ಎಂಗಳ ಮಗ ಶಶಾಂಕ ಸುಬ್ರಹ್ಮಣ್ಯ ಸುಮಾರು ನಾಲ್ಕು ವರುಷಂದ ಕೊಳಲು, ಕೀಬೋರ್ಡ್ ಕಲಿತ್ತಾ ಇದ್ದ.
ಕಳೆದ ವರ್ಷ ಕಟೀಲು ದೇವಳಲ್ಲಿ ಕಚೇರಿ ಆರಂಬಿಸಿ, ಈಗ ಕೆಲವು ಕಡೆ ಮುಂದುವರಿಸುತ್ತಾ ಇದ್ದ.
ಇಲ್ಲಿ ಕೆಲವು ವೀಡಿಯೊಂಗೊ ಇದ್ದು:
ನೋಡಿ ಒಪ್ಪ ಕೊಡಿ.
ಸಂತೋಷಪಡಿ.
~
~
~
Latest posts by ಕಲ್ಮಕಾರು ಪ್ರಸಾದಣ್ಣ (see all)
- ಕೊಳಲು ಪ್ರತಿಭೆ : ಶಶಾಂಕ ಸುಬ್ರಹ್ಮಣ್ಯ - May 12, 2012
ಶಶಾಂಕ ಸುಬ್ರಹ್ಮಣ್ಯ ೮ ನೇ ತರಗತಿಲ್ಲಿ ನವಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆ ನೀರುಮಾರ್ಗ, ಮ೦ಗಳೂರಿಲ್ಲಿ ಕಲಿವಲೆ ಸೇರಿದ್ದ. ಕೊಳಲು, ಕೀಬೋರ್ಡ್ ಗುರುಗೊ ಶ್ರೀ ಅನಂತರಾಮ ಹೊಳ್ಲರಲ್ಲಿ ೨೦೦೭ ನವೆಂಬರಿಂದ ಕಲಿತ್ತ ಇದ್ದ. ೨೦೧೦ ರಲ್ಲಿ ಮಂಗಳೂರು ಹವ್ಯಕ ಸಭಾಲ್ಲಿ ಪ್ರತಿಬಾ ಪ್ರದರ್ಶನ ಕೊಟ್ಟಿತ್ತಿದ್ದ. ಅಲ್ಲಿಂದ ಮಾಣಿಪ್ಪಾಡಿ ರಾಮಚಂದ್ರಣ್ಣ,ಮತ್ತು ಗುರುಗಳ ಪ್ರೋತ್ಸಾಹಂದ ಸಂಪೂರ್ಣ ಕಚೇರಿಯ ಕಳೆದ ವರ್ಷ ಜನವರಿಲ್ಲಿ ಶ್ರೀ ಕಟೀಲು ದೇವಳಲ್ಲಿ ಆರಂಬಿಸಿ ಶ್ರೀಅಮ್ರುತೇಶ್ವರ ಸನ್ನಿಧಿ,ವಾಮಂಜೂರು, ಶ್ರೀ ಸದಾಶಿವ ಸನ್ನಿಧಿ,ಬೊಂಡಂತಿಲ, ಪೆರಡಾಲ ಶ್ರೀ ಉದನೇಶ್ವರ, ಕದ್ರಿ, ಶರವು ಎಲ್ಲ ಕಡೆ ಕೊಟ್ಟಿದ. ಹೆಚ್ಚಿನ ಕಡೆ ರಾಮಚಂದ್ರಣ್ಣ, ಶ್ರೀ ಸುಬ್ರಾಯ ಪ್ರಭು(ತಬ್ಲಾ)ಲ್ಲಿ ಸಹಕರಿಸಿದ್ದವು. ನಮ್ಮ ಗುರುಗೊ ಕಳೆದ ರಾಮಕತೆಯ ಸಂದರ್ಭಲ್ಲಿ ಆಶೀರ್ವಾದ ಮ೦ತ್ರಾಕ್ಶತೆ ಕೊಟ್ಟಿದವು.
