Oppanna.com

ಅಮ್ಮಾ…..

ಬರದೋರು :   ಗಣೇಶ ಮಾವ°    on   09/05/2010    4 ಒಪ್ಪಂಗೊ

ಗಣೇಶ ಮಾವ°

ಅಮ್ಮಂದ್ರ ದಿನದ ವಿಶೇಷ ಲೇಖನ…

ನಿನ್ನೆ ಅಮ್ಮ ಫೋನ್ ಮಾಡಿ, “ಯಾವಾಗ ಬತ್ತೆ ಮಗಾ ? ಬಾರದ್ರೆ ರಜ ಪೈಸೆ ಕಳ್ಸಿ ಕೊಡು… ಜಾಗೆ ವಿಷಯಕ್ಕೆ ಅಮ್ಮoಗೆ ಅರ್ಜೆಂಟಾಗಿ ಪೈಸೆ ಬೇಕಿತ್ತು”.
ಅಮ್ಮ ಯಾವತ್ತೂ ಹಾoಗೇ ನೇರವಾಗಿ ಎನ್ನ ಹತ್ರೆ ಪೈಸೆ ಕೇಳಿದ್ದೇ ಇಲ್ಲೆ.. ಆದರೆ, ನಿನ್ನೆ ಇದ್ದಕ್ಕಿದ್ದ ಹಾoಗೇ ಕೇಳಿಯಪ್ಪಗ ಎನಗೆ ಆಶ್ಚರ್ಯ!!
ಮೊದಲೇ ಬೆಂಗ್ಳೂರಿಲಿ ಬಾಡಿಗೆ ಮನೆಯ ಅವಸ್ಥೆ ಹೇಳುಲೆ ಎಡಿಯ..ಬಾಡಿಗೆ ಈಗ ಡಬ್ಬಲು..
ಅಮ್ಮಂಗೆ ಆನು ಪೈಸೆ ಇಲ್ಲೆ ಹೇಳಿ ಹೇಂಗೆ ಹೇಳುವದು?. ಅದಕ್ಕೆ ಕಾರಣ ಇತ್ತು.
ಮೂರು ದಿನoದ ಆಫೀಸಿoಗೆ ರಜೆ – ವೋಟಿನ ಡ್ಯೂಟಿ ಇದ್ದ ಕಾರಣ ಎನ್ನ ಪಾಲಿನ ಕೆಲಸ ಬಾಕಿತ್ತು.
ಈ ಅಂಬಗಂಬಗ ಮಳೆ ಬಂದು ಆರೋಗ್ಯ ಬೇರೆ ಸರಿ ಇಲ್ಲೆ.. ಆಸ್ಪತ್ರೆ, ಡಾಕ್ಟರ್ ಹೇಳಿ ಪೈಸೆ ಮುಗಿಶಿದ್ದಕ್ಕೆ ಲೆಕ್ಖ ಇಲ್ಲೆ.
ಎರಡು ತಿಂಗಳು ಹಿಂದೆ ಎನಗೆ ಚಿಕೂನ್ಗೂನ್ಯ ಜ್ವರ ಬಂದಿಪ್ಪಗ ಅಮ್ಮ ಫೋನು ಮಾಡಿ ಮಾತ್ರೆ ತೆಕ್ಕೊಂಬ ಹೊತ್ತು ನೆಂಪು ಮಾಡಿಗೊಂಡಿತ್ತು..
ಈ ರೀತಿ ಎನಗೆ ಮನೆಂದಲೇ ಅಮ್ಮ ಟ್ರೀಟುಮೆಂಟು ಮಾಡಿಗೊಂಡಿತ್ತು. Damer ugg støvler salg ಇದರಿಂದಾಗಿ ಮಾತ್ರೆ ತೆಕ್ಕೊಳ್ಳೆಕ್ಕಾದರೆ ಮೊದಲೇ ಅರ್ಧ ಜ್ವರ ಕಮ್ಮಿ ಆಯಿಗೊಂಡಿತ್ತು.
ಬಹುಶಃ ಇಂತಹ ಮಾತೃ ವಾತ್ಸಲ್ಯ ಇಂದ್ರಾಣ ಮಕ್ಕೊಗೆ ಅಗತ್ಯ ಹೇಳಿ ಕಾಣ್ತು…

