Oppanna.com

ಆಹಾರ ಹಾಳು ಮಾಡೆಡಿ

ಬರದೋರು :   ಗೋಪಾಲಣ್ಣ    on   18/02/2012    19 ಒಪ್ಪಂಗೊ

ಗೋಪಾಲಣ್ಣ

ನಮ್ಮ ಆಹಾರ ಮಂತ್ರಾಲಯ ಮದುವೆ ಮುಂತಾದ ಸಮಾರಂಭಲ್ಲಿ ಪೋಲು ಮಾಡುವ ಆಹಾರ ವಸ್ತುಗಳ ಗಮನಿಸಿ,ಅಂತಾ ನಷ್ಟವ ತಡೆವ ಬಗ್ಗೆ ಆಲೋಚಿಸುತ್ತಾ ಇದ್ದು-ಇದು ಇಂದ್ರಾಣ ಸುದ್ದಿ.
ಕಾನೂನು ಮಾಡಿ ಆಹಾರ ವಸ್ತುಗಳ ನಷ್ಟವ ತಡೆವದು ಹೇಂಗೋ ಗೊಂತಿಲ್ಲೆ.
ನಮ್ಮವು ಅನುಪತ್ಯಂಗಳಲ್ಲಿ ಆಹಾರ ಹಾಳು ಮಾಡುದು ಕಾಂಬಾಗ ಬೇಜಾರ ಆವುತ್ತು.ಬೇಡ ಹೇಳಿದರೂ ಬಡುಸುದು,ಮಕ್ಕೊಗೂ ಎರಡು ಕೈಲು ಅಶನ ಹಾಕುದು,ಸಾರಿನ ಕೊದಿಲಿನ ತೋಡಿ ಹಾಕುದು ಎಲ್ಲಾ ನಡತ್ತು.ದೊಡ್ಡವೂ ಕೂಡಾ ರುಚಿ ನೋಡಲೆ ಹೇಳಿ ಎಲ್ಲಾ ಬಗೆ ಆಂತೊಂಬದು,ಅರ್ಧರ್ಧ ತಿಂದು,ಕಲಸಿ ಇಡುಕ್ಕುದು ಎಲ್ಲಾ ಜೆಂಬ್ರಲ್ಲೂ ಅವಿಚ್ಛಿನ್ನವಾಗಿ ನಡೆತ್ತು.ಅಗತ್ಯ ಇಲ್ಲದ್ದರೂ ನಾಕು ಬಗೆ ತಾಳು,ಚಟ್ನಿ,ಅವಿಲು,ಮೆಣಸುಕಾಯಿ-ಹೀಂಗೆ ಮಾಡಿಸುದು,ಎರಡೊ ಮೂರೊ ಸಿಹಿ ಮಾಡಿಸುದು,ಅದರ ಎಲ್ಲರಿಂಗೂ ವೋತಾಪ್ರ ಬಡಿಸಿಕೊಂಡು ಹೋಪದು -ಈ ತುಟ್ಟಿಯ ಕಾಲಲ್ಲಿ ಅದು ದೊಡ್ಡ ತಪ್ಪು.ಸಂಪ್ರದಾಯ ,ಮರ್ಯಾದೆ,ಅಂತಸ್ತು ಹೇಳುವ ಒಂದು ಭ್ರಮೆಲಿ ಸಿಕ್ಕಿ ನಾವು ಇದರ ಕಂಡೂ ಕಾಣದ್ದ ಹಾಂಗೆ ನಟಿಸುತ್ತಾ ಇದ್ದು! ಸಾಂಪ್ರದಾಯಿಕ ಪಂಕ್ತಿ ಭೋಜನ ಒಳ್ಳೆದೇ,ನವಗೆ ತೃಪ್ತಿ ಅಪ್ಪದು ಹಾಂಗೆ ಉಂಡರೆ ಮಾತ್ರ-ಎಲ್ಲಾ ಸರಿ.ಆದರೆ ದುಂದು ವೆಚ್ಚವ ,ಚೆಲ್ಲಿ ಹಾಳು ಮಾಡುದರ ತಪ್ಪಿಸಲೆ ನಾವು ಕ್ರಮ ತೆಕ್ಕೊಳದ್ದೆ ಆಗ.ಎರಡೆ ಬಗೆ ತಾಳು,ಅವಿಲು ಸಾಲದೊ?ಒಂದೇ ಸಿಹಿ,ಖಾರ ಸಾಲದೊ?ಆರಿಂಗೆ ಬೇಕೊ ಕೇಳಿಯೇ ಬಡಿಸುದು ಮಾಡಲೆ ಆಗದೊ? ನವಗೆ ಯಾವದು ಬೇಡದೊ ಅದು ಬಪ್ಪಾಗ ಕೈ ಅಡ್ಡ ಹಿಡಿಯೆಕು.ಬಡಿಸುವವು ಉಂಬವರಲ್ಲಿ ಆರು ಕೈ ಅಡ್ದ ಹಿಡಿತ್ತವೊ ಅವಕ್ಕೆ ಬಡಿಸಲೆ ಆಗ.
ಮಾಡಿಸುವವೂ,ಬಡಿಸುವವೂ,ಉಂಬವೂ ಈ ವಿಷಯವ ಗಮನಿಸಿ,ಹೊಂದಾಣಿಕೆ ಮಾಡಿಕೊಂಬದು ಅಗತ್ಯ.ಆರಿಂಗೆ ಎಲ್ಲಾ ಬಗೆ ಬೇಡದೊ,ಆರೋಗ್ಯದ ಕಾರಣಂದ ತಿಂಬಲೆ ಆಗದೊ ಅಂತವಕ್ಕೆ ಬಫೆ ವ್ಯವಸ್ಥೆಯೇ ಒಳ್ಳೆದು.
ಆಹಾರ ದೇವರ ಕೊಡುಗೆ,ಅನ್ನಂ ನ ನಿಂದ್ಯಾತ್ ಹೇಳಿ ಆರ್ಯೋಕ್ತಿ.ಅನ್ನ ಹಾಳು ಮಾಡುದು ಅನ್ನದ ನಿಂದೆಯೇ.ಅದರ ತಡೆವದು ಸಂಪ್ರದಾಯಕ್ಕೆ ವಿರೋಧ ಅಲ್ಲ.

