Oppanna.com

ಕೊದಿಲ ಗೀಟು

ಬರದೋರು :   ದೇವಿಕುರ್ನಾಡು    on   16/12/2012    15 ಒಪ್ಪಂಗೊ

ದೇವಿಕುರ್ನಾಡು
Latest posts by ದೇವಿಕುರ್ನಾಡು (see all)

ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದುಹೇಳಿ ಮಾಷ್ಟ್ರಮಾವ0 ಕಲಿಶಿದ ಗಾದೆ ನಮ್ಮೋರಿಂಗೆ ಭಾರೀ ತಡವಾಗಿಯಾದರುದೇ,ಸರಿಯಾಗಿ ಅರ್ಥ ಆದಾಂಗಿದ್ದು. ಹಾಂಗಾಗಿ ಜೆಂಬ್ರಂಗಳಲ್ಲಿ ‘ಬಫೆ ಸಿಸ್ಟಮು’ ಹೇಳ್ತಬೋಜನ ಕ್ರಮಲ್ಲಿ ನಿಂದುಗೋಂಡೇ ಉಂಬದು.

ಊ…ದ್ದಕ್ಕೆ ಬೆಳದ ‘ಕ್ಯೂ’ವಿನ ಮಧ್ಯಲ್ಲಿ ಆರಾರು ಗುರ್ತದೋರು ಇದ್ದವಾ ಹುಡುಕ್ಕಿ, ಅವರ ಕಷ್ಟ ಸುಖ ವಿಚಾರ್ಸಿಗೋಂಡು ಅವರೊಟ್ಟಿಂಗೆ ಸಾಲಿಲಿ ನುರ್ಕಿತ್ತು. ಮುಂದಾಣ ಎಲ್ಲೋರು ಖಾಲಿ ಪ್ಲೇಟು ತೊಳದ ನೀರಿನ ಕಟಾರಲ್ಲೇ ಹಾಳೆ ಪ್ಲೇಟು ಅದ್ದಿತ್ತು. ಒಂದರಿ ಕುಡುಗಿಗೊಂಡು ಪ್ಲೇಟು ಒಡ್ಡಿ ಉಪ್ಪಿನಕಾಯಿ,ತಾಳ್ಳುಗ,ಮೆಣಸ್ಕಾಯಿ,ಕೋಸಂಬರಿ,ಅವಿಲು ಹೀಂಗಿಪ್ಪದರೆಲ್ಲಾ ಪ್ಲೇಟಿನ ನಾಲ್ಕು ಸುತ್ತಲೂ ಹಾಯ್ಕೊಂಡತ್ತು. ನಡೂಗೆ ಒಂದು ಕರೇಲಿ ಪಲಾವುದೇ; ಅದರ ಮೇಲೆ ಗೊಜ್ಜಿದೇ ಹಾಕಿಗೊಂಡತ್ತು. ನಡುಗಣ ಒಳುದ ಜಾಗೆಲಿ ಒಂದು ಸೌಟು ಅಶನವನ್ನೂ ತುಂಬುಸಿತ್ತು.ಅಶನದ ಒಂದು ಹೊಡೆಂಗೆ ಸಾರುದೇ, ಇನ್ನೊಂದು ಹೊಡೇಂಗೆ ಸಾಂಬಾರುದೇ ಹಾಕಿತ್ತು.

ಮೇಲಂಗೆ ಒಂದು ಹಪ್ಪಳ ಹಾಕಿಗೊಂಡು ಮುಂದೆ ಬಪ್ಪಗ ಪುಟ್ಟಭಾವ0 ಸಿಕ್ಕಿದ0. “ಎಂತಕ್ಕು ಭಾವ ಗವರ್ಮೆಂಟು? ಬೀಳುಗಾ? “ಹೇಳಿ ಉಂಬಲೆ ಸುರು ಮಾಡಿತ್ತು. ಅದಲ್ಲಿತ್ತ ಬೇಡದ್ದ ಬೇನ್ಸೊಪ್ಪು, ಹಸಿಮೆಣಸಿನ ನೆಲಕ್ಕೆ ಇಡ್ಕಿತ್ತು. ಉಂಡುಗೋಂಡು ಇಪ್ಪಗ ಶಾಲು ಹೆಗಲಿಂದ ಜಾರಿತ್ತು. ಒಂದು ಕೈಲಿ ಸರಿ ಮಾಡ್ಲೆ ಹೋಪಗ ಸಾರು ನೆಲಕ್ಕೆ ಅರುತ್ತು. ಛೇ.ಸಾರ ಇಲ್ಲೆಪ್ಪಾ” ಹೇಳಿ ಭಾವ0 ಹೇಳಿದ0. ಮತ್ತೆ ಒಳುದ್ದರ ಎಲ್ಲ ಉಂಡು ಮುಗಿಶಿತ್ತು.

