Oppanna.com

ಓಡುಪ್ಪಾಳೆ ಕಾಯಿಹಾಲು

ಬರದೋರು :   ವೇಣಿಯಕ್ಕ°    on   20/03/2012    7 ಒಪ್ಪಂಗೊ

ವೇಣಿಯಕ್ಕ°

ಓಡುಪ್ಪಾಳೆ ಕಾಯಿಹಾಲು

ಬೇಕಪ್ಪ ಸಾಮಾನುಗೊ:

  • ಓಡುಪ್ಪಾಳೆ
  • 3-3.5 ಕಪ್(ಕುಡ್ತೆ) ತೆಂಗಿನಕಾಯಿ ತುರಿ / 4 ಕಪ್(ಕುಡ್ತೆ) ಕಾಯಿಹಾಲು
  • 1.5 ಕಪ್(ಕುಡ್ತೆ) ಬೆಲ್ಲ
  • 1-2 ಏಲಕ್ಕಿ (ಬೇಕಾದರೆ ಮಾತ್ರ)

ಮಾಡುವ ಕ್ರಮ:

ಓಡುಪ್ಪಾಳೆಯ ಈ ಸಂಕೋಲೆಲಿ ಹೇಳಿದ ಹಾಂಗೆ ಮಾಡಿ, ಒಂದು ಕರೆಲಿ ತಣಿವಲೆ 15 ನಿಮಿಷ ಮಡುಗಿ.

ತುರುದ ಕಾಯಿಯ ರೆಜ್ಜವೆ ನೀರು ಹಾಕಿ ಮಿಕ್ಸಿ/ಗ್ರೈಂಡರಿಲ್ಲಿ ನೊಂಪು ಕಡೆರಿ. ಅದರ ಒಂದು ವಸ್ತ್ರಲ್ಲಿ ಹಾಕಿ ಲಾಯಿಕಲಿ ಹಿಂಡಿ. ಹಿಂಡಿದ ಕಾಯಿಹಾಲಿನ ಪುಂಟೆಗೆ 1/2 ಗ್ಲಾಸು ನೀರು ಹಾಕಿ, ಲಾಯಿಕಲಿ ಬೆರುಸಿ, ಪುನಃ ಹಿಂಡಿ.

ಬೆಲ್ಲವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರಸಿ ಮಡುಗಿ.

ಕೆರಸಿದ ಬೆಲ್ಲವ ಹಿಂಡಿದ ಕಾಯಿಹಾಲಿಂಗೆ ಹಾಕಿ ಲಾಯಿಕ ತೊಳಸಿ. ಏಲಕ್ಕಿಯ ಹೊಡಿ ಮಾಡಿ ಇದಕ್ಕೆ ಹಾಕಿ ತೊಳಸಿ(ಬೇಕಾದರೆ ಮಾತ್ರ).

ಓಡುಪ್ಪಾಳೆಯ ಕಾಯಿಹಾಲಿನ ಪಾತ್ರಕ್ಕೆ ಒಂದೊಂದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಾಕಿ.

ಇದರ ಒಂದು ಕರೆಲಿ ಮುಚ್ಚಿ 1 ಘಂಟೆ ಮಡುಗಿ, ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

7 thoughts on “ಓಡುಪ್ಪಾಳೆ ಕಾಯಿಹಾಲು

  1. ಯೇ ದೇವರೇ!! ಓಡುಪ್ಪಾಳೆ ತಿ೦ದು ವರ್ಶಗಟ್ಲೆ ಆತು ಹೇಳಿ ನೆ೦ಪಾತಿದಾ ಈಗ..

  2. ವೇಣಿ,
    ಯೇವತ್ರಾಣ ಹಾಂಗೇ ಭಾರೀ ಲಾಯ್ಕಾಯಿದು ಪಟ ಸಮೇತ ವಿವರ ಬರದ್ದದು.
    ಇದು ಎನಗೆ ಇಷ್ಟದ್ದು. ಎನ್ನ ಅಮ್ಮ ಮಾಡಿಗೊಂಡಿದ್ದದು ನೆಂಪಾತು.
    ನೀನು ಇನ್ನೊಂದರಿ ಮಾಡುವಾಗ ಹೇಳಾತಾ… ಬತ್ತೆ.. 😉

  3. ಆಹಾ,ಎ೦ತಾ ರುಚಿ.
    ಈಗ ಸರೀ ಆತು. ಹೊಟ್ಟೆಯೂ ತು೦ಬಿತ್ತು.

  4. ನವಗೆ ಇಷ್ತ ಇದು, ಆದರೆ ಎಂತ್ಸರ ಮಾಡುದು, ಈ ಡಾಗುಟ್ರಕ್ಕೊ ನವಗೆ ಇಷ್ತ ಇಪ್ಪದರನ್ನೇ ಹುಡುಕಿ ತಿಂಬಲಾಗ ಹೇಳ್ತವನ್ನೆ. ..ಛೆ !

  5. ಒಡುಪ್ಪಾಳೆ ಕಾಮ್ಬಗಳೇ ‘ಓಡುಪ್ಪಾಳೆ ಕಾಯಿಹಾಲು’ ನ ಬೈಲಿನ್ಗೆ ವೇನಿಯಕ್ಕ ವಿವರುಸಿ ಹೇಳಿರೆ ಒಳ್ಳೆದಿತ್ತು ಹೇಳಿ ಅನ್ನಿಸಿದ್ದತ್ತು… ಖುಷಿಯಾತು…

  6. ಹು..! ಪಷ್ಟಾವ್ತು ಇದು – ಶುದ್ದಿಗೆ ಒಪ್ಪ

    ಇದು ಆದಿತ್ಯವಾರ ಮಾಡುತ್ಸು ಒಳ್ಳೇದು. ಬಾಕಿ ದಿನ ತಿಂದಿಕ್ಕಿ ಓಪೀಸಿಂಗೆ ಹೋವ್ತವಕ್ಕೆ ಭಂಙ !

  7. ಅಕ್ಕೋ ಇದಾ ಆ ಮೊನ್ನೆಯಾಣ ಮೆಡಿ ಉಪ್ಪಿನಕಾಯಿ ರಜಾ ಕರೇಂಗೆ ಬಳುಸಿಕ್ಕಿ ಆತೋ, ನವಗೆ ಬರೇ ಸೀವು ಹೆಚ್ಚಿಗೆ ತಿಂಬಲೆಡಿತ್ತಿಲ್ಲೆ….ಹ್ಮ್ಮ್

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×