19 thoughts on “ಆಹಾರ ಹಾಳು ಮಾಡೆಡಿ

  1. ಯೋಚನೆ ಮಾಡಿ ನಮ್ಮ ನಿತ್ಯಜೀವನಲ್ಲಿ ಅಳವಡಿಸೆಕ್ಕಾದ ವಿಷಯ.ಆಹಾರ ಹಾಳು ಮಾಡುಲೆ ಆಗ,ಒಳುದ್ದದರ ಇಡ್ಕದ್ದೆ ಹಶು ಹೊಟ್ಟೆಗೆ ಎತ್ತುಸುವ ಪ್ರಯತ್ನವನ್ನೂ ಮಾಡೇಕು.

  2. ಒಳ್ಳೆ ಚಿಂತನಾರ್ಹ ವಿಷಯ ಮಾವ. ಜೆಂಬ್ರಂಗಳಲ್ಲಿ ಅಂತೆ ಆಹಾರ ಹಾಳು ಮಾಡುವ ಬದಲು ಎಷ್ಟು ಬೇಕೋ ಅಷ್ಟೇ ಬಳುಸಿ, ಒಳುದ್ದದರ ಹತ್ರಲ್ಲಿಪ್ಪ ಅನಾಥಾಶ್ರಮಕ್ಕೊ, ಅಥವಾ ಆರಾರು ಪಾಪದೋರಿಂಗೊ ಮಣ್ಣ ಕೊಟ್ರೆ ನಮ್ಮ ಲೆಕ್ಕಲ್ಲಿ ಅವುದೇ ಪಾಯಸ ಉಂಡಾಂಗಾವುತ್ತು ಅಲ್ಲದಾ?

      1. ಮತ್ತೆ ಮನೆ ಎಜಮಾನ ಕಮ್ಮಿ ಬಳ್ಸಿ.. ಕಮ್ಮಿ ಬಳ್ಸಿ…, ಒಳುದ್ದರ ಅನಾಥಾಶ್ರಮಕ್ಕೆ ಕೊಡ್ಳೆ ಬೇಕು ಹೇಳ್ವ ಸ್ಟೈಲ್, ಪೈಪೋಟಿ ಸುರುವಕ್ಕಪ್ಪೋ!!!

