Oppanna.com

ಪಾತಿಅತ್ತೆಯ ದಾಸುವೂ, ಶುಬತ್ತೆಯ ರೋಸಿಯೂ..!!!

ಬರದೋರು :   ಒಪ್ಪಣ್ಣ    on   30/04/2010    22 ಒಪ್ಪಂಗೊ

ತರವಾಡುಮನೆಲಿ ದಿನ ಉದಿಯಾದರೆ ಪಾತಿಅತ್ತೆಗೆ ಕೆಲಸ ಸುರು!
ಮುನ್ನಾಣ ದಿನ ಇರುಳೇ ಒಲೆಲಿ ಮಡಗಿ, ತೆಯಾರಾಗಿದ್ದ ಮಡ್ಡಿಯನ್ನುದೇ, ಒಳುದ ಅಶನ ಇತ್ಯಾದಿ ಆಹಾರಂಗಳನ್ನೋ ಎಲ್ಲ ಪಾತ್ರಂಗಳಲ್ಲಿ ಹಿಡ್ಕೊಂಡು ಜಾಲಿಂಗಿಳಿಗು ಪಾತಿಅತ್ತೆ.
ಹಟ್ಟಿಎದುರೆ ಎಲ್ಲ ತಂದು ಮಡಗಿ, ಬೇರೆಬೇರೆ ಬಾಲ್ದಿಗಳಲ್ಲಿ ಸಮಪಾಲು ಮಾಡಿ ಎಲ್ಲ ದನಗೊಕ್ಕೆ ಕೊಟ್ಟು, ಮಾತಾಡುಸಿಗೊಂಬದರ್ಲೇ ಪಾತಿಅತ್ತೆಗೆ ಸಮಾದಾನ.ಅತ್ತೆ ಜಾಲಿಂಗಿಳುದ ಕೂಡ್ಳೇ ಜಾಲಕರೆಲಿ ಮನುಗಿದ ಕರಿ ನಾಯಿಗೆ ದಿನ ಸುರು!
ಇರುಳಿಡೀ ಜಾಲಿಲಿ ಮನುಗಿ ಮೈಗೆ ಹಿಡುದ ದೂಳಿನ ಕಟಕಟಕಟನೆ ಕುಡುಗಿ ಎದ್ದು ನಿಂಗು ಆ ಮನೆಯ ನಾಯಿ ದಾಸು!
ಅಕ್ಕಚ್ಚುಕೊಡುವ ಅಷ್ಟೂ ಹೊತ್ತು ಪಾತಿ ಅತ್ತೆಗೆ ಕಾಲಿಂಗೆ ತಾಂಟಿಗೊಂಡು ಇಕ್ಕು ಆ ನಾಯಿ.
ಮಡ್ಡಿಲಿ ತನಗೆ ತಿಂಬಲೆ ಎಂತದೂ ಸಿಕ್ಕುತ್ತಿಲ್ಲೆ ಹೇಳಿ ಗೊಂತಿದ್ದು, ಆದರೂ ಅದೊಂದು ಕೊಂಗಾಟಲ್ಲಿ ಕಾಲಡಿಂಗೆ ಸುತ್ತುದು.
ಪಕ್ಕನೆ ಕಾಲಿಂಗೆ ತಾಂಟಿದಾಂಗೆ ಆದರೆ ಪಾತಿ ಅತ್ತೆ ಬೈಗು – ’ದಾಸು.. ಎಲ್ಲಿಗೆ ನಿನ್ನ ಸವಾರಿ, ಕಾಲಡಿಂಗೆ’…
ಕೈಂಕ್ ಹೇಳಿಕ್ಕಿ ಒಂದರಿ ದೂರ ಹೋದರೂ, ಪುನಾ ಬಂದು ಮೊದಲಾಣ ಹಾಂಗೇ ಅಡ್ಡಡ್ಡ ಓಡುಗು.
ಕೆಮಿ ಅರಳುಸಿಗೊಂಡು ಅದು ಅತ್ತಿತ್ತೆ ಓಡುವಗ ಪಾತಿಅತ್ತೆಗೆ ಚೆಂದ ಕಾಂಬದು ಅದರ!
ಪಾತಿಅತ್ತೆ ಬಾಕಿ ಕೆಲಸಕ್ಕೆ ಮನೆ ಒಳ ಹೋದ ಕೂಡ್ಳೆ ದಾಸು ಪುನಾ ಜಾಲಕೊಡಿಂಗೆ ಬಂದು ಒರಗುದು ಮುಂದುವರುಸುಗು, ಬೆಶಿಲಿನ ಹದಾ ಬೆಶಿಗೆ!
ಇದು ನಿತ್ಯವೂ ಅಪ್ಪ ಘಟನೆ! ಈಗ ಪಾತಿಅತ್ತೆಗೂ ದಾಸುಗೂ – ಇಬ್ರಿಂಗೂ ಅಭ್ಯಾಸ ಆಯಿದು.
~ಬೆಂಗುಳೂರಿನ ಶುಬತ್ತೆಯ ಮನೆಲಿ ಒಂದು ನಾಯಿಕುಂಞಿ ಸಾಂಕಿದ್ದವು.
ಮಕ್ಕೊ ಎಲ್ಲ ದೊಡ್ಡ ಆಗಿ ಅವರವರ ಕೋಣೆಲಿ ಮನುಗುಲೆ ಸುರು ಮಾಡಿದ ಮತ್ತೆ, ಇರುಳು ಉರು ಅಪ್ಪದಕ್ಕೆ ಈ ನಾಯಿಯ ಕೊಂಗಾಟ ಮಾಡಿಗೊಂಡು ಹಾಸಿಗೆಲಿ ಮನುಗುಸುದಡ ಶುಬತ್ತೆ.
ದಿನ ಉದಿಯಾದರೆ ಶುಬತ್ತೆಗೆ ಮಕ್ಕಳ ಕೊಂಗಾಟ ಮಾಡಿ ಏಳುಸುವ ಕಾರ್ಯ ಇದ್ದಲ್ಲದೋ – ಹಾಂಗೆ ಹಾಸಿಗೆಂದ ಏಳುವಗ ನಾಯಿಕುಂಞಿಯ ಹೊದಕ್ಕೆ ಹಂದದ್ದ ಹಾಂಗೆ ಜಾಗ್ರತೆ ಮಡಿಕ್ಕೊಂಗು.
..ಮತ್ತೆ ಮಕ್ಕಳ ಕೊಂಗಾಟ ಮಾಡಿ, ಏಳುಸಿ ಆದ ಮತ್ತೆ ಮೆಲ್ಲಂಗೆ ಬಂದು ಮುದ್ದಿಲಿ ಏಳುಸುಗು – ರೋಸೀ..! ಹೇಳಿ.
ಸುರೂವಾಣ ಸರ್ತಿ ಏಳ ಅದು, ಉದಾಸಿನಾ ಹೇಳಿರೆ ಇನ್ನು, ಕೊಟ್ರಿದ್ದು..!
ಹೊದಕ್ಕೆ ತೆಗದು ಕೊಂಗಾಟಲ್ಲಿ ಬೆನ್ನು ಉದ್ದಿಯಪ್ಪಗ ಮತ್ತೆ ಏಳುಗು ಆ ರೋಸಿ, ಕರಿಮೋರೆಯ ಇಡೀಕ ಶುಬತ್ತೆಯ ಕೈಗೆ ಉದ್ದಿಗೊಂಡು.
ಅರೆ ಒರಕ್ಕಿಂದ ಏಳುವಗ ಶುಬತ್ತೆಗೆ ರೋಸಿಯ ಕೊಂಡಾಟ ಕೊಂಡಾಟ ಕಾಂಬದಡ!
ಒಂದರಿ ಮನೆ ಒಳದಿಕೆ ಇಡೀ ಸುತ್ತು chaussure nike pas cher ಬಂದಾದ ಮೇಲೆಯೇ ಅದಕ್ಕೆ ಸಮಾದಾನ!

