Oppanna.com

ಮನಸೆಳೆದ ಮಕ್ಕಳ ಪುಣ್ಯಕೋಟಿ

ಬರದೋರು :   ದೇವಸ್ಯ ಮಾಣಿ    on   23/04/2012    8 ಒಪ್ಪಂಗೊ

ಈಗ ‘ಸಣ್ಣ ಮಕ್ಕ’ಳಿಂದ ಹಿಡುದು, ’ರಜ ದೊಡ್ಡ ಮಕ್ಕೊಗೂ’ ಬೇಸಗೆ ’ರಜೆ’ ಇಪ್ಪ ಕಾಲ. ಈ ರಜೆಲಿ ಮಕ್ಕ ಮನೆಲಿ ಕೂದು ಕಂಡಾಬಟ್ಟೆ ಉಪದ್ರ ಮಾಡ್ತವು ಹೇಳಿ, ಅಬ್ಬೆ ಅಪ್ಪ ಯಾವುದಾರೂ ಶಿಬಿರ ಇತ್ಯಾದಿ ಗೆ ಸೇರ‍್ಸುತ್ತದು ಈಗಾಣ ಟ್ರೆಂಡ್ ಆಗಿ ಹೋಯಿದು. ಮೊದಲು ಮನೆಗೆ ನಂಟ್ರುಗೊ ಎಲ್ಲ ಬಂದು ಮನೆಲೇ ಬೇಸಿಗೆ ಶಿಬಿರ ಆಯ್ಕೊಂಡಿತ್ತು ಆದರೆ ಈಗ ಆರಿಂಗುದೇ ಬಪ್ಪಲೇ ಪುರುಸೊತ್ತು ಇಲ್ಲದ್ದು ಬೇಜಾರದ ಸಂಗತಿ.
ರಜೆಲಿ ’ರಂಗನಾಟಕ ಶಿಬಿರ’ ಮಾಡಿ ನಾಟಕ, ಅಭಿನಯದ ವಿಷಯವ ಹೇಳಿಕೊಡುವ ಬೇಸಗೆ ಶಿಬಿರ ಪುತ್ತೂರಿಲಿ ನಡದತ್ತು. ಹೇಳಿದ ಹಾಂಗೆ ಈ ಶಿಬಿರವ ನಡೆಶುದು ಪುಟಾಣಿ ಮಕ್ಕಳ ಪ್ರೀತಿಯ ದೇರಾಜೆ ಮಾವ. ಅದೇ ನಮ್ಮ ಮೂರ್ತಿ ದೇರಾಜೆ ಮಾವ. ಇವು ಮಕ್ಕೊಗೆ ಸುಲಭ ಅಪ್ಪಹಾಂಗಿಪ್ಪ ಕಥೆಯ ತೆಕ್ಕೊಂಡು ಮಕ್ಕಳ ಕೈಯಿಂದಲೇ ಅದರ ನಿರ್ದೇಶಿಸಿ, ಕಡೆಂಗೆ ಒಂದು ನಾಟಕ ಮಾಡ್ಸುವಲ್ಲಿಗೆ ಶಿಬಿರ ಮುಗಿಶುತ್ತವು ಅಲ್ಲದ್ದೆ ಈ ಶಿಬಿರಲ್ಲಿ ಕೇವಲ ನಾಟಕ ಮಾತ್ರ ಅಲ್ಲದ್ದೇ ಬೇರೆ ಸೃಜಾನಾತ್ಮಕ ಕರಕುಶಲ ಕಲೆಯನ್ನೂ ಹೇಳಿ ಕೊಡ್ತವು.
ಈ ಸರ್ತಿ ಶಿಶುಮಂದಿರದ ಪುಟಾಣಿಗ ಎರಡು ನಾಟಕ ಮಾಡಿದವು. ಶುರುವಿಂದು ಪೂರ್ವರಂಗ ಹೇಳಿ, ಇನ್ನೊಂದು ಪುಣ್ಯಕೋಟಿ ಹೇಳಿ. ಇದರೆಡಕ್ಕಿಲಿ ಸಭಾ ಕಾರ್ಯಕ್ರಮ ಆತು, ನಮ್ಮ ಶ್ರೀ ಅಕ್ಕ ಕಾರ್ಯಕ್ರಮ ನಿರೂಪಿಸಿದವು. ಆದರೆ ಕಾರಣಾಂತರಂದ ಶುರುವಾಣ ನಾಟಕಕ್ಕೆ ಹೋಪಲೆ ಎನಗೆ ಆತಿಲ್ಲೆ ಐ
