ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   25/07/2012    8 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ತಲೆ ತಲೆ ಇದ್ದೋರಿಂಗೆ ತಲೆಯ ಬಗ್ಗೆ ಹೆಚ್ಚು ಹೇಳೆಕ್ಕದ ಅಗತ್ಯ ಇಲ್ಲದ್ದರೂ, ಎನ್ನ ತಲೆಗೆ ಹೊಳದ್ದರ ನಿಂಗಳ ತಲೆಗೂ ಕೊಡೆಕ್ಕು ಹೇಳಿ ಕಂಡತ್ತು.
ರಾವಣಂಗೆ ಹತ್ತು ತಲೆಯಿತ್ತಡೊ.
ಹತ್ತು ತಲೆಗಳನ್ನೂ ತೆಗೆಯೆಕ್ಕಾರೆ ಶ್ರೀರಾಮಂಗೆ ತುಂಬ ಕಷ್ಟ ಅಯಿದಡೊ.
ಬ್ರಹ್ಮಂಗೆ ಐದು ತಲೆ ಇದ್ದದರ ಶಿವ ಒಂದು ತಲೆ ಚೂಂಟಿ ಚತುರ್ಮುಖ ಮಾಡಿದ್ದು ಗೊಂತಿದ್ದನ್ನೆ.

ಅದರೆ ಬ್ರಹ್ಮ ಕಪಾಲ ಶಿವನ ನೆತ್ತರು ಹೀರುಲೆ ಶುರುಮಾಡಿ, ಉಪಾಯ ಇಲ್ಲದ್ದೆ ಸೀದಾ ನಾರಾಯಣ ದೇವರಲ್ಲಿಗೆ ಹೋದ್ದು, “ಶಿವನ ಕೈಂದ ಎನ್ನ ಕೈಗೆ ಬಾ” ಹೇಳಿ ಸೋಲುಸಿದ್ದು,
ಮತ್ತೆ ಬ್ರಹ್ಮ ಕಪಾಲದ ರಕ್ತದಾಹ ತೀರುಸುಲೆ, ಮುಂದೆ “ಮಹಾಭಾರತ ಯುದ್ಧಲ್ಲಿ ನಿನಗೆ ಬೇಕಾದಷ್ಟು ನೆತ್ತರು ಕೊಡ್ತೆ” ಹೇಳಿದ್ದು, ಮಾತು ನಡೆಶುಲೆ ಯುದ್ಧವೇ ಅಪ್ಪ ಹಾಂಗೆ ಮಾಡಿದ್ದು,
ಭೂಭಾರ ಕಳವಲೆ ಮಾದಿದ ಅವತಾರ ಎಲ್ಲ ಬ್ರಹ್ಮನ ತಲೆಗೂ ತೃಪ್ತಿ ಕೊಟ್ಟತ್ತು. ಮತ್ತೆ ಆ ತಲೆಯ ಭೀಮ ಕೈಂದಲೇ ಬಡುದು ನಾಶ ಮಾಡಿದ್ದು ಎಲ್ಲ ಪುರಾಣ ಕತೆ.
ದತ್ತಾತ್ರೇಯಂಗೂ ಮೂರು ತಲೆಯಡೊ. ಮೂರು ಮೂರ್ತಿಗಳ ಅವತಾರ ಅಲ್ಲದೋ?
ಮತ್ತೆ ರಾಮಾಯಣಲ್ಲಿ ಶ್ರೀರಾಮ ಪಂಚವಟಿಲ್ಲಿಪ್ಪಗ ಮೂರು ತಲೆಯ ದಾನವನನ್ನೂ ಕೊಂದಿದ್ದಡೋ.

