Oppanna.com

ಪ್ರಸ್ತುತಾ ದೀರ್ಘಮಧ್ವಾನಂ ಯೂಯಮ್ ಕಿಮವಸೀದತಾ??

ಬರದೋರು :   ಒಪ್ಪಣ್ಣ    on   05/06/2009    16 ಒಪ್ಪಂಗೊ

ಶಂಬಜ್ಜನ ತಿತಿ ಓ ಮೊನ್ನೆ.
ಹತ್ತರಾಣ ನೆರೆಕರೆ! ಹೋಗದ್ದೆ ನಿವೃತ್ತಿ ಇಲ್ಲೆ. ಸುರುವಿಂಗೆ ಅಪ್ಪ ಹೋದವು ಮನೆಂದ. ಮತ್ತೆ ಅಜ್ಜಕಾನ ಬಾವ ಬಂದ° ಇದಾ, ಬೈಲಿಲಿ ನೆಡಕ್ಕೊಂಡು ಎಂಗಳಲ್ಲಿಗೆ. ಅವನ ಒಟ್ಟಿಂಗೆ ಮಾತಾಡಿಯೊಂಡು ಹೋದ ಒಪ್ಪಣ್ಣಂದೇ ಅಲ್ಲಿಗೇ ಎತ್ತಿದ°! ನೆರೆಕರೆ ಆದ ಕಾರಣ ಎಂತ ಬಂದದು ಹೇಳಿ ಕೇಳವು ನಿಘಂಟು.
🙂

ಹನ್ನೆರಡು ಕಳುದ ಮತ್ತೆ ಎಣ್ಣೆ ಕೊಟ್ಟವು ರಂಗಮಾವ. ತರವಾಡು ಮನೆಲಿ ತಿತಿ ಹೇಳಿರೆ ಮದಲಿಂಗೇ ಹಾಂಗೇ, ಎರಡ್ನೇ ಹಂತಿ ಉಂಡಿಕ್ಕಿ ಸೂಟೆ ಕಟ್ಟಿಗೊಂಡು ಹೋಕಡ – ಒಪ್ಪಣ್ಣನ ಅಜ್ಜ ಹೇಳುಗು. ಅಷ್ಟುದೇ ತಡವು ಹೇಳಿ. ಅದಕ್ಕೆ ಸರೀಯಾಗಿ ಬಕ್ಕು ಎಲ್ಲೊರು ಅಲ್ಲಿಗೆ. ಮದಲಿಂಗೇ ನೆಡಕ್ಕೊಂಡು ಬಂದ ಕ್ರಮ ಅದು.
ಈಗಂತೂ ಒಂದು ವಾರ ಮದಲೇ ಪಿಡಿ ಎಲ್ಲ ತಯಾರು ಮಾಡಿ ಮಡಗ್ಗು ರಂಗಮಾವ.ಮದ್ಯಾನ್ನವೇ ಸುರು ಅಕ್ಕು ಇಸ್ಪೇಟು. ಒಪ್ಪಣ್ಣಂಗೆ ಆಟ ಆಡ್ಲೆ ತುಂಬ ಗೊಂತಾಗ, ನೋಡುಲೆ ಅರಡಿಗು ಇದಾ.

ಹದಿನಾಲ್ಕನೆದೋ-ಹದಿನೈದನೆದೋ ತಿತಿ ಆದ ಕಾರಣ ಕೂಗುವೋರು ಆರೂ ಇತ್ತಿದ್ದವಿಲ್ಲೆ 😐. ಲೋಕಾಬಿರಾಮ ಎಲ್ಲ ಮಾತಾಡಿಗೊಂಡು ಗಲಗಲ ಆಯ್ಕೊಂಡು ಇತ್ತು.

