Oppanna.com

ಮದುವೆಗೊಂದು ಕ್ಯಾಸೆಟ್

ಬರದೋರು :   ಪವನಜಮಾವ    on   04/11/2012    17 ಒಪ್ಪಂಗೊ

ಪವನಜಮಾವ

ಹಿಂದೆ ಒಂದರಿ ಯಾವುದೋ ಪಟ್ಟಾಂಗದ ಮಧ್ಯಲ್ಲಿ ತೆಕ್ಕುಂಜ ಕುಮಾರ ಒಂದು ವಿಷಯ ನೆಂಪಿಸಿತ್ತಿದ್ದ. ಅದು ಎಂತ ಹೇಳಿದ್ರೆ ಆನು ಒಂದಾನೊಂದುಲ್ಲಿ ಕಾಲಲ್ಲಿ ಮದುವೆ ಅಪ್ಪವಕ್ಕೆ ಒಂದು ಕ್ಯಾಸೆಟ್ ಉಡುಗೊರೆ ಕೊಡುತ್ತಿದ್ದೆ. ಅದು ಲಾಯಕ್ಕಿತ್ತು. ಈಗಲೂ ಇದ್ದೋಳಿ ಕೇಳಿತ್ತಿದ್ದ. ಆಗ ಆನು ಹೇಳಿತ್ತಿದ್ದೆ. ಈಗ ಎಲ್ಲೂ ಕ್‌ಆಯೆಟ್ ಪ್ಲೇಯರ್ ಗಳೇ ಕಾಣ್ತಿಲ್ಲೆ. ಹಾಂಗಾಗಿ  ಆ ಕ್ಯಾಸೆಟ್ ಕೊಡುದರ ನಿಲ್ಲಿಸಿದ್ದೇಳಿ. ಅದರ MP3 ಮಾಡೆಕ್ಕೂಳಿ ಸುಮಾರು ಸಮಯಂದ ಗ್ರೇಯಿಸಿಕೊಂಡಿತ್ತಿದ್ದೆ. ಈಗ ನಿನ್ನೆ ಕೂತು ಅದರ MP3 ಮಾಡಿದೆ. ಇನ್ನು ಮದುವೆ ಅಪ್ಪವಕ್ಕೆ ಕೊಡುಲೆ ಅಡ್ಡಿ ಇಲ್ಲೆ. ಹೇಳಿ ಯಾರೆಲ್ಲ ಮದುವೆ ಆಗ್ತಿ?

 

17 thoughts on “ಮದುವೆಗೊಂದು ಕ್ಯಾಸೆಟ್

    1. casette player ನ outputಗೆ computerನ microphone ಸಿಕ್ಕಿಸಿ orbit downloaderಲಿ voice record ಮಾದಿದರೆ mp3 formatಲಿ save ಮಾದುಲೆ ಆವುತ್ತು.

      1. ಇದರ ಬಗ್ಗೆ ಆನು ಈಗಾಗಲೆ ಎನ್ನ ಗ್ಯಾಜೆಟ್‌ಲೋಕ ಅಂಕಣಲ್ಲಿ ಉತ್ತರಿಸಿದ್ದೆ. ಅದು professional method ಅಲ್ಲ. ಕಂಪ್ಯೂಟರ‍್ ಮತ್ತು ಕ್ಯಾಸೆಟ್ ಪ್ಲೇಯರ್‌ಗಳ impedence matching ಅಗುತ್ತಿಲ್ಲೆ.

