Latest posts by ಅಡ್ಕತ್ತಿಮಾರುಮಾವ° (see all)
- ಜೇನು..ಜೇನು..ಜೇನು.. - November 17, 2011
- ಹಲಸಿನ ಹಣ್ಣಿನ ಮೇಳ.. - August 24, 2011
- ಭೂತವ ಕಂಡಿದಿರಾ.??? - June 22, 2011
ಒಪ್ಪಣ್ಣನ ಬೈಲಿಲಿ ಆನು ತೆಗದ ಕೆಲವು ಪಟಂಗಳ ಹಾಕುತ್ತೆ.
ನೋಡಿ, ಹೇಂಗಿದ್ದು ತಿಳುಸಿ.
~
ಅಡ್ಕತ್ತಿಮಾರು ಮಾವ°
reach.snbhat@gmail.com
ಈ ಸರ್ತಿ ಊರಿಲೇ ಸಿಕ್ಕಿದ ಕೆಲವು ಫಲಂಗೊ ಇಲ್ಲಿದ್ದು:
ಒಪ್ಪ ಕೊಟ್ಟೊರಿಂಗೆಲ್ಲಾ ಧನ್ಯವಾದಂಗ…ಇನ್ನೂ ಒಪ್ಪ್ ಕೊಡುತ್ತಾ ಇರಿ ಆಗದೋ ಏ….
photos la e kkiddu atha mamuuuuuuuu
ವೇಣೂರಣ್ಣ… ಇಂದು ನೀರ್ಕಜೆ ಚಿಕ್ಕಮ್ಮ ಜೀಗುಜ್ಜೆ ಮೇಲಾರ ಮಾಡುತ್ತಡ.. ಬನ್ನಿ ಒಟ್ಟಿಂಗೆ ಹೋಪ.. ಒಪ್ಪಣ್ಣ, ನೆಗೆ ಬಾವ ಆಗಲೇ ಹೆರಟಿದವು..
ಒಪ್ಪಣ್ಣ, ನೆಗೆ ಬಾವ ಇನ್ನುದೇ ಎತ್ತಿದ್ದವಿಲ್ಲೆ ಅಪ್ಪೋ ,,, ಎಂತ ಬಸ್ಸು ಗಿಸ್ಸು ಸಿಕ್ಕಿದ್ದಿಲ್ಲೆಯೋ ಹೇಂಗೆ? ಇನ್ನು ಮೇಲಾರ ಕೊದುಶಿ ಮಡುಗದ್ದರೆ, ವೇಣೂರಣ್ಣನ ಗತಿಯೇ ಅಕ್ಕು ನಿಂಗೊಗೆಲ್ಲಾ….:(
ಎಂಗೊ ಹೆರಟಿತ್ತಿದ್ದೆಯೊ°, ಪಕ್ಕನೆ ಒಂದು ಅಂಬೆರ್ಪಿನ ಶುದ್ದಿ ಹೇಳಿ ಕಳುಸಿದವು,
– ಅಜ್ಜಕಾನಬಾವಂಗೆ ತಲೆಬೆಶಿ ಆಗಿ ಎಲ್ಲಿಗೋ ಹೆರಟಿದ°, ಹೊತ್ತೋಪಗಾಣ ಕೃಷ್ಣಬಸ್ಸಿಂಗೆ – ಹೇಳಿ.
ಹಾಂಗೆ ಮತ್ತೆ ಅವನ ಹುಡ್ಕಲೆ ಹೇಳಿ ಒಪಾಸು ಬಂದೆಯೊ°..
ರಜ ಹೊತ್ತಿಲಿ ಎತ್ತಿದ° ಮನೆಗೆ ಒಪಾಸು. ಸಿಕ್ಕಿದ°..
ಮೇಲಾರ ನಾಳೆಯೂ ಸಿಕ್ಕುಗು, ಅಜ್ಜಕಾನಬಾವ°, ನಾಳೆ ಸಿಕ್ಕ°ನ್ನೇ? ಇಂದೇ ಹೆರಟ್ರೆ.. 😉
ಅದಪ್ಪು…. ನಾಳಂಗೆ ಬತ್ತರೆ ಜೀಗುಜ್ಜೆಯೂ ತನ್ನಿ ಆತೋ,…. ಮೇಲಾರಕ್ಕೆ ಪೂರ ಸಾಕಾಗ…..
ಪ್ರತಿಯೊಂದೂ ಚಿತ್ರಂಗಳುದೇ ತುಂಬಾ ಲಾಯ್ಕಿದ್ದು 🙂
ಎಲ್ಲೋರ ಉಮೇದು ನೋಡುವಗ ಎನಗುದೆ ಎರಡು ಕಾಲಿನ್ದೊ ನಾಲ್ಕ್ಕು ಕಾಲಿಂದೊ ಬರದರೆ ಎಂತಾ ಹೇಳಿ ಕಾಂಬಲೆ ಸುರು ಆಯಿದು!!!!!
