Oppanna.com

ಸೌತೆಕಾಯಿ ಕಾನಕಲ್ಯಟೆ ಮೇಲಾರ

ಬರದೋರು :   ವೇಣಿಯಕ್ಕ°    on   28/08/2012    9 ಒಪ್ಪಂಗೊ

ವೇಣಿಯಕ್ಕ°

ಸೌತೆಕಾಯಿ ಕಾನಕಲ್ಯಟೆ ಮೇಲಾರ

ಬೇಕಪ್ಪ ಸಾಮಾನುಗೊ:

  • 1 ಸಾಧಾರಣ ಗಾತ್ರದ ಬಣ್ಣದ ಸೌತೆಕಾಯಿ
  • 30-40 ಕಾನಕಲ್ಯಟೆ
  • 2 ಕಪ್(ಕುಡ್ತೆ) ಕಾಯಿತುರಿ
  • 2  ಹಸಿಮೆಣಸು
  • 3/4 – 1 ಕಪ್(ಕುಡ್ತೆ) ಮಜ್ಜಿಗೆ
  • ಚಿಟಿಕೆ ಅರುಶಿನ ಹೊಡಿ (ಬೇಕಾದರೆ ಮಾತ್ರ)
  • 1/4 ಚಮ್ಚೆ ಮೆಣಸಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕಾನಕಲ್ಯಟೆಯ ತೊಳದು ನಡುಕಂದ ಕೆಳಾಣ  ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಒಂದು ಪಾತ್ರಲ್ಲಿ 4 ಕುಡ್ತೆ ನೀರು, ರೆಜ್ಜ ಉಪ್ಪು, ಹುಳಿ ನೀರು ಹಾಕಿ ಕೊದಿವಲೆ ಮಡುಗಿ. ಅದಕ್ಕೆ ಕೊರದ ಕಾನಕಲ್ಯಟೆ ಭಾಗವ ಹಾಕಿ ಕೊದುಶಿ. 3-4 ಸಣ್ಣ/ಹದ ಕಿಚ್ಚಿಲ್ಲಿ ಮಡುಗಿ. ನೀರಿನ ಅರುಶಿ, ಬಿತ್ತಿನ ತೆಗದು ಕರೆಲಿ ಮಡುಗಿ.

ಸೌತೆಕಾಯಿಯ ಹೆರಾಣ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡೆಕ್ಕು.

ಒಂದು ಪಾತ್ರಲ್ಲಿ, ಕೊರದ ಸೌತೆಕಾಯಿ, ಅರುಶಿನ ಹೊಡಿ, ಮೆಣಸಿನ ಹೊಡಿ,  ಉಪ್ಪು, ರೆಜ್ಜ ನೀರು ಹಾಕಿ, ಮುಚ್ಚಲು ಮುಚ್ಚಿ ಲಾಯಿಕಲಿ ಬೇಶಿ.
ಅದಕ್ಕೆ ಬಿತ್ತು ತೆಗದ ಕಾನಕಲ್ಯಟೆ ಹಾಕಿ ಕೊದುಶಿ. 3-4 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಂದ ಭಾಗ ರೆಜ್ಜ ತಣುದ ಮೇಲೆ, ಅದಕ್ಕೆ ಮಜ್ಜಿಗೆ ಹಾಕಿ ಒಂದು 15 ನಿಮಿಷ ಮಡುಗಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ. ಅದು ರೆಜ್ಜ ನೊಂಪಪ್ಪಗ ಖಾರಕ್ಕೆ ಬೇಕಪ್ಪಸ್ಟು ಹಸಿಮೆಣಸು ಹಾಕಿ, ಕಾಯಿಯ ನೊಂಪಿಂಗೆ ಕಡೆರಿ.
ಇದರ ಬೇಶಿದ ಬಾಗಕ್ಕೆ ಹಾಕಿ, ತೊಳಸಿ, ಕೊದುಶೆಕ್ಕು.(ಉಪ್ಪು, ನೀರು, ಮಜ್ಜಿಗೆ ಬೇಕಾದರೆ ಹಾಕಿ.)

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ, ಒಗ್ಗರಣೆಯ ಮೇಲಾರಕ್ಕೆ ಹಾಕಿ.
ಇದು ಅಶನ, ದೋಸೆ, ಕೊಟ್ಟಿಗೆ, ಉಂಡೆ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

9 thoughts on “ಸೌತೆಕಾಯಿ ಕಾನಕಲ್ಯಟೆ ಮೇಲಾರ

  1. ಕಾನ ಕಲ್ಲಟೆ ಮೇಲಾರ -[ಕಾನ ಕಲ್ಯಟೆ] ನಮ್ಮ ಹವ್ಯಕರ ಒಂದು ಅಪೂರ್ವ ಅಡಿಗೆಯೇ ಸರಿ. ಅದಕ್ಕೆ ತೆಂಗಿನಕಾಯಿ ಎಷ್ಟು ನುಣ್ಣಂಗೆ , ಎಷ್ಟು ಮಂದಕ್ಕೆ ಕಡೆಯೆಕ್ಕು ಹೇಳಿರೆ,ಅದರ ಬಿತ್ತು ತೆಗೆದು ಆದ ಕಣ್ಣಿಲಿ ಆ ಅರಪ್ಪು ಭರ್ತಿ ಆಯೆಕ್ಕಡ![ಹಿರಿಯರು ಹೇಳಿದ್ದು].

  2. ಮೇಲಾರಕ್ಕೆ ಎ೦ತಕೆ ಒಗ್ಗರಣೆಲಿ ಬೇನು ಸೊಪ್ಪು ಹಾಕುತ್ತವಿಲ್ಲೆ!
    ಮತ್ತೆ ಕಾನ ಕಲ್ಲಟೆ ನೆಟ್ಟು ಬೆಳೆಶುಲೆ ಎಡಿಗೊ?

    1. ಮೊದಲಿಂದಲೂ ನಮ್ಮವರಲ್ಲಿ ಮೇಲಾರಕ್ಕೆ ಬೇನ್ಸೊಪ್ಪು ಹಾಕಿಗೊಂಡಿತ್ತವಿಲ್ಲೆ(ಎಂತಕೆ ಹೇಳಿ ಗೊಂತಿಲ್ಲೆ). ಹೀಂಗಿಪ್ಪ ಅಡಿಗೆಗಳ ನಮ್ಮ ಹೆರಿಯೋರಿಂದ ಕಲ್ತ ಕಾರಣ ಮತ್ತು ಹಾಂಗೆ ಉಂಡು ಅಭ್ಯಾಸ ಆದ ಕಾರಣ ಅದೇ ರೀತಿ ಮಾಡುದು ಮುಂದುವರುದ್ದು.
      ಮೇಲಾರಕ್ಕೆ ಬೇನ್ಸೊಪ್ಪು ಹಾಕುಲಾಗ ಹೇಳಿ ಎಂತ Rules ಇಲ್ಲೆ. ಅವರವರ ಬಾಯಿ ರುಚಿಗೆ ತಕ್ಕ ಹಾಂಗೆ ಪದಾರ್ಥ ಅಥವಾ ಒಗ್ಗರಣೆಯ ಸಾಮನುಗಳಲ್ಲಿ ವ್ಯತ್ಯಾಸ ಮಾಡುಲೆ ಅಕ್ಕು.

      ಕಾನಕಲ್ಯಟೆಯ ನೆಟ್ಟು ಬೆಳಶುಲೆ ಆವುತ್ತು. ಮನೆ ಹತ್ತರೆ ನೆಟ್ಟು, ಮಾಡ ಕರೆಂಗೆ ಹಬ್ಬುಸಿದರೆ ತೋಟಲ್ಲಿ ಸಿಕ್ಕುದರಿಂದ ಹೆಚ್ಚು ಫಸಲು ಸಿಕ್ಕುತ್ತು. ರೆಜ್ಜ ನೀರು, ಗೊಬ್ಬರ ಹಾಕಿಗೊಂಡಿದ್ದರೆ ಸಾಧಾರಣ ವರ್ಷ ಇಡೀ ಆವುತ್ತು.

  3. ವೇಣಿಯಕ್ಕಾ ಧನ್ಯವಾದ. ಈ ಸಲ ಊರಿಗೆ ಹೋದಾಗ ಅಮ್ಮ೦ಗೆ ಈ ಶುದ್ದಿಯ ತೋರಿಸ್ತೆ..:)

  4. ವಿವರ ಲಾಯಕ್ಕಾತು. ಕೊಯ್ಯುವುಲೆ ಎತ್ತರಕ್ಕೆ ಹೋದ ಬಳಿ೦ದ ರಜ ತ್ರಾಸ ಆದರೂ ,ಅದರ ನೋಡುವುದೆ ಕುಶಿ. ಚಪ್ಪರ ರೀತಿ ಬೆಳಿಸಿದರೆ ಬಿಸಿಲು ರಜ ಕಮ್ಮಿ ಆಗಿ ಬೆಳೆ ಕಮ್ಮಿ ಆವುತ್ತು. ಎತ್ತರಕ್ಕೆ ಹೋಪಲೆ ಬಿಟ್ತರೆ,ಕೊಯ್ಯುವಗ ಗಿಡಕ್ಕೆ ಪೆಟ್ಟಾವುತ್ತು.ಬೆಳೆ ಬೇಗ ಹಾಳವುತ್ತಿಲ್ಲೆ ಎ೦ಬುದು ಇದರ ಪ್ಲಸ್. ದೊಡ್ದಕ್ಕೆ ಬೆಳೆದಾಗ,ಒ೦ದರಿ೦ದಲೆ ಸೇರು ಲೆಕ್ಕಲ್ಲಿ ಕೊಯ್ಯುವಲಕ್ಕು.

  5. ಮೇಲಾರ ಬಾರಿ ಲಾಯಕ ಆಯ್ದು, ನಿ೦ಗೊ ಬರದ ಎಲ್ಲ ಲೇಖನ೦ಗೊ ಪುಸ್ತಕದ ರೂಪಲ್ಲಿ ಬಕ್ಕು ಹೇಳುವ ನಿರೀಕ್ಶೆ. ಸಾಧ್ಯ ಆದರೆ ಹವ್ಯಕರ ಕ್ರಮಲ್ಲಿ ಕುದನೆ ಗೊಜ್ಜಿ ಮಾಡುವ ಬಗ್ಗೆ ಒನ್ದು ಒಪ್ಪ ಬ೦ದಿದ್ರೆ ಒಳ್ಲೆದಿತ್ತು….ಧನ್ಯವಾದ೦ಗೊ

  6. ಕಾನಕಲ್ಲಟೆ ಕಾಯಿ ಮೇಲಾರ ಪಷ್ಟು ಕ್ಲಾಸಾವ್ತು, ಬಿತ್ತು ಕ್ಲೀನಾಗಿ ತೆಗೆಯದ್ರೆ ತೊರುಸುಗು ಹೇಳಿ ನೆ೦ಪು ಮಡುಗಿಯೋಳೆಕ್ಕು..
    ಧ್ನಯವಾದ೦ಗೊ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×