Oppanna.com

ಶಿವಪಂಚಾಕ್ಷರ “ನಕ್ಷತ್ರಮಾಲಾ ಸ್ತೋತ್ರಮ್”

ಬರದೋರು :   ಶ್ರೀಅಕ್ಕ°    on   26/04/2012    7 ಒಪ್ಪಂಗೊ

ಎಲ್ಲೋರಿಂಗೂ ಶಂಕರಜಯಂತಿಯ ಶುಭಾಶಯಂಗೊ.
ಶಂಕರಾಚಾರ್ಯ ವಿರಚಿತ ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರಮ್ ಇಲ್ಲಿದ್ದು.

ಶಿವ ಪಂಚಾಕ್ಷರಿಯ ಒಳಗೊಂಡು ಶಿವನ ರೂಪವ, ಶಿವನ ವೈಭವವ ಹೇಳಿ ಇಪ್ಪತ್ತೇಳು ಶ್ಲೋಕ ಗುಚ್ಛ ರಚನೆ ಮಾಡಿದ್ದವು ಶ್ರೀ ಶಂಕರಾಚಾರ್ಯರು.
ಇಪ್ಪತ್ತೆಂಟನೆಯ ಫಲಶ್ರುತಿಲಿ ಹೇಳ್ತವು, ಶಿವ ಪಂಚಾಕ್ಷರಿಂದ ಕೂಡಿದ ಕಮಲ ಮಣಿಯ ಹಾಂಗೆ ಸಂತೋಷ ಕೊಡುವ ನಾಲ್ಕು ಸಾಲುಗಳ ನಕ್ಷತ್ರ ಮಾಲಿಕೆಯ ಸರವ ಕಂಠಲ್ಲಿ ಧರಿಸಿ ಚಂದ್ರನ ಹಾಂಗೆ ವಿರಾಜಿಸಿ ಸಂತೋಷಗೊಳ್ಳುತ್ತ.
ಅಮೂಲ್ಯವಾದ ಈ ಕೃತಿಯ ಶ್ರವಣ ಪಠಣ ಮಾಡಿ ಎಲ್ಲೋರಿಂಗೂ ಶಿವಾನುಗ್ರಹ ಆಗಲಿ ಹೇಳಿ ಹಾರಯಿಕೆ.

ಈ ಶ್ಲೋಕವ ಶೃತಿಬದ್ಧವಾಗಿ ರಾಗಲ್ಲಿ ಹಾಡಿ ಕಳುಸಿದ ಪ್ರೀತಿಯ ಸೊಸೆ “ದೀಪಿ”ಗೆ ವಂದನೆಗೊ.

ಶಿವಪಂಚಾಕ್ಷರನಕ್ಷತ್ರಮಾಲಾ ಸ್ತೋತ್ರಮ್:

ಶ್ರೀಮದಾತ್ಮನೇ ಗುಣೈಕಸಿಂಧವೇ ನಮಃ ಶಿವಾಯ
ಧಾಮಲೇಶಧೂತಕೋಕಬಂಧವೇ ನಮಃ ಶಿವಾಯ |
ನಾಮಶೋಷಿತಾನಮದ್ಭವಾಂಧವೇ ನಮಃ ಶಿವಾಯ
ಪಾಮರೇತರಪ್ರಧಾನಬಂಧವೇ ನಮಃ ಶಿವಾಯ ||೧||

ಕಾಲಭೀತವಿಪ್ರಬಾಲಪಾಲತೇ ನಮಃ ಶಿವಾಯ
ಶೂಲಭಿನ್ನದುಷ್ಟದಕ್ಷಫಾಲತೇ ನಮಃ ಶಿವಾಯ |
ಮೂಲಕಾರಣಾಯ ಕಾಲಕಾಲತೇ ನಮಃ ಶಿವಾಯ
ಪಾಲಯಾಧುನಾದಯಾಲಪಾಲತೇ ನಮಃ ಶಿವಾಯ ||೨||

