ಬೈಲಿನ ಅರಡಿವೋರಿಂಗೆ ಸರ್ಪಮಲೆ ಮಾವನನ್ನೂ ಅರಡಿಗು, ಅಲ್ಲದೋ?ಇವುದೇ ಡಾಗುಟ್ರೇ, ಆದರೆ – ಹೆದರೆಡಿ, ಇಂಜೆಕ್ಷನು ಹಿಡಿತ್ತ ಡಾಗುಟ್ರಲ್ಲ. ಇವು ಪೆನ್ನು ಹಡಿತ್ತ ಡಾಗುಟ್ರು!ಸರ್ಪಮಲೆ ಮಾವ ಮುಗುಳುನೆಗೆಲಿ!ಶಿಕ್ಷಣಕ್ಷೇತ್ರಲ್ಲಿ ಹತ್ತು-ಮೂವತ್ತೊರಿಶ ಕೆಲಸಮಾಡಿದ ಅನುಭವ ಅವಕ್ಕಿದ್ದು. ಕೊಡೆಯಾಲದ ಕೋಲೇಜಿಲಿ ಲೆಗುಚ್ಚರು ಅಗಿದ್ದು, ಈಗ ರಿಠೇರ್ಡು! ರಿಠೇರ್ಡು ಆದರೂ ಮನೆಲಿ ಕೂಪಲೆ ಬಿಟ್ಟಿದವಿಲ್ಲೆ, ರಾಮಜ್ಜನ ಕೋಲೇಜಿನವು ಹೋಗಿ ಬಪ್ಪಲೇಬೇಕು ಹೇಳಿ ಕೇಳಿಗೊಂಡವು. ಆತಂಬಗ, ಹೇಳಿ ಇವುದೇ ಹೆರಟು ಬಂದವು. ಪ್ರಸ್ತುತ ರಾಮಜ್ಜನ ಕೋಲೇಜಿನ ಮೇಗಾಣ ಮಾಳಿಗೆಯ ಮೂಲೆಯ ಕೋಣೆಲಿ ಕೂದಂಡಿದ್ದವು! ಮೆನೇಜುಮೆಂಟು ಕೋಲೇಜಿನ ಗುರಿಕ್ಕಾರ್ರಾಗಿದ್ದವು!ಕೊಡೆಯಾಲಂದ ಪುತ್ತೂರಿಂಗೆ – ಮಾರ್ಗ ಹಾಳಾದರೂ ಹೋಗಿಬಂದು ಮಾಡ್ತವು ನಿತ್ಯ. ಅನುಭವಿ, ಶಿಕ್ಷಣ ತಜ್ಞ ಸರ್ಪಮಲೆಮಾವನ ಬೇಡಿಕೆಯ ಗ್ರೇಶಿರೆ ನವಗೆ ಕೊಶಿ ಅಪ್ಪದು. ಬೈಲಿನ ಆರಿಂಗಾರು ಅವರ ಭೇಟಿಮಾಡ್ಳಿದ್ದರೆ ಮಾಳಿಗೆ ಹತ್ತಿಗೊಂಡು ಹೋಯೆಕ್ಕು, ಹೆರಾಣ ಪೇನಿನ ಬುಡಲ್ಲಿ ಕಾದು ನಿಲ್ಲೆಕ್ಕು. ಒಳ ಹೋದಕೂಡ್ಳೆ ಒಂದರಿ ಇಂಗ್ಳೀಶಿಲಿ ಮಾತಾಡಿ ಹೆದರುಸುಗು, ಮತ್ತೆ ಪ್ರೀತಿಲಿ ನೆಗೆನೆಗೆಮಾಡಿ ಮಾತಾಡುಗು!