’ಸಣ್ಣಗಿಪ್ಪಗ ಅಜ್ಜಿ ಪುಣ್ಯಕೋಟಿ ಹೇಳ್ತ ಒಂದು ದನದ ಕಥೆ ಹೇಳಿದ್ದದು ನಂಪಿದ್ದೋ?’ ’ಅಲ್ಲದ್ದೆ ಇದೇ ಪುಣ್ಯಕೋಟಿ ಹೇಳುವ ಕಥೆಯ ಪದ್ಯ ರೂಪಲ್ಲಿ ಸಣ್ಣದಿಪ್ಪಗಣ ಕ್ಲಾಸ್‌ಲಿ ಪಠ್ಯಪುಸ್ತಕಲ್ಲಿ ಆದರೂ ನೋಡಿದ್ದು ನೆಂಪಿದ್ದೋ?’ ಆದರೆ ಪ್ರಾಯ ಆದಕಾರಣ, ಎನಗೆ ಮರತ್ತೋಗಿದ್ದದು, ಮೊನ್ನೆ ನಾಟಕ ರೂಪಲ್ಲಿ ನೋಡಿ ಅಪ್ಪಗ ನೆಂಪಾತು! ಎ
ಹೇಳಿದ ಹಾಂಗೆ ಈ ನಾಟಕ ಆದ್ದದು ಪುತ್ತೂರಿಲಿ ಇಪ್ಪ ವಿವೇಕಾನಂದ ಶಿಶುಮಂದಿರದ ಆವರಣಲ್ಲಿ! ಈ ಶಿಬಿರದ ಕಡೆಂಗೆ ದೇರಾಜೆ ಮಾವ ಮತ್ತೆ ಶಂಕರ ಪ್ರಸಾದಣ್ಣ ತರಬೇತು ಮಾಡಿದ ಮಕ್ಕಳ ಸಧೃಢ ತಂಡ ನಾಟಕ ಮಾಡ್ಲೆ ರೆಡಿ ಆದವು! ’ಮಕ್ಕ ಎಂತ ಮಾಡಿರೂ ಚೆಂದ’ ಹೇಳುದರ ಆನು ಕೇಳಿತ್ತೆ, ಆದರೆ ’ಅಷ್ಟು ಸಣ್ಣ ಮಕ್ಕ ರಜವೂ ತಪ್ಪಿಲ್ಲದ್ದೆ ನಾಟಕ ಮಾಡಿರೆ ಹೇಂಗಿಕ್ಕು?’ ಹೇಳಿ ಗೊಂತಾದ್ದು ’ಎನಗೆ ಮೊನ್ನೆ ಪುಣ್ಯಕೋಟಿ ನಾಟಕ ನೋಡಿಯಪ್ಪಗಳೇ!’
ನಾಟಕದ ಶುರುವಿಂಗೆ ಸಣ್ಣ ಸಣ್ಣ ಕೂಸುಗೊ ನೃತ್ಯ ಮಾಡಿಗೊಂಡು ಬಂದು, ಕರ್ನಾಟಕ ದೇಶಲ್ಲಿ ವಾಸವಾಗಿತ್ತ ಗೊಲ್ಲನ ಪರಿಚಯ ಮಾಡಿ, ಅವನ ದಿನಚರಿಯನ್ನೂ ಸಭೀಕರಿಂಗೆ ಪದ್ಯದ ಮೂಲಕ ಹೇಳಿದವು. ಮನೆಲಿ ಕೆದೆ ಇಲ್ಲದ್ದೋರಿಂಗೆ, ಕೆದೆ ಇಪ್ಪ ಮನೆಯವರು, ಉದಿಯಪ್ಪಗ ಎದ್ದು ಹಟ್ಟಿಗೆ ಹೋಗಿ ಮಾಡುವ ಕೆಲಸ ಕಾರ್ಯಂಗಳ ಗಂಭೀರತೆಯ ಗೊಲ್ಲ ಪರಿಚಯಿಸಿದ ಹಾಂಗೆ ಆಗಿತ್ತು!
