬೀಗರಿಂಗೆ..!
ಹೊಟ್ಟೆಪಾಡಿಂಗಾಗಿ ತಮ್ಮ ಶೌರ್ಯ ಪದಕಗಳ ಮಡುಗುತ್ತವು ಬಿಕರಿಗೆ…
ಕೇಳಿಗೊಳಿ ಆತ್ಮಸಾಕ್ಷಿಯ ಇದು ಶೋಭೆಯೇ ಭಾರತ ಸಭಿಕರಿಗೆ…?!!

೧೦.ಭೂಮಿ
ಭೂಮಿಯಿದು ಜೀವಜಲ ಜನ್ಯ..
ನೇಮಂದ ಸುರಿದರೆ ಪರ್ಜನ್ಯ..
ಸಮ್ಮಾನಅದು ಹಸಿದ ಜೀವಿಗೆ ಧಾನ್ಯ…
ಬ್ರಹ್ಮನೇ ಪರಿಶ್ರಮಿಗೆ ಕೊಡುವ ಪ್ರಾಧಾನ್ಯ,

೧೧.ಆಹಾರ ಮಿತಿ
ಒಮ್ಮೆ ಉಂಡವ ಯೋಗಿ.!
ಎರಡು ಬಾರಿ ಉಂಡವ ಭೋಗಿ..!!
ಮೂರು ಬಾರಿ ಉಂಡವ ರೋಗಿ..!!!
ನಾಲ್ಕು ಬಾರಿ ಉಂಡವನ ಹೊತ್ತುಗೊಂಡು (ಚಿತೆಗೆ) ಹೋಗಿ…!!!!

೧೨.ಧನಾತ್ಮಕ ಚಿಂತನೆ
ಕಟ್ಟುವಿರೆ ನಾಡಿನ ಹೆರ್ಕಿ ಈ ಜಗ..
ಕಟ್ಟುವುದು ಗೂಡಿನ ಹಕ್ಕಿ ಗೀಜಗ..!
ನಿಲ್ದಾಣ ಕ್ಷೇಮ ಸರಿ ವಿಮಾನಕ್ಕೆ..
ಹಾರದ್ದರೆ ಕ್ಷೋಭೆಯಲ್ಲದಾ ಮಾನಕ್ಕೆ…!!

೧೩.ರಸ್ತೆ
ಹಾಳಾಗಿ ಹೇಂಗಿದ್ದು..ನಮ್ಮ ರಸ್ತೆ..?
ಹೋಳಾಗಿ ಹೋಯಿದು ಇದು ದುರವಸ್ಥೆ…!
ಹೊಂಡದಲ್ಲಿ ಬಿದ್ದಪ್ಪಗ ಸರಕಾರಿ ರಸ್ತೆ ಸಾರಿಗೆ..
ತುಂಡಾಗಿ ಬಿದ್ಧಾಂಗೆ ತರಕಾರಿ ಚಪ್ಪೆ ಸಾರಿಗೆ….!!

೧೪.ಅಭಿರುಚಿ
ಅಣಕದ ಹಾಂಗಿದ್ದರೂ ಬೇಕು ಮೂರ್ಖರ ಪೆಟ್ಟಿಗೆ….
ಗಣಕ ಯಂತ್ರ ಸಾಕು ಬುದ್ಧಿವಂತರ ಮಟ್ಟಿಂಗೆ
ನೋಡುಲೆ ಚಂದ ತಿಳಿಗೇಡಿ ಕ್ರಿಕೆಟ್ ಒಟ್ಟಿಂಗೆ
ಆಡುಲೆ ಚದುರಂಗ ಬುದ್ಧಿಯ ಕಟ್ ನಿಟ್ಟಿಂಗೆ..!!

೧೫.ಉಪದೇಶ
ತಿಳಿದುಕೊಳ್ಳೆಡಿ ಲೋಕವ ಅರ್ಧಂಬರ್ಧ,
ಹಳಿದು ಕಳೆಯೆಡಿ ವಾಕ್ಯವ ಅಸಂಬದ್ಧ,
ಉಳಿದರೆ ಬೆಳೆಯುವಿ ಜನಕೆ ಬದ್ಧ,
ಬೆಳೆದರೆ ಹೊಳೆಯುವಿ ದಿನಕೆ ಪ್ರಬುದ್ಧ..!

