ಚೆನ್ನಬೆಟ್ಟಣ್ಣನ ಗುರ್ತ ಇದ್ದನ್ನೇ? ಆಟದ ಶುದ್ದಿ ಮಾತಾಡುವಗ ಅವರ ಬಗ್ಗೆ ಸುಮಾರು ಸರ್ತಿ ಮಾತಾಡಿದ್ದು.
ನೆಗೆನೆಗೆ ಮೋರೆಲಿ ಯೇವತ್ತೂ ಉಲ್ಲಾಸಲ್ಲಿ ಇದ್ದೊಂಡಿಕ್ಕು! ಅವರ ಮೂಲ ಚೆನ್ನಬೆಟ್ಟು ಆದರೂ, ಈಗ ಬೆಂಗುಳೂರಿಲಿ ಇಪ್ಪದು.ಎಲ್ಲೇ ಇದ್ದರೂ, ಅವರ ಊರಿನ ಸೆಳೆತ ಇಳುದ್ದಿಲ್ಲೆ. ನವರಾತ್ರಿ ಆಚರಣೆಗೆ ಚೆನ್ನಬೆಟ್ಟು ಮಟಕ್ಕೆ ಒರಿಶಂಪ್ರತಿ ಬಂದೇ ಬಕ್ಕು!
ಹತ್ತರೆ ಎಲ್ಲೇ ಸಂಗೀತ ಕಛೇರಿ, ಡೇನ್ಸು, ಬರತನಾಟ್ಯ ಆವುತ್ತರೂ, ಸೌಕರ್ಯ ಇದ್ದರೆ ಹೋಗಿಯೇ ಹೋಕು! ಯಕ್ಷಗಾನ ಅಂತೂ ಬಿಡ್ತ ಪ್ರಶ್ನೆಯೇ ಇಲ್ಲೆ!ಬೆಂಗುಳೂರಿಲಿಪ್ಪ ಕೆಲವು ಜವ್ವನಿಗರ ಯಕ್ಷಗಾನದ ಗುಂಪಿನ ಸಕ್ರಿಯ ಸದಸ್ಯ° ಅಡ ಇವು..ಅವರ ಬ್ಲಡ್ಡು ಗ್ರೂಪು ಯಕ್ಷಗಾನ ಪ್ಲಸ್ ಅಡ, – ಲಾನಣ್ಣ ನೆಗೆಮಾಡ್ತ° ಕೆಲವು ಸರ್ತಿ!
ಅವರತ್ರೊಂದು ಸಣ್ಣ ಸೂಟುಕೇಸಿನಷ್ಟಕೆ ಇಪ್ಪ ಕೆಮರ ಇದ್ದು. ಎಲ್ಲಿಗೆ ಹೋವುತ್ತರೂ ತೆಕ್ಕೊಂಡು ಬಕ್ಕು.ಚೆಂದಚೆಂದದ ಪಟ ತೆಗಗು. ತುಂಬಾ ಚೆಂದದ ಪಟಂಗೊ! ನಮುನೆನಮುನೆದು. ಪರಿಸರವೋ – ಡೇನ್ಸುಕಾರ್ಯಕ್ರಮವೋ – ಹೂಗಿಂದೋ, ಮಾವಿನಮೆಡಿಯೋ – ಹೀಂಗೆಂತಾರು..!ಅವು ತೆಗದ ಒಂದು ಚಂದ್ರನ ಪಟವ ಗುರುಗೊ ಅವರ ವೆಬುಸೈಟಿಲಿ (ಹರೇರಾಮ.ಇನ್) ಲಿ ಹಾಕಿದ್ದವಡ, ಅವಕ್ಕೆ ಕೊಶಿ ಆಗಿ!!
ಓ ಮೊನ್ನೆ ಉಪ್ರಂಗಡಿಯ ಆದಿತ್ಯಹೋಟ್ಳಿನ ಚಳಿಕೋಣೆಯ ಒಳದಿಕೆ ಆಚಕರೆಮಾಣಿಯ ಒಟ್ಟಿಂಗೆ ಕೂದುಗೊಂಡು ಬೆಶಿಚಾಯ ಕುಡ್ಕೊಂಡಿತ್ತಿದ್ದವು.ಒಪ್ಪಣ್ಣನ ಕೈಲಿ ಚೆಂದಕೆ ಮಾತಾಡಿದವು. ಅವು ಪಟತೆಗೆತ್ತ ಶುದ್ದಿ ಎಲ್ಲ ಬಂತು - ಬೈಲಿಂಗೆ ತೋರುಸುವನಾ – ಕೇಳಿದ್ದಕ್ಕೆ ಸಂತೋಷಲ್ಲಿ ಕೊಟ್ಟು ಕಳುಸಿದವು.ಒಂದು ಸರ್ತಿಂಗೆ ಕೊಟ್ಟದರ್ಲಿ ಒಪ್ಪಣ್ಣಂಗೆ ನಾಕುಸರ್ತಿ ಹಾಕುವಷ್ಟಕೆ ಆತು!!