ಇಷ್ಟವಸ್ತುಮುಖ್ಯದಾನಹೇತವೇ ನಮಃ ಶಿವಾಯ
ದುಷ್ಟದೈತ್ಯವಂಶಧೂಮಕೇತವೇ ನಮಃ ಶಿವಾಯ |
ಸೃಷ್ಟಿರಕ್ಷಣಾಯ ಧರ್ಮಸೇತವೇ ನಮಃ ಶಿವಾಯ
ಅಷ್ಟಮೂರ್ತಯೇ ವೃಷೇಂದ್ರಕೇತವೇ ನಮಃ ಶಿವಾಯ ||೩||

ಆಪದದ್ರಿಭೇದಟಂಕಹಸ್ತತೇ ನಮಃ ಶಿವಾಯ
ಪಾಪಹಾರಿದಿವ್ಯಸಿಂಧುಮಸ್ತತೇ ನಮಃ ಶಿವಾಯ |
ಪಾಪಹಾರಿಣೇಲಸನ್ನಮಸ್ತತೇ ನಮಃ ಶಿವಾಯ
ಶಾಪದೋಷಖಂಡನಪ್ರಶಸ್ತತೇ ನಮಃ ಶಿವಾಯ ||೪||

ವ್ಯೋಮಕೇಶ ದಿವ್ಯಭವ್ಯರೂಪತೇ ನಮಃ ಶಿವಾಯ
ಹೇಮಮೇದಿನೀಧರೇಂದ್ರಚಾಪತೇ ನಮಃ ಶಿವಾಯ |
ನಾಮಮಾತ್ರದಗ್ಧಸರ್ವಪಾಪತೇ ನಮಃ ಶಿವಾಯ
ಕಾಮನೈಕತಾನಹೃದ್ದುರಾಪತೇ ನಮಃ ಶಿವಾಯ ||೫||

ಬ್ರಹ್ಮಮಸ್ತಕಾವಲೀನಿಬದ್ಧತೇ ನಮಃ ಶಿವಾಯ
ಜಿಮ್ಹಗೇಂದ್ರಕುಂಡಲಪ್ರಸಿದ್ಧತೇ ನಮಃ ಶಿವಾಯ |
ಬ್ರಹ್ಮಣೇ ಪ್ರಣೀತವೇದಪದ್ಧತೇ ನಮಃ ಶಿವಾಯ
ಜಿಂಹ್ಮಕಾಲದೇಹದತ್ತಪದ್ಧತೇ ನಮಃ ಶಿವಾಯ ||೬||

ಕಾಮನಾಶನಾಯಶುದ್ಧಕರ್ಮಣೇ ನಮಃ ಶಿವಾಯ
ಸಾಮಗಾನಜಾಯಮಾನಶರ್ಮಣೇ ನಮಃ ಶಿವಾಯ |
ಹೇಮಕಾಂತಿಚಾಕಚಕ್ಯವರ್ಮಣೇ ನಮಃ ಶಿವಾಯ
ಸಾಮಜಾಸುರಾಂಗಲಬ್ಧಚರ್ಮಣೇ ನಮಃ ಶಿವಾಯ ||೭||

ಜನ್ಮಮೃತ್ಯುಘೋರದುಃಖಹಾರಿಣೇನಮಃ ಶಿವಾಯ
ಚಿನ್ಮಯೈಕರೂಪದೇಹಧಾರಿಣೇ ನಮಃ ಶಿವಾಯ |
ಮನ್ಮನೋರಥಾವಪೂರ್ತಿಕಾರಿಣೇ ನಮಃ ಶಿವಾಯ
ಸನ್ಮನೋಗತಾಯ ಕಾಮವೈರಿಣೇ ನಮಃ ಶಿವಾಯ ||೮||

ಯಕ್ಷರಾಜಬಂಧವೇ ದಯಾಲವೇ ನಮಃ ಶಿವಾಯ
ದಕ್ಷಪಾಣಿಶೋಭಿಕಾಂಚನಾಲವೇ ನಮಃ ಶಿವಾಯ |
ಪಕ್ಷಿರಾಜವಾಹಹೃಚ್ಛಯಾಲವೇ ನಮಃ ಶಿವಾಯ
ಅಕ್ಷಿಫಾಲ ವೇದಪೂತತಾಲವೇ ನಮಃ ಶಿವಾಯ ||೯||

