Oppanna.com

ನೆಂಪಿದ್ದಾ ಕೂಸೆ..

ಬರದೋರು :   ಕೋಳ್ಯೂರು ಕಿರಣ    on   06/02/2013    14 ಒಪ್ಪಂಗೊ

ನೆಂಪಿದ್ದಾ ಕೂಸೆ

ಈ ಮೋರೆಯ ನೆಂಪಿದ್ದಾ ।ಕೂಸೆ।
ಮೋರೆಯ ನೆಂಪಿದ್ದಾ?।
ಗೆಡ್ಡವ ಮೀಸೆಯ ತುಂಬಿದ ಮೋರೆಲಿ
ನೆಗೆಗಳ ನೆಂಪಿದ್ದಾ!।।

ಶಾಲೆಗೆ ಹೋಪಗ ಹೂಗಿನ ಕೊಯ್ದದು
ನಿನಗೇ ಕೊಡುಲಲ್ದ।ಕೂಸೆ।
ನಿನಗೇ ಕೊಡುಲಲ್ದ।
ಬೇರೆಯ ಮಕ್ಕಳ ಬೈದೋಡ್ಸಿದ್ದುದೆ
ನಿನಗೇ ನೆರಳಲ್ದ।ಆನು।
ನಿನಗೇ ನೆರಳಲ್ದ?।।

ಹುಗ್ಗಿಸಿ ಮನೆಂದ ತಿಂಡಿಯ ತಂದದು
ನಿನಗೆ ಮರತೋತ।ಕೂಸೆ।
ನಿನಗೆ ಮರತೋತಾ?।
ಅಪ್ಪ ಬೈದಪ್ಪಗ ತಪ್ಪೆನ್ನದೇಳಿ
ಹೇಳಿದ್ದು ನೆನಪಿದ್ದ।ನಿನಗೆ।
ಹೇಳಿದ್ದು ನೆಂಪಿದ್ದಾ!

ಎಲ್ಲಿಗೊ ಹೋಪಗ ಒಟ್ಟಿಂಗೆ ಕೂದ್ದು
ಬಸ್ಸಿಲಿ ನೆನಪಿದ್ದಾ?।ನಿನಗೆ।
ಬಸ್ಸಿಲಿ ನೆನಪಿದ್ದಾ
ಬಿಟ್ಟಿಕ್ಕಿ ಹೋಗೆಡ ಹೇಳಿ ಕೂಗಿದ್ದು।
ನೀನೇ ನೆನಪಿದ್ದಾ। ಕೂಸೆ।
ನಿನಗೆ ನೆನಪಿದ್ದಾ।।

ಜಾತ್ರೆಲೆಲ್ಲರೂ ಜೋಡಿ ಬಂತೇಳಿ
ಹೇಳಿದ್ದು ನೆನಪಿದ್ದ।ಕೂಸೆ।
ಹೇಳಿದ್ದು ನೆನಪಿದ್ದಾ।
ಎರಡೇ ವರ್ಷಲ್ಲಿ ಮದುವೆದೆ ಆತು,
ಎನ್ನನೆ ಮರತೋತ।ನಿನಗೆ।
ಎನ್ನನೆ ಮರತೋತ?।।