ಖಂಡಿತ ಬರೆಯೆಕ್ಕು ನಿಂಗೊ.. ಅನುಭವ ಧಾರೆ ಈಗಾಣ ಮಕ್ಕೊಗೆ ಅಗತ್ಯ ಇದ್ದು
ಅಪ್ಪೋ? ಧಾರೆಗೆ ಟೈಮ್ ಆತೋ?! 🙂
ಸುರು ಮಾಡಿ ಅಡ್ಕತ್ತಿಮಾರು ಮಾವ, ಎಲ್ಲೋರಿಂಗೂ ಖುಶಿ ಆದ ಹಾಂಗಿದ್ದು…..
ಆ ಬಾಳೆಗೊನೆ ನೋಡುವಗ ನೆಂಪಾತು… ಒಪ್ಪಣ್ಣಂಗೆ ಒಂದು ಬಾಳೆಗೊನೆ ಚೋದ್ಯ ಕಳಿಸಿತ್ತಿದ್ದೆ… ಅವ ಹಾಕಿದ್ದನೇ ಇಲ್ಲೆ… ಏ ಒಪ್ಪಣ್ಣ ಎಂತ ಮರತ್ತೋತಾ?
@ಅಜಕ್ಕಾನ ಭಾವ, ಈ ಉತ್ತರ ಹಾಕುವಾಗ ಇದ್ದನ್ನೇ, ಹೆಸರು ಬದಲುಸುಲೆ ಮರವದಿದಾ!:)
ನೀರ್ಕಜೆ ಚಿಕ್ಕಮ್ಮಾ ಆರ ಹೆಸರು ಬದಲುಸದ್ದರೂ ಎನ್ನ ಹೆಸರು ಸರೀ ಬರೆದಿಕ್ಕಿ… ಮತ್ತೆ ತೊಂದರೆ ಆದ್ರೆ ಕಷ್ಟ ಇದಾ.. ಸರಿ ಬರೆಯಿ.. ಅಜ್ಜಕಾನ ಭಾವ ಹೇಳಿ….
ಒಹ್ ಅಪ್ಪಾ……….. , ಧನ್ಯವಾದಂಗೊ… ಒಂದೇ ಲೇಪುಟೋಪ್ ನ ಕೆಲಸ ಇದಾ ಹಾಂಗಾಗಿ ತೊಂದರೆ ಆದ್ದು….
ಎಂತ ತೊಂದರೆಯೋ…. ಅಪ್ಪಚ್ಚಿ ಲೇಪುಟೋಪ್ ಮಡಗಿ ಹೋಯಿದವಿಲ್ಲೆಯೋ.. ನಿಂಗಳ ಬಗ್ಗೆ ಪದ್ಯ ಬರದ್ದವೋ..?
@ಅಜಕ್ಕಾನ ಭಾವ, ಎನ್ನ ಬಗ್ಗೆ ಪದ್ಯ ಬರದ್ದು ಎನಗೆ ಗೊಂತಾಯಿದಿಲ್ಲೆ, ಕೇಳ್ಳೆ ನಾಮಾಸಾವ್ತ್ತಿದಾ…….!!!!
ಅಪ್ಪು ಅದರ ಹೆಸರು ಕಾಡು ಪೀರೆ (ಕಾಟು ಪೀರೆ)ಅದರ ಬೆಳೆಶುಲೆ ಬಾರೀ ಕಸ್ತ್ತ ಇದ್ದು ಅದರ ಸೆಸಿಗೆ ಕಬ್ಬಿಣ ಮುಟ್ಟಿದರೆ ಮತ್ತೆ ಕಾಯಿ ಆವುತ್ತಿಲ್ಲೆ.ಬರೀ ಗೆಂಡು ಹೂಗು ಮಾಂತ್ರ ಅಪ್ಪದು ಕೊದಿಲು ಪಲ್ಯ ಮಾಡಿದರೆ ಅದರ ರುಚಿ ಉಂಡವಂಗೆ ಗೊಂತು.
ಒಹ್ ಅಪ್ಪಾ……….. , ಧನ್ಯವಾದಂಗೊ…
ಅಡ್ಕತ್ತಿಮಾರುಮಾವಾ°..
ಎಲ್ಲಾ ಪಟಂಗೊ ತುಂಬಾ ಲಾಯ್ಕಿದ್ದು.