೧೬.೪ ರೀತಿಯ ಚುಟುಕ
ಪರಿಸರಕ್ಕನುಸರಿಸಿ ಹೊಳೆತ್ತೊಮ್ಮೆ ಚುಟುಕ
ಕರಕರೆ ಮಾತಿಂಗೆ ಥಟ್ಟನೇ ಒಂದು ಮೊಟಕ..!
ಸರಿಯಾಗ ಹೇಳಿ ಅರ್ತಪ್ಪಗ ಕುಟುಕು..
ಪರಿಪೂರ್ಣ ಕೆಲಸಕ್ಕೆ ಜೀವಜಲ ಗುಟುಕು..

೧೭.ಕೃತಘ್ನತೆ
ತಿನ್ನದೇ ಸಾಧ್ಯವೆ ಅಬ್ಬೆ ನಿನಗಿವರ ಜೀರ್ಣಿಸುಲೆ..?
ನಿನ್ನ ಸಹನೆಯ ಆ ಸೋತೆ ವರ್ಣಿಸುಲೆ..
ಜನ್ಮಭೂಮಿಯೆ ಕೊಡುಶಕ್ತಿ ಕೃತಘ್ನರ ನಾಶಕ್ಕೆ ಗುಣಿಸುಲೆ…
ಪನ್ನಗದ ವಿಷ ಕಡಿಮೆಯಪ್ಪುದೆ ಹಾಲುಣಿಸುಲೆ..?

೧೮.ಸ್ವಭಾವ
ದ್ವೇಷಾಗ್ನಿಗೆ ದೂಡೆಡ ಚಾಡಿಯ ಕಟ್ಟಿಗೆ..
ವಶಬೀಳುವೆ ಒಂದೊಮ್ಮೆ ನೀ ಇಕ್ಕಟ್ಟಿಗೆ..
ಕಟ್ಟು ಪರಸ್ಪರರಲ್ಲಿ ನಂಬಿಕೆಯ ಇಟ್ಟಿಗೆ..
ಒಟ್ಟು ತುಂಬುವುದು ನಿನ್ನ ಪುಣ್ಯದ ಪೆಟ್ಟಿಗೆ..

೧೯.ಕೋಪ-ತಾಪ
ಹೆಚ್ಚಾಗಿ ತಾಪ ಹೋತು ಸುಟ್ಟು ಬೀರಿತ್ತು ಬೆಳಕು ನಾರಿತ್ತು ಹೊಗೆ ಉಳುಸಿತ್ತು ಬೂದಿ
ಹುಚ್ಚಾದ ಕೋಪ ಆತು ಸಿಟ್ಟು ಸೋರಿತ್ತು ಹುಳುಕು ಕಾರಿತ್ತು ಹಗೆ ಉಳುಸಿತ್ತು ಬೇಗುದಿ..