ಹೀಂಗಿಪ್ಪಾಗ, ಕುರ್ಶಿಲಿ ಎದೂರು ಕೂದುಗೊಂಡು ಪಟ ತೆಗಕ್ಕೊಂಡು ಇದ್ದ ಎನಗೆ, ಒಂದು ಹೊಡೆಂದ ’ಗುಡುಗುಡುಗುಡು’  ಹೇಳ್ತ ಶಬ್ಧ ಕೇಳುಲೆ ಶುರು ಆತು. ಆನು, ’ಈಗ ಮಳೆ ಬಂದು ನಾಟಕದ ಒಟ್ಟಿಂಗೆ ಎನ್ನ ಕೆಮರಾ ಕೂಡಾ ಚೆಂಡಿ ಆವ್ತು ಹೇಳಿ ಗ್ರೇಷಿದೆ. ಆದರೆ ಆ ಶಬ್ದ ಕೇಳಿದ್ದು ದನಂಗ ಹಟ್ಟಿಂದ ಹೆರ ಬಪ್ಪ ದೃಶ್ಯದ್ದು!
ಸುಮಾರು ಪುಟಾಣಿಗ ತಲೆಗೆ ಕೊಂಬು ಸಿಕ್ಕಿಸಿಗೊಂಡು ವೇದಿಕೆಯ ಹತ್ರಾಣ ಕೆದೆಯ ಹಾಂಗಿಪ್ಪ ಒಂದು ವ್ಯವಸ್ಥೆಂದ ದನಗ ಆಗಿ ಬಂದವು! ಅಲ್ಲಿ ದನಗ-ಕಂಜಿಗ ಮಾಡುವ ಎಲ್ಲಾ ಚೇಷ್ಠೆಗಳ ಈ ಪುಟಾಣಿ ಮಕ್ಕ ಮಾಡಿದವು. ಸಭೆಲಿದ್ದವು ಚಪ್ಪಾಳೆ ಹೊಡದವು.
ಇದರ ಒಟ್ಟಿಂಗೆ ಭಾರವಿ ದೇರಾಜೆ ಮತ್ತೆ ಅವರ ಇಡೀ ಪರಿವಾರದ ಪಕ್ಕಾ ವಾದ್ಯ, ಹಾಡುಗಾರಿಕೆ, ಹಾಂಗೆಯೇ ಅದ್ಬುತ ಬೆಳಕಿನ ವ್ಯವಸ್ಥೆ ಮಾಡಿಗೊಂಡಿದ್ದರ ಮರವಲೆ ರಜಾ ಕಷ್ಟವೇ! ಹಾಡಿನ ಮುಖಾಂತರ ’ದನಗ ಎಲ್ಲಾ ಕಾಡಿಂಗೆ ಮೇವಲೆ ಹೋದವು, ಅಲ್ಲಿ ಒಂದು ಹುಲಿಯ ಆರ್ಭಟ ಕೇಳಿ ಎಲ್ಲ ದನಂಗಳೂ ಓಡಿಗೊಂಡು ವಾಪಾಸು ಬಂದವು.’ ಹೇಳಿ ಹೇಳಿದವು. ಸಣ್ಣ ಮಕ್ಕ ಹರಕ್ಕೊಂಡು ಹೋಗಿ, ಹಟ್ಟಿಯ ಒಳ ಹೋಪ ದೃಶ್ಯ ಎನ್ನ ಕ್ಯಾಮಾರಲ್ಲಿಯೂ ನೋಡುವ ಭಾಗ್ಯ ಎನಗೆ ಸಿಕ್ಕಿತ್ತು!