ಅಮ್ಮಂಗೆ ಅಂಟಿಕೂದ ಕುಂಞಿಕೃಷ್ಣ

ಇಂದು ಉದಿಯಪ್ಪಗ ಮನೆಂದ ಅಮ್ಮನ ಪೋನ್ ಬಂತು..
ಸಿಕ್ಕಿದ್ದೇ ಚಾನ್ಸ್ ಹೇಳಿ ,ಇಂದು ಅಮ್ಮನ ಹತ್ರೆ ಎಲ್ಲಾ ಹೇಳೆಕ್ಕು ಹೇಳಿ ಗ್ರೆಶಿದೆ…
ಆದರೆ, ಅಮ್ಮ ಟೆನ್ಷನ್ ಮಾಡುವದು ಬೇಡ ಹೇಳಿ ಹುಷಾರು ಇಲ್ಲೆ ಹೇಳುವ ಶಬ್ದವನ್ನೇ ಅಮ್ಮನ ಹತ್ರೆ ಮಾತಾಡುವಾಗ ಹೇಳಿದ್ದೇ ಇಲ್ಲೆ.
ಹೀಂಗೆ ಎಲ್ಲಾ ವಿಷಯ ಅಮ್ಮಂಗೆ ಅರ್ಥ ಮಾಡ್ಸಿಯಪ್ಪಗ ಒಂಚೂರು ಕೋಪ ಕೂಡಾ ಬಯಿಂದಿಲ್ಲೆ …
ಅಮ್ಮಂಗೆ ಎಂತಕೆ ಎನ್ನ ಹತ್ರೆ ಪೈಸೆ ಕೇಳಿದೆ ಹೇಳಿ ಆಯಿದೋ ಎಂತದೋ?!!!!!
ಆತಮ್ಮ!!!!!ಈ ಸರ್ತಿಯಾಣ ಸಂಬಳ ಬಂದ ಕೂಡ್ಲೇ ಪೈಸೆ ಕಳ್ಸುತ್ತೆ ಹೇಳಿ ಫೋನು ಮಡುಗಿದೆ…
ಆದರೆ ಅಮ್ಮoಗೆ ಪೈಸೆ ಇಲ್ಲೆ ಹೇಳಿದ ವಿಚಾರ..
ಇರುಳಿಡೀ ಎನ್ನ ತಲೆ ತಿಂಬಲೆ ಸುರು ಆತು…. ಅಮ್ಮoಗೆ ಮೊರೆಗೆ ಬಡುದ ಹಾಂಗೆ ಹೇಳಿದೆ ಅಲ್ದಾ!!!
ತುಂಬಾ ಬೇಜಾರು ಆತು ಎನಗೆ…..ಎಂಥ ಮಾಡುವದು…
ಅಮ್ಮಂಗೆ ಉಪಕಾರ ಮಾಡದ್ದ ಎನ್ನ ಬೆಂಗ್ಳೂರು ಕೆಲಸ ಎಂತಕೆ ?? ಹೇಳುವಷ್ಟು ಫೀಲಿಂಗ್ ಆತು..
ಕ್ಷಮೆ ಕೇಳಿದರೂ ತಪ್ಪೇ..ಎಂತಕೆ ಹೇಳಿದರೆ ಆನು ಮಾತಾಡಿದ್ದು ಅಮ್ಮನ ಹತ್ರೆ ಅಲ್ದಾ!!!??
ಬೇರೆ ಆರಿಂಗಾದರೂ ‘ಸಾರಿ’ ಹೇಳಿ ಮೊಬೈಲಿಲಿ ಮೆಸೇಜ್ ಕಳ್ಸಿ ಸುಮ್ಮನೆ ಕೂಪಲೇ ಆವ್ತಿತ್ತು…
ಇರುಳು ಹಾಸಿಗೇಲಿ ಮನುಗಿದವಂಗೆ ಅದೇ ಗುಂಗು….ಇಂದು ಉದಿಯಪ್ಪಗ ತಿಂಡಿ ತಿಮ್ಬಲೆ ಕೂದಪ್ಪಗಲೂ ಅದೇ ಜ್ಞಾನ..
ಅತ್ಲಗಿಂದ ಮೈಸೂರಿಂದ ಎನ್ನ ಅಕ್ಕ ಅಮ್ಮಂಗೆ ಫೋನು ಮಾಡಿ ಅಮ್ಮನ ತಲೆ ತಿಂದೆ ಹೇಳಿ ಎನಗೆ ಫೋನು ಮಾಡಿತ್ತು.
ಅರ್ತ್ಯಡ್ಕ ಮದುವೆಗೆ ಸೀರೆ ತೆಗದ್ದು ಅಮ್ಮಡ… ಅದಕ್ಕೆ ಕಲ್ಕತ್ತವೋ, ಬನಾರಸ್ಸು ಸ್ಯಾರಿಯೂ ಆಯೆಕ್ಕಾತೋ ಎಂತ್ಸೋ?
ಅಮ್ಮ ಒಟ್ಟು ಅಪ್ಸೆಟ್ ..ಅಮ್ಮನ ಅವಸ್ಥೆ ನೋಡಿ ಆನೂ ಅಮ್ಮನ ಹಾಂಗೆ ಆದೆ ಹೇಳಿ ಇನ್ನು ಬೇರೆ ಹೇಳೆಕ್ಕ??
ಆಪೀಸಿಂಗೆ ಬಂದು ಕೆಮಿಗೆ ಐಪಾಡ್ ಹಾಕಿ ಅಶ್ವಥ್ ನ ಭಾವಗೀತೆಗಳ ಕೇಳಿ ಸಮಾಧಾನ ಮಾಡಿಗೊಂಬ ಹೇಳಿ ಆದರೂ… ಮನಸ್ಸು ಸಮಾಧಾನ ಆವ್ತಿಲ್ಲೇ.. ..ಹಾoಗೇ ಇದ್ದೆ.