ಅಜ್ಜಕಾನ ಬಾವ ಪೇಪರು ಓದಿ ಮಡುಸಿ ಮಡಗಿದ್ದ°. ಸೆಕೆಗೆ ಬೀಸಾಳೆಲಿ ಗಾಳಿ ಹಾಯ್ಕೊಂಡು ಇದ್ದ°.
ಆಚಕರೆ ಮಾಣಿ ಪಿಸುರಿಲಿ ಉಗುರು ಕಚ್ಚಿಯೊಂಡು ಕೂಯಿದ° – ಪುಟ್ಟಕ್ಕನ ಬಾಯಿಗೆ ಕೋಲು ಹಾಕಿ ಎಂತದೋ ಪರಂಚಿಸಿಯೊಂಡಿದ°, ಪಾಪ.
ಗುಣಾಜೆ ಮಾಣಿ ಒಳ್ಳೆತ ಟೆನ್ಷನಿಲಿ ಇತ್ತಿದ್ದ°. ಪೇಪರು ಇನ್ನೂ ಓದಿ ಮುಗುದ್ದಿಲ್ಲೆ, ಅವ° ಹಾಕಿದ ಲೆಕ್ಕಂದ ಸುಳ್ಯ ಹೊಡೆಲಿ ನೂರಇಪ್ಪತ್ತೆಂಟು ವೋಟು ನಳಿನಿಂಗೆ ಜಾಸ್ತಿ ಬಯಿಂದಡ. ಅದು ಹೇಂಗೆ ಹೇಳಿ ಗೊಂತಾಗದ್ದೆ ತಲೆ ತೊರುಸಿಗೊಂಡು ಇತ್ತಿದ್ದ°.
ಎನಗಪ್ಪದು, ಆಚಕರೆ ಮಾಣಿಯ ಉಗುರು ಕಚ್ಚುದು, ಗುಣಾಜೆ ಮಾಣಿಯ ತಲೆ ತೊರುಸುದು, ಎರಡೂ ಅಬ್ಯಾಸ ಒಬ್ಬಂಗೇ ಇದ್ದಿದ್ದರೆ ಎಷ್ಟು ಹೇಸಿಗೆ, ಅಲ್ದಾ? ಎಬೆಕ್ಕ್-ಲೆ.. 🙂

ಹೀಂಗೆ ಅರ್ದ ಗಂಟೆ ಕಳಾತು, ಮಂತ್ರ ಇನ್ನೂ ಮುಗುದ್ದಿಲ್ಲೆ…
ತಿತಿ ಮುಗಿವ ಹೊತ್ತಾತು. ಹೊಟ್ಟೆಲಿಪ್ಪ ಹುಳು ಪೂರ ಸತ್ತಾತು ಹೇಳಿದ° ಈಚಕರೆ ಪುಟ್ಟ°.
🙂
ಕ್ಷಣುವಿಂಗೆ (ಪರಾದಿನಕ್ಕೆ) ಕೂದ ಹರಿಮಾವಂಗೆ ಗೆಂಟು ಬೇನೆ ಸುರು ಆತೋ ಏನೋ, ಪಾಪ..!
ಒಳ ಬಟ್ಟಮಾವ° ಮಂತ್ರ ಹೇಳುದು ಕೇಳಿತ್ತು.
…..ಪ್ರಸ್ತುತಾ ದೀರ್ಘಮಧ್ವಾನಂ ಯೂಯಮ್ ಕಿಮವಸೀದತಾ ||

