Oppanna.com

ಕಾಲ ಬದಲಿತ್ತನ್ನೆ

ಬರದೋರು :   ಬಾಲಣ್ಣ    on   31/12/2012    11 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ಕಾಲಬದಲಿತ್ತನ್ನೆ 

ಪಚ್ಚೆ ಬಣ್ಣದ ಎಲೆಗೊ
ತುಂಬಿ ಹರಿವಾ ತೋಡು
ಈ ಮಣ್ಣು  ಈ ಕಲ್ಲು ಬೇಡದೋ ನವಗೆ ? |
ಈ ಗುಡ್ಡೆ  ಈ ನೀರು
ಈ ಗಾಳಿ ಈ ಚೆಂದ
ಎಂದೆಂದು ಹೀಂಗೆಯೇ ಇರೆಡದಾ ನವಗೆ? ||೧||

 ಕಾಡುಗಳ ಕಡುದಿಕ್ಕಿ
ನೀರೆಲ್ಲ ಬತ್ತುಸಿರೆ
ನಮ್ಮ ಮುಂದಾಣವರ  ಸಾಂಕಲೆಡಿಗಾ? |
ಒಣಕ್ಕು ಭೂಮಿಲಿ ಅವರ
ತಲೆ ಕಡುದ  ಹಾಂಗಕ್ಕು
ನಮ್ಮ ಮಕ್ಕಳ ಗತಿಯ ಕಾಂಬಲೆಡಿಗಾ? ||೨||

ಅಲ್ಲಿಂದ ಇಲ್ಲಿಂದ
ಎಲ್ಲಿಂದ ಹೇಳಿಲ್ಲೆ
ಬೊಬ್ಬೆ ವಾಸನೆ ಮತ್ತೆ ಚರಂಡಿ ನೀರು |
ಒಳ್ಳೆದೆಲ್ಲಾ ಹೋತು
ಇನ್ನು ಕಾಂಬಲೆ  ಕಷ್ಟ
ಇಪ್ಪ ಮರಂಗಳದ್ದೆಲ್ಲ  ಕಡುದ ಬೇರು ||೩||

ಕಾಕೆ ,ಗಿಳಿ ,ಗುಬ್ಬಚ್ಚಿ
ಎಷ್ಟು ಹಕ್ಕಿಗೋ ನಿತ್ಯ
ಚಿಲಿಪಿಲಿನೆ ಕೂಗುಗದ! ಉದಿಯಪ್ಪಗ |
ಮುಳಿ  ಕೆರಸುವಗ ಬಂದು
‘ಕೊಚ್ಚೆ ‘ ಹೆರ್ಕುಗು ಇರುಂಟು
ಬೆಳ್ಳಕ್ಕಿ  ಹಾರುಗದ ಕಸ್ತ್ಲಪ್ಪಗ ||೪||

 ದನವ ಮೇಯಲೆ  ಬಿಡುದು
ಈಗ ಭಾರೀ ಕಷ್ಟ !
ಗುಡ್ಡೆಂದ  ಕೊಂಡೋಗಿ ತಲೆಯ  ಕಡಿಗು |
ಕಾಲ ಬದಲಿತ್ತನ್ನೆ
ಬುದ್ದಿ ಎಂದಿಂಗೆ ಬಕ್ಕೊ?
ನಡು ದಾರಿಲೇ ನಿಂದು  ಕಳ್ಳು ಕುಡಿಗು ||೫||