  1. ಆನು ಪುನಾ ಮದುವೆ ಆವ್ತೆ… ಪುಟ್ಟಕ್ಕ ಒಪ್ಪಿದ್ದು….. 😉

      1. “ಪವನಜ” ಹೆಸರು ಓದಿದೆ. ಮನಸ್ಸು ಈ ಹೆಸರು ಏಲ್ಲಿಯೋ ಕೇಳಿದಾ೦ಗಿದ್ದನ್ನೆ ಹೇಳಿತ್ತು. ಉಹೂ೦ ತಲೆಕೆರದೆ. ಗತಕಾಲದ ಹಾಯಿ ಬಿಡ್ಸೊ೦ಡತ್ತು.ನೆ೦ಪಿನ ಸುರುಳಿ ಎಳೆಯೊ೦ದು ತಲೆ ನೆಗ್ಗಿತ್ತು. 4o ವರ್ಷದ ನೆ೦ಪಿನ ಜಾಲಕರೇಲಿ ಈ ಒ೦ದು ಹೆಸರು ಲಾಯಕಕ್ಕೆ ಚಕ್ನಾಟಿ ಒಪ್ಪಕ್ಕೆ ಕೂದುಗೊ೦ಡಿತ್ತು! ಆ ಒ೦ದು ವರ್ಷ( ಇಸವಿ ನೆ೦ಪಾಗ; ಸು. 1972 ಆಗಿಕ್ಕೋ? ಏನೋ?)ಸುಳ್ಯ ಟಿ. ಡಿ .ಬಿ. ಜೂನಿಯರ್ ಕಾಲೇಜಿಲ್ಲಿ ಅಧ್ಯಾಪಕ ಆಗಿಪ್ಪಗ ಈ ಹೆಸರಿನೋನು ಎನ್ನ ಮೆಚ್ಚಿಕೆಯ ಪಡದಿತ್ತಿದ್ದ. ಅವನೇ ಇವ ಆಗಿಕ್ಕೋ? ಮೆದುಳಿಲ್ಲಿ ಹತ್ತಾರು ಯೋಚನಗಳ ಗರಿಗೆದರಿತ್ತು. ಇಲ್ಲಿಯ ಪಟವ ನೋಡಿದೆ; ನೋ….ಡಿ……ದೆ; ನೋಡಿದ್ದೇ ನೋಡಿದೆ. ಮೋರೆಲಿ ಆ ಸಾಜ ಕಾಣ್ತು. ಆದರೂ ಹೇಳ್ಲೆ ಧೈರ್ಯ ಸಾಲ! ನೀನೇ ಅಪ್ಪು ಹೇದು ಮನಸ್ಸು ಹೇಳ್ತಾ ಇದ್ದು. ಅಪ್ಪಾದರೆ ತು೦ಬಾ ಸ೦ತೋಷ. ಅಲ್ಲದ್ದರೆ ಮರದಿಕ್ಕು.
        ಅದಿರಲಿ; ಇಡೀಗ ನಿನ್ನ ಸುದ್ಧಿ ಓದಿ ಕೊಶಿಲಿ ಈ ಒಪ್ಪ೦ಗೊ ಕೊಡ್ತಾ ಇದ್ದೆ. ಸ್ವೀಕರ್ಸು. ಶುಭಾಶಯ + ಧನ್ಯವಾದ೦ಗೊ. ನಮಸ್ತೇ…. .

          1. ಪವನಜ, ಹರೇರಾಮ; ಈಗ ರಜಾ ಮದಲೇ ನಿನ್ನ ಬಗ್ಗೆ ಹೆಚ್ಚಿಗೆ ಮಾಹಿತಿ ತಿಳ್ಕೊ೦ಬ ಕುತೂಹಲಲ್ಲಿ ನಮ್ಮ ಬಯಲಿನ ಹುಡುಕುವಾಗ ಒಳ್ಳೆ ಮಾಹಿತಿ ಸಿಕ್ಕಿತ್ತು. ಅದರ ನೋಡಿಯಪ್ಪಗ ಆದ ಸ೦ತೋಷವ ಹೇಳ್ಲೆ ನಿಜಕ್ಕೂ ಶಬ್ದ ಸಿಕ್ಕುತ್ತಿಲ್ಲೆ ಮಾರಾಯ! ನಿನ್ನ೦ತವನ ನಮ್ಮ ಮಾಣಿ ಹೇಳಿಗೊ೦ಬ ಸೌಭಾಗ್ಯಕ್ಕಿ೦ತ ಇನ್ನೆ೦ತ ಬೇಕು?ನಿನ್ನ ಸಾಧನಗಳ ಪಟ್ಟಿಯ ನೋಡಿಯಪ್ಪಗ೦ತು ಎನಗೆ ಎರಡು ಕೊ೦ಬು ಬ೦ದಷ್ಟು ಹೆಮ್ಮೆ ಎನ್ಸಿತ್ತೊ!” ಬಾಳನು ಶೋಧಿಸಿ ಶುಚಿಯನು ಬೆಳದರೆ; ಇಹವೇ ಅರಳದೆ ಪರವಾಗಿ.” ಪ್ರಾಚಾರ್ಯ ವಿ. ಸೀತಾರಾಮಯ್ಯನ ಮಾತುಗೊ ನೆ೦ಪಾಗಿ, ಎನ್ನ ಮನಸ್ಸಿಲ್ಲಿ ಧನ್ಯೋಸ್ಮಿ ಭಾವ ಮೂಡಿತ್ತು! ಸ೦ತೋಷ; ಸ೦…..ತೋss……..ಷ. ಎನ್ನ ಈ ಸ೦ತೋsಷ ಇನ್ನೂ ಹೆಚ್ಚುವಾ೦ಗಗಾಲಿ ಹೇದು ದೇವರಲ್ಲಿ ಬೇಡಿಯೋಳ್ತೆ. ಊರಿ೦ಗೆ ಬ೦ದಿಪ್ಪಗ ಪುರುಸೊತ್ತು ಮಾಡಿಗೊ೦ಡು ಎ೦ಗಳಲ್ಲಿಗೂ ಬಾ.ಶುಭ೦ ಭೂಯಾತ್. ನಮಸ್ತೇ….

