Latest posts by ವಸಂತರಾಜ್ ಹಳೆಮನೆ (see all)
- ಸೂರ್ಯ ವಂದನಂ - January 1, 2014
- ಸಣ್ಣ ಹೂಗಿನ ಪಟಂಗೊ… - August 23, 2012
- ಮದುರೈ ಮೀನಾಕ್ಷಿ ದೇವಾಲಯದ ದೃಶ್ಯಂಗೊ… - April 9, 2012
‘ಖರ’ ಹೋಗಿ ‘ನಂದನ’ದ ಆಗಮನ. ಬೈಲಿನ ಸಮಸ್ತರಿಂಗೂ ಯುಗಾದಿ ಹಬ್ಬದ ಶುಭಾಶಯಂಗೊ. ಹೊಸ ವರ್ಷ ಎಲ್ಲರಿಂಗೂ ಶುಭವ ತಂದುಕೊಡಲಿ.
ಹಳತು ಹೋಗಿ ಹೊಸತು ಬಂತು
ನಂದನ ಸಂವತ್ಸರ |
ಬೆರೆತು ಬಾಳಿ, ಕಲೆತು ಬಾಳಿ
ಮರೆತು ಹಳೆಯ ಮತ್ಸರ ||
ಸಮ ಸಮಕ್ಕೆ ಹಂಚಿ ತಿಂಬ
ಕಹಿ-ಸಿಹಿ ಬೇವು ಬೆಲ್ಲವ |
ಕಷ್ಟ ಸುಖವ ಹಂಚಿಗೊಂಬ
ಒಪ್ಪಣ್ಣನ ಬೈಲಿಲಿ ಎಲ್ಲವ ||
(ಬರದ್ದದು: ಹಳೆಮನೆ ಅತ್ತಿಗೆ)
ಎಲ್ಲೋರಿ೦ಗುದೆ ಶುಭಾಶಯ೦ಗೊ..
ಸುಂದರ. ಮನೋಹರ.
ಹೊಸ ಸಂವತ್ಸರ ಎಲ್ಲರಿಂಗೂ ಶುಭವ ತರಲಿ.
ಶ್ರೀಲತ° ಬರದ ಕವನವೂ, ರಾಜ° ತೆಗದ ಚಿತ್ರವೂ ಚೆಂದ ಬಯಿಂದು. ಹೊಸ ವರ್ಷ ಎಲ್ಲೋರಿಂಗು ಶುಭವ ತರಲಿ.
ಹೊಸ ಸಂವತ್ಸರ ಎಲ್ಲರಿಂಗೂ ಶುಭವ ತರಲಿ.
ಚಿತ್ರ, ಕವನ, ಕವನದ ಆಶಯ ಎಲ್ಲವೂ ಲಾಯಿಕ ಆಯಿದು.
ತುಂಬಾ ಚೆಂದದ ಫೋಟೋ..
ಕಳ್ಳರ ಪ್ರಭದವು ಇದರನ್ನೂ ಕದ್ದರೆ,
ನಮ್ಮ Reputation ಮತ್ತಷ್ಟು ಹೆಚ್ಚ್ಹಾತು ಹೇಳಿಯೇ ಲೆಕ್ಕ…
🙂
ಆಹಾ..ಚಿತ್ರದಷ್ಟೇ ಚೆ೦ದದ ಕವನ.
ಶುಭವಾಗಲಿ.
ಹಸಿರು ಹಳದಿ, ಪ್ರಕೃತಿ ಪುರುಷ ಮಿಲನ
ಕಲಿಶುತ್ತು ಕಲೆತು,ಬೆರೆತು ಬಾಳ್ವ ಜೀವನ
ಅಣ್ಣ,ಅತ್ತಿಗೆ ಸೇರಿ ಕಳುಸಿದ ಚಿತ್ರ ಕವನ
ಸ್ವಾಗತಿಸುತ್ತು ಆನಂದದ ನಂದನ
ಶುಭಾಷಯ ಹೇಳಿದ ಹಳೆಮನೆ ಅಣ್ಣ,ಅತ್ತಿಗೆ ಹಾಂಗೂ ಬೈಲಿನ ಸಮಸ್ತರಿಂಗೆ ‘ನಂದನ’ ಸಂವತ್ಸರ ಆನಂದವ ಉಂಟುಮಾಡಲಿ…
ಜಯಕ್ಕಾ, ಆನು ಹಳೆಮನೆ ಅಣ್ಣ ಅಲ್ಲ, ಹಳೆಮನೆ ತಮ್ಮ. ಪದ್ಯ ಬರದ್ದದು ಎನ್ನ ಅತ್ತಿಗೆ.
ಕ್ಷಮೆಯಿರಲಿ… ಹಳೆಮನೆ ಅಣ್ಣ,ಅತ್ತಿಗೆ, ತಮ್ಮ ಹಾಂಗೂ ಕುಟುಂಬದವರಿಂಗೆ ಎಲ್ಲ ‘ನಂದನ’ ಸಂವತ್ಸರದ ಶುಭಾಶಯಂಗೊ…