ಈಗ ಬೀಸುವ ಗಾಳಿ
ತಂಪು ತಂಪಾಗಿಲ್ಲೆ
ಮದಕ್ಕಂಗಳಾ  ನೀರು ಬತ್ತಿಂಡಿದ್ದು |
ಪ್ರಕೃತಿ  ನಾಶವ ತಡವ
ಎಲ್ಲೊರುದೇ ಒಟ್ಟಾಗಿ
ಅದೇ ಆಶೆ ಎಲ್ಲೋರ ಮನಸ್ಸಿಲಿದ್ದು ||೬||

 ~~~***~~~

ರಚನೆ:   ಬಾಲ ಮಧುರಕಾನನ

ಶ್ರೀಶಣ್ಣನ ಸ್ವರಲ್ಲಿ ಇಲ್ಲಿ ಕೇಳಿಃ

11 thoughts on “ಕಾಲ ಬದಲಿತ್ತನ್ನೆ

  1. ಆಶಯ , ಧಾಟಿ ಎಲ್ಲವುದೆ ಭಾವಕ್ಕೆ ಲಾಯಕಕೆ ಹೊ೦ದಿಕೆ ಆಯ್ದು. ಪರಿಸರ ಪೂರ್ತಿ ಹಾಳಾಪ್ಪನ್ನ ಮದಲೆ ಜಾಗ್ರತೆ ವಹಿಸೆಕಾದ್ದು ನಮ್ಮ ಕರ್ತವ್ಯ. ಇ೦ದ್ರಾಣ ಪರಿಸ್ಥಿತಿಲಿ ಬಾಲಣ್ಣ ಹೇಳಿದ ಹಾ೦ಗೆ ಸಾಮೂಹಿಕವಾಗಿ ಪ್ರಯತ್ನ ಮಾಡಿರೆ ಮಾ೦ತ್ರ ಉಳುಶಲೆ ಸಾಧ್ಯ ಅಕ್ಕು.

  2. ಎರಡು ದಶಕ ಕಳುದರೂ ನವನವೀನವಾದ ಈ ಪದ್ಯದ ಸ೦ದೇಶ ಲಾಯ್ಕಿದ್ದು ಮಾವ.ಲಯಬದ್ಧವಾಗಿ ”ಶ್ಯಾನುಭೋಗರ ಮಗಳು”ಪದ್ಯದ ಧಾಟಿಯ ನೆನಪಿಸುವ ಹಾ೦ಗೆ ಶ್ರೀಶಣ್ಣ ಹಾಡಿದ್ದು ಮಧುರವಾಗಿದ್ದು.
    ಆಶಾವಾದವ ಒಳುಸುವ ಕವನ,ಧನ್ಯವಾದ ಇಬ್ರಿ೦ಗೂ.

    1. ಅದೇ. ಎನಗೆ ಪಕ್ಕನೆ” ಶ್ಯಾನುಭೋಗರ ಮಗಳ” ನೆಂಪಾತಿಲ್ಲೆ , ತಪ್ಪಿತ್ತು. ನಿಂಗೊ ಹೇಳಿದ್ದೇ ಸರಿ ಮುಳಿಯದಣ್ನ

  3. padya laikaidu hadiddu laikiddu
    kavitheya aashaya parisara nashava kadamme madekku tadeku allado
    jenara kannu teresali.

  4. ನಮಸ್ಕಾರಂಗೊ. ಪದ್ಯವ ಹಾಡಿದ ಶ್ರೀಶಣ್ನಂಗೆ , ಮತ್ತೆ ಒಪ್ಪ ಕೊಟ್ಟ ಎಲ್ಲೋರಿಂಗುದೆ .ಇದು ಆನು ಸುಮಾರು ೧೯೯೦ ರಲ್ಲಿ ಬರದ ಪದ್ಯ .ಪ್ರಕೃತಿ ನಾಶಕ್ಕೆ ನಮ್ಮ ದೇಶಲ್ಲಿ ಯಾವದೇ ನಿಯಂತ್ರಣ ಇದ್ದೋ ?ನಿತ್ಯ ಪತ್ರಿಕೆ ತೆಗೆದರೆ ಕಾಂಬದು ಎಂತರ ಸುದ್ದಿ ಮಾಧ್ಯಮಲ್ಲುದೆ ಅದೇ.ಇಪ್ಪ ವಸ್ತು ಸ್ತಿತಿ ಕವನ ರೂಪಲ್ಲಿ ಬೈಂದು