ನಮಗಿಪ್ಪ ಒಂದು ತಲೆಲ್ಲೇ ವಿವಿಧ ಆಲೋಚನಗೋ ಬತ್ತಿದ್ದರೆ, ತಲೆ ಹೆಚ್ಚಿಪ್ಪೋರ ಒಂದೊಂದು ತಲೆಯ ಯೋಚನೆ ಒಂದೊಂದಾದರೆ… ಎಷ್ಟು ಅಸಬಡುದ್ದವೋ!
ವಿಜ್ಞಾನದ ಲೆಕ್ಕಲ್ಲಿಯೂ ಮೆದುಳಿಪ್ಪದು ತಲೆಯೊಳದಿಕ್ಕೇ ಅಲ್ಲದೋ?
ನಮ್ಮ ಇಡೀ ದೇಹದ ಹಿತವನ್ನೂ ಹಾಕು ಚೋಕುಗಳನ್ನೂ ಯೋಚನೆ ಮಾಡೆಕ್ಕಾದ್ದು ಮಿದುಳು ಹೇಳುವ ಯಂತ್ರಲ್ಲಿ.
ರಕ್ತ ಪರಿಚಲನೆ  ಹದಕ್ಕಿದ್ದರೆ ತೊಂದರೆ ಇಲ್ಲೆ. ತಲೆಲ್ಲಿ ಆಲೋಚನೆ ಹೆಚ್ಚಾದರೆ ರಕ್ತ ಪ್ರವಾಹ ಹೆಚ್ಚೆಕ್ಕಾವುತ್ತು. ಹಾಂಗೆ ಒತ್ತಡಲ್ಲಿ ನೆತ್ತರು ತಲೆಯ ಕಡೆಂಗೆ ಹೋದರೆ ಒತ್ತಡ ಜಾಸ್ತಿ ಆಯೆಕ್ಕನ್ನೆ!
ಒಂದರಿಯೋ,ಎರಡು ಸರ್ತಿಯೋ ಪರವಾಗಿಲ್ಲೆ. ಅವರವರ ದೈನಂದಿನದ ಕೆಲಸಂಗಳ ಬಗ್ಗೆ  ಯೋಚನೇ ಹದಕ್ಕೆ ಮಾಡಿದರೆ ತೊಂದರೆ ಇಲ್ಲೆ.
ಆದರೆ ಬೇಕಾದ್ದರ ಬೇಡದ್ದದರ ತಲೆಲ್ಲಿ ತುಂಬ್ಯೊಂಡು ತಲೆ ಹಾಳು ಮಾಡಿಗೊಂಬೋರು ಬೆಶಿ ಜೋರಾದರೆ ಸೀದ ಹೋಪದು ಡಾಕ್ಟ್ರ ಹತ್ತರಂಗೆ.
ಮತ್ತೆ ಅವಕ್ಕೂ ಉದ್ಯೊಗ ಬೇಕನ್ನೆ. ಹಾಂಗಲ್ಲ ಅನು ಡಾಕ್ಟ್ರಕ್ಕಳ ವಿರೋಧಿ ಅಲ್ಲ.

ದೇಹಾರೋಗ್ಯಲ್ಲಿ  ಸೋತು ಹೋದ ಕಾಲಕ್ಕೆ ನಮ್ಮ ಕಾಪಾಡುವದು ಭಿಷಗ್ವರೇಣ್ಯಂಗೊ.
ಅವು ನಮಗೆ ಯಾವಾಗಲೂ ಬೇಕು. ಆದರೆ ಡಾಕ್ಟ್ರ ಒಟ್ಟಿಂಗೆ ಇದ್ದ ಹೇಳಿ ಮಧು ಮೇಹ ಇದ್ದೋರು ಸೀವು ಹೆಚ್ಚು ತಿಂದರೆ ಅಕ್ಕೊ.
ತತ್ಕಾಲ ಉಪಶಮನ ಒಂದೆರಡು ಸರ್ತಿ ಮಾಡುಗು. ಮತ್ತೆ ಎಲ್ಲ ದೇವರ ಮೇಲೆಯೇ ಭಾರ ಹಾಕೆಕ್ಕಷ್ಟೆ.
ಬೇಕು ಬೇಕು ಹೇಳಿ ಬಲುಗಿ ಹಾಕ್ಯೋಂಡು ಮತ್ತೆ ದೇವರ ದೂರುವದೆಂತಗೆ? ಇದರ ಎಲ್ಲ, ಮದಲೇ ಯೋಚನೆ ಮಾಡೆಕ್ಕಾದ್ದು ನಮ್ಮ ತಲೆ. ಯೋಚನೆಗೂ ಒಂದು ಮಿತಿಯಿದ್ದಲ್ಲದೋ?ಒಬ್ಬೊಬ್ಬನ ತಲೆ ಒಂದೊಂದು ರೀತಿಲ್ಲಿ ಓಡುತ್ತಾದರೂ ಹಲವು ಜನ ಒಟ್ಟು ಸೇರಿ ಬೇಕಾದಷ್ಟು ಅಭಿಪ್ರಾಯ ಹಂಚ್ಯೊಂಡು ಒಂದು ನಿರ್ಧಾರಕ್ಕೆ ಬರೆಕ್ಕಾದ್ದು ಕ್ರಮ.
ದೇಶದ, ರಾಜ್ಯದ ಹಿತವ ಮಂತ್ರಿ ಮಂಡಲ ಒಂದು ನಿರ್ಣಯಕ್ಕೆ ಬಂದು ಶಾಸನ ಸಭೆಲ್ಲಿ ಚರ್ಚಿಸಿ ಕಾನೂನು ರೂಪವ ಕೊಟ್ಟ ಮೇಲೆ, ಎಂಕಿಂಚ ಹೇಳಿ ನ್ಯಾಯ ತಪ್ಪಿ ಹೋಪದು, ಸಿಕ್ಕಿ ಬಿದ್ದರೆ ದೇವಸ್ಥಾನಂಗಳಲ್ಲಿ ಪೂಜೆ ಮಾಡುಸ್ಯೊಂಡೋ, ಹರಕೆ ಪುಜೆ ಒಪ್ಪಿಸಿಯೋ ಬಚಾವಪ್ಪಲೆ ತಲೆ ಖರ್ಚು ಮಾಡುವದಕ್ಕೆ ಎಂತಪ್ಪ ಹಿರಿಯೋರು ಒಂದು ಗಾದೆ ಹೇಳುಗು
“ಬೇಕೆಂದು ಮಾಡುಸ್ಯೊಂಡ ಬೇಕು ಹೆಬ್ಬಾರ” ಹೇಳಿ.