೨೦.ಭಿನ್ನರುಚಿ
ಅಮ್ಮ ಯಕ್ಷಗಾನಕ್ಕೆ ಬದ್ಧ
ಎನ್ನ ಇಷ್ಟ ಸಿನೆಮಕ್ಕೆ ಶುದ್ಧ..!
ಸಾಕು, ಬೇಡ ಹೇಳಿ ಒಂದೊಂದರಿ ವಿರುದ್ಧ..
ಬೇಕು ಬಿಡೆ ಹೇಳಿ ಸುಮ್ಮನೇ ಯುದ್ಧ..!!

~~~

23 thoughts on “ಚುಟುಕಂಗೊ..

  1. ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ನೆ೦ಪಾತು. ತು೦ಬ ಹಿ೦ದೆ ಓದಿದ್ದು. ನಿ೦ಗಳ ಪ್ರಯತ್ನ ಹೀ೦ಗೆ ಮು೦ದುವರಿಯಲಿ.

    1. ಧನ್ಯವಾದ… ಅಷ್ಟು ದೊಡ್ಡವಕ್ಕೆಲ್ಲಾ ಹೋಲಿಸೆಡಿ.. ಹೆದರಿಕೆ ಆವುತ್ತು..ಅವುದೇ,ಡುಂಡೀರಾಜರುದೇ ಎನಗೆ ಚುಟುಕಕ್ಕೆ ಪ್ರೇರಣೆ..

  2. ಚೆ, ತಂಗೆಯ ಕೈಗೆ ಕೊಟ್ಟು ಇನ್ನೂರು ಕವನ ನಷ್ಟ ಆತಾನೆ. ಕವನಂಗೊ ಲಾಯಕಿದ್ದು. ” ಜನಮನ ನಮನ ಮನ ನ” ರಾಜಕಾರಣಿಯ ಕವನ ಕೊಶಿ ಆತು. ಹೊತ್ಕೊಂಡು ಹೋಗಿ ಕವನ ಮದಲೇ ಕೇಳಿತ್ತಿದ್ದೆ. ಕವನಂಗೊ ಬೈಲಿಂಗೆ ಬತ್ತಾ ಇರಳಿ. ಹೇಳಿದ ಹಾಂಗೆ, ನಿಂಗಳ ಚೆಂದದ ಒಂದು ಫೊಟೊವುದೆ ಹಾಕಿಕ್ಕಿ.

    1. ಧನ್ಯವಾದ…ಭಾವಚಿತ್ರ ಹಾಕಿದ್ದೆ..ಫೇಸ್ ಬುಕ್ಕಿಲಿ ಯಾವಾಗಲೂ ಕನ್ನಡಲ್ಲಿ ಚುಟುಕ ಬರೆತ್ತಾ ಇದ್ದೆ..

  3. ಹರೇ ರಾಮ
    ಭಾರೀ ಲಾಯೆಕ್ಕ ಇದ್ದು

    ಧನ್ಯವಾದ

  4. {ಅಮ್ಮ ಯಕ್ಷಗಾನಕ್ಕೆ ಬದ್ಧ
    ಎನ್ನ ಇಷ್ಟ ಸಿನೆಮಕ್ಕೆ ಶುದ್ಧ..!}
    ಈಗೀಗ ಕೆಲವು ಸಿನೆಮ೦ಗಳ ಯಕ್ಷಗಾನಲ್ಲಿ ರೂಪಾ೦ತರ ಮಾಡ್ತಾ ಇದ್ದವು !ಕೆಲವು ಸಿನೆಮ೦ಗಳಲ್ಲಿ ಯಕ್ಷಗಾನದ ವೇಷ೦ಗಳನ್ನೂ ಕಾ೦ಬಲೆ ಸಾಧ್ಯ ಇದ್ದು.
    ಹಾ೦ಗಾಗಿ ಅಮ್ಮ-ಮಗ ಕಾಳಗ ಬೇಡ.ಯಕ್ಷಗಾನ ಇಪ್ಪ ಸಿಮನೆಮವನ್ನೂ,ಸಿನೆಮದ ಯಕ್ಷಗಾನವನ್ನೂ ನೋಡಿರೆ ಮುಗಾತು !
    ಚುಟುಕ೦ಗೊ ಲಾಯ್ಕ ಆಯಿದು.ಇನ್ನೂ ಬರಳಿ.

    1. ಧನ್ಯವಾದ…ಅದು ತಮಾಷೆಗೆ ಬರದ್ದಷ್ಟೇ..ಈಗ ಅಮ್ಮಂಗೆ ಟೀವಿ..ಎನಗೆ ಕಂಪ್ಯೂಟರು..!!