    ಶ್ರೀಶಣ್ನನ ಹಾಡಿನ ಧಾಟಿ “ಒಂದಿರುಳು ಕನಸಿನಲಿ ….” ಹಾಂಗೆ ಕೇಳುತ್ತು .ಲಾಯಕ್ಕಾಯಿದು.

  5. ಹೊಸ ವರ್ಷಕ್ಕೆ ಒಳ್ಳೆ ಆಶಯದ ಕವನ.
    ಬಾಲಣ್ಣಂಗೆ ಧನ್ಯವಾದಂಗೊ

  6. “ಅಲ್ಲಿಂದ ಇಲ್ಲಿಂದ
    ಎಲ್ಲಿಂದ ಹೇಳಿಲ್ಲೆ
    ಬೊಬ್ಬೆ ವಾಸನೆ ಮತ್ತೆ ಚರಂಡಿ ನೀರು |
    ಒಳ್ಳೆದೆಲ್ಲಾ ಹೋತು
    ಇನ್ನು ಕಾಂಬಲೆ ಕಷ್ಟ
    ಇಪ್ಪ ಮರಂಗಳದ್ದೆಲ್ಲ ಕಡುದ ಬೇರು ”
    ಊರಿಲ್ಲಿಪ್ಪವಕ್ಕೆ ಹೀ೦ಗೆ ತೋರಲೆ ಸುರು ಆದರೆ ನಿಜವಾಗಿಯೂ ಪರಿಸ್ಥಿತಿ ತು೦ಬ ಗ೦ಭೀರ, ಭಯಾನಕ. ಪರಿಸರ ರಕ್ಷಣೆ ನಮ್ಮ ಆದ್ಯತೆ ಆಯೆಕು ಹೇಳುವ ಆಶಯ ಕವನಲ್ಲಿ ಲಾಯಕಿಲ್ಲಿ ಮೂಡಿಬಯಿ೦ದು. ಅಭಿನ೦ದನೆ.

  7. ಕೆಟ್ಟ ಕಾಲ ಬಂದದರ ಸೊಗಸಾಗಿ ನಿರೂಪಣೆ ಮಾಡಿದ್ದವು ಬಾಲಣ್ಣ. ಪ್ರತಿಯೊಂದು ಸಾಲುದೆ ಮನಸ್ಸಿಂಗೆ ನಾಟುತ್ತ ಹಾಂಗಿದ್ದು. ಆಶಯ ಲಾಯಕಿದ್ದು. ಶ್ರೀಶಣ್ಣನ ಸ್ವರ ಈಗ ಸಿಕ್ಕುತ್ತಿಲ್ಲೆ, ನಾಳಂಗೆ ಕೇಳುವೊ, ತುಂಬಾ ಚೆಂದಕೆ ಬಂದಿಕ್ಕು ಖಂಡಿತಾ.

  8. ಗುಡ್ದೆ೦ದ ಬಿಡಿ,, ಉದಿ ಆಯಕ್ಕಾದರೆ,ಮಾರ್ಗ-ಬಸ್ಸಿನ ನಿಲ್ದಾಣ ಸುತ್ತಮುತ್ತ ಮನಿಕೊ೦ದಿಪ್ಪದರನ್ನೆ ,ಬಲಿಗಿ ಈಗ ಕಾಣದ್ದ ಹಾ೦ಗೆ ಮಾಡಿದ್ದವು ಹೇಳಿದರೆ,ಅಪ್ರಿಯ ಸತ್ಯ. ಇದು ಈಗ ವಿರಾಟಪರ್ವ ರೂಪವೆ ಆಯಿದಡ. ಹತ್ತು-ಹನ್ನೆರಡು ರೂಪದಾ೦ಟಿ,ನಾಳಣ ಹದಿಮೂರರಲ್ಲಿ ೧೩ ನೆ ಅವತಾರಿ ಆಗಿ ಅವನೆ ಬ೦ದ್ ಕೇಳಿದರೆ ಒ೦ದು ಕುಡ್ತೆ ಹಾಲು ನಾವು ಎಲ್ಲಿ೦ದ ಕೊಡುವುದು?.

  9. ಬಾಲಣ್ಣ., ಪ್ರತಿಯೊಂದು ಆಶಯವೂ ಪದ್ಯರೂಪಲ್ಲಿ ಲಾಯಕ ಮೂಡಿಬೈಂದು. ಪದ್ಯವೂ ಲಾಯಕ ಆಯ್ದು. ಮೆಚ್ಚುಗೆ.

    ಶ್ರೀಶಣ್ಣ ಹಾಡಿದ್ದೂ ಲಾಯಕ ಆಯ್ದು. ಇಬ್ರಿಂಗೂ ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×