11 ಗಂಟೆಗೆ ಮೊಬೈಲ್ ರಿಂಗು ಆತು… ಅಮ್ಮನ ಫೋನು. “ಎಲ್ಲಿ ಇದ್ದೆ ಮಗ!!? ಹೇoಗಿದ್ದೆ?ನಿನ್ನೆ ಎಂತಕೆ ಮಗ!!!?? ಬಡಬಡ ಹೇಳಿ ಮಾತಾಡಿದ್ದು..??? ಅದಕ್ಕೆ ತಲೆಬೆಶಿ ಮಾಡಡ ಹೇಳಿ ಹೇಳುಲೆ ಫೋನ್ ಮಾಡಿದ್ದು.. ಆನು ಮಾಷ್ಟ್ರು ಮಾವನ ಹತ್ರೆ ಈ ವಿಷಯ ಹೇಳಿದೆ. ಅಮ್ಬಗಲೇ ಅವು ೨೫,೦೦೦ ದ ಚೆಕ್ಕು ಕೊಟ್ಟವು.. ಅದು ನಾಳೆ ಕ್ಯಾಶು ಅಕ್ಕು.. ನಿನ್ನ ಸಂಬಳ ಬಂದ ಮೇಲೆ ಅದಕ್ಕೆ ವ್ಯವಸ್ಥೆ ಮಾಡುವ ಆತಾ!!”
ಒಂದೇ ಉಸಿರಿoಗೆ ಅಮ್ಮ ಅಷ್ಟು ಹೇಳಿಯಪ್ಪಗ ಅಬ್ಬಾ!!!
ಮನಸ್ಸು ಒಂದೇ ಕ್ಷಣ ಖುಷಿಯ ನಿಟ್ಟುಸಿರು ಬಿಟ್ಟತ್ತು…
ಅಮ್ಮ ಹೇಳುವ ‘ಸತ್ಯ’ವೇ ಹಾoಗೇ ,ಅಲ್ಲದಾ????
ನಾವು ಬೈದರೂ ಎಷ್ಟು ಸರ್ತಿ ವಟವಟ ಹೇಳಿದರೂ ಒಂದರಿ ಅಮ್ಮಂಗೆ ಕೋಪ ಬಂದರೂ ಮತ್ತೆ ಸಮಾಧಾನ ಮಾಡುವದು ಅಮ್ಮನೇ ಅಲ್ದಾ!!! ಅಂತೂ ಎನ್ನ ಜಾಗೆಲಿ ನಿಂದು ಅಮ್ನೇ ಕಾರ್ಬಾರಿನ ಅಮ್ಮ ಮಾಡಿತ್ತು.ಇದೂ ಎನಗೆ ತುಂಬಾ ಬೇಜಾರು ಆತು. ಬಪ್ಪ ವರ್ಷ ಕೆಲಸ ಬಿಟ್ಟು ಹೋಗಿ ಅಪ್ಪನ ಒತ್ತಿನ್ಗೆ ಇದ್ದು ಎನ್ನ ಮೂಲ ವೃತ್ತಿಯ ಮುಂದುವರಿಸುವದು ಒಳ್ಳೇದು ಹೇಳಿ ಕಂಡತ್ತು…
ಮನೆ ಬಿಟ್ಟು ದೂರಲ್ಲಿದ್ದರೆ ..ಈ ಕೆಲಸ, ಈ ಒತ್ತಡ, ಜಂಜಾಟ..ನಮ್ಮ ಮನಸ್ಸಿನ ಎಷ್ಟು ಕೆಡ್ಸಿ ಬಿಡ್ತು ಹೇಳುವದಕ್ಕೆ ಆನೇ ಸಾಕ್ಷಿ….
ಬೆಂಗಳೂರಿoಗೆ ಬಂದು ಎರಡೂವರೆ ವರ್ಷ ಆದರೂ ಅಮ್ಮoಗೆ ಒಂದು ಸೀರೆ ತೆಗದು ಕೊಡ್ಲೆ ಎನಗೆ ಆಯಿದಿಲ್ಲೆ..
ಮತ್ತೆ ಅಮ್ಮನತ್ರ ಹೇಳಿದೆ, “ಅಮ್ಮ , ಈ ಸರ್ತಿ ನಿನಗೆ ಒಂದು ವಾಚು, ಕಾಂಚೀವರಂ ಸೀರೆ ತತ್ತೆ ಆತಾ..” ಹೇಳಿ ಹೇಳಿದೆ.
ಅಷ್ಟೊತ್ತಿಂಗೆ ಒಪ್ಪಣ್ಣನ ಮೊಬೈಲಿಂದ ಎನಗೆ ಎಸ್ಸೆಮ್ಮೆಸ್ಸು ಬಂತು..
ಹ್ಯಾಪೀ ಮದರ್ಸ್ ಡೇ…!!
ಪುನಃ ಅಮ್ಮಂಗೆ ಫೋನು ಮಾಡಿ ವಿಶ್ ಮಾಡಿದೆ.
ಐಪಾಡ್ ಲಿ ಅಶ್ವಥ್ ನ ಪದ್ಯ ಸುರು ಆತು..
” ಅಮ್ಮಾ,,
ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತ್ತಿರುವೆ ನಾನು..
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ…”
ಹೀoಗೆ ಎನ್ನ ಮನಸ್ಸುದೇ ಖುಷಿoದ ಹಾಡುಲೆ ಸುರು ಮಾಡಿತ್ತು . . .