ಹೆಚ್ಚಿಂದುದೇ ಬೈಲಿಲಿ ಇಷ್ಟರವರೆಗೆ ಬಾರದ್ದ ಪಟಂಗೊ. ನಮ್ಮ ತೋಟ-ಗೆದ್ದೆಗಳಲ್ಲಿ ಕಂಡು ಗೊಂತಿದ್ದರೂ ಪಟಲ್ಲಿ ಕಂಡು ಗೊಂತಿಲ್ಲೆ.
ಕೊಶಿ ಆತು ನೋಡಿ.
ಪೀರೆಯ ಶುದ್ದಿ ಓ ಮೊನ್ನೆ ನಮ್ಮ ಮಾಷ್ಟ್ರಮನೆ ಅತ್ತೆ ಹೇಳಿತ್ತಿದ್ದವು.
ಅಲ್ಲಿಯುದೇ ಕೊದಿಲು ಮಾಡಿತ್ತಿದ್ದವು, ಭಾರೀ ಲಾಯ್ಕಾಯಿದಾತ!! 🙂
ಕಾಟು ಪೀರೆಯ ಕೊಂಕಣಿಗೋ ಪೋಡಿ ಮಾಡುಗು,ಎಣ್ಣೆ ತಿಂಡಿ ಹೇಳಿ ಆನು ತಿನ್ತಿಲ್ಲೇ,ಮಾಡಿ ತಂದು ಕೊಡ್ತವು.
{ ಆನು ತಿನ್ತಿಲ್ಲೇ,ಮಾಡಿ ತಂದು ಕೊಡ್ತವು }
– ಚೆ, ಅಪುರೂಪದ ಕಾಡುಪೀರೆ ಅಂತೇ ಹಾಳಾವುತ್ತನ್ನೇ ಕೇಜಿಮಾವಾ°..
ಇನ್ನಾಣ ಸರ್ತಿ ತಂದುಕೊಟ್ಟಿಪ್ಪಗ ಇಲ್ಲೇ ಒಂದು ಒಪ್ಪ ಹಾಕಿಬಿಡಿ. ಬತ್ತೆಯೊ°.
ಬೈಲಿಲಿ ಕೆಲವು ಜೆನ ಇದ್ದವು – ಎಣ್ಣೆ ತಿಂಡಿ ತಿಂದು ಕರಗುಸಲೆಡಿಗಾದ ಜವ್ವನಿಗರು.. 😉
ಆನು ಕಾಟು ಪೀರೆಯೇ ತಂದು ಕೊಡ್ತೆ,ಪೋಡಿ ಬೈಲಿನೆ ಎತ್ತುವಾಗ ಞಾಣುಗು.
ಪೋಡಿಯನ್ನೇ ತಂದರೆ ಒಳ್ಳೆದೋ ಹೇಳಿಗೊಂಡು…
ಪೀರೆ ತಂದರೆ – ಪೋಡಿ ಮಾಡುಸಲೆ ಬಂಡಾಡಿಗೆ ಹೋಯೆಕ್ಕಷ್ಟೆ.. 😉
ತಣುದರೆ ಸಾರ ಇಲ್ಲೆ, ಆಚಕರೆಮಾಣಿಯ ತಲೆಮೇಲ್ಕಟೆ ಒಂದು ಗಳಿಗೆ ಮಡಗಿರಾತು!
೧೨ನೇ ಪಟ ಎಂತರದ್ದು? ಹಾಗಲ ಅಲ್ಲದೋ ಹೇಳಿ…..
ಎನಗೆ ಗೊಂತಿದ್ದ ಹಾಂಗೆ ಅದಕ್ಕೆ “ಕಾಡು ಪೀರೆ” ಹೇಳ್ತವು. ಎಲ್ಲಾ ಸಮಯಲ್ಲಿ ಸಿಕ್ಕುತ್ತಿಲ್ಲೆ. ಪೇಟೆಲಿ ಬಾಯಮ್ಮಂಗೊ ತಂದು ಮಡಿಗಿರೆ ಅಂಬಗಳೇ ಖರ್ಚು ಆವುತ್ತು. ಅಷ್ಟು ಡಿಮಾಂಡ್ ಇದ್ದು ಅದಕ್ಕೆ. ಕ್ರಯವೂದೆ ಜಾಸ್ತಿ ಇರ್ತು.
ಜೀಗುಜ್ಜೆ ನೋಡುವಾಗ ಆಶೆ ಆವುತ್ತು ! ಅಮ್ಮ ಮಾಡಿದ ಜೀಗುಜ್ಜೆ ಮೇಲಾರ ಉಣ್ಣದ್ದೆ ತಿಂಗಳ ಮೇಲಾತು 🙁
ವೇಣೂರಣ್ಣೊ,
ಜೀಗುಜ್ಜೆ ಮೇಲಾರ ಉಂಡು *** ಬಿಡದ್ದೆ ತಿಂಗಳ ಮೇಲಾತು ಅಲ್ಲದ?? 😉
ಅವರವರ ಭಾವಕ್ಕೆ ಅವರವರ ಭಕ್ತಿಗೆ ತಕ್ಕ ಹಾಂಗೆ ಅಪ್ಪಚ್ಚಿ !
