- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ
ಬೇಕಪ್ಪ ಸಾಮಾನುಗೊ:
- 5 ಕಪ್(ಕುಡ್ತೆ) ತುಂಡು ಮಾಡಿದ ಹಲಸಿನಕಾಯಿ ಸೊಳೆ
- 1.5 ಕಪ್(ಕುಡ್ತೆ) ಕಾಯಿ ತುರಿ
- ನಿಂಬೆ ಗಾತ್ರದ ಬೆಲ್ಲ
- 1 ಚಮ್ಚೆ ಮೆಣಸಿನ ಹೊಡಿ
- ಚಿಟಿಕೆ ಅರುಶಿನ ಹೊಡಿ
- 1/4 ಚಮ್ಚೆ ಜೀರಿಗೆ
- 1 ಚಮ್ಚೆ ಸಾಸಮೆ
- ರುಚಿಗೆ ತಕ್ಕಸ್ಟು ಉಪ್ಪು
- 5-6 ಬೇನ್ಸೊಪ್ಪು
- 1-2 ಮುರುದ ಒಣಕ್ಕು ಮೆಣಸು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.
ಹಲಸಿನಕಾಯಿ ಸೊಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.
ಒಂದು ಪಾತ್ರಲ್ಲಿ ಕೊರದ ಹಲಸಿನಕಾಯಿ ಸೊಳೆ, ಉಪ್ಪು, ಬೆಲ್ಲ, ಅರುಶಿನ ಹೊಡಿ, ಮೆಣಸಿನ ಹೊಡಿ, ರೆಜ್ಜ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ. ಅದು ನೊಂಪಪ್ಪಲಪ್ಪಗ ಅದಕ್ಕೆ ಜೀರಿಗೆ ಹಾಕಿ 2-3 ನಿಮಿಷ ಕಡೆರಿ. ಇದರ ಬೇಶಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು. (ಉಪ್ಪು, ನೀರು ಬೇಕಾದರೆ ಹಾಕಿ.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಬೆಂದಿಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
‘Podunkulu’ alla akko namm bhasheli ‘hodunkulu’ heludu.
Mathe akko, halasina soleya ‘kofta’ madle edigo?
ಎನ್ನ ಇಶ್ಟದ ಪದಾರ್ಥ, ಧನ್ಯವಾದ೦ಗೊ
ಇದೂ ಲಾಯಕ ಆವ್ತು. ಧನ್ಯವಾದ