ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು.
ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು.
( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat )
ಹ್ಮ್, ಅಪ್ಪು.
ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ.
ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು.
ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ.
ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು!
ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ.
ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ?
ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ.
ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು!
ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°.
ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?
ಶಿವರಾತ್ರಿ ಲೆಕ್ಕಲ್ಲಿ ಶಿವಂಗೆ ಅರ್ಪಣೆ
ಧಾಟಿ –ಜಾಕೇ ಮಥುರಾ..(ಒಂದು ಹಳೆ ಮರಾಠಿ ಪದ್ಯ)
ಕೈಲಾಸಪತಿ ಶ್ರೀ ಶಿವನೇ ಸಲಹೋ ಹರಹರ ಮಹಾದೇವ।
ಶಿವನೇ।
ಹರಹರ ಮಹದೇವ॥
ಅಹಿಭೂಷಣನೇ ತ್ರಿಶೂಲಧರನೇ
ಡಮರುಗ ಹಿಡಿದಾ ನೃತ್ಯಪ್ರಿಯನೇ॥ ಕೈಲಾಸಪತಿ॥
ಹಣೆಲದ ಜ್ವಾಲೆ,ಜೊಟ್ಟಿಲಿ ಗಂಗೆ
ಕೊರಳಿಲಿ ಹಾವು ,ಎದೆಲಮೃತವೂ॥ಕೈಲಾಸ॥
ವಿಷವನೇ ಕುಡಿದೆ,ಲೋಕ ಉಳಿಸಿದೆ
ನೀ ಲಯಕರ್ತೃ ಅಪ್ಪದು ನಿಜವೋ॥ಕೈಲಾಸಪತಿ॥
ರುಂಡದ ಮಾಲೆ,ಮಸಣದ ಬೂದಿ
ಮೆತ್ತಿರೂ ನೀನೇ ಸುಂದರ ಅಲ್ಲೋ॥ಕೈಲಾಸಪತಿ॥
ಗಣಪತಿ ಪಾರ್ವತಿ ಸುಬ್ರಹ್ಮಣ್ಯ
ಸೇರಿದ ನಿನ್ನಾ ಸಭೆಯೇ ಗಣ್ಯ॥ಕೈಲಾಸಪತಿ॥
ರಸವೂ ವಿರಸವು, ರೂಪ ವಿರೂಪ
ಎಲ್ಲವೂ ನಿನಗೆ ಒಂದೇ , ಪಾಪ!॥ಕೈಲಾಸಪತಿ॥
ಕರುಣಾ ಮೂರ್ತಿಯೆ, ಸರಳನು ನೀನು
ನಮ್ಮೆಲ್ಲರ ನೀನನುದಿನ ಸಲಹೋ॥ಕೈಲಾಸಪತಿ॥
~*~*~
dear sir i like this website .i am community radio mangalore annuncer . shorty one new program “Engala mane” will be started
ಪದ್ಯ ಬರದ್ದು ಪಷ್ಟಾಯಿದು ಗೋಪಾಲಣ್ಣ. ಆ ‘ಜಾಕೇ ಮಥುರಾ..’ ಪದ್ಯ ಇದ್ದೋ ನಿಂಗಳತ್ರೆ?
ಇಲ್ಲೆ. ಆನು ಸಣ್ಣಾಗಿಪ್ಪಾಗ ಕೇಳಿದ್ದು ಮಾತ್ರ.
ಚೆಂದದ ಪದ್ಯ 🙂
ಲಾಯಕ ಪದ್ಯಂಗೊ.
ಶಿವರಾತ್ರಿ ಸಮೆಲಿ ಬೈಲಿಂಗೆ ಬಂದ ಗೋಪಾಲಣ್ಣನ ಹವ್ಯಕ ಪದ್ಯ ಲಾಯಕಾತು. ವಿಷವನೇ ಕುಡಿದೆ,ಲೋಕ ಉಳಿಸಿದೆ
ನೀ ಲಯಕರ್ತೃ ಅಪ್ಪದು ನಿಜವೋ — ಸಂಶಯ ಬಪ್ಪದು ಸಹಜವೇ. ಒಳ್ಳೆ ಕಲ್ಪನೆ.
ಒಪ್ಪ ಒಪ್ಪ ಒಪ್ಪೊಪ್ಪ ಲಾಯಕ ಆಯ್ದು ಇದು ಗೋಪಾಲಣ್ಣ. ಒಳ್ಳೆ ಧಾಟಿಲಿ ಹಾಡ್ಳೆ ಆವ್ತುದೆ (ಆದರೆ ಆನು ಹಾಡಿರೆ ಆರೂ ಕೇಳ್ಳೆ ತಯಾರಿಲ್ಲೆ!).
ಗೋಪಾಲಣ್ಣನ ಪದ್ಯಕ್ಕೆ ಒಪ್ಪ ಪದ್ಯಕ್ಕೆ ನಮ್ಮ ಒಪ್ಪಂಗೊ….
ಗೋಪಾಲಣ್ಣ ಪದ್ಯವೂ ಲಾಯಕಲ್ಲಿ ಬರೆತ್ತಿ ಹೇಳಿ ಗೊಂತಿತ್ತಿಲ್ಲೇ…