Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ದಾಸನ ಹೂಗಿನ ಸಾರು
ಬೇಕಪ್ಪ ಸಾಮಾನುಗೊ:
- 20-25 ದಾಸನ ಹೂಗು (5 ಎಸಳಿನ ಕೆಂಪು ದಾಸನ ಒಳ್ಳೆದು)
- ಚಿಟಿಕೆ ಅರುಶಿನ ಹೊಡಿ
- 1-2 ಹಸಿಮೆಣಸು
- ಸಾಧಾರಣ ದ್ರಾಕ್ಷೆ ಗಾತ್ರದ ಹುಳಿ
- ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
- 5-6 ಬೇನ್ಸೊಪ್ಪು
- 1 ಚಮ್ಚೆ ಸಾಸಮೆ
- ಚಿಟಿಕೆ ಇಂಗು
- 1 ಚಮ್ಚೆ ಎಣ್ಣೆ
ದಾಸನ ಹೂಗಿನ ಎಸಳಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೇರೆ ಮಾಡಿ ಮಡುಗಿ.
ಒಂದು ಪಾತ್ರಲ್ಲಿ, ದಾಸನ ಹೂಗಿನ ಎಸಳು, ಸಿಗುದು ಹಾಕಿದ ಹಸಿಮೆಣಸು, ಬೆಲ್ಲ, ಹುಳಿ ಪುರುಂಚಿದ ನೀರು, ಅರುಶಿನ ಹೊಡಿ, ಉಪ್ಪು ಸಾಧಾರಣ 4 ಕುಡ್ತೆ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಸಾರಿಂಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ / ಹಾಂಗೆ ಕುಡಿವಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ದಾಸನ ಹೂಗಿನ ಸಾರು ಭಾರಿಲಾಯಕೆ.
ಆನು ಸಣ್ಣಗಿಪ್ಪಗ ಎನ್ನ ಅಬ್ಬೆ ಮಾಡುಗು.
ನಿನು ಬರದ್ದು ಓದಿ ಕೊಶಿಯಾತು.
ವೇಣಿಯಕ್ಕ°,
‘ದಾಸನ’ ಹೇದರೆ ಬೈಲಿಂಗೆ ತುಂಬಾ ಹತ್ರಾಣ ಸಂಗತಿ.
ಸಾರಡಿ ತೋಡ ಕರೇಲಿ ಬೇಕಾದಷ್ಟು ನಮುನೆಯ ದಾಸನಂಗೊ ಇದ್ದು.
ಹಾಂಗಾಗಿ ಮನೆಗೆ ಬಂದ ಮಕ್ಕೊ ಎಲ್ಲ ತೋಡ ಕರೇಂಗೆ ಒಂದರಿ ಹೋಗಿ ದಾಸನ ಕೊಯಿದು ತಂದು ಸಾರು ಮಾಡ್ತ ಕ್ರಮ ಇದ್ದು ಮನೇಲಿ.
ಅವಕ್ಕೂ ನವಗೂ ಇಷ್ಟದ ಸಾರು ಇದು.
ತುಂಬಾ ಕೊಶಿ ಆತು ನಿಂಗೊ ಕೊಟ್ಟ ಈ ಕ್ರಮ ನೋಡಿ…
🙂