ಕೋಲೇಜಿಲಿ ಎಷ್ಟೇ ಅಂಬೆರ್ಪು ಇರಳಿ, ಬೈಲಿಂಗ ಬಾರದ್ದೆ ಇರ್ತವಿಲ್ಲೆ. ಕೊಶಿ ಆದ ಶುದ್ದಿಗೆ ಒಪ್ಪಕೊಟ್ಟೊಂಡು, ಶುದ್ದಿ ಬರದವನ ಪ್ರೋತ್ಸಾಹ ಮಾಡಿಗೊಂಡು, ಕೊಶಿ ಹಂಚಿಗೊಂಡು ನಮ್ಮ ನೆಡುಕೆ ಇದ್ದವು. ಅವು ಬರದ ಒಪ್ಪಂಗಳ ಸರಿಯಾಗಿ ನೋಡಿರೇ ಜೆನಂಗೊಕ್ಕೆ ಅವರ ಪಾಂಡಿತ್ಯ ಅರಡಿಗು – ಅಷ್ಟು ಲಾಯಿಕಲ್ಲಿ ಅನುಭವಪೂರಿತವಾಗಿ ಒಪ್ಪ ಬರಗು ಶುದ್ದಿಗೊಕ್ಕೆ. ಒಪ್ಪವೇ ಅಷ್ಟು ಲಾಯಿಕಲ್ಲಿ ಕೊಡುವಗ, ಶುದ್ದಿಯ ಎಷ್ಟು ಲಾಯಿಕಲ್ಲಿ ಹೇಳುಗು, ಅಲ್ಲದೋ?! ಮೊನ್ನೆ ಅವರ ಭೇಟಿಗೆ ಹೋಗಿಪ್ಪಗ ನಾವು ಕೇಳಿಯೇಬಿಟ್ಟತ್ತು – ಬೈಲಿಂಗೆ ಶುದ್ದಿ ಹೇಳ್ತಿರೋ – ಹೇಳಿ. ಒಂದು ಕ್ಷಣ ಸುಮ್ಮನೆ ಕೂದು, ಮತ್ತೆ ಅಕ್ಕು ಹೇಳ್ತನಮುನೆ ತಲೆ ಆಡುಸಿದವು.ಎದುರು ಸಿಕ್ಕಿರೆ ಅವು ಮಾತಾಡುದು ತುಂಬಾ ಕಮ್ಮಿ; ಅತ್ತೆ ಒಟ್ಟಿಂಗೆ ಇದ್ದರೆ ಅಂತೂ ಮತ್ತೂ ಕಮ್ಮಿ!! ಅದಿರಳಿ, ನಮ್ಮತ್ರೆ ಶುದ್ದಿ ಹೇಳಿಯೇ ಹೇಳ್ತವು! ಬನ್ನಿ, ಸರ್ಪಮಲೆ ಮಾವನ ಶುದ್ದಿಗಳ ಕೇಳುವೊ°. ಒಪ್ಪ ಒಪ್ಪ ಶುದ್ದಿಗೊಕ್ಕೆ ನಮ್ಮ ಒಪ್ಪ ಕೊಡುವೊ°
_________________
ಸರ್ಪಮಲೆ ಮಾವ ಸೇರಿಸಿದ್ದುಃ
೨೦೧೧ ಅಗೋಸ್ತು ೧ನೇ ತಾರೀಕಿಂದ ವೃತ್ತಿಂದ ನಿವೃತ್ತಿ ಪಡಕ್ಕೊಂಡಿದೆ.
ಒಪ್ಪಕ್ಕೆ ದನ್ಯವಾದ೦ಗೊ…
ಲೇಖನದ ಜೆತಗೆ ಫೊಟೊಂಗಳುದೆ ಬಂದು ಆಶ್ರಮದ ಬಗ್ಗೆ ಸರಿಯಾಗಿ ಗೊಂತಾತು. ಧನ್ಯವಾದಂಗೊ.
ಪಟಂಗಳ ಮೂಲಕ ಆಶ್ರಮದ ಪರಿಚಯ ಮಾಡಿಕೊಟ್ಟದಕ್ಕೆ ಧನ್ಯವಾದಂಗೊ
ಚಿಂತನೀಯ. ಧನ್ಯವಾದಂಗೊ ಸರ್ಪಮಲೆ ಮಾವಂಗೆ