{ ಅಮ್ಮ ಮಾಡಿದ ಜೀಗುಜ್ಜೆ ಮೇಲಾರ ಉಣ್ಣದ್ದೆ ತಿಂಗಳ ಮೇಲಾತು }
– ಇನ್ನು ಅದರ ಉಂಡಿಕ್ಕೆಡಿ, ಇಡುಕ್ಕುದೇ ಒಳ್ಳೆದೋ ಹೇಳಿ!
ಹ ಹಾ… ನೆಗೆಗಾರಣ್ಣಂದು ಜೋಕುಗೊ ಸೂಪರ್!!!
ನಗೆಗಾರಣ್ಣೊ, ಎನಗೊಂದು ಸಣ್ಣ ಸಂಶಯ!,,, ನಿನಗೆ ಹಿಂಗಿಪ್ಪ ಸಂಗತಿಗ ಎಲ್ಲ ಹೊಳವದು ಬರೆ ಕಾಪಿ ಚಾಯ ಇತ್ಯಾದಿ ಮಾಮುಲಿ ಅಹಾರಂದಲೋ ಅಲ್ಲ ಎಂತಾರು ಅರಿಷ್ಟ, ಕಷಾಯ ಅಥವಾ ಮಾತ್ರೆ ಎಂತಾರು ತೆಕ್ಕೊಂಬ ಕಾರಣಂದಲೊ?? 🙂
ಆದರ್ಶಣ್ಣೊ, ನೆಗೆಗಾರ ಭಾವ ಗುಟ್ಟು ಬಿಡ ಪಕ್ಕಕ್ಕೆ….
ದ್ವಿಪದಿ :
ಕುದನೆ ಕಾಯಿಲಿ ಅರಿತ್ತಾ ಇದ್ದು ನೀರು,
ಎಲ್ಲ ಪಟಂಗಳ ನೋಡಿ ಎನ್ನ ಬಾಯಿಲಿಯೂ ಅರಿತ್ತಾ ಇದ್ದು ನೀರು!
ಎಲ್ಲ ಪಟಂಗಳೂ ಚೆಂದ ಇದ್ದು.
ಅದಾ ನೀರ್ಕಜೆ ಅಪ್ಪಚ್ಚಿ ದ್ವಿಪದಿ ಬರೆತ್ತ ದೊಡಾ ಕವಿ ಆದ್ದು ಯಾವಾಗ? ಎನಗರಡಿಯ!
ಚಿಕ್ಕಮ್ಮ, ಇದಾ ನೆಗೆಗಾರ° ಬರದ ಪದ್ಯ:
ಬಂಡಾಡಿ ಅಜ್ಜಿಯ ಅಟ್ಟುಂಬೊಳ ಕಣಿಲೆ ತೊಳದ ನೀರು..
ಕಣಿಲೆಬೆಂದಿ ಓದಿದ ಮತ್ತೆ ಚಿಕ್ಕಮ್ಮನ ಕೀಬೋರ್ಡಿಲಿ ನೀರು..
ಅಡ್ಕತ್ತಿಮಾರಿನ ಕೆಮರದೊಳ ಕುದನೆಕೊಡಿಲಿ ನೀರು..
ಇದರ ನೋಡಿದ ಅಪ್ಪಚ್ಚಿಯ ಬಾಯಿಲಿಯೂ ನೀರು..
ಮಳೆಗಾಲದ ಬೆಶಿಲಿಂಗೆ ಬೈಲಿನವಕ್ಕೆಲ್ಲ ಬೆಗರು – ನೀರು…!!!
ಲಾಯ್ಕಾಗಿರ, ಆತೋ? 😉
ಈ ನೆಗೆಗಾರ ಭಾವಂಗೆ ಸಲ್ಲೆಕ್ಕಾದ ಗೌರವ ಎಮ್ತಾರು ಬಾಕಿ ಅಯಿದ ಹೇಳಿ ಸಂಶಯ ಬತ್ತಾ ಇದ್ದು…. ಗೌರವ ಡಾಕ್ಟರೇಟೋ ಮಣ್ಣ!:):(;)
ನೆಗೆಗಾರ ಭಾವಾ, ಪದ್ಯ ಮಾಂತ್ರ ಭಾರಿ ಲಾಯಿಕಯಿದಾತೋ…………!!!!!!
