Oppanna.com

ನೀರು(ಉಪ್ಪು) ಸೊಳೆ, ನೀರು(ಉಪ್ಪು) ಮಾವಿನಕಾಯಿ

ಬರದೋರು :   ವೇಣಿಯಕ್ಕ°    on   12/06/2012    2 ಒಪ್ಪಂಗೊ

ವೇಣಿಯಕ್ಕ°

ನೀರು(ಉಪ್ಪು) ಸೊಳೆ & ನೀರು(ಉಪ್ಪು) ಮಾವಿನಕಾಯಿ

ನೀರು ಸೊಳೆ ಹಾಕುಲೆ ಬೇಕಪ್ಪ ಸಾಮಾನುಗೊ:

  • 1/2 ಸಾಧಾರಣ ಗಾತ್ರದ ಹಲಸಿನಕಾಯಿ ಅಥವಾ 5 ಲೀಟರ್ ತುಂಬುವ ಪಾತ್ರ ತುಂಬ ಆದ ಹಲಸಿನಕಾಯಿ ಸೊಳೆ
  • 1.5 – 2 ಕಪ್(ಕುಡ್ತೆ) ಕಲ್ಲುಪ್ಪು

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಆದ ಸೊಳೆಯ ಒಂದು ಭರಣಿ/ಪ್ಲಾಸ್ಟೀಕು/ಗಾಜಿನ ಕರಡಿಗೆಲಿ ಹಾಕಿ ಮೇಗಂದ ಉಪ್ಪು ಹಾಕಿ ಮಡುಗಿ. (ತುಂಬ ಸೊಳೆ ಒಟ್ಟಿಂಗೆ ಹಾಕುತ್ತರೆ, ನಡು-ನಡುಕೆ ಉಪ್ಪು ಹಾಕಿಗೊಳ್ಳೆಕ್ಕು.)

ಮೇಗಂದ 2-3 ಭಾರದ ಕಲ್ಲು(ತೊಳದು ಒಣಗ್ಸಿದ್ದು)  ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ, ಮುಚ್ಚಲು ಮುಚ್ಚಿ ಮಡುಗಿ.

ಒಂದು ವಾರ, ದಿನಕ್ಕೆ ಒಂದರಿ ಕೈಲಿ ಲಾಯಿಕ ತೊಳಸಿ. ಭರಣೆ/ಕರಡಿಗೆಲಿ ಜಾಗೆ ಇದ್ದರೆ, ಮತ್ತೆ  2-3 ದಿನ ಅದೇ ಪಾತ್ರಕ್ಕೆ ಹಲಸಿನಕಾಯಿ ಸೊಳೆದೆ, ಉಪ್ಪುದೆ ಹಾಕುಲಕ್ಕು.
ಸೊಳೆಲಿ ತುಂಬ ನೀರು ಎದ್ದರೆ, ಹೆಚ್ಚಾದ ನೀರಿನ ತೆಗದು ಚೆಲ್ಲಿ.
ಈ ನೀರು ಸೊಳೆಯ 1-2 ತಿಂಗಳು ಬಿಟ್ಟು ಉಪಯೋಗ್ಸುಲೆ ಸುರು ಮಾಡ್ಲಕ್ಕು. ಇದು 1-2 ವರ್ಷ ಆದರೂ ಹಾಳವುತ್ತಿಲ್ಲೆ.

ಇದರ ಉಪಯೋಗ್ಸಿ ತಾಳು, ಬೆಂದಿ, ಬೋಳುಕೊದಿಲು, ರೊಟ್ಟಿ, ಉಂಡ್ಲಕಾಳು, ವಡೆ, ಸೋಂಟೆ, ಹಪ್ಪಳ… ಎಲ್ಲ ಮಾಡ್ಲೆ ಆವುತ್ತು. ನಿಧಾನಕ್ಕೆ ಪುರುಸೊತ್ತಾದಪ್ಪಗ ಒಂದೊಂದೆ ಬಯಲಿಂಗೆ ಹಾಕುತ್ತೆ.

