Oppanna.com

​ಗೇಸ೦ಡೇ ಟ್ರಬಲ್

ಬರದೋರು :   ಗೋವಿಂದ ಮಾವ, ಬಳ್ಳಮೂಲೆ    on   30/07/2012    12 ಒಪ್ಪಂಗೊ

ಅದೊ೦ದು ದಿನ ಸುದ್ದಿ ಬ೦ತು
ಅ೦ದ್ರಾಣ ಕಾಲ ಆಗಿತ್ತು
ಅದು ಗೇಸು ಬ೦ದ ಹಾ೦ಗೇ ಬ೦ತು
ಅಡಿಗಗೆ ಇನ್ನು  ಗೇಸು ಬತ್ತು !

ಅದೆ೦ತರ ಹಾ೦ಗಿಪ್ಪ ಗೇಸು ?
ಅದು ಹಾ೦ಗಾಡ ಇದು ಹೀ೦ಗಾಡ
ನೋಡೊ ಹೇ೦ಗಾಡ
ಅದು ಬಾರೀ ಲಾಬಾಡ
ಸುರುವಾತು “ತಲೆಕೊ೦ಬು ಮ೦ತ್ರ”
ಅಪ್ಪೋ………….(ಇತ್ತ೦ದಾಗಿ)
ನಮಗೂ ತ೦ದರೆ ಏ೦ತ ತೊ೦ದರೆ ?

ಅದೊ೦ದು ದಿನ ಸುದ್ದಿ ಬ೦ತು
ಅದೂ ಗೇಸು ಬ೦ದ ಹಾ೦ಗೇ ಇತ್ತು
ಗೇಸ೦ಡೆ ಒಡದತ್ತಾಡ..!
ನಾಲ್ಕು ಜೆನ ಸತ್ತೋದವಾಡ..!
ಸಿಕ್ಕಿದ್ದೇ ಚಾನ್ಸು ಆನೂ ಸುರುಮಾಡಿದೆ
ಬುರುಡೇ ಪುರಾಣ

ಆನು ಅ೦ಬಗಳೇ ಹೇಳಿದ್ದಿಲ್ಲೆಯೋ
ಅದು ಹಾ೦ಗಕ್ಕೂ.. ಅದು ಹೀ೦ಗಕ್ಕೂ..
ಈಗ ಹೇ೦ಗಾತೂ..?
ಅಪ್ಪೋ…….(ಅತ್ತ೦ದಾಗಿ)

ನಮಗ೦ತೂ ಬೇಡಪ್ಪಾ..ಬೇಡ
ಆಗದೋ..ಹೇ೦ಗೇ..?
ಅಕ್ಕೂ…..(ಇತ್ತ೦ದಾಗಿ)

ಉಸ್ಸಪ್ಪಾ….ಬಚಾವ್
ರಜ್ಜ ದಿನ ಉರುಳಿತ್ತು
ಒ೦ದು ದಿನ ಅದು ಹೇಳಿತ್ತು
ಇದಾ ಕೇಳುತ್ತೋ..?

ಹೂ೦~~~~~~~
ಮೇಗಾಣ ಕೇಚಪ್ಪಚ್ಹಿಯಲ್ಲಿ ಇದ್ದಾಡ
ಕೆಳಾಣ ಶ೦ಬುಮಾವ೦ಗೂ ಬ೦ತಾಡ
ಈಚ ಮನೆ ಒಪ್ಪಕ್ಕ`ತರುಸಿಯೊ೦ಡಿದಾಡ
ಆಚ ಮನೆ ಒಪ್ಪಣ್ಣ೦ಗೆ ಈಗ ಇಳಿಸಿದ್ದವಾಡ
ಆತಪ್ಪಾ ಆತು….ನಮಗೂ ತಪ್ಪದು ಗೇಸು
ಹಾ೦ಗೆ ಒ೦ದಶ್ಟೂ ಬಿಚ್ಹಿದೆ ಕಾಸು

……………………….ಏಯ್ !

ನಿ೦ಗೋಗೆ ಸ೦ಗತಿ ಗೊ೦ತಿದ್ದೋ
ಈಗ ಎನ್ನಲ್ಲೂ ನಾಲ್ಕ೦ಡೆ ಇದ್ದು ಆತೊ
ಚಾಯಕ್ಕೂ ಗೇಸು..
ವೇನಿ೦ಗೂ ಗೇಸು
ಈಗ೦ತೂ ಗೇಸಿ೦ಗೆ ಟೈಟೀ ಟೈಟು

ಎನಗ೦ತೂ ಈಗ ” ಗೇಸ್ ಟ್ರಬಲು ”

~

ಗೋವಿ೦ದಬಳ್ಳಮೂಲೆ.

12 thoughts on “​ಗೇಸ೦ಡೇ ಟ್ರಬಲ್

  1. ಅಭಿಪ್ರಾಯ ಬರದು ಪ್ರೋತ್ಸಾಹ ಕೊಟ್ಟ ಶರ್ಮಪ್ಪಚ್ಹಿ ಅವಕ್ಕೆ ಚಿರ ರಿಣಿ.