ಆಹಾ! ನಗೆಗಾರನ ಕವನವನ್ನು(!) ಓದಿ ನಾವು ಸಂತಷ್ಟರಾಗಿದ್ದೇವೆ! ಯಾರಲ್ಲಿ, ಆತನಿಗೆ ನೂರು ವರಹಗಳನ್ನು ಬಹುಮಾನವಾಗಿ ಕೊಡಿರಿ!! (ಎನ್ನತ್ರೆ ಈಗ ಪೈಸ ಇಲ್ಲೆ ಆತ,, ಆರಾರು ಇದ್ದರೆ ಕೊಡಿ, 🙂 ನಗೆಗಾರಣ್ಣಂಗೆ ಬೇಜಾರಪ್ಪಲಾಗ ಇದಾ,, 🙂 ಆನು ಬೇಕಾರೆ ಮತ್ತೆ ಕೊಡುವ, ಪೈಸ ಅಪ್ಪದ್ದೆ! )
ನಗೆಗಾರ ಅಪ್ಪಚ್ಚಿ,
ನಿಂಗಳ ‘ಚೆಂಬು’ ಪದ್ಯಕ್ಕೆ ಎನ್ನದಿದೋ ‘ಚೊಂಬು’ ದ್ವಿಪದಿ :
ನೆಗೆಗಾರಪ್ಪಚ್ಚಿ ಬರೆತ್ತವು ಭಾರಿ ಲಾಯಿಕ ಪದ್ಯ
ಆ ಪದ್ಯಂಗೊ ಎಂಗೊಗೆ ಶಾಲೆಲಿ ಕಲಿವಲಿತ್ತಿಲ್ಲೆ ಸದ್ಯ!
ವ್ಹಾರೆ ವ್ಹಾ.. ಕ್ಯಾ ಬಾತ್ ಹೈ. ತಾಲೀ ಬಜಾಯಿಯೇ
(ಕ್ಷಮಿಸಿ,ಸಹವಾಸ ದೋಷಂದ ಹಿಂದಿ ಬಂದು ಹೋತು. ನಮ ಭಾಷೆಲಿ ಅರ್ಥ ಮಾಡಿಗೊಳ್ಳಿ)
ಹ ಹ ಹ!!
(ಹಿಂದಿಲಿ ನೆಗೆ ಮಾಡಿದೆ, ನಮ್ಮ ಭಾಶೆಲಿ ಅರ್ತ ಮಾಡಿಗೊ ಶ್ರೀಶಣ್ಣೋ! ) 😉
ಅಪ್ಪಚ್ಚಿ ಬರದ್ದು ಪದ್ಯವೋ.. ಆನು ಗ್ರೇಶಿದ್ದು ಅದೆಂತದೋ ಹರವದು ಇದ್ದಲ್ಲದಾ ಅದೂ ಹೇಳಿ..ನವಗರಡಿಯಪ್ಪೋ…!
ಅದೇ, ಅಜಕ್ಕಾನ ಭಾವ ಎರಡು ಕಾಲಿಂದು ಹೇಳಿ ಹೇಳಿದ ಹಾಂಗಿದ್ದು ಅಲ್ಲದೋ!…………..
ಅಜಕ್ಕಾನ ಭಾವ, ಎರಡು ಕಾಲಿಂದು (ದ್ವಿಪದಿ) ಹರವದು ಅಪ್ಪದು ಹೇಂಗೆ?? ಹರವದಕ್ಕೆ ಕಾಲಿದ್ದೋ? ಅದಿರಲಿ, ನವಗೆಲ್ಲ ಎಷ್ಟು ಕಾಲಿದ್ದು?? 😀
ಯೆಬೇ, ನಾವೆಲ್ಲ ಎಂತರ ಪದ್ಯ ಬರವದು – ಬೊಳುಂಬುಮಾವನ ಪದ್ಯಕ್ಕೆ ನಮ್ಮದೆಲ್ಲ ಎಂತ ಲೆಕ್ಕವೂ ಇಲ್ಲೆ.
ಅವೀಗ ಪೈಸೆ ಕಟ್ಟಲೆಕ್ಕ ಮಾಡಿಗೊಂಡಿದ್ದವು, ಎಡೇಲಿ ದಿನಿಗೆಳಿ ಲೆಕ್ಕ ತಪ್ಪುಸುದು ಎಂತ್ಸಕೆ ಹೇಳಿ ಮಾತಾಡುಸಿದ್ದಿಲ್ಲೆ, ಅಷ್ಟೆ.