ಪೂಜೆ ಮಾಡುಸುಲೆ ಆಗ ಹೇಳಿದ್ದಲ್ಲ, ಮಾಡುಸದ್ದರೆ ದೇವರಿಂಗೆ ಪೂಜೆಯೇ ಇಲ್ಲೆ ಹೇಳಿ ಆಗಿ ಹೋಗ.
ಪೂಜೆಯೋ, ಯಾಗವೋ ಬರೇ ನಮ್ಮ ಹಿತಕ್ಕಾಗಿ ಮಾಂತ್ರ ಅಲ್ಲ, ಎಲ್ಲೋರ ಹಿತಕ್ಕಾಗಿ ಮಾಡುಸ್ಯೊಳ್ಳೆಕ್ಕು.
ಅಖೇರಿಗೆ ಪೂಜೆಯೋ ,ಹೋಮವೋ ಮುಗಿಶುವಗ ನವು ಹೇಳುವದೆಂತರ? ಗೋಬ್ರಾಹ್ಮಣೇಭ್ಯೋ ಶುಭಮಸ್ತು ನಿತ್ಯಂ ಲೋಕಾಸ್ಸಮಸ್ತಾಸ್ಸುಖಿನೋ ಭವಂತು. ಹೇಳುತ್ತನ್ನೇ.
ಆದರೆ ತಲೆ ಉಪಯೋಗುಸೆಕ್ಕಾದಲ್ಲಿ ತಲೆ ಉಪಯೋಗುಸದ್ದರೆ ತಲೆಯಿದ್ದೂ ಇಲ್ಲದ್ದ ಹಾಂಗೆ ಆಗಿಹೋಕು. ಕೆಲವು ಸರ್ತಿ ಎಷ್ಟು ತಲೆಯಿದ್ದೋನೂ ಸೋತು ಹೋಪದಿದ್ದು.
ತಲೆಯಿದ್ದೋವಕ್ಕೇ ಅಡೊ ತಲೆ ಬೇನೆ ಬಪ್ಪದು.ಹಾಮ್ಗೇ ತುಂಬಾ ತಲೆಯಿದ್ದೋವಕ್ಕೆ ತಲೆಲ್ಲಿದ್ದ ಕೂದಲು ಉದುರಿ ಹೋವುತ್ತಡೊ.
ಬೋಳು ತಲೆಯೋರೆಲ್ಲ ಬುದ್ಧಿವಂತರು ಹೇಳಿ ಬಾರ.ವಿಷಯ ತಲೆಯಿದ್ದೋರಿಂಗೆ ಅರ್ಥ ಅಕ್ಕು.

ಒಂದರಿ ಶಿವ ಪಾರ್ವತಿಯರೊಟ್ಟಿಂಗೆ ಇಬ್ರು ಮಕ್ಕಳುದೆ ಕೂದೊಂಡಿಪ್ಪಗ ಅಲ್ಲಿಗೆ ನಾರದ ಬಂದಡ.
ಬಂದೋನು ಎಂತಾರೊಂದು ಕುಸೃ್ಟಿ ತಂದೇ ತತ್ತ. ಒಂದು ಹಣ್ಣಿನ ಶಿವನ ಕೈಲಿ ಕೊಟ್ಟು, ಆರು ಮದಲು ಲೋಕವ ಮೂರು ಪ್ರದಕ್ಷಿಣೆ ಮುಗಿಶಿ ಬತ್ತವೋ ಅವಕ್ಕೆ ಈ ಹಣ್ಣಿನ ಕೊಡು ಹೇಳಿದನಡ.
ಕೇಳುವದೇ ತಡವು; ಸುಬ್ರಹ್ಮಣ್ಯ ಹಣ್ಣಿನ ಪಡೆಯೆಕ್ಕು ಹೇಳಿ ಹೆರಟಡೊ ನವಿಲೇರಿಗೊಂಡು.
ಗಣಪತಿ ಮಾಂತ್ರ ಅಲ್ಲೇ ಇತ್ತಿದ್ದಡ.
ರಜ ಹೊತ್ತು ಕಳುದು ನಿಧಾನಕ್ಕೆ ಎಲಿಯ ಮೇಲೆ ಕೂದೊಂಡು, ಅಬ್ಬೆ ಅಪ್ಪಂಗೆ ಅವು ಕೂದಲ್ಲಿಗೇ ಮೂರುಸುತ್ತು ಬಂದನಡ.
ಸುತ್ತು ಹಾಕಿಕ್ಕಿ ಬಂದು ಹಣ್ಣಿನ ಎನಗೆ ಕೊಡಿ ಹೇಳಿದನಡ. ಶಿವ-ಪಾರ್ವತಿಯರು ಮೂರು ಲೋಕಕ್ಕೂ ಒಡೆಯರು. ಅವಕ್ಕೆ ಸುತ್ತು ಬಂದರೆ ಲೋಕಕ್ಕೆ ಸುತ್ತು ಬಂದ ಹಾಂಗೆ ಆತಲ್ಲದೋ/ ಹಣ್ನಿನ ಕೊಡಿ ಹೇಳಿದ್ದಕ್ಕೆ ನಾರದ ಅಲ್ಲೆ ಇದ್ದೋನು “ಸರಿ ಗಣಪತಿ ಹೇಳಿದ್ದು ನಿಂಗೊ ಇಬ್ರಿಂಗೆ ಸುತ್ತೂ ಹಾಕಿದರೆ ಜಗತ್ತಿಂಗೇ ಸುತ್ತು ಬಂದ ಹಾಂಗೆ ಆತು. ಹಣ್ಣಿನ ಗಣಪತಿಗೆ ಕೊಡುಲಕ್ಕು” ಹೇಳಿದನಡ.
ಮತ್ತೆ ವಿರೋಧ ಇಲ್ಲೆ. ಹಣ್ಣು ಸುಲಭದ ಹಾದಿ ಹಿಡುದ ಗಣಪತಿಯ ತ್ಬುದ್ಧಿವಂತಿಕೆಗೆ ಸಿಕ್ಕಿತ್ತು.