ಈ ಹಶು ಹೊಟ್ಟೆಲಿ ಮಂತ್ರ ಹೇಳ್ತವಲ್ದ, ಆರಿಂಗೆ ಅರ್ತ ಆವುತ್ತು ಬೇಕನ್ನೇ? ಹೇಳಿ ನೆಗೆ ಮಾಡಿದ° ಅಜ್ಜಕಾನ ಬಾವ°.
ಮಾಷ್ಟ್ರು ಮಾವ° ಬಂದಿತ್ತಿದ್ದವಲ್ದ ತಿತಿಗೆ, ಅಜ್ಜಕಾನ ಬಾವನಿಂದಲೇ ಅತ್ಲಾಗಿ ಎಲೆ ತಿಂದುಗೊಂಡು ಕೂದಿತ್ತಿದ್ದವು. ಅವಕ್ಕೆ ಮಂತ್ರಂಗಳದ್ದು, ಶ್ಲೋಕದ್ದು ಎಲ್ಲ ಅರ್ತ ಗೊಂತಿಕ್ಕು. ಸಂಸ್ಕೃತ, ಜ್ಯೋತಿಷ್ಯ ಎಲ್ಲ ಬಕ್ಕು. ಹಾಂಗೇಳಿ ಅವೆಂತ ಸಂಸ್ಕೃತ ಮಾಷ್ಟ್ರಲ್ಲ, ಬೇರೆಂತದೋ. ಆದರೆ ಅವರ ಅಪ್ಪ ವಿದ್ವಾಂಸರಡ ಮದಲಿಂಗೆ, ಹಾಂಗೆ ನೆತ್ತರಿಲಿ ಬಂದದು- ಹೇಳಿ ಹೇಳುಗು ಕೆಲವು ಜೆನ. ನೆತ್ತರಿಲಿ ಬಪ್ಪದು ಸಕ್ಕರೆ ಕಾಯಿಲೆ ಮಾಂತ್ರ ಹೇಳಿ ಇನ್ನು ಕೆಲವರ ವಾದ. ಅದಿರಳಿ. ಅವರ ಹತ್ತರೆ ಕೇಳಿದೆ – ಎಂತರ ಈ ಮಂತ್ರದ ಅರ್ತ ಅಂಬಗ? ಹೇಳಿ. ಬಟ್ಟಮಾವಂಗೆ ಗೊಂತಿಲ್ಲದ್ದ ಕೆಲವೂ ಅವಕ್ಕೆ ಗೊಂತಿಕ್ಕು. ಅವಕ್ಕೆ ಒಂದು ಮಂತ್ರ ಬತ್ತು ಹೇಳಿ ಆದರೆ ಅದರ ಅರ್ತ ಗೊಂತಿದ್ದು – ಖಂಡಿತ. ಕೇಳಿರೆ ಮಾಂತ್ರ ಹೇಳುಗಷ್ಟೇ. ಅವು ವಿವರುಸಿದವು.

ತಿತಿಲಿ ಅಕೆರಿಗೆ ಬತ್ತ ಒಂದು ಕಥೆ ಆಡ ಅದು.
ಗುರುಕುಲಲ್ಲಿ ಇದ್ದ ೭ ಜನ ಮಕ್ಕೋ ಗುರುಗೊಕ್ಕೆ ಅರಾಡಿಯದ್ದೆ (ಗೊಂತಾಗದ್ದ ಹಾಂಗೆ) ಒಂದು ಎತ್ತಿನ ಕೊಂದು ತಿಂದವಡ. ತಿಂಬ ಮೊದಲು ‘ಇದು ನಮ್ಮ ಪಿತೃಗೊಕ್ಕೆ’ ಹೇಳಿ ಒಂದು ತುಂಡು ತೆಗದು ಮಡಗಿತ್ತಿದ್ದವಡ. ಗುರುಗೊಕ್ಕೆ ಅವು ಮಾಡಿದ ತಪ್ಪು ಗೊಂತಾಗಿ ಶಾಪ ಕೊಟ್ಟವಡ. ಅದರಿಂದಾಗಿ ಬೇರೆ ಬೇರೆ ದಿಕ್ಕೆ ಬೇರೆ ಬೇರೆ ಜನ್ಮಲ್ಲಿ ಹುಟ್ಟಿ ಬಂದವಡ. ಅಕೆರಿಗೆ ೫ ಜೆನ ಒಂದು ರಾಜ್ಯಲ್ಲಿ ವೇದಪಾರಕ ಬ್ರಾಮ್ಮರಾಗಿ ಹುಟ್ಟಿದವಡ. ಮಂತ್ರ ಎಲ್ಲ ಕಲ್ತ ಮತ್ತೆ ‘ಎಂಗೊ ಮೋಕ್ಷಕ್ಕೆ ಹೊವುತ್ತೆಯೊ°’ ಹೇಳಿ ಅವರವರ ಮನೆಲಿ ಹೇಳಿದವಡ. ಎಂಗೊಗೆ ಗತಿ ಎಂತರ ಹೇಳಿ ಅಪ್ಪಮ್ಮ ಕೇಳಿ ಅಪ್ಪಗ, ಒಂದು ಶ್ಲೋಕ ಬರದು ಕೊಟ್ಟವಡ:

ಸಪ್ತವ್ಯಾಧಾ ದಶಾರ್ಣೇಶು ಮೃಗಾಃ ಕಾಲಾಂಜನಾಗಿರೌ |
(ನಾವು ಏಳು ಜೆನ – ದಶಾರ್ಣ ಹೇಳ್ತಲ್ಲಿ ಬೇಡಂಗೊ ಆಗಿಯೂ, ಕಾಲಾಂಜನಾ ಹೇಳ್ತ ಪರ್ವತಲ್ಲಿ ಜಿಂಕೆಗೊ ಆಗಿಯೂ, )
ಚಕ್ರವಾಕಾ ಶರದ್ವೀಪೇ ಹಂಸಾ ಸರಸಿ ಮಾನಸಿ ||
(ಶರದ್ವೀಪಲ್ಲಿ ಚಕ್ರವಾಕ ಪಕ್ಷಿಗೊ ಆಗಿಯೂ,  ಮಾನಸ ಸರೋವರಲ್ಲಿ ಹಂಸಂಗೊ ಆಗಿಯೂ  )
ಯೇಸ್ಮಿನ್ ಜಾತಾ ಕುರು ಕ್ಷೇತ್ರೇ ಬ್ರಾಹ್ಮಣಾ ವೇದ ಪಾರಕಾಃ|
(ಹುಟ್ಟಿತ್ತಿದ್ದೆಯೊ°. ಪ್ರಸ್ತುತ ಎಂಗೊ ಐದು ಜೆನ ಕುರುಕ್ಷೇತ್ರಲ್ಲಿ ವೇದಪಾರಕರಾಗಿ ಇದ್ದೆಯೊ°.)
ಪ್ರಸ್ತುತಾ ದೀರ್ಘಮಧ್ವಾನಂ ಯೂಯಮ್ ಕಿಮವಸೀದತಾ ||
(ಈಗ ಒಂದು ದೀರ್ಘವಾದ ಪ್ರಯಾಣಲ್ಲಿ ಹೆರಟಿದೆಯೊ°, ನಿಂಗೊ ಎಂತ ಮಾಡ್ತಿ?)

ಈ ಮೇಗಾಣ ಶ್ಲೋಕ ಬರದು (ಶ್ಲೋಕ ಮಾಂತ್ರ, ಅರ್ತ ಬರದ್ದವಿಲ್ಲೆ ಆತಾ.. 🙂 ) – ಇದರ ರಾಜ-ಮಂತ್ರಿಗೆ ತೋರುಸಿ, ಹೇಳಿ.
ಈ ಮೊದಲು ಎಲ್ಲೆಲ್ಲಿ ಎಂತೆಂತ ಆಗಿ ಹುಟ್ಟಿದ್ದೆಯೋ° ಹೇಳಿ ಬರದ ಆ ಶ್ಲೋಕದ ಕೊನೆಗೆ ‘ಎಂಗೊ ಈಗ ದೀರ್ಘವಾದ ಪ್ರಯಾಣಲ್ಲಿ ಹೊವುತ್ತಾ ಇದ್ದೆಯೋ°, ನಿಂಗೊ ಎಂತ ಮಾಡ್ತಿ- ಹೇಳಿ ಆ ರಾಜ-ಮಂತ್ರಿಗೆ ಒಂದು ಪ್ರಶ್ನೆ ಇತ್ತಡ .ಅದರ ಓದಿ ಅಪ್ಪಗ ಅವಕ್ಕೆ ನೆಂಪಾತು, ನಾವುದೇ ಅವರ ಒಟ್ಟಿಂಗೆ ಇತ್ತು ಹೇಳುದು. ಈ ಏಳು ಸಂಸಾರದ ಭವಿಷ್ಯವ ಭದ್ರ ಪಡುಸಿಕ್ಕಿ ಅವುದೆ ಇವರೊಟ್ಟಿಂಗೆ ಬಂದು ಸೇರುತ್ತವು, ಮೋಕ್ಷದ ದಾರಿಲಿ ನೆಡವಲೆ ಮತ್ತೆ ಒಟ್ಟು ಸೇರುತ್ತವು. ಅಂದು ಎತ್ತಿನ ತಿಂಬಗ ಅವರ ಪಿತೃಗೊಕ್ಕೆ ಮಡಗಿದ ಕಾರಣ ಪೂರ್ವಜನ್ಮದ ನೆಂಪು ಅವಕ್ಕಿತ್ತು’. ಹೇಳಿ ಹೇಳಿದವು.