ದಕ್ಷಹಸ್ತ ನಿಷ್ಠಜಾತವೇದಸೇ ನಮಃ ಶಿವಾಯ
ಅಕ್ಷರಾತ್ಮನೇ ನಮದ್ಬಿಡೌಜಸೇ ನಮಃ ಶಿವಾಯ |
ದೀಕ್ಷಿತ ಪ್ರಕಾಶಿತಾತ್ಮತೇಜಸೇ ನಮಃ ಶಿವಾಯ
ಉಕ್ಷರಾಜವಾಹ ತೇ ಸತಾಂ ಗತೇ ನಮಃ ಶಿವಾಯ ||೧೦||

ರಾಜತಾಚಲೇಂದ್ರಸಾನುವಾಸಿನೇ ನಮಃ ಶಿವಾಯ
ರಾಜಮಾನನಿತ್ಯಮಂದಹಾಸಿನೇ ನಮಃ ಶಿವಾಯ |
ರಾಜಕೋರಕಾವತಂಸಭಾಸಿನೇ ನಮಃ ಶಿವಾಯ
ರಾಜರಾಜಮಿತ್ರತಾಪ್ರಕಾಶಿನೇ ನಮಃ ಶಿವಾಯ ||೧೧||

ದೀನಮಾನವಾಲಿಕಾಮಧೇನವೇ ನಮಃ ಶಿವಾಯ
ಸೂನಬಾಣದಾಹಕೃತ್ ಕೃಶಾನವೇ ನಮಃ ಶಿವಾಯ |
ಸ್ವಾನುರಾಗಭಕ್ತರತ್ನಸಾನವೇ ನಮಃ ಶಿವಾಯ
ದಾನವಾಂಧಕಾರಚಂಡಭಾನವೇ ನಮಃ ಶಿವಾಯ ||೧೨||

ಸರ್ವಮಂಗಲಾಕುಚಾಗ್ರಶಾಯಿನೇ ನಮಃ ಶಿವಾಯ
ಸರ್ವದೇವತಾಗಣಾತಿಶಾಯಿನೇ ನಮಃ ಶಿವಾಯ |
ಪೂರ್ವದೇವನಾಶಸಂವಿಧಾಯಿನೇ ನಮಃ ಶಿವಾಯ
ಸರ್ವಮನ್ಮನೋಜಭಂಗದಾಯಿನೇ ನಮಃ ಶಿವಾಯ ||೧೩||

ಸ್ತೋಕಭಕ್ತಿತೋಪಿ ಭಕ್ತಪೋಷಿಣೇ ನಮಃ ಶಿವಾಯ
ಮಾಕರಂದಸಾರವರ್ಷಿಭಾಷಣೇ ನಮಃ ಶಿವಾಯ|
ಏಕಬಿಲ್ವದಾನತೋಪಿ ತೋಷಿಣೇ ನಮಃ ಶಿವಾಯ
ನೈಕಜನ್ಮಪಾಪಜಾಲಶೋಷಿಣೇ ನಮಃ ಶಿವಾಯ ||೧೪||

ಸರ್ವಜೀವರಕ್ಷಣೈಕಶೀಲಿನೇ ನಮಃ ಶಿವಾಯ
ಪಾರ್ವತೀಪ್ರಿಯಾಯ ಭಕ್ತಪಾಲಿನೇ ನಮಃ ಶಿವಾಯ |
ದುರ್ವಿದಗ್ಧದೈತ್ಯಸೈನ್ಯದಾರಿಣೇ ನಮಃ ಶಿವಾಯ
ಶರ್ವರೀಶಧಾರಿಣೇ ಕಪಾಲಿನೇ ನಮಃ ಶಿವಾಯ ||೧೫||