ಎಲ್ಲವು ಅಷ್ಟೆ ಸಮಯ ಸಂದರ್ಭ ನೋಡಿ ನಾವು ನಡಕ್ಕೊಳ್ಳೆಕ್ಕು.
ಮದಲೊಂದು ಕುಟುಂಬದ ಯಜಮಾನ ಅವ ಬಂದ ಮೇಲೆಯೇ ಎಲ್ಲೋರಿಂಗೂ ಊಟ ಸಿಕ್ಕುವದು. ಕೆಲಸದೋವು ಬಂದು ಹೇಳಿದವಡ. ಗೋಣ ಕಂಜಿ ಹಾಕಿದ್ದು ಹೇಳಿ.
ಕೆಲಸದೋನು ಹೇಳಿದ್ದು ಗೋಣ ಕರು ಹೇಳಿ.
ಯಜಮಾನ ಯೋಚನೆ ಮಾಡದ್ದೇ ಕೊಟ್ಟಗೆಲ್ಲಿ ಕಟ್ಟು ಹೇಳಿತ್ತಿದ್ದನಡ. ದನಿಯ ತಲೆ ಎಲ್ಲ್ಯೋ  ಕೆಲಸದೋನು ತಲೆ ಎಲ್ಲಿಯೋ?
ಕ್ಲಾಸಿಲ್ಲಿ ಪಾಠ ಮಾಡ್ಯೊಂದಿಪ್ಪಗ ಒಬ್ಬ ಮಾಣಿ   ಕ್ಲಾಸಿಲ್ಲಿ ಮೇಲೆಮಾಡಿನ ನೋಡ್ಯೊಂಡಿದ್ದೋನಿಂಗೆ ಒಂದು ಕೇರೆ  ಹಾವು ಗೋಡೆ ಎಡೆಲ್ಲಿ ಹೋಗ್ಯೋಂಡಿಪ್ಪದು ಕಂಡದರ ನೋಡುವರಲ್ಲೆ ತಲ್ಲೀನನಾಗಿತ್ತಿದ್ದನಡ. ಇವ ಬೇರೆಲ್ಲಿಯೋ ನೋಡ್ಯೊಂಡಿದ್ದ ಹೇಳಿ ಮಾಷ್ಟ್ರ ಅವನತ್ರೆ ಪ್ರಶ್ನೆ ಕೇಳಿದನಡ.
ಆನು ಹೇಳಿದ್ದು ನಿನಗೆ ಅರ್ಥ ಆತೋ ಹೇಳಿ ಕೇಳಿದನಡ. ಅಂಬಗ ಈ ಮಾಣಿ ಹೇಳಿದ್ದೆಂತರ ” ಬೀಲ ಮಾಂತ್ರ ಬಾಕಿ ಇದ್ದು. ಮತ್ತೆ ತಲೆ ಶರೀರ ಒಳ ಹೋಗಿ ಆತು ಹೇಳಿ.