~

ರಂಗಮಾವ° ಏಳುದು ರಜಾ ತಡವಾಗಿ.
ಮದಲಿಂಗೆ ಕಾಂಬುಅಜ್ಜಿಗೆ ಉದೆಕಾಲದ “ರಂಗನಾಯಕ ರಾಜೀವಲೋಚನ..” ಹಾಡು ಹೇಳಿ ಮುಗುದಿರ್ತು!
ಈಗ ಪಾತಿಅತ್ತೆಗೆ ಹಟ್ಟಿಕೆಲಸ ಕೆಲಸ ಆಗಿರ್ತು!
ಎದ್ದ ಕೂಡ್ಳೇ ಒಂದರಿ ಎಲೆ ತಿಂದು, ಬೈರಾಸಿನ ಮುಂಡಾಸು ಸುತ್ತಿ, ಕತ್ತಿ ಮಸಕ್ಕೊಂಡು ತೋಟಕ್ಕೆ ಹೋಕು.

ದಾಸು - ಅಡಕ್ಕೆ ಕಾವದು!!
ದಾಸು – ಅಡಕ್ಕೆ ಕಾವದು!! (ಪಟ ತೆಗದ ಒಪ್ಪಕ್ಕನ ಮೇಲೆ ಪಿಸುರು ಬಯಿಂದು!)

ಜಾಲಕರೆಲಿ ಮನುಗಿದ ದಾಸುವಿಂಗೆ ಪುನಾ ಎದ್ದು ಹೆರಡುವ ಕೆಲಸ.
ರಂಗಮಾವನ ನಿತ್ಯವೂ ಹೋಪ ದಾರಿಯ ನೆಂಪು ಮಡಗಿ, ಎರಡು ಮಾರು ಮುಂದಂದಲೇ ಹೋಪದು ದಾಸುವಿನ ಕ್ರಮ.
ಎಲ್ಯಾರು ದಾರಿ ತಪ್ಪುಸಿ ಹೋವುತ್ತರೆ ’ದಾಸು, ಅಲ್ಲಿ ಅಲ್ಲ, ಇಲ್ಲೆ..’ ಹೇಳುಗು, ದಾಸುಗೆ ಕೂಡ್ಳೇ ಗೊಂತಕ್ಕು.
ಅಂತೂ ಒಟ್ಟು ಏನಾರು ಕುಣುಕುಣು ಮಾಡಿಗೊಂಡು ಇಡೀ ತೋಟವ, ಗುಡ್ಡೆಯ ಒಂದರಿ ಸುತ್ತಿ ರಂಗಮಾವನ ಒಟ್ಟಿಂಗೆ ಪುನಾ ಮನೆಜಾಲಿಂಗೆ ಎತ್ತುಗು.

~

 

ಶುಬತ್ತೆ ಮಕ್ಕಳ ಏಳುಸಿ ಅವರ ಕೈಗೆ ಒಂದೊಂದು ಬೆಡ್ಡುಕಾಪಿ ಕೊಟ್ಟು ಅಪ್ಪಗ ಪ್ರಕಾಶಮಾವನ ವಾಕಿಂಗು ಮುಗುದಿರ್ತು.
ನಾಯಿ ಎದ್ದು ’ವಾಕಿಂಗಿಂಗೆ’ ತೆಯಾರಾಗಿರ್ತು.
ಯೇವತ್ತೂ ಇಪ್ಪ ಕೊರಳಪಟ್ಟಿಗೆ ಒಂದು ಸಂಕೊಲೆ ನಮುನೆದರ ಸಿಕ್ಕುಸಿಗೊಂಡು ಒಂದು ಸುತ್ತು ಮನೆಯ ಹತ್ತರಾಣ ಒರಿಂಕಿನ ಮಾರ್ಗಂಗಳಲ್ಲಿ ನೆಡಕ್ಕೊಂಡು ಹೋಕು.
ರೋಸಿಗೆ ನಾಯಿಜಾತಿಯ ಸಹಜ ಕ್ರಿಯೆಗೊ ಎಲ್ಲ ಮುಗುಶಿ ನೆಮ್ಮದಿ ಅಪ್ಪನ್ನಾರ ಪ್ರಕಾಶಮಾವಂಗೆ ನೆಮ್ಮದಿಯೇ ಇಲ್ಲೆ!
ಎಲ್ಲ ಆಗಿ ಮನಗೆ ಬಂದ ಮತ್ತೆ ಪ್ರಕಾಶಮಾವ ಮೀವಲೆ ಹೋಕು, ರೋಸಿ ಶುಬತ್ತೆಯ ಮೊಟ್ಟೆಗೆ ಹತ್ತಿ ಕೂದುಗೊಂಗು – ಹೆರಾಣ ಕಂದು ಸೋಪಲ್ಲಿ!

~

ತರವಾಡು ಮನೆಲಿ ಕಾಪಿ ರಜಾ ತಡವಾಗಿ.
ವಿದ್ಯಕ್ಕಂಗೆ ಬೇಗ ಎದ್ದರೆ ತಲೆಸೆಳಿತ್ತು!
ಶಾಂಬಾವ ಹೇಂಗೂ ಏಳುದು ತಡವು ಇದಾ!
ಶಾಂಬಾವ
° ಹದಾಕೆ ಎದ್ದು, ಮೋರೆ ತೊಳದು ಅಡಿಗೆ ಕೋಣೆಯ ಹತ್ತರೆ ಆಂಜುವಗಳೇ ಕಾಪಿಕುಡಿವಲೆ ತಯಾರಾಗಿರ್ತು.
ಅಂದಾಜು ಎಂಟೂವರೆ ಹೊತ್ತಿಂಗೆ ಕಾಪಿ ಕುಡಿತ್ತ ಕ್ರಮ. ರಂಗಮಾವಂದೇ, ಶಾಂಬಾವಂದೇ ಸುರೂವಿಂಗೆ ಕುಡಿಗು.
ಅಟ್ಟುಂಬೊಳದ ಪಡುಬಾಗಿಲಿನ ಹೊಸ್ತಿಲಿಂಗೆ ದಾಸು ಬಂದು ಮನಿಕ್ಕೊಂಗು. ಎಲ್ಲೊರಿಂಗೂ ಕಾಪಿ ಕುಡಿವನ್ನಾರ ಅದಕ್ಕೆ ಪುರುಸೊತ್ತು.
ವಿನುವಿನ ಶಾಲಗೆ ಹೆರಡುಸುದು ವಿದ್ಯಕ್ಕನ ಕೆಲಸ ಇದಾ!

ವಿನುವಿಂದು ಕಾಪಿ ಕುಡುದಾದ ಮತ್ತೆ ಅದೇ ಬಟ್ಳಿಲಿ ವಿದ್ಯಕ್ಕ ಮುಂದುವರುಸುಗು. ಎಲ್ಲೊರಿಂಗೂ ಆದಮತ್ತೆ ಪಾತಿ ಅತ್ತೆಗೆ – ತುಂಬ ಏನು ಬೇಕಾಗ ಬಿಡಿ!