ಪಾಹಿಮಾಮುಮಾಮನೋಜ್ಞ ದೇಹ ತೇ ನಮಃ ಶಿವಾಯ
ದೇಹಿ ಮೇ ವರಂ ಸಿತಾದ್ರಿಗೇಹ ತೇ ನಮಃ ಶಿವಾಯ |
ಮೋಹಿತರ್ಷಿಕಾಮಿನೀಸಮೂಹ ತೇ ನಮಃ ಶಿವಾಯ
ಸ್ವೇಹಿತಪ್ರಸನ್ನ ಕಾಮದೋಹ ತೇ ನಮಃ ಶಿವಾಯ ||೧೬||

ಮಂಗಲಪ್ರದಾಯ ಗೋತುರಂಗ ತೇ ನಮಃ ಶಿವಾಯ
ಗಂಗಯಾತರಂಗಿತೋತ್ತಮಾಂಗತೇ ನಮಃ ಶಿವಾಯ |
ಸಂಗರಪ್ರವೃತ್ತವೈರಿಭಂಗ ತೇ ನಮಃ ಶಿವಾಯ
ಅಂಗಜಾರಯೇ ಕರೇಕುರಂಗ ತೇ ನಮಃ ಶಿವಾಯ ||೧೭||

ಈಹಿತಕ್ಷಣಪ್ರದಾನಹೇತವೇ ನಮಃ ಶಿವಾಯ
ಆಹಿತಾಗ್ನಿಪಾಲಕೋಕ್ಷಕೇತವೇ ನಮಃ ಶಿವಾಯ |
ದೇಹಕಾಂತಿಧೂತರೌಪ್ಯಧಾತವೇ ನಮಃ ಶಿವಾಯ
ದೇಹದುಃಖಪುಂಜಧೂಮಕೇತವೇ ನಮಃ ಶಿವಾಯ ||೧೮||

ತ್ರ್ಯಕ್ಷ ದೀನಸತ್ಕೃಪಾಕಟಾಕ್ಷ ತೇ ನಮಃ ಶಿವಾಯ
ದಕ್ಷಸಪ್ತತಂತುನಾಶದಕ್ಷ ತೇ ನಮಃ ಶಿವಾಯ |
ೠಕ್ಷರಾಜಭಾನುಪಾವಕಾಕ್ಷ ತೇ ನಮಃ ಶಿವಾಯ
ರಕ್ಷಮಾಂ ಪ್ರಪನ್ನಮಾತ್ರರಕ್ಷ ತೇ ನಮಃ ಶಿವಾಯ ||೧೯||

ನ್ಯಂಕುಪಾಣಯೇ ಶಿವಂಕರಾಯ ತೇ ನಮಃ ಶಿವಾಯ
ಸಂಕಟಾಬ್ಧಿತೀರ್ಣಕಿಂಕರಾಯ ತೇ ನಮಃ ಶಿವಾಯ|
ಪಂಕಭೀಷಿತಾಭಯಂಕರಾಯ ತೇ ನಮಃ ಶಿವಾಯ
ಪಂಕಜಾನನಾಯ ಶಂಕರಾಯ ತೇ ನಮಃ ಶಿವಾಯ ||೨೦||

ಕರ್ಮಪಾಶನಾಶ ನೀಲಕಂಠ ತೇ ನಮಃ ಶಿವಾಯ
ಶರ್ಮದಾಯ ನರ್ಯಭಸ್ಮ ಕಂಠ ತೇ ನಮಃ ಶಿವಾಯ |
ನಿರ್ಮಮರ್ಷಿಸೇವಿತೋಪಕಂಠ ತೇ ನಮಃ ಶಿವಾಯ
ಕುರ್ಮಹೇನತೀರ್ನಮದ್ವಿಕುಂಠ ತೇ ನಮಃ ಶಿವಾಯ ||೨೧||