ನಮ್ಮೊರ ಕಲ್ಪನೆ ಎಷ್ಟು ಚೆಂದ!
ಜನ್ಮ, ಮರುಜನ್ಮ, ಮತ್ತಾಣ ಜನ್ಮ, ಪಾತಾಳ, ದೇವಲೋಕ ಮೋಕ್ಷ… ಅಂತೂ ಈ ಲೋಕಲ್ಲಿಪ್ಪಗ ಮನುಷ್ಯ ಹೇಂಗೆ ಸಕ್ರಿಯನೋ, ಜೀವನ ಆದ ಮತ್ತೆಯೂ ಹಾಂಗೇ. ಮನುಷ್ಯನ ಭಾವನೆಯ ಹಾಂಗೆ ಅವನ ಆತ್ಮವೂ ನಿತ್ಯ ಚರ. ನಿಂದ ನೀರಿನ ಹಾಂಗೆ ಅಪ್ಪಲಿಲ್ಲೆ. ಈ ಜೀವನ ಮುಗುದ ಮತ್ತೆ ಇನ್ನೊಂದು ಇದ್ದು, ಅದರಿಂದ ಮತ್ತೆ ಮತ್ತೊಂದು ಸರ್ತಿ- ಮೋಕ್ಷದ ಒರೆಂಗೂ. ಹಾಂಗಾಗಿ ಈ ಸರ್ತಿ ಪುಣ್ಯ ಮಾಡಿರೆ ಇನ್ನಾಣದ್ದು ಸುಲಾಬ ಇರ್ತು. ಮೋಕ್ಷಕ್ಕೆ ಹತ್ತರೆ ಆವುತ್ತು… ಹೀಂಗೆ.
ನಾವೆಲ್ಲರೂ ಒಂದು ದೀರ್ಘ ಪ್ರಯಾಣಲ್ಲಿ ಇದ್ದು, ನಮ್ಮ ಮನುಷ್ಯ ಜನ್ಮದ ಜೀವಿತಾವಧಿ ಹೇಳಿರೆ ಸೌರವ್ಯೂಹದ ಆಯುಸ್ಸಿನ ಒಂದು ತೃಣವೂ ಅಲ್ಲ, ಇಪ್ಪಷ್ಟು ದಿನ ಮರಿಯಾದಿಲಿ, ಚೆಂದಕ್ಕೆ ಬದುಕ್ಕೆಕ್ಕು, ಇನ್ನಾಣ ಜನ್ಮವೂ ಅನುಕೂಲಕರ ಇರೆಕ್ಕು ಹೇಳಿ ಜನ ಈ ಜನ್ಮಲ್ಲಿ ಧರ್ಮದ ದಾರಿಲಿ ನೆಡೆತ್ತವು.