          1. ಒಪ್ಪಣ್ಣ ಹೇಳಿಕೊಟ್ಟ ‘ಸಣ್ಣ ನೂರು’ ವಿಧಾನ ಎಲ್ಲ ಬಳಸಿಗೊಂಡು ನಾವೇ ಜೆಮ್ಬ್ರ ಸುಧಾರುಸುವ ಹಾಂಗೆ ಆದರೆ ಈ ಸಮಸ್ಯೆಗ ಎಲ್ಲ ತಕ್ಕ ಮಟ್ಟಿ೦ಗೆ ಪರಿಹಾರ ಅಕ್ಕೋ ಹೇಳಿ…

  3. ಸತ್ಯ… ಬಳುಸುವೋರು ಹೆಚ್ಚಾಗಿ ಫಂಕ್ಷನ್ ಮಾಡುವೋರಲ್ಲದ್ದ ಕಾರಣ ಬೇಡ ಹೇಳೀರೂ ಬಳುಸುದಾ ಏನಾ…

  4. ಹಂತಿಲಿ ಉಂಬಲೆ ಕೂದು, ಉಂಡ ಬಾಳೆಲೆಲಿ ಒಂದೆರಡು ಬೇವಿನ ಸೊಪ್ಪುದೆ, ಮೆಣಸಿನ ತುಂಡುಗಳ ಮಾಂತ್ರ ಬಿಟ್ಟು ಮೇಲೇಳುವಗ ಅಪ್ಪ ಕೊಶಿಯೇ ಬೇರೆ ಎಂತ ಹೇಳ್ತಿ ? ಜೆಂಬಾರಕ್ಕೆ ಮಾಡಿದ ಎಲ್ಲದರದ್ದು ರಜಾ ರುಚಿ ನೋಡಿ ಅಪ್ಪಗ ಹೊಟ್ಟೆ ತುಂಬುತ್ತು ಹೇಳ್ತವೇ ಈಗ ಎಲ್ಲೋರು. ಎಲ್ಲೋರೂ ವಿಚಾರ ಮಾಡೆಕಾದ ಒಂದು ಒಳ್ಳೆ ವಿಷಯದ ಬಗ್ಗೆ ಗೋಪಾಲಣ್ಣ ಬರದ್ದದು ಲಾಯಕಾಯಿದು.

  5. ಈ ವಿಶಯಕ್ಕೆ ನಮ್ಮದೂ ಒಂದು ಓಟು ಇದ್ದು….
    ನೇರ್ಪಕೆ ಉಂಬಲೆಡಿಯದ್ದರುದೇ ಕಂಡದು ಪೂರಾ ಬೇಕೂದು ಬಾಳೆಲಿ ಹಾಕುಸಿಗೊಂಡು ಅಂತೇ ಬಿಟ್ಟಿಕ್ಕಿ ಏಳುವವು ಎಷ್ಟೋ ಜೆನ ಇದ್ದವು…. ಹು!

  6. ಇಂದು ಹೆಚ್ಹು ಬಗೆ ಮಾಡಿರೆ ತಿಂಬ ಯೋಗ್ಯತೆ ಇಪ್ಪವೂ ಕಮ್ಮಿಯೆ.ಎಲ್ಲೊರೂ ಪಥ್ಯ ಮಾಡೆಕ್ಕಾದವೇ.ಒಂದೋ ತೂಕ ಜಾಸ್ತಿ ಅಪ್ಪಲಾಗ ಅಲ್ಲ ಬಿಪಿಯೋ ಡಯಬಿಟಿಸೋ ಇದ್ದ ಕಾರಣ ಡಾಕ್ಟ್ರ° ಹೇಳಿದ್ದ ಹೇಳಿಯೋ.ತಿಂಬ ಯೋಗ್ಯತೆ ಇಪ್ಪವು ಮಕ್ಕಳೇ ಸರಿ.ಆವು ಇಂದು ಜೆಂಬ್ರಂಗೊಕ್ಕೆ ಬತ್ತವಿಲ್ಲೆ,ಅಲ್ಲದೋ?