ಪಾತಿ ಅತ್ತೆಗೆ ಕಾಪಿ ಕುಡುದು ಆದ ಮತ್ತೆ ಎಂಜಲು ತೆಗದು ಬಪ್ಪಗ ದಾಸುವಿಂಗೆ ಹಶು ಜೋರಪ್ಪದು!
ಮತ್ತೆ ತಡವಲೇ ಎಡಿಯ, ಬೊಬ್ಬೆಯೇ ಬೊಬ್ಬೆ! ’ಹ್ಮ್ ,ಆತಪ್ಪಾ.. ಗೊಂತಿದ್ದು..!’ ಹೇಳುಗು ಪಾತಿಅತ್ತೆ ನೆಗೆಮಾಡಿಗೊಂಡು.
ನಿನ್ನೇಣ ಅಶನ ಒಳುದ್ದಿದ್ದರೆ, ರಜಾ ಮಜ್ಜಿಗೆ ಹಾಕಿ, ಇಂದ್ರಾಣ ತಿಂಡಿ ರಜ್ಜ ಸೇರುಸಿ ಹೆರ ತಕ್ಕು.
ದಾಸುವಿನ ಅಶನದ ಕಲ್ಲು ಇದ್ದು ಒಂದು, ಅಗಾಲದ್ದು – ರಜ್ಜ ಗುಂಡಿದು!- ನಾಯಿಗೊಕ್ಕೆ ಕಲ್ಲಿಲಿ ಅಶನ ಹಾಕಿರೆ ಒಳ್ಳೆದಡ. ನಾಯಿಗೊ ಕಡ್ಪ ಆವುತ್ತವಡ – ನೆರಿಯದೊಡ್ಡಪ್ಪ ಯೇವಗಳೂ ಹೇಳುಗು.
ಕಲ್ಲಿಂಗೆ ಹಾಕಲೆ ಪುರುಸೊತ್ತಿಲ್ಲೆ, ಗಬಗಬನೆ ತಿಂದಾತು ದಾಸುವಿಂಗೆ! ಹಶು ಹೊಟ್ಟೆ ಇದಾ!!
ಉದಿಯಪ್ಪಗಾಣ ಪಲಾರ ಆತು ದಾಸುವಿಂಗೆ. ಇನ್ನು ಪುನಾ ಆರಾಮ!
ಜಾಲಿಲಿ ನೆರಳಿಪ್ಪ ಜಾಗೆ ನೋಡಿ ಮನಿಕ್ಕೊಂಡ್ರೆ, ಏಳುಸುವೋರಿಲ್ಲೆ ಅದರ!
~

ಚಪಾತಿಯೋ, ಚೌಚೌ ಬಾತೋ – ಹೀಂಗೆಂತಾರು ಪೇಟೆನಮುನೆ ತಿಂಡಿ ಮಾಡುಗು ಶುಬತ್ತೆ.
ಮಕ್ಕೊಗೆ ಊರಿನ ತಿಂಡಿಗೊ ಹಿಡಿತ್ತಿಲ್ಲೆ ಇದಾ!
ರೋಸಿಗೆ ಅದರ ಕೊಟ್ರೆ ಸರಿ ಜೀರ್ಣ ಆಗ. ಹಾಂಗೆ ೧೦ ಗಂಟೆ ಹೊತ್ತಿಂಗೆ ರೋಸಿಗೆ ಇಪ್ಪದರ ಬೇರೆಯೇ ಮಾಡುಗು.
ಡೋಗುಫುಡ್ ಹೇಳಿ ಪೆಕೆಟು ಸಿಕ್ಕುತ್ತಡ, ಅದರ ಹಾಕಿ ಎಂತದೋ ಒಂದು ಪಾಕ ಮಾಡಿ, ಪೇನಿನ ಗಾಳಿಗೆ ತಣುಶಿ ರೋಸಿಯ ಎನಾಮೆಲ್ ತಟ್ಟಗೆ ಎರವದು.
ಪಾಪ! ರುಚಿ ಆಯಿದೋ – ಇಲ್ಲೆಯೋ, ಹೇಳಿ ಶುಬತ್ತೆಗೆ ಅನುಸಿಹೋಕು!
ನಿದಾನಕ್ಕೆ ತಿನ್ನು ರೋಸಿ- ಹೇಳುಗು ಶುಬತ್ತೆ. ಹೇಳೆಕ್ಕು ಹೇಳಿ ಇಲ್ಲೆ – ರೋಸಿಗೆ ಅದು ನಿತ್ಯದ ಅಭ್ಯಾಸ.
ಸುಮಾರು ತಿಂದು ಹೊಟ್ಟೆ ತುಂಬಿರೆ ಮತ್ತೆ ಏನು ಮಾಡಿರೂ ತಿನ್ನ,
ಹಶು ಆದರಲ್ಲದೋ – ತಿಂಬದು!
ಶುಬತ್ತೆ ಒತ್ತಾಯ ಮಾಡುದು ನೋಡುವಗ ’ಸ್ವಂತ ಮಕ್ಕೊಗೆ ಉಣುಶಿದ ಹಾಂಗೆ ಅನುಸುತ್ತು’ ಹೇಳ್ತ ಅಜ್ಜಕಾನ ಬಾವ!
ಎಲ್ಲ ತಿಂದಾದ ಮೇಗೆ ಹೆರಾಣ ಸೋಪಲ್ಲಿ ಬಂದು ಮನಿಕ್ಕೊಂಡ್ರೆ ಆರುದೇ ಅದರ ಒರಕ್ಕು ಹಾಳುಮಾಡುವೋರು ಇಲ್ಲೆ!

~

 

ತರವಾಡು ಮನೆಗೆ ನಿತ್ಯ ಹೋಪೋರು –ಬಪ್ಪೋರು ಧಾರಾಳ.

ಪ್ರತೀ ಸರ್ತಿ ಬಪ್ಪಗಳೂ ಈ ದಾಸು ಒಂದರಿ ತಲೆ ಎತ್ತಿನೋಡುಗು. ಗುರ್ತ ಇದ್ದರೆ ಪರಿಚಯು ಇಪ್ಪ ಕೊರಪ್ಪಾಟಿಗೆ. ಹೊಸಬ್ಬರು ಬಂದರೆ ರಾಮಾ – ಬಯಂಕರ ಬೊಬ್ಬೆ!
ಕೆಮಿ ಹರಿವ ಹಾಂಗೆ ಕೊರಪ್ಪುಗು. ರಂಗಮಾವನೋ, ಪಾತಿಅತ್ತೆಯೋ ಮಣ್ಣ ಬಂದು, ’ಹಾಂ, ಬನ್ನಿ’ ಹೇಳಿದ ಮತ್ತೆಯೇ ನಿಲ್ಲುಸುಗು.
ಅಡಕ್ಕೆ ಜಾಲಿಲಿ ಹರಗಿದ ಸಮಯಲ್ಲಿ ಅಂತೂ, ಇಡೀ ಸೊತ್ತಿನ ಅಧಿಪತಿಯ ಹಾಂಗೆ ವರ್ತನೆ ಮಾಡುಗು.

ಹೊಸಬ್ಬರು ಪಕ್ಕನೆ ಜಾಲಕರೆಲೆ ನಾಕೈದು ಸರ್ತಿ ಹೋದರೆ ಘುರೂ….ಹೇಳುಗು, ಜೋರು ಮಾಡಿಗೊಂಡು!