ಇಷ್ಟು ಕಥೆ ಅಪ್ಪಾಗ, ’ದುಷ್ಟ ವ್ಯಾಘ್ರ’, ’ಪುಣ್ಯಕೋಟಿ’ ಹೇಳುವ ಪಾಪದ ’ದನ’ವ ’ಅಡ್ಡಕಟ್ಟಿ, ನಿನ್ನ ತಿಂತೆ ಹೇಳಿ ಹೇಳ್ತು’. ಹುಲಿಯಾಗಿ ಪ್ರಣವ ಭಾರಿ ಚೆಂದಕ್ಕೆ ಆಭಿನಯಿಸಿದ. ಕಂಡಾಬಟ್ಟೆ  ಹಶು ಆಯ್ಕೊಂಡಿದ್ದ ಹುಲಿ ಪಾಪದ ಪುಣ್ಯಕೋಟಿಯ ಬಿಡುಗಾ? ಹೇಳ್ತ ಪ್ರಶ್ನೆ, ನಾಟಕ ನೋಡಿಗೊಂಡಿದ್ದವರ ಮೋರೆಲಿ ಎದ್ದು ಕಂಡುಗೊಂಡಿತ್ತು!
ಅಷ್ಟಪ್ಪಗ ಪುಣ್ಯಕೋಟಿ, ’ಆನು ಮನೆಗೆ ಹೋಗಿ, ಎನ್ನ ಕಂಜಿಗೆ ಹೇಳಿಕ್ಕಿ ಬತ್ತೆ, ಕಂಜಿ ಕಾಯ್ತಾ ಇದ್ದು, ಆನು ವಾಪಾಸು ಖಂಡಿತಾ ಬತ್ತೆ’ ಹೇಳಿ ಭಾಷೆ ಕೊಟ್ಟತ್ತು. ಅಷ್ಟು ಹೇಳಿದಪ್ಪಗ ಹುಲಿ, ದನವ ನಂಬಿ ಹೋಪಲೆ ಬಿಟ್ಟತ್ತು. ಈಚ ಹೊಡೆಲಿ ’ಶಬರಿ ರಾಮಂಗೆ ಕಾದ’ ಹಾಂಗೆ, ಅಮ್ಮಂಗೆ ಕಾದುಗೊಂಡು ಕಂಜಿ, ಅತ್ಲಾಗಿ ಇತ್ಲಾಗಿ ಹೋಪದರ ಒಂದು ಪುಟಾಣಿ ಕೂಸು ತುಂಬಾ ಚೆಂದಕ್ಕೆ ಅಭಿನಯ ಮಾಡಿತ್ತು. ಶಾಲೆಂದ ಮಗ/ಳು ಬಪ್ಪದರನ್ನೇ ಕಾದು ಕೂಪ ಅಮ್ಮಂದ್ರಿಂಗೆ, ಅವರ ಮಕ್ಕ ಹೊತ್ತಿಂಗೆ ಸರಿ ಮನೆಗೆ ಬಾರದ್ರೆ, ಹೇಂಗಾವ್ತು ಹೇಳಿ ಪುನಃ ಒಂದರಿ ನೆಂಪಾದಿಕ್ಕು ಅಲ್ಲದೋ?
ಪುಣ್ಯಕೋಟಿ ದನವ ಕಂಡಕೂಡ್ಲೆ ಅದರ ’ಕಂಜಿ’ ’ಓಡಿಗೊಂಡು ಬಂದು, ಅದರ ಅಪ್ಪಿಗೊಂಡ ಸನ್ನಿವೇಷ ಕಣ್ಣಿಂಗೆ ಮರವಲೆ ಎಡಿಯದ್ದ ಹಾಂಗೆ ಮೂಡಿ ಬಂತು. ಪುಣ್ಯಕೋಟಿ, ’ಆನು ಹುಲಿ ಮಾತು ಕೊಟ್ಟು ಬೈಂದೆ, ಆನೀಗ ಹುಲಿಗೆ ಆಹಾರ ಆಗಿ ಹೋವ್ತೆ’ ಹೇಳಿ ಪುಣ್ಯಕೋಟಿ ಪಾತ್ರ ಮಾಡಿದ ’ಸವಿತಾ ಮಣಿಲಾ’ ಹೇಳಿ ಅಪ್ಪಗ ಸಭೆಲಿದ್ದ ಸುಮಾರು ಜನ ಕನ್ನಡಕ ಇಪ್ಪೋರು, ಅವರ ಕನ್ನಡಕವ ತೆಗದು ಕರವಸ್ತ್ರಲ್ಲಿ ಕಣ್ಣು ಉದ್ದಿಗೊಂಡವು. ಒಟ್ಟಿಂಗೆ ಅಂಬಗ ಅಂಬಗ ಸಭೆಂದ ’ಸುರುಸುರು’ ಹೇಳಿ ಶಬ್ಧವೂ ಕೇಳಿಗೊಂಡಿತ್ತು!