  7. ಮರ್ಜಿಗೆ ಬೇಕಾಗಿ ಕೆಲವರ ಹಲವು ಕರ್ಚಿಗೊಕ್ಕೆ ಕಡಿವಾಣ ಸ್ವಯಂ ಚಿಂತಿಸಿ ಮಾಡೆಕ್ಕಾದ್ದು ಅಗತ್ಯ ಇದ್ದು. ಬೈಲಿಲಿ ಈ ವಿಶಯ ಬೆಳಕು ಚೆಲ್ಲಿದ್ದು ಒಳ್ಳೆದಾಯಿತು. ಇದರ ಹಾಂಗೇ ಹಬ್ಬಹರಿದಿನ ಬಂತೆಂದರೆ ಪೇಟೆಗಳಲ್ಲಿ ನಡವ ಕುಂಬಳಕ್ಕಾಯಿ, ತೆಂಗಿನಕ್ಕಾಯಿ, ಸಿಹಿತಿಂಡಿ, ಪಟಾಕಿ, ಫಲಪುಷ್ಪಂಗಳ ಬಳಕೆಲಿಯೂ ಜನಂಗೊ ಸರಕಾರ ಸಮಾಜ ಚಿಂತುಸೆಕ್ಕಾಗಿದ್ದು. ಕೃಷಿ ಬವಣೆ, ಬಡತನ, ಖಜಾನೆ ಕಾಲಿ ಇತ್ಯಾದಿ ಬೃಹತ್ ಸಮಸ್ಯೆ ನಮ್ಮ ಕಣ್ಮುಂದೆ ಇಪ್ಪಗ ಸಮಾಜ ಬಾಂಧವರು ಕಾಳಜಿ ವಹಿಸಿ ಕಾರ್ಯಪ್ರವೃತ್ತರಾಯೇಕು. ಅಂತೇ ಮಾಡುವ ಇಂತೀ ಕರ್ಚುಗಳ ಹಿತಮಿತಿಗೆ ತಂದರೆ ದೇಶದ ಸಂಪತ್ತು ಉಳ್ಸಿ ಮುಂದಂಗೆ ವಿನಿಯೋಗಿಸೆಕ್ಕಾಗಿದ್ದು. ಬೈಲಿನ ಓದುಗರಾದ ನಮ್ಮೆಲ್ಲರಿಂಗೂ ಈ ಕರ್ತವ್ಯ ಪ್ರಜ್ಞೆ ಸದಾ ನೆಂಪಿರಳಿ ಹೇಳಿ ಆಶಿಸುವದು – ‘ಚೆನ್ನೈವಾಣಿ’

  8. ಒಳ್ಳೆ ವಿಚಾರ ಗೋಪಾಲ.
    ಎಲ್ಲರೂ ಈ ಬಗ್ಗೆ ಅಲೋಚನೆ ಮಾಡಿ ಕರ್ಯಗತ ಮಾಡೆಕಾದ್ದೇ.
    ಮಕ್ಕೊಗೆ ಮನೆಲಿ ಇದರ ಪಾಠ ಮಾಡೆಕ್ಕು. ಸಣ್ಣ ಇಪ್ಪಂದಳೇ, ಊಟ ಬಿಟ್ಟು ಹೋಪಲಾಗ ಹೇಳ್ತರ ಮನದಟ್ಟು ಮಾಡಿ ಅದರ ಜೀವನಲ್ಲಿ ರೂಢಿಮಾಡಿಸಿ ಬಿಡೆಕು.
    ಹಾಂಗೆ ನೋಡಿರೆ ಹವ್ಯಕರ ಜೆಂಬಾರಂಗಳಲ್ಲಿ (ಬೇರೆ ಬ್ರಾಹ್ಮರ ಊಟಕ್ಕೆ ಹೋಲಿಸಿರೆ) ಮಾಡುವ ಭಕ್ಷ್ಯಂಗೊ ಕಮ್ಮಿಯೇ ಹೇಳ್ಲಕ್ಕು.
    ಆದರೂ ಬಾಳೆ ಎಲೆಲಿ ಬಿಟ್ಟು ಹೋದ್ದವ ಕಾಂಬಗ ಬೇಜಾರು ಆವ್ತು.
    ಒಂದು ಕಾಳು ಒಳಿಶಿರೆ ಎರಡು ಕಾಳು ಬೆಳದ್ದಕ್ಕೆ ಸಮ ಹೇಳ್ತರ ಎಲ್ಲರೂ ಅರ್ಥೈಸಿಗೊಳೆಕ್ಕು.

    1. ಸರಿ.ನಾಲ್ಕೈದು ಸ್ವೀಟು ಮಾಡಿಸುವ ಬ್ರಾಹ್ಮರೂ ಇದ್ದವು.ಅವಕ್ಕೆ ಹೋಲಿಸಿರೆ ನಾವು ಸರಳ ಜೀವಿಗೊ.ಸಹೃದಯ ವಿಮರ್ಶೆಗೆ ಧನ್ಯವಾದ ಎಲ್ಲರಿಂಗೂ.