ನಾಳೆ ನಾಳ್ತಿಲಿ ಒಳ್ಳೆ ಪದ್ಯ ಕಟ್ಟಿ ತಕ್ಕು, ಅಷ್ಟಪ್ಪಗ ನೀರ್ಕಜೆ ಅಪ್ಪಚ್ಚಿ ಬೆಗರಿ ನೀರೇ ನೀರು..!! ಲಲ್ಲ ಲಲ್ಲ ಲಾ! 😉
ಅಪ್ಪಚ್ಚಿಗೆ ಬೆಗರಿರೆ ತೊಂದರಿಲ್ಲೆ ನಗೆಗಾರಣ್ಣೊ, ಈಗ ಮಳೆಗಾಲ ಇದಾ, ಮೇಗಂದ ನೀರು ಬೀಳುವಾಗ ಹೆರ ನಿಂದರಾತು,, ತೊಳದು ಹೋಕು.. 🙂 ಅಲ್ಲದಾ ಅಪ್ಪಚ್ಚಿ.. ಬೊಳುಂಬುಮಾವನ ಪದ್ಯಕ್ಕೆ ಆನು ಕಾಯ್ತಾ ಇದ್ದೆ,, ಈ ಸತ್ತಿ ಎರಡು ಕಾಲಿಂದು ಬತ್ತಾ ಮೂರು ಕಾಲಿಂದಾ, ಅಲ್ಲ ನಾಲ್ಕು ಕಾಲಿಂದಾ ಅಲ್ಲ ಇನ್ನು ಸುಮಾರು ಕಾಲುಗ ಇದ್ದ ಗೊಂತಿಲ್ಲೆ 🙂
@ ನಗೆಗಾರ ತಮ್ಮಾ…. ನೆಗೆ ಮಾಡಿದ್ದು ಕಂಡತ್ತು ಪಟಲ್ಲಿ. ಚಪ್ಪಾಳೆ ತಟ್ಟಲೆ ಹೇಳಿದ್ದರ ಮಾಡಿದ್ದಿಲ್ಲೆಯೋ ಅಂಬಗ
ಪಟಂಗೊಪ ಲಾಯ್ಕ ಇದ್ದು.. ಎಲ್ಲದರ ಹೆಸರಿದ್ದರೆ ಲಾಯ್ಕ ಇತ್ತು….
ಮಾವ° ಆ ಕೆಂಪು ಹಣ್ಣಿನ ಹೆಸರು ನಕ್ಷತ್ರ ಹಣ್ಣು ಹೇಳಿಯಾ.. ಎಂಗಳ ಹೊಡೆಲಿ ಪನ್ನೇರಳೆ ಹೇಳಿ ಹೇಳ್ತವಾಳಿ ಕಾಣ್ತು.. ಹೀಂಗೆ ಇಪ್ಪ ಬೆಳಿ ಜೊಂಕೆ ಹಣ್ಣಿನ ನಕ್ಷತ್ರ ಹಣ್ಣು ಹೇಳಿ ಹೇಳ್ತವು.. ಈ ಕೆಂಪು ಹಣ್ಣೂ ಹುಳಿ ರಜ್ಜ ಜಾಸ್ತಿ ಅಲ್ಲದೋ..
ಅದು ಪನ್ನೇರಳೆ ಅಲ್ಲ.
ಒಂದಕ್ಕಿಂತ ಒಂದು ಅದ್ಭುತ ! ಲಾಯಕಾಯಿದು. ಬಣ್ಣ ಬಣ್ಣದ ಫಲಂಗಳ ನೋಡ್ಳೆ ಹಾಂಗೇ ತಿಂಬಲೂ ಎಷ್ಟು ಚೆಂದ.
ಮಾವಾ°,
ನಿಂಗೊ ಪದ್ಯ ಕಟ್ಟುತ್ತಿ ಹೇಳಿ ನೀರ್ಕಜೆ ಅಪ್ಪಚ್ಚಿಯ ಹತ್ರೆ ಒಪ್ಪಿಗೊಂಡಿದೆ!
ನಿಂಗೊ ಬರದ್ದಿಲ್ಲಿ! ಇದಾ, ಎನಗೇ ಬೆಗರುತ್ತಾ ಇದ್ದು, ಅಂಗಿ ಒಗವಲೆ ಆರುದೇ ಇಲ್ಲೆ! 🙁
ಹೆಸರಿಲ್ಲದ್ದವ ಆರು ಈ ನೆಗೆಗಾರ ?
ಎಲ್ಲೋರ ಬಾಯಿಗೆ ಕೋಲು ಹಾಕುವ ಧೀರ
ಬೇಜಾರಿನೆಡೆಲಿಯೂ ಜೋಕು ಸಿಡಿಸುವ ಪೋರ
ಕಾಪಿ ಕುಡಿವಲೆ ಮನಗೆ ಕರದರೂ ಬಾರ !
ಅಂಗಿ ಒಗವಲೆ ಅವಂಗೆ ಆರುದೆ ಇಲ್ಲೆ
ವಾಶಿಂಗ್ ಮಿಶನ್ನು ಇದ್ದರೂ ಒಲ್ಲೆ
ಬೇಕಾಯಿದೀಗ ಪ್ರೀತಿಯಾ ನಲ್ಲೆ
ಹೇಳಲೇ ಚಿಂದದಾ ಕೂಸೊಂದು ಒಳ್ಳೆ !
ಲಾಯ್ಕ ಆಯಿದು ಮಾವ.. ಕೂಸುಗಳ ಪಟ್ಟಿ ಇದ್ದೋ ಕಾಣ್ತು ಮಾವನತ್ರೆ….
ಆಹಾ! ಏ ಮಾವಾ,, ಪದ್ಯ ಸೂಪರು! 🙂 ನಗೆಗಾರಣ್ಣನ ಬಾಯಿಗೆ ನಿಂಗ ಕೋಲು ಹಾಕುತ್ತಾ ಇದ್ದೀರಾ>>?? ಎನ್ನ ಸಂಪೂರ್ಣ ಬೆಂಬಲ ಇದ್ದಾತ! 🙂
ಶೆ, ಪದ್ಯ ಬರವಲೆ ಹೇಳಿ ಮೋಸ ಆತೋ ಹೇಳಿಗೊಂಡು!
ಸಾರ ಇಲ್ಲೆ, ನೀರ್ಕಜೆ ಅಪ್ಪಚ್ಚಿಯ ಬಗ್ಗೆ ಬರೆತ್ತಾ ಇಕ್ಕು, ಇನ್ನೊಂದೆರಡು ದಿನಲ್ಲಿ ಬಕ್ಕು! 😉
ಯಬಾ, ಬಲ್ನಾಡುಮಾಣಿಗೆ ಆದ ಕೊಶಿಯೇ..!! ಹಪ್ಪಾ..
ಮಾವ°, ಒಂದು ಗುಟ್ಟು ಹೇಳ್ತೆ – ಜಾಗ್ರತೆ, ಇವ° ರಜಾ ಜೆನ ಬಿಂಗಿ, ನಾಳೆ ನಿಂಗೊಗೇ ಬೆಶಿನೀರು ಮಡಗ್ಗು!! ಹಾ°!
ಬೊಳುಂಬುಮಾವನ ಪದ್ಯಕಂಡು ಬಲ್ನಾಡುಮಾಣಿಗೆ ದೀಪಾವಳಿ..
ಬಲ್ನಾಡುಮಾಣಿಯ ಸಪೋರ್ಟಿನ ನಂಬಿರೆ ಬೊಳುಂಬುಮಾವ ದಿವಾಳಿ..!!
(ಪದ್ಯ ಲಾಯ್ಕಾಗಿರ ಆತೋ?! ) 🙁
ವ್ಹಾ ವ್ಹಾ…
ಎಲ್ಲೊರಿಂಗೂ ಧನ್ಯವಾದಂಗ….ಕಪ್ಪು ಬೆಳಿ ಪಟಂಗಳ scan ಮಾಡಿ ಹಾಕೆಕ್ಕಸ್ತ್ತೆ ಅದಕ್ಕೆರಜ್ಜ ಸಮಯ ಬೇಕಕ್ಕು ಅಳಿಯೊ. ಅಂತೂ ನಿದಾನಕ್ಕೆ ಹಾಕುತ್ತೆ…..ಎಲ್ಲೋರೂ ನೊಡುತ್ತಾ ಇರಿ ಆಗದಾ…
ಒಳ್ಳೆ ಸ್ಕಾನರ್ ಯಾವುದು ಗೊಂತಿದ್ದಾ? ನಿಂಗಳತ್ರೆ ಇಪ್ಪ ಡಿಜಿಟಲ್ ಕೆಮರಾ. ಅದರಷ್ಟು ಬೇಗ ಯಾವ ಸ್ಕಾನರ್ ಕೂಡ ಕೆಲಸ ಮಾಡ್ತಿಲ್ಲೆ. ಆನು ಈಗ ಸ್ಕಾನರ್ ಉಪಯೋಗ ಮಾಡ್ಲೇ ಇಲ್ಲೆ. ಡಿಜಿಟಲ್ ಕೆಮರಲ್ಲಿ ಒಂದು ಪಟ ತೆಗದು ಬಿಡುದು. ಅದು ಒಳ್ಳೆ ಸ್ಫುಟವಾಗಿಯೂ ಇರ್ತು.
ಆನುದೆ ಈಗ ಸ್ಕಾನರ್ ಉಪಯೋಗ್ಸುತ್ತಿಲ್ಲೆ! ವ್ಯವಹಾರಕ್ಕೆ ಬೇಕಾದ ಸ್ಕ್ಯಾನಿಂಗ್ ಎಲ್ಲ ಕೆಮರಲ್ಲೇ! ಎನ್ನ ಮಾವುಗಳ ಪಟ ಒಂದು ಹಳತ್ತು ಇತ್ತು. ಅದರ ಕೆಮರಲ್ಲೇ ಸ್ಕ್ಯಾನ್ ಮಾಡಿ GIMP ಲಿ ಚೂರು ಚೆಂದ ಮಾಡಿ ದೊಡ್ಡ ಕಾಪಿ ಹಾಕ್ಸಿದ್ದೆ! ಹಾಂಗೇ ಪಾಸ್ಪೋರ್ಟ್, ಪ್ಯಾನ್ ಇತ್ಯಾದಿ ಕಾಪಿಗಳುದೆ ಕೆಮರಲ್ಲೇ! ಕೆಲವರ ಎನ್ನ ಜಿ ಮೈಲಿಂಗೆ ಹಾಕಿ ಮಡಿಗಿದ್ದೆ. ಅಗತ್ಯ ಬಿದ್ದರೆ ಪ್ರಿಂಟ್ ಹೊಡದರೆ ಆತನ್ನೇ!
ಅಪ್ಪು…. ಹರೀಶಣ್ಣಂದು ಒಳ್ಳೆ ಸಲಹೆಯ ಹಾಂಗೆ ಕಾಣುತ್ತು…!! 🙂
ಮಾವºನ ಪಟಂಗ ಲಾಯಿಕ್ಕು ಬಯಿಂದು… !! 🙂
ಮಾವºನ ಒಂದೋ ಮೇರ್ತಿ, ಅಲ್ಲದ್ರೆ ಬಟ್ಟೆತ್ತಿ (ಕಪ್ಪುಬೆಳಿ) ಪಟಂಗಳ ನಿರೀಕ್ಷೆಲಿ ಇದ್ದೆºಯೋº …!! 🙂
ಅಪ್ಪು ಕುದನೆ…ಜಾಯಿ ಕಾಯಿಂದ ಮತ್ತೆ ಇಪ್ಪದು ನಕ್ಶತ್ರ ನೇರಳೆ.(star apple)
ಅಪ್ಪು ಕುದುನೆ…ಜಾಯಿ ಕಾಯಿಂದ ಮತ್ತೆ ಇಪ್ಪದು ನಕ್ಶತ್ರ ನೇರಳೆ.(star apple)
ಪಟಂಗೊ ಲಾಯಿಕ್ ಬಯಿಂದು ಅಡ್ಕತ್ತಿಮಾರು ಅಣ್ಣ.
ಒಂದು ವಿಷಯವ ಹಿಡ್ಕೊಂಡು ಪಟಂಗಳ ವ್ಯವಸ್ಥೆ ಮಾಡಿದ್ದು ಕೊಶಿ ಆತು.
ಸುರುವಾಣ colum ಲ್ಲಿ 5 ನೇದು ಎಂತ ಹೇಳಿ ಗೊಂತಾಯಿದಿಲ್ಲೆ (ಕುದನೆಯೋ?)
1 ನೇದು ಜಾಯಿ ಕಾಯಿ. 2 ನೇದು ಮಾಫಲ ಹುಳಿ ಹೇಳಿ ಒಂದು ಸಂಶಯ.
ಪಟಂಗೊ ಲಾಯ್ಕ ಬಯಿಂದು ಮಾವ°. ನಿಂಗಳ ಓರ್ಕುಟ್ ಲಿಪ್ಪ ಪಟಂಗಳ ನೋಡಿದ್ದೆ. ಕೊಶಿ ಆತು. ಇನ್ನೂ ಬರಳಿ…
@ಇದು ಯಾವ ಫಲವಸ್ತು – 1? ಉತ್ತರ: ಜಾಯಿಕಾಯಿ
@ಇದು ಯಾವ ಫಲವಸ್ತು- 2? ಉತ್ತರ:
ಆ ಸೆಸಿಗಳ ಕಶಿ ಕಟ್ಲೆ, ನಿಂಗಳ ಮನೆಗೆ ಬಂದರಕ್ಕೋ ಹೇಳಿ………… ಭಾರೀ ಲಾಯಿಕ ಪತಂಗೋ ಅಪ್ಪೋ…………. ಜಾಯಿಕಾಯಿ ಪತ ಅಂತೂ ಚೂಊಊಊಊಊಊಊಊಊಊಊಊಊಊ ಪರ್…………………
@ಇದು ಯಾವ ಫಲವಸ್ತು- 2? ಉತ್ತರ: ನಿಂಬೆಳಿ.
ಮಾವ, ಪಟಂಗ ಬಾರಿ ಚೆಂದ ಬಯಿಂದು.. 🙂