ನಮ್ಮ ಗುರುಗೊ ಕೈಗೊಂಡ “ನಭೂತೋ..” ಕಾರ್ಯಕ್ರಮಲ್ಲಿ ಕುಮಾರಪರ್ವತ ಯಾತ್ರೆಯೂ ಒಂದು.
ಇತಿಹಾಸದ ಪಟ್ಟಿಲಿ ವಿಶೇಷ ಘಟನೆ ಆಗಿಪ್ಪ ಈ ಸನ್ನಿವೇಶದ ಚಿತ್ರವ ಹಿಡುದು ಮಡಗಿ, ಈಗ ಬೈಲಿನೋರಿಂಗೆ ತೋರುಸುತ್ತಾ ಇದ್ದವು ಸುಬ್ರಮಣ್ಯದ ವೆಂಕಟೇಶಣ್ಣ.
ಬೈಲಿಲಿ ಹಂಚಿಗೊಂಡ ಅವರ ದೊಡ್ಡಮನಸ್ಸಿಂಗೆ ಮನಃಪೂರ್ವಕ ಒಪ್ಪಂಗೊ..
ಏಕಾದಶಿಯ ಇನ್ನೊಂದು ಕುಮಾರ ಪರ್ವತ ಯಾತ್ರೆ:
ಇದೊಂದು ಚೂರು ಹಳೆಯ ವಿಷಯ.
ಮೊನ್ನೆ ಪುಚ್ಚಪ್ಪಾಡಿ ಮಹೇಶಣ್ಣನೊಟ್ಟಿಂಗೆ ಏಕಾದಶಿ ದಿನ ಗಿರಿಗೆದ್ದೆ ಮಾಲಿಂಗಣ್ಣನ ಮನೆಲಿ ಊಟ ಮಾಡಿದ್ದು ಗೊಂತಿದ್ದಲ್ಲದ?
ಅಷ್ಟಪ್ಪಗ 2004 ರ ಜನವರಿ 03ರ ಏಕಾದಶಿಯ ನೆನಪ್ಪಾತು.
ಆ ದಿನ ಸುಮಾರು 665 ಶಿಷ್ಯರು ಗುರುಗಳೊಟ್ಟಿಂಗೆ ಕುಮಾರ ಪರ್ವತ ಯಾತ್ರೆಮಾಡಿದ ದಿನ.
ಆಗ ಪುಷ್ಪಗಿರಿ ಅರಣ್ಯಧಾಮದ ಎ.ಸಿ.ಎಫ್. ಆಗಿದ್ದ ನಮ್ಮವೇ ಆದ ಸದಾಶಿವಣ್ಣಂದೇ ಗಿರಿಗೆದ್ದೆಯ ಗೋವಿಂದಣ್ಣಂದೇ ಗುರುಗಳ ಗುಡ್ಡೆ ಕೊಡೀಲಿ ಸ್ವಾಗತ ಮಾಡಿತ್ತಿದ್ದವು.
ಗುರುಗಳು ಏಕಾದಶಿಯ ಮೌನ ವ್ರತಲ್ಲಿ ಇದ್ದ ಕಾರಣ ಎಲ್ಲೋರಿಂಗೂ ಮೌನ ಮಂತ್ರಾಕ್ಷತೆ ಕೊಟ್ಟು ಆಶೀರ್ವಾದ ಮಾಡಿದವು.
ಅಲ್ಲಿ ತೆಗದ ಪಟಂಗಳ ಬೈಲಿನವಕ್ಕೆ ತೋರುಸುವ° ಹೇಳಿ ಕಂಡತ್ತು.
ನೋಡಿ ಒಂದು ಒಪ್ಪ ಕೊಟ್ಟಿಕ್ಕಿ.
~
ವೆಂಕಟೇಶಣ್ಣ
- ರಷ್ಯಾದವಕ್ಕೂ ಸರ್ಪದೋಷ….? - July 23, 2012
- ಶ್ರೀಗುರುಗಳ ಕುಮಾರಪರ್ವತ ಯಾತ್ರೆ : ಹಳೆನೆಂಪು - March 1, 2012
ಪರ್ವತೊಗ್ ಯಾನ್ಲಾ ಪೋತೆ. ಔಲು ಬೆತ್ತೋ ತಿಕ್ಕುಂಡ್. ಕಾಂಟ್ಯ ಮುಡೆಪ್ಯರ ಬಾರಿ ಎಡ್ಡೆ ಆಪುಂಡು.