ವಿಷ್ಟಪಾಧಿಪಾಯ ನಮ್ರವಿಷ್ಣವೇ ನಮಃ ಶಿವಾಯ
ಶಿಷ್ಟವಿಪ್ರಹೃದ್ಗುಹಾಚರಿಷ್ಟವೇ ನಮಃ ಶಿವಾಯ |
ಇಷ್ಟವಸ್ತು ನಿತ್ಯತುಷ್ಟಜಿಷ್ಣವೇ ನಮಃ ಶಿವಾಯ
ಕಷ್ಟನಾಶನಾಯಲೋಕಜಿಷ್ಣವೇ ನಮಃ ಶಿವಾಯ ||೨೨||

ಅಪ್ರಮೇಯದಿವ್ಯಸುಪ್ರಭಾವ ತೇ ನಮಃ ಶಿವಾಯ
ಸತ್ಪ್ರಪನ್ನರಕ್ಷಣಸ್ವಭಾವ ತೇ ನಮಃ ಶಿವಾಯ |
ಸ್ವಪ್ರಕಾಶ ನಿಸ್ತುಲಾನುಭಾವ ತೇ ನಮಃ ಶಿವಾಯ
ವಿಪ್ರಡಿಂಬದರ್ಶಿತಾರ್ದ್ರಭಾವ ತೇ ನಮಃ ಶಿವಾಯ ||೨೩||

ಸೇವಕಾಯ ಮೇ ಮೃಡ ಪ್ರಸೀದ ತೇ ನಮಃ ಶಿವಾಯ
ಭಾವಲಭ್ಯ ತಾವಕಪ್ರಸಾದ ತೇ ನಮಃ ಶಿವಾಯ |
ಪಾವಕಾಕ್ಷ ದೇವಪೂಜ್ಯಪಾದ ತೇ ನಮಃ ಶಿವಾಯ
ತಾವಕಾಂಘ್ರಿಭಕ್ತದತ್ತಮೋದ ತೇ ನಮಃ ಶಿವಾಯ ||೨೪||

ಭಕ್ತಿಮುಕ್ತಿದಿವ್ಯಭೋಗದಾಯಿನೇ ನಮಃ ಶಿವಾಯ
ಶಕ್ತಿಕಲ್ಪಿತಪ್ರಪಂಚಭಾಗಿನೇ ನಮಃ ಶಿವಾಯ |
ಭಕ್ತಸಂಕಟಾಪಹಾರಯೋಗಿನೇ ನಮಃ ಶಿವಾಯ
ಯುಕ್ತಸನ್ಮನಃಸರೋಜಯೋಗಿನೇ ನಮಃ ಶಿವಾಯ ||೨೫||

ಅಂತಕಾಂತಕಾಯ ಪಾಪಹಾರಿಣೇ ನಮಃ ಶಿವಾಯ
ಶಾಂತಮಾಯ ದಂತಿಚರ್ಮಧಾರಿಣೇ ನಮಃ ಶಿವಾಯ |
ಸಂತತಾಶ್ರೀತವ್ಯಥಾವಿದಾರಿಣೇ ನಮಃ ಶಿವಾಯ
ಜಂತುಜಾತನಿತ್ಯಸೌಖ್ಯಕಾರಿಣೇ ನಮಃ ಶಿವಾಯ ||೨೬||

ಶೂಲಿನೇ ನಮೋನಮಃ ಕಪಾಲಿನೇ ನಮಃ ಶಿವಾಯ
ಪಾಲಿನೇ ವಿರಿಂಚಿತುಂಡಮಾಲಿನೇ ನಮಃ ಶಿವಾಯ |
ಲೀಲಿನೇ ವಿಶೇಷರುಂಡಮಾಲಿನೇ ನಮಃ ಶಿವಾಯ
ಶೀಲಿನೇ ನಮಃ ಪ್ರಪುಣ್ಯಶಾಲಿನೇ ನಮಃ ಶಿವಾಯ ||೨೭||

ಶಿವಪಂಚಾಕ್ಷರಮುದ್ರಾಂ
ಚತುಷ್ಪದೊಲ್ಲಾಸಪದ್ಯಮಣಿಘಟಿತಾಮ್|
ನಕ್ಷತ್ರಮಾಲಿಕಾಮಿಹ
ದಧದುಪಕಂಠಂ ನರೋ ಭವೇತ್ಸೋಮಃ ||೨೮||