ಕೊಪ್ಪರ ಜಾಲಿಲಿಪ್ಪಗ ಕಾಕೆಗೊ ಹತ್ತರೆ ಬಾರವು ಇದಿದ್ದರೆ!
ತೋಟಲ್ಲಿ ಮಂಗಂಗೊ ಬಂದರೆ ಓಡುಸಿಯೇ ಓಡುಸುಗು! ಮರ ಹತ್ತಲೆ UGG Stiefeletten günstig ಬತ್ತಿದ್ದಿದ್ದರೆ ತಿಂದೇ ಬಿಡ್ತಿತು, ಮಂಗಂಗಳ!
ಒಯಿಶಾಕಲ್ಲಿ ನೆಡಿರುಳು ಪಂಪು ಎಳಗುಸುಲೆ ಮಣ್ಣ ಎದ್ದರೆ ಜಾಲಿಲಿಪ್ಪ ದಾಸು ರಂಗಮಾವನ ಒಟ್ಟಿಂಗೇ ಬಕ್ಕು, ಕರ್ತವ್ಯ ಲೆಕ್ಕಲ್ಲಿ.
ಎಷ್ಟೊತ್ತಿಂಗೆ, ಎಲ್ಲಿಂದ ದಿನಿಗೆಳಿರೂ ಓಡಿಗೊಂಡು ಬಕ್ಕು.
ಎಲ್ಲಿಂದ ಬತ್ತು ನಾಯಿಗೊಕ್ಕೆ ಈ ಬುದ್ದಿ, ಚೆ! – ಸೃಷ್ಟಿ ಅದ್ಭುತ ಅಪ್ಪಾ! ಹೇಳಿ ಅನುಸುಗು ರಂಗಮಾವಂಗೆ.

~

 

 

ಸಣ್ಣ ಮಗಂಗೆ ಮದ್ಯಾನ್ನ ಒರೆಂಗೆ ಶಾಲೆ. ಮಗಳು ಬಪ್ಪದು ಹೊತ್ತಪ್ಪಗಳೇ, ಕೋಲೇಜು ಮುಗುದರೆ ಟ್ಯೂಷನು ಇದ್ದಡ!!
ಪ್ರಕಾಶಮಾವಂಗೆ ಮೀಟಿಂಗೋ ಮಣ್ಣ ಇದ್ದರೆ ನೆಡಿರುಳು ಆದರೂ ಆತು!
ಶುಬತ್ತೆಗೆ ಹಗಲೊತ್ತು ಬೇರೆ ಆರುದೇ ಇಲ್ಲೆ, ಮಾತಾಡ್ಳೆ.
ಅಪುರೂಪಕ್ಕೆ ಮಹಿಳಾ ಮೀಟಿಂಗು ಇದ್ದರೆ ಹೆರಡ್ಳಿದ್ದು, ಅಲ್ಲದ್ರೆ ಒಂಟಿಬೂತದ ಹಾಂಗೆ ಇರೆಡದೋ –
ರೋಸಿಯೇ ಸಂಗಾತಕ್ಕೆ ಇಪ್ಪದು..
ಅಡಿಗೆ ಮಾಡುವಗ ಅಡಿಗೆ ಕೋಣಗೆ, ಒರಗುವಗ ಬೆಡ್ರೂಮಿಂಗೆ, ಟೀವಿ ನೋಡುವಗ ಹೆರಾಣ ಜೆಗಿಲಿಗೆ – ಎಲ್ಲ ದಿಕ್ಕಂಗೂ ಬಕ್ಕು.
ಎಡೆಲಿ ಕಂಪ್ಯೂಟರು ನೋಡ್ತರೆ ಮೇಲೆ ಹತ್ತಿ ಮೊಟ್ಟೆಲಿ ಕೂದಂಡು ಒರಗ್ಗು ಈ ರೋಸಿ.
ಮನೆಂದ ಹೆರ ಹೋಪಲೆ ಗೊಂತಿಲ್ಲೆ ಇದಾ..
ಎಡೆಲಿ ಆರಾರು ಬಂದು ಕಾಲಿಂಗು ಬೆಲ್ಲು ಒತ್ತಿರೆ ಒಂದರಿ ಒರಕ್ಕು ಬಿಟ್ಟು ಏಳುಗು, ಮತ್ತೆ ಸೀತ ರೂಮಿಂಗೆ ಹೋಗಿ ಒರಗ್ಗು!|
ಹಾಂಗಿಪ್ಪ ನಾಯಿ ಈ ರೋಸಿ.

~

ಎಲ್ಲ ಕೆಲಸಂಗಳ ಎಡೆಲಿಯುದೇ ದಾಸು ಒರಗ್ಗು!
.. ಅದು ಒರಗುದು ಹೇಳಿರೆ ಒರಗುದೇ ಅಲ್ಲ, ಎಡೆ ಹೊತ್ತಿನ ಎಚ್ಚರಿಗೆಗಳುದೇ ಸೇರಿ ಒಂದು ಜಾಗೃತ ಒರಕ್ಕು.
ಜಾಲಿಲೇ ಮನುಗಿದ ದಾಸು ಮತ್ತೆ ಏಳುದು ಉಂಬಲಪ್ಪಗಳೇ.
ನೆಡುಮದ್ಯಾನ್ನ ಉಂಬಲಪ್ಪಗ ಅಶನ ತೋಡುವ ಶಬ್ದಕ್ಕೇ ನಾಯಿಗೆ ಎಚ್ಚರಿಗೆ ಆಗಿ, ಹೊಸ್ತಿಲಿನ ಬುಡಲ್ಲಿ ಬಂದು ಮನುಗ್ಗು.
ಮನೆಯ ಎಲ್ಲೊರಿಂಗೂ, ಬಂದವಕ್ಕೂ ಊಟ ಆಗಿ, ಪಾತಿ ಅತ್ತೆಯೂ ಉಂಡಾದ ಮತ್ತೆ – ಸುಮಾರು ಮೂರು ಗಂಟೆ ಹೊತ್ತಿಂಗೆ ಒಂದು ಪಾತ್ರಲ್ಲಿ ಅಶನ, ಬೆಂದಿ, ಮಜ್ಜಿಗೆ ಎಲ್ಲ ಹಾಕಿ ತೆಕ್ಕೊಂಡೋಗಿ ಆ ನಾಯಿಯ ಕಲ್ಲಿಂಗೆ ಹಾಕುಗು.
ನಾಯಿಯೇ ಬೆಶಿ ತಣುಶಿ ತಣುಶಿ ಉಂಗು.
ಹೊಟ್ಟೆತುಂಬುವಗ ಬಳುಸಿದ್ದು ಮುಗಿಗು.
ಹಗಲಿಡೀ ಮನೆಕಾವ ಕೆಲಸ ಇದ್ದ ಕಾರಣ ದಾಸುವಿಂಗೆ ಹಶುವಿಂಗೆ ಏನೂ ತೊಂದರೆ ಇಲ್ಲೆ, ಪಾಪ!

 

~
ಹೊತ್ತಪ್ಪಗ, ಮಗಳು ಕೋಲೆಜು ಮುಗುಶಿ, ಟ್ಯೂಶನನ್ನೂ ಮುಗುಶಿ ಬಪ್ಪಗ ಒಂದು ಮೇಗಿ – ಪೇಟೆ ನಮುನೆ ಸೇಮಗೆ – ಮಾಡ್ಳಿದ್ದನ್ನೆ – ಅದರ ಮಗಳಿಂಗೆ ಕೊಡುವಗ ರಜಾ ರೋಸಿಗೂ ತಿನ್ಸುಲಿದ್ದು. ಹೆಚ್ಚಿಲ್ಲೆ – ರಜ್ಜ!
ಹೆಚ್ಚು ಕೊಟ್ರೆ ಅಜೀರ್ಣ ಅಕ್ಕಿದಾ! ಹಾಂಗೆ!
ಅದಕ್ಕಪ್ಪಗ ಒಂದರಿ ಒರಕ್ಕಿಂದ ಏಳುಸುದು ಈ ರೋಸಿಯ.