ಪುಣ್ಯಕೋಟಿಯ ಅದರ ಕಂಜಿಯ ನೋಡಿಗೊಂಬಲೆ ಒಟ್ಟಿಂಗೆ ಇಪ್ಪ ದನಂಗಳ ಹತ್ರೆ ದುಃಖಲ್ಲಿ ಹೇಳುವ ಸನ್ನಿವೇಷ ಎನ್ನ ಕಣ್ಣಿಲಿಯೂ ನೀರು ತುಂಬುಸಿತ್ತು! ಕಂಜಿಯ ಮುಂದಾಣ ಜೀವನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ, ದನ ಹುಲಿ ಹತ್ರಂಗೆ ಹೋಗಿ ಅಪ್ಪಗ, ಹುಲಿಗೆ ಈ ದನ ವಾಪಸ್ ಬಂದದು ನೋಡಿ, ’ಇದರ ಕೊಂದರೆ ಎನ್ನ ಆ ದೇವರು ಮೆಚ್ಚಾ’ ಹೇಳಿ ಪ್ರಪಾತಕ್ಕೆ ಬಿದ್ದು ಆತ್ಮಹತ್ಯೆ ಮಾಡಿಗೊಂಡತ್ತು! ಐ ಈ ವಿಷಯ ಎಲ್ಲಾ ಗೊಂತಾಗಿ, ಗೊಲ್ಲ ಬಂದು ದನವ ಕರಕ್ಕೊಂಡು ಹೋಪಲ್ಲಿಗೆ ನಾಟಕ ಮುಗಿತ್ತು.
ದಿನಾ ಕೆಲಸ, ಮನೆ ಕೆಲಸ ಇತ್ಯಾದಿ ಕೆಲಸಲ್ಲೇ ನಿರತ ಆಗಿಪ್ಪ ಈಗಾಣ ಪುರುಸೊತ್ತಿಲ್ಲದ್ದ ಜೀವನಕ್ಕೆ ಹೀಂಗಿಪ್ಪ ಭಾವನಾತ್ಮಕ ನಾಟಕಂಗ ಅತೀ ಅಗತ್ಯ. ನಾಟಕದ ಮೂಲಕ ಲೊಟ್ಟೆ ಹೇಳ್ಳಾಗ, ಕೊಟ್ಟ ಮಾತಿಂಗೆ ತಪ್ಪುಲಾಗ ಹೇಳುದರ ಮಕ್ಕ ನಮಗೆ ತುಂಬಾ ಚೆಂದಕ್ಕೆ ತೋರ‍್ಸಿಕೊಟ್ಟವು.
ಪ್ರಸ್ತುತ ದಿನಂಗಳಲ್ಲಿ ಮಕ್ಕಳಿಂದ ಹೆಚ್ಚಿಗೆ ಲೊಟ್ಟೆ, ಮಾತಿಂಗೆ ತಪ್ಪುವ ದೊಡ್ಡ ತಪ್ಪುಗಳ ಮಾಡುವ ಗಣ್ಯ ವ್ಯಕ್ತಿಗೊ ’ದೊಡ್ಡವ್ವೇ’ ಹೇಳಿ ಹೇಳಿರೆ ತಪ್ಪಲ್ಲಾ ಹೇಳಿ ಅನುಸುತ್ತು ಅಲ್ಲದೋ? ಪುಣ್ಯಕೋಟಿಯ ಹಾಂಗೆ ಸತ್ಯವನ್ನೇ ಹೇಳಿದರೆ ದೇವರು ಎಂದೆಂದೂ ನಮ್ಮ ಕೈ ಬಿಡ ಹೇಳುದೇ ಈ ನಾಟಕಲ್ಲಿ ಇಪ್ಪ ಸತ್ಯ ಸಂಗತಿ.