  2. ಗೋವಿಂದಣ್ಣಂಗೆ ಸ್ವಾಗತ.
    ಪೇಟೆ ಆಗಲೀ ಹಳ್ಳಿ ಆಗಲೀ ಎಲ್ಲರಿಂಗೂ ಅಡಿಗೆಗೆ “ಗೇಸ್” ಸುಲಭ ಮತ್ತೆ ಕಡಿಮೆ ಖರ್ಚಿಲ್ಲಿ ಅಪ್ಪದು ಹೇಳಿ ಗೊಂತಾಯಿದು. ಪೇಟೆಲಿ ಅಂತೂ ಗೇಸ್ ಇಲ್ಲದ್ದ ದಿನವ ಗ್ರೆಶಿಗೊಂಬಲೆ ಎಡಿಯದ್ದ ಪರಿಸ್ಥಿತಿ.
    ಕವನ ಲಾಯಿಕ ಆಯಿದು.
    ಬೈಲಿಲ್ಲಿ ನಿಂಗಳ ಧ್ವನಿಯ ನಿರೀಕ್ಷೆಲಿ ಇದ್ದೆಯೊ°

  3. ರಘುವಣ್ಣಾ.. ಕೊತ್ತಳಿಂಕೆ ಮಡಲು ತಂದಾತು,
    ಆದರೆ ಟ್ರಬಲು ಹೆಚ್ಚಾತು..
    ಕಾರಣ ಅದು ಚೆಂಡಿ ಆತು..
    ಧನ್ಯವಾದಂಗಳು

  4. ‘ ಗೇ’ ಶುದ್ದಿ ಹೋಗಿ ನಿಜಕ್ಕೂ ಅ೦ಡೆ ತ೦ದ ಮೇಲೆ ತಾಪತ್ರಯ ಶುರುವಾತೊ?

    ಗೇಸು ಬ೦ದ ಮೇಳೆ ಶುರುವಾತು ಗೇಸ್ ಟ್ರಬಲು
    ಮತ್ತೆ ತೋಟಕ್ಕೆ ಓಡೆಕ್ಕು ತಪ್ಪಲೆ ಕೊತ್ತಳಿ೦ಕೆ ಮಡಲು.

    ಪದ್ಯ ಲಾಯ್ಕ ಆಯಿದು ಅಣ್ಣಾ.

  5. ಅದ! ಗೋವಿಂದಣ್ಣ ಬೈಲಿಂಗೆ ಇಳುದ್ದದು ,ಇನ್ನು ಹೊಡಿ ಹಾರುಗೋ ಹೇಂಗೆ?

    ನಿಂಗಳ ಗೇಸ್ ಟ್ರಬ್ಲು ಓದಿಯಪ್ಪಗ ನೆಂಪಾತದ! ಇಂದು ಮನೆಲಿ ದೀಗುಜ್ಜೆ ಮೇಲಾರ ಲಾಯಕಾಯಿದು ಮಿನಿಯ

    ಕವನವು ಲಾಯಕಾಯಿದು.

    1. ಕವನ ಓದಿ ದೀಗುಜ್ಜೆ ಮೆಲಾರ ನೆಂಪು ಮಾಡಿದ ಬಾಲಣ್ಣಂಗೆ ನಮನಂಗಳು ….ದೀಗುಜ್ಜೆ ತಂದು ಮಡಗಿದ್ದೆ ಪೋಡಿ ಮಾಡಲೇ..!

  6. ಜಯಶ್ರೀ ಅತ್ತಿಗೆ ….ಅನಂತ ಧನ್ಯವಾದಂಗಳು

  7. ಹರೇ ರಾಮ… ಪದ್ಯ ಒಳ್ಳೆದಾಯಿದು.

  8. ಎಲ್ ಪಿ ಜಿ ವಾಯುವಿನ ತೊಂದರೆಯ ಬಗೆಲಿ ಇಪ್ಪ ಕವನ ಬಳ್ಳಮೂಲೆ ಅಣ್ಣನ “ಕೀ ಬೋರ್ಡಿ”ಂದ ಚೆಂದಕೆ ಹೆರ ಹೆರಟಿದು. ಎಲ್ಲೋರ ಅನುಭವದ ಮಾತು ಅದು. ಲಾಯಕಾಯಿದು. ನಮ್ಮ ಬೈಲಿನ ಸಮಸ್ಯಾ ಪೂರಣಲ್ಲಿಯುದೆ ಗೋವಿಂದಣ್ಣ ಸಕ್ರಿಯವಾಗಿ ಭಾಗವಹಿಸಿ ನಮ್ಮೆಲ್ಲೋರನ್ನು ರಂಜಿಸಲಿ ಹೇಳುವ ಪ್ರಾರ್ಥನೆ.

    1. ನಿಂಗಳ ಅಭಿಪ್ರಾಯಕ್ಕೆ ಸಂತೋಷ..ಸ್ವಾಗತ

  9. ಗೇಸು ಇದ್ದರೂ ಟ್ರಬಲ್ , ಗೇಸು ಸಮಯಕ್ಕೆ ಬಾರದ್ರೂ ಟ್ರಬಲ್. ವ್ಯತ್ಸಾಸವಾಗಿ ಮೂಡಿಬಂದ ಬಳ್ಳಮೂಲೆ ಭಾವನ ಪದ ಲಾಯಕ ಆಯ್ದು ಎಂಬುದೀಗ – ‘ಚೆನ್ನೈವಾಣಿ’.

    1. ಕೃತಜ್ಞತೆಗಳು …… ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×