4 thoughts on “ಅಮ್ಮಾ…..

  1. ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತ ನಭವತಿ..
    ಕೆಟ್ಟ ಮಕ್ಕ ಹುಟ್ಟುಗು ಆದರೆ ಕೆಟ್ಟ ಅಬ್ಬೆ ಹುಟ್ಟಿದ್ದಿಲ್ಲೇ ಹೇಳೊದು ನಿತ್ಯಸತ್ಯ.

  2. ಎಂತದೆ ತಪ್ಪು ಮಾಡಿರೂ ಸರಿ…. ಕ್ಷಮಿಸಿ ಸರಿ ಮಾಡಿಗೊಂಡು ಹೋಪದು ಅಮ್ಮನೇ ಅಲ್ದೋ…

  3. ಅಮ್ಮನ ಬಗೆಗೆ ನಮ್ಮ ಗುರುದೊ ಬರದ್ದರ ಓದಿದ್ದೀರೋ?
    ಇಲ್ಲದ್ರೆ ಓದಿ ಇದಾ ಇಲ್ಲಿದ್ದು..
    http://hareraama.in/blog/all-about-mother/
    ನಮ್ಮ ಗಣೇಶಪ್ಪಚ್ಚಿ ಬರೆದ್ದರ ಓದಿಯಪ್ಪಗ ನೆಂಪಾತಿದ.. ಅದನ್ನು ಮತ್ತೊಂದರಿ ಓದಿದೆ.. ನಮ್ಮ 9 ತಿಂಗಳ ಕಾಲ ಸರ್ವಾನುಕೂಲವಾಗಿ ಪೋಷಿಸಿ ಹೆತ್ತು, ಜೀವ ಇಪ್ಪಲ್ಲಿಯೊರೆಂಗೂ ಮಕ್ಕಳ ಏಳ್ಗೆಗೆ ಚಿಂತೆ ಮಾಡ್ತ ಅಮ್ಮಂದಿರ ಬಗೆಗೆ ಎಷ್ಟು ಹೇಳಿರೂ ಕಮ್ಮಿಯೆ.. ಅಮ್ಮನ ಸರಿಯಾಗಿ ನೋಡಿಗೊಂಡರೆ ಅದೇ ಈ ಕಾಲಲ್ಲಿ ಸಾರ್ಥಕ ಬದುಕು ಅಕ್ಕು, ಇಲ್ಲದ್ರೆ ನಮ್ಮ ಜೀವನಕ್ಕೆ ಖಂಡಿತಾ ಬೆಲೆ ಇರಾ.. ಎಂತ ಹೇಳ್ತಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×