ನೀರು ಮಾವಿನಕಾಯಿ ಹಾಕುಲೆ ಬೇಕಪ್ಪ ಸಾಮಾನುಗೊ:

  • 60-75 ಸಾಧಾರಣ ಗಾತ್ರದ ಕಾಟು ಮಾವಿನಕಾಯಿ
  • 6-8 ಕಪ್(ಕುಡ್ತೆ) ಕಲ್ಲುಪ್ಪು

ಮಾಡುವ ಕ್ರಮ:

ಮಾವಿನಕಾಯಿಯ ತೊಟ್ಟು ಮುರುದು, ಒಂದು ಒಣಕ್ಕು ವಸ್ತ್ರಲ್ಲಿ ಉದ್ದಿ ಮಡುಗಿ.

ಮವಿನಕಾಯಿಯ ಒಂದು ಭರಣಿ/ಪ್ಲಾಸ್ಟೀಕು/ಗಾಜಿನ ಕರಡಿಗೆಲಿ ಹಾಕಿ ಉಪ್ಪು ಹಾಕಿ, ಮಾವಿನಕಾಯಿ ಮುಳುಗುವಸ್ಟು ಕೊದುಶಿ ತಣುಶಿದ ಬೆಶಿ ನೀರು ಹಾಕಿ ಮಡುಗಿ.
(ಇದರ ಬದಲು ಕೊದುಶಿ ತಣುಶಿದ ಉಪ್ಪು ನೀರುದೆ ಹಾಕುಲೆ ಅಕ್ಕು.)

ಮೇಗಂದ 1-2 ಭಾರದ ಕಲ್ಲು(ತೊಳದು ಒಣಗ್ಸಿದ್ದು)  ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ, ಮುಚ್ಚಲು ಮುಚ್ಚಿ ಮಡುಗಿ.

ಈ ನೀರು ಮಾವಿನಕಾಯಿಯ 1-2 ತಿಂಗಳು ಬಿಟ್ಟು ಉಪಯೋಗ್ಸುಲೆ ಸುರು ಮಾಡ್ಲಕ್ಕು. ಇದು 1-2 ವರ್ಷ ಆದರೂ ಹಾಳವುತ್ತಿಲ್ಲೆ.
ಇದರ ಉಪಯೋಗ್ಸಿ ತಾಳು, ಮೇಲಾರ, ಕೊದಿಲು, ಗೊಜ್ಜಿ, ಸಾರು, ಚಟ್ನಿ… ಎಲ್ಲ ಮಾಡ್ಲೆ ಆವುತ್ತು. ನಿಧಾನಕ್ಕೆ ಪುರುಸೊತ್ತಾದಪ್ಪಗ ಒಂದೊಂದೆ ಬಯಲಿಂಗೆ ಹಾಕುತ್ತೆ.


~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ನೀರು (ಉಪ್ಪು) ಸೊಳೆ
ನೀರು (ಉಪ್ಪು) ಮಾವಿನಕಾಯಿ

2 thoughts on “ನೀರು(ಉಪ್ಪು) ಸೊಳೆ, ನೀರು(ಉಪ್ಪು) ಮಾವಿನಕಾಯಿ

  1. ಮಾಡಿ ಮಡುಗಿ ರಜ್ಜ ಸಮ್ಯ ಅಪ್ಪಗ ಉಂದ್ಲೆಕಾಳು ಮದ್ಲಪ್ಪಗ ಬೈಲಿಲಿ ಒಂದರಿ ಕೂಗಿ ಹೇಳಿಕ್ಕಿ..ಉಂಡ್ಲೆ ಕಾಳು ತಿಂಬಲೆ ಬತ್ತೆ..

  2. ವಾಹ್ ವಾಹ್. ಒಳ್ಳೆ ಕಾರ್ಯಕ್ರಮ. ಮಾಡಿ ಮಡುಗಿ. ತಿಂಬಲಪ್ಪಗ ಆನಿದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×