~

ತರವಾಡು ಮನೆಲಿ ಹೊತ್ತಪ್ಪಗ ಒಂದು ಚಾಯ.
ಏನಾರು ಪೇಟೆತಿಂಡಿಯುದೇ ಇಲ್ಲದ್ದೆ ಇಲ್ಲೆ – ವಿದ್ಯಕ್ಕಂಗೆ ಬೇಕಾಗಿ ಆದರೂ ತಪ್ಪಲೆ ಇದ್ದು!
ಕೆಲಸದೋರಿಂಗೆ, ಬಂದೋರಿಂಗೆ, ಎಲ್ಲೊರಿಂಗೂ ಕಾಪಿ ಅಪ್ಪಗ ದಾಸುಗುದೇ ಒಂದೊಂದು ತುಂಡು ಲಾಬ ಅಪ್ಪದಿದ್ದು.
ಕೈಯ ಹತ್ತರೆ ಸುಳಿತ್ತ ನಾಯಿ ಒಂದರಿ ಅತ್ಲಾಗಿ ಹೋಗಲಿ ಹೇಳಿ ಪಾತಿಅತ್ತೆ – ಇದಾ… ಹೇಳಿ ಜಾಲಿಂಗೆ ಒಂದು ತುಂಡು ಬಿಸ್ಕೇಟೋ, ರಸ್ಕೋ ಇಡ್ಕಿರೆ ದೂರ ಹೋಗಿ ಹಿಡುದು ಅಗುಕ್ಕೊಂಡು ಕೂರುಗು, ಮುಗಿವನ್ನಾರ!
ಕೆಲಸದವರ ಚೆಂಙಾಯಿ ಮಾಡಿಗೊಂಡ್ರೆ ಮತ್ತುದೇ ಒಂದು ನಾಕು ತುಂಡು ಲಾಬ ಆವುತ್ತು ಹೇಳ್ತ ಗುಟ್ಟು ದಾಸುಗೂ ಗೊಂತಿದ್ದು! 😉

~
ಶುಬತ್ತೆಯಲ್ಲಿ ಇರುಳು ಉಂಬದು ೯ ಗಂಟೆಗೆ.

ರೋಸಿ ಒರಗಿದ್ದು (ಪಾತಿ ಅತ್ತೆ ಹೊದಕ್ಕೆ ಸರಿಮಾಡಿ ಹೋಯಿದು!)
ರೋಸಿ ಒರಗಿದ್ದು (ಶುಬತ್ತೆ ಹೊದಕ್ಕೆ ಸರಿಮಾಡಿ ಹೋಯಿದು!)

ಅದಾಗಿ ಮತ್ತೆ ಡೋಗು ಪುಡ್ ಬೇಶಿ, ಎರಡು ಮೊಟ್ಟೆಯೋ, ಮೀನಿನ ಎಣ್ಣೆಯೋ ಎಂತೆಲ್ಲ ಹಾಕಿ ಗಮ್ಮತ್ತಿನ ಊಟ ತೆಯಾರು ಮಾಡುದು ಶುಬತ್ತೆಯ ಕೆಲಸ.
ತೆಯಾರು ಮಾಡುದು ಒಂದು ಕೆಲಸ – ಅದರ ಉಣುಶುದು ಮತ್ತೊಂದು ಕೆಲಸ.
ಅಪ್ಪೂಳಿ, ಅದು ಉಣ್ತಿಲ್ಲೆ ಸರಿ – ಹೇಳಿ ಶುಬತ್ತೆಗೆ ಬೇಜಾರು.
ಊರಿಲಿ ಆದರೆ ಎಂತಾರು ಒಳುದರೆ ನಾಯಿಗೆ ಹಾಕುಲಕ್ಕು ಹೇಳಿ ಬಿಡ್ತು. ಆದರೆ ನಾಯಿಯೇ ಬೇಡಾಳಿ ಬಿಟ್ಟದರ ಇನ್ನಾರಿಂಗೆ ಹಾಕುದು! ;-(
ಚೋ, ದೇವರೇ! ರೋಸಿಗೆ ಹಶು ಆದರಲ್ಲದೋ, ಉಂಬದು – ಪಾಪ!
ಇರುಳು ಉಂಡಿಕ್ಕಿ, ಪ್ರಕಾಶಮಾವನೊಟ್ಟಿಂಗೆ ಒಂದು ವಾಕಿಂಗು ಮುಗುಶಿ, ಹಾಸಿಗೆಲಿ ಬಂದು ಒರಗ್ಗು.
ಕಿಚನು ಎಲ್ಲ ಉದ್ದಿ ಬಂದು ಶುಬತ್ತೆ ಒರಗುವಗ ರೋಸಿಯ ಹೊದಕ್ಕೆ ಸರಿ ಮಾಡುಗು.

~

 

ಇರುಳಾಣ ಊಟ ಉಂಬಗಳೂ ದಾಸು ಅಲ್ಲೇ – ಹೊಸ್ತಿಲಬುಡಲ್ಲೇ ಬಂದು ಕೂದೊಂಗು,
ಮಕ್ಕೊ ಇದ್ದರೆ ನಾಯಿಗೊಕ್ಕೆ ಕೊಶಿ ಅಪ್ಪದಡ – ಮಗುಮಾವನ ಗಾದೆ ಒಂದಿದ್ದು!
ಎಲ್ಲೊರ ಊಟ ಆದ ಕೂಡ್ಳೆ, ವಿನು ಉಣ್ಣದ್ದೆ ಬಿಟ್ಟ ಪಾಕಂಗೊ, ಅಂದ್ರಾಣ ಒಳಿಕೆ ಎಲ್ಲ ಕೂಡಿ ಗೌಜಿಯ ಊಟ ದಾಸುಗೆ ಲಾಭವೇ!
ಚೆಂದ ಉಂಡಿಕ್ಕಿ ಅದರಷ್ಟಕ್ಕೇ ರಜ ಸುತ್ತಿಕ್ಕಿ ಬಂದು ಬಿದ್ದೊಂಗು, ಜಾಲಕೊಡಿಲಿ.
ಅಡಕ್ಕೆ ರಾಶಿಯ ಆಚ ಹೊಡೇಲಿ!
ಇರುಳು ಎಲ್ಲೊರೂ ಒರಗಿ, ಪಾತಿಅತ್ತೆಯುದೇ ಎದುರಾಣ ಬಾಗಿಲು ಹಾಕಿಯೊಂಡು, ಒರಗಿ ಆದ ಮೇಲೆ  – ದೊಡ್ಡಬಾಗಿಲಿನ ಹೊಸ್ತಿಲಿಲಿ ಬಂದು ಒರಗ್ಗು, ಮರದಿನ ಬೆಳ್ಳಿ ಉದಿಯಪ್ಪನ್ನಾರವೂ..!
Replique homme et femme montres

~

 

ನೋಡಿ, ಎರಡು ನಾಯಿಯ ನಿತ್ಯ ದಿನಚರಿ..!

ಎಷ್ಟು ವಿತ್ಯಾಸ!!