ಈ ಪುರ್ಬುಗೊ-ಮಾಪಳೆಗೊ ಎಲ್ಲ ಪುನರ್ಜನ್ಮ ನಂಬುತ್ತವಿಲ್ಲೆ ಇದಾ.
ಇಲ್ಲಿಂದ ಸತ್ತ ಮತ್ತೆ ಸೀದಾ ಹೋಗಿ ನರಕಲ್ಲಿ ನಿಂಬದಡ- ಸಾಲುಕಟ್ಟಿ, ಸೊಸೈಟಿಲಿ (ಸ್ಟೋರಿಲಿ) ಚಿಮ್ಣೆಣ್ಣೆಗೆ ನಿಲ್ಲುತ್ತ ಹಾಂಗೆ. ಅವರ ದೇವರು ಒಂದು ದಿನ ಬಂದು ತೀರ್ಪು ಕೊಡುದಡ, ಪುರುಸೋತ್ತಿಲಿ. ‘ನಿನ್ನದು ಇಷ್ಟು ಪಾಪ, ನಿನ್ನದು ಇದು ತಪ್ಪು, ಇದು ಸರಿ, ನಿನಗೆ ಸ್ವರ್ಗ, ನಿನಗೆ ನರಕ- ಹೇಳಿ. ಅಲ್ದೋ ಹೇಳಿ ಕೇಳಿದೆ. “ಹ್ಮ್, Dooms Day/ Judgement Day ಹೇಳಿ ಹೆಸರು ಆ ದಿನಕ್ಕೆ”- ಹೇಳಿದವು ಮಾಷ್ಟ್ರು ಮಾವ°.
ಈಚಕರೆ ಪುಟ್ಟ ಹೇಳಿದ, ‘ಹಟ್ಟಿ ಮಾಡಿಂಗೆ ಮುಳಿ ಒಂದು ಹಾಕು ಮಾರಾಯ’ ಹೇಳಿ ದೂಜ ಪುರ್ಬುವಿನ ಹತ್ತರೆ Replica Watches Uk ಹೇಳಿರೆ ಒಂದು ತಿಂಗಳಾದರೂ ಬತ್ತಿಲ್ಲೆ.  ಇನ್ನು ಅವರ ದೇವರಿಂಗೆ ಯೇವತ್ತು ಪುರುಸೋತ್ತಾವುತ್ತೋ!  ಹೇಳಿ.
ದೇವರ ತೀರ್ಪಿಲಿ ೭೨ ಕನ್ಯೆಗೊ ಇಪ್ಪ ಸ್ವರ್ಗ ಜೀವನ ಪ್ರಾಪ್ತಿ ಆಯೆಕ್ಕು ಹೇಳಿ ಆರಾರ ಕೊಂದುಗೊಂಡು, ಜಿಹಾದಿ, ಮಣ್ಣು ಮಸಿ ಹೇಳಿ ಎಂತಕೆ ಮೋಕ್ಷಕ್ಕೆ ದೂರ ಅಪ್ಪದು? ಧರ್ಮಕ್ಕೆ ಎಂತಕೆ (ಕೆಟ್ಟ) ಹೆಸರು ತಪ್ಪದು?

ನಿಂಗಳ ದೀರ್ಘ ಪ್ರಯಾಣಲ್ಲಿ, ಈ ಜನ್ಮಲ್ಲಿ ಎಂತ ಮಾಡಿಗೊಂಡಿದ್ದಿ?  ಮೋಕ್ಷಕ್ಕೆ ಹತ್ತರೆ ಆವುತ್ತಾ ಇದ್ದಿರನ್ನೆ!

 

ಅಂತೂ ಹೊತ್ತೋಪಗ ಬಾಳೆ ಹಾಕಿದವು, ಎಂಗೊ ಎಲ್ಲ ಉಂಡಿಕ್ಕಿ ಹೆರಟೆಯೊ°, ಗುಣಾಜೆ ಮಾಣಿಗೆ ಟೆನ್ಷನ್ ಮುಗುದ್ದೇ ಇಲ್ಲೆ. ಬಪ್ಪ ಜನ್ಮಲ್ಲಿ ಕಮ್ಮಿ ಅಕ್ಕೋ ಏನೋ.

ಒಂದೊಪ್ಪ: ನಮ್ಮ ಅಜ್ಜಂದ್ರ ಕೆಲವೆಲ್ಲ ಸಾಂಘಿಕ ಆಲೋಚನೆಗೊ ಅಂದಿಂಗೂ, ಇಂದಿಂಗೂ, ಎಂದೆಂದಿಂಗೂ ಪ್ರಸ್ತುತ, ಅಲ್ದೋ?

16 thoughts on “ಪ್ರಸ್ತುತಾ ದೀರ್ಘಮಧ್ವಾನಂ ಯೂಯಮ್ ಕಿಮವಸೀದತಾ??

  1. ಸಾಮಾನ್ಯವಾಗಿ ಎಲ್ಲೊರು ತಿತಿಗೊ, ಪೂಜೆಗೋ ಹೋದರೆ ಲಾಯ್ಕಲ್ಲಿ ಪಟ್ಟಾಂಗ ಹೊಡದಿಕ್ಕಿ ಗಡ್ದಿಲಿ ಉಂಡಿಕ್ಕಿ ಬಕ್ಕು….ಅಲ್ಲಿ ಎಂತ ಶ್ಲೋಕ ಹೇಳ್ತವು, ಅದರ ಅರ್ಥ ಎಂತಾದಿಕ್ಕು ಹೇಳಿ ತಿಳ್ಕೊಂಬ ಆಸಕ್ತಿ ಇಪ್ಪೋರು ತುಂಬಾ ಕಮ್ಮಿ…
    ನಿಂಗಳ ಈ ಒಪ್ಪ ಓದಿ ಖುಷಿ ಆತು…
    ಬ್ಲೋಗಿಂಗೆ ಇನ್ನೂ ರಜ ಜಾಸ್ತಿ ತೂಕ ತಂದುಕೊಟ್ಟಿದಿದು….

