Oppanna.com

ಹಲಸಿನಕಾಯಿ ಬೇಳೆ ಹೋಳಿಗೆ

ಬರದೋರು :   ವೇಣಿಯಕ್ಕ°    on   04/09/2012    12 ಒಪ್ಪಂಗೊ

ವೇಣಿಯಕ್ಕ°

ಹಲಸಿನಕಾಯಿ ಬೇಳೆ ಹೋಳಿಗೆ

ಬೇಕಪ್ಪ ಸಾಮಾನುಗೊ:

  • 1.5 ಲೀಟರ್ ಪಾತ್ರ ತುಂಬ ಹಲಸಿನಕಾಯಿ ಬೇಳೆ ಅಥವಾ 13 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ
  • 5 ಕಪ್(ಕುಡ್ತೆ) ಕಾಯಿ ತುರಿ
  • 5 ಕಪ್(ಕುಡ್ತೆ) ಬೆಲ್ಲ
  • 4.5 ಕಪ್(ಕುಡ್ತೆ) ಬೆಣ್ತಕ್ಕಿ
  • ರುಚಿಗೆ ತಕ್ಕಸ್ಟು ಉಪ್ಪು
  • ತುಪ್ಪ

ಮಾಡುವ ಕ್ರಮ:

ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ.

ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೆಳಿ ಮಾಡಿ.

ಬೆಳಿ ಮಾಡಿದ ಬೇಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ತುಂಡು ಮಾಡಿ.

ಒಂದು ಬಾಣಲೆ/ದಪ್ಪ ತಳದ ಪಾತ್ರಲ್ಲಿ ಸಾಧಾರಣ 14 ಕುಡ್ತೆ ನೀರು ಹಾಕಿ ಕೊದುಶಿ. ಕೊರದ ಬೇಳೆಯ ಹಾಕಿ ಮುಚ್ಚಲು ಮುಚ್ಚಿ ಬೇಶಿ.

ಬೇಳೆ ಬೆಂದ ಮೇಲೆ ಹೆಚ್ಚಿಪ್ಪ ನೀರಿನ ಅರುಶಿ, ಬೆಲ್ಲ, ಕಾಯಿ ಸುಳಿ, 1/4 ಚಮ್ಚೆ ಉಪ್ಪು ಹಾಕಿ ತೊಳಸಿ.

ಇದರ ಹದ ಕಿಚ್ಚಿಲ್ಲಿ ಸಾಧಾರಣ 15-20 ನಿಮಿಷ ಮಡುಗಿ. ಕಿಚ್ಚು ನಂದ್ಸಿ, ತಣಿವನ್ನಾರ ಕರೆಲಿ ಮಡುಗಿ.

ಇದರ ಮಿಕ್ಸಿ/ಗ್ರೈಂಡರ್ ಲ್ಲಿ ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ.

ಅಕ್ಕಿಯ 3-4 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ, ತೊಳದು, ಬೇಕಾದಸ್ಟು ನೀರು, ಉಪ್ಪು ಹಾಕಿ ನೊಂಪಿಂಗೆ ಗಟ್ಟಿಗೆ ಕಡೆರಿ. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಕಡದ ಬೇಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನಿಂಬೆ ಗಾತ್ರದ ಉಂಡೆ ಮಾಡಿ.

ಒಂದು ಪ್ಲಾಸ್ಟೀಕು ಶೀಟ್ಂಗೆ ರೆಜ್ಜ ಎಣ್ಣೆ ಪಸೆ ಮಾಡಿ, ಈ ಉಂಡೆಯ ಅದರಲ್ಲಿ ಮಡುಗಿ.
ಇನ್ನೊಂದು ಸಣ್ಣ ಪ್ಲಾಸ್ಟೀಕು ಶೀಟ್ ತೆಕ್ಕೊಂಡು ಅದಕ್ಕು ರೆಜ್ಜ ಎಣ್ಣೆ ಪಸೆ ಮಾಡಿ, ಉಂಡೆಯ ಮೇಗೆ ಮಡುಗಿ ಒಂದು ಗಿಣ್ಣಾಲಿಲ್ಲಿ/ಹಪ್ಪಳದ ಮಣೆಲಿ ಒತ್ತಿ.

ಕಾವಲಿಗೆಯ ಬೆಶಿ ಅಪ್ಪಲೆ ಮಡುಗಿ, ಈ ಒತ್ತಿದ ಹೋಳಿಗೆ ಹಿಟ್ಟಿನ ತೆಗದು, ಅದ್ದಿ ಹಿಟ್ಟಿಲ್ಲಿ ಮುಳುಗ್ಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಾವಲಿಗೆಗೆ ಹಾಕಿ, ಒಂದು ಸಕ್ಕಣ ತುಪ್ಪ ಹಾಕಿ ಮುಚ್ಚಿ ಬೇಶಿ.