ರೋಸಿಗೆ ಎಷ್ಟು ಮಾಡಿ ಕೊಟ್ರೂ ಸಾಲ, ದಾಸುಗೆ ಇದ್ದದು ಸಾಕು.
ರೋಸಿಗೆ ಹಾಸಿಗೆಯೇ ಆಯೆಕ್ಕು, ದಾಸುಗೆ ಮಣ್ಣ ಜಾಲೂ ಆವುತ್ತು, ಹೊಸ್ತಿಲೂ ಆವುತ್ತು.
ರೋಸಿಗೆ ಡೋಗುಪುಡ್ ಆಯೆಕ್ಕು, ದಾಸುಗೆ ಮನೆಯೋರು ತಿಂದು ಒಳುದ ಪಾಕ ಆವುತ್ತು.
ರೋಸಿಗೆ ಒರಕ್ಕೇ ಬತ್ತಿಲ್ಲೆ, ದಾಸುಗೆ ಎಡೆ ಹೊತ್ತಿಲಿ ಒಳ್ಳೆ ಒರಕ್ಕು ಬತ್ತು!
ರೋಸಿಗೆ ತಿಂಗಳಿಂಗೆ ಐದು ಸಾವಿರ ಕರ್ಚು ಆವುತ್ತಡ, ದಾಸುಗೆ ತಿಂಗಳಿಂಗೆ ಐದು ರುಪಾಯಿಯೂ ಕರ್ಚು ಇಲ್ಲೆ!

ಇಷ್ಟು ಕರ್ಚು ಮಾಡಿ ನಾಯಿ ಸಾಂಕಿರೆ ಕರವಲಾವುತ್ತೋ, ಅದರ ಬದಲು ದನ ಸಾಂಕುಲಾಗದೋ – ಹೇಳಿ ಮೋಂತಿಮಾರುಮಾವ° ದೊಡ್ಡಬಾವನತ್ರೆ ಕೇಳಿದ್ದರ ಮೊನ್ನೆ ಸಮೋಸಮಾಡಿ ಹೇಳಿದ°!

~

ನವಗೆ ಬೇಕಾಗಿ ನಾಯಿ ಇರೆಕ್ಕೋ, ನಾಯಿಗೆ ಬೇಕಾಗಿ ನಾವು ಇರೆಕ್ಕೋ?
ನಾವು ಯೆಜಮಾನ, ನಾಯಿ ಸೇವಕ – ಅಲ್ಲದೊ?
ಸಾವಿರಾರು ಒರಿಶದ ಸಂಬಂಧ ಹಾಂಗೇ ಅಲ್ಲದೋ?
ಪೇಟೆ ಮನೆಗಳಲ್ಲಿ ಅದು ವಿತ್ಯಾಸ ಅಪ್ಪದು ಕಾಂಬಗ ಈ ಶುದ್ದಿ ಎಲ್ಲ ನೆಂಪಾತು!

ಒಂದೊಪ್ಪ: ದಾಸು ತರವಾಡು ಮನೆಗೆ ಬಪ್ಪವರ ಕಾಯಿತ್ತು, ರೋಸಿ ಮನೆಂದ ಹೋಗದ್ದ ಹಾಂಗೆ ಶುಬತ್ತೆ ಕಾಯಿತ್ತು!

22 thoughts on “ಪಾತಿಅತ್ತೆಯ ದಾಸುವೂ, ಶುಬತ್ತೆಯ ರೋಸಿಯೂ..!!!

  1. ಅಷ್ಟು ಪುಟ್ಟ ಕೂಸಿನ ನಡೆಶಿಕೊಂಡು, ನಾಯಿಯ ಹೊತ್ತುಕೊಂಡು ಹೊಯೆಕ್ಕಾರೆ…….!!!!???

    1. ಇನ್ನು ಆ ಪುಟ್ಟ ಕೂಸು ಬಚ್ಚಿತ್ತು ನಡದು ..ಎತ್ತು ಅಮ್ಮ ಹೇಳಿರೆ ಆ ಅಮ್ಮ ಎಂತ ಹೇಳುಗೋ ಹೇಳಿ ಕಾಣ್ತು ಎನಗೆ 🙁

    1. ಇದೇ ಪಟವ ಆನು ಸ್ಕೇನು ಮಾಡಿ ಹಾಕೆಕ್ಕು ಹೇಳಿ ಇತ್ತಿದ್ದೆ. ಗೀತತ್ತೆ ಬಾರೀ ಫಾಸ್ಟಿದ್ದು….

      1. ಅದೇ ಜೋರು confusion ಬಪ್ಪದು… ನವಗೆ ಬೇಕಾಗಿ ನಾಯಿ ಇರೆಕ್ಕೋ, ನಾಯಿಗೆ ಬೇಕಾಗಿ ನಾವು ಇರೆಕ್ಕೋ? ಹೇಳಿ … 🙁

  2. ಅಲ್ಲ ಪಾತಿ ಅತ್ತೆಗೆ …ಎರಡು ಊರ ನಾಯಿ ಗಳ ಸಾಂಕಿ ಗೊಂತಿಲ್ಲೆಯ…:P

  3. ಎಂಗಳಲ್ಲೂ ದಾಸುವಿನ ಹಾಂಗೆಯೆ ಒಂದು ಒಳ್ಳೆ ನಾಯಿ ಇದ್ದತ್ತು. ಈ ಶುದ್ದಿ ಓದುವಾಗ ಅದರ ನೆಂಪಾತು. 🙁
    ಶುದ್ದಿ ಲಾಯ್ಕಾಯಿದು. ಪೇಟೆಲೆಲ್ಲ ನಾಯಿ ಸಾಂಕುದು ಒಂದು ಪ್ರತಿಷ್ಠೆಯ ಹಾಂಗಾಯಿದು. ಕೆಲವು ಜನ ‘ಶ್ವಾನ ಪ್ರದರ್ಶನ’ಲ್ಲಿ ರೈಸೆಕ್ಕು ಹೇಳಿಯೇ ನಾಯಿ ಸಾಂಕುತ್ತವಡ! ಅದಕ್ಕೂ ತರಾವರಿ ಪೇಷನು ಇದ್ದಡ!

  4. ಲೇಖನ ಭಾರೀ ಒಳ್ಳೆದಾಯೀದು…ಇನ್ನೂ ಹೀಂಗಿಪ್ಪದು ಬರಲಿ……ಒಪ್ಪಣ್ಣ್ಂಗೆ ಒಪ್ಪನ್ಗ

    1. ಅಡ್ಕತ್ತಿಮಾರು ಮಾವ°,
      ತುಂಬಾ ಕೊಶಿ ಆತು ನಿಂಗ ಒಪ್ಪ ಕೊಟ್ಟದು ನೋಡಿ.
      ಬತ್ತಾ ಇರಿ, ಬರೆತ್ತಾ ಇರಿ.

