Oppanna.com

ನಾಲಗೆ ತೆರಿಚ್ಚಕ

ಬರದೋರು :   ಗೋಪಾಲಣ್ಣ    on   07/10/2012    19 ಒಪ್ಪಂಗೊ

ಗೋಪಾಲಣ್ಣ

ನಾಲಗೆ ಮನುಷ್ಯನ ವಿಶೇಷ.
ನಾಲಗೆ ಹರಿತ ಮಾಡುಲೆ, ಉಚ್ಚಾರ ಸರಿ ಬಪ್ಪಲೆ ಮಕ್ಕೊಗೆ ಬಜೆ ತಿನ್ನಿಸುತ್ತವು.
ಪಾಠವನ್ನೇ ಆಗಲಿ, ಪದ್ಯವನ್ನೇ ಆಗಲಿ ಮಕ್ಕೊ ರಾಗವಾಗಿ ಸ್ಪಷ್ಟವಾಗಿ ಓದೆಕ್ಕು, ಮಗ್ಗಿ ಬಾಯಿಪಾಠ ಮಾಡೆಕ್ಕು- ಹಾಂಗಾರೆ ಮಾತ್ರ ಮಕ್ಕೊ ಹುಶಾರಿ- ಇದು ಮೊದಲಾಣವರ ಲೆಕ್ಕ.
ಪಾಠಕ ಆಗಿಪ್ಪವಂಗೆ ಬೇಕಾದ ಅರ್ಹತೆಗೊ-ಸ್ವರದ/ಓದಿನ ಧಾಟಿಲಿ ಮಾಧುರ್ಯ, ಅಕ್ಷರಂಗಳ ಸರಿಯಾದ ಸ್ವರೂಪ/ ಉಚ್ಚಾರದ ಬಗ್ಗೆ ತಿಳಿವಳಿಕೆ, ಶಬ್ದವ ಎಲ್ಲಿ ತುಂಡು ಮಾಡೆಕ್ಕು ಹೇಳಿ ಗೊಂತಿಪ್ಪದು, ಒಳ್ಳೆ ದನಿ[ಕಂಠ], ಧೈರ್ಯ, ಒಂದೇ ಲಯವ ಕಾಪಾಡಿಕೊಂಬ ಸಾಮರ್ಥ್ಯ.

[ಮಾಧುರ್ಯಮಕ್ಷರವ್ಯಕ್ತಿಃ ಪದಚ್ಛೇದಸ್ತು ಸುಸ್ವರಃ ಧೈರ್ಯಂ ಚ ಲಯಸಾಮರ್ಥ್ಯಂ ಷಡೇತೇ ಪಾಠಕಾಃ ಗುಣಾಃ]. ಮಕ್ಕಳ ಕೈಂದ ಪುಸ್ತಕಂಗಳ ಗಟ್ಟಿಯಾಗಿ ಓದಿಸುದು ಅತಿ ಅಗತ್ಯ.ಈಗಲೂ ಇದು ಅನುಕರಣೀಯವೇ.

ಮೊದಲು ನಾಲಗೆ ತೆರಿಚ್ಚಲೆ ಕೆಲವು ವಿನೋದವಾದ ವಾಕ್ಯಂಗಳ ಹೇಳುಗು.[ಟಂಗ್ ಟ್ವಿಸ್ಟರ್].

ಉದಾ-ಕುಂಟರಣೆ ಕುರುಡರಣೆ ಕೊಡದೊಳಗೆ ಎರಡರಣೆ..

ಹೀಂಗಿಪ್ಪ ವಾಕ್ಯಕ್ಕೆ ಆನು “ನಾಲಗೆ ತೆರಿಚ್ಚಕ” ಹೇಳಿದ್ದು.

ಬೈಲಿಲಿ ಆರಿಂಗಾರೂ ಇಂತ ವಾಕ್ಯ ನೆಂಪಿದ್ದರೆ ಬರೆತ್ತೀರೊ?

19 thoughts on “ನಾಲಗೆ ತೆರಿಚ್ಚಕ

  1. ಅಬ್ಬ!ಇದರೆಲ್ಲ ನೋಡುವಗ ಮಂಡೆಬೆಶಿ ಆವ್ತು.

  2. ಹೋ, ಶುದ್ದಿ ಮೊನ್ನೆಯೇ ಓದಿದ್ದೆ. ನಾಲಗೆ ತೆರಚ್ಚದ್ದೆ ಒಪ್ಪಕೊಡ್ಳೆ ಬಾಕಿ ಆದ್ದು.

    ಪರಡಿ ಪರಡಿ ಹರಡಿ ಮಡಗಿದ ಎನ್ನದೊಂದೆರಡು:

    ಹೆಬಗ ಗಬಗಬನೆ ತಿಂಬಗ ಭಗಭಗನೆ ಪಿಸರಿಲಿ ಸುಭಗ ಬೈಗು!
    ಬರೆಕರೆಲಿ ಅರಳಿದ ಸುರುಳಿ ಸುಳುದರೆ ತಲೆಸೆಳಿಗು.

    1. ನೆಗೆಗಾರ ಹರಡಿ ಹರಡಿ ಮಡುಗಿದೆರಡು ಹರಗಣ ಕಂಡು ಎನ್ನ ತಲೆ ಗರಗರನೆ ತಿರುಗಿತ್ತು.

      – ಕುಕ್ಕಿಲ ಜಯತ್ತೆ.

  3. BETTY BOUGHT SOME BUTTER, THE BUTTER WAS BITTER. BETTY BOUGHT SOME BETTER BUTTER TO MAKE BITTER BUTTER BETTER BUTTER….

    1. ಏ ಮಾವ… ಈ BETTY ಹೇದರೆ ಆರು??
      ಬಟ್ಯ೦ಗೆ ಅರಡಿಗೋ?? 😛

      ಬೆಟ್ಟಿಯೋ?? ಅಲ್ಲ ಬೆರಟ್ಟಿಯೊ?

      1. ಹಹ್ಹಹ್ಹಾ…. ಬೆಟ್ಟೀ ಹೇದರೆ ಬಟ್ಯಂಗೆ ಅರಡಿಗೋ? ಹೇಳಿ ಬೋಸ ಭಾವ ಬರದ್ದು ಓದಿ ನೆಗೆ ಬಂತು.

  4. ನಾಲಗೆ ತಿರುಗುಸಲೆ ಒಳ್ಳೆ ಪದಂಗೊ. ಗೋಪಾಲಣ್ಣ ಸುರು ಮಾಡಿದ್ದಕ್ಕೆ, ಸುರು ಸುರು ಹೇಳಿ ಪದಂಗಳ ಸುರಿಮಳೆ ಬೈಲಿಲ್ಲಿ ಸೊರುಗಿತ್ತದ. ಸುರುಮಾಡಿದ ಗೋಪಾಲಣ್ಣಂಗೆ ಧನ್ಯವಾದಂಗೊ.

  5. ಪೀಟರ್ ಪೈಪರ್ ಪಿಕ್‍ಡ್ ಎ ಪೆಕ್ ಆಫ್ ಪಿಕ್‍ಲ್‍ಡ್ ಪೆಪ್ಪರ್
    ಎ ಪೆಕ್ ಆಫ್ ಪಿಕ್‍ಲ್‍ಡ್ ಪೆಪ್ಪರ್ ಪೀಟರ್ ಪೈಪರ್ ಪಿಕ್‍ಡ್
    ಇಫ್ ಪೀಟರ್ ಪೈಪರ್ ಪಿಕ್‍ಡ್ ಎ ಪೆಕ್ ಆಫ್ ಪಿಕ್‍ಲ್‍ಡ್ ಪೆಪ್ಪರ್
    ವೇರ್ ಈಸ್ ದ ಪೆಕ್ ಆಫ್ ಪಿಕ್‍ಲ್‍ಡ್ ಪೆಪ್ಪರ್ ಪೀಟರ್ ಪೈಪರ್ ಪಿಕ್‍ಡ್?

    – ಕುಕ್ಕಿಲ ಜಯತ್ತೆ.

  6. ಕುಂಟರಣೆ ಕುರುಡರಣೆ ಕೊಡದೊಳಗೆರಡರಣೆ ಉರುಡುರುಡು ಪೋಪುಂಡಾರರಣೆ.

  7. ಓ ಆಚಿಗೆ ಗೂಗ್ಲಿ ಪುಟಲ್ಲಿ ಅರಟುವಾಗ ಕಂಡದರ ಇಲ್ಲಿ ಬರೆತ್ತೆ ಆಗದಾ. (ಆರಪ್ಪನ ಸೊತ್ತೂ ಅಲ್ಲನ್ನೆ ಅಲ್ಲಿಪ್ಪದೂ ಕೂಡ. ಸಾರ್ವಜನಿಕರ ಉಪಯೋಗಕ್ಕೇ ಅಲ್ದೊ ಅಲ್ಲಿಯೂ ಅವು ಮಡುಗಿದ್ದು.)

    ೧. ತರಿಕೆರೆ ಏರಿಮೇಲೆ ಮೂರು ಕರಿ ಕುರಿಮರಿ ಮೇಯುತ್ತಿತ್ತು.
    ೨. ಬಂಕಾಪುರದ ಕೆಂಪು ಕುಂಕುಮ, ಬಂಕಾಪುರದ ಕೆಂಪು ಕುಂಕುಮ…
    ೩. ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗಿ ತಂದನ.
    ೪. ಕುರುಡು ಕುದುರೆಗೆ ಹುರಿದ ಹುರಿಕಡ್ಳಿ.
    ೫. ಸಂಪಂಗಪ್ಪನ ಮಗ ಮರಿಸಂಪಂಗಪ್ಪ, ಸಂಪಂಗಪ್ಪನ ಮಗ ಮರಿಸಂಪಂಗಪ್ಪ.
    ೬. ಕಾಗೆ ಪುಕ್ಕ ಗುಬ್ಬಿ ಪುಕ್ಕ, ಕಾಗೆ ಪುಕ್ಕ ಗುಬ್ಬಿ ಪುಕ್ಕ.
    ೭. ಎರಡೆರಡೆಮ್ಮೆ ಮರದಡಿ ನಿಂತು ಕರಡದ ಹುಲ್ಲು ಕರಕರ ತಿನ್ನುತ್ತಿತ್ತು.
    ೮. ಕೆಸ್ತೂರ್ ರಸ್ತೆಲಿ ಕೆಸ್ತೂರ್ ರಂಗರಾಯರು ಪಿಸ್ತೋಲ್ ಏಟು ತಿಂದು ಸುಸ್ತಾಗಿ ಸತ್ ಬಿದ್ರು
    ೯. ಕೆಂಪು ಕುಂಕುಮ ಕಪ್ಪು ಕುಂಕುಮ.
    ೧೦. ಶಿ ಸೆಲ್ಸ್ ಸೀ ಶೆಲ್ಸ್ ಓನ್ ದ ಸೀ ಶೋರ್.
    ೧೧. ಐ ಸ್ಕ್ರೀಮ್, ಯು ಸ್ಕ್ರೀಮ್, ವಿ ಆಲ್ ಸ್ಕ್ರೀಮ್ ಫಾರ್ ಐಸ್ಕ್ರೀಮ್.
    ೧೨. ಕೊಂದಲಕಾಡಿಲಿ ಕಡಂದಲಗೂಡು ಕೇರದಕಾಡಿಲ್ಲಿ ಜೇನದಗೂಡು

  8. ಗೋಪಾಲಣ್ಣರು ಬಜೆ ಉಪಯೋಗ ಹೇಳಿದ್ದು ಚೊಲೋ ಆತು. ಒ೦ದು ದಿನ ಎನ್ನ ಪುಟ್ಟ ಮಗಳಿಗೆ ಬಜೆ ನೀರು ಕುಡಿಸುವಾಗ ಎನ್ನ ಅತ್ತೆಯವರಿಗೆ ’ಅದು ಎ೦ತಕ್ಕೆ” ಅ೦ತ ಕೇಳಿದೆ. ಅವ್ರು ಅದು ಔಷಧಿ, ಸಣ್ಣ ಮಕ್ಕಳಿಗೆ ಒಳ್ಳೇದು-ಪದ್ದತಿ ಅ೦ತ ಕುಡುಸ್ತೆ ಅ೦ತ ಹೇಳಿದವು. ನೋಡಿ ನ೦ಗಳ ಪದ್ದತಿಯಲ್ಲಿ ಎಷ್ಟು ಚೊಲೋದೆಲ್ಲಾ ಇಟ್ಟಿದ್ದ ಅರ್ಥ ಗೊತ್ತಿಲ್ಲದಿದ್ದರೂ ನಾವು ದಾರಿ ತಪ್ಪುತ್ವಿಲ್ಲೆ!, ಗೋಪಾಲಣ್ಣ ಅ೦ಥವರು ಬಿಡಿಸಿ ಹೇಳಿರೆ, ಇನ್ನೂ ಉಪಯೋಗ ಆವುತ್ತು, ಅದಕ್ಕೇ ಅವರಿಗೆ ಮತ್ತೆ ಮತ್ತೆ ಧನ್ಯವಾದ.

    ಹಾ೦, ಈಗ ’ನಾಲಗೆ ತೆರಿಚ್ಚಕಗಳ ಬಗ್ಗೆ’ ಹೇಳೂದಾದ್ರೆ, ಆನು ಬರೆದಿದ್ದು ಸುಮಾರು 15-20 ಇದ್ದು. ಆದ್ರೆ ಅವು ಹವಿಗನ್ನಡದ್ದಲ್ಲ, ಕನ್ನಡದ್ದು. ಹಾಗಾಗಿ ಇಲ್ಲಿ ಅವಕಾಶ ಇಲ್ಲೆ ಅ೦ತ ಬರೆತಿಲ್ಲೆ. ಆದ್ರೂ ಸ್ಯಾ೦ಪಲ್ ಗಾಗಿ ಇಲ್ಲಿ ಒ೦ದು ಬರೇತೆ, ಅನ್ಯಾಥಾ ಭಾವಿಸದಿರಿ (ಅರ್ಥವನ್ನೂ ಕೂಡ!). ಇದನ್ನ ಬರೆದ ದಿನಾ೦ಕ: 29.05.1994.

    “ಉರುಟು ಕರಟದೊಳಗಿನ
    ತಿರುಟತಿರುಚಿ ಪರೋಟದೊಡನೆ
    ಕೊಡ ಹೊರಟವಳ
    ಶರಟೊಳಗಿನ ಉರುಟು ನೋಡಿ
    ಮುರುಟಿಕೊಳ್ಳದವ
    ಒರಟರೊಳಗೆ ಒರಟ!!”

    ಒ೦ದ್ಸಲ ಟ೦ಗ್ ಟ್ವಿಸ್ಟ್ ಆಗ್ತೋ ಹೇ೦ಗೆ ಚೆಕ್ ಮಾಡಿ?….

  9. ನಾಲಗೆ ತಿರುಚ್ಚಲಿಪ್ಪ “ನಾಲಗೆ ತೆರಿಚ್ಚಕ” ಈಗ ಎರಡು ನೆಂಪಾತು. ಮೇಲೆ ಬರವಗ ಇದು ಸರೀ ನೆಂಪಿತ್ತಿಲ್ಲೆ. ಅರ್ಬರ್ಬ ನೆಂಪಿತ್ತಷ್ಟೆ.

    “ಅರಳಿಮರದೆಡತೊಡರಿನಲೆರಡೆರಡರಣೆಗಳುರುಡುರುಡುತಿಹೆ”

    “ರೈಲುಲಾರಿ ರೈಲುಲಾರಿ”

    – ಕುಕ್ಕಿಲ ಜಯತ್ತೆ.

  10. ನಾಲಗೆ ತೆರಿಚ್ಚಕಗಳ ಬಗ್ಗೆ ಮಾತನಾಡುವಾಗ ಮೊದಲು ನೆ೦ಪಪ್ಪದು “ತರಿಕೆರೆ ಏರಿ ಮೇಲೆ ಮೂರು (mooru) ಕರಿ ಕುರಿ ಮರಿ ಮೇಯುತಿತ್ತು” ಮತ್ತೆ Englishಲ್ಲಿ ಲೆಕ್ಕ ಇಲ್ಲದ್ದಷ್ಟು tongue twisters googleಲ್ಲಿ ಸಿಕ್ಕುತ್ತು. “ನಾಲಗೆ ತೆರಿಚ್ಚಕ” ಹವಿಗನ್ನಡಕ್ಕೆ ಗೋಪಾಲಣ್ಣನ ಕೊಡುಗೆ ಹೇಳಿ ಕಾಣುತ್ತು. Very nice!

  11. ಆಹ್ ಚೊಲೋ ಇದ್ದು ಇದು..

    ಯೆನಗೆ ಗುತ್ತಿಪ್ಪದೇ ಮೂರು ಮತ್ತೊ೦ದು . ಅದ್ರಲ್ಲಿ ಜಯಕ್ಕ ಒ೦ದು, ಸುಮನಕ್ಕ ಒ೦ದು ಹೇಳಿಯಾತು.. 🙂

    ಕಾಗೆ ಪುಕ್ಕ ಗುಬ್ಬಿ ಪುಕ್ಕ”
    “ರೋಲರ್ ರೋರರ್” (Roller Roarer)

  12. ಕನ್ನಡ ಪ್ರಭದ ಪುರವಣಿ ಬೈಟು ಕಾಫಿಯ ೨ನೇ ಪುಟಲ್ಲಿ ನುಲಿ ನಲಿ ಹೇಳುವ ಅಂಕಣಲ್ಲಿ ದಿನಕ್ಕೆ ಎರಡು ಹೀಂಗಿಪ್ಪ ವಾಕ್ಯಂಗಳ ಕೊಡುತ್ತವು.

  13. ಗೋಪಾಲಣ್ಣ ಬರದ್ದುದೆ ಎಂಗೊ ಹೇಳಿದ ನೆಂಪಿದ್ದು.
    ಕುಕ್ಕಿಲ ಜಯತ್ತೆ ಬರದ್ದು ೩ ದೆ ಎನಗೆ ಸಣ್ಣ ಇಪ್ಪಗ ಕೇಳಿದ ಹೇಳಿದ ನೆಂಪಿದ್ದು.
    ಎನಗೆ ನೆಂಪಪ್ಪ ಇನ್ನೆರಡು –

    ಅರ್ಧ ಸೇರು ಕುಡು ಕಡ ಕೊಡೆಕಡ (ಅರ್ಧ ಸೇರು ಕುಡು ಸಾಲ ಕೊಡೆಕಡ)
    ಶಿ ಸೆಲ್ಸ್ ಸೀ ಶೆಲ್ಸ್ ಇನ್ ದ ಸೀ ಶೋರ್ ( ಇಂಗ್ಲಿಷ್ಂದು) – She cells sea shells in the sea shore.

    ಇನ್ನು ಬೇರೆ ನೆಂಪಪ್ಪಗ ಬರೆತ್ತೆ.

  14. ಯಾವುದೋ ಒಂದು ಇದ್ದು……. ನೆಂಪಾವ್ತಿಲ್ಲೆ. ನೆಂಪಪ್ಪಗ ಎನ್ನ ಲೆಕ್ಕದ್ದು ಬರೆತ್ತೆ. ಒಳ್ಳೆ ಕಾರ್ಯ ಇದು.

  15. “ನಾಲಗೆ ತೆರಿಚ್ಚಕ” ಹೇಳುವ ಹೆಸರು ತುಂಬಾ ಒಳ್ಳೆದಿದ್ದು. ಆನು ಸುರೂ ಕೇಳಿದ್ದು ಈ ಹೆಸರು. ಎಂಗೊ ಸಣ್ಣಾದಿಪ್ಪಗ ಹೇಳಿರೆ ೩೫-೩೭ ವರ್ಷ ಮೊದಲು ನಿತ್ಯ ಮುರ್ಸಂಧ್ಯಪ್ಪಗ ಎನ್ನ ಅಜ್ಜ ಅಥವಾ ಅಪ್ಪ ಮಗ್ಗಿ, ಮಾಸನಾಮಂಗೊ, ತಿಥಿ, ವಾರ, ನಕ್ಷತ್ರ ಸಂವತ್ಸರಂಗಳ ಹೆಸರುಗಳ ಮತ್ತೆ ಶ್ಲೋಕಂಗಳ ಎಲ್ಲ ದೊಡ್ಡಕ್ಕೆ ಹೇಳೆಕ್ಕು ಹೇಳಿ ಹೇಳ್ಸಿಗೊಂಡಿದ್ದದು ನೆಂಪಾತು. ಇದು ನಾಲಗೆ ಹರಿತ ಮಾಡುದರ ಒಟ್ಟಿಂಗೆ ನೆಂಪು ಒಳಿವಲೂ ಲಾಯಿಕ ಆವುತ್ತು. ಅಲ್ಲದ್ದೆ ಬಾಲ್ಯಲ್ಲಿ ಕಲ್ತ ಪಾಟಂಗೊ ಎಂದಿಂಗೂ ಮರೆಯ ಹೇಳುಗು. ಎಂಗೊ ಬಾಲ್ಯಲ್ಲಿ ಹೇಳಿಗೊಂಡಿದ್ದ ಒಂದೆರಡು ನಾಲಗೆ ತೆರಿಚ್ಚಕಂಗಳ ಹೇಳ್ತೆ –

    “ಕೆಂಪು ಕುಂಕುಮ ಕಪ್ಪು ಕುಂಕುಮ”
    “ಕಾಕೆ ಕಪ್ಪು ಕುಪ್ಳು ಕೆಂಪು”
    “ಎತ್ತೆರಡೆಮ್ಮೆರಡಾಡೆರಡಾಡಿನ ಮರಿಯೆರಡು”

    ಈ “ತೆರಿಚ್ಚಕ” ಶಬ್ದ ಯಾವ ಬಾಶೆದು ಹೇಳಿ ಗೊಂತಾಯಿದಿಲ್ಲೆ,

    – ಕುಕ್ಕಿಲ ಜಯತ್ತೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×