~*~*~

ನಕ್ಷತ್ರಮಾಲಾ ಸ್ತೋತ್ರ, ಕೇಳುಲೆ:

ನಮ್ಮ ದೀಪಿಅಕ್ಕ ಹಾಡಿದ ಶ್ಲೋಕ, ಕೇಳಿ, ಹೇಂಗಿದ್ದು ತಿಳುಶಿಕ್ಕಿ:


NakshatraMala-Stotram-Deepika Bhat

7 thoughts on “ಶಿವಪಂಚಾಕ್ಷರ “ನಕ್ಷತ್ರಮಾಲಾ ಸ್ತೋತ್ರಮ್”

  1. ಶ್ರೀ ಅಕ್ಕನೂ ದೀಪಿಕಾಕ್ಕನೂ ಜೊತೆಗೂಡಿ ಈ ಕಾರ್ಯ ಸೊಗಸಾಗಿ ಮೂಡಿಬಯಿಂದು ಹೇಳಿ – ‘ಚೆನ್ನೈವಾಣಿ’.

  2. ಈ ನಕ್ಷತ್ರ ಮಾಲೆಯ ಒದಗಿಸಿಕೊಟ್ಟ ಶ್ರೀ….. ಮತ್ತೆ ತುಂಬಾ ಚೆಂದಕೆ ಹಾಡಿದ ದೀಪಿಕಾ, ಇಬ್ರಿಂಗೂ ಧನ್ಯವಾದಂಗೊ.

  3. ಧನ್ಯವಾದ ಶ್ರೀ ಚಿಕ್ಕಮ್ಮ. ತುಂಬ ಚೆಂದ ಇದ್ದು ಶ್ಲೋಕ 🙂
    ದೀಪಿ, ಸ್ವರ ಲಾಯ್ಕಿದ್ದು. ಕೇಳುಲೆ ತುಂಬ ಖುಶಿ ಆವುತ್ತು. 🙂
    ಓ ಒಂದು ಕಡೆ(೧೦ನೆಯ ಶ್ಲೋಕಲ್ಲಿ),
    ನಿಷ್ಠಜಾತವೇದಸೇ – ನಿಷ್ಠಜಾಲವೇದಸೇ ಹೇಳಿ ಆದಹಾಂಗೆ ಕಂಡತ್ತು.
    ಪ್ರಶ್ನೆ ಇಲ್ಲೆ.. ನಗಣ್ಯ, ಬಿಡ್ಲಕ್ಕು. 🙂

  4. ಚಾಮರ ವೃತ್ತಲ್ಲಿ[ಚಾಮರಾಖ್ಯ ವೃತ್ತಮಪ್ಪುದೈದೆ ರಂಜರಂಜರಂ] ಮೂಡಿಬಂದ ಶ್ಲೋಕವ ಹಾಡಿದ್ದು ಚಾಮರಲ್ಲಿ ಗಾಳಿ ಹಾಕಿದ ಹಾಂಗೆ ಅಲೆಅಲೆಯಾಗಿ ಬತ್ತು-ಬಹಳ ಲಾಯ್ಕ ಆಯಿದು.

    1. ಅಲೆ ಅಲೆಯಾಗಿ ಬಂದ ಪದ್ಯ ಕೇಳಿ ಚಾಮರ ವೃತ್ತವೋ ಹೇಳಿ ಭ್ರಮಿಸಿದೆ.ಇಂದು ಪ್ರಸ್ತಾರ ಹಾಕಿ ನೋಡಿರೆ ಒಂದು ಗಂ ಜಾಸ್ತಿ ಇದ್ದನ್ನೇ? ಇದು ಯಾವ ವೃತ್ತ ಹೇಳಿ ತಿಳಿಸಿ ಶ್ರೀ ಅಕ್ಕ.

  5. ದೀಪಿಅಕ್ಕ ಹಾಡಿದ್ದು ತು೦ಬಾ ಲಾಯಿಕಾಯಿದು ಆತ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×