ಮುಂಡಾಸನ್ನೇ ಯೋಚನೆ ಮಾಡ್ಯೊಂಡಿದ್ದ ಮದಿಮ್ಮಾಯನತ್ರೆ, ಊಟ ಆತೊ ಕೇಳಿದ್ದಕ್ಕೆ “ಮುಂಡಾಸು ಮೂವತ್ತು ಮಳ ಬೇಕಡೊ” ಹೇಳಿದನಡ.
ನಾವೆಲ್ಲಿಯೋ ನಮ್ಮ ತಲೆ ಎಲ್ಲಿಯೋ ಅಪ್ಪಲಗ.
ತಲೆ ನಮ್ಮೊಟ್ಟಿಂಗೇ ಇದ್ದರೂ ಯೋಚನೆ ಬೇರಾದರೆ ಒಂದು ಹೋಗಿ ಮತ್ತೊಂದಕ್ಕು.ಹಾಂಗೆ ತಲೆ ತಿರುಗುಲೆ ಬಿಡ್ಲಾಗ.
ಕೆಲವು ಜನಕ್ಕೆ ಚಯ ಕುಡಿಯದ್ದರೆ, ಕಾಫಿ ಕುಡಿಯದ್ದರೆ ತಲೆಬೇನೆ, ತಲೆ ಸೆಳಿವದು ಶುರು ಆವುತ್ತಡೊ. ಚಾ,ಕಾಫಿಯೇ ತಲೆಲ್ಲಿ ತುಂಬ್ಯೊಂಡಿದ್ದರೆ ಬೇರೆಂತಕ್ಕೆ? ಅದು ಸಿಕ್ಕದ್ದರೆ ತಲೆ ಬೆಶಿ ಆಗೆಡದೊ.
ಆಶೆಯೇ ದುಃಖಕ್ಕೆ ಕಾರಣ ಹೇಳಿದ ಬುದ್ಧ ಈಗ ಇಲ್ಲೆ. ಆಶೆ ಪಟ್ಟದು ಸಿಕ್ಕದ್ದರೆ, ಬೇಜಾರು ಬಪ್ಪದು ಸ್ವಾಭಾವಿಕ.
ನಮ್ಮ ವೇದಾಂತಲ್ಲಿ ಹೇಳುತ್ತವು. ಎಲ್ಲ ಅವರವರ ಭಾಗ್ಯಂದ ಬತ್ತು, ಹೋವುತ್ತು. ಹೋದರೆ ಬೇಜಾರು ಮಾಡದ್ದೆ, ಸಿಕ್ರೆ ಹೆಚ್ಚು ಸಂತೋಷಪಡದ್ದೆ, ಸಮಚಿತ್ತಲ್ಲಿ ಇರೆಕ್ಕಡೊ.

ಕಳಕ್ಕೊಂಡದಕ್ಕಾಗಿ ಚಿಂತೆ ಮಾಡಿದರೆ ಮತ್ತೆ ಸಿಕ್ಕುಗೋ? ಸಿಕ್ಕಿದರೂ ಎಷ್ಟು ದಿನಕ್ಕೆ? ಎಲ್ಲ ಮೂರು ದಿನದ ಬಾಳ್ವೆ. ಮತ್ತೆ ತಲೆ ತಲೆ ಸೇರಿದರೆ,ಅಲ್ಲಿ ಜಗಳ ಬರೆಕ್ಕಡೊ.
ರತ್ನಾಕರ ಕವಿ ಹೇಳಿದ್ದಲ್ಲದೋ? ಸಾವಿರ ಹೆಂಡತ್ಯಕ್ಕಳನ್ನೂ ಭರತ ಚಕ್ರವರ್ತಿ ಬೇಜಾರು ಆಗದ್ದ ಹಾಂಗೆ ನೋಡ್ಯೊಂಡಿತ್ತಿದ್ದನಡ. ಮತ್ತೆ ಕೃಷ್ಣನ ಕತೆ ಗೊಂತಿದ್ದನ್ನೆ.

ಆನು ಅವನತ್ರೆ ಒಂದು ಕೇಳಿದೆ. ಅವ ತಲೆಯಾಡುಸಿದ್ದನೇ ಇಲ್ಲೆ ಹೇಳುತ್ತವು.
ಬಾಯಿ ಬಪ್ಪೋನು ತಲೆಯಾಡುಸುವದೆಂತಗೋ?