ತಿರುಗ್ಸಿ ಹಾಕಿ ಪುನಃ 1-2 ನಿಮಿಷ ಹದ ಕಿಚ್ಚಿಲ್ಲಿ ಬೇಶಿ.

ಬೆಶಿ ಬೆಶಿ ತುಪ್ಪದ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 25 ಹೋಳಿಗೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

12 thoughts on “ಹಲಸಿನಕಾಯಿ ಬೇಳೆ ಹೋಳಿಗೆ

  1. ಇದೆ ಹೋಳಿಗೇನ ಮೈದಾ ಹಿಟ್ತು ಚಿರೋಟಿ ರವೆಯಲ್ಲಿ ಕಣಿಕೆ ಮಾದ್ಕನ್ದು ಅದರೊಳಗೆ ಉಂಡೆ ಇಟ್ತು ಬೇರೆ ಎಲ್ಲ ಹೋಳಿಗೆ ಮಾಡತವಲ ಆ ತರ ಮಾಡಕ್ಕೆ ಬತ್ತಾ?

  2. ಈಗಷ್ಟೇ ಉ೦ಡಾತು, ಆದರೂ ಈ ಹೋಳಿಗೆಯ ನೋಡದ್ದೇ ಮತ್ತೆ ಹಶ್ವಾಗ್ತಾ ಇದ್ದು. ಎಷ್ಟು ಸಿಕ್ಕುಗು? 😉

  3. ಹ ಹ ಹ ಅಕ್ಕಿ ಅಲ್ಲದೋ ಬೊಳು೦ಬು ಮಾವಾ, ಯುರೇಕಾ, ಯುರೇಕಾ!

  4. ನಾಲ್ಕನೇ ಬಗೆ (ಸಾಮಾನುಗಳ ಪಟ್ತಿಲಿ) ಎ೦ತ ಹೇಳಿ ಗೊ೦ತಾತಿಲ್ಲೆ ಅಕ್ಕೋ!

    1. ಅದರ ಕಂಡು ಹಿಡಿಯಲೆ ಸುಲಾಬ ಇದ್ದು. ಭಾಳ ಸುಲಭದ ಸಮಸ್ಯೆ ಅದು. ಬಾಕಿ ಆದ್ದು ಎಂತರ ? ರಜಾ ಅಂದಾಜು ಮಾಡು ನೋಡುವೊ ? ಅದೇ ಅದು.

  5. ಅಪ್ಪಪ್ಪು. ಲಾಯಕ ಆವ್ತು. ಬೆಶಿ ಬೆಶಿಗೆ ಎನಗೆ ನಾಕು ಕೊಟ್ಟಿಕ್ಕಿ.

    1. ನಾಕು ಒಟ್ತಿ೦ಗೇ ತಿ೦ದರೆ ಒಟ್ತಿ೦ಗೆ ಇಪ್ಪವಕ್ಕೆ ಕಷ್ತ ಅಕ್ಕು ಚೆನ್ನಾಯಿ ಬಾವ!

  6. ಹಲಸಿನ ಬೇಳೆಯ ಹೋಳಿಗೆ ತಯಾರಿ ಬಗ್ಗೆ ವಿಶೇಷ ಮಾಹಿತಿ ಕೊಟ್ಟ ವೇಣಿಯಕ್ಕಂಗೆ ಧನ್ಯವಾದಂಗೊ. ಅಪರೂಪಕ್ಕೆ ಆದ ಕಾರಣ ರುಚಿ ರುಚಿ ಆವ್ತು ಈ ಹೋಳಿಗೆ. ಎನಗೂ ಬೈಲಿನ ಒಪ್ಪಣ್ಣಂಗೂ ಪರಿಚಯ ಆದ್ದದೇ ಬೇಳೆ ಹೋಳಿಗೆ ವಿಚಾರದ ಒಟ್ಟಿಂಗೆ ಹೇಳುವದು ಸಂತೋಷ ಕೊಡ್ತು.

    1. ಹಲಸಿನಕಾಯಿ ಬೇಳೆ ಹೇಳಿ ,ಮೇಲೆ ಬರದ್ದಲ್ಲದೋ?

    2. ಪೂರ್ತಿ ಓದದ್ದೆ, ಸರಿಯಾಗಿ ಅರ್ಥ ಮಾಡಿಗೊಳ್ಳದ್ದೆ ಕಮೆಂಟು ಬರವದೋ, ಈ ಶ್ಯಾಮ ಭಾವ..!!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×