ಹರೇ ರಾಮ
ದೇವಸ್ಯ ಮಾಣಿ

ದೇವಸ್ಯ ಮಾಣಿ

8 thoughts on “ಮನಸೆಳೆದ ಮಕ್ಕಳ ಪುಣ್ಯಕೋಟಿ

  1. ಪುಣ್ಯಕೋಟಿಯ ಕಥೆಯ ಎಷ್ಟು ವಿಧಾನಂಗಳಲ್ಲಿ ಎಷ್ಟು ಸರ್ತಿ ಕೇಳಿರೂ,ನೋಡಿರೂ ಸಾಕೆನಿಸುತ್ತಿಲ್ಲೇ. ದೇವಸ್ಯ ಮಾಣಿಗೆ ಧನ್ಯವಾದ…

    ಇಂದ್ರಾಣ ಪುಣ್ಯಕೋಟಿಗಳ ಅವಸ್ಥೆ ನೋಡುವಗಳೂ ಕಣ್ಣೀರ ಧಾರೆ ಹರಿತ್ತು… ಇಂದು ಪುಣ್ಯಕೋಟಿಯ ಪಾಲಿಂಗೆ ಮನುಷ್ಯರೇ ಹುಲಿಗೋ ಆಯಿದವು… ಮೊನ್ನೆ ನೋಡಿದ ಒಂದು ಘಟನೆಯ ಬೈಲಿನವರ ಜೊತೆ ಹಂಚಿಗೊಳ್ಳುತ್ತೆ…

    ಅಕ್ಕನ ಮನೆಗೆ ಹೋಗಿತ್ತಿದ್ದೆ. ಅಲ್ಲಿ ಅಡಿಗೆ ಕೋಣೆಲ್ಲಿ ಹಾಲು ಕಾಸಿಗೊ೦ಡು ಇತ್ತಿದ್ದೆ. ಭಾವ ಬೈಕು ನಿಲ್ಲುಸಿದ ಶಬ್ದ ಕೇಳಿತ್ತು. ಕಿಟಿಕಿಲ್ಲಿ ಹೆರ ನೋಡಿದರೆ ನೇರವಾಗಿ ಹಟ್ಟಿ ಕಾಣುತ್ತು… ಭಾವನ ಜೊತೆಗೆ ಇನ್ನೊಂದು ಜೆನ ಒಂದು ಫೀಟ್ ಉದ್ದದ ಒಂದು ಸಪೂರ ಕೋಲು ಹಿಡುಕ್ಕೊಂಡು ಹಟ್ಟಿಯ ಹತ್ತರೆ ಬಂದವು. ಆ ಪುಣ್ಯಕೋಟಿಯ ಪಾಲಿಂಗೆ ಅವ ರಾವಣೇಶ್ವರ ಹೇಳಿ ಎನಗೆ ಮತ್ತೆ ಗೊಂತಾದ್ದದು. ಎರಡು ಜೆನ ಕೆಲಸದವು ಒಬ್ಬ ದನದ ಮೋರೆ,ಇನ್ನೊಬ್ಬ ಕಾಲು ಹಿಡುದು ಬೀಲ ನೆಗ್ಗಿ ಆ ಕೋಲಿಲ್ಲಿ ಕುತ್ತಿದವು. ಪುಣ್ಯಕೋಟಿಯ ಮೇಲೆ ಅತ್ಯಾಚಾರವೆಸಗಿದವು… ಹಾಲೇ ಕುಡಿವದು ಬೇಡ ಇನ್ನು ಮೇಲೆ ಹೇಳಿ ಹೇಳುವಷ್ಟು ದುಖ ಬಂತು… ಮಳೆ ಇಲ್ಲೇ,ಬೆಳೆ ಇಲ್ಲೇ ಹೇಳಿ ಕಾಲವ ಬೈಕ್ಕೊಂಡು ಕೂದರೆ ಅಕ್ಕೋ… ಅದರ ಬದಲು ಆ ಪುಣ್ಯಕೋಟಿಯ ಕಣ್ಣೀರೊರೆಸುವ ಕೆಲಸ ಮಾಡಿರೆ ಖಂಡಿತ ಕಾಲ ಕಾಲಕ್ಕೆ ಮಳೆ,ಬೆಳೆಗಳ ಆ ಮಾತೆ ಅನುಗ್ರಹಿಸುಗು…

