Oppanna.com

ಮರವಲೆಡಿಗೋ ಮಗನೆ – ಭಾಮಿನಿಲಿ

ಬರದೋರು :   ಮುಳಿಯ ಭಾವ    on   06/10/2012    11 ಒಪ್ಪಂಗೊ

ಸೋಣೆ ತಿ೦ಗಳ ಹನಿ ಮಳೆಗೆ ಇ
ಟ್ಟೇಣಿ ಮೆಟ್ಲಿನ ಕರೆಯ ಚಿಟ್ಟೆಲಿ
ಮಾಣಿ ಉದೆಗಾಲಕ್ಕೆ ಆಕಳ್ಸುತ್ತ ಮೈಮುರುದು।
ಚಾಣೆ ಮ೦ಡೆಯ ಅಜ್ಜ° ನಾಯಿಯ
ಗೋಣಿ ಕುಡುಗೊಗ ಓಡಿ ತೊಟ್ಲಿನ
ಕೋಣೆಯೊಳ ಹೊಕ್ಕಪ್ಪಗಳೆ ನೆ೦ಪಾಗಿ ಬಾಯೊಡದ°

ಇ೦ದು ತಾರೀಕೆಷ್ಟು ಭೂಮಿಗೆ
ಬ೦ದ ದಿನವಪ್ಪನ್ನೆ ಬೆಶಿ ಬೆಶಿ
ಮಿ೦ದು ದೇವರ ನೆನದು ಹೆರಿಯರ ಕಾಲು ಹಿಡಿಯೇಕು।
ಚೆ೦ದಕಾಯ್ತವ ಮಾಡಿ ಬಾಗಿಲ
ಸ೦ದಿಲಿಯೆ ಚೆ೦ಡ್ಯರ್ಕು ನೇಲುಸಿ
ಗ೦ಧ ಬೊಟ್ಟಿನ ಎಳದು ಅಟ್ಟು೦ಬೊಳದ ಹೊಡೆ ನೆಡದಾ°

ಅಡಿಗೆ ಕೋಣೆಯ ಬಾಗಿಲಿನ ಬುಡ
ಗಡಗಡನೆ ಕೇಳಿತ್ತು ಶಬ್ದವು
ಕಡವ ಕಲ್ಲಿನ ಕ೦ಜಿ ತಿರುಗುಸುವಬ್ಬೆಯಾ ಕ೦ಡು
ತಡವು ಮಾಡೊದು ಬೇಡ ಮೋರೆಲಿ
ಸೆಡವು ತೋರುಸುಲಾಗ ಬೇಗನೆ
ಹಿಡುದ° ಕಾಲಿನ ಮಾಣಿ ಕೊಶಿಯಾ ತಡವಲೆಡಿಯದ್ದೆ॥

ಹತ್ತು ವರುಷದ ಮದಲು ಹೊಟ್ಟೆಲಿ
ಹೊತ್ತು ಮೆಟ್ಟಿರು ಸಹಿಸಿ ಬೇನೆಲಿ
ಹೆತ್ತು ಮುದ್ದಿಲಿ ಸಾ೦ಕಿ ಬೆಳೆಶಿದ ನಿನಗೆ ನೆ೦ಪಿದ್ದೊ?।
ಉತ್ತರವ ಕೊಡು ನಿನ್ನ ಹೆಗಲಿನ
ಎತ್ತರಕೆ ಬೆಳದಾತು ಸೊ೦ಟ
ಲ್ಲೆತ್ತಿ ಚೇಚ್ಚಿದ ಎನ್ನ ಹುಟ್ಟಿನ ದಿನವು ಬ೦ತಬ್ಬೇ॥

ಕೊರಳು ತು೦ಬಿತ್ತಾಗ ಅಬ್ಬೆಯ
ಕರುಳು ಮಿಡಿದತ್ತೆರಡು ಕಣ್ಣಿಲಿ
ಹರಿವ ನೀರಿನ ಸೆರಗ ಕೊಡಿಲುದ್ದಿಕ್ಕಿ ಹೇಳಿತ್ತು।
ಇರುಳು ಹುಟ್ಟಿದ ನೀನು ದೊ೦ಡೆಯ
ಬಿರುದು ಕೂಗೊಗ ಮೈಯ ಬೇನೆಯ
ಮರದು ನೆಗೆ ಮಾಡಿದ್ದು ನೆ೦ಪಿದ್ದೆನಗೆ ಬಾ ಮಗನೆ ॥

 

ಪ್ರೇರಣೆಃ ಅಬ್ದುಲ ಕಲಮ್ ಹೇಳಿದ ಮಾತು ಈ ಮಾತು- my birthday was the only day  my mother smiled when I cried.

ಮುಳಿಯ ಭಾವ

11 thoughts on “ಮರವಲೆಡಿಗೋ ಮಗನೆ – ಭಾಮಿನಿಲಿ

  1. ಅಪರೂಪದ ಹವ್ಯಕ ಪದಂಗಳ ಸೇರುಸೆಂಡು ಮುಳಿಯ ಭಾವನ ಭಾಮಿನಿ ಈ ಸರ್ತಿಯುದೆ ರೈಸಿತ್ತು. ಹತ್ತು ವರುಷದ ಮಾಣಿಯ ಒಳ್ಳೆ ಮನಸ್ಸು ಕಂಡು ಕೊಶಿ ಆತು. ಹೆತ್ತಬ್ಬೆಯ ಕಾಲು ಹಿಡುದ ಪ್ರಸಂಗ ಮನಸ್ಸಿಂಗೆ ತಟ್ಟಿತ್ತು. ಒಪ್ಪ ಕೊಡ್ಳೆ ತಡವಾದ್ದಕ್ಕೆ ಭಾವಯ್ಯನ ಕ್ಷಮೆ ಕೇಳ್ತಾ ಇದ್ದೆ. ಮುಳಿಯ ಭಾವ ಬೈಲಿಂಗೆ ಅಂಬಗಂಬಗ ಭಾಮಿನಿಯ ಮೂಲಕ ಬತ್ತಾ ಇರಳಿ ಹೇಳುವ ಹಾರೈಕೆ.

  2. ಮುಳಿಯ ಭಾವಾ, ಒಪ್ಪ ಕೊಡುವಾಗ ತುಂಬಾ ತಡವಾತು ಕ್ಷಮಿಸಿ ” ಕೊರಳು ತುಂಬಿತ್ತಾಗ ಅಬ್ಬೆಯ ಕರುಳು ಮಿಡಿದತ್ತು “ಇಡೀ

    ಕವನದ ಭಾವವ ಹಿಡಿದು ಕೊಟ್ಟ ಸಾಲುಗೊ .ಸಾಟಿ ಯಿಲ್ಲದ್ದ ಕಲ್ಪನೆಗೊ ಕವನಕ್ಕು, ನಿಂಗೊಗುದೆ,ಅಡ್ದ ಬಿದ್ದೆ.

  3. ವಾಹ್ ಮುಳಿಯ ಭಾವಾ ವಾಹ್ …
    ಭಾಮಿನಿಯಲ್ಲಿ ಯೆನಗೆ ಗುತ್ತಪ್ಪುದು ಆದಿಪ್ರಾಸ ಮಾತ್ರ.
    ಭಾಮಿನಿಯ ಭಾವನೆಗಳು ಅತ್ಯದ್ಭುತ… ರಾಶೀ ಚೊಲೋ ಆಯ್ದು ಭಾವಾ.. 🙂

  4. ಮುಳಿಯ ಭಾವನ ಭಾಮಿನಿಗೊ ಭಾವಪೂರ್ಣವಾಗಿ ಲಾಯಕಿದ್ದು.

  5. ಭಾರೀ ಲಾಯ್ಕ ಆಯಿದು.ಭಾವುಕತೆ ಮಡುಗಟ್ಟಿ ನಿಂದಿದು ಭಾವಾ ನಿಂಗಳ ಭಾಮಿನಿಲಿ…

  6. ಮುಳಿಯ ಬಾವಯ್ಯ,

    ಅಮ್ಮ, ಮಗನ ಪ್ರೀತಿ ಲಾಯಕ್ಕಕ್ಕೆ ಮೂಡಿ ಬಯಿಂದು.

    ನಿಂಗಳ ಮೊದಲಾಣ ಭಾಮಿನಿಗಳನ್ನುದೆ ಓದುವ ಮೂಡ್ ಬತ್ತಾ ಇದ್ದು.

    keep going..

  7. ಎನಗೆ ಭಾಮಿನಿಯೂ ಗೊಂತಿಲ್ಲೆ ಮತ್ತೊಂದೂ ಇಲ್ಲೆ,ಆದರೆ ಓದುವಾಗ ಆನಂದ ಆತು.

  8. ಎಂತ ಹೇಳೋದು ಈ ಭಾಮಿನಿಗೆ..!! ಅಮೋಘ, ಉತ್ಕೃಷ್ಟ, ವಾಹ್ ವಾಹ್.

  9. ಹತ್ತು ವರ್ಷದ ಮಾಣಿ, ತಾನು ಹುಟ್ಟಿದ ದಿನ ನೆಂಪು ಮಾಡಿ, ಅಬ್ಬೆಯ ಕಾಲು ಹಿಡುದು ಆಶೀರ್ವಾದ ಬೇಡುವದು, ಅಬ್ಬೆಗೆ ಅವನ ಹೆತ್ತ ದಿನದ ಕೊಶಿ ನೆಂಪಪ್ಪದು, ಎಲ್ಲವೂ ತುಂಬಾ ಲಾಯಿಕಲಿ ಭಾಮಿನಿಲಿ ವ್ಯಕ್ತವಾಯಿದು.

  10. ಓಹ್!!!!!!!!!!
    ಅಮೋ….ಘ!!!! ಮುಳಿಯ ಭಾವಾ.. ನಿ೦ಗೊ ನಿ೦ಗಳ ಕವಿತೆಯ ಪುಸ್ತಕ ರೂಪಲ್ಲಿ ಹೆರತಪ್ಪಲೇ ಬೇಕು.. ಎನಗೆ ಮೆಚ್ಚುಗೆ ವ್ಯಕ್ತಪಡುಸಲೆ ಮಾತುಗೊ ಸಿಕ್ಕುತ್ತಿಲ್ಲೆ!!!! ಸಾವಿರ ಒಪ್ಪ೦ಗೊ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×