ಧನ್ಯವಾದ೦ಗೊ
ನೋಡಿ ತುಂಬಾ ಖುಷಿ ಆತು.
ಗುರುಗಳೊಟ್ಟಿಂಗೆ ಕುಮಾರ ಪರ್ವತ ಹತ್ತಲೆ ಅವಕಾಶ ಸಿಕ್ಕಿದವು ನಿಜವಾಗಿಯೂ ಭಾಗ್ಯವಂತರು. ಫೊಟೊಂಗಳೂ ಚೆಂದ ಬಯಿಂದು. ಬೈಲಿಂಗೆ ಒದಗುಸಿಕೊಟ್ಟ ವೆಂಕಟೇಶಂಗೆ ಧನ್ಯವಾದಂಗೊ.
ಅಂದು ಉದಿಯಪ್ಪಗ ಹೆಗಡೆಮನೆಲಿ ಎಲ್ಲರಿಂಗೂ ಬೆಶಿ ಬೆಶಿ ಕಾಪಿ ಮತ್ತು ಕ್ಶೀರ ಕೊಟ್ಟದು ನೆಂಪವುತ್ತಾ ಇದ್ದು
ಖಂಡಿತ ಇದೊಂದು ಅದ್ಭುತ ಅಭಿಯಾನ.
ನಿಜಕ್ಕೂ ಈ ೬೬೫ ಜೆನ ಭಾಗ್ಯಶಾಲಿಗೋ
ಆಹಾ,ಪಟ ನೋಡಿಯೇ ರೋಮಾ೦ಚನ ಆತು.ಧನ್ಯವಾದ ವೆ೦ಕಟೇಶಣ್ಣ.
ಧನ್ಯವಾದ ಅಡಕೋಳಿ ಅಣ್ಣಂಗೆ
ತಗ್ಗದ ಉತ್ಸಾಹ, ತೋರದ ಬಳಲಿಕೆ, ಮಾಸದ ನಗು ಮುಖ. ಇಂದಿಗೂ…
ಮೌನದ ನಗುವಿನಲ್ಲೂ ಸುಂದರ ಸಂದೇಶ…
ಬಾಗ್ಯವಂತರು, ಸಹ ಯಾತ್ರಿಗಳೆಲ್ಲಾ..
ಒಪ್ಪಣ್ಣಂಗೆ ಹಾಗೂ ವೆಂಕಟೇಶಣ್ಣಂಗೆ ಧನ್ಯವಾದ
ಪಟಂಗಳ ನೋಡಿ ತುಂಬಾ ಖುಶಿ ಆತು.ಇದೊಂದು ಅದ್ಭುತ ಅನುಭವವೇ ಸರಿ. ಧನ್ಯವಾದಂಗೊ ಅಣ್ಣ.
ಧನ್ಯವಾದ
೨೧ ನೇ ಪಟಲ್ಲಿ ಮಾಣಿ ಇದ್ದ. ಗುರ್ತ ಸಿಕ್ಕಿತ್ತ? ಅದು ನಿಜವಾಗಿಯೂ ಮರವಲೆಡಿಯದ್ದ ಅನುಭವ. ಗುರುಗಳ ಕೂಡ ಹೋದ ಅನುಭವ ಇನ್ನೂ ಮೊನ್ನೆ ಅಷ್ಟೇ ಕಳದ ಹಾಂಗೆ ನೆಂಪಾವ್ತು. ಎನ್ನ ಹತ್ರೆ ಸುಮಾರು ಪಟಂಗ ಇತ್ತು . ಆದರೆ ಈಗ ಎಲ್ಲಿದ್ದು ಹೇಳಿ ಗೊಂತಿಲ್ಲೆ. ಮಂಗ್ಳೂರು ಮಾಣಿ ಬರದ ಲೇಖನಕ್ಕೆ ಕೊಟ್ಟ ಒಪ್ಪಲ್ಲಿ ಆನು ಈ ವಿಷಯವ ಹೇಳಿತ್ತಿದ್ದೆ. ಆನು ೪ ಸರ್ತಿ ಕುಮಾರ ಪರ್ವತ ಹತ್ತಿದ್ದೆ. ಇನ್ನೂ ಆಸೆ ಕಮ್ಮಿ ಆಇದಿಲ್ಲೆ. ಆರಾರೂ ಹೋಪದಿದ್ದರೆ ಹೇಳಿ ಆನುದೇ ಬತ್ತೆ.