  2. bhari comentugo battu innonda puttakka balusule bandare ode sutta tumba balusule heluva.tove tambuli,saru kodilu payasa rasayana sweet ella bage appaga hotte full akku heli greshitto eno puuttakka papa allado

  3. ಒಪ್ಪಣ್ಣ ಭಾವಂಗೆ ಹಶುವಿಲಿ ಊಟಕ್ಕೆ ಎಂತಲ್ಲ ಇತ್ತು ಹೇಳಿಯೇ ಗೊತ್ತಾಯಿದಿಲ್ಲೆ[೬ ಗಂಟೆ ಆಯಿದಿದಾ].. ಮೇಗಾಣ ಗುಡ್ಡೆ ಹತ್ತುವಾಗ ಆಚೆಕರೆ ಮಾಣಿಯತ್ರೆ ಹೇಳ್ತಾ ಇತ್ತಿದ್ದ "ಊಟಕ್ಕೆ ಏಂತಲ್ಲ ಇತ್ತು ಅಬ್ಬೆ ಕೇಳುವಾಗ ಹೇಳುಲೆ ಬೇಕಿದ" ಹೇಳಿ.

  4. @ ಆಚಕರೆ ಮಾಣಿ & ಹರೀಶ ಭಾವ..
    << ಹರೀಶ ಭಾವಂಗೆ ಶೋಡಷಕ್ಕೆ ಬುಕ್ಕಾಯಿದಡ. >>

    ಎಲ್ಯಾಣದ್ದೋ? ಆರದ್ದೋ?
    ಅಂಬಗ ಪಾರಾಯಣದ್ದು ಎಂತದೂ ಒರ್ತಮಾನ ಇತ್ತಿಲ್ಲೆನ್ನೇ ! ;-(

  5. ಹರೀಶ ಭಾವಂಗೆ ಶೋಡಷಕ್ಕೆ ಬುಕ್ಕಾಯಿದಡ… ಅಲ್ಲಿ ದೊಡ್ಡ ಕೊಯ್ಲು ಅಲ್ಲದಾ ಭಾವ……?

  6. @ Amma,
    ಒಡೆ ಸುಟ್ಟವು ಎನಗೆ ಪುಟ್ಟಕ್ಕ ಒಂದೊಂದೇ ಬಳುಸಿದ್ದು, ಹಾಂಗಾಗಿ ವಿಶೇಷ ಎಂತ ಹೇಳಿದ್ದಿಲ್ಲೆ ಅದರ ಬಗ್ಗೆ.
    ಹೋಳಿಗೆ ಇತ್ತಿದಾ, ಕಾಯಾಲು ಕೂಡಿ ಉಂಬಲೆ. 😛

  7. @ Hareesh,
    ಪರಾದಿನಕ್ಕೆ ನಮ್ಮ 'ಹರಿ'ಮಾವ ಅಲ್ದೋ?
    ಅದಪ್ಪು, ನಿಂಗಳ ಕಂಡತ್ತಿಲ್ಲೆ ಅಲ್ಲಿ?

  8. oppannana blog oppa oppa iddu ….
    bhari laiku barette maga neenu .titi ootalli ode suttavu suddi ille madiddavilleya henge?

  9. maheshanna…..
    thithi kathe bharee layka baradde…
    mashtru mavana gonthathu… adare 'magu mava' aaru heli innude gonthayidille………… 🙁
    appangude khushi aathu..laykaydu helidavu…
    innu next week entharappa….?????????????