  5. ಲಾಯ್ಕ ಆಯಿದು[.ಒಮ್ಮೆ ಉಂಡವ ಯೋಗಿ]-ಇದು ಸ್ವಂತದ್ದೊ ಅಲ್ಲ ಸಂಗ್ರಹಿಸಿದ್ದೊ?

    1. ಧನ್ಯವಾದ…ಅದು ಆನೇ ಬರದ್ದು..(೧೦ ವರ್ಷ ಆತು..) ಬೇರೆ ಬರದ್ದವೋ? ಇದ್ದರೆ ಶೈಲಿ ಆದರೂ ಬೇರೆ ಇಕ್ಕನ್ನೇ..?

  6. { ತಂಗೆಯ ಫ್ರೆಂಡು ಕೇಳಿದ್ದು ಹೇಳಿ ಕೊಟ್ಟದು..ನಾಪತ್ತೆ…} – ಇಷ್ಟು ಲಾಯಕದ ಚುಟುಕಂಗೊ freeಲಿ ಸಿಕ್ಕಿರೆ ವಾಪಸ್ಸು ಕೊಡುದಿದ್ದೋ? 😉

    {ಇರೆಕ್ಕದಾ ಮಾತಿಲಿ,ನಡತೆಲಿ ಬ್ರೇಕು} – ಅಪ್ಪಪ್ಪು.. ವರ್ಷಾನುಗಟ್ಳೆ ಇದ್ದ ಪ್ರೀತಿಯ ಸಂಬಂದ ಮುರಿವಲೆ ಒಂದೇ ಮಾತು – ಒಂದೇ ಒಂದು ತಪ್ಪು ನಡೆ ಸಾಕಾವುತ್ತು.. ಮತ್ತೆಂದಿಂಗೂ ಅದು ಸರಿ ಆಗ… 🙁

    ಆಹಾರ ಮಿತಿ – ಐದು ಸರ್ತಿ ಉಂಡರೆ ತೊಂದರಿಲ್ಲೆನ್ನೆ ಹೇಳಿ ಬೋಸ ಭಾವ ಕೇಳಿರೆ ನವಗರಡಿಯ…

    ಮೆಚ್ಚಿದೆ.. 🙂
    ಅದೆಂತ ರವಿ ಭಾವನ ಫಟ ಇಲ್ಲದ್ದು ?

    1. ನಿಂಗಳ ಮೆಚ್ಚಿಕೆಯ ಎನ್ನ ಹೃದಯದೊಳ ಮಡುಗಿ ಮುಚ್ಚಿದೆ..!!
      ಧನ್ಯವಾದ…

  7. ಈಗ ಮರ್ಗ ಸರಿ ಅಯೊದು
    ಲಯಿಕ ಅಯಿದು
    ಕಾಸರಗೋಡು ಮಂಗಳೂರು ರೋಡು
    ರೋಡಲ್ಲ ಮಳೆಗಾಲದ ತೋಡು…!
    ಪಯಣಿಸಿ ಉಳಿದವಂಗೆ ಬೇಕು ಪಂಚಕರ್ಮ
    ಸ್ವರ್ಗಕ್ಕೆ ತಲುಪಿದರೆ ಷಟ್ಕರ್ಮ…!!(ಬೊಜ್ಜ)

    1. ಚುಟುಕ ಬರದ್ದು..ಆರು ತಿಂಗಳು ಮೊದಲು ಪ್ರದೀಪ ಭಾವ..ಹಾಂಗಾಗಿ ಇನ್ನು ಬದಿಯಡ್ಕ ಮಾರ್ಗ ದುರಸ್ತಿ ಅಪ್ಪನ್ನಾರ ಮುಳ್ಳೇರಿಯ-ಕುಂಬಳೆ ರೋಡು ಹೇಳಿ ಓದಿರಾತು..!!ಃ)

  8. ಚುಟುಕಂಗೊ ಒಂದಿನ್ನೂರ
    ಹಾಕುತ್ತಾ ಇರು ರವಿಕುಮಾರ
    ಬರೆತ್ತಾ ಇರು ಇನ್ನೂ ಒಪ್ಪ ಒಪ್ಪ
    ಕೊಡುತ್ತಾ ಇರುತ್ತೆಯ ಎಂಗ ಒಪ್ಪ

    1. ತುಂಬಾ ಧನ್ಯವಾದ ಜಯಶ್ರೀ ಅಕ್ಕ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×