- ಕಾಲ - March 25, 2013
- ಒಂದು ಮಳೆ, ಒಂದು ಕೊಡೆ - March 18, 2013
- ದೇವರು: ಜೀವನದ ಅನುಭವಂಗೊ - March 11, 2013
ಉಂಡಾಡಿ ಭಟ್ಟನ ಮೇಲೆ ಕೊಂಡಾಟ ಹೆಚ್ಚಾಗಿ
ಅವನ ಗುಣ ಕೊಂಡಾಡಿದರೆ ಕೋಪ ಬಕ್ಕು ಹೆಚ್ಚಾಗಿ
ಮೊಂಡಾಟ ಹೆಚ್ಚಾಗಿ ಬಡಿವಲೆ ಬಕ್ಕು ಕೋಪಂದಾಗಿ
ಪೈಸೆ ಕೊಟ್ಟರೆ ರಾಜಿ ಮಾಡ್ಯೊಂಡು ಹತ್ತರೆ ಬಕ್ಕು ಹೆಚ್ಚಾಗಿ
ಸಣ್ಣ ಸಣ್ಣ ಮಕ್ಕಳ ಕಂಡರೆ ಓಡ್ಯೊಂಡು ಬಕ್ಕು ಹತ್ತರಾಗಿ
ಪ್ರೀತಿ ಮಾಡ್ಯೊಂಡು ಅಪ್ಪ್ಯೊಂಡು ಹೇಳುಗು ಖುಶಿಯಾಗಿ
ಎಲ್ಯೆಲ್ಲಿ ಊಟ ಇದ್ದರು ಅವಂಗೆ ಶುದ್ದಿ ಸಿಕ್ಕುಗು ಮೇಲಾಗಿ
ಕಂಡೋರತ್ರೆಲ್ಲ ಕೇಳೋಂಡಿಕ್ಕು ಹೋಪಲೆ ಎಲ್ಯಾಗಿ
ಬಂದೋರತ್ರೆ ನಾಳೆಯ ಬಗ್ಗೆ ಕೇಳ್ಯೊಂಡಿಕ್ಕು ಮುಂದಾಗಿ
ಬಂದೋರ ಎಲ್ಲ ಮಾತಾಡ್ಸುತ್ತ ಪರಿಚಯವಿಕ್ಕು ಮೊದಲಾಗಿ
ಎಲ್ಲೋರನ್ನು ಮಾತಾಡ್ಸುಗು ಕಷ್ಟ ಸುಖ ಕೇಳ್ಯೊಂಡು
ಮೊದಲೇ ಅವ ನಮಸ್ಕಾರ ಹೇಳ್ಯೊಂಡು ಬಕ್ಕು
ಮತ್ತೆ ಅವಂಗೇ ನಮಸ್ಕಾರ ಮೊದಲೆ ಹೇಳುತ್ತವು
ಹಾಂಗೆ ಎಲ್ಲೋರಿಂಗೂ ಅವನ ಗುರ್ತವೇ ಇಕ್ಕು
ಊಟಕ್ಕೆ ಬರೆಕು ಹೇಳಿ ಹೇಳಿಕೆಹೇಳ್ಸ್ಯೊಂಡಿಕ್ಕು
ಬಂದರೆ ಸುಧರಿಕೆಯಾಗಿ ಬಳುಸಲೂ ಬಕ್ಕುಊಟಕ್ಕೆ
ಬಂದರೆ ಆರಿಂಗು ಬೇಜಾರಾಗ ಸೇರ್ಸೊಂಗು ಕೂಟಕ್ಕೆ
ಬಯ್ದರೂ ಕೋಪ ಬಾರ ಕೂಡ್ಯೊಂಗು ಎಲ್ಲ ಬಗೆ ಆಟಕ್ಕೆ
ಕಂಡರೆ ಮಾಣಿ ಉಂಡರೆ ಗೋಣಿ ಹತ್ತುಗು ಏಣಿ
ಅಂಡಲೆಯುತಿಕ್ಕು ಉಂಬಲೆ ಎಲ್ಲಾ ಓಣಿ ಓಣಿ
ಊರೆಲ್ಲ ಮನೆ ಅವಂಗೆ ಬೇರಿಲ್ಲೆ ಮನೆ
ಹೋಯ್ಕೊಂಡಿಕ್ಕು ದಿನವೆಲ್ಲ ಮನೆ ಮನೆ
ಎಲ್ಲೋರು ಸೇರಿ ಅವಂಗೊಂದು ಕೂಸಿನ ಹುಡುಕಿ
ಮದುವೆ ಮಾಡಿಕ್ಕುಲೆ ಹೆರಟೇ ಬಿಟ್ಟವು
ಮದುವೆಯಾದರೆ ಸಾಕೊ ಅವು ಇಪ್ಪಲೊಂದು
ಮನೆಯನ್ನೂ ಹುಡುಕಿ ಒಕ್ಕಲೂ ಮಾಡಿದವು
ಮನೆ ಹೊಕ್ಕ ರಜ ಹೊತ್ತಿಂಗೆ ಹೋಗಿತ್ತಿದ್ದವು
ಹತ್ರಾಣ ಮನೆಲಿ ಇಬ್ರುದೆ ಒಟ್ಟಿಂಗೆ ಕೂದು
ತಿಥಿ ಊಟವೇ ಉಂಡುಗೊಂಡಿತ್ತಿದ್ದವು
ಓಟೆಲ್ಲಿ ಹಾಕಿ ಸರ್ತ ಮಾಡಿದರೂ ನಾಯಿ
ಬಾಲ ಡೊಂಕು ಡೊಂಕೇ ಆಗಿಕ್ಕು ಅಲ್ಲದೋ?
ಇನ್ನೂ ಹೇಳಿದರೆ ಕತೆ ಕೇಳುವೋರಿರವು
ಕೇಳಿಗೊಂಡಿದ್ದುದಕ್ಕೆ ನಿಂಗೊಗೆಲ್ಲ ಥೇಂಕ್ಸ್
ಲಾಯಕಾಯಿದು.
ಚೊಕ್ಕ ಆಯಿದು
ಹೇಳಿದ್ದಷ್ಟಕ್ಕೆ ಥ್ಯಾಂಕ್ಸ್. ಒಳ್ಳೆ ಲಾಯಕ ಆಯ್ದು.