Oppanna.com

ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್”

ಬರದೋರು :   ಬಟ್ಟಮಾವ°    on   28/04/2012    4 ಒಪ್ಪಂಗೊ

ಬಟ್ಟಮಾವ°

ಆರು ಶ್ಲೋಕಂಗಳ ಗುಚ್ಛಕ್ಕೆ “ಷಟ್ಕ” ಹೇಳುದು. ಇದು ಆತ್ಮನ ಬಗೆಗೆ ತಿಳಿಶುವ ಈ ಶ್ಲೋಕ ಗುಚ್ಛಕ್ಕೆ ಆತ್ಮ ಷಟ್ಕ ಹೇಳ್ತವು, ಅತವಾ – ನಿರ್ವಾಣ ಷಟ್ಕ ಹೇಳಿಯೂ ಹೇಳ್ತವು.

ಶ್ರೀ ಶಂಕರಾಚಾರ್ಯರ ನಿರ್ವಾಣ ಷಟ್ಕಂ ಅಥವಾ ಆತ್ಮ ಷಟ್ಕಂ ಹೆಸರೇ ಹೇಳುವ ಹಾಂಗೆ ಆತ್ಮರೂಪಿಯ ದರ್ಶನ ಮಾಡ್ಸುವಂಥದ್ದು. ನಮ್ಮ ಭೌತಿಕ ಶರೀರಲ್ಲಿ ಇಪ್ಪ ವ್ಯಕ್ತಿ ನಾವು ನಿಜವಾದ ವ್ಯಕ್ತಿ ಅಲ್ಲ, ಆತ್ಮರೂಪಿಯಾದ ಸಚ್ಚಿದಾನಂದಾತ್ಮ ಶಿವ ಆನು ಹೇಳಿ ಹೇಳುವ ವಿವರಣೆಯ ಕೊಡುವ ಆರು ರತ್ನತುಲ್ಯ ಶಬ್ಧಮಾಲೆಗೋ. ನಾವು ಈ ಜೀವನಲ್ಲಿ ಅನುಭವಿಸುವ ಯಾವುದೇ ರಾಗ ದ್ವೇಷ, ಒಳಿತು ಕೆಡುಕುಗೋ ನಮ್ಮ ಆತ್ಮರೂಪಿಗೆ ಬಾಧಕ ಆವುತ್ತಿಲ್ಲೆ. ಅದು ಸಚ್ಚಿದಾನಂದಾತ್ಮ ಶಿವ ಸ್ವರೂಪಿ ಹೇಳಿ ಆಚಾರ್ಯರು ತುಂಬಾ ಚೆಂದಕ್ಕೆ ವಿವರಣೆ ಕೊಡುತ್ತವು.

ಆತ್ಮಷಟ್ಕಮ್ /ನಿರ್ವಾಣ ಷಟ್ಕಂ:

ಮನೋಬುದ್ಧ್ಯಹಂಕಾರ-ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ |
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೧||

ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋಶಃ |
ನ ವಾಕ್ಪಾಣಿ-ಪಾದೌ ನ ಚೋಪಸ್ಥಾಪಯೂ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೨||

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೩||

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞಾಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||೪||

ನ ಮೃತ್ಯುರ್ನಶಂಕಾ ನ ಮೇ ಜಾತಿಭೇದಃ
ಪಿತಾನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||೫||

ಅಹಂ ನಿರ್ವಿಕಲ್ಪೋ ನಿರಾಕಾರ-ರೂಪೋ
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಂ |
ನ ಚಾsಸಂಗತಂ ನೈವ ಮುಕ್ತಿರ್ನ ಮೇಯಃ
ಚಿದಾನಂದ-ರೂಪಃ ಶಿವೋsಹಂ ಶಿವೋsಹಂ ||೬||

~*~*~

ಆತ್ಮಷಟ್ಕಮ್, ಕೇಳುಲೆ:

4 thoughts on “ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್”

  1. ಇದರ ಇಲ್ಲಿ ಓದುವಗ ಸಂತೋಷ ಆತು, ಎಂಗೊ ಕಾಲೇಜಿಲ್ಲಿ ಕಲಿವಗ ಐದು ವರ್ಷವೂ ನಿತ್ಯವೂ ಹೊತ್ತೋಪಗ ಪ್ರಾರ್ಥನೆಲಿ ಇದರ ಹೇಳುದು ಕಡ್ಡಾಯ ಆಗಿದ್ದತ್ತು. ಎನಗೆ ಇದು ತುಂಬಾ ಇಷ್ಟ.
    ಆಚಾರ್ಯರ ಈ ಅರ್ಥಪೂರ್ಣ ಸಾಲುಗಳ ನಾವು ಅರ್ಥಮಾಡಿಗೊಂಡರೆ ಜೀವನ ಸುಲಭ ..ಸರಳ ! ಅಲ್ಲದಾ?

  2. ಚಿಕ್ಕಮ್ಮಾ,
    ಓ ಅಂದು – ಮೂರು ವರ್ಷ ಮದಲು, ಕೋಲೇಜಿನ ಸಂಸ್ಕೃತ ಸಂಘದೋರು, ಯೋಗಾಸನ ಕಲಿಶಿಯೊಂಡಿಪ್ಪಗ ಇದರ ಹಾಕಿತ್ತಿದ್ದವಿದಾ…
    ಭಾರೀ ಲಾಯಕಿದ್ದು 🙂

  3. ಶ್ಲೋಕ ಕೇಳಿ ಬಾರಿ ಖುಶಿ ಆತು ಚಿಕ್ಕಮ್ಮ, ಧನ್ಯವಾದ೦ಗೊ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×