      ನಿಂಗಳೂ ಪಟ ತೋರುಸುತ್ತೆ ಹೇಳಿದ್ದಿರಡ, ಬೊಳುಂಬುಮಾವ° ಹೇಳಿಗೊಂಡಿತ್ತಿದ್ದವು ಓ ಮೊನ್ನೆ.
      ಯಾವಗ ತೋರುಸುತ್ತಿ? 🙂

  5. ನಮ್ಮೂರಿನ ಕಂತ್ರಿ ನಾಯಿಗೆ ಪೇಟೆ ಮನೆಯ ಪೆಟ್ಟು (pet) ನಾಯಿಯ ಹೋಲುಸಿ ಬರದ ಲೇಖನ ಲಾಯಕಿತ್ತು. ಪೇಟೆಯ ನಾಯಿ ಸಾಂಕುತ್ತ ಕೆಲವು ಮನೆಗಳ ಅವಸ್ಥೆ ನೋಡಿರೆ ವಾಕರಿಕೆ ಬತ್ತು. ಅಲ್ಲಿಗೆ ಅತಿಥಿಗೊ ಆಗಿ ಹೋದವರ ಅವಸ್ಥೆ ನಮ್ಮ ಶತ್ರುಗೊವಕ್ಕೂ ಬೇಡ. ನಾಯಿಗೊವಕ್ಕೆ ಒಪ್ಪ ಕೊಡಾಣ, ಅಲ್ಲಿಯ ಏನೋ ಒಂದು ರೀತಿಯ ಹೇಳಲೆಡಿಯದ್ದ ಆ ರೋಮ ಸಹಿತ “ಆರೋಮ” ವಾಸನೆ, ಅವು ಪ್ರೀತಿ ಮಾಡುತ್ತವು ಹೇಳೀ ಅಲ್ಲಿಗೆ ಹೋದವು ಮಾಡೆಕಾಗಿ ಬತ್ತು. ಇನ್ನು ಕೆಲವು ಬೆಳಗಿನ ವಾಕಿಂಗು ಹೇಳಿ ನಮ್ಮ ಮನೆಯ ಎದುರು ಆ ನಾಯಿಗಳ ಎಳಕ್ಕೊಂಡು ಬಂದು ಒಪ್ಪಣ್ಣ ಹೇಳಿದ ಹಾಂಗೆ ಅವರ “ಸಹಜ ಕ್ರಿಯೆ” ಎಲ್ಲ ನಮ್ಮ ಮನೆಯ ಗೇಟಿನ ಎದುರು ಮಾಡುಸಿಕ್ಕಿ ಹೋಕತ್ತೆ. ಅವಕ್ಕೆ ಅವುಗಳ ಮೇಲೆ ಅಷ್ಟುದೆ ಪ್ರೀತಿ ಇದ್ದರೆ ಅವರವರ ಲ್ಯಾಟ್ರೀನಿಲ್ಲಿ ಕೂರುಸಲೆ ಆಗದೋ.

  6. ANTHU INTHU OPPANNANGE NAAYIYA CHKRI MADUDU ISHTAVOO… ALLA NAYI OPPANNANA CHAKRI MAADUDU ISHTAVOO HEELI ENAGA INNUU ARTHA AYDILLE……..HAN, HELIDA HANGE OPPANNANA BARAHADA SERELIDDA AACHAKARE MAANIGE BIDUGADE SIKKIDDOO HELI IIGA RAJA ALLADA……….ADUU MADUVE AADAMELE………..

    1. ಎರಡೂ ಅಲ್ಲ ಭಾವ!
      ಶುಬತ್ತೆ ನಾಯಿಯ ಚಾಕ್ರಿಮಾಡುದು ಕಷ್ಟ ಅಪ್ಪದು, ಅಷ್ಟೇ! 😉
      ಆಚಕರೆಮಾಣಿ ಈಗ ಬೈಲಿಂಗೆ ರಜೆ ಹಾಕಿದ್ದ, ರಜ ಸಮೆಯಕ್ಕೆ! 🙂
      ಇನ್ನು ಶೇಡಿಗುಮ್ಮೆ ಬಾವನೇ ಆಯೆಕ್ಕಷ್ಟೇ ಹೇಳಿಗೊಂಡಿತ್ತಿದ್ದ° ಅಜ್ಜಕಾನಬಾವ°..

      1. ಯೇ ಯೇ ಭಾವಾ…… ರಜೆ ಹಾಕಿದ್ದಲ್ಲ. ಪುರ್ಸೊತ್ತಿಲ್ಲೆ…. ಒಂದೋಂದರಿ ನಿಲ್ಕಿಕ್ಕಿ ಹೋವ್ತೆ ಬೈಲಿಂಗೆ… ಕಾಪಿ ಕುಡುದು ಹೋಪಲೆ ಪುರ್ಸೊತ್ತಿಇಲ್ಲೆ ಇದಾ… ಹಾಂಗಾಗಿ.

        ಮತ್ತೆ ಈ ನಾಯಿಗಳ ಕಂಡರೆ ಎನಗೆ ಮದಲೇ ಅಷ್ಟಕ್ಕಷ್ಟೆ. ಹಾಂಗಾಗಿ ನಾಯಿಗಳ ಏರ್ಪಾಡಿಂಗೆ ನಾವಿಲ್ಲೆ.

  7. ದೇವರ ಸೃಷ್ಟಿಲಿ ನಾಯಿ ಒಂದು ಅದ್ಭುತ ಪ್ರಾಣಿ… ಹೇಂಗೆ ದನವ ನಾವು ದೈವತ್ವಕ್ಕೆ ಹೇಳ್ತಾ, ಹಾಂಗೆ ನಂಬಿಕೆ, ವಿಶ್ವಾಸಕ್ಕೆ ಇನ್ನೊಂದು ಹೆಸರು ನಾಯಿ… ನಾಯಿಯ ನಡತೆಯ ಬಗ್ಗೆ ಇನ್ನೊಂದು ಮಾತಿಲ್ಲೇ.. ಹೆಂಗಿಪ್ಪಲ್ಲಿಯೂ, ಹೆಂಗಾದರೂ ಹೊಂದಿಗೊಂಡು ಬದುಕುವ ಕಲೆಯ ನಾವು ಅದರ ಹತ್ತರೆಯೇ ಕಲಿಯೆಕ್ಕಷ್ಟೇ… ಎಷ್ಟೇ ಹಶು ಆಗಿರಲಿ.. ಮನೇಲಿ ನಾವು ಸಾಂಕಿದ ನಾಯಿ.., ಅದರ ತಟ್ಟೆಯೋ, ಕಲ್ಲೋ.., ಅಂತೂ ನಿರ್ಧಿಷ್ಟ ಜಾಗೆಲಿ ಅದಕ್ಕೆ ಹಾಕದ್ದೆ ಅದು ತಿನ್ನ.. ಒಳ ಪಾತ್ರೆಲಿ ಅದರ ಕಣ್ಣ ಮುಂದೆ ತಿಂಬಲಿಪ್ಪದು ಇದ್ದರೂ ಬಾಯಿ ಹಾಕ… ಅಲ್ಲೇ ಕಾದು ಕೂರುಗು.. ಸಣ್ಣ ಮಕ್ಕ ಇದ್ದರೆ ಅದರ ಜಾಗ್ರತೆ ಹೇಳುದೆ ಬೇಡ… ಅವು ಅಪಾಯಲ್ಲಿ ಇದ್ದವು ಹೇಳಿ ಆದ ಕೂಡಲೇ ಮನೆಯೋರ ಎಚ್ಚರುಸುತ್ತು.. ನಾಯಿಯ ಬಗ್ಗೆ ಎಷ್ಟು ಹೇಳಿದರೂ ಮುಗಿಯ.. ಎಲ್ಲೋರ ಅನುಭವದೆ ಬೇರೆ ಬೇರೆ ಇಕ್ಕಲ್ಲದಾ? ಎನಗಪ್ಪದು.., ಈ ರೋಸಿಯ ಹಾಂಗಿಪ್ಪ ಪೇಟೆ ನಾಯಿಗಳುದೆ.., ಮತ್ತೆ ಕೆಲವು ಗೂಡಿಲಿಯೇ ಇಪ್ಪ ನಾಯಿಗಳುದೆ ಕಳೆದ ಜನ್ಮಲ್ಲಿ ಏನಾರು ಪಾಪ ಮಾಡಿಕ್ಕಾ ಹೇಳಿ… ಇಲ್ಲದ್ದರೆ ಹೀಂಗಿಪ್ಪ ಶಿಕ್ಷೆ ಎಂತಕ್ಕೆ? ಅದಕ್ಕೆ ಬೇಕಾದ ಹಾಂಗೆ ಎಲ್ಲಿಗೂ ಹೋಪಲೆ ಎಡಿತ್ತಿಲ್ಲೇ.. ಬೇಕಾದ್ದದರ ತಿಂಬಲೆ ಎಡಿತ್ತಿಲ್ಲೇ.. ಮನೆಯೋರು ಬೇಶಿ ಹಾಕಿದ್ದದರ ಕುಶಿಲಿ ತಿಂಬಲೇ ಎಡಿತ್ತಿಲ್ಲೇ.. ಪ್ರಾಕೃತಿಕ ಕ್ರಿಯೆಗೂ ಇನ್ನೊಬ್ಬನ ಕಾಯೇಕ್ಕು… ಅದರ ಬೇಜಾರವ ಹೇಳುಲೆ ಜೆನ ಇಲ್ಲೆ… ಅತ್ಲಾಗಿ ಮನುಷ್ಯನೂ ಅಲ್ಲ, ಇತ್ಲಾಗಿ ಪ್ರಾಣಿಯೂ ಅಲ್ಲದ್ದ ಜೀವನ… ಶುಬತ್ತೆಯ ಮಕ್ಕೊಗೆ ಅವು.. ಶುಬತ್ತೆಯ ಮಕ್ಕಳಾ ಅಲ್ಲಾ ರೋಸಿ ಶುಬತ್ತೆಯ ಮಗಳಾ ಹೇಳಿ ಕಾಣ್ತಡ್ಡ ಕೆಲವು ಸರ್ತಿ.. ಅಷ್ಟುದೆ ರೋಸಿಯ ಚಾಕರಿ ಅಮ್ಮ ಮಾಡ್ತು ಹೇಳಿ ಅವರ ಅತ್ತೆಯ ಹತ್ತರೆ ಹೇಳಿಗೋಳ್ತವಡ್ಡ… ಒಪ್ಪಣ್ಣ, ಒಂದೊಪ್ಪ ಲಾಯಕ ಆಯಿದು.. ನಮ್ಮ ಊರಿಲಿ ಎಲ್ಲಾ ಮನೆಯ, ಮನೆಯೋರ ನಾಯಿ ಕಾಯ್ತು.. ಪೇಟೇಲಿ ನಾಯಿಯ, ಅದರ ಚಾಕರಿಯ ಮನೆಯವು ಮಾಡೆಕ್ಕು…