ಖಾಲಿ ಆದ ತಟ್ಟೆಗೆ ಒಂದು ಸೌಟು ಪಾಯಸವುದೇ ಅದರ ಮೇಲಂಗೆ ಹೋಳಿಗೆದೇ ಹಾಕಿದವು. ಅರ್ದ ಸಾಕು ಹೇಳಿ ಕೈ ಅಡ್ಡ ಹಿಡಿವಗ ಅದರ ಮೇಲಂಗೆ ತುಪ್ಪ ಹಾಕಿದ್ದು ಗೊಂತೇ ಆಯ್ದಿಲ್ಲೆ. ತುಪ್ಪ ಆಗ; ಇರ್ಲಿ ತೊಂದರೆ ಇಲ್ಲೆ; ಕಾಯಿಹಾಲು ಹಾಕಿ ” ಹೇಳಿ ರಜ ಮಿಕ್ಶರ್ ಹಾಯ್ಕೊಂಡಪ್ಪಗ, ಪದವಿನ ಅತ್ತಿಗೆ ಸಿಕ್ಕಿತ್ತು. ಅದರತ್ತರೆ, “ಶುಗರ್ ಕಂಡಾಬಟ್ಟೆ ಇದ್ದು ಅತ್ತಿಗೆ. 240; ಕಂಟ್ರೋಲಿಂಗೇ ಬತ್ತಿಲ್ಲೆ” ಹೇಳಿಗೊಂಡು ತಿಂದು ಮುಗಿಶಿತ್ತು.

ಪುನಾ ಒಂದು ಸೌಟು ಅಶನ ಹಾಯಿಕ್ಕೊಂಡು ಪಾಲು ಮಾಡಿ, ‘ಪ್ರಾಚೀನ ಕರ್ಮವದು ಬಿಡಲರಿಯದು ಹೇಳಿ ಅರ್ದಕ್ಕೆ ಮೇಲಾರದೇ; ಇನ್ನರ್ದಕ್ಕೆ ಮಜ್ಜಿಗೆದೇ ಹಾಕಿ ಉಂಬಲೆ ಸುರು ಮಾಡಿತ್ತು. ದೂರಲ್ಲಿ ಉಂಡುಗೊಂಡಿತ್ತ ಮುದ್ದಣ್ಣಪ್ಪಚ್ಚಿ ಬಲದ ಕೈನೆಗ್ಗಿ ದಿನಿಗೇಳಿದ0. ಅವನತ್ತರೆ ಮಾತಾಡಿಗೊಂಡು “ಈಗಾಣವಕ್ಕೆ ನಮ್ಮ ಸಂಸ್ಕೃತಿ,ಪರಂಪರೆಯ ಬಗ್ಗೆ ಎಂತದೂ ಗೊಂತಿಲ್ಲೆ” ಹಾಂಗೆ ಹೀಂಗೆ ಹೇಳಿ, ಒಳುದ ಮಜ್ಜಿಗೆಯ ಬುರೂನೆ ಕುಡ್ಕೋಂಡು, ತಟ್ಟೆಯ ಬಟ್ಟಿಂದ ಹೆರ ಇಡ್ಕಿ, ಕೈ ತೊಳದು, ಅಲ್ಲಿಂದಲೇ ಬೈಕು ಸ್ಟಾರ್ಟು ಮಾಡಿ ಆಫೀಸಿಂಗೆ ಹೋತು.

ಹೊತ್ತೋಪಗ ಮನೆಗೆ ಬಂದಪ್ಪಗ ಹೆಂಡತ್ತಿ ಕೇಳಿತ್ತು “ಇದೆಂತರ ನಿಂಗಳ ಅಂಗಿಯ ಬೆನ್ನಿಲಿ ಕೊದಿಲಿನ ಗೀಟು?”!

ಇದು ಎಂಥಾ ಊಟವಯ್ಯಾ !” ಎಂತ ಹೇಳ್ತಿ ಬೈಲಿನೋರು?

15 thoughts on “ಕೊದಿಲ ಗೀಟು

  1. ಕೈ ನೀರು ತೆಗತ್ತ ಕ್ರಮದೇ ಮರತ್ತು ಹೋವ್ತು ಅಲ್ಲದ ಕುರ್ನಾಡು ಭಾವ…………..

  2. ಬೆಲ್ಲದ ಪಾಕಲ್ಲಿ ಅದ್ದಿದ ಬಡಿಗೆಲಿ ನೆಗೆ ಮಾಡೆ೦ಡು ಪೆಟ್ಟು ಕೊಟ್ಟಾ೦ಗಾಯ್ದು ಭಾವ….

    1. ಇದು ಮುಳ್ಳಯ್ಯನ ಗಿರಿಗೆ ಬ೦ದ ಜೀಕೆ ಅಣ್ಣನೆಯೋ??? ಅಥವಾ ಬೇರೆ ಆರಾರೋ?