ನಲಿವಿನ ದಿನಲ್ಲಿ ಮರದರು ಎನ್ನಾ
ಬೇನೆಗೆ ಮರವಿದ್ದಾ।ಕೂಸೆ।
ಬೇನೆಗೆ ಮರವಿದ್ದಾ।
ಈಗ ನಿನ್ನ ಕಾಡುಲೆ ಬೈಂದಿಲ್ಲೆ
ಸುಮ್ಮನೆ ಗೊಂತಾತಾ।ಮಾತು।
ಸುಮ್ಮನೆ ಗೊಂತಾತಾ।।
~~~***~~~

ಈ ಪದ್ಯವ ಶ್ರೀಶಣ್ಣನ ಸೊರಲ್ಲಿ ಇಲ್ಲಿ ಕೇಳ್ಳಕ್ಕು –
NEMPIDDA KOOSE By SHREESHANNA

 

14 thoughts on “ನೆಂಪಿದ್ದಾ ಕೂಸೆ..

  1. ಕೋಳ್ಯೂರು ಕಿರಣನ
    ಮನದ ವೇದನೆಗೆನ್ನ
    ಅನುತಾಪ ಆನಿಲ್ಲಿ ಬರವೆ /
    ಕವನ ಇನ್ನುದೆ ಬರಲಿ
    ಭಾವನೆಗೊ ತುಂಬಿರಲಿ
    ಮನದುಂಬಿ ಒಪ್ಪವ ಕೊಡುವೆ /

    ಶ್ರೀಶಣ್ಣ ಹಾಡಿದ್ದೂ ಲಾಯಕ ಆಯಿದು

  2. ಲಾಯ್ಕ ಪದ್ಯ..ಹಾಡಿದ್ದೂ ಲಾಯ್ಕ ಆಯಿದು.

  3. ಆಹ್ ಭರ್ಜರೀ ಆಯಿದು ಕೋಳ್ಯೂರ್ ಭಾವಾ. ಶ್ರೀಶಣ್ಣನ ಭಾವಪೂರ್ಣ ಹಾಡುವಿಕೆ ಕೂಡಾ ತು೦ಬಾ ಲಾಯಕ್ಕಾಯಿದು.
    ಆ ಕೂಸು ಕೈ ಕೊಟ್ಟದ್ದು ನಿನಗೆ ಬೇಜಾರ್ ಆದಿಕ್ಕು ಆದರೆ ನ೦ಗೆ ಕೊಶಿಯಾತು. ಇಲ್ಲದಿದ್ರೆ ಇ೦ಥಹಾ ಪದ್ಯ ನವಗೆ ಸಿಕ್ಕುತ್ತ ಇತ್ತಿಲ್ಲೆ ಅಲ್ಲದೋ ಕೋಳ್ಯೂರ್ ಭಾವಾ .. ಆ ಕೂಸಿಗೊ೦ದು ಥ್ಯಾ೦ಕ್ಸು 😉

  4. ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಳಿ. ಭಾರೀ ಲಾಯ್ಕಿದ್ದು ಹಾಡಿದ್ದು. ಈ ಕವನ ಕಾಲ್ಪನಿಕವಾದ್ದು, ಆದರೂ ಇಷ್ಟೊಂದು ಲಾಯ್ಕಕ್ಕೆ ನಿಂಗ ಅದರ ತೆಕ್ಕೊಂಡಿದಿ ಹೇಳಿದರೆ ಎನಗೇ ಹಾಂಗಿಪ್ಪ ಅನುಭವ ಆಯೆಕ್ಕಾತು ಹೇಳಿ ಆವುತ್ತು 😀

    ಧನ್ಯವಾದ ಒಪ್ಪಣ್ಣನ ಬಳಗಕ್ಕೆ, ಶ್ರೀಶಣ್ಣಂಗೆ.

  5. ಪದ್ಯ-ಗಾನ ಎರಡೂ ಲಾಯಿಕಾಯಿದು.

    ಕೂಸು ಕೈ ಕೊಟ್ಟತ್ತು ಹೇಳಿ ಬೇಜಾರೋ ಕಿರಣಣ್ಣಾ? 🙂
    ಬಿಡಿ.
    ಅದಲ್ಲದ್ದರೆ ಅದರ ತಂಗೆ ಸಿಕ್ಕುಗು… 😉

  6. ಕಾಡುವ ನೆನಪುಗಳ ಒಟ್ಟು ಮಾಡಿದ ಸ್ವಗತ ಗೀತೆ ಲಾಯ್ಕ ಆಯಿದು ಕಿರಣ ಭಾವ. ಬರಳಿ ಇನ್ನೂ…
    ರಾಗಸ೦ಯೊಜನೆ ಮಾಡಿ ಭಾವಪೂರ್ಣವಾಗಿ ಹಾಡಿದ್ದ ಶ್ರೀಶಣ್ಣ.

  7. ಕೈ ಕೊಟ್ಟ ಕೂಸಿನ ನೆನಪು ಮಾಡಿಯೊಂಡು ಮನಸ್ಸಿಲ್ಲಿ ಇಪ್ಪ ಬೇನೆಯ ವ್ಯಕ್ತಪಡಿಸಿದ ಪದ್ಯ ಲಾಯಿಕ ಆಯಿದು.
    ನಲಿವಿನ ದಿನಲ್ಲಿ ಮರದರು ಎನ್ನಾ, ಬೇನೆಗೆ ಮರವಿದ್ದಾ- ಒಳ್ಳೆ ಅನುಭವದ ಮಾತು.

  8. ಪದ್ಯ ಲಾಯಕ ಆಯ್ದು ಕೋಳ್ಯೂರ ಭಾವ. ಮನತುಂಬಿ ಹೃದಯಬಿಚ್ಚಿ ಆಡಿದ ಮಾತಿನಾಂಗೆ ಒಪ್ಪ ಇದ್ದು.

    ಶ್ರೀಶಣ್ಣ ಹಾಡಿದ್ದೂ ಚೊಕ್ಕ ಆಯ್ದು.

  9. ಮನಸ್ಸಿಲ್ಲಿ ತುಂಬ ತುಂಬ್ಯೊಂಡಿದ್ದ ಬೇನೆಯ ನೆಗೆ ನೆಗೆ ಮಾಡಿಯೊಂಡು ಹೆರ ಹಾಕಿದ್ದೆ ಕಿರಣ. ಜನಪದ ಶೈಲಿಯ ಪದ್ಯ ಲಾಯಕಾಯಿದು. ಹವ್ಯಕ ಜನಪದ ಸಾಹಿತ್ಯಕ್ಕೆ ಇದು ಒಂದು ಒಳ್ಳೆ ಯ ಸೇರ್ಪಡೆ. ಶ್ರೀಶಣ್ಣನ ದನಿಯ ಮನಗೆ ಹೋಗಿ ಕೇಳ್ತೆ, ಖಂಡಿತಾ ಲಾಯಕಿಕ್ಕು.

    1. ಶ್ರೀಶಣ್ಣನ ಹಾಡನ್ನೂ ಕೇಳಿದೆ, ಸುಶ್ರಾವ್ಯವಾಗಿ ಬಯಿಂದು. ಲಾಯಕಾಯಿದು. ಹಳೆಯ ತುಳು ಸಿನಿಮಾ ಪದ್ಯ “ಸಾದಿಗ್ ಬರ್ಪಾನ ಅತ್ತ್” ಶೈಲಿಲಿಯೂ ಹಾಡ್ಳೆ ಆವುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×