          2. ಆತ್ಮೀಯ ಪವನಜ,
            ಸುಳ್ಯ೦ದ ಕಾಸರಗೋಡಿ೦ಗೆ ಹೋಪ ದಾರಿಲಿ ಬೋವಿಕ್ಕಾನ ಸಿಕ್ಕುತ್ತು. ಅಲ್ಲಿ೦ದ ಸುಮಾರು ನಾಕು ಕಿಲೋ ಮೀಟರ್ ದೂರಲ್ಲಿ ‘ ಉಡುಪುಮೂಲೆ ‘ ಹೇಳುವ ಪ್ರದೇಶಲ್ಲಿ ಗಿರಿ ನಿವಾಸಲ್ಲಿ ಸದ್ಯ ಎನ್ನ ವಾಸ್ತವ್ಯ.ಇದಿಷ್ಟು ಮಾಹಿತಿ ಸಾಕನ್ನೆ. ಮತ್ತೆ ಕಾ೦ಬೊ; ನಮಸ್ತೇ..

  2. ಹ್ಹಹ್ಹಹ್ಹಾ.. ಮದುವೆಗೆ ಕೇಸೆಟ್ಟು ರೆಡಿ ಆತು, ಕೂಸು ಮಾ೦ತ್ರ ಸಿಕ್ಕಿರೆ ಆತು ಅಷ್ಟೆ.. 😉

  3. ಮಾವಾ°,
    ಕೇಸೆಟ್ಟು ಕೇಳುಲೆ ಮದುವೆ ಆಯೆಕೇ ಹೇಳಿ ಇದ್ದೋ?
    ಕೊಟ್ಟರೆ ಆನು ಈಗಳೇ ಕೇಳುವೆ.. 🙂 ಸುಮ್ಮನೇ ನಿಂಗಳ ಕಾಯಿಸುದೆಂತಕೆ ಹೇಳಿ 😉

  4. ರಸಮಯ ಪದ್ಯ೦ಗೊ.
    ಆ ಪದ್ಯ೦ಗಳ ಕೇಳಿದ ಹಳೆ ನೆನಪುಗೊ ಮತ್ತೆ ಬ೦ತು. ನಿ೦ಗಳ ಯೋಚನೆ-ಸ೦ಯೋಜನೆ ಅದ್ಭುತ ಮಾವ.

  5. ನಮ್ಮದು ಕೂಡ ಚೆನ್ನೈ ಭಾವನ ಪ್ರಶ್ನೆಯೇ, (ಅದಕ್ಕೆ ಅದರ copy ಮಾಡಿದ್ದು) ಛೇ.. ಅವಕಾಶ ತಪ್ಪಿತ್ತನ್ನೇ. ಹಳೇ ಮದುವೆ ಪತ್ರಿಕೆ ತೋರ್ಸಿರೆ ಸಿಕ್ಕುಗೋ..?!

  6. ಇದು ಒಳ್ಳೆದಾತು.
    ಎನ್ನ ಮಗನ ಮದುವೆಗೆ ಇನ್ನು ಸುಮಾರು ಸಮಯ ಇದ್ದು. ಬೈಲಿಲಿ ಕೆಲವು ಜೆನ ತಯಾರಾಯಿದವು. ಅವರ ಮದುವೆಗೆ ಕೊಡ್ಲೆ ಆತು.

  7. ಛೇ.. ಅವಕಾಶ ತಪ್ಪಿತ್ತನ್ನೇ. ಹಳೇ ಮದುವೆ ಪತ್ರಿಕೆ ತೋರ್ಸಿರೆ ಸಿಕ್ಕುಗೋ..?!

    ಪವನಜ ಮಾವನ ಒಳ್ಳೆ ಕಾರ್ಯಕ್ಕೆ ಅಭಿನಂದನೆ ಮತ್ತೆ ಶ್ಲಾಘನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×