    http://hareraama.in/blog/if-you-would-be-there/ ನೆನಪಾತು. ಮನುಷ್ಯರಾದರೂ ಪ್ರಜನನ ಚಿಕಿತ್ಸಾಲಯಕ್ಕೆ ಹೋದರೆ ಸ್ಕಾನ್ನಿಂಗ್ ಮಾಡುವಗ ಇದೇ ಅನುಭವ ಅಕ್ಕು… ವಿಜ್ಹಾನ ಬೆಳದು,ಬೆಳದು ಜೀವಿಗಳ ಜೀವನ ಹೇಳಿರೆ ಒಂದು ಯಂತ್ರದ ಹಾಂಗೆ… ಭಾವನೆಗೊಕ್ಕೆ ಯಾವುದೇ ಬೆಲೆ ಇಲ್ಲೇ… ಇಂತಹ ವಿಜ್ಹಾನ ನಮಗೆ ಬೇಕಿತ್ತೋ ಹೇಳಿ ಅನ್ನಿಸುತ್ತು ಕೆಲವು ಸರ್ತಿ…

  2. ಫೋಟೋ ಸಮೇತ ವಿವರಣೆ ಉತ್ತಮವಾಗಿ ಮೂಡಿ ಬಯಿಂದು… ದೇವಸ್ಯ ಮಾಣಿಗೆ ಧನ್ಯವಾದ…

    ಮೊದಲು ಮನೆಗಳಲ್ಲೇ ಆಗಿಯೊಂಡಿದ್ದ ಬೇಸಿಗೆ ಶಿಬಿರ ಈಗ ಕೊನೆ ಪಕ್ಷ ಕೆಲವು ಸಂಸ್ಥೆಗಳಲ್ಲಿ ಆದರೂ ನಡೆತ್ತು ಹೇಳುದೇ ಖುಷಿಯ ವಿಚಾರ… ಮಂಗಳೂರಿಲ್ಲಿಯೂ ೫ ದಿನದ ಮಕ್ಕಳ ಬೇಸಿಗೆ ಶಿಬಿರ ಮರುವಳ ಮಾವನ ನೇತೃತ್ವಲ್ಲಿ ಉತ್ತಮವಾಗಿ ಮೂಡಿ ಬಯಿಂದು ಹೇಳಿ ಮಕ್ಕೋ ಖುಷಿಲಿ ಹೇಳಿಗೊಂಡು ಇತ್ತಿದ್ದವು… ಮರುವಳ ಮಾವಂಗೂ ಧನ್ಯವಾದ…