  10. ಭಾವ ಅಂತೂ ತಿತಿ ಊಟ ಮುಗ್ಸಿ ಆತು…. ಒಳ್ಳೆದಾಯಿದು… ಮತ್ತೆ ಈ ಆಚೆಕರೆ ಮಾಣಿ ಹಳೆ ಪೆಟ್ಟಿಗೆ ಹೊಸ ಪೆಟ್ಟು ಮಡಗಿದ್ದ ಈ ಅಜ್ಜಕಾನ ಭಾವಂಗೆ ನೋಡು ಇಸ್ಪೇಟಿಲಿ ಮಡಗುವ ಹಾಂಗೆ…

  11. ತಿತಿ ಕತೆ ಕೇಳಿ ಮನಸ್ಸು ಯಾಕೋ ಚುಳ್ ಹೇಳ್ತು ಭಾವ… ಎನ್ನ ಅಜ್ಜನ ಕೊನೆಯ ದಿನಂಗೋ ನೆಂಪಾವ್ತು…. ದಿನಕ್ಕೆ ೩ ಸರ್ತಿ ಹೇಳಿಗೊಂಡಿತ್ತಿದ್ದವು ' ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ, ದೇಹಿಮೇ ಕ್ರಪಯಾ ಶಂಭೋ ತ್ವಯಿ ಭಕ್ತಿಮಚಂಚಲಂ' ಹೇಳಿ… ಆದರೆ ಅವರ ಕೊನೆ ಕಾಲಕ್ಕೆ ಎಂತಾತು ? ಯಾಕೆ ಹಾಂಗಾತು??????? ಆರತ್ರೆ ಕೇಳುದು?….

    ಮತ್ತೆ ಈಗಣ ಬಟ್ಟಕ್ಕೊಗೆ ಮಂತ್ರದ ಅರ್ತ ನಯಾ ಪೈಸೆ ಗೊಂತಿರ್ತಿಲ್ಲೇ ಭಾವ, ಸುಮ್ಮನೆ ಬಾಯಿ ಪಾಠ ಕಲ್ತದರ ಒದರುದಷ್ಟೇ… ಒಬ್ಬ ಭಾಗವತಿಕೆ ಕಲಿತ್ತ ಮನುಷ್ಯ ಅಂದು ಹೇಳಿದ್ದನಡ ಪದ ಹೇಳ್ತಾ ಹೇಳ್ತಾ …..ದಿತ್ತ ಕೊಡಬೇಕು'' ಹೇಳಿ. ಗುರು ಬ್ರೆಕೆಟಿಲಿ ಹೇಳಿ ಅರ್ಥ ಬಪ್ಪ ಹಂಗೆ ಬರದ್ದು, ಶಿಷ್ಯ ಅದರ ಸೇರ್ಸಿಯೇ ಪದ ಹೇಳಿತ್ತು… ಹಾಂಗೆಯೇ ಈಗಾಣ ಬಟ್ಟಕ್ಕೋ. ಅಥ ಮಂಗಳ ನೀರಾಜನಂ ಕರಿಷ್ಯೇ ಹೇಳಿ ಹೇಳಲೇ ಬೇಕ? ಅಲ್ಲದ್ದರೆ ದೇವರಿಂಗೆ ಗೊಂತಗದ? ಇತಿ ದ್ವಾದಶ ನಾಮ ಪೂಜಾಂ ಸಂಪೂರ್ಣಂ ಹೇಳಿ ಹೇಳಲೇ ಬೇಕ? ಎನ್ನ ಪ್ರಕಾರ ಇಂತ ವರ್ಡ್ಸ್ ಎಲ್ಲ ಹಿಂದಣ ಕಾಲಲ್ಲಿ ಕಲಿಶುವಾಗ ಉಪಯೋಗ್ಸಿದ ವರ್ಡ್ಸ್. ನಂತರ ಮಂತ್ರಕ್ಕೆ ಸೇರಿಗೊಂಡದು….. ಎಂತ ಹೇಳ್ತೆ?

    ಈ ಅಜ್ಜಕಾನ ಭಾವಂಗೆ ಮೊನ್ನೆ ಬಂದ ಸಂದಾನ ಎಂತಾತಡ ಭಾವ ??? ಕೂಸು ಒಪ್ಪಿದ್ದಿಲ್ಲೇ ಹೇಳಿ ಶುದ್ದಿ?

  12. kathe ellindalo start agi elleligo bandu mattelliyo nintanne..janma,punarjnmada hange..! adaroo ippa, kailippa anubhavava anubhavisudashte namage gonthu…aldo?
    ..Anthoo puttakka achakaremanige bievadu,ava more pijuntisikondu koopadu elringu gonthappa hangatu…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×