ಆರಾರೂ ಹೋಪದಿದ್ದರೆ ಹೇಳಿ ಆನುದೇ ಬತ್ತೆ.
– ದಿನಾ ಜನ ಹೊವುತ್ತವು, ರಜೆಲಿ ದಿನಕ್ಕೆ ೧೦೦ ರಿಂದ ೫೦೦ ಜನ ಇರುತ್ತವು!!
ನಿನ್ನ ಹಾಂಗೇ ಕಂಡತ್ತು ಭಾವಾ…
ಅಪ್ಪೋ ಅಲ್ಲದೋಗ್ರೇಶಿದೆ ಮತ್ತೆ… 😉
ಓಯ್, ಒಂದರಿ ಹೋಪನೋ?
ಅಯ್ಯೇ …. ೧೫ ನೆ ಪಟಲ್ಲಿಯೂ ಆನಿದ್ದೆ. ಎರಡು ಜೇಬ್ರ ಅಂಗಿಗಳ ನಡೂಕೆ
ಫಟಂಗಳಾ ನೋಡಿ ತುಂಬ ಖುಶಿ ಆತು ವೆಂಕಟೇಶಣ್ಣಾ?
ಧನ್ಯವಾದಂಗೊ..
ಇದರಲ್ಲಿ ನಿಂಗೊ ಎಲ್ಲಿದ್ದಿ?
ಕೆಮರದ ಹಿಂದೆ, ಕಾಣುತ್ತೋ?
ಛೇ…! ಶೇಪು ಭಾವ° ಇಲ್ಲದ್ದೆ ಮೋಸ ಆತನ್ನೆ 😉
ತುಂಬಾ ಖುಷಿ ಆತು ವೆಂಕಟೇಶಣ್ಣ… ಅನಂತ ಧನ್ಯವಾದಂಗ…
ಧನ್ಯವಾದಂಗೊ
ಎಂಗಳ ವೆಂಕಟೇಶನ ಸುದ್ದಿ ಓದಿ , ಪಟಂಗಳ ನೋಡಿ , ಭಾರೀ ಖುಶಿ ಆವುತ್ತಾ ಇದ್ದು……:)
ಎನಗೂ ಖುಶಿ ಆತು ಅತ್ತೆ
ಹೀಂಗೇ ಹೆಚ್ಚು ಹೆಚ್ಚು ಸುದ್ದಿ ಬರದು ಉಶಾರಿಯಾಯೆಕ್ಕು. ಅಂಬಗ ಎನ್ನ ಹಾಂಗಿಪ್ಪೋರಿಂಗೆ ಖುಶಿ ಅಪ್ಪದು…:)
ಅದ್ಭುತ ಅದ್ಭುತ. ಭಾರೀ ಲಾಯಕ ಆಯ್ದು ವೇಂಕಟೇಶಣ್ಣೋ. ಗುರುಗಳ ಜೊತೆಲಿ ಇದರ್ಲಿ ಭಾಗವಹಿಸಿದವಕ್ಕೆ ನಿಜವಾಗಿ ಇದೊಂದು ಅವಿಸ್ಮರಣೀಯ ಕಾರ್ಯ. ಅದೂ ಪಾದರಕ್ಷೆ ಇಲ್ಲದ್ದೇ. ಯಪಾ…. ಎನ್ನ ಕಾಲು ಪಟ ನೋಡಿಯೇ ಗುಳ್ಳೆ ಬಂತಿಲ್ಲಿ!!
ಒಂದು ದೊಡ್ಡೊಪ್ಪಹೇಳಿತ್ತು – ‘ಚೆನ್ನೈವಾಣಿ’
ತುಂಬಾ ಧನ್ಯವಾದಂಗೊ
ಪಟ೦ಗ ಲಾಯಕ ಇದ್ದು.
ತುಂಬಾ ಧನ್ಯವಾದಂಗೊ, ಆಗ ಏಳೆಂಟು ಡಾಕ್ಟ್ರುಗೊ ಬಂದಿತ್ತಿದವು.