    1. ಶ್ರೀಅಕ್ಕ° ಹೇಳಿದ್ದು ಸರೀ ಇದ್ದು.
      ಜೆಂಬ್ರದಮನೆಲಿ ’ಪೋಕು’ನಾಯಿ ಮುಟ್ಟಿದ ಕತೆಯ ಆಚಮನೆದೊಡ್ಡಣ್ಣ ಹೇಳುಗು, ನೆಂಪಾತು!
      ರೋಸಿಚಾಕಿರಿ ಮಾಡುದು ಶುಬತ್ತೆಗೆ ಅತ್ಯಂತ ಕೊಶಿಯ ವಿಚಾರ ಅಡ್ಡ!

  8. ಪೇಟೆಯವು ನಾಯಿ ಸಾಂಕುವದು ಒಂದೋ ಶೋಕಿಗೆ ಇಲ್ಲದ್ದರೆ ಪ್ರತಿಷ್ಠೆಗೆ. ಎನ್ನ ಹತ್ರೆ ಇಂಥಾ ಜಾತಿ ನಾಯಿ ಇದ್ದು ಹೇಳಿ ಹೆಮ್ಮೆ ಪಡ್ಲೆ. “ಶ್ವಾನ ಪ್ರದರ್ಶನ” ಲ್ಲಿ ಬಹುಮಾನ ತೆಕ್ಕೊಂಬಲೆ. ಮನೆ ಇಡೀ ರೋಮ ಕುಡುಗಿಂಡು ತಿರುಗಿದರೂ, ಅದರ ಕ್ಲೀನ್ ಮಾಡುವದರಲ್ಲಿ ಸಂತೋಷ ಹುಡ್ಕುವವು. ಅದಕ್ಕಿಂತ ಹೆಚ್ಚಿನ ಪ್ರಯೋಜನ ಎಂತ ಇಲ್ಲೆ.

    1. ಶರ್ಮಪ್ಪಚ್ಚಿ,
      ಪೇಟೆಲಿ ಕಾರಿನ ಎದುರಾಣ ಸೀಟಿಲಿ ಕೂರುಸಿಗೊಂಡು ಹೋವುತ್ತವಡ, ಚೆಂದದ ನಾಯಿಗಳ!
      ಅಪ್ಪೋ?

      1. ಕಾರಿಲ್ಲಿ ಪೊಮೇರಿಯನ್ ನಾಯಿಯನ್ನೇ ಹೆಚ್ಚಾಗಿ ಹಾಂಗೆ ಕೂರಿಸಿಂಡು ಹೋಪದು. ಬೈಕಿಲ್ಲಿ ಹಿಂದೆ ಕೂದವನ ಮೊಟ್ಟೆಲಿ ಕೂರಿಸಿಂಡು ಹೋಪದರ ಇಂದು ನೋಡಿದೆ

  9. ಆರೋ ತಿಳುದೊವು ಹೇಳಿತ್ತಿದವು – ಹಿಂದಣ ಕಾಲಲ್ಲಿ ದನ ಸಾಂಕಿಯೊಂಡು ಮನುಷ್ಯ ಸ್ವಭಾವಲ್ಲಿ ದನದ ಹಾಂಗೆ ಇತ್ತಿದ್ದಡ್ಡ. ಈಗಣ ಕಾಲಲ್ಲಿ ಬರೇ ನಾಯಿ ಸಾಕಿಯೊಂಡು ಅವಂಗೆ ನಾಯಿಯ ಬುಧ್ಧಿಯೇ ಬಯಿಂದು ಹೇಳಿ!

  10. ಮನೆ ನಾಯಿ… ದಾಸುವಿನ ಹಾಂಗೆ ಮಾಡುದು ನೆಂಪು ಆವ್ತು..
    ಅಪ್ಪು ಒಪ್ಪಣ್ಣ .. ಎನಗೂ confuse ಬಪ್ಪದು..ನವಗೆ ಬೇಕಾಗಿ ನಾಯಿ ಇರೆಕ್ಕೋ, ನಾಯಿಗೆ ಬೇಕಾಗಿ ನಾವು ಇರೆಕ್ಕೋ? ಹೇಳಿ…ಎಲ್ಲೋರು ಮಾಡುದು,ಹೇಳುದು ಕೆಳುವಗ… .!!???!!!!

    1. ಅಪ್ಪು ಗೀತತ್ತೆ!
      ಶುಬತ್ತೆಮನೆಗೆ ಪೆರ್ಲದಣ್ಣ° ಹೋಗಿಪ್ಪಗ ಸೋಪಲ್ಲಿ ಕೂದ್ದಡ,
      ಶುಬತ್ತೆ ಹೇಳಿತ್ತಡ – ಅದು ರೋಸಿ ಕೂಪ ಜಾಗೆ! ಹೇಳಿ!!
      ಮನಗೆ ಬಂದು ಮಿಂದನಡ ಪೆರ್ಲದಣ್ಣ..!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×