    ಇಂದಿನ ಮಕ್ಕಳ ಬಗ್ಗೆ ನಾವೆಷ್ಟು ಜಾಗರೂಕರಾದರೂ ಸಾಲ… ಮೊನ್ನೆ ಏಳೆಂಟು ಮಕ್ಕೋ ಸುತ್ತು ಕೂದುಗೊಂಡು ಅದೆಂತದೋ ಆಟ ಆಡಿಗೊಂಡು ಇತ್ತಿದ್ದವು… ಎಂತರ ಹೇಳಿ ಗಮನಿಸಿದೆ… ತಲೆ ಬುಡ ಇಲ್ಲದ್ದ ಆಟ…’ಜಪಾನೀಸ್ ವ್ಹಿಸ್ಪೆರ್’ ಹೇಳಿ ಆಟದ ಹೆಸರು ಅಡ. ತಲೆಬುಡ ಇಲ್ಲದ್ದ (ಬೇಡ೦ಗಟ್ಟೆ) ಪ್ರಶ್ನೆ ಕೇಳುದು, ಅದಕ್ಕೆ ಅದೇ ಮಾದರಿಲ್ಲಿ ಉತ್ತರ ಕೊಡುದು… ಸುಮ್ಮನೆ ನೆಗೆ ಮಾಡುದು ಹೀಂಗೆ ಆ ಆಟ… ಅಂತೂ ವ್ಯರ್ಥವಾಗಿ ಕಾಲಹರಣ ಜೊತೆಗೆ ಬೇಡದ ಬುದ್ದಿಯೂ ಬೆಳವ ಹಾಂಗಿದ್ದ ಆಟ… ಅಲ್ಲಿದ್ದ ಎಲ್ಲ ಮಕ್ಕಳೂ ನಾವು ಸುಸಂಸ್ಕೃತರು ಹೇಳಿ ಹೇಳಿಗೊಂಬ ಕುಟುಂಬದ ಮಕ್ಕೋ… ಈ ರೀತಿಯ ಆಟ ಆಡಿಗೊಂಡು ಕಳವ ಮಕ್ಕೋ ಮುಂದೆ ಹೇಂಗಿದ್ದ ಸಮಾಜ ನಿರ್ಮಾಣ ಮಾಡುಗು? ಇನ್ನಾದರೂ ನಾವು ಎಚ್ಚೆತ್ತುಗೊಲ್ಳೆಡದ? ಉದ್ಯೋಗ,ಮನೆ,ಕಾರು ಇಷ್ಟರ ಬಗ್ಗೆ ಮಾಂತ್ರ ಆಲೋಚನೆ ಮಾಡುತ್ತಾ ಕೂದರೆ!!!

  3. ಅಲ್ಲಿ ಅಷ್ಟು ಮಾಡಿದ್ದಿ ಹೇಳಿ ಓದಿ ಇಲ್ಲಿ ಸಂತೋಷ ಆತು ನವಗೆ ಇದಾ. ಅಭಿನಂದೆನೆಗೊ.

  4. ಆಕರ್ಷಕ ಫೊಟೋಂಗಳ ಒಟ್ಟಿಂಗೆ ಪುಣ್ಯಕೋಟಿ ನಾಟಕದ ವಿವರಣೆ ಚೆಂದ ಆಯಿದು, ಮನ ಸೆಳದತ್ತು. ಪುಣ್ಯ ಕೋಟಿ, ಹುಲಿಯ ಹತ್ರಂಗೆ ಪುನಃ ಬಂದಪ್ಪಗ ಜೆನರ ಕಣ್ಣಿಲ್ಲಿ ನೀರು ಬಂತೂ ಹೇಳಿ ಆದರೆ ನಾಟಕ ಸಾರ್ಥಕ ಆತೂ ಹೇಳಿಯೇ ಲೆಕ್ಕ. ದೇರಾಜೆಯವರ ನಿರ್ದೇಶನಲ್ಲಿ ಮಕ್ಕೊ ತೋರಿದ ಅಭಿನಯ ಚೆಂದ ಆಗಿಕ್ಕು. ನಾಟಕಲ್ಲಿಪ್ಪ ಬೆಳಕಿನ ಆಟ, ಮಾಣಿಯ ಫೊಟೋಂಗಳಲ್ಲಿ ಕಂಡು ಬತ್ತು. ವಿವರವ ಬೈಲಿಂಗೆ ಒದಗುಸಿ ಕೊಟ್ಟ ದೇವಸ್ಯ ಮಾಣಿಗೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×