- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ನಿನ್ನೆ ಏವದೋ ಟಿವಿ ಚಾನೆಲಿಲಿ ಒಂದು ಪ್ರಶ್ನೆ ಬಂತು-ಸಚಿನ್ ಮತ್ತೆ ಲತಾ ಮಂಗೇಶ್ಕರ್ ಅವರಲ್ಲಿ ಆರು ಶ್ರೇಷ್ಟ ಹೇಳಿ ಮತ ಹಾಕೆಕು ಹೇಳಿ.
ಅದರ ನೋಡಿ ಎನಗೆ ನಗೆ ಬಂತು.
ಬಲಿಪ ಬಲವೊ ಅಗರಿ ಬಲವೊ ಹೇಳಿ ಮತ್ತೆ ಶಂಕರನಾರಾಯಣ ಸಾಮಗ ಬಲವೊ ,ಶೇಣಿ ಬಲವೊ ಹೇಳಿ ಎನ್ನ ಹಿರಿಯರು ಚರ್ಚೆ ಮಾಡುದು ಆನು ಸಣ್ಣಾದಿಪ್ಪಗಳೇ ಕೇಳಿದ್ದೆ.ಅವೆಲ್ಲಾ ಆದರೆ ಒಂದೇ ರಂಗಲ್ಲಿ [ಒಂದು ಜೋಡಿ ಹಿಮ್ಮೇಳಲ್ಲಿ,ಮತ್ತೊಂದು ಜೋಡಿ ಮುಮ್ಮೇಳಲ್ಲಿ] ಸಾಧನೆ ಮಾಡಿದವು.ಅವರಲ್ಲೂ ಒಬ್ಬ ಭಾಗವತನ ಒಟ್ಟಿಂಗೆ ಮತ್ತೊಬ್ಬ ಅರ್ಥಧಾರಿಯ ಹೋಲಿಸಿ ಆಯ್ಕೆ ಮಾಡುದು ಕಷ್ಟ.ಅಮಿತಾಭ್ ಬಚ್ಚನ್ ಮತ್ತೆ ಎಮ್.ವಿಶ್ವೇಶ್ವರಯ್ಯ-ಇಬ್ಬರಲ್ಲಿ ಆರು ಮೇಲೆ ಹೇಳಿ ಕೇಳಿರೆ ಎಂತ ಹೇಳುದು?ಸತ್ಯಜಿತ್ ರೇ ಮತ್ತೆ ಜಗದೀಶ್ ಚಂದ್ರ ಬೋಸ್ ಇವರಲ್ಲಿ ಆರು ಮಿಗಿಲು ಹೇಳಿ ಹೇಳುದು ಹೇಂಗೆ? ಈ ವರೆಗಿನ ರಾಷ್ಟ್ರಪತಿಗಳಲ್ಲಿ ಆರು ಮಿಗಿಲು ಹೇಳಿ ಕೇಳಿರೆ ಹೇಳುಲೆ ಎಡಿಗು!
ಹೀಂಗಿಪ್ಪ ಜನಮತಗಣನೆಗೆ ಅರ್ಥವೂ ಇಲ್ಲೆ,ಔಚಿತ್ಯವೂ ಇಲ್ಲೆ.ಎಂತ ಹೇಳುತ್ತಿ?
ಹೀಂಗಿಪ್ಪ ತುಲನೆ ಖಂಡಿತಾ ತಪ್ಪು.
ಸರಿಯಾಗಿ ಹೇಳಿದ್ದಿ ಅಣ್ಣ..
ಗೋಪಾಲಣ್ಣ,
ಹೀಗೂ ಉ೦ಟೆ? ಹೇಳೆಕ್ಕಷ್ಟೆ. ನಿಜಕ್ಕೂ ಅಸ೦ಬದ್ಧವೇ ಅಲ್ಲದೊ?ಎರಡು ಬೇರೆ ಬೇರೆ ಕ್ಷೇತ್ರಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ತುಲನೆ ಮಾಡೊದಕ್ಕೆ ಅರ್ಥವೇ ಇಲ್ಲೆ.
ಇನ್ನು,ಯಕ್ಷಗಾನಲ್ಲಿ ಎಲ್ಲವೂ ಅವರವರ ಶೈಲಿ ಆದ ಕಾರಣ ಅಸ್ವಾದನೆಯೇ ಮುಖ್ಯ ಹೊರತು ತುಲನೆ ಅಲ್ಲನ್ನೇ.
ಆ ಟಿ.ವಿ.ಯವರ ಒಳಗುಟ್ತು ಬೇರೆಯೇ ಇಕ್ಕು.ವೋಟು ಹಾಕಲೆ ಎಸ್.ಎಮ್.ಎಸ್.ಕಳುಗುಲೆ ಹೇಳುಗು.ಅದರ ರೇಟು ಸುಮಾರು ಹೆಚ್ಚಿಕ್ಕು,ಸಿಕ್ಕಿದ್ದರ್ಲಿ ಲಾಭಾ೦ಶ ಅವಕ್ಕೂ ದಕ್ಕುಗು.ಇತ್ಲಾಗಿ ವೋಟು ಹಾಕಿದವ೦ಗೆ ಒ೦ದು ಟೊಪ್ಪಿಯೂ ಮೂರು ನಾಮವೂ !
ಮುಳಿಯದಣ್ಣ ಹೇಳಿದ್ದು ಸರಿಯಾಗಿ ಇದ್ದು. ಎಲ್ಲದರ ಹಿಂದೆ ಪ್ರಧಾನ ಉದ್ದೇಶ ಹೀಂಗೆ ಎಂತೋ ಇರ್ತು… ಅವರ ವ್ಯಾಪಾರಲ್ಲಿ ನಾವು ಅನಿವಾರ್ಯವಾಗಿ ಬಲಿಪಶುಗೋ… ನಮ್ಮ ಸಮಯವೂ ಹಾಳು,ಅಭಿಮಾನಿಗಳ ಪೈಸೆಯೂ ಹಾಳು…
ನಿಜವೇ. ಆಯಾಕ್ಷೇತ್ರಲ್ಲಿ ಅವ್ವವ್ವು ಶ್ರೇಷ್ಠ.