      1. ಅದೆನ್ಸು ಮಾರಾಯ ನಿನಗೆ ಹಾ೦ಗೊ೦ದು ಸಮ್ಶಯ ತೊರಿದ್ಸು. ಇದು ನಾವೆ

  3. “ಒಪ್ಪು”ಸಿದ ಒಪ್ಪಣ್ಣಂದ್ರಿಂಗೆ ಒಪ್ಪಂಗ

  4. ಕುರ್ನಾಡು ಭಾವಯ್ಯ ಬಫೆಲಿ ಅಪ್ಪ ವಿಚಾರವ ಸೊಗಸಾಗಿ ವಿವರಿಸಿದ್ದಕ್ಕೆ ಧನ್ಯವಾದ..ನಮ್ಮ ಬೈಲಿಲಿ ಹೀಂಗೆ ಅಪ್ಪದು ಬೇಡ ಆದರೂ ಪರಿಸ್ಥಿತಿ ಹಾಂಗೇ ಇದ್ದು ಮಾದಡದ್ದೆ ಉಪಾಯ ಇಲ್ಲೆ..ಆಫೀಸಿಗೆ ಹೋಪಲೆ ಅರ್ಗೆಂಟಾಗ್ತು..

  5. ನಾಡ್ತಿಂಗೆ ಊರಿಂಗೆ ಹೋಗಿಪ್ಪಗ ಒಂದೆರಡು ಜೆಂಬ್ರದ ಊಟ ಹೊಡವ ಹೇಳಿ ಆಲೋಚನೆ ಇತ್ತು. ಛೆ, ಬೈಪ್ಪಣೆಲಿ ಹೇಂಗಪ್ಪ ಇನ್ನು ಉಂಬದು..?

  6. ಬಫೆ ಊಟದ ಫಜೀತಿಯ ನೈಜ ಚಿತ್ರಣ, ಲಾಯಿಕ ಆಯಿದು.
    ಹೀಂಗಿಪ್ಪ ಅನುಭವ ಎಲ್ಲರಿಂಗೂ ಆಗಿಕ್ಕು.

  7. ಬಫೆಲಿ ಉಂಡವರ ಮಂಡಗೆ ತಟ್ಟೆಲೇ ಬಡುದ ಹಾಂಗಿತ್ತು ಲೇಖನ. ಕುರ್ನಾಡು ಭಾವನ ಖಡಕ್ ಮಾತುಗೊ ತುಂಬಾ ಕೊಶಿ ಕೊಟ್ಟತ್ತು. ಬೆನ್ನಿಲ್ಲಿ ಕೊದಿಲ ಕಲೆ, ಬೇರೆ ತಟ್ಟೆಯವನ ವರ ಪ್ರಸಾದ ಆದ್ದಯ್ಕು, ನೈಜತೆಯ ಸೊಗಸಾಗಿ ಚಿತ್ರಣ ಕೊಟ್ಟಿದ ಧನ್ಯವಾದಂಗೊ.

  8. ಊಟಕ್ಕೆ ಹೋದ್ದೋ – ಉಂಬಲೆ ಹೋದ್ದೋ ಹೇಳಿ ಕೇಳಿದಾಂಗೆ ಆತು. ಸುದ್ದಿಲಿ ಸ್ವಾರಸ್ಯವೂ ಸೇರಿ ಹಾಳಿತಕ್ಕೆ ಲಾಯಕ ಆಯ್ದು ಭಾವ.

  9. ‘ಬೈಪ್ಪಣೆ’ಊಟದ ಪೇಚಾಟವ ನಮ್ಮ ಕುರ್ನಾಡು ಭಾವ ಚೊಕ್ಕಕೆ ವರ್ಣಿಸಿದ್ದ°. (ಸಾರ)ರಸ ಭರಿತ ಊಟ.
    ಇನ್ನೂ ಬರಳಿ ಭಾವ.

  10. ಕಾಲಿಲಿ ಬೂಟು,ಮೇಲೆ ಕೊದಿ(ಲ)ಯ ಗೀಟು,

    ಅಹೋ ,

    ದಕ್ಕಿತ್ತೋ —ದಿಕ್ಕು ತಪ್ಪಿತ್ತೋ?.

    ಬೋಜ(ರಾಜ)ನ ತನ್ಮಯತೆ ,ವಾಹ್.

  11. ವಾಹ್ ವಾಹ್!! ಸೂಪರ್!!
    ಒಳ್ಳೇ ಕಡ್ಪದ ಗೆಣಮೆಣಸಿನ ಕಷಾಯ ಕುಡುದ ಹಾ೦ಗೆ ಆತು. ಪ್ರತಿ ಸಾಲಿನ ಪ್ರತಿಯೊ೦ದು ಶಬ್ದವೂ ಬಹಳ ಅಳತೆ ಮಾಡಿ, ತೂಗಿ ನೋಡಿ ಉಪಯೋಗಿಸಿದ್ದದು, ಹೇಳೆಕಾದ ವಿಷಯವ ಇಷ್ಟು ಲಾಯಿಕ್ಕಲ್ಲಿ, ಸ೦ಕ್ಷಿಪ್ತವಾಗಿ, ಶಕ್ತವಾಗಿ ಹೇಳಿದ ರೀತಿ ಅಮೋಘ.
    ಒಪ್ಪ೦ಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×