ಶೀತ ಅಪ್ಪಗ ತಲೆ ಬೇನೆ ಅಪ್ಪದು ಇದ್ದು. ಆದರೆ ಕೆಲವು ಜನಕ್ಕೆ ಬೇರೊಬ್ಬ ಒಳ್ಳೆದಪ್ಪದು ನೋಡಿದರೆ ತಲೆ ಬೇನೆಯಾವುತ್ತಡೊ.ಅವಂಗೆ ತಲೆ ಜೆಪ್ಯೊಂಡು ಹೇಳಿದೆ ಕೇಳಿದ ಇಲ್ಲೆ.
ಈಗ ಅನುಭವಿಸುತ್ತ ಹೇಳುವದಿದ್ದನ್ನೆ.ಅವ ಒಳ್ಳೆ ಬುದ್ಧಿವಂತ ಹೇಳುವಗಳೂ “ಅವಂಗೆ ತಲೆಯಿದ್ದು ಹೇಳುತ್ತವು. ಕಣ್ಣಿಂಗೆ ಕಾಂಬ ತಲೆ ಅಲ್ಲ. ತಲೆಲ್ಲಿಪ್ಪ ಮೆದುಳು ಶಕ್ತಿ ಒಳ್ಳೆದಿದ್ದು ಹೇಳಿ ಅಲ್ಲದೋ? ಬೇಡದ್ದದರ ಮಾಡ್ಯೊಂಡು ಸಿಕ್ಕಿ ಬಿದ್ದು, ಮತ್ತೆ ತಲೆ ಬೆಶಿ ಮಾಡ್ಯೊಂಡು ಊರೆಲ್ಲ ನಾರುಸುವೋರು ಇದ್ದಷ್ಟು ದಿನ ಲೋಕ ಉದ್ಧಾರ ಅಕ್ಕೋ? ಎಲ್ಲ ಅವರವರ ಮನಸ್ಸಿಲ್ಲಿ ಕೂದುಗೋಂಡು ಒಂದೊಂದು ಬುದ್ಧಿ ಕೊಟ್ಟು, ಒಬ್ಬಕ್ಕೊಬ್ಬ ಜಗಳ ಮಾಡ್ಯೊಂಡಿಪ್ಪದೇ ದೇವರಿಂಗೆ ಬೇಕಾದ್ದೊ ಗೊಂತಿಲ್ಲೆ. ಎಲ್ಲ ಅವಂಗೇ ಅರ್ಪಿತ ನಮ್ಮ ಈ ಶರೀರವ ಮೂರು ವಿಭಾಗ ಮಾಡಿದ್ದವು- ರುಂಡ, ಮುಂಡ. ಕೈಕಾಲುಗೊ. ಅಡಿ ಕಂಬ ನಡು ಮಡಕೆ ಕೊಡಿ ಕುಡಿಕೆ ಹೇಳಿಯೂ  ಮೂರು ವಿಭಾಗ ಹೇಳುತ್ತವು.
ಕುಡಿಕೆ ಹೇಳುವಗು ತಲೆಯ.ಇಡೀ ಶರೀರದ ಕೇಂದ್ರ ಸ್ಥಾನ- ಮೆದುಳು ಇಪ್ಪದು ಇಲ್ಲೇ ಅಲ್ಲದೋ?
ಒಳುದ ಎಲ್ಲ ಅಂಗಂಗೊಕ್ಕೆ ಬೇಕಾದ ನಿರ್ದೇಶನ ಕೊಟ್ಟು ನಿಯಂತ್ರಣಲ್ಲಿ ಮಡಿಕ್ಕೊಂಬದು ತಲೆ. ಕೆಲವು ಜನಕ್ಕೆ ನಖ ಶಿಖಾಂತವಾಗಿ ಕೋಪ ಬತ್ತನ್ನೇ!
ಹೀಂಗಿಪ್ಪ ಕೋಪವೇ ಮುಂದೆ ರಕ್ತದ ಒತ್ತಡಕ್ಕೆ ಕಾರಣ ಅಪ್ಪದಡೊ.
ಕೋಪ ಬಂದರೆ ಅದು ಒಂದು ಕ್ಷಣದ ಆವೇಶ. ಆ ಘಳಿಗೆಲ್ಲಿ ಮನಸ್ಸಿನ ಹತೋಟಿಲ್ಲಿ ಮಡಿಕ್ಕೊಂಡರೆ ಮರುಕ್ಷಣಲ್ಲೇ ಕೋಪ ದೂರ ಹೋವ್ತು.

ಆತ್ಮ ಹತ್ಯೆ ಮಾಡಿಗೊಂಬೋರುದೇ ಹಿಂದೆ ಮುಂದೆ ಯೋಚನೆ ಮಾಡದ್ದೆ ಆ ಕ್ಷಣದ ಆವೇಶಕ್ಕೆ ಒಳಗಾದರೆ ಜೀವ ತೆಕ್ಕೊಳ್ಳುತ್ತವು.
ಒಂದು ಕ್ಷಣ ಕಳುದರೆ ಮತ್ತೆ ಅವರ ಯೋಚನೆ ಬದಲಾವುತ್ತಡೊ. ಅದಕ್ಕೇ ಹೇಳುತ್ತವು ತಾಳಿದವನು ಬಾಳಿಯಾನು ಹೇಳಿ.