ಹೆಚ್ಚಿನ ವಿವರ ಮೊನ್ನೆ ಕೊಡ್ಲೆ ಎಡಿಗಾಯಿದಿಲ್ಲೆ, ಹಾ೦ಗೆ ಈಗ ಬರದ್ದೆ. ಕ್ಷಮಿಸಿ.
ಒಪ್ಪ ಕೊಟ್ಟ ಎಲ್ಲರಿಂಗೂ ವಂದನೆಗೊ.
Olledaidu:)dad MR bhat too paticipated with shashank:-)thanks:)
Olledaidu:)
ಶಶಾಂಕನ ವೇಣುವಾದನ ಕಚೇರಿಯ ಬೈಲಿಲ್ಲಿ ಕಂಡು ಕೊಶಿ ಆತು. ಚೆಂದಕೆ ನುಡಿಸಿದ್ದ. ಅವನ ಕಾರ್ಯಕ್ರಮವ ಈಗಾಗಲೇ ಎರಡು ಮೂರು ಸರ್ತಿ ನೋಡಿದ್ದೆ. ಅವಂಗೆ ಉತ್ತಮ ಭವಿಷ್ಯ ಖಂಡಿತಾ ಇದ್ದು. ಇನ್ನೂ ಉತ್ತಮವಾಗಿ ಬೆಳಗಿ ಕಲಾರಂಗಲ್ಲಿ ಒಳ್ಳೆ ಕೀರ್ತಿಯ ಪಡೆಯಲಿ ಹೇಳಿ ಹಾರೈಕೆ. ಶರವು ಕಾರ್ಯಕ್ರಮಲ್ಲಿ ನಿರೂಪಣೆ ಮಾಡಿದ ಮಾಂಬಾಡಿ ವೇಣುಗೋಪಾಲಣ್ಣ ಹಾಂಗೇ, ಮೇಂಡೊಲಿನಿಲ್ಲಿ ಸಹಕರಿಸಿದ ಮಾಣಿಪ್ಪಾಡಿ ರಾಮಚಂದ್ರಣ್ಣನ ವಿಡಿಯೋಲ್ಲಿ ಕಂಡು ಮತ್ತಷ್ಟು ಕೊಶಿಪಟ್ಟೆ.
ಬೆಳೆಯುವ ಸಿರಿ ಮೊಳಕೆಯಲ್ಲಿ…ಉಜ್ವಲ ಪ್ರತಿಭೆ ಅನಾವರಣವಾಗಲಿ..ತಾಯಿ ದುರ್ಗೆಯ ಕೃಪಾಕಟಾಕ್ಷದಿಂದ ಉನ್ನತ ಮಟ್ಟಕ್ಕೆ ಏರಲಿ..ಶುಭಮಸ್ತು….
ಶಶಾಂಕಂಗೆ ಶುಭವಾಗಲಿ.
ಮಾಣಿಗೆ ಒಳ್ಳೇದಾಗಲಿ
ಶಬ್ದ ಕೇಳಲೆ ಆತಿಲ್ಲೆ. ಎಂತದೊ ತಾಂತ್ರಿಕ ತೊಂದರೆ ಆತು.
ಆದರೆ,ಮಾಣಿ ಶಶಾಂಕಂಗೆ ಶುಭವಾಗಲಿ.ಅವನ ಗುರುಗೊ ಆರು?
ಬಾಲ ಪ್ರತಿಭೆ. ಬೈಲಿಲಿ ಶುದ್ದಿ ನೋಡಿ ಕೊಶಿ ಆತು. ಉಜ್ವಲ ಭವಿಷ್ಯ ಶಶಾಂಕಂಗೆ ಲಭಿಸಲಿ. ಶ್ರೀ ಗುರುದೇವತಾನುಗ್ರಹಂದ ಉತ್ತಮ ಕೀರ್ತಿ ಯಶಸ್ಸು ಪ್ರಾಪ್ತಿಸಲಿ ಹೇಳಿ ಬಯಸುತ್ತು – ‘ಚೆನ್ನೈವಾಣಿ’