  9. ತುಂಬಾ ಒಳ್ಳೆ ಚಿಂತನೆ… “ಆಹಾರ ಹಾಳು ಮಾಡುದೂ,ಅಗತ್ಯಕ್ಕಿಂತ ಹೆಚ್ಚು ಸೇವಿಸುವುದು” ಎರಡುದೆ ನಾವು ಇನ್ನೊಬ್ಬರ ಆಹಾರವ ಕಸಿದುಗೊಂಡ ಹಾಂಗೆ…

  10. ಸತ್ಯವಾದ ಮಾತು ಮಾವಾ..
    ಇ೦ದ್ರಾಣ ಆಡ೦ಬರದ ಜಗತ್ತಿಲ್ಲಿ, ನಾವು ಕ೦ಡರೂ ಕಾಣದ್ದಾ೦ಗೆ ಮಾಡ್ತ ವಿಚಾರವ ಸರಿಯಾಗಿ ಚಿ೦ತನೆ ಮಾಡಿದ್ದಿ ಮಾವಾ.
    ಆಹಾರ ಮಿತವಾಗಿ ತೊಕ್ಕೊ೦ಡರೆ ಹಿತ..!!
    ನಿ೦ಗೊ ಹೇಳಿದಾ೦ಗೆ, ಇ೦ದು ಜ೦ಬ್ರಗಳಲ್ಲಿ ಒತ್ತಾಯ ಮಾಡಿ ಬಳುಸಿ ಹಾಳು ಮಾಡುದೇ ಹೆಚ್ಚು..!!

    ಒ೦ದು ಮುಷ್ಟಿ ಅಕ್ಕಿ ನಾವಗೆ ಸಿಕ್ಕೆಕಾರೆ, ಅದರ ಹಿ೦ದೆ ಪರಿಶ್ರಮ ಪಟ್ಟವು ಬೇಕಾಷ್ಟು ಜೆನ ಇದ್ದವು..

    ಅಕ್ಕೆಯ ಬೆಳೆದ ರೈತ,ಅವ೦ಗೆ ಬೆನ್ನು ಕೊಟ್ಟ ಎತ್ತು,
    ಅಕ್ಕೆಯ ಮಾರು ಕಟ್ಟೆಗೆ ತ೦ದ ಕೂಲೆ,
    ಅಕ್ಕೆಯ ಅ೦ಗಡಿ೦ದ ಮನೆಗೆ ದುಡುದು ತಪ್ಪ ಅಪ್ಪ..!
    ಅಕ್ಕೆಯ ಬೇಶಿ ತಿನ್ನುಸುವ ಅಬ್ಬೆ..!!

    ಹೀ೦ಗಿಪ್ಪ ಒ೦ದು ಸ೦ಕೋಲೆ ಇಪ್ಪಗ, ಅಶನ ಸುಮ್ಮನಾರು ಹಾಳು ಮಾಡುಲೆ ಮನಸ್ಸಾದರೂ ಹೇ೦ಗೆ ಬತ್ತೊ..! 🙁

    ಸುಮಾರು 40-50 ಗಳ ಹಿ೦ದ್ದೆ ಎನ್ನ ಅಜ್ಜ೦ದ್ರ ಕಾಲಲ್ಲಿ ಒ೦ದು ಹೊತ್ತು ಊಟಕ್ಕು ಕಷ್ಟ ಅಡಾ..!
    ಮೊದಲಿ೦ಗೆ ಹೀ೦ಗಿಪ್ಪ ಬಗೆ ಬಗೆಯ ಆಡ೦ಬರದೂಟ ಇತ್ತಿದ್ದಿಲ್ಲೆ ಅಡ, ಇದು ಇತ್ತೀಚಿಗೆ ಸುರುವಾದ್ದು ಹೇಳುತ್ತವು ಎನ್ನ ಅಪ್ಪ.. ಇ೦ದು ದೇವಸ್ತಾನ೦ಗಳಲ್ಲಿ ಇಪ್ಪ ಸಾಧಾರಣ ಊಟವೇ??,ಇ೦ದ್ರಾಣ ಅ೦ದ್ರಾಣ ಮೃಷ್ಟಾನ್ನ ಭೋಜನ ಅಡ?

    “ಅನ್ನದ ಬೆಲೆ ತಿಳಿಯೆಕಾದರೆ, ಅದರ ಕಳಕೊ೦ಡವರ ನೋಡಿತಿಳಿಯೆಕು.!” – ಹೇಳಿ ಎನ್ನ ಅಪ್ಪ ಹೇಳ್ತವು..

    |ಹರೇ ರಾಮ|

  11. ಎಲ್ಲೋರು ನೆಂಪಿಲಿ ಮಡಿಕ್ಕೊಳ್ಳೆಕ್ಕಾದ ಸಂದೇಶ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×