ಸಹನೆ ವಜ್ರದ ಕವಚ ಹೇಳಿ ಡಿ ವಿ ಜಿ ಹೇಳಿದ್ದ.
ಕೂಪದೊಳು ನೇಣು ಹರಿದಂತೆ ಕೋಪಿ ತಾನಿಳಿವ ನರಕಕ್ಕೆ ಹೇಳಿ ಸರ್ವಜ್ಞ ಹೇಳಿದ್ದಡೊ. ಹಾಂಗಿಪ್ಪ ಅನುಭವಸ್ಥರ ಮಾತೇ ನಮಗೆ ವೇದ ವಾಕ್ಯ ಆಗಿಪ್ಪಗ, ಯವ ಕೆಲಸಲ್ಲಿ ಮುಂದೆ ಹೋಪಗಳೂ ಸಾಕಷ್ಟು ಚಿಂತನೆ ಮಾಡ್ಯೊಂಡೇ ಮುಂದುವರಿಯೆಕ್ಕು.
ಬಿದ್ದ ಹಣ್ಣು ಮತ್ತೆ ಮರಕ್ಕೆ ಹೋಕೋ? ಅದಕ್ಕೇ ತಲೆಯಿಪ್ಪೋರಿಂಗೆ ಇಂತಹ ಮಾತು ಸದಾ ನೆಂಪಿರುತ್ತು. ಲೋಕಲ್ಲಿ ಹೆಚ್ಚು ತಲೆಯಿಪ್ಪ ಹೇಳಿರೆ ಬುದ್ಧಿವಂತ ಜನಂಗೊ ಹೊಸ ಹೊಸ ಸಂಶೋಧನೆ,ಮಾಡ್ಯೊಂಡು ಒಳುದೋರ ತಲಗೂ ಹೊಗುಸಿ ಲೋಕ ಹಿತವ ಯೋಚನೆ ಮಾಡುವ್ಮಾಡ್ಯೊಂಡಿಪ್ಪ ವಿಜ್ಞಾನಿಗಳ ಕೊಡುಗೆ ಲೋಕ ಹಿತಕ್ಕಾಗಿ ನಡದ್ದರಿಂದ ಪ್ರಪಂಚ ವಿಜ್ಞಾನಲ್ಲಿ ಲೋಕ ಮುಂದುವರುದ್ದು.

ನಮ್ಮ ದೇಶಲ್ಲಿಯೂ ದೊಡ್ಡ ದೊಡ್ಡ ವಿಜ್ಞಾನಿಗೊ ಇಪ್ಪದು ನಮಗೆ ಹೆಮ್ಮೆ.ಮನ್ನೆ ತಾನೆ ಪತ್ರಿಕೆಲ್ಲಿ ಬಂದದೇವಕಣಂಗಳ ಶುದ್ದಿಲ್ಲಿ ಬೋಸೋನ್ ದೇವಕಣ ಹೇಳುವ ಹೆಸರು ಮಡಗಿದ್ದು ನಮ್ಮ ಜನಂಗೊ ವಿಜ್ಞಾನ ಲೋಕಲ್ಲಿ ಮದಲೆ ಪಾದಾರ್ಪಣೆ ಮಾಡಿದ್ದವು ಹೇಳುವದಕ್ಕೆ ಉದಾಹರಣೆ.
ನಮ್ಮ ತಲೆಯ ಲೋಕೋದ್ಧರಕ್ಕೆ ಉಪಯೋಗಿಸಿದರೆ ನಮ್ಮ ದೇಶವ ಎಲ್ಲ ದೇಶದೋರುದೆ ಕೊಂಡಾಡುವ ಹಾಂಗೆ ಅಕ್ಕು.ಕೊಡಾಡೆಕ್ಕು ಹೇಳಿ ಅಲ್ಲ ನಮ್ಮ ಪಾಲನ್ನು ಕೊಡುವ ಯೋಗ್ಯತೆ ನಮಗೂ ಬಂದರೆ ಅದಕ್ಕಿಂತ ಹೆಚ್ಚು ನಮಗೇನೂ ಬೇಡ.
ದಾಸರ ಪದಲ್ಲಿದ್ದಲ್ಲದೋ? “ಏನ ಬೇಡಲಿ ನಿನ್ನ ಬಳಿಗೆ ನಾ ಬಂದು; ನೀನಿತ್ತ ಸೌಭಾಗ್ಯ ನಿಖಿಳವಾಗಿರಲು” ನಾವು  ಮತ್ತೆ ಏನನ್ನು ಕೇಳುವದು ಬೇಡ. ಅವ ಕೊಟ್ಟದರನ್ನೇ ಸದ್ವಿನಿಯೋಗ ಮಾಡಿ ಸೈ ಎನಿಸಿಗೊಂಡರೆ,
ಜೀವನ ಸಾರ್ಥಕ!

~*~*~

8 thoughts on “ತಲೆ

  1. ಎನಗೂ ಒಂದು ತಲೆಯಿದ್ದು ಹೇಳಿ ಒಪ್ಪಣ್ಣನತ್ರೆ ಹೇಳಿಗೊಂಡದು.ಬಡ್ದು ತಲೆಗೆ ಹೊಳದ ಶುದ್ದಿಯ ಹಂಇಗೊಂಡದು.ತಲೆ ಉಪಯೋಗುಸೆಕ್ಕು ಹೇಳಿ ತಲೆಗೆ ಹೊಳವದೇ ತಲೆ ಇದ್ದೋರಿಂಗೇ ಅಲ್ಲದೋ?

  2. ತಲೆ ಮುಖ್ಯ,ಅತಿ ಪ್ರಧಾನ .

    1. ಅಪ್ಪಪ್ಪು ಮಾವಾ…. ಎನಗೂ ಒಂದು ಇದ್ದು ತಲೆ. ಉಪಯೋಗ್ಸುದು ಹೇಂಗೆ ಹೇದು ತಲೆ ಕರ್ಚು ಮಾಡ್ತಾ ಇದ್ದೆ.

  3. ಈ ತಲೆಯ ಬಗ್ಗೆ ಎಷ್ಟು ಹೇಳಿರೂ ಮುಗಿಯದ್ದ ವಿಷಯ… ಕೆಲವು ಸರ್ತಿ ತಲೆ ಇನ್ನೊಬ್ಬಂಗೆ ತುಂಬಾ ಉಪದೇಶ ಕೊಡುವ ಹೇಳಿ ಆಲೋಚನೆ ಮಾಡುತ್ತು… ನಮ್ಮ ಬೈಲಿನ ಒಂದು ವಿಶೇಷತೆ ಹೇಳಿರೆ “ಒಂದೋ ಅಳವಡಿ%E

  4. ಅದು ಸರಿಯೆ. ಆದರೆ ನಾವೆತ್ತಿದ್ದು ವಿಶ್ಯ ಈಗ ಭರತನ ಜಾಗೆಲಿ ಇ೦ದು ಕೂದವರ ಬಗ್ಗೆ. ಹಾ೦ಗೆ ಅದು ನಮಗೆ ಬೇಕಾದ ವಿಶ್ಯ ಹೇಳಿ ಅತ್ಲಾಗಿ ,ಅಲೋಚನೆ ಮಾಡಿದ್ದು.ಬೇರೆ೦ತ ಇಲ್ಲೆ.

  5. ಕೆಲವು ಜನಕ್ಕೆ ತಲೆ ಬಿಟ್ಟು ಹೋಪದು ಇದ್ದಡೊ.ಮತ್ತೆ ಕೆಲವು ಜನಕ್ಕೆ ತಲೆ ಕೆಟ್ಟು ಮಸರು ಅಪ್ಪದೂ ಇದ್ದಡ. ಇನ್ನು ಕೆಲವು ಜನ ಬೇಡದ್ದ ವಿಷಯಕ್ಕೆ ತಲೆಹಾಕಿ ತಲೆ ಹಾಳು ಮಾಡಿಗೊಂಬೋರೂ ಇದ್ದವಡೊ.ಆದರೆ ಎಲ್ಲೋರಿಂಗೂ ಒಂದು ತಲೆ ಇಪ್ಪದು ಒಬ್ಬೊಬ್ಬ ಒಂದೊಂದು ಅಭಿಪ್ರಾಯ ಹೇಳೆಕ್ಕಾರೆ ಇದ್ದ ತಲೆಯ ಖರ್ಚು ಮಾಡೆಕ್ಕಾವುತ್ತಲ್ಲದೋ?

  6. ಆದರೆ, ಈ ತಲೆಲಿ ಬೇರೆ ಹೆರಾಣ ಬೈಲಿ೦ಗೆ ಹೋದಿಪ್ಪ ,ಕೇಟ ಸುದ್ದಿ ಯೆ ತು೦ಬಿದ್ದು,.ಎ೦ತಾ ಹೇಳಿದರೆ, ಅರ್ಧಾ೦ಗಿಗೆ ಜೀವಮಾನ ಇಡಿ ಒ೦ದು ಸೀರೆ ತೆಗೆದು ಕೊಡದ್ದವ೦ಗೆ , ದೊಡ್ಡ ಬೈಲಿನ ಸುರುವಣಾ ಕುರ್ಸಿಲಿ ಕೂಪಲೆ ಯೋಗ್ಯತೆಡಾ?. ಒಪ್ಪಣ್ಣಾ ಎಲ್ಲಾದ್ರೂ ಜ೦ಬ್ರಾಕ್ಕೆ / ಮುನ್ನಾಣ ದಿನಕ್ಕೆ ಹೋದಿಪಗಾ , ಹೀ೦ಗೆ ಹೇಳಿದ್ದರ ಕೇಟನಾ?

  7. ಯಪೋ…ನಿಂಗಳ ತಲೆಯೆ!! . ಇಷ್ಟು ಓದಿದ ಮತ್ತೆ ಎನ್ನ ತಲೆ ಒಂದು ನಮೂನೆ ಆವ್ತಿದ ಇಲ್ಲಿ.

    [ನಮ್ಮ ತಲೆಯ ಲೋಕೋದ್ಧರಕ್ಕೆ ಉಪಯೋಗಿಸಿದರೆ ನಮ್ಮ ದೇಶವ ಎಲ್ಲ ದೇಶದೋರುದೆ ಕೊಂಡಾಡುವ ಹಾಂಗೆ ಅಕ್ಕು.] – ಮೆಚ್ಚಿತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×