ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು, ನಿಂಗಳೇ ಹೇಳಿ.
ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ.
ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ.
ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ!
ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ.
ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ.
ಬೆಳಿದು, ಕಂದು ಬಣ್ಣದ್ದು, ಕಪ್ಪು ಬಣ್ಣದ್ದು.
ಮಕ್ಕೊಗೆಲ್ಲ ಬೆಳಿ ಬಣ್ಣದ್ದು - ಪಾಪದ್ದು.
ಹದಾದವಕ್ಕೆ ಹದಾ ಪವರಿನ ಕಂದು ಬಣ್ಣದ್ದು,
ದೊಡ್ಡವಕ್ಕೆ ಕಪ್ಪು ಬಣ್ಣದ್ದು - ಷ್ಟ್ರೋಂಗು!
ಮೂರ್ನೇದುದೇ ಹಿಡಿಯದ್ರೆ, ಮತ್ತುದೇ ಬೋದ ತಪ್ಪದ್ರೆ - ಮತ್ತೆ ಅವು ಮಾತಾಡ್ಳೆ ಸುರು ಮಾಡುದಡ!
ಹಾಂಗೆ, ಇವರ ಕೈಲಿ ಬೋದ ತಪ್ಪದ್ದ ಜೆನವೇ ಇಲ್ಲೆ.
ಮನುಷ್ಯರ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗೆಗೆ ವಿಶೇಷ ಕಾಳಜಿ.
ಇವು ಹೇಳ್ತ ಒಂದೊಂದು ಪೋಯಿಂಟುದೇ ಇಂಜೆಕ್ಷನು ಕುತ್ತಿದ ಹಾಂಗೆ ಆವುತ್ತು.
ವಿಷಯ ವಿವರುಸಿಗೋಂಡು ಹೋದರೆ ಷ್ಟೆತಸ್ಕೋಪಿಲಿ ಶಬ್ದ ಕೇಳಿದ ಹಾಂಗೆ ಆವುತ್ತು.
ವೈದ್ಯಕೀಯ ಕ್ಷೇತ್ರದ ಕೆಲವು ಸತ್ಯಂಗಳ ಹೇಳಿಯಪ್ಪಗ ದೋಡ್ಡ ಮಾತ್ರೆ ನುಂಗಿದಷ್ಟು ಕಷ್ಟ ಆವುತ್ತು,
ಕೆಲವು ಗಮ್ಮತ್ತುಗಳ ಹೇಳುವಗ ಸೆಮ್ಮದ ಕೆಂಪುಮದ್ದು ಕುಡುದ ಹಾಂಗಾವುತ್ತು.
ಒಟ್ಟಿಲಿ ಇವು ಡಾಗುಟ್ರು.
ಇವುದೇ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತವು.
ನಾವೆಲ್ಲರುದೇ ಕೇಳುವೊ.
ರಜ ರಜ ಕುಷಾಲು, ರಜ ಚೀಪೆ ಮದ್ದು, ರಜ ರಜ ಮದ್ದು-ಮಾತ್ರೆ, ರಜ ರಜ ಇಂಜೆಕ್ಷನು - ಎಲ್ಲವುದೇ ಸೇರಿ ನಮ್ಮ ಕಿದೂರು ಡಾಕ್ಟ್ರ. (ವೇಲುವೈದ್ಯರ ಶಕ್ತಿಮದ್ದು ಸದ್ಯಕ್ಕೆ ಈಗ ಇವರತ್ರೆ ಮಾತ್ರ ಸ್ಟೋಕು ಇಪ್ಪದಡ.......ಲ೦ಬೋದರ ಗುಟ್ಟಿಲಿ ಹೋಗಿ ತಿ೦ದಿಕ್ಕಿ ಬತ್ತ..ನಿ೦ಗೊಗೂ ಬೇಕಾರೆ ಕೇಳಿ!!!)
ಮದ್ದು ತೆಕ್ಕೊಳಿ, ಒಪ್ಪ ಕೊಡಿ.
ಆಗದೋ?
ಹಾರುವ ಹಕ್ಕಿಗಳ ಹಿಡುದು ಬೈಲಿ ಹಾಕಿದ ಡಾಕ್ಟ್ರಿಂಗೆ ಧನ್ಯವಾದಂಗೊ
ಲಯಕಿಯದು
ಕೆದೂರುಡಾಕ್ಟ್ರೆ, ಪಟ೦ಗೊ ಲಾಯ್ಕೆ ಬೈ೦ದು…
ಹೂ.. ಡಾಗುಟ್ರು – ಪಟಗ್ರಾಫೀ, ರೈಸಿದ್ದಪ್ಪಾ..! 😉
ಪಟಂಗೊ ತುಂಬಾ ಚೆಂದಕೆ ಬಯಿಂದು.
ಇಷ್ಟೆಲ್ಲಾ ನಮೂನೆ ಹಕ್ಕಿಗೊ ನಮ್ಮ ಊರಿಲ್ಲಿ ಇದ್ದವಾ ಹೇಳಿ ಆಶ್ಚರ್ಯ ಆತು.
ಬೈಲಿಲ್ಲಿ ಬೈಲಿನದ್ದೇ ಹಕ್ಕಿಗಳ ಫೊಟೊ ಕಂಡು ಕೊಶಿ ಆತು. ಚೆಂದ ಬಯಿಂದು. ಕೆದೂರು ಡಾಕ್ಟ್ರ ಪಕ್ಷಿವೀಕ್ಷಣೆ ಹವ್ಯಾಸವ ಮೆಚ್ಚೆಕಾದ್ದೇ. ಫೊಟೋ ನೋಡ್ಳೆ ಒದಗುಸಿ ಕೊಟ್ಟದಕ್ಕೆ ಧನ್ಯವಾದಂಗೊ.
ಸೂಪರ್ ಚಿತ್ರಂಗೊ…
ಕೆದೂರು ಡಾಕ್ಟ್ರು ಹೊಸ ಕೆಮರಾ ಹಿಡ್ಕೊಂಡು ವನವಾಸ ಮುಗುಶಿ ಬಪ್ಪಗ,
ನವಗೆ ನೋಡ್ಳೆ ಎಷ್ಟು ಒಳ್ಳೆ ಪಟಂಗೊ ಸಿಕ್ಕಿತ್ತು ಅಲ್ಲದೋ…?
ಸ್ವಾಗತ
‘ಹಕ್ಕಿ ನೋಡಲು ಬೈಲಿಂಗೆ ಬನ್ನಿ’ ಲಾಯಕ ಆಯ್ದು. ಅಪರೂಪದ ಕೆಲವುದರ ಸಂಗ್ರಹಿಸಿ ಬೈಲಿಲ್ಲಿ ತಂದು ಮಡಿಗಿದ್ದಕ್ಕೆ ಒಪ್ಪ.
ಏ ಚೆನ್ನಬೆಟ್ಟಣ್ಣ … ಕಾಕೆ ಮುಳ್ಳೇರಿಯಲ್ಲಿ ತಿಥಿ ಹೇಳಿ ಅಲ್ಲಿಗೆ ಹೋಯ್ದು. ಅಲ್ಲಿಂದ ಬೇರೆ ದಿಕ್ಕಿಂಗೆ ಬುಕ್ ಆಯ್ದು. ಬರೇಕ್ಕಷ್ಟೆ. ನಿಂಗೊ ಈಗ ಕಾ ಕಾ ಕಾ ಹೇಳಿರೆಲ್ಲ ಬಾರ!!
ವ್ಹಾ ..ವ್ಹಾ.. !!! ತುಂಬ ಚೆಂದದ ಛಾಯಾಚಿತ್ರಂಗೊ.
ಅಪರೂಪಲ್ಲಿ ಬಂದರೂ ಕಣ್ಮನ ತುಂಬುವ ಚಿತ್ರಶುದ್ದಿಗಳ ಕೊಟ್ಟದಕ್ಕೆ ಧನ್ಯವಾದ.
ಹಕ್ಕಿಗ ಚೆಂದ ಇದ್ದು..ಆದರೆ ನಮ್ಮ ಗುಬ್ಬಕ್ಕಿ ಕಾಂಬಲೇ ಇಲ್ಲೆ ಅಲ್ದಾ?ನಿಂಗೊಗೆ ಸಿಕ್ಕಿದ್ದಿಲ್ಲೆಯಾ?ಇಷ್ಟಾದರು ಇದ್ದವನ್ನೆ..ಅದುವೆ ಸಂತೋಷ..ಪಟಂಗ ಚೆಂದ ಇದ್ದು..
ಇದರಲ್ಲಿ ಮೈನಾ ಹಕ್ಕಿ, ಕೋಳಿ, ಮರಕುಟಿಗ, ಕೊಕ್ಕರೆ, ಮೀ೦ಚುಳ್ಳಿ, ಕುಪ್ಪುಳು ಕಾಕೆ, ಗಿಳಿ, ಬಜಕ್ಕರೆ ಹಕ್ಕಿ, ಪಾರಿವಾಳ, ಮತ್ತೆ ಆ ಉದ್ದಕಾಲಿನದ್ದು (ಮೇಗಾಣ ಸಾಲಿಲ್ಲಿ ೩ನೇದು, ಹೆಸರು ಗೊ೦ತಿಲ್ಲೆ) ಇಷ್ಟರ ಎನಗೆ ಕ೦ಡು ಗೊ೦ತಿದ್ದು, ಪಟ೦ಗೊ ಲಾಯ್ಕಾಯಿದು
ಆದು ಟಿಟ್ಟಿಬ ಹಕ್ಕಿ. ಟಿಟ್ಟಿಟ್ಟಿ…ಟಿಟ್ಟಿ……ಕೂಗಿಗೊ೦ಡು ಇರ್ತು
ವ್ಹಾ ಅದ್ಭುತ ಛಾಯಾಚಿತ್ರಂಗ.
ಓ ಚೆನ್ನೈ ಭಾವ ಇದಲ್ಲಿ ನಮ್ಮ ಕಾಕೆಯ ಪಟ ಕಂಡಿದೇ ಇಲ್ಲೆನ್ನೆ ?
ಒಂದು ವರ್ಷಲ್ಲಿ ಸಿಕ್ಕಿದ ಪಕ್ಷಿನೋಟ!
ಪುನಃ ಪ್ರವೇಶಕ್ಕೆ ಸ್ವಾಗತ…