ಯಕ್ಷಗಾನದ ಕರ್ಣನ ನೆಂಪಾತೋ ಏನೋ! ಆಗಲಿ, ಎಲ್ಲವುದೇ ಚೆಂದಚೆಂದದ ಪಟಂಗೊ. ದೊಡ್ಡದೊಡ್ಡದು.
ದೊಡ್ಡಕೆಮರಲ್ಲಿ ತೆಗದ್ದು ದೊಡ್ಡದೊಡ್ಡದೇ ಬರೆಕ್ಕಲ್ಲದೋ! ನೋಡಿ, ಹೇಂಗಿದ್ದು ಹೇಳಿ. ಆತೋ? (ಅವರತ್ರೆ ಇನ್ನುದೇ ತುಂಬ ಪಟಂಗೊ ಇದ್ದಡ!, ಎಲ್ಲ ನಿದಾನಕ್ಕೆ ಕಳುಸುಗು!)ಪಟ ನೋಡಿ, ಕೊಶಿ ಆದರೆ ಒಪ್ಪಕೊಡಿ!
ಪ್ರಸಿದ್ದ ಛಾಯಚಿತ್ರಕಾರ ರಗುರಾಯ್ ಹೆಳುಥತ್ತು ” ನಿಜವಾದ ಛಾಯಚಿತ್ರಕಾರ ಕೆಮರಾವ ದರಿಸೆಕ್ಕದಡ” ಬರಿ ತೆಕ್ಕೊಂಡು ಹೊಪದಲ್ಲ ,ಬಹುಸಶಹ ಚೆನ್ನಬೆಟ್ಟನ್ನ ಹಾಂಗೆ ಮಾದಡುತ್ಠಿ ಅಲ್ಲದೊ
chandra devara photongo chenda baindu
ಚ೦ದ್ರನ ಮೇಲೆ ಕರ್ನಾಟಕದ ಭೂಪಟ ಆರು ಬರದ್ದು?
ಡಾಗುಟ್ರೇ!
ನಿಂಗೊಗೂ ಚೆನ್ನಬೆಟ್ಟಣ್ಣಂದೇ ಗತಿ!!
ಚಂದ್ರನ ಮೈಮೇಗೆ ಎಂಗೊಗೆ ಆರಿಂಗೂ ಕಾಣದ್ದ ಚೆಂದ ನಿಂಗೊಗಿಬ್ರಿಂಗೆ ಕಂಡತ್ತದಾ!! – ಅದೂ ಒಂದೇ ದಿನ!!
ಅಜ್ಜಸುರಿಯ!!
ಒಂದೇ ದೋಣಿಲಿ ಹೋಪಗ ಒಬ್ಬಂಗೆ ಚಂದ್ರನಲ್ಲಿ “ಸ್ವರ್ಗ” ಕಂಡರೆ ಇನ್ನೊಬ್ಬಂಗೆ “ಕರ್ನಾಟಕ” ಕಾಣ್ತಾ ಇದ್ದು. ಇಬ್ರೂದೇ ಆಚ ಕರೆ ಎತ್ತುವದು ಒಂದೇ ದಿನ 🙂
ಶರ್ಮಪ್ಪಚ್ಚಿ,
ಕರ್ನಾಟಕ ಮಾಂತ್ರ ಅಲ್ಲಡ – ಸರೀ ನೋಡಿ ಅಪ್ಪಗ ಡಾಗುಟ್ರಿಂಗೆ ಚಂದ್ರನಮೇಗಾಣ ಕರ್ನಾಟಕಲ್ಲಿಪ್ಪ ಕುಂಞಿ – ಹಿತ್ತಿಲು ಕಂಡಿದಡ..
😉
ಪಟಂಗೊ ತುಂಬಾ ಲಾಯಿಕ್ ಬಯಿಂದು.
ಚಂದ್ರನ ನೆಗೆ, ನೋಟ ಎಲ್ಲದರಲ್ಲೂ “ಸ್ವರ್ಗ” ವೇ ಕಾಣುತ್ತು
ಈ ಚೆನ್ನಬೆಟ್ಟಣ್ಣ ಆಕಾಶ ನೋಡಿಗೊಂಡು ‘ಸ್ವರ್ಗ’ದ ಕನಸು ಕಂಡುಗೊಂಡಿದ್ದದಾ ಅಲ್ಲಾ.. ಚೆಂದದ ಚಂದ್ರನಲ್ಲಿ ‘ಸ್ವರ್ಗ’ ಕಂಡದಾ?
ಪಟಂಗೊ ಲಾಯ್ಕಿದ್ದು.
ಎಂತ, ಬಾರೀ ಚಂದ್ರನನ್ನೇ ಕಾಣ್ತು ಚೆನ್ನಬೆಟ್ಟಣ್ಣಂಗೆ..!!
ಕಾಲದೋಷ, ಎಂತದೂ ಮಾಡುವ ಹಾಂಗಿಲ